"ಶಿವ ಸ್ವರೂಪ "
ಸೃಷ್ಟಿ ,ಸ್ಥಿತಿ ,ಲಯ ಇವೆಲ್ಲವೂ ಪರಬ್ರಹ್ಮ
ಸ್ವರೂಪಗಳು. ಇವುಗಳಿಗೆ ಹುಟ್ಟಿಲ್ಲ :ಸಾವಿಲ್ಲ.
ದೇವ ಸ್ವರೂಪಿಗಳು. ವಿವಿಧ ಗುಣ ವ್ಯೆಶಿಷ್ಟಾದಿ
ಗಳಿ0ದ ಗುಣಗಳ ಸ್ವರೂಪಗಳು ತಾತ್ಕಾಲಿಕ
ವಾಗಿ ಬದಲಾಗಬಹುದು.ಅದೇ ಶಾಶ್ವತವಲ್ಲ.
ಭೌತಿಕ ,ರಾಸಾಯನಿಕ ,ಜೀವ -ನಿರ್ಜೀವ
ಎಲ್ಲಾ ಗುಣ ವ್ಯೆವಿಧ್ಯಗಳಿಗೂ ಇದು ಅನ್ವಯಿಸುತ್ತದೆ.
ಬಟ್ಟೆಯಿ0ದ ಶರ್ಟ್ ಹೊಲೆಯಬಹುದು ,ಜ0
ಪರ ಹೊಲೆಯಬಹುದು.ರೂಪ ಬೇರೆ ಬೇರೆ.
ಬಳಕೆಯಾದ ವಸ್ತು ಒ0ದೇ. ಯಾವ ರೂಪದಲ್ಲಿ
ವಸ್ತು ಭೌತಿಕವಾಗಿ ಸೇರಿಕೊಳ್ಳುತ್ತೋ , ಆರೂಪದಲ್ಲಿ
ಕಾಣುತ್ತೇವೆ. ಇದೇ ರೀತಿ ಜಗತ್ತಿನ ಚರಾ-ಚರ
ವಸ್ತುಗಳೆಲ್ಲವೂ ಶಿವಮಯ. ಎಲ್ಲದಕ್ಕು
ರೂಪ -ಬೇಧ ಇದ್ದೇ ಇರುತ್ತೆ ಎಲ್ಲದಕ್ಕೂ ಲಯ
ಗುಣವೂ ಇರುತ್ತೆ. ಜೀವ ವಸ್ತುಗಳಲ್ಲಿ ನಾವು
ಸ್ವಭಾವ ಜನ್ಯ ಪರಿಣಾಮಗಳನ್ನು ಕಾಣುತ್ತೇವೆ.
ನಿರ್ಜೀವ ವಸ್ತುಗಳಲ್ಲಿ ಈ ಗುಣ ಇರುವದಿಲ್ಲ
ಆದರೆ "ಲಯ "ಎರಡಕ್ಕೂ ಒ0ದೇ. ಲಯ
ಹೊ0ದುವ ಎಲ್ಲಾ ವಸ್ತುಗಳು ಹುಟ್ಟುವಿನ
ಸ್ವರೂಪ ಪಡೆಯಲೇಬೇಕು. ಜಗತ್ತಿನ
ನಿಯಮವೇ ಹಾಗಿದೆ. ಕತ್ತಲು -ಬೆಳಕು ಇದ್ದ
ಹಾಗೆ. ಅದೇ ರೀತಿ ಮನುಷ್ಯ ಜೀವನ
ಹುಟ್ಟು -ಸಾವು. ಹುಟ್ಟು ಸಾವಿನ ನಡುವೆ
ಬದುಕನ್ನು ಕಾಣುತ್ತಾ ಕೊನೆಗೆ ಲಯದಲ್ಲಿ
ಲೀನವಾಗುತ್ತದೆ.
ಶಿವ ಸ್ವರೂಪವೇ --ಅನನ್ಯ
ಶಿವ ಸ್ವರೂಪವೇ -ಶಾಶ್ವತ.
.
No comments:
Post a Comment