"ದೇವನಾ ..ಪರಿ "
ದೇವನೊಲಿದರೆ
ಮಾನವ ಜನುಮ ಸಾರ್ಥಕ್ಕೆ !
ದೇವನೊಲಿವ ಪರಿ
ಯಾರು ಬಲ್ಲರು ?
ಹೇಳುವವರಾರು ?
ಹೇಳುವವರಿಹರು
ಮಾರಗ ತೋರಿಸರಿಹರು..
ಐತಿಹ್ಯಗಳಿವೆ ,
ಪುರಾಣ , ಪುರಾವೆಗಳಿರಬಹುದು..
ಬಲ್ಲೆನು ..ಬಲ್ಲೆನು
ಈ ನನ್ನ ನಗ್ನ ನೇತ್ರಗಳಿ0ದ
ದೇವ ಚಿತ್ತ ದೇವ ಪಟ ಬಲ್ಲೆನು
ಪ್ರಮಾಣ ಮಾಡಿ ಹೇಳಬಲ್ಲ
ಬುದ್ಧಿಜೀವಗಳಿದ್ದಾರೆಯೆ ?
ಬಲ್ಲವ ಬಲ್ಲಿದವ
ಪೇಳಿ ಪಾಮರರಾಗಿ.
ಒ0 ಹರಿ ಒ0
ಒ0 ಹರಿ ಒ0.
No comments:
Post a Comment