Tuesday, February 27, 2018

 "  ಸಂಗಾನ ಮಾತು  -394 "
    -----   -----   ------  ----
  *  ಅಧಿಕಾರಕ್ಕೆ ಜೋತು ಬಿದ್ದರೆ....?
     ಅಪಮೌಲ್ಯಗಳ ಸಮಾರಾಧನೆ ಕಾಣೋ...

  *  ಹೊಡೆತಕ್ಕ...   ..  ..
      ಕೊಚ್ಚಿಕೊಂಡು  ಹೋಗುವಾಗ
     ' ಕೋಲಾಸರೆ ನೀಡಿದ  ಕ್ಯೆ ಯನ್ನು '
       ನಾವೆಂದೂ ಮರೆಯಬಾರದು.

  *    ವೃತ್ತಿ ಧರ್ಮ ತನ್ನ ಪಾಡಿಗೆ ತಾನಿರುತ್ತದೆ.
        ಅದನ್ನು ಬಿಟ್ಟು..,...,
        ಪ್ರತಿಯೊಂದರಲ್ಲೂ ' ವೃತ್ತಿ  '
        ಭಾವನೆಯಿಂದ ನೋಡಿದರೆ
        ಗಗನ ಕುಸುಮ ಬಿತ್ತಿದಂತೆ..!!

"ಕಪ್ಪು ಹಣ ---ಕಪ್ಪು ಹಣ --  ಕಪ್ಪು ಹಣ  "
---  ----   ------   ------    ----  -----------
     ಯಾವುದು ಕಪ್ಪು ಹಣ...? ತೆರಿಗೆ ಕಟ್ಟಲಾ
ರದ ಹಣ,ತೆರಿಗೆ ವಂಚಿಸಿದ ಹಣ ಕಪ್ಪು ಹಣವೇ.?
ಹೌದು.ಇದು ಕಪ್ಪು ಹಣ.ಇದಕ್ಕಿರುವ ನಾನಾ
ಕಾರಣಗಳಿಂದ  ತೆರಿಗೆ ಕಟ್ಟುವವ ಸುಲಭೋಪಾ
ಯವಾಗಿ ತೆರಿಗೆ ವಂಚಿಸುವ ಹಾದಿ ಹುಡುಕು
ತ್ತಾನೆ. ಇದಿಷ್ಟು ಸಾಲದೆಂಬಂತೆ ಅಪಾರ
ಪ್ರಮಾಣದ ,ಲೆಕ್ಕಕ್ಕೆ ಸಿಗದಷ್ಟು ಹಣ ಇದ್ದರೆ,
ವಿದೇಶಿ ಬ್ಯಾಂಕಗಳಲ್ಲಿ ಠೇವಣಿ ಇಡುತ್ತಾನೆ.
ಇಲ್ಲವೇ ಬೇರೆ -ಬೇರೆ ನಾಮಧೇಯಗಳಿಂದ
' ಬೇನಾಮಿ ಆಸ್ತಿಯ ಒಡೆಯನಾಗುತ್ತಾನೆ.
    ಇರಲಿ.ಇಲ್ಲಿಯ ಮುಖ್ಯ ವಿಚಾರವೆಂದರೆ ,-
ತೆರಿಗೆದಾರನಿಗೆ ತನ್ನಲ್ಲಿರುವ ಸಂಪತ್ತು ತಾನೇ
ಘೋಷಿಸಿ- ತಾನೇ ತೆರಿಗೆ ಕಟ್ಟುವಂತಾದರೆ
ಹೇಗೆ..? ತೆರಿಗೆ ಸರಳೀಕರಣ ಮಾಡಿದರೆ
ಅಥವಾ ತೆರಿಗೆ ತಪ್ಪಿಸುವವರನ್ನು  ಪರೋಕ್ಷ
ವಾಗಿ ತೆರಿಗೆಯ ಮುಖ್ಯವಾಹಿನಿಗೆ ತಂದರೆ
"  ದೇಶಕ್ಕೂ ಪ್ರಯೋಜನ.ನಾಗರಿಕನಿಗೂ
ಪ್ರಯೋಜನ ".

  ನಾನು ಹೇಳುವದಿಷ್ಟೆ.ನಾವೆಲ್ಲಾ ನೂರಕ್ಕೆ
ನೂರರಷ್ಟು ಶ್ರೀ ರಾಮಚಂದ್ರರಲ್ಲ.ಸತ್ಯ ಹರಿ
ಶ್ಚಂದ್ರರಲ್ಲ.ನಮ್ಮಲ್ಲಿ ಒಂದಿಲ್ಲಾ ಒಂದು ರೀತಿ
ಯಲ್ಲಿ ಪರೋಕ್ಷವಾಗಿ -ಅಪರೋಕ್ಷವಾಗಿ
ವಂಚಿಸುತ್ತಾ ಇರುತ್ತೇವೆ. ವಂಚನೆಯೂ ಕಪ್ಪು
ಹಣ ತಾನೆ..? ವಂಚನೆಯೂ 'ಅಕ್ಕಿ ಕಾಳಿನಷ್ಟಿ
ದ್ದರೂ, ಬೆಟ್ಟದಷ್ಟಿದ್ದರೂ ವಂಚನೆ ವಂಚನೆಯೇ.
ಕಪ್ಪು -ಕಪ್ಪು ಅಲ್ಲವೇ..?

   ಇವೆಲ್ಲವುಗಳನ್ನು ಸರಳೀಕರಣಗೊಳಿಸಿದರೆ
ನಾವು ಬಚ್ಚಿಟ್ಟ ಹಣ ಸುರಕ್ಷಿತವಾಗಿ ನಮ್ಮ ದೇಶ
ದಲ್ಲಿಯೇ ಇರುತ್ತದೆ. ನಮ್ಮ ದೇಶದಲ್ಲಿಯೇ
ಚಲಾವಣೆಯಲ್ಲಿರುತ್ತದೆ. ಯಾವಾಗ ಸಂಪತ್ತು
ಚಲಾವಣೆಯಲ್ಲಿರುತ್ತೋ, ಆವಾಗ ಉದ್ಯೋಗದ
ಬಾಗಿಲುಗಳು ತೆರೆಯುತ್ತವೆ. ವಿದೇಶಿಗರಿಗೆ
ಭೂಮಿ,ನೀರು,ವಿದ್ಯುತ್ಯ,ಮಾನವ ಸಂಪನ್ಮೂಲ
ಕೊಟ್ಟು,ರತ್ನಗಂಬಳಿ ಹಾಸಿ ಸ್ವಾಗತಿಸುವದ
ಕ್ಕಿಂತ,ನಮ್ಮಲ್ಲಿರುವ ಅನೇಕ ಕೊಟ್ಯಾಧಿಪತಿ
ಗಳನ್ನು ಅವರಿಗೆ ಲಾಭದಾಯಕವಾಗುವಂತೆ,
ದೇಶದ ಸಂಪನ್ಮೂಲವು ದೇಶದಲ್ಲಿರುವಂತೆ
ಉಪಯೋಗಿಸುವಂತಹ ಯೋಜನೆ ಈಗಿನ
ಯುವ ಜನಾಂಗಕ್ಕೆ ಉಪಯೋಗವಾದೀತು.
ತಪ್ಪು ದಾರಿಯಲ್ಲಿದ್ದವರನ್ನು ಸರಿ ದಾರಿಗೆ ತಂದು
ಗೌರವಾನ್ವಿತರಾಗಿ ಕಾಣುವ ಹಂಬಲವೂ
ಇದರಲ್ಲಿದೆ. ಇದರಿಂದ ದೇಶಕ್ಕೆ ದೇಶದ ಹಣ
ದುಡಿಸಿದಂತಾಗುತ್ತದೆ.

ಅಫರಾಧಿಕರಣವನ್ನು ಸರಳಗೊಳಿಸುವ
ನಿಲುವು ಇಲ್ಲಿ ಇಲ್ಲ.ಅಫರಾಧಿಯಲ್ಲಿ ಇದ್ದಂತಹ
ಸಂಪನ್ಮೂಲವನ್ನು ದೇಶದಲ್ಲಿ ವಿನಯೋಗಿಸುವ
ಒಂದು ಚಿಂತನೆ.ಒಟ್ಟಿನಲ್ಲಿ ಬಚ್ಚಿಟ್ಟ ಹಣವು
ದುಡಿಯಬೇಕನ್ನುವುದಷ್ಟೇ ಇಲ್ಲಿಯ ಪ್ರಾದನ್ಯತೆ.

Monday, February 26, 2018


  "  ಹರಟೆ. "
              -----   ---------
  ಏನ್ರೀ ಅವ ಹೀಂಗ ಮಾಡಬಾರದಿತ್ತು.ಬಾಳ
ಛಲೋ ಇದ್ರು.ಯಾಕ ಹಿಂಗ್ಯಾಕ ಮಾಡಿದ್ರು
ಮೊನ್ನೇರ ಇಬ್ಬರೂ ಕೂಡಿ ಸಿನಿಮಾಕ್ಕ
ಹೋಗಿದ್ರು ನೋಡ್ರಿ.ಯಾಕ ಹಿಂಗ್ಯಾಕ ಆತು
ಒಂದು ಗೊತ್ತಾಗವಲ್ದು.
ಅದರಗ ಏನ್ಯೆತ್ರಿ ಹೊಸದು.ಕಲ್ಲಿನ ಕ್ವಾರಿ
ಮಾಡಿದ್ರು.ಅಲ್ಲಿ ಇಲ್ಲಿ ಸಾಲ ಮಾಡಿ,ಇದ್ದ ಆಸ್ತಿನ್ನ
ಒತ್ತಿ ಇಟ್ಟುಸಾಲ ತೆಗೆದು ಕಲ್ಲಿನ ಬಿಜಿನಸ್ಸ್
ಮಾಡಿದ್ರು.ಛಲೋ ನಡಿತಿತ್ತು.ಒಮ್ಮಿಂದೊಮ್ಮೆಲೆ
ಈ ಮನಷ್ಯಾ ಸತ್ತು ಹೋದ.ಸತ್ತು ಹೋಗಿದ್ದ
ವಿಷಯ ಗೊತ್ತಾಗಲಿಲ್ಲ.ಹೊರಂಗಿಂದ ಹೊರಗ
ಹೆಣ ಇಟ್ಟು ಸುಡಗಾಡಿಗೆ ಕಳಿಸಿದ್ರ. ಏನರ
ರೊಕ್ಕದಾಗ ಅಪರಾ ತಪರಾ ಆಗಿರಬೇಕ್ರಿ ಅಂತಾ
ಕಾಣಸ್ತ.ಆದರ ಏನ  ಐತೆ ಹೊರಗ ಬರವಲ್ದ್ರಿ.
   ಇಲ್ಲಬಿಡ್ರಿ.ಮೂರನೇದವರ ಉಸಾಬರಿ
ನಮಗ್ಯಾಕ.ನಮ್ಮದೇನ ಸುದ್ದ ಐತೇನ.ನಮ್ಮ
ಹಾಂಗ.ನಾವು ಸಣ್ಣೋರು.ಅವರು ದೊಡ್ಡೋರು.
ಹಿಂಗಾಗಿ ನಾಕ ಮಂದಿ ಬಾಯಗ ಅದರ.ಇರ್ಲಿ
ಬಿಡ್ರಿ.ಎಲ್ಲಾರ ಮನಿ ದ್ವಾಸಿ ತೂತ. ಮೊನ್ನೆ
ನೋಡ್ರಿ.ಸಾವಿರ ಸಾವಿರ ಕೋಟಿ ಗಂಟ
ಹಾಕಿದೋರ ನಮ್ದು ಮರ್ವಾದಿ  ತೆಗದ ಬಿಟ್ರಿ
ಅಂತಾರ.ಗಂಟ ಹಾಕಿದ್ದು ತಪ್ಪಲ್ಲ ಅನ್ನೋಹಾಂಗ
ಮಾತಾಡತರ್ರಿ.ನಮ್ಮದೇನ್ರಿ ನಮ್ಮಪ್ಪನಾಂಗ
ತಿಂದೋರು ಅದಾರ್ರಿ. ಅವರಿಗ್ಯಾಕ ಕೇಳಂಗಿಲ್ರಿ.
ಅಂತಾರ.ಅಂದರ ಇಂತಹ ಕಳ್ಳ ನನ್ನಮಕ್ಳ
ಬಾಳೇಸು ಮಂದಿ ಅದಾರ ಅಂದಾಂಗ ಆತು.
ಇರ್ಲಿ ಬಿಡ್ರಿ ಅವರಿಗೇನ ಎಷ್ಟು ಉಗಳಿದರೂ
ಕರ್ಚೀಫ ತೆಗದು ವರ್ಸಿಗೊಂತಾರ ಇಷ್ಟ.
ಅದಾತ. ಈಗ ನನ್ನ ತೆಲ್ಯಾಗ ಒಂದು ಹುಳ
ಹೊಕ್ಕಾಂಡ್ಯೆತೆ.ಇವ್ರ ತೆಲಿ ಬುರಡಿ ಸ್ಕ್ಯಾನ
ಮಾಡಿದ್ರ ಇವರ ಹೆಂಗದರೇನು ಗೊತ್ತಾಗು
ತ್ತೇನು ಅಂತಾ ನೀಲಕೇಣಿ ಮಾಸ್ತರಗ
ಕೇಳಬೇಕಂತ ಮಾಡೀನಿ.ಏನಪಾ ಈಗಿಂದು
ನೋಡಿದ್ರ ವಿಜ್ನಾನ ಅನ್ನಾಂಗಿಲ್ಲ-ಅಜ್ನಾನಿ
ಅಂದರ ಸರಿ ಆಗತ್ತ.ಈಗ ಬ್ಯಾಂಕನ್ಯಾಗ
ರೊಕ್ಕ ಇಡಬದ್ಲ ಮನ್ಯಾಗ ಮನ್ಯಾಗ ಗೋಡ್ಯಾಗ
ಪೆಟ್ಟಿಗೆ ಮಾಡ್ಸಿ ಇಡದ ಪಾಡ ಅನ್ಸತ್ತ ಮಾರಾಯ. ಆತ ಬಿಡಪಾ.ಎಲ್ಲಾ ಬದಲಾತು
ಡಾರ್ವಿನ್ನ ಸಿದ್ಧಾಂತ ಒಂದ ಬದಲಾಗಿಲ್ಲ.
ಅದ ಯಾವಾಗ ಮಾಡತರೇನು.?ಈಗ
ರೋಬೋಟ ಕಾಲ ಮುಂದೇನ ಐತಿ ಏನು?
ಭಗವಂತ ಬಲ್ಲ.ಶಿವ ನೀನ ಕಾಪಾಡಪಾ.
ನಮ್ಮಗಲ್ಲಪಾ ಬ್ಯಾಂಕನ್ಯಾಗ ದೊಡ್ಡ ದೊಡ್ದ
ಸಾಲ್ ತೊಗೊಂಡೋರಿಗೆ.ಮೊನ್ನೆ 62
ಇತ್ತು.ಈಗ 75 ಸಾವಿರ್ ಕೋಟಿ ಹೊತ್ತನಿಂತ
ಸಾಲ ಬರೋಬ್ಬರಿ ಒಬ್ಬೊಬ್ಬರಿಗೆ200 ರೂ.
ಸಾಲ ತೆಲಿಮ್ಯಾಲೆ.ಈ ಸಾಲಕ್ಕ ತೆಲ್ಯಾನ
ಕೂದಲ ಉದರತಾವ,ಸಕ್ರಿರೋಗ,ಎದಿಬ್ಯಾನಿ
ಎಲ್ಲ ಬರತಾವ.ಈದಕ್ಕ ಯಾರ ಜವಾಬ್ದಾರಿ.
ಯಾರ ಅಂದ್ರ ನಾವ.ನಮ್ಮದಕ ನಾವ ಜವಾ
ಬ್ದಾರಿ.ಯಾಕಂದರ ನಾವೆಲ್ಲ ಪುರಾಣ ಮಂದಿ.
ಸಾಕ ಬಿಡ್ಲೆ.ಕೇಳಾಕತ್ತೀನಂತ ಮೆಟ್ರೋ ಬಿಡ
ಬ್ಯಾಡ.ಆತ ಬಿಡು.ಸಂಗ್ಯಾನ ಅಂಗಡಿಗ
ಹೋಗಮ ಉದ್ರಿ ಚಹ ಕೊಡ್ತಾನ ಇಲ್ಲ ಕೇಳಮ.
ಮೊನ್ನೇರ ಎರಡು ಚಹಾದ್ದ್ ಕೊಟ್ಟಿಲ್ಲ.
ನಡಿ ನಡಿ ಕೇಳಮ ನಡಿ.ನಾವೇನು ದೇಶ ಬಿಟ್ಟ
ಓಡಿಹೋಗದಿಲ್ಲಲಾ...
 " ಭಂಢಗೆಟ್ಟವರಯ್ಯ -  ನ್ಭಂಡಗೆಟ್ಟವರು "
        ----   -----   -----   ----   ------
ನೆನೆಯುವದು : ಎನ್ನಯ ಮನವು
ನೆನೆಯುವದು : ಎನ್ನಯ ತನುವು
ಗೀತೆಯ ಶ್ಲೋಕಗಳು ನೆನಪಾಗದಯ್ಯ
ಬಸವಣ್ಣನ  ವಚನಗಳು ನೆನಪಾಗದಯ್ಯ
  ........ ಆದರೆ .....
ಎನ್ನಯ ತನವು ಮನವು
ಬೇಡ -ಬೇಡವೆಂದರೂ ನೆನೆಯುವದಯ್ಯ
ಹಗಲು ಧರೋಡೆಕೋರರನ್ನು ..!
ಸೂಟು ಬೂಟು ಹಾಕಿದ
ಹೇಯ ಮನಸಿನವರನ್ನು..!!
ಇವರು ಬೆಳೆಸಿದ ಸಾಮ್ರಾಜ್ಯ 
ಧರೋಡೆಯ ಸಂಪತ್ತಯ್ಯ..!
ಕೋಟಿ ಕೋಟಿ ಬೆಲೆಯ ವಜ್ರಗಳು
ವಂಚಿಸಿದ ಸಂಪತ್ತಯ್ಯ..!
ಮಾತೆತ್ಯಿದರೆ..ಜನ...!.!
    ಜನ..ಜನ..ಇವರನ್ನು..
ಓಡಿಹೋದವರಯ್ಯ..???
ತೆಲೆಮೆರೆಸಿಕೊಂಡವರಯ್ಯ..???
ಎನ್ನುವರಯ್ಯ ಎನ್ನುವರು..  ..  ..
ಭಂಡರಯ್ಯ..ಭಲೇ ಭಂಡರಯ್ಯ.!!!

Sunday, February 25, 2018


  ಒಳ್ಳೆಯ ವಿಚಾರ
-------------'---------
ಒಳ್ಳೆಯವರ ಸ0ಗ ಮಾಡು
ಒಳ್ಳೆಯ ವಿಚಾರ ಬಿತ್ತು
ಆ ಒಳ್ಳೆಯ ವಿಚಾರಗಳ
ಸೌ0ಧರ್ಯವನ್ನು  ಅಹ್ಲಾದಿಸು.
ಒಳ್ಳೆಯ ಸತ್ಪತ ಕಾಣುವಿ.
  "ಜೇಬು "
       -----------
ತು0ಬಿದ ಜೇಬು ಹರಾಮಿ ಹಣವಾಗಿದ್ದರೆ
ನೂರೆ0ಟು ಚಟ ಕಲಿಸುತ್ತದೆ.
ಜೀವನ ಸ0ತೋಷವಾಗಿರಿಸುವ ಬದಲು.
ನರಕವಾಗಿಸುತ್ತದೆ.

ತು0ಬಿದ ಜೇಬು ಪ್ರಾಮಾಣಿಕ ವಾಗಿದ್ದಷ್ಟು
ಜೀವನದಲ್ಲಿ ನೆಮ್ಮದಿ.ಮತ್ತು ಸುಖ ನಿದ್ರೆ
ಗ್ಯಾರ0ಟಿ.
  "ಜೇಬು "
       -----------
ತು0ಬಿದ ಜೇಬು ಹರಾಮಿ ಹಣವಾಗಿದ್ದರೆ
ನೂರೆ0ಟು ಚಟ ಕಲಿಸುತ್ತದೆ.
ಜೀವನ ಸ0ತೋಷವಾಗಿರಿಸುವ ಬದಲು.
ನರಕವಾಗಿಸುತ್ತದೆ.

ತು0ಬಿದ ಜೇಬು ಪ್ರಾಮಾಣಿಕ ವಾಗಿದ್ದಷ್ಟು
ಜೀವನದಲ್ಲಿ ನೆಮ್ಮದಿ.ಮತ್ತು ಸುಖ ನಿದ್ರೆ
ಗ್ಯಾರ0ಟಿ.

Saturday, February 24, 2018

  "  ಸಂಗಾನ   ಮಾತು. -387  "
    --   ----   -----    -----   ---------
  *   ..... ತ್ರಿಶಂಕು ...  ..
       ವಿಚಾರ  ಏನೆಂದರೆ..,
               ಹೀಗೊಂದು
       ಬ್ರಿಟಿಷರ. ಒಡೆದಾಳುವ ನೀತಿಯನ್ನು
       ಅನುಸರಿಸುತ್ತಿದ್ದೆವೇ.....??
 
  *   21ನೇ ಶತಮಾನದಲ್ಲಿದ್ದೇವೆ..
       ಸಂಖ್ಯೆ ..... ಉಲ್ಟಾ ಮಾಡಿ
        ನಾವು ಇರುವದು ' ಆ ಶತಮಾನದಲ್ಲಿ '
        ಭಾಸವಾಗುತ್ತಿದೆ.!ಅಭಾಸವಾಗುತ್ತಿದೆ.!!
 
  *     ಇದ್ದದ್ದು   --  ಇಲ್ಲದಾಗ
         ಇಲ್ಲದ್ದು  --     ಇದ್ದಾಗ
         ನಡುವಿನ ಅಂತರ
         "  ಈ  ಜೀವನ  ".
 "  ಗಾಂಧೀಜಿಯವರ ಚಿಂತನೆಗಳು  "
     ---   ----   ----   ----   ------------
   ರಕ್ಷಣಾ ವ್ಯವಸ್ಥೆ ,ಭದ್ರತಾ ವ್ಯವಸ್ಥೆ,ವ್ಯೆಜ್ನಾನಿಕ
ಸಂಶೋಧನೆಗಳಿಗಾಗಿ ಹಾಗು ಇತರೆ ಅಗತ್ಯ
ಕ್ಷೇತ್ರಗಳಲ್ಲಿ ಮಾತ್ರ ತಂತ್ರಜ್ನಾನ ಬಳಸುವದು
ಯೋಗ್ಯ.

ತಂತ್ರಜ್ನಾನ ಉದ್ಯೋಗ ಸೃಷ್ಟಿಸುವ ಬದಲು
ಉದ್ಯೋಗಾಕಾಂಕ್ಷಿಗಳ ಅನ್ನವನ್ನು ಕಬಳಿಸು
ತ್ತಿದೆ.10 ಮಂದಿ ಮಾನವ ಸಂಪನ್ಮೂಲ
ಬಳಿಸಿ ಮಾಡಬೇಕಾದ ಕೆಲಸ ಒಂದು ಯಂತ್ರ
ಮಾಡುತ್ತದೆ.ಉಳಿದ 09 ಜನ ಖಾಲಿ.ಮೇಲಾಗಿ
ತಂತ್ರಜ್ನಾನ ಜನಸ್ನೇಹಿ ಯಾಗುವ ಬದಲು
ಯಾರು ಅದನ್ನು ಬಳಸುತ್ತಾರೋ ಅವರನ್ನೇ
ನುಂಗುತ್ತದೆ.

    ಈ ವ್ಯವಸ್ಥೆ ನೋಡಿದಾಗ ಮಹಾತ್ಮ
ಗಾಂಧೀಜಿಯವರ ಗ್ರಾಮ ಸ್ವರಾಜ್ಯ,
ಸ್ವ ಉದ್ಯೋಗ ,ಸ್ವಯಂ ಉತ್ಪಾದನೆ,ಸ್ವಯಂ
ವಿತರಣೆ ಮಾಡುವ ವ್ಯವಸ್ಥೆಯು ಈಗಲೂ
ಪ್ರಸ್ತುತವೆನಿಸುತ್ತದೆ.

ಎಷ್ಟೋ ಜನರಿಗೆ ಉದ್ಯೋಗ ಲಭಿಸುತ್ತೆ.
ಕೃತಕ ಛಾಯೆ ಇರುವದಿಲ್ಲ.
ಗಾಂಧೋಜಿಯವರ ಉದ್ಯೋಗ ಚಿಂತನೆ
ಅಧ್ಯಯನ ಪ್ರಾರಂಭಿಸುವದಕ್ಕೆ ಪ್ರೋತ್ಸಾಹ
ಅಗತ್ಯ.

"  ಸಂಗಾನ   ಮಾತು. -387  "
    --   ----   -----    -----   ---------
  *   ..... ತ್ರಿಶಂಕು ...  ..
       ವಿಚಾರ  ಏನೆಂದರೆ..,
               ಹೀಗೊಂದು
       ಬ್ರಿಟಿಷರ. ಒಡೆದಾಳುವ ನೀತಿಯನ್ನು
       ಅನುಸರಿಸುತ್ತಿದ್ದೆವೇ.....??

  *   21ನೇ ಶತಮಾನದಲ್ಲಿದ್ದೇವೆ..
       ಸಂಖ್ಯೆ ..... ಉಲ್ಟಾ ಮಾಡಿ
        ನಾವು ಇರುವದು ' ಆ ಶತಮಾನದಲ್ಲಿ '
        ಭಾಸವಾಗುತ್ತಿದೆ.!ಅಭಾಸವಾಗುತ್ತಿದೆ.!!

  *     ಇದ್ದದ್ದು   --  ಇಲ್ಲದಾಗ
         ಇಲ್ಲದ್ದು  --     ಇದ್ದಾಗ
         ನಡುವಿನ ಅಂತರ
         "  ಈ  ಜೀವನ  ".

Friday, February 23, 2018


"  ಸಂಗಾನ   ಮಾತು   -391 "
   ---   ----   -----   -----   ---
  *  ಮಸ್ತ -ಮಸ್ತ  -ಮಜಾ ಜ್ವರ
      ಮಸ್ತಿಗೆ ಏರಿದರೆ
      ಸುಸ್ತು ಜೀವನ ಭವಿಷ್ಯ..!

  *   ಭಸ್ಮಾಸುರರ ಸಂತತಿ
       ಸೃಷ್ಟಿಸದಿರಲಿ
       ' ತಂತ್ರಜ್ನಾನ '.

  *     ಉತ್ಸವಗಳು
         ಉತ್ಸವಗಳು
         ನಿತ್ಯೋತ್ಸವಗಳಾದರೆ
          ಅದರ ಭಾರ
         ಹೊರಬೇಕಾದವನು ಶ್ರೀ ಸಾಮಾನ್ಯನೇ.!

Thursday, February 22, 2018

 "  ಸಂಗಾನ   ಮಾತು. -389  "
  --   ---  ---   ----   ------------
  *    ನಿನಗಿಷ್ಟ ಬಂದದ್ದು  ಮಾಡು
        ಅವನಿಗೆ ಇಷ್ಟವಿಲ್ಲದ್ದು  ಮಾಡಬೇಡ
        ಇವನಿಗೆ ಇಷ್ಟವಾದದ್ದು
        ತೋರ್ಪಡಿಸಬೇಡ.

  *    ಕೌಟಂಬಿಕ  "ಸಾಮರಸ್ಯ "ವು
        ಸಾಮಾಜಿಕ ಕಿರೀಟ.

  *     ನೋಡಿದ್ದು - ಆಡಿದ್ದು
         ಕೇಳಿದ್ದು -  ಮಾಡಿದ್ದು
         ಪುರಾವೆಗಳಿದ್ದರೆ  ನ್ಯಾಯ ಕಟ್ಟೆ

 "  ಆಧ್ಯತೆಯ ವಿಚಾರಗಳು  "
             --   ---   ---   ------------
     ದೇಶ ಭದ್ರತೆ -ಸುಸ್ತಿರವಿರಲು ನನಗೆ
ತೋಚಿದಂತೆ ಈ ಮಾದರಿಯ ಕಾರ್ಯಕ್ರಮ
ಗಳು ಒಳ್ಳೆಯದು.ಇದು ನನ್ನ ವ್ಯಯಕ್ತಿಕ
ಅಭಿಪ್ರಾಯ.

ಆಧ್ಯತೆಯ ಮೇರೆಗೆ ಸುಧಾರಣೆ ಆಗಬೇಕಾದ
ಕ್ಷೇತ್ರಗಳ ಬಗ್ಗೆ ಮಾತ್ರ ಒಂದು ನೋಟ.

*  ರಕ್ಷಣಾ ಕ್ಷೇತ್ರಗಳ ಆಧ್ಯತೆ,ಆಧುನಿಕ
ಶಸ್ತ್ರಾಸ್ತ್ರಗಳು ಉಪಕರಣಗಳು,ಸ್ಯೆನಿಕರಿಗೆ
ವಿಷೇಶ ಭತ್ಯೆ. ಮಡಿದ ಯೋಧರ ಕುಟುಂಬಕ್ಕೆ
ಆರ್ಥಿಕ ಸವಲತ್ತು,ನಿವೇಶನ ಸೌಲಭ್ಯ.

*  ಆರ್ಥಿಕ ಮೀಸಲಾತಿ ಜಾರಿಗೆ

*  ಸಂವಿಧಾನ ರಕ್ಷಣೆ ,ಅಗತ್ಯ ಬಿದ್ದಾಗ ತಿದ್ದುಪಡಿ

*  ಜಲವಿವಾದಗಳ ವಿಚಾರಣೆ ,ಕುಡಿಯುವ
ನೀರಿಗೆ,ಕೃಷಿಗೆ ಆಧ್ಯತೆ.

*ನಿರುದ್ಯೋಗಿಗಳಿಗೆ ಉದ್ಯೋಗ ,ಬಡ್ಡಿ ರಹಿತ
ಭಂಡವಾಳ  ಮಂಜೂರು,ಸ್ವಾವಲಂಬೆನೆಗೆ
ಉತ್ತೇಜನ.

*ಬ್ರಹತ್ ಪ್ರಮಾಣದ ಸಾಲ ಮಂಜೂರಾತಿ
ಪ್ರಾಧಿಕಾರಕ್ಕೆ -ಸಾಲ ವಸೂಲಾತಿಯ
ನಿರ್ವಹಣೆ.

*ನ್ಯೆತಿಕ ಶಿಕ್ಷಣ ,ಯೋಗ ಶಿಕ್ಷಣಕ್ಕೆ ಆಧ್ಯತೆ.
ವಯಸ್ಸಿನ ಅನುಗುಣವಾಗಿ ಎಷ್ಟು ಬೇಕೋ
  ಅಷ್ಟು ಲ್ಯೆಂಗಿಕ ಶಿಕ್ಷಣ ,ಜೊತೆಗೆ ಸ್ವಚ್ಛ
   ಮಾನಸಿಕ ಸ್ವಾಸ್ಥ ವಿಜ್ನಾನ ಶಿಕ್ಷಣ ಸೇರಿಸಲಿ.

*  ಕನ್ನಡರಿಗೆ ಉದ್ಯೋಗ ಕೊಡದ ,ಸರಕಾರದ
  ಸವಲತ್ತು ಪಡೆಯುವ ಬ್ರಹತ್ ಕಂಪನಿಗಳಿಗೆ
   ಸವಲತ್ತಿನ ಸಹಾಯ ನಿಲ್ಲಲಿ.

* ನದಿಗಳ ಉಗಮ ಎಲ್ಲಿ ಇರುತ್ತೋ  ,
   ಆ ಪ್ರದೇಶಕ್ಕೆ ಶೇ 75 ರಷ್ಟು ನೀರಿನ
   ಬಳಕೆಗೆ ಅವಕಾಶ.

* ಕೆಲವೇ ಕೆಲವು ವರ್ಷ ಸಾರ್ವಜನಿಕ ಹುದ್ದೆ
   ನಿರ್ವಹಿಸಿದವರಿಗೆ ಮಾಸಿಕ ಪಿಂಚಣಿ
   ನಿಲ್ಲಿಸಲಿ.

Wednesday, February 21, 2018

  "ಸಂಗಾನ ಮಾತು  -384 "
  --   ---   ----   ----   ---------------
  *  ಗಂಡ - ಹೆಂಡತಿ ಮಧ್ಯೆ
      ಸೆರಗಿಗೆ ಬೆಂಕಿ ಬಿದ್ದ್ಯೆತೆ ಅಂದ್ರ
      ' ಸಂಶಯ ' ದ ಹುತ್ತ ತೆಲೆ ಎತ್ತ್ಯೆತೆ
        ಅಂತಾ ಅರ್ಥ.
 
  *    ಮಾಡುವದು ಮುಖ್ಯವಲ್ಲ
        ಏನು ಮಾಡುತ್ತಿಯೋ ಅದನ್ನು
        ಕ್ರಮಬದ್ಧವಾಗಿ - ಶಿಸ್ತುಬದ್ಧವಾಗಿ
         ಮಾಡುವದು ಮುಖ್ಯ.
 
  *      ಹಿಂಜಿ - ಹಿಂಜಿ ನೂಲನ್ನು ತೆಗೆಯಬೇಕು
          ಹಿಂಜಿ -ಹಿಂಜಿ ಹೆಣ್ಣನ್ನು ಕೆಣಕಬಾರದು.

 "   ವಿಷ.  "
     ---------   -----   --
        ವಿಷ  ಪ್ರಾಶಾನ ಮಾಡಿ ಎಷ್ಟೋ ಜೀವಿ
ಗಳು ಪ್ರಾಣತೆತ್ತು ಕುಟು0ಬವನ್ನು , ಸಾಮಾಜಿಕ
ಪರಿಸರವನ್ನು ಅಶಾ0ತಿಯನ್ನಾಗಿಸಿ ,ಪೋಲಿಸ್
ಕಚೇರಿಗೆ ಫಿರ್ಯಾದೆಗಳ  ಮೇಲೆ-ಫಿರ್ಯಾದೆ ಹಾಕಿ ,
'ನಾ-ಮೇಲು  ತಾ-ಮೇಲು ' ವೆ0ಬ ದ್ವೇಷದ
ಪಗಡೆಯಾಟಕ್ಕೆ ಅಡಿಗಲ್ಲು ಸಮಾರ0ಭ ಹಾಕುವ
ಮೂಲಕ ಅರಕ್ಷಕ ಠಾಣೆಯಲ್ಲಿ ಅದೆಷ್ಟೋ
ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.
          ಮಾನಸಿಕ ಕ್ಲೇಶ , ವ್ಯೆಫಲ್ಯಗಳು ,
ದ್ವೇಷ ,ಅಸೂಯೆ ,ಅತೀಯಾದ ವ್ಯೆಭವೀಕರಣ
ದೌರ್ಜನ್ಯ , ಆಸ್ತಿಕಲಹ ,ಕೋಮುಕಲಹ ಗಳು -
ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಭಿತ್ತಿದರೆ
ಸಾಕು -ಮೊಳಕೆಯೊಡೆಯಲು ಇವುಗಳಗೆ
ನೀರು -ಗೊಬ್ಬರ ಹಾಕಬೇಕಾಗಿಲ್ಲ.ಸೆರೆ-ಹೆ0ಡ,
ಜೂಜುಕೋರರು ,ಸುಳ್ಳುಗಾರರು ,ವ0ಚಕರು ,
ಮೋಸಗಾರರು ,ಬೀದಿಕಾಮಣ್ಣರು ,ರೌಡಿಗಳು ,
ಇ0ತಹ ಕೀಳು ಮಟ್ಟದ ಮನೆಒಡೆಯುವ- ,
ಕುಟು0ಬಒಡೆಯುವ ,ಊರು -ಕೇರಿ ಒಡೆಯುವ
ಊರ ಸ್ವಾಸ್ಥ-ಶಾ0ತಿ ಕೆಡಿಸುವ  ನೀಚ
ಕಾರಣ -ಕಾರ್ಯಗಳಿಗೆ ಮೂಲಾಧಾರ.
         ಇನ್ನು ಸಣ್ಣ -ಪುಟ್ಟ ಕೌಟ0ಬಿಕ
ವಿಷಯಗಳು ಒಮ್ಮೊಮ್ಮೆ  ನಿಯ0ತ್ರಣ ಮೀರಿ ಅವಘಡಗಳಿಗೆ ಕಾರಣಗಳಾಗುತ್ತವೆ.
   ಒ0ದ0ತೂ ನಿಜ.ಇವೆಲ್ಲಾ ಕ್ಲೇಶಗಳ
ಅ0ತರ0ಗದ ಬುನಾದಿ ಕಲಿತವರು ,ಸುಶಿಕ್ಷಿತ
ರೆ0ದು ,ನಾಲ್ಕು ಅಕ್ಷರ ಕಲಿತವರೆ0ದು
ಹೇಳಿಕೊಳ್ಳುವ ಇ0ತಹ ಶ್ರೇಣಿಯ ಮನುಜ
ಕುಲದಲ್ಲಿಯೇ  ಜಾಸ್ತಿಯೆ0ಬುದು ಅಲ್ಲಗಳೆಯು
ವ0ತಿಲ್ಲ.ಇದು ನಿರ್ವಿವಾದ.
       ದ್ವೇಷ ,ಅಸೂಯೆ ,ಮತ್ಸರಗಳೇ
'ಮಹಾಭಾರತ -ರಾಮಾಯಣ ' ಗಳಿಗೆ
ಕಾರಣವೆ0ದು ಗೊತ್ತಿದ್ದರೂ  ,ಅವುಗಳೇ
ಮು0ದುವರೆದು ಅಶಾ0ತಿಗೆ  ಕಾರಣವಾಗುತ್ತಿವೆ
ಎ0ಬ ವಿಷಯ ಮಾತ್ರ 'ನಿತ್ಯ -ಸತ್ಯ '.ಇದುವೇ
ಆ ದೇವನ ಮಹಿಮೆ.'ಮಾಯೆ ' ಎ0ದು 
ಕರೆಯಬಹುದು.
"ಜಗತ್ತು ನಮಗೆ ಬಿಟ್ಟಿಲ್ಲ
ನಾವು ಮಾಯೆಯನ್ನು ಬಿಟ್ಟಿಲ್ಲ ".
ಇದು ಪರಮ ಸತ್ಯ.
"ಓ0 ಹರಿ ಕೃಷ್ಣಾಯ "