Tuesday, March 15, 2016

"ಸ0ಸ್ಕಾರ  "

   ಆಚರಣೆಗಳು ,ಪದ್ಧತಿಗಳು , ನಡಾವಳಿಕೆಗಳು
ಇವುಗಳಿಗೆ ಸ0ಸ್ಕಾರವೆ0ತಲೂ ಕರೆಯಬಹುದು
  ಸಾಮಾಜಿಕ ,ಧಾರ್ಮಿಕ , ಪಾರ0ಪರಿಕ ,
ವ್ಯವಹಾರಿಕ ,  ಹೀಗೆ ಹಲವಾರು ಸ0ಸ್ಕಾರಗ
ಳಿವೆ.
      ಎಲ್ಲಾ ಸ0ಸ್ಕಾರಗಳು ಮೂಲತಃ ಮನೆ
ಯಲ್ಲಿ ,ಪಾಠಶಾಲೆಯಲ್ಲಿಯ ಸ0ಪರ್ಕದಲ್ಲಿ
ಕಲಿಯತಕ್ಕವುಗಳು.ಶಿಕ್ಷಕರಾಗಲಿ ,ಮನೆಯ
ತ0ದೆ -ತಾಯಿ ,ಪೋಷಕರಾಗಲಿ ಇವುಗಳನ್ನು
ಹೇಳಿಕೊಡುವುದಿಲ್ಲ.ಹಿರಿಯರು  ,ಗುರುಗಳು
ಪಾಲಕರು ಪಾಲಿಸುವ ಪದ್ಧತಿ ,ಆಚರಣೆ ,ರೂಡಿ
ಗಳನ್ನು ,ನೋಡಿ ಮಕ್ಕಳು  ಈ ನಡಾವಳಿಕೆ
ಗಳನ್ನು ಕಲಿಯಬೇಕು.
  ಸ0ಸ್ಕಾರಗಳು  ಕೌಟ0ಬಿಕವಾಗಿ ಭಿನ -ಭಿನ್ನ
ವಾಗಿರುತ್ತವೆ.ಕುಟು0ಬ ಸ0ಸ್ಕಾರ ನಡಾವಳಿ
ಕೆಗಳ ಮೇಲೆ ಮಕ್ಕಳ ಸ0ಸ್ಕಾರ ನಿರ್ಮಾಣ
ಆಗುತ್ತೆ.ಮಕ್ಕಳನ್ನು ಸ0ಸ್ಕಾರಪೂರ್ಣ ವಾಗಿ
ಬೆಳೆಯಲು ಹಿರಿಯರೆಲ್ಲರೂ ಪ್ರೋತ್ಸಾಹಿಸಬೇಕು.
ಅವಾಗಲೇ ಮಕ್ಕಳು  ಸ0ಸ್ಕಾರಭರಿತರಾಗಿ
ಸಮಾಜಜೀವಿಯಾಗಲು ಸಾದ್ಯ.

"ಏ ತ0ಗೆವ್ವ ನೀ ಕೇಳ್  "

  *  "   'ಗ0ಟ ಹಾಕಿದರ ' ಮ್ಯೆಮೇಲೆ
          ರೇಶ್ಮೆ ಶೀರೆ  ಬರತಾವ..
         'ಮ್ಯೆ ಮುರಿದ ದುಡಿ'  ಮ್ಯೆಮೇಲೆ
         ತ್ಯಾಪಿ  ಶೀರಿ ಬರತಾವ..  "
        ಏ ತ0ಗೆವ್ವ ನೀ ಕೇಳ್...
  *  "  ಕೋಟಿಗಟ್ಟಳೆ  ಸಾಲ ಮಾಡು
         ನಿನಗ  ಜಪ್ತಿ ವಾರ0ಟ ಇಲ್ಲ !
         ಲಕ್ಷಗಟ್ಟಲೆ ಸಾಲ ಮಾಡು
        ಟ್ರ್ಯಾಕ್ಟರ್  ಜಪ್ತಿ ಮಾಡ್ತಾರ  !
        ಏ  ತ0ಗೆವ್ವ ನೀ ಕೇಳ್...
  *  "  ಗೂರೂಜಿ ಹೇಳಿದರ  'ಅಮೃತವಾಣಿ '
        ಅದ -ಮಾತ ಬಡವ ಹೇಳಿದರ 
        ದೇಶದ್ರೋಹ -ಪಟ್ಟ  !
        ಏ ತ0ಗೆವ್ವ ನೀ ಕೇಳ...





 "  ಸ0ಗಾನ ಮಾತು"

  *  "  ಮನುಷ್ಯ ಎಷ್ಟೇ ಮೇಲಕ್ಕೆ ಹೋದರೂ
       'ಶಿಷ್ಟಾಚಾರ'ಕ್ಕೆ ಮೊದಲು ಗೌರವ
       ಕೊಡುವುದನ್ನು ಕಲಿಯಬೇಕು. "
  *  "  ವಿಭಿನ್ನ ವಿಚಾರಗಳಿರಬಹುದು
         ವಿಭಿನ್ನ ನಿಲುವುಗಳಿರಬಹುದು
        ರಾಷ್ಟ್ರ ,ಸಾರ್ವಬೌಮತೆ ,ಸ0ವಿಧಾನ
        ಎಲ್ಲರಿಗೂ  ಒ0ದೇ    ".
  *  " ಅಪ್ಪಟ ಭಾರತೀಯನಿ0ದ 
        ಶತೃಗಳ ಗುಣಗಾನ  ".....
        ಸ್ವಾಮಿವಿವೇಕಾನ0ದ ,ಭೋಸ್ ,
         ಇ0ತಹ ಕಪಟ ಭಕ್ತರನ್ನು ನೋಡಿ
        ಗಹಗಹಿಸಿ ನಗುತ್ತಿರಬೇಕು  ".


Monday, March 14, 2016

 "  ಸ0ಗಾನ ಮಾತು "

  *  "  ಬಿಕನಿ ಆಟ  ;  ಬಿಯರ್  ಆಟ
         ವಿಮಾನ ಆಟ ;  ದೇಶನ
        'ಕೊಳ್ಳೆ ಹೊಡೆತಾನಲ್ಲೋ ...?  '
        ಹುಷಾರಾಗಿರಬೇಕು. !
  *  "   ದೇಶದ್ರೋಹ  ,ದೇಶ ಕೊಳ್ಳೆ
          ಹೊಡೆಯುವ0ತಹ ಕಾರ್ಯಮಾಡಿ
          'ಕಾನೂನು ವ್ಯಾಪ್ತಿಗೆ' ಸಿಗಬಾರದೆ0ಬ
           ದುರುದ್ದೇಶದಿ0ದ ವಿದೇಶಕ್ಕೆ
           ಪಲಾಯನ ಮಾಡುವ ಬುದ್ಧಿಜೀವಿ
           ಗಳಿಗೆ ಲಗಾಮು ಹಾಕಲು ಕಾನೂನು    
           ತಿದ್ದುಪಡಿಯ ಅವಶ್ಯವಿದೆ  ".
  *  "  ಪಲಾಯನ ಮಾಡುವ0ತಹ 
       'ಗಿಮಿಕ್ಕ ' ಗಳು ಶ್ರೀಸಾಮಾನ್ಯ
       ಸಾಲಗಾರನಿಗೆ ಗೊತ್ತಾಗೋದೆ ಇಲ್ಲ." !



"ಶ್ರೀ ರಾಮಕೃಷ್ಣರ ಚಿ0ತನೆಗಳು "
---   ------   ------   -------   ----

       ಮನುಷ್ಯ  ಸಚ್ಛಾರಿತ್ರ್ಯವುಳ್ಳವನಾಗಿ,ಸದಾ
ಚಾರಿಯಾಗಿ ,ನಾಲ್ಕು ಮ0ದಿಗೆ ಬೇಕಾದವ
ನಾಗಿ ಬಾಳಿ ,ಲೋಕ ಕಲ್ಯಾಣ ಕಾರ್ಯಗಳನ್ನು 
ಮಾಡುತ್ತಾ ಸತ್ಸ0ಗ್ ,ಸದ್ಗುರು ಚಿ0ತನೆ
ಸದ್ಗುರುಗಳ ಉಪದೇಶ  ಭೋಧನೆಗಳನ್ನು
ಪಾಲಿಸುತ್ತಾ ಲೋಕಕಲ್ಯಾಣಾರ್ಥದಲ್ಲಿ
ಅಳಿದುಳಿದ ಸೇವೆಯನ್ನು ಮುಡುಪಾಗಿರಿಸಿ
"ಆ ಪರಮಾತ್ಮನಿಗೆ ಅರ್ಪಿಸಿ ಕೃತಾರ್ಥವಾಗು
ವುದೇ-ಜೀವನ್ಮುಕ್ತಿಯ ತಿರುಳಾಗಿದೆ.
ದೇವ ಸಾನಿಧ್ಯಕ್ಕೆ ಹಲವಾರು ಮಾರ್ಗಗಳಿವೆ.ಭಕ್ತಿ
ಮಾರ್ಗ,ಕರ್ಮ ಮಾರ್ಗ ,ಇನ್ನು ಕೆಲವರು
ಸದಾಚಾರ ,ಇನ್ನು ಹಲವರು ದೀನ-ದಲಿತರ 
ಸೇವೆಯಲ್ಲಿ ಪರಮಾತ್ಮನ ಇರುವನ್ನು ಕ0ಡು
ಪರಮಾನ0ದವನ್ನು ಅನುಭವಿಸಿದವರಿದ್ದಾರೆ.
ಲೋಕಕಲ್ಯಾಣಕ್ಕಾಗಿ ಹಲವಾರು ಮಾರ್ಗಗಳಿವೆ.
ಚಿ0ತನೆಗಳಿವೆ.ತನ್ನ ಅನುಕೂಲಕ್ಕೆ ತಕ್ಕ0ತೆ
ಯಾರಿಗೂ ತೊ0ದರೆಯಾಗದ0ತೆ ,ನೋವಾಗ
ದ0ತೆ ಎಲ್ಲರಿಗೂ ಲೇಸನ್ನು ಬಯಸಿ ಮುನ್ನಡೆ
ಯುವುದೇ  ಲೋಕ ಸೇವೆಯ ಮೂಲಉದ್ದೇಶ.
ಶ್ರೀಕೃಷ್ಣನ ಅವತಾರವೆ0ದೆ ಪ್ರಸಿದ್ಧರಾದ
ಪರಮಹ0ಸರ ಭೋಧನೆಗಳುಲೋಕಕಲ್ಯಾ
ಣಾರ್ಥವಾಗಿವೆ.ಇಲ್ಲಿ ಬೋಧನೆಗಿ0ತ 
ಅನುಕರಣೆಗೆ ಹೆಚ್ಚು ಒಲವಿದೆ.ಒಳ್ಳೆಯನಡತೆ
ಒಳ್ಳೆಯ ಗುಣ ,ಸಚ್ಛಾರಿತ್ರ್ಯವುಳ್ಳವನನ್ನು ದೇವರು
ಹೇಗೆ ಅವನ ಸಾಮಿಪ್ಯವನ್ನು ಬರಮಾಡಿಕೊಳ್ಳು
ತ್ತಾನೆಯೋ ,ಹಾಗೆಯೇ ಸದಾಚಾರಿಗಳನ್ನು 
ಅನುಸರಿಸಿ ಸನ್ಮಾರ್ಗ ಪಡೆಯುವ0ತೆ ಭಕ್ತಾಧಿ
ಗಳಲ್ಲಿ ಅನುಕರಣೆಯ ಮಹತ್ವವನ್ನು ತಮ್ಮ
ಬೋಧನೆಗಳಲ್ಲಿ ,ಉಪದೇಶಗಳಲ್ಲಿ ತಿಳಿಸಿದ್ದಾರೆ..
ದೇಶದೆಲ್ಲಡೆ  ರಾಮಕೃಷ್ಣ ಪರಮಹ0ಸರ ಸಾಕಷ್ಟು ಆಶ್ರಮಗಳಿವೆ.
"ಆ ಧರ್ಮ ಈ ಧರ್ಮವೆನ್ನದೇ  ಸದಾಕಾಲ
ಮಾನವ ಚಿ0ತನೆಗೆ ಅಭಿವೃದ್ಧಿಗೆ ಪೂರಕವಾಗುವ
ಮಾನವ ಧರ್ಮವನ್ನು ಅವರು ಸದಾಕಾಲ
ಪೋಷಿಸುತ್ತಿದ್ದರು.ಅವರ ಅಧ್ಯಾತ್ಮಿಕ ಚಿ0ತನೆ
ಗಳು ಜನ ಮನದಲ್ಲಿ ಇನ್ನು ಹೆಚ್ಚು ಆಳವಾಗಿ
ಬೇರೂರುವ0ತೆ  ಮಾಡಬೇಕಾಗಿದೆ.



 "ಬಿಯರ್  ಕಥೆ  "
    --   --   ---   ----
   ಬಿಯರ್ ಕುಡದ ನಿಶೆದಾಗ
    ಜಗತ್ತಿನ ಅನಭಿಶಕ್ತ ದೊರೆ ಆಗಾಕ -ಹೋಗಿ
    "ದಿವಾಳಿಕೋರ " ಆದೆಲ್ಲ್ಯೋಯಪ್ಪಾ..
    ಏನ್ ದ್ಯೆವದಾಟಪ ಇದು....!
     ಸಣ್ಣ  ಸಣ್ಣ ಮ0ದಿ ;ರಿಟ್ಯಾಯರ ಮ0ದಿ
   'ಬಹಳ -ಸೇಫ್ ' ಅ0ತಾ ಡಿಪಾಜಿಟ್ 
   ಮಾಡ್ತಾರ ;  ಅದ ರೊಕ್ಕ ನಿಮ್ಮ0ತೋರಿಗೆ
    ಸಾಲ ಕೊಡ್ತಾರ  ;
   ನೀವು ಗ0ಟ ಹಾಕಿ ದಿವಾಳಿ  ಆದರ
  ನಿಮ್ಮ ಜೊತೆಗೆ 'ಡಿಪಾಜಿಟರ್ ' ದಿವಾಳಿ
  ದೇಶನು  ದಿವಾಳಿ..! "
  ಏನ್ ದ್ಯೆವದಾಟಪ ಇದು....
     ಕುದುರಿಗೆ ಬೆನ್ನತ್ತಿ 
    ಮನಿ -ಮಠ ಕಳ್ಕೊ0ಡರ ಅದರ
   ಅವರು ಯಾರು ದೇಶ ಬಿಟ್ಟು ಹೋಗಿಲ್ಲ
    ಮಾಡಿದ ಸಾಲ ತೀರಿಸಿ ಋಣ ಮುಕ್ತ ಆಗ್ಯಾರ
    ಸಾಲ -ತೀರಿಸಿ
    ಋಣ ಮುಕ್ತಾಗಿ
   ದೇಶದ ಮಾನ ಉಳಿಸಿ..!
    ಏನ್ ದ್ಯೆವದಾಟಪ ಇದು...

"ಏ ತ0ಗೆವ್ವ ನೀ ಕೇಳ್ "

 
* " ಮನಿ -ಮುರಿದರ ಒ0ದ ಕುಟು0ಬ
ಬರಬಾದ ಆಗ್ತದ :
ಬ್ಯಾ0ಕ ಮುರಿದರ ಸಾವಿರ ಲಕ್ಷಾನುಗಟ್ಟಳೆ
ಕುಟು0ಬ ಬರಬಾದ ಆಗ್ತಾವ"
ಏ ತ0ಗೆವ್ವ ನೀ ಕೇಳ್...

* "ದಡೇ -ಶೇರಗಟ್ಟಳೇ ಬ0ಗಾರ
ಹಾಕ್ಕೊ0ಡು ಮರೆಯೋರು :
ಶೇರಗಟ್ಟಳೆ ಮಾನ -ಮರ್ಯಾದಿಯನ್ನ
ಎದ್ಯಾಗ ಇಟ್ಕೊ0ಡಿರಬೇಕು "
ಏ ತ0ಗೆವ್ವ ನೀ ಕೇಳ ..

* " ನಮ್ಮ ಸ0ಸಕೃತಿ ಬಿಟ್ಟು
ಬೀರು ,ಬಾಟ್ಲಿ ,ಲ0ಗ ,ತು0ಡು
ಖ0ಡಕ್ಕ ಮಾರು ಹೋದರ
ಸಮಯ ಬ0ದಾಗ 'ತ0ದೆ -ತಾಯಿ
ಯನ್ನೇ ' ನೀವ್ಯಾರು ಅ0ತಾ ಕೇಳ್ತಾರ
ಏ ತ0ಗೆವ್ವ ನೀ ಕೇಳ ..

Friday, March 11, 2016




"ಮಾಯಾ ಲೋಕ  "
----   ----  -----   -----
    ಈ ಲೋಕವೆಲ್ಲಾ ಮಾಯೆ."ಮಾಯೆ"ಯಿ0ದ
ಆವರಿಸಿದೆ ಈ ಲೋಕ.ಮಾಯೆಯಿ0ದ ಬಿಡು
ಗಡೆ ಹೊ0ದಿಲ್ಲ.ಹೊ0ದುವದೂ ಇಲ್ಲ.
ಮಾಯೆಯು ಪರೋಕ್ಷವಾಗಿ ಈ ಜಗನ್ನಿಯಾಮ
ಕಶಕ್ತಿಗೆಕಾರಣ.  ಇದನ್ನ ಅಲ್ಲಗಳೆಯುವ0ತಿಲ್ಲ.
  
ಯಾವ ಒ0ದು ವಸ್ತುವಿಗೆ ಆಧೀನರಾಗಿ,
ಮನಸೋತು ,ನಾವು ನಡೆದುಕೊಳ್ಳುತ್ತೇವೆಯೋ
"ಅದುವೇ ಆಧ್ಯಾತ್ಮಿಕ ಭಾಷೆಯಲ್ಲಿ -ಮಾಯೆ " 
 ಹಲವಾರು ಜಾತಿ -ಪ0ಗಡಗಳಿರುವ ಮನುಷ್ಯ
ಬೇಧದಲ್ಲಿ ,ಮಾಯೆಯು ಕೂಡಾ ಹಲವಾರು 
ರೂಪಗಳನ್ನು ಹೊ0ದಿದೆ.ಈ ಮಾಯೆಯು
ಒ0ದರ್ಥದಲ್ಲಿ "ಜಡತ್ವ" ಅ0ದರೂ ಅಡ್ಡಿಯಿಲ್ಲ.
  ವ್ಯಾಪಾರಸ್ಥರಿಗೆ ಈ ದಿನ ಚೆನ್ನಾಗಿ ವ್ಯಾಪಾರ
ಆಗಲಿ ,ಚೆನ್ನಾಗಿ ಲಾಭ ಆಗಲಿ.ಇನ್ನು ನಾನು
4ಅ0ತಸ್ತಿನ ಮನೆ ಕಟ್ಟಬೇಕು.ಅದು ಮಾಡಬೇಕು.
ಇದು ಮಾಡಬೇಕು. ಇದು ಅವಜ್
ರಿಗೆ ಆ0ಟಿದ  ಹಣದ ಮೋಹ -ಮಾಯೆ.
ಇನ್ನು ಕೆಲ ವ್ಯೆದ್ಯರಿಗೆಈ ದಿನ ಚೆನ್ನಾಗಿ
ಪ್ರ್ಯಾಕ್ಟಿ ಸ್ ಆಗಬೇಕಪಾ. ನನ್ನ ಮಗಳಿಗೆ 
ಮೆಡಿಕಲ್ಲ್  ಶೀಟ್ ಸಿಗಬೇಕು.ಅಷ್ಟು ದುಡ್ಡು 
ಗಳಿಸಬೇಕು -ಅ0ತಾ ದೇವರಲ್ಲಿ ಮೊರೆ 
ಹೋಗುವದು  ಒ0ದು ಮಾಯೆ.
ಇನ್ನು ನಿರ್ಗತಿಕರು -ಈ ದಿನ ಗುರುವಾರ.ಮಠಕ್ಕ
ಛಲೋ ಭಕ್ತರು ಬರಲಿ.ಶ್ರೀಮ0ತರು ಬರಲಿ.
ಭೀಕ್ಷೆ ಚೆನ್ನಾಗಿ ಆಗಬೇಕು.ನನ್ನ ಹೆ0ಡ್ತಿ ಮಕ್ಕಳು
ಎರಡು ಹೊತ್ತು ಇವತ್ತು -ನಾಳೆ ಊಟ ಮಾಡಬೇಕು. 
ಅಷ್ಟೊ0ದು ಭಿಕ್ಷೆ ಕರುಣಿಸಪ್ಪ ದೇವರೆ -ಅ0ತಾ 
ಕೇಳಕೊತಾರ .ಇದು ಮಾಯೆಯೆ.
    
ಮಾಯೆಯಲ್ಲಿ ಅ0ದರೆ ಮೋಹದಲ್ಲಿ
ಕೆಲವೊಬ್ಬರುಗ್ರಾಹರಾಗುತ್ತರೆ.ಕೆಲವರು 
ಗ್ರಹಿಸುತ್ತಾರೆ.ಆಶೆ,ಅಮಿಷ,ಗಳಿಕೆ ಆಸ್ತಿ -ಅ0ಕುರ
ಗಳು ಸೇರಿ ಮಯೆಯೆ0ಬುದು  ಬೇಡುವ 
ಒ0ದು ವಿನೂತನ ಮಾದರಿ.ಇದು ಪ್ರಾಪ0ಚಿ
ಕ ವ್ಯವಹಾರದಲ್ಲಿ.

  ಆಧ್ಯಾತ್ಮಿಕ ವ್ಯವಹಾರದಲ್ಲಿ ಈ ತರಹದ 
ಮನೋಭಾವನೆ -ವಾಸನೆ ಇರುವುದಿಲ್ಲ.ಇ0ತಹ
ವಾಸನೆಗಳಿದ್ದರೂ ಅವು ಹಿ0ಗಬೇಕು.ಇಲ್ಲದಿ
ದ್ದರೆ ಆಧ್ಯಾತ್ಮ ರುಚಿಸುವದಿಲ್ಲ.

    ಆದರೂ ಇತ್ತೀಚಿನ ದಿನಗಳಲ್ಲಿ ಮಠಾಧೀಶರು
ವ್ಯೆರಾಗ್ಯ ತಾಳುವ ಬದಲಾಗಿ ಸಾಮಾನ್ಯ 
ಮನುಷ್ಯ ನ0ತೆ "ಮಾಯೆಯೆ"ಬಲೆಯಲ್ಲಿ
ಸಿಕ್ಕು ಮಠದ ಗೌರವಾದರಗಳನ್ನು ಬೀದಿ 
ರ0ಪಾಟ ಮಾಡುತ್ತಿದ್ದಾರೆ.ಇದು ಶೋಚನೀಯ.
ಇದು ಕೂಡಾ ಮಾಯೆಯೆ ಒ0ದು ವಿಷೇಶ.
"ಕ್ಯೆಮಗ್ಗ  ಶೀರೆ  "

 ಬಾಗಲಕೋಟೆ ಜಿಲ್ಲೆಯ ಇಲಕಲ್ಲ
ನಗರ  ಕ್ಯೆ-ಮಗ್ಗ ಶೀರೆಗಳಿಗೆ ಪ್ರಸಿದ್ಧ.
ಸಾವಾರಿ ,ಆಠವಾರಿ ,ನೌವಾರಿ-ನೂಲಿನಸೀರೆ
ಚಮಕ ಸೀರೆ ,ರೇಶ್ಮಿ ಸೀರೆ.ಸೀರೆಗಳಿಗೆ ಬಲು
ಎತ್ತಿದ ಕ್ಯೆ ಇಲಕಲ್ಲ ನಗರ. ಸೀರೆಯ ಅ0ಚಿಗೆ
ಹಾಕುವ ಟೋಪಿಯ0ತೂ ನೋಡಲು ತು0ಬಾ
ಸೊಗಸಾಗಿರುತ್ತೆ.ಈ ಟೋಪನ್ನು ಕ್ಯೆಯಿ0ದಲೇ
ಹಾಕಬೇಕು.ಮಹಾರಾಷ್ಟ್ರ ,ಗುಜರಾತ ಕರ್ನಾಟಕ
ದಉತ್ತರ ಭಾಗದಲ್ಲಿ ಈಗಲೂ ಹೆಣ್ಣು ಮಕ್ಕಳು
'ಇಳಕಲ್ಲ ಕ್ಯೆ ಮಗ್ಗ ಸೀರೆಯನ್ನು ಇಷ್ಟ ಪಡುತ್ತಾರೆ.
    
  ಒ0ದು ಸೀರೆ ತಯಾರಾಗಬೇಕಾದರೆ
ಇದಕ್ಕೆ ಹತ್ತಾರು ಜನರ ಸಹಾಯ ಅವಶ್ಯವಿದೆ.
ಮೊದಲು ನೂಲನ್ನು ಬಣ್ಣ ಹಾಕಬೇಕು.ಆನ0
ತರ ನೂಲನ್ನು ಸಣ್ಣ -ಸಣ್ಣ ಉ0ಡೆಗಳಾಗಿ
ಪರಿವರ್ತಿಸಬೇಕು.ಅದಕ್ಕೂ ಮು0ಚೆ ಸೀರೆಗೆ
ಮುಖ್ಯವಾಗಿ  ಬೇಕಾಗುವ 'ಕೆಚ್ಚನ್ನು ' ಕ್ಯೆಯಿ0
ದಲೇ ತಯಾರಿ ಮಾಡಿಕೊಳ್ಳಬೇಕು.ಇವೆಲ್ಲಾ
ಹೆಣ್ಣು ಮಕ್ಕಳು ಮಾಡುವ ಕೆಲಸ.ಹೆಣ್ಣುಮಕ್ಕಳು
ಮನೆ ಅಡುಗೆ ಮಾಡಿ ದಿನಕ್ಕೆ 1-2  ಕೆಚ್ಚನ್ನು
 ಮಾಡ್ತಾರೆ.ಹೀಗೆ ಮನೆಯಲ್ಲಿ ಇರುವ ಎಲ್ಲಾ
ಮಕ್ಕಳು ನೂಲು ಡಬ್ಬಿಗೆ ತೋಡುವದು 
ಮಾಡ್ತಾರೆ.ಹೀಗೆ ಒ0ದು ಸೀರೆಗೆ ಹತ್ತಾರು
ಜನರಿಗೆ ಕೆಲಸ ಸಿಗುತ್ತೆ. ಇದರಿ0ದ ಬಡ 
ನೇಕಾರನ ಮನೆ ಸಾಗುತ್ತೆ.ಇತ್ತೀತ್ತಲಾಗಿ
ವಿದ್ಯುತ್ತ ಮಗ್ಗಗಳು ಬ0ದಿವೆ.ಹೆಚ್ಚಾಗಿ 
ಕ್ಯೆಮಗ್ಗ ನೇಕಾರರು ಈ ಗ ವಿದ್ಯೂತ್ತ ಮಗ್ಗಗಳ
ನೇಕಾರರಾಗಿ ಬದಲಾಗಿದ್ದಾರೆ.ಅರ್ಥಿಕ 
ಸ0ಕಷ್ಟವೇ ಇದಕ್ಕೆ ಮೂಲ ಕಾರಣ.
    ಸೀರೆಯಲ್ಲಿ  ಒ0ದು ಕಲೆ ಇದೆ.ಪರ0ಪರಾ0
ಗತವಾಗಿ ಬ0ದ ಈ ಕಲೆಯನ್ನು  ಉಳಿಸಿ
ಕೊ0ಡು ಹೋಗಲು  ಸರಕಾರ ನೇಕಾರ
ಕಾರ್ಮಿಕರಿಗೆ  ಉತ್ತೇಜನ ನೀಡಬೇಕು.
ವಿದ್ಯುತ್ತ ಮಗ್ಗ ಇರಲಿ.ಆದರೆ ಕುಶಲ ಕರ್ಮಿಗಳ
ಈ ಒ0ದು ಕ್ಯೆಮಗ್ಗ ನೇಕಾರಿಕೆ ಕಲೆಯನ್ನು
ಉಳಿಸಿಕೊಳ್ಳವ ಹ0ಬಲ ಸರಕಾರ ಪ್ರದರ್ಶಿಸಲಿ.

"ನೇಕಾರಿಕೆ ಉಳಿಯಲಿ
  ಕ್ಯೆಮಗ್ಗ ಕಲೆ ಉಳಿಯಲಿ."





 " ಸ0ಗಾನ ಮಾತು  "

  *  "  ಹೆಣ್ಣು -ಹೊನ್ನು -  ಮಣ್ಣು  ತ್ರಿಕರ್ಣ
         ಪೂರ್ವಕವಾಗಿ  ಯಾರು ಇವುಗಳನ್ನು
         ತ್ಯಜಿಸುತ್ತಾರೋ  ..?  ಅವರೇ
         ನಿಜವಾದ ಬ್ಯೆರಾಗಿಗಳು.ಸನ್ಯಾಸಿಗಳು."
  *  "  ಬೇಡುವ -ಕ್ಯೆಗಳಲ್ಲಿ ತಾರತಮ್ಯವಿಲ್ಲ
         ಕೊಡುವ ಕ್ಯೆಗಳಲ್ಲಿ ಉಚ್ಛ -ನೀಚ
         ತಾರತಮ್ಯವಿದೆ  "!.
  *  "  ಸಿರಿವ0ತನ ಕ್ಯೆಯಲ್ಲಿ ಸಿಕ್ಕರೂ
         ಬಡವನ ಕ್ಯೆಯಲ್ಲಿ  ಸಿಕ್ಕರೂ
         ಶೀಶೆಯೊಳಗಿನ  "ಸುರೆಯ "
         ಗುಣಧರ್ಮ ಬದಲಾಗುವದಿಲ್ಲ.  "!.




  " ಏ ತ0ಗೆವ್ವ  ನೀ ಕೇಳ್  "

  *  "  ನಮ್ಮ ಜೀವನ ಮತ್ತೊಬ್ಬರ
         ಕಾವಲು-ನಾಯಿಯ0ತಿರಬಾರದು ".
         ಏ  ತ0ಗೆವ್ವ ನೀ ಕೇಳ್...
  *  "  ಬ0ಗಾರ -ಬೆಳ್ಳಿ  ಸೇರು ಟನ್ನಗಟ್ಟಳೆ
         ಯಿದ್ದರೂ  , ಮಾಡಿದ ಸಾಲ
         ತೀರಿಸಲಿಲ್ಲಾ0ದರ " ದಿವಾಳಿ  "
         ಗಿರಾಕಿ -ಅ0ತಾರ ! "
         ಏ  ತ0ಗೆವ್ವ ನೀ ಕೇಳ್  ..
  *  "  ಸಾಲ ಮಾಡಿ ಪರದೇಶದ
         ಬೀಚನ್ಯಾಗ ಕು0ತರ
        "  ಚಾ0ಡಾಲ"ರ0ತಾರ  ".
        ಏ ತ0ಗೆವ್ವ ನೀ ಕೇಳ್ .

Thursday, March 10, 2016

  "ಸ0ಗಾನ ಮಾತು"

  *  "  ಸು0ದರ ಮಾತುಗಳು ಕವಚಗಳಾಗ
          ಲಾರವು ".
  *  "  ಹಣದ ಪ್ರಭಾವದ ಜೊತೆಗೆ
         ರಾಜಕೀಯ ಪ್ರಭಾವ ಬಳಸಿದರೆ 
         ಔದ್ಯೋಗಿಕ ಯಶಸ್ಸು ಗಳಿಸುವದರಲ್ಲಿ
         ಸ0ದೇಹವಿಲ್ಲ.  "
  *  "  ಅಭಿವ್ಯಕ್ತಿ ಸ್ವಾತ0ತ್ರ್ಯದ  ಹೆಸರಿನಲ್ಲಿ
         ದೇಶದ್ರೋಹವೆಸಗುವದು ಅಕ್ಷ್ಯಮ್ಯ.
         ರಾಜಕೀಯ ಕಾರಣಗಳಿಗಾಗಿ
         ಸ್ವಾತ0ತ್ರ್ಯಹರಣಗೊಳಿಸುವ
         ಆರೋಪಗಳು -ಅಕ್ಷ್ಯಮ್ಯ.".

 " ಬದುಕಿನ ಅನಿವಾರ್ಯತೆ  "

 "ಬದುಕಿನ ಅನಿವಾರ್ಯತೆಗಳು "
ಈ ವಿಷಯದ ಮೇಲೆ ನಾಲ್ಕು ಮಾತು 
ಹೇಳಬೇಕೆ0ದರೆ --  ಬದುಕಿನ  ಎಲ್ಲಾ
ಮಜಲುಗಳನ್ನು ಅರಿತವನಾಗಿರಬೇಕು.
ಇದೊ0ದು ಕ್ಲಿಷ್ಟ ಕರ ವಿಷಯ.ಸಾಮಾಜಿಕ
ಜೀವನದಲ್ಲಿ ಬದುಕಿಲ್ಲದೇ ಜೀವನವಿಲ್ಲ. 
ಇದಕ್ಕಾಗಿ ಮನುಷ್ಯ  ಯಾವ -ಯಾವ 
ಸನ್ನಿವೇಷಗಳಲ್ಲಿ ಯಾವ -ಯಾವ ನಾಟಕ 
ಆಡಬೇಕಾಗುತ್ತೋ ಅವನಿಗೆ ಗೊತ್ತಾಗೋದಿಲ್ಲ.
ಇದೆಲ್ಲಾ "ಮಾಯೆ "ಯ ಆಟ. ಆ  ಮಾಯೆ
ಹೇಗೆ ಆಟವಾಡಿಸುತ್ತೋ ಹಾಗೆ ಬದುಕಿನ
ನಾಟಕ.

ಈ ಬದುಕಿನ ನಾಟಕದಲ್ಲಿ "ಬಡತನ  ಮತ್ತು
ಹೆಣ್ಣು  "  ಈ ಎರಡು ಪಾತ್ರಗಳು ಈ 
ಬದುಕಿನ ನಾಟಕದ ಜೀವನಾಡಿ
ಬದುಕಿನ ನಾಟಕದ ಸೂತ್ರದಾರರು. ಇವುಗಳ
ಸುತ್ತುಮುತ್ತಲೇ ಜೀವನ.
    
ಬಡತನ ಮನುಷ್ಯನನ್ನು ನೋಡಬಾರದ್ದನ್ನು
ನೋಡುವಹಾಗೆ ,ಮಾಡಬಾರದ್ದನ್ನು ಮಾಡುವ
ಹಾಗೆ ಮಾಡಿಸುತ್ತೆ.ವಿಶೇಷವಾಗಿ  ಹೆಣ್ಣು ಮಕ್ಕಳು
ಕೆಳಸ್ತರದಲ್ಲಿ ಕೂಲಿ ಹೆಣ್ಣುಮಕ್ಕಳು ,ಮಧ್ಯಮ 
ಹಾಗು ಮೇಲ್ವರ್ಗದ ಲ್ಲಿ ನೌಕರಿ ಹೆಣ್ಣು ಮಕ್ಕಳು
ಸದಾ "ಲ್ಯೆ0ಗಿಕ ದೌರ್ಜನ್ಯ " ಎದುರಿಸುವ 
ಪ್ರಸ0ಗಗಳೇ ಹೆಚ್ಚು.ಇವುಗಳಲ್ಲಿ ಎಷ್ಟೋ 
ಕೃತ್ಯಗಳು ಸಾಮಜಿಕ ಮರ್ಯಾದೆಗೆ  ಅ0ಜಿ
ಬಯಲಿಗೆ ಬರುವದಿಲ್ಲ.ಕೆಲವೊ0ದು ಸಾಕ್ಢಿ 
ಪುರಾವೆ ಕೊರತೆ ಎದುರಿಸಿ ನ್ಯಾಯಾಲಯ
ದಲ್ಲಿ ಬಿದ್ದು ಹೋಗುತ್ತವೆ.
ಬದುಕು ಎಲ್ಲಿಯವರೆಗೆ ಜಗತ್ತು ಇರುತ್ತೋ ,
ಅಲ್ಲಿಯವರೆಗೆ ಬದುಕಿನ ಜಟಕಾ ಬ0ಡಿ
ಸಾಗುತ್ತಲೇ ಇರಬೇಕು.
ಕಾಲಚಕ್ರ ಉರುಳಿದ0ತೆ  ಬ0ಡಿಯ ಗಾಲಿಗಳು
ಉರುಳುತ್ತವೆ. ಕೆಳಗೆ ಬೀಳದ0ತೆ  ಬ0ಡಿ
ಸಮಚಿತ್ತದಲ್ಲಿ ನಮಗೆ ಬೇಕಾಗಿಯೋ ,
ಬ್ಯಾಡಾಗಿಯೋ , ಒಟ್ಟಿನಲ್ಲಿ ಬದುಕೆ0ಬ 
ಬ0ಡಿಯನ್ನು ಓಡಿಸಲೇ ಬೇಕು.
ಜ್ಯೆಸಬೇಕು -ಇದ್ದು ಜ್ಯೆಸಬೇಕು !

Wednesday, March 9, 2016


"ಶಿವ ಸ್ವರೂಪ  "


ಸೃಷ್ಟಿ ,ಸ್ಥಿತಿ ,ಲಯ  ಇವೆಲ್ಲವೂ  ಪರಬ್ರಹ್ಮ 
ಸ್ವರೂಪಗಳು. ಇವುಗಳಿಗೆ ಹುಟ್ಟಿಲ್ಲ :ಸಾವಿಲ್ಲ.
ದೇವ ಸ್ವರೂಪಿಗಳು. ವಿವಿಧ ಗುಣ ವ್ಯೆಶಿಷ್ಟಾದಿ
ಗಳಿ0ದ ಗುಣಗಳ ಸ್ವರೂಪಗಳು ತಾತ್ಕಾಲಿಕ
ವಾಗಿ ಬದಲಾಗಬಹುದು.ಅದೇ ಶಾಶ್ವತವಲ್ಲ.
ಭೌತಿಕ ,ರಾಸಾಯನಿಕ ,ಜೀವ -ನಿರ್ಜೀವ
ಎಲ್ಲಾ ಗುಣ ವ್ಯೆವಿಧ್ಯಗಳಿಗೂ ಇದು ಅನ್ವಯಿಸುತ್ತದೆ.

ಬಟ್ಟೆಯಿ0ದ ಶರ್ಟ್ ಹೊಲೆಯಬಹುದು ,ಜ0
ಪರ ಹೊಲೆಯಬಹುದು.ರೂಪ ಬೇರೆ ಬೇರೆ.
ಬಳಕೆಯಾದ ವಸ್ತು ಒ0ದೇ. ಯಾವ ರೂಪದಲ್ಲಿ
ವಸ್ತು ಭೌತಿಕವಾಗಿ ಸೇರಿಕೊಳ್ಳುತ್ತೋ , ಆರೂಪದಲ್ಲಿ
 ಕಾಣುತ್ತೇವೆ. ಇದೇ ರೀತಿ ಜಗತ್ತಿನ ಚರಾ-ಚರ
 ವಸ್ತುಗಳೆಲ್ಲವೂ ಶಿವಮಯ. ಎಲ್ಲದಕ್ಕು
ರೂಪ -ಬೇಧ ಇದ್ದೇ ಇರುತ್ತೆ ಎಲ್ಲದಕ್ಕೂ ಲಯ
ಗುಣವೂ ಇರುತ್ತೆ. ಜೀವ ವಸ್ತುಗಳಲ್ಲಿ  ನಾವು
ಸ್ವಭಾವ ಜನ್ಯ ಪರಿಣಾಮಗಳನ್ನು ಕಾಣುತ್ತೇವೆ.
ನಿರ್ಜೀವ ವಸ್ತುಗಳಲ್ಲಿ ಈ ಗುಣ ಇರುವದಿಲ್ಲ
ಆದರೆ "ಲಯ "ಎರಡಕ್ಕೂ ಒ0ದೇ. ಲಯ 
ಹೊ0ದುವ ಎಲ್ಲಾ ವಸ್ತುಗಳು ಹುಟ್ಟುವಿನ
ಸ್ವರೂಪ ಪಡೆಯಲೇಬೇಕು. ಜಗತ್ತಿನ 
ನಿಯಮವೇ ಹಾಗಿದೆ. ಕತ್ತಲು -ಬೆಳಕು ಇದ್ದ
ಹಾಗೆ. ಅದೇ ರೀತಿ ಮನುಷ್ಯ ಜೀವನ 
ಹುಟ್ಟು  -ಸಾವು. ಹುಟ್ಟು  ಸಾವಿನ ನಡುವೆ 
ಬದುಕನ್ನು ಕಾಣುತ್ತಾ ಕೊನೆಗೆ ಲಯದಲ್ಲಿ 
ಲೀನವಾಗುತ್ತದೆ.
ಶಿವ ಸ್ವರೂಪವೇ --ಅನನ್ಯ 
ಶಿವ ಸ್ವರೂಪವೇ -ಶಾಶ್ವತ.
.


"ಮಹಿಳೆಯರು  "
        ಆಧುನಿಕ ಜಗತ್ತಿನಲ್ಲಿ ಹೆಮ್ಮೆಯಿ0ದ 
ಹೇಳಿಕೊಳ್ಳುವ ಮಾತೆ0ದರೆ   ,  ಜಗತ್ತು 
ಬದಲಾಗಿದೆ ಅದೇ ರೀತಿಯಲ್ಲಿ ಮಹಿಳೆಯರೂ
ಬದಲಾಗಿದ್ದಾರೆ.

      12ನೇ ಶತಮಾನದಲ್ಲಿ ,ಬಸವಣ್ಣನ 
ಕಾಲದಲ್ಲಿ ಇದ್ದ0ತೆ ,  ಇ0ದು ಮಹಿಳೆ
ಎಲ್ಲಾ ರ0ಗಗಳಲ್ಲಿ  ತನ್ನ ಸ್ಥಾನವನ್ನು ಭದ್ರ
ಪಡಿಸಿಕೊ0ಡಿದ್ದಾಳೆ. ತ0ತ್ದಜ್ನಾನದಲ್ಲಿ ,
ಬುದ್ಧಿಮತ್ತೆಯಲ್ಲಿ , ಅಪ್ರತಿಮ ಪ್ರತಿಭಾವ0ತೆ.
ಸೌರವ್ಯೂಹ ಭೇಧಿಸಿದ್ದಾಳೆ. ಗಗನಯಾನ 
ಮಾಡಿದ್ದಾಳೆ. ವಿಶ್ವದ ಶ್ರೇಷ್ಟ  ಆಡಳಿತಗಾರರಲ್ಲಿ
ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಅಲ0ಕರಿಸಿದ್ದಾಳೆ.
ವಿಧಾನ ಪರಿಷತ್ತು ,ವಿಧಾನಸಭೆ ,ವಿಧಾನ ಸಭಾ
ಧ್ಯಕ್ಷ ,ಲೋಕಸಭಾಧ್ಯಕ್ಷ , ರಾಷ್ಟ್ರಾಧ್ಯಕ್ಷ ,ಪ್ದದಾನ 
ಮ0ತ್ರಿ ,ವಿದೇಶಾ0ಗ ಸಚಿವಾಲಯ ,ಹಣಕಾಸು
ಸಚಿವಾಲಯ , ಅನೇಕ ಪ್ರಮುಖ ರಾಜಕೀಯ
ಹುದ್ದೆಗಳನ್ನು ಅಲ0ಕರಿಸಿ ,ಅದರ ಘನತೆಯನ್ನು
ಹೆಚ್ಚಿಸಿದ್ದಾಳೆ.

    ಕಾರ್ಯದಕ್ಷತೆಯಲ್ಲಿ ,ಉದ್ದಿಮೆರ0ಗದಲ್ಲಿ
ಬ್ಯಾ0ಕ್ ,ಅ0ಚೆ ಸೇವಾ ಕ್ಷೇತ್ರದಲ್ಲೂ ಕಾಲಿರಿಸಿ
ದ್ದಾಳೆ.ಇತ್ತಿತ್ತಲಾಗಿ ರಕ್ಷಣಾವಲಯದಲ್ಲೂ ,
ಸೇರ್ಪಡೆಯಾಗಿದ್ದಾಳೆ.ಇದು ವೃತ್ತಿ ಆಧಾರಿತ
ವೃ0ದಆಧಿಕಾರ ವರ್ಗದ ಮಾತಾಯಿತು.
  ಇನ್ನು ಕೌಟ0ಬಿಕ ರ0ಗದಲ್ಲಿ ದುಡಿಯುವ
ಗ0ಡ , ಅಕಾಲಿಕ ಮರಣಕ್ಕೆ ತುತ್ತಾಗಿ ,ಕುಟು0
ಬವುಆರ್ಥಿಕ ಸ0ಕಷ್ಟಕ್ಕೆ ಸಿಲುಕಿದಾಗ ಎದೆಗು0
ದದೇ ತನ್ನದಲ್ಲದ  ಯಾವ ಕೆಲಸವನ್ನು ಹೇಸಿಗೆ
ಪಡೆದೇ  ಛಲ0ದಕಮಲ್ಲಳಾಗಿ ಕಲಿತು

ಅಟೋ ಚಾಲಕ ,ಕಾರ್-ಚಾಲಕ ,ಲಾರಿ ಚಾಲಕ
ಟ್ರ್ಯಾಕ್ಟರ್ -ಚಾಲಕ ಅ0ತಹ ಕ್ಲಿಷ್ಟಕರ ಉದ್ಯೋ
ಗದಲ್ಲಿ ಕ್ಯೆ -ಹಾಕಿ ಯಶಸ್ಸಿನ ಛಾಪನ್ನು
ಒತ್ತಿದ್ದಾಳೆ.

     ಸಮಯ ಬ0ದಾಗ  ವೆ0ಕಟರಮಣ ಪಲಾ
ಯನ ವೆನ್ನದೇ  ವೆ0ಕಟರಮಣನ ಅನುಗ್ರಹ
ದಿ0ದ ಚಹಾ -ದ0ಧೆ ಮಾಡುತ್ತಿದ್ದಾಳೆ.
ಕಾಯಿಪಲ್ಲೆ ,ಬ0ಡಿ ಅನಿವಾರ್ಯ ಪ್ರಸ0ಗ
ದಲ್ಲಿಕೂಲಿ ಕೆಲಸ ಭಾರ ಎತ್ತುವ ಕೆಲಸ ಮಾಡಿ
ತಾನು ಸಹ ಗ0ಡಸರಿಗೆ ಯಾವ ಕೋನದಿ0ದಲೂ
 ಕಡಿಮೇಏನಿಲ್ಲ ಎ0ಬುದನ್ನು

ಸಾಧಿಸಿ ,ಅಡುಗೆ ಮನೆಗೆ ಸೀಮಿತವಾಗಿದ್ದ
"ಹೆಣ್ಣು " ಈಗ ಕಾರ್ಮಿಕ ವಲಯದಲ್ಲೂ 
ಗ0ಡಾಗಿ ದುಡಿಯುವ ಹೆಣ್ಕ್ಸ್ಣಾಗಿ ಪರಿವರ್ತಿತಳಾಗಿದ್ದಾಳೆ.
"ಹೆಣ್ಣೆ0ಬ ಮಾತೆಗೆ ನಮ್ಮ ದೊ0ದು ಸಲಾ0 ".



 "  ಸ0ಗಾನ ಮಾತು "

  *  "  ಕಾಲ ಕೆದ್ರಿ ಜಗಳತೆಗಿಬಾರದು
         ಬಾಯಿ ತಪ್ಪಿ ಹೊಲಸ
         ಮಾತಾಡಬಾರದು
         ನ0ಬಿದವರಿಗೆ ಮೋಸ ಮಾಡಬಾರದು
         ಗೊತ್ತಿದ್ದು  -ಇದನ್ನ್ ಮೀರಿ
         ಜಗಳ ತೆಗಿತೀವಿ.
       "ಇದ ಮನಷ್ಯಾನ ಸ್ವಭಾವ್  "!.
  *  "  ಜೀವನ ಜ್ಯೋತಿ
        ಜೀವನ -ಪರ0ಜ್ಯೋತಿಯಾಗಲು
       ಅನ್ಯರ ಜೀವನದಲ್ಲಿ ಅನ್ನದಾತನಾಗಿ
       ಜ್ನಾನದೇಹಿಯಾಗಿ ಬೆಳಗಬೇಕು  "!.
  *  " ಕಾಲ ಮಿ0ಚಿರುವದಿಲ್ಲ
        ಮಾತು ಮಿ0ಚಿರುತ್ತೆ
       ಮಾತು ಮಿ0ಚಿ ಗುಡುಗು:ಸಿಡ್ಲಾಗಿ
       ಘರ್ಜಿಸೊ ಮೊದ್ಲ ಎಚ್ಚೆತ್ತುಕೊಳ್ಳಬೇಕು ".

Tuesday, March 8, 2016

 "ಅಸಮಾನತೆ  ಮತ್ತು ಮಹಿಳೆಯರು  "

ನಮ್ಮದು ಭೌಗೋಲಿಕವಾಗಿ ಬಹು ದೊಡ್ಡ ರಾಷ್ಟ್ರ.
.ಅಸಮಾನತೆ ,ಹಸಿವು. ಬಡತನ
ಹಿ0ದುಳಿದಿರುವಿಕೆ , ರೋಗರುಜನಿಗಳ ತವರು ನಮ್ಮ
 ದೇಶ.ನಮ್ಮಲ್ಲಿರುವ ಅಸಮಾನತೆ ಹಾಗು ಹಿ0ದುಳಿದಿರುವಿಕೆ ಮುಖ್ಯವಾಗಿ ನಮ್ಮ 
ನಡಾವಳಿಕೆಗಳು ಕಾರಣ.ನಮ್ಮ ನಡಾವಳಿಕೆಗಳಲ್ಲಿ
 ಅಡಕವಾಗಿರುವ ಅಸಮಾನತೆ
ಶಿಕ್ಷಣ ವ್ಯವಸ್ಥೆಗಳು ಬಹುತೇಕ ನಮ್ಮಲ್ಲಿಯ 
ಹೆಣ್ಣು ಮಕ್ಕಳು ಅಸಮಾನತೆಯಿ0ದ 
ನರಳಲು ಕಾರಣ ವಾಗುತ್ತಿವೆ. ಮು0ದೆ ಬರಲು ತಡೆಯೊಡ್ಡುತ್ತಿವೆ.

  ಸ್ವಾತ0ತ್ರ್ಯ ಪೂರ್ವ  ಮತ್ತು ನ0ತರ 
ಅಸಮಾನತೆಯ ಪ್ರಮಾಣ ಕಡಿಮೆಯಾಗಿ
ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತಲಿದೆ.ಇದು
ಒಪ್ಪತಕ್ಕ ವಿಷಯ. ಆದರೂ ಪುರುಷ ಪ್ರಧಾನ
ಮನೋವೃತ್ತಿಯಿ0ದ ನಾವು ಬಳಲುತ್ತಿರುವದನ್ನು
ಬಿಡಿಸಲು ಆಗುತ್ತಿಲ್ಲ. 
   
   ಗಾಮಸ್ವರಾಜ್ಯ  ಅಸಮಾನತೆ ಓಡಿಸಲು
ಸಾಕಷ್ಟು ಅವಕಾಶ  ,ಸವಲತ್ತು ಮಹಿಳೆಯರಿಗೆ
ನೀಡಿದೆ.ಇದು ಹೆಮ್ಮೆ ಪಡುವ0ತಹ ವಿಷಯ.
   ಆದರೆ ಹೆಣ್ಣು ಪಡೆದ0ತಹ ಸ0ವಿಧಾನ ದತ್ತ
ಗ್ರಾಮಾಧಿಕಾರವನ್ನು ಪುರುಷ ಪ್ರಧಾನ ರು 
ಸ್ವೀಕರಿಸುವ ಮನಸ್ಥಿತಿಯಲ್ಲಿಲ್ಲ. ಹೆಸರಿಗೆ ಮಾತ್ರ
ಹೆಣ್ಣಿನ ಅಧಿಕಾರ - ರಾಜ್ಯಭಾರ ಪುರುಷರದೇ
ಆಗಿದೆ.ಇದು ಬದಲಾಗಬೇಕು.ಇದು ಬದಲಾದರೆ
ಅಸಮಾನತೆಯ  ,ಶಿಕ್ಷಣ , ಎಲ್ಲಾ ಬದಲಾಗುತ್ತದೆ.
   
   ಸ್ರೀ ಸಿ0ಹಣಿಯರು ಸಿ0ಹದ ಎಲ್ಲಾ
ಗುಣಾವಗುಣಗಳನ್ನು ಮ್ಯೆಗೂಡಿಸಿಕೊ0ಡು
ಮುನ್ನಡೆಯಬೇಕು.
       
ವಿಚಿತ್ರವೆ0ದರೆ  ಈಗ ವಿಶ್ವದಲ್ಲಿ  ಅತ್ಯ0ತ
ಶ್ರೀಮ0ತ  ಪಟ್ಟಿಯಲ್ಲಿ ಹೆಣ್ಣು ಸ್ಥಾನ ಪಡೆದಿದ್ದಾಳೆ..
ಅತ್ಯ0ತ ದಕ್ಷ ಆಡಳಿತಗಾರರ ಪಟ್ಟಿಯಲ್ಲಿಯೂ ಸ್ಥಾನವನ್ನು ಅಲ0ಕರಿಸಿದ್ದಾಳೆ.
ಆದರೆ ಜನಸ0ಖ್ಯೆಗನುಗುಣವಾಗಿ ಪ್ರಮಾಣ 
ಕಡಿಮೆ.  
    
  ನಮ್ಮ ಗ್ರಾಮಗಳು ಮೊದಲಿನ0ತಿಲ್ಲ.
ಸುಧಾರಣಾ ಪರಿಕ್ರಮದಲ್ಲಿವೆ.ಯಾವುದೋ 
ಕೆಲವೋ0ದು ಹೇಳಲಾರದ0ತಹ ಮೌಡ್ಯ
ಆಚರಣೆಗಳು ಇನ್ನು ಪುರುಷರಲ್ಲಿ ಕೊರೆಯು
ತ್ತಾ ಇವೆ. ಇದನ್ನು ಹೋಗಲಾಡಿಸಿ ಹೆಣ್ಣಿಗೆ
ಸಮಾನ ಅವಕಾಶ ಸಿಗುವ0ತೆ ನಾವು 
ಅವಕಾಶಗಳನ್ನು ಕಲ್ಪಿಸಿದರೆ ಈಗಿರುವ ಎಲ್ಲಾ
ಸಮಸ್ಯೆಗಳು ಪರಿಹಾರವಾಗುವದರಲ್ಲಿ 
ಸ0ದೇಹವಿಲ್ಲ.ಸಾಮಾಜಿಕ ,ಆರ್ಥಿಕ ,ಶ್ಯೆಕ್ಷಣಿಕ
ಆರೋಗ್ಯ ವ್ಯವಸ್ಥೆಯಲ್ಲಿ  ಸ0ಪೂರ್ಣ 
ಬದಲಾಗುತ್ತದೆ.


  " ಸ0ಗಾನ  ಮಾತು   "

* "  ಮನುಷ್ಯ  ತನ್ನ  ಬಣ್ಣ  ಬದಲಾಯಿಸುವ    
       ರೀತಿಯಲ್ಲಿ ,
      ಪ್ರಪ0ಚದ ಪ0ಚಭೂತಗಳನ್ನು 
      ಬದಲಿಸಲಾಗದು .  "
  *  "  ನಿ0ದಕರಿರಬೇಕಯ್ಯ
         ಚೆ0ದದ -ಅ0ದದ  ಗತಿಗೆ  !  "
  *  "  ಮೂರು  -ಬಣ್ಣ. , ಮೂರು -ಗೇಣು
         ಮೂರು -ಸೇರು  ,
        ಮೂರರಲ್ಲಿಯೇ ನರಕ -ಸ್ವರ್ಗ !

Monday, March 7, 2016

    "ಸ0ಗಾನ ಮಾತು  "


*  ಹಣ ,ಆಸ್ತಿ ,ಕಾರುಬಾರು  
    ಇವು  ರೋಡಗೋಲ್ಡ.
    ಪ್ರೀತಿ ,ವಿಶ್ವಾಸ ,ದುಡಿಮೆ 
   ಇವು ಪಕ್ಕಾ ಗೋಲ್ಡ.
*  ಬಯಸಿದ್ದು  ಅನಿಸಿದ್ದು
   ಎಲ್ಲಾ ಸಿಗುವ0ತಿದ್ದರೆ
   ದೇವರ ಅಸ್ತಿತ್ವಕ್ಕೆ ಬೆಲೆನೇ ಇರುತ್ತಿರಲಿಲ್ಲ.
* ಧರ್ಮದ   ನುಡಿಗಳು
  ಎಲ್ಲಿ ಸಾಕಾರವಾಗುತ್ತವೆಯೋ
  ಅಲ್ಲಿ ಸಜ್ಜನ  ಶರಣರಿರುತ್ತಾರೆ.


         " ಸ್ವ  -ಗೌರವ  "

ಸ್ವ -ಗೌರವ ಇದನ್ನು ಸ್ವಯ0 ಆತ್ಮ 
ಗೌರವವೆ0ದು ಅರ್ಥ್ಯೆಸಬಹುದಾಗಿದೆ.ಇದರ 
ಉಪಪದ ಸ್ವ+ಅಭಿಮಾನ = ಸ್ವಾಭಿಮಾನ.
ಸ್ವ+ಧರ್ಮ= ಸಧರ್ಮ.ಹೀಗೆ ಇದರ ಉಪಪದದ
ಟೊ0ಗೆ ವಿಸ್ತರಿಸುತ್ತಾ ಹೋಗುತ್ತದೆ.
     
 ಒಳ್ಳೆಯದು ,ಪರಿಶುದ್ಧ ,ಶುದ್ಧ  ,ಸನ್ನಡತೆ 
ಹೀಗೆ "ಒಳ್ಳೆಯದು " ಎ0ದು -ಸೂಚಿಸುವ 
ಶಬ್ದಗಳಿಗೆ "ಸ್ವ" ಇಲ್ಲವೇ "ಸ" ಶಬ್ದ 
ಹಚ್ಚಲಾಗುತ್ತದೆ.ಸ್ವ+ ನಡತೆ= ಸನ್ನಡತೆ
ಸ್ವ+ಧರ್ಮ=ಸಧರ್ಮ/ಸ್ವಧರ್ಮ.ಹೀಗೆ ಈ
ಪದಗಳು ಸೂಚ್ಯಾ0ಕ ಶಬ್ದಗಳಾಗಿವೆ.

 ಯಾವುದು ಸನ್ನಡತೆಯಿ0ದ ,ಸನ್ಮಾರ್ಗ
ದಿ0ದ ,ಸದ್ಗುಣಗಳಿ0ದ ,ಸದಾಚಾರದಿ0ದ
ಗುರುಹಿರಿಯರನ್ನು ಗೌರವಿಸಿ ,ಗುರುಹಿರಿಯರ
ಕ್ಫಪೆಗೆ ಪಾತ್ರರಾಗಿ-ಸಜ್ಜನ ಸಾಧು ಜನವೆ0ದು
ಪರಿಗಣಿಸಲ್ಪಡುವರೋ ,ಅವರು "ಸ್ವ-ಗೌರವ "
ದಿ0ದ ಅರ್ಥಾರ್ತ ಸ್ವಯ0 ಆತ್ಮ ಗೌರವದಿ0ದ 
ನಡೆಯುವವರು ಎ0ದು ಅರ್ಥ್ಯೆಸಬಹುದು.
ಸ್ವಯ0 ಆತ್ಮ ಗೌರವ ಎಲ್ಲಿರುತ್ತೋ , ಸ್ವಯ0 
ಅಭಿಮಾನ ಪ್ರಭಾವ ಇದ್ದೇ ಇರುತ್ತದೆ.ಇವರು
ಸಮಾಜ ಪೂರಕ ಸ್ವಾಭಿಮಾನಿಗಳು.

ಇವರು ಇತರರನ್ನು ಕೀಳಾಗಿ ಕಾಣುವದಿಲ್ಲ.
ಓಲ್ಯೆಸುವದು ಇಲ್ಲ.ಯಾವುದು ನಿಷ್ಟವು ಅದನ್ನು 
ಸ್ವೀಕರಿಸುತ್ತರೆ.ಹಾಗೆಯೇ ನಡೆದುಕೊಳ್ಳುತ್ತಾರೆ.
ಉಚ್ಛ್ -ನೀಚ ,ಮೇಲು -ಕೀಳು ಇವರಲ್ಲಿ ಇಲ್ಲ.

"  ಏ  ತ0ಗೆವ್ವ  ನೀ ಕೇಳ್  "

*  ನದಿ ಸಾಗರವ ಸೇರಲೇಬೇಕು
   ಮನುಷ್ಯ ಮಣ್ಣು  ಸೇರಲೇಬೇಕು
   ಶತೃತ್ವ ಭಾಷ್ಪಗಳಲಿ ಅ0ತ್ಯವಾಗಲೇಬೇಕು
    ಏ ತ0ಗೆವ್ವ ನೀ ಕೇಳ್... !
*  ಅಕ್ಕಿ  ಬೇಯಬೇಕು
    ಕಾಳು ನೆನಿಬೇಕು
    ಮನುಷ್ಯ ದುಗುಡ ಮುಕ್ತನಾಗಿರಬೇಕು
    ಏ ತ0ಗೆವ್ವ ನೀ ಕೇಳ್...!
*  ಎರಡ ಕಲ್ಲಿದ್ದರ ಬೆ0ಕಿ
   ಇಬ್ಬರ   ಹೆ0ಗಸಿರಿದ್ದರ  ಮಲ್ಲಯುದ್ಧ
   ಏ ತ0ಗೆವ್ವ  ನೀ  ಕೇಳ್...!

Friday, March 4, 2016


"  ಏ  ತ0ಗೆವ್ವ  ನೀ  ಕೇಳ್"
   
*  ಆಯಗಾರ ಆಯಗಾರ ಆಗಿಬರಾ0ಗಿಲ್ಲ
  ಚೆಲುವೇರ ಚೆಲುವೇರ  ಆಗಿಬರಾ0ಗಿಲ್ಲ
  ಕಳ್ಳ ಸನ್ಯಾಸಿಗೆ ಮಾರ್ಜಾಲ ಸನ್ಯಾಸಿ
  ಆಗಿಬರಾ0ಗಿಲ್ಲ
   ಏ  ತ0ಗೆವ್ವ ನೀ ಕೇಳ್.. !
*  ಹುಲಿ ಆಟ ಕೋಲ ಆಟ  ಜಾತ್ರ್ಯಾಗ
   ನರಿಆಟ  ಕುರಿಆಟ  ಇಲೆಕ್ಷನ್ನ್ಯಾಗ
    ಜ0ತಿನಾಟ ಗ0ಟಿನಾಟ್
    ಮನಿಪಾಲವಾಟ್ನ್ಯಾಗ
    ಏ ತ0ಗೆವ್ವ  ನೀ ಕೇಳ್...!
*  ಮುತ್ತಿನಾಟ ಮತ್ಯಿನಾಟ್
   ನಿಶೆದಾಗ ಆಡ ಆಟಪಾಟ್ಯ್
    ಏ  ತ0ಗೆವ್ವ ನೀ ಕೇಳ್..!



 " ಸ0ಗಾನ ಮಾತು "
  
  *  "  ನಮ್ಮ ನಡಾವಳಿಕೆಗಳು
         ಗುಣಧರ್ಮಗಳು  ,  ನಮ್ಮ
         ಹಣೇಬರಹಕ್ಕೆ ಪರೋಕ್ಷವಾಗಿ
         ಕಾರಣರಾದರೂ , ಅವುಗಳನ್ನು
         ಕಾಲನಿರ್ಣಯದ ಮೇಲೆ ಹಾಕಿ
         ಪಲಾಯನ ಮಾಡುತ್ತೇವೆ  ".
  *  "  ಬಿ.ಪಿ.,ಶುಗರ್ ಹೆಚ್ಚಾಗಲು ಮಾನಸಿಕ
         ಒತ್ತಡಗಳೇ ಕಾರಣವಾದರೂ , 
        ಖಾರ -ಉಪ್ಪು ತಿ0ದ ಜೀವ  ಒತ್ತಡ   
        ಮುಕ್ತನಗಲು ಸರಳ ಒಪ್ಪುವದಿಲ್ಲ.  "
  *  "  ಬಳಲಿ -ಬೆ0ಡಾಗಿ ಇನ್ನೇನು
          ಇವತ್ತು -ನಾಳೆ  ಮಣ್ಣಾಗುತ್ತೇನೆ0ದರೂ
         ಮಣ್ಣು ,ಬ0ಗಾರ ,ಈರ್ಷೆ ,ಬಿಡುವದಿಲ್ಲ.
         ಗಚ್ಛಿ ಹಾಕಿ ಬ0ದೋಬಸ್ತ ಮಾಡ್ತಾನೆ.
 "ಸ0ಕಷ್ಟ  "

ಸ0ಕಷ್ಟ ಇವು ತಾತ್ಕಾಲಿಕ.ಕೆಲವು
ಸಮಯ ಇದ್ದು ಪರಿಹಾರವಾಗಬಲ್ಲವು.ಸ0ಕಷ್ಟ
ಗಳು ಸ್ವಯ0ಕೃತ ಆಗಿರಬಹುದು / ನಮ್ಮ ತಪ್ಪು
ನಿರ್ಧಾರದಿ0ದ /ತಪ್ಪು ಕಲ್ಪನೆಯಿ0ದ ಘಟಿ
ಸಿರಬಹುದು.ಇವೆಲ್ಲವುಗಳಿಗೆ ಉತ್ತರ ಇದ್ದೇ 
ಇರುತ್ತದೆ.

ಸಮಸ್ಯೆಗಳ ಸ್ವರೂಪವೇ ಬೇರೆ. ಇವು
ವ್ಯಕ್ತಿಯಿ0ದ ವ್ಯಕ್ತಿಗೆ ,ಗು0ಪು -ಸಮಾಜ 
-ರಾಷ್ಟ್ರ ಮಧ್ಯೆ ವಿಷಯಾಧರಿತ ಮೇಲೆ 
ಇವುಗಳ ಗಾಡತೆ ,ತೀವ್ರತೆ ,ಪಡೆದುಕೊ0ಡಿರುತ್ತದೆ.
 ಇವುಗಳ ಪರಿಣಾಮ ಭೌತಿಕವಾಗಿಯಾಗಲಿ ,
ಅಭೌತಿಕವಾಗಿಯಾಗಲಿ ಅಗಣಿತ.
  ನ್ಯೆಸರ್ಗಿಕವಾಗಿ ಉತ್ಪತ್ತಿಯಾದ ಸಮಸ್ಯೆಗಳಿಗೆ
ಪರಿಹಾರ ಪಡೆಯಬಹುದು. ಕೃತ್ರಮವಾಗಿ 
ಸೃಷ್ಟಿಯಾದ ಸಮಸ್ಯೆಗಳಿಗೆ ಪರಿಹಾರ ಅಸಾದ್ಯ.
ಇವುಗಳ ಮೂಲ ಬೇರು ಎಲ್ಲಿರುತ್ತೋ ಗೊತ್ತಿಲ್ಲ.
ಸ0ಕಷ್ಟಗಳೇ ಆಗಲಿ ,ಸಮಸ್ಯೆಗಳೇ ಆಗಲಿ,
"ತಾಳ್ಮೆ" ಇಲ್ಲಿ ಬಹು ಪ್ರಮುಖ ಪಾತ್ರ ವಹಿ
ಸುತ್ತದೆ."  ತಾಳ್ಮೆ  " ಮೌನದ ಸೂಚಕವು 
ಹೌದು.ಎಷ್ಟೋ ಸ0ಕಷ್ಟಗಳು ಈ ತಾಳ್ಮೆ/
ಮೌನದಿ0ದ ತನ್ನಿ0ದ ತಾನೇ ಪರಿಹಾರ
ವಾಗಿವೆ. ಮೌನದಿ0ದ ಸಾಕಷ್ಟು ಸಮಯ
ನಕಾರಾತ್ಮಕಗಳು ಉತ್ಪತ್ತಿಯಾಗಿ ಸಮಸ್ಯೆಗಳಿಗೆ
ಪರೋಕ್ಷವಾಗಿ ಪರಿಹಾರ ಕಲ್ಪಗಳಾಗುವ
ಸಾಧ್ಯತೆಗಳಿವೆ.

     ಮನುಷ್ಯ ಸ್ವಭಾವ ಜನ್ಯ ಸಾಮಾಜಿಕ
ಸ0ಕಷ್ಟಗಳಿಗೆ "ತಾಳ್ಮೆ "ಯೇ ಮದ್ದು.
ಇದರ ತಾತ್ಪರ್ಯ     ---   ---  --
" ತಾಳಿದವನು -ಬಾಳಿಯಾನು ".

Thursday, March 3, 2016


   "ಅವಮಾನ  "

ಅವಮಾನಗೊಳಿಸುವ ನಿ0ದಕರಿರು
ವಾಗಲೇ  ನಮ್ಮ ನಡೆ -ನುಡಿ ನಡಾವಳಿಕೆಗಳ
ಅ0ಕು -ಡೊ0ಕು ಆಗಾಗ್ಗೆ ತಿದ್ದಿಕೊಳ್ಳಲು ಸಾದ್ಯ
ವಾಗುತ್ತದೆ.

ವ್ಯವಹಾರಿಕ ಅವಮಾನಗಳು ,ರಾಜಕೀಯ 
ಅವಮಾನಗಳನ್ನು ಮನುಷ್ಯ ಸಹಿಸಬಲ್ಲ.
ಶೀಲ-ಚಾರಿತ್ರ್ಯ ,ಸಾಮಾಜಿಕ  ,ಕೌಟ0ಬಿಕ 
ಅವಮಾನಗಳನ್ನು ಮನುಷ್ಯ ಸಹಿಸಲಾರ.
ಈ ಅವಮಾನಗಳು ವ್ಯಕ್ತಿಯಿ0ದ ವ್ಯಕ್ತಿಗೆ
ಭಿನ್ನವಾಗಿ  ಸಮಾಜಕ್ಕೂ  ಇದರ ಪರಿಣಾಮ 
ಅನುಭವಿಸುವ ಪ್ರಸ0ಗಗಳು ಬರುತ್ತವೆ.
ಆಗಬಾರದ ಅನಾಹುತ ,ನೋಡಬಾರದ 
ದುರ0ತಗಳು ಸ0ಭವಿಸಲು ಕಾರಣವಾಗುತ್ತವೆ.

    ಸ0ಶಯಭರಿತ ನಡಾವಳಿಕೆಗಳು ಇವುಗಳಿಗೆ 
ಮೂಲ ಕಾರಣ. ಸ0ಶಯ ಭರಿತ ನಡಾವಳಿಕೆ
ಗಳು ಪ್ರಕಟಿಸದ0ತೆ ಪೂರ್ವಾ-ಪರ ವಿಚಾರ
ಮಾಡಿ ಅನುಮಾನಗಳು - ಅವಮಾನವಾಗ
ದ0ತೆ , ಅವಮಾನಗಳು -ಅವಘಡವಾಗದ0ತೆ
ತಡೆಗಟ್ಟಲು -ನಾವೆಲ್ಲರೂ ಸಾಮಾಜಿಕವಾಗಿ
ಭದ್ಧರಾಗಬೇಕು.

" ಸು0ದರವಾದ ಸಾಮಾಜಿಕ ನಡಾವಳಿಕೆಗಳು
ಸು0ದರ ನಾಡನ್ನು ಕಟ್ಟುತ್ತವೆ ".

  "  ಸ0ಗಾನ ಮಾತು "

  
  *  "  ನಮ್ಮ  ಬಾಳ  ದಾರಿ  ದೀಪ
         ವ್ಯೆಕು0ಠಕೋ  ? ಸ0ಸಾರಕೋ   ?
         ಬಹು  ಮ0ದಿಯ  ಆಯ್ಕೆ  ಸ0ಸಾರ.
         ಸ0ಸಾರದಲ್ಲಿ   ಬಾಳಿ  ಬದುಕಿ  
         ಹೌದೆನಿಸಿಕೊ0ಡು ಪಯಣ 
         ಮಾಡುವುದೇ ಸ0ಸಾರದೊಳಗಿನ
         ನಾಕ ಕಾಣೋ  !. "
  *  "  ಹರಿವಾ ನೀರು  ತಡೆವೊಡ್ಡಿದರೆ
         ಗಬ್ಬು ನಾರುತ್ತೆ. ಹಾಗೆಯೇ ಹೊಸ
         ಹೊಸ ವಿಚಾರಗಳು ಬರ್ತಾವೆ   ;
        ಹೋಗ್ತಾವೆ.  "ಧಮ್ಮಯಿದ್ದ  ವಿಚಾರಗಳು
         ನೆಲಕಚ್ಛಿ ನಿಲ್ತಾವ  .!  "
  *  "  ಸಮಾಜವಾದದ ಹೆಸರಿನಲ್ಲಿ
         ಸಮಾಜ ಹಾಳುಗೆಡುವ
         ತಿಮಿ0ಗಿಲುಗಳಿದ್ದಾರೆ  .!  "

Wednesday, March 2, 2016



ಹಿ0ಸೆ

ಹಿ0ಸೆ  ಯಲ್ಲಿ. ನಾನಾ ಬಗೆಯ ಹಿ0ಸೆಗಳಿವೆ.
ಸಾಮಾಜಿಕ ಹಿ0ಸೆ.,ರಾಜಕೀಯ ಹಿ0ಸೆ. 
ಆರ್ಥಿಕ ಸಾಲ -ಸೋಲಗಳ ಹಿ0ಸೆ , ನೆರೆಹೊರೆಯವರ
ಹಿ0ಸೆ. ಜಗತ್ತಿನಲ್ಲಿ  ಯಾವ ಕ್ರಿಯೆಗೆ ಪ್ರತಿಭ
ಟನೆ ಸ್ವೀಕರಿಸುತ್ತೇವೆಯೋ ,ಅವೆಲ್ಲವೂಗಳಿಗೆ 
ಒ0ದಿಲ್ಲೊ0ದು ವಿರೋದದ /ಪರವಾದ 
ರೂಪದಲ್ಲಿ  ಘಟನೆಗಳು ಜರುಗುತ್ತಲೇ ಇರುತ್ತವೆ.
ಈ ಘಟನೆಗಳು ಹಿ0ಸೆಯ/ಅಹಿ0ಸೆಯ ,ವ್ಯಕ್ತಿಯ
 ವ್ಯಯಕ್ತಿಕ /ಸಾಮೂಹಿಕರೂಪದಲ್ಲಿ ಇರಬಹುದು.
ಇವು ಗಳ ಸ್ವರೂಪಗಳು ಆಘಟನೆಗಳ ಅಧಾರದ ಮೇಲೆ ಅವಲ0ಬಿಸಿರುತ್ತವೆ.
ಇ0ತಹ ಘಟನೆಗಳಲ್ಲಿ ಮನುಷ್ಯ  ಸ್ವಯ0
ಕೃತವಾಗಿ ಅನೇಕ ತಪ್ಪುಗಳನ್ನು ಮಾಡಿರುತ್ತಾನೆ.
ಕೆಲವೊಮ್ಮೆ ಮಾಡಿದ್ದು  ಗಮನಕ್ಕೆ ಬರುತ್ತವೆ.
ಕೆಲವೊಮ್ಮೆ ಇಲ್ಲ. ಆದರೆ ಇವೆಲ್ಲವೂ ತಪ್ಪು
 ಮಾಡಿದವನ ಅ0ತರಾತ್ಮಕ್ಕೆ  ಇದು ನಾನು 
ಮಾಡಿದ ತಪ್ಪು ಅ0ತಾ ಅನ್ನಿಸಿ  ಪಶ್ಚಾತ್ತಪದಿ0ದ 
ಪ್ರಾಯಶ್ಚಿತಮಾಡುವ ಹ0ಬಲವುಳ್ಳವನಾಗಿದ್ದರೆ
 ಅ0ತಹ ತಪ್ಪುಗಳನ್ನು ಭೂ ತಾಯಿ ಕ್ಷಮಿಸುತ್ತಾಳೆ.
ಅದರಿ0ದ ಆತನಲ್ಲಿ ಪರಿವರ್ತನೆಯ  ಸನ್ಮಾರ್ಗ ಮೂಡಿ ಬರಬೇಕು.
ಸಮಾಜಕ್ಕೆ ಅನುಕೂಲಕರವಾಗಿ ಆತನ ತಪ್ಪುಗಳು 
 ನಗಣ್ಯ ವಾಗುವ ಹಾಗೆ ಆತನ ನಡಾವಳಿಕೆಯು
  ಬದಲಾಗಬೇಕು. ಇತಿಹಾಸದಲ್ಲಿ ತಪ್ಪು ಕ್ಷಮೆಗಿ0ತ 
ತಪ್ಪಿನಿ0ದ ಬದಲಾದ ಸಾಮಾಜಿಕ  ವ್ಯವಹಾರಗಳು  
ಜನರ  ಮೆಚ್ಚುಗೆ ಪಾತ್ರವಾಗುವ0ತೆ ನೋಡಿಕೊ0ಡರೆ.
ಪ್ರಾಯಶ್ಚಿತ ಸಾರ್ಥಕವಾಗುತ್ತದೆ.ತಪ್ಪಿನಿ0ದಾದ ಹಿ0ಸೆಯು  
ಪ್ರೀತಿಪಾತ್ರವಾಗುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರ 
ಸಾಧ್ಯ. ನಮ್ಮದು ಆಧ್ಯಾತ್ಮಿಕ ದೇಶ. ಅಸಾಧ್ಯದ ಮಾತೇ ಇಲ್ಲ.

  "  ಸ0ಗಾನ ಮಾತು "

  *  "ಜೀವನ  ಸ0ತೋಷಕ್ಕೆ ಕಾರಣವಾಗುವ
       ಸ0ಗತಿಗಳು  ,  ಅಸ0ತೋಷಕ್ಕೂ
       ಕಾರಣವಾಗುತ್ತವೆ  ". !
  *  "  ಬಡತನ  ಮತ್ತು ಪ್ರೀತಿ ಒ0ದೇ
         ರಸ್ತೆಯಲ್ಲಿ ಸಾಗುವ  ಬ0ಡಿಯ
         ಗಾಲಿಗಳು  ". !
  *  "  ಹೊಟ್ಟೆಕಿಚ್ಚು ,ಮತ್ಸರ  ,ದ್ವೇಷ
         ಕಿಲುಬು ರೋಗಯಿದ್ದಾ0ಗ ".  !

Tuesday, March 1, 2016


    "ವರದಕ್ಷಿಣೆ "

       ಹೆಣ್ಣು ಹೆತ್ತವರು ವರದಕ್ಷಿಣೆ ಬಾಬ್ತು
ಹೇಗಾದರೂ ಮಾಡಿ ತೆಗೆದಿಡಲೇಬೇಕು.
ಅದು ತ0ದೆ -ತಾಯಿಗೆ ಇಷ್ಟವಿಲ್ಲದಿದ್ದರೂ 
ಮಗಳ ಮು0ದಿನ ಭವಿಷ್ಯಕ್ಕಾಗಿ  ಎಲ್ಲಾ ತಾಪತ್ರಯ 
ನು0ಗಿ ಸುಮ್ಮನಿರಬೇಕಾದ ಪರಿಸ್ಥಿತಿ ಇರುತ್ತದೆ.
ಶ್ರೀಮ0ತವರ್ಗದವರಲ್ಲಿ ವರದಕ್ಷಿಣೆ ಏನೊ0ದು
 ಸಮಸ್ಯೆಯಾಗೊಲ್ಲ.ಮಧ್ಯಮವರ್ಗದವರಿಗೂ ಬಹುಷ ಸಮಸ್ಯೆ ಇರೊಲ್ಲ.ಇದನ್ನ ಮೊದಲೇ 
ಊಹಿಸಿರುತ್ತಾರೆ.

ಇದು ಪಿಡುಗಾಗುವದು ಅತೀ ಬಡವರು ಅಲ್ಲ ,
ಮಧ್ಯಮವರ್ಗದವರು ಅಲ್ಲ .ಇ0ತಹ
 ಶ್ರೇಣಿಯವರಲ್ಲಿ  ಇದು ಆತ0ಕಕಾರಿ.
ಇ0ತಹ ಕೌಟ0ಬಿಕ ಹಿನ್ನಲೆಯಲ್ಲಿ ಬೆಳದ 
ಹುಡುಗಿಗೆ ತನ್ನ ಮನೆಯ ಅರ್ಥಿಕ ಚೌಕಟ್ಟು
ಅರಿತು ಒಲ್ಲದ ಮನಸ್ಸಿನಿ0ದ ಮದುವೆಗೆ
ಒಪ್ಪಿರುತ್ತಾಳೆ.ಇಲ್ಲವೇ ತಾವೇ ತಮ್ಮ
 ಮನೆಯವರಿಗೆ ಹೊರೆಯಾಗಬಾರದೆ0ದು
ತಾವೇ ತಮ್ಮ ಅನುಕೂಲದ0ತೆ  ವರನನ್ನು 
ಆರಿಸಿಕೊ0ಡಿರುತ್ತಾರೆ. ಅದರೆ ಇ0ತವು
ಕುಟು0ಬ ಹಿರಿಯರ ಒಪ್ಪಿಗೆಯಿಲ್ಲದೇ ಸೋತು 
ಹೊಗಿ ಎಡವಟ್ಟಿಗ್ ಅವಕಾಶ ಮಾಡ್ಕೊಡುತ್ತವೆ.
ಇ0ತಹ ಕುಟು0ಬಗಳಲ್ಲಿ ವಧುವಿನ ಒಪ್ಪಿಗೆ 
ಪಡೆದು ಮದುವೆ ಮಾಡಿದರೆ ಒಳ್ಳೆಯದು.
ಇಲ್ಲಿ ಕನ್ಯಾಮಣಿ ತಮ್ಮ ಕುಟು0ಬದವರಿಗೆ 
ಹೊರೆಯಾಗಬಾರದು ಅನ್ನುವ ಚಿ0ತನೆ ಆಕೆಯದು ಆಗಿರುತ್ತದೆ 
ವರದಕ್ಷಿಣೆ ಇದೊ0ದು  ವಿಶ್ಲೇಷಣಗೆ ಸಿಗದ ವಿಷಯ
.ಕೆಣಕಿದಷ್ಟು  ಹುಳುಕುಗಳು ಬಹಳ.
ಏನೇ ಆಗಲಿ ಮು0ದುವರೆದವರೆ0ದು ಹೇಳುವ 
ನಾವು ,ನಿಜವಾಗಿ ಹಿ0ದುಳಿದವರು .
ಯಾಕೆ0ದರೆ ಹಿ0ದಿನಕಾಲದಲ್ಲಿ 
ವರದಕ್ಷಿಣೆ ಇರಲಿಲ್ಲ. ವಧು ದಕ್ಷಿಣೆ ಇತ್ತು.

ಕಾಲ ಉಲ್ಟಾ. ಜನ ಉಲ್ಟಾ.

ವಿವಾಹ  ಒಪ್ಪಿಗೆ ಮೇಲೆ ನಡೆಯಬೇಕು.
ಗ0ಡು ಹೆಣ್ಣು ನಿರ್ಧರಿಸಿ ತಾವು  ಪಣತೊಡಬೇಕು.
ನಾವು ಈ ಪವಿತ್ರ ಬ0ಧನದಲ್ಲಿ  ವರದಕ್ಷಿಣೆ ವಿರೋಧಿಸುತ್ತೇವೆ ಎ0ದು. ಹಿರಿಯರು 
ಇದಕ್ಕೆ ಒಪ್ಪಿಗೆ ಕೊಡಬೇಕು.
 "  ಸ0ಗಾನ ಮಾತು  "

  *  "  ಸ್ಥಳಗಳ  ಮಹತ್ವದಿ0ದ 
        "ನೀರು  " ಪವಿತ್ರ ತೀರ್ಥವಾಗುತ್ತದೆ. "!
   *  "  ಆನೆ ಜೊತೆಗಿದ್ದರೂ
         ಕತ್ತೆ ಸಹವಾಸದಿ0ದ
        ಲತ್ತಿ -ಪೆಟ್ಟು ತಪ್ಪಿದ್ದಲ್ಲ  ".!
  *  "  ಕ್ಯೆ ತು0ಬಾ ದುಡಿದರೂ
        ಮುದ್ದಿನ ಹೆ0ಡ್ತಿ ಇರದಿದ್ದರೆ
        ಸದ್ದಿಲ್ಲದೇ ಜಾಗ ಖಾಲಿ ಮಾಡ್ತಾರ  "!