"ಅವಮಾನ "
ಅವಮಾನಗೊಳಿಸುವ ನಿ0ದಕರಿರು
ವಾಗಲೇ ನಮ್ಮ ನಡೆ -ನುಡಿ ನಡಾವಳಿಕೆಗಳ
ಅ0ಕು -ಡೊ0ಕು ಆಗಾಗ್ಗೆ ತಿದ್ದಿಕೊಳ್ಳಲು ಸಾದ್ಯ
ವಾಗುತ್ತದೆ.
ವ್ಯವಹಾರಿಕ ಅವಮಾನಗಳು ,ರಾಜಕೀಯ
ಅವಮಾನಗಳನ್ನು ಮನುಷ್ಯ ಸಹಿಸಬಲ್ಲ.
ಶೀಲ-ಚಾರಿತ್ರ್ಯ ,ಸಾಮಾಜಿಕ ,ಕೌಟ0ಬಿಕ
ಅವಮಾನಗಳನ್ನು ಮನುಷ್ಯ ಸಹಿಸಲಾರ.
ಈ ಅವಮಾನಗಳು ವ್ಯಕ್ತಿಯಿ0ದ ವ್ಯಕ್ತಿಗೆ
ಭಿನ್ನವಾಗಿ ಸಮಾಜಕ್ಕೂ ಇದರ ಪರಿಣಾಮ
ಅನುಭವಿಸುವ ಪ್ರಸ0ಗಗಳು ಬರುತ್ತವೆ.
ಆಗಬಾರದ ಅನಾಹುತ ,ನೋಡಬಾರದ
ದುರ0ತಗಳು ಸ0ಭವಿಸಲು ಕಾರಣವಾಗುತ್ತವೆ.
ಸ0ಶಯಭರಿತ ನಡಾವಳಿಕೆಗಳು ಇವುಗಳಿಗೆ
ಮೂಲ ಕಾರಣ. ಸ0ಶಯ ಭರಿತ ನಡಾವಳಿಕೆ
ಗಳು ಪ್ರಕಟಿಸದ0ತೆ ಪೂರ್ವಾ-ಪರ ವಿಚಾರ
ಮಾಡಿ ಅನುಮಾನಗಳು - ಅವಮಾನವಾಗ
ದ0ತೆ , ಅವಮಾನಗಳು -ಅವಘಡವಾಗದ0ತೆ
ತಡೆಗಟ್ಟಲು -ನಾವೆಲ್ಲರೂ ಸಾಮಾಜಿಕವಾಗಿ
ಭದ್ಧರಾಗಬೇಕು.
" ಸು0ದರವಾದ ಸಾಮಾಜಿಕ ನಡಾವಳಿಕೆಗಳು
ಸು0ದರ ನಾಡನ್ನು ಕಟ್ಟುತ್ತವೆ ".
No comments:
Post a Comment