Monday, February 26, 2018


  "  ಹರಟೆ. "
              -----   ---------
  ಏನ್ರೀ ಅವ ಹೀಂಗ ಮಾಡಬಾರದಿತ್ತು.ಬಾಳ
ಛಲೋ ಇದ್ರು.ಯಾಕ ಹಿಂಗ್ಯಾಕ ಮಾಡಿದ್ರು
ಮೊನ್ನೇರ ಇಬ್ಬರೂ ಕೂಡಿ ಸಿನಿಮಾಕ್ಕ
ಹೋಗಿದ್ರು ನೋಡ್ರಿ.ಯಾಕ ಹಿಂಗ್ಯಾಕ ಆತು
ಒಂದು ಗೊತ್ತಾಗವಲ್ದು.
ಅದರಗ ಏನ್ಯೆತ್ರಿ ಹೊಸದು.ಕಲ್ಲಿನ ಕ್ವಾರಿ
ಮಾಡಿದ್ರು.ಅಲ್ಲಿ ಇಲ್ಲಿ ಸಾಲ ಮಾಡಿ,ಇದ್ದ ಆಸ್ತಿನ್ನ
ಒತ್ತಿ ಇಟ್ಟುಸಾಲ ತೆಗೆದು ಕಲ್ಲಿನ ಬಿಜಿನಸ್ಸ್
ಮಾಡಿದ್ರು.ಛಲೋ ನಡಿತಿತ್ತು.ಒಮ್ಮಿಂದೊಮ್ಮೆಲೆ
ಈ ಮನಷ್ಯಾ ಸತ್ತು ಹೋದ.ಸತ್ತು ಹೋಗಿದ್ದ
ವಿಷಯ ಗೊತ್ತಾಗಲಿಲ್ಲ.ಹೊರಂಗಿಂದ ಹೊರಗ
ಹೆಣ ಇಟ್ಟು ಸುಡಗಾಡಿಗೆ ಕಳಿಸಿದ್ರ. ಏನರ
ರೊಕ್ಕದಾಗ ಅಪರಾ ತಪರಾ ಆಗಿರಬೇಕ್ರಿ ಅಂತಾ
ಕಾಣಸ್ತ.ಆದರ ಏನ  ಐತೆ ಹೊರಗ ಬರವಲ್ದ್ರಿ.
   ಇಲ್ಲಬಿಡ್ರಿ.ಮೂರನೇದವರ ಉಸಾಬರಿ
ನಮಗ್ಯಾಕ.ನಮ್ಮದೇನ ಸುದ್ದ ಐತೇನ.ನಮ್ಮ
ಹಾಂಗ.ನಾವು ಸಣ್ಣೋರು.ಅವರು ದೊಡ್ಡೋರು.
ಹಿಂಗಾಗಿ ನಾಕ ಮಂದಿ ಬಾಯಗ ಅದರ.ಇರ್ಲಿ
ಬಿಡ್ರಿ.ಎಲ್ಲಾರ ಮನಿ ದ್ವಾಸಿ ತೂತ. ಮೊನ್ನೆ
ನೋಡ್ರಿ.ಸಾವಿರ ಸಾವಿರ ಕೋಟಿ ಗಂಟ
ಹಾಕಿದೋರ ನಮ್ದು ಮರ್ವಾದಿ  ತೆಗದ ಬಿಟ್ರಿ
ಅಂತಾರ.ಗಂಟ ಹಾಕಿದ್ದು ತಪ್ಪಲ್ಲ ಅನ್ನೋಹಾಂಗ
ಮಾತಾಡತರ್ರಿ.ನಮ್ಮದೇನ್ರಿ ನಮ್ಮಪ್ಪನಾಂಗ
ತಿಂದೋರು ಅದಾರ್ರಿ. ಅವರಿಗ್ಯಾಕ ಕೇಳಂಗಿಲ್ರಿ.
ಅಂತಾರ.ಅಂದರ ಇಂತಹ ಕಳ್ಳ ನನ್ನಮಕ್ಳ
ಬಾಳೇಸು ಮಂದಿ ಅದಾರ ಅಂದಾಂಗ ಆತು.
ಇರ್ಲಿ ಬಿಡ್ರಿ ಅವರಿಗೇನ ಎಷ್ಟು ಉಗಳಿದರೂ
ಕರ್ಚೀಫ ತೆಗದು ವರ್ಸಿಗೊಂತಾರ ಇಷ್ಟ.
ಅದಾತ. ಈಗ ನನ್ನ ತೆಲ್ಯಾಗ ಒಂದು ಹುಳ
ಹೊಕ್ಕಾಂಡ್ಯೆತೆ.ಇವ್ರ ತೆಲಿ ಬುರಡಿ ಸ್ಕ್ಯಾನ
ಮಾಡಿದ್ರ ಇವರ ಹೆಂಗದರೇನು ಗೊತ್ತಾಗು
ತ್ತೇನು ಅಂತಾ ನೀಲಕೇಣಿ ಮಾಸ್ತರಗ
ಕೇಳಬೇಕಂತ ಮಾಡೀನಿ.ಏನಪಾ ಈಗಿಂದು
ನೋಡಿದ್ರ ವಿಜ್ನಾನ ಅನ್ನಾಂಗಿಲ್ಲ-ಅಜ್ನಾನಿ
ಅಂದರ ಸರಿ ಆಗತ್ತ.ಈಗ ಬ್ಯಾಂಕನ್ಯಾಗ
ರೊಕ್ಕ ಇಡಬದ್ಲ ಮನ್ಯಾಗ ಮನ್ಯಾಗ ಗೋಡ್ಯಾಗ
ಪೆಟ್ಟಿಗೆ ಮಾಡ್ಸಿ ಇಡದ ಪಾಡ ಅನ್ಸತ್ತ ಮಾರಾಯ. ಆತ ಬಿಡಪಾ.ಎಲ್ಲಾ ಬದಲಾತು
ಡಾರ್ವಿನ್ನ ಸಿದ್ಧಾಂತ ಒಂದ ಬದಲಾಗಿಲ್ಲ.
ಅದ ಯಾವಾಗ ಮಾಡತರೇನು.?ಈಗ
ರೋಬೋಟ ಕಾಲ ಮುಂದೇನ ಐತಿ ಏನು?
ಭಗವಂತ ಬಲ್ಲ.ಶಿವ ನೀನ ಕಾಪಾಡಪಾ.
ನಮ್ಮಗಲ್ಲಪಾ ಬ್ಯಾಂಕನ್ಯಾಗ ದೊಡ್ಡ ದೊಡ್ದ
ಸಾಲ್ ತೊಗೊಂಡೋರಿಗೆ.ಮೊನ್ನೆ 62
ಇತ್ತು.ಈಗ 75 ಸಾವಿರ್ ಕೋಟಿ ಹೊತ್ತನಿಂತ
ಸಾಲ ಬರೋಬ್ಬರಿ ಒಬ್ಬೊಬ್ಬರಿಗೆ200 ರೂ.
ಸಾಲ ತೆಲಿಮ್ಯಾಲೆ.ಈ ಸಾಲಕ್ಕ ತೆಲ್ಯಾನ
ಕೂದಲ ಉದರತಾವ,ಸಕ್ರಿರೋಗ,ಎದಿಬ್ಯಾನಿ
ಎಲ್ಲ ಬರತಾವ.ಈದಕ್ಕ ಯಾರ ಜವಾಬ್ದಾರಿ.
ಯಾರ ಅಂದ್ರ ನಾವ.ನಮ್ಮದಕ ನಾವ ಜವಾ
ಬ್ದಾರಿ.ಯಾಕಂದರ ನಾವೆಲ್ಲ ಪುರಾಣ ಮಂದಿ.
ಸಾಕ ಬಿಡ್ಲೆ.ಕೇಳಾಕತ್ತೀನಂತ ಮೆಟ್ರೋ ಬಿಡ
ಬ್ಯಾಡ.ಆತ ಬಿಡು.ಸಂಗ್ಯಾನ ಅಂಗಡಿಗ
ಹೋಗಮ ಉದ್ರಿ ಚಹ ಕೊಡ್ತಾನ ಇಲ್ಲ ಕೇಳಮ.
ಮೊನ್ನೇರ ಎರಡು ಚಹಾದ್ದ್ ಕೊಟ್ಟಿಲ್ಲ.
ನಡಿ ನಡಿ ಕೇಳಮ ನಡಿ.ನಾವೇನು ದೇಶ ಬಿಟ್ಟ
ಓಡಿಹೋಗದಿಲ್ಲಲಾ...

No comments: