Tuesday, February 27, 2018


"ಕಪ್ಪು ಹಣ ---ಕಪ್ಪು ಹಣ --  ಕಪ್ಪು ಹಣ  "
---  ----   ------   ------    ----  -----------
     ಯಾವುದು ಕಪ್ಪು ಹಣ...? ತೆರಿಗೆ ಕಟ್ಟಲಾ
ರದ ಹಣ,ತೆರಿಗೆ ವಂಚಿಸಿದ ಹಣ ಕಪ್ಪು ಹಣವೇ.?
ಹೌದು.ಇದು ಕಪ್ಪು ಹಣ.ಇದಕ್ಕಿರುವ ನಾನಾ
ಕಾರಣಗಳಿಂದ  ತೆರಿಗೆ ಕಟ್ಟುವವ ಸುಲಭೋಪಾ
ಯವಾಗಿ ತೆರಿಗೆ ವಂಚಿಸುವ ಹಾದಿ ಹುಡುಕು
ತ್ತಾನೆ. ಇದಿಷ್ಟು ಸಾಲದೆಂಬಂತೆ ಅಪಾರ
ಪ್ರಮಾಣದ ,ಲೆಕ್ಕಕ್ಕೆ ಸಿಗದಷ್ಟು ಹಣ ಇದ್ದರೆ,
ವಿದೇಶಿ ಬ್ಯಾಂಕಗಳಲ್ಲಿ ಠೇವಣಿ ಇಡುತ್ತಾನೆ.
ಇಲ್ಲವೇ ಬೇರೆ -ಬೇರೆ ನಾಮಧೇಯಗಳಿಂದ
' ಬೇನಾಮಿ ಆಸ್ತಿಯ ಒಡೆಯನಾಗುತ್ತಾನೆ.
    ಇರಲಿ.ಇಲ್ಲಿಯ ಮುಖ್ಯ ವಿಚಾರವೆಂದರೆ ,-
ತೆರಿಗೆದಾರನಿಗೆ ತನ್ನಲ್ಲಿರುವ ಸಂಪತ್ತು ತಾನೇ
ಘೋಷಿಸಿ- ತಾನೇ ತೆರಿಗೆ ಕಟ್ಟುವಂತಾದರೆ
ಹೇಗೆ..? ತೆರಿಗೆ ಸರಳೀಕರಣ ಮಾಡಿದರೆ
ಅಥವಾ ತೆರಿಗೆ ತಪ್ಪಿಸುವವರನ್ನು  ಪರೋಕ್ಷ
ವಾಗಿ ತೆರಿಗೆಯ ಮುಖ್ಯವಾಹಿನಿಗೆ ತಂದರೆ
"  ದೇಶಕ್ಕೂ ಪ್ರಯೋಜನ.ನಾಗರಿಕನಿಗೂ
ಪ್ರಯೋಜನ ".

  ನಾನು ಹೇಳುವದಿಷ್ಟೆ.ನಾವೆಲ್ಲಾ ನೂರಕ್ಕೆ
ನೂರರಷ್ಟು ಶ್ರೀ ರಾಮಚಂದ್ರರಲ್ಲ.ಸತ್ಯ ಹರಿ
ಶ್ಚಂದ್ರರಲ್ಲ.ನಮ್ಮಲ್ಲಿ ಒಂದಿಲ್ಲಾ ಒಂದು ರೀತಿ
ಯಲ್ಲಿ ಪರೋಕ್ಷವಾಗಿ -ಅಪರೋಕ್ಷವಾಗಿ
ವಂಚಿಸುತ್ತಾ ಇರುತ್ತೇವೆ. ವಂಚನೆಯೂ ಕಪ್ಪು
ಹಣ ತಾನೆ..? ವಂಚನೆಯೂ 'ಅಕ್ಕಿ ಕಾಳಿನಷ್ಟಿ
ದ್ದರೂ, ಬೆಟ್ಟದಷ್ಟಿದ್ದರೂ ವಂಚನೆ ವಂಚನೆಯೇ.
ಕಪ್ಪು -ಕಪ್ಪು ಅಲ್ಲವೇ..?

   ಇವೆಲ್ಲವುಗಳನ್ನು ಸರಳೀಕರಣಗೊಳಿಸಿದರೆ
ನಾವು ಬಚ್ಚಿಟ್ಟ ಹಣ ಸುರಕ್ಷಿತವಾಗಿ ನಮ್ಮ ದೇಶ
ದಲ್ಲಿಯೇ ಇರುತ್ತದೆ. ನಮ್ಮ ದೇಶದಲ್ಲಿಯೇ
ಚಲಾವಣೆಯಲ್ಲಿರುತ್ತದೆ. ಯಾವಾಗ ಸಂಪತ್ತು
ಚಲಾವಣೆಯಲ್ಲಿರುತ್ತೋ, ಆವಾಗ ಉದ್ಯೋಗದ
ಬಾಗಿಲುಗಳು ತೆರೆಯುತ್ತವೆ. ವಿದೇಶಿಗರಿಗೆ
ಭೂಮಿ,ನೀರು,ವಿದ್ಯುತ್ಯ,ಮಾನವ ಸಂಪನ್ಮೂಲ
ಕೊಟ್ಟು,ರತ್ನಗಂಬಳಿ ಹಾಸಿ ಸ್ವಾಗತಿಸುವದ
ಕ್ಕಿಂತ,ನಮ್ಮಲ್ಲಿರುವ ಅನೇಕ ಕೊಟ್ಯಾಧಿಪತಿ
ಗಳನ್ನು ಅವರಿಗೆ ಲಾಭದಾಯಕವಾಗುವಂತೆ,
ದೇಶದ ಸಂಪನ್ಮೂಲವು ದೇಶದಲ್ಲಿರುವಂತೆ
ಉಪಯೋಗಿಸುವಂತಹ ಯೋಜನೆ ಈಗಿನ
ಯುವ ಜನಾಂಗಕ್ಕೆ ಉಪಯೋಗವಾದೀತು.
ತಪ್ಪು ದಾರಿಯಲ್ಲಿದ್ದವರನ್ನು ಸರಿ ದಾರಿಗೆ ತಂದು
ಗೌರವಾನ್ವಿತರಾಗಿ ಕಾಣುವ ಹಂಬಲವೂ
ಇದರಲ್ಲಿದೆ. ಇದರಿಂದ ದೇಶಕ್ಕೆ ದೇಶದ ಹಣ
ದುಡಿಸಿದಂತಾಗುತ್ತದೆ.

ಅಫರಾಧಿಕರಣವನ್ನು ಸರಳಗೊಳಿಸುವ
ನಿಲುವು ಇಲ್ಲಿ ಇಲ್ಲ.ಅಫರಾಧಿಯಲ್ಲಿ ಇದ್ದಂತಹ
ಸಂಪನ್ಮೂಲವನ್ನು ದೇಶದಲ್ಲಿ ವಿನಯೋಗಿಸುವ
ಒಂದು ಚಿಂತನೆ.ಒಟ್ಟಿನಲ್ಲಿ ಬಚ್ಚಿಟ್ಟ ಹಣವು
ದುಡಿಯಬೇಕನ್ನುವುದಷ್ಟೇ ಇಲ್ಲಿಯ ಪ್ರಾದನ್ಯತೆ.

No comments: