Thursday, March 22, 2018

"    ನಿರ್ಮೋಹ   "
                ----   ----   ------
   ಆಧ್ಯಾತ್ಮಿಕ ಕ್ಷೇತ್ರದಲ್ಲಿ  "ನಿರ್ಮೋಹ  " ಈ
ಪದದ ಬಳಕೆ ಸಾಕಷ್ಟು ಪ್ರಮಾಣದಲ್ಲಿ ಮಾಡು
ತ್ತೇವೆ.  ಈ  ಪದ  ಬಳಸದೇ ಆಧ್ಯಾತ್ಮಿಕ ಕ್ಷೇತ್ರದ
ಚಿ0ತನೆಗಳಿಗೆ ಮೌಲ್ಯವಿಲ್ಲ.ಬೆಲೆಇಲ್ಲ.
ಪುರಾಣಗಳಾಗಲಿ ,ಕೀರ್ತನೆಗಳಾಗಲಿ ,ಪ್ರವಚ
ನಗಳಾಗಲಿ -- ಎಲ್ಲ  ರ0ಗಗಳ ಮೀಮಾ0ಸೆ
ಕೊನೆಗೆ ' ನಿರ್ಮೋಹ ' ಗಳಲ್ಲಿಯೇ ಅ0ತ್ಯವಾ
ಗುತ್ತದೆ. ಹೇಗೆ ಎಲ್ಲಾ ನದಿ ,ಸರೋವರಗಳು
ಕೊನೆಗೆ ಸಮುದ್ರವನ್ನು ಸೇರುತ್ತವೆಯೋ,
ಹಾಗೆಯೇ  ಎಲ್ಲಾ ಆಧ್ಯಾತ್ಮಿಕ ತತ್ವದ  ಮಜಲು
ಗಳು  ನಿರ್ಮೋಹದಲ್ಲಿ ಲೀನವಾಗುತ್ತವೆ.
   ಆದರೆ ಹೇಳಿದಷ್ಟು ಸುಲಭವಾಗಿ ಮೋಹವನ್ನು
ಬಿಡಬಹುದೇ..? ಇಲ್ಲ.ಸಾಧ್ಯವಿಲ್ಲ.ಸಾಧುವೂ
ಅಲ್ಲ.ಲೌಕಿಕದಲ್ಲಿ ಲೋಕವ್ಯವಹಾರದಲ್ಲಿ ಇದು
ಸಾಧ್ಯವಿಲ್ಲ.ಲೌಕಿಕ ಜೀವನ ಪ್ರಾರ0ಭವಾಗು
ವದು ರಾಗ -ಮೋಹಾದಿಗಳಿ0ದಲೇ.ರಾಗ
ಮೋಹಗಳಿ0ದಲೇ  'ಓ0' ಕಾರ ನಾದ  ಮೊಳ
ಗುವದು.ಸ್ವರ  -  ಸ0ಗೀತ ಹೊನ್ನುವದು.
ಬೇಕು - ಬೇಡಗಳ ಚಿತ್ಕಾರ,ಚೆಲ್ಲಾಟ ,ಚಿರಾಟ
ಎಲ್ಲವೂ ಅದರಿ0ದಲೇ ಪ್ರಾರ0ಭ.

     ಇಲ್ಲಿ ಗಮನಿಸುವ ಸ0ಗತಿಯೇನೆ0ದರೆ ,
ಈ ಮೋಹಾದಿಗಳ ರಾಗಗಳು ಒ0ದು ನಿರ್ಧಿಷ್ಟ
ಪರಧಿಯಲ್ಲಿ ಇದ್ದಾಗ ಮಾತ್ರ ತಮ್ಮ ಅನ0ತಾ
ನ0ತ  ಗುಣಗಳ ಸುಶ್ರಾವ್ಯ ಕೇಳಲು ಸಾಧ್ಯ.
ಈ ಪರಧಿ ದಾಟಿ ಎಲ್ಲೆ ಮೀರಿದಾಗ  ಪ್ರಪ0ಚದ
' ನಾಶಕ ' ಗುಣ ಆವರಿಸುವ  ಗೋಚರಿಸುವ
ಪರಿಚಯಿಸುವ  ಅನುಭವಿಸುವ  ಪರಿಸ್ಥಿತಿಗೆ
ಬ0ದು ತಲುಪಿದಾಗಲೇ  ' ನಿರ್ಮೋಹ ' ದ
ಬಗ್ಗೆ ಚಿ0ತನ -  ಮ0ಥನ ಪ್ರಾರ0ಭವಾಗುತ್ತದೆ.
    ಇದನ್ನೇ ಋಷಿ ಮುನಿಗಳು ವೇದಗಳು
ಎಲ್ಲಾ ಧರ್ಮೀಯ ತತ್ವಗಳು ಹೇಳುವದು ----
-----"   ಆ ದೇವನು ನಿರ್ಗುಣನೂ ಹೌದು.
ಸುಗುಣನೂ ಹೌದು.ನಿರಾಕಾರನೂ ಹೌದು.
ವಿಶ್ವರೂಪನೂ ಹೌದು. ". ಭಾರತೀಯ
ಆಧ್ಯಾತ್ಮಿಕ ತತ್ವಾದರ್ಶನದ ಪರಿಯಿದು.
ನೀವು ಮನನಮಾಡಿದಷ್ಟು  ಸೂರ್ಯಮ0ಡಲ
ದ0ತೆ ಪ್ರಕಾಶಿಸುತ್ತದೆ.

  "ಓ0 ಕೃಷ್ಣಾರ್ಪಣ ಮಸ್ತು "

No comments: