" ಪಕೋಡಾ ....ಪಕೋಡಾ.. "
--- ---- ------ ------ ------
ತಂತ್ರಜ್ನಾನ ಪದವಿ ಪಡೆದವರು ಉದ್ಯೋಗ
ಸಿಗದೇ ಅನಿವಾರ್ಯವಾಗಿ 'ಪಕೋಡಾ ತಯಾ
ರಿಸಿ -ಮಾರಾಟ ಮಾಡುವ ದಂಧೆಗೆ ಇಳಿದಿ
ದ್ದಾರೆ.ಇದು ಸರಕಾರದ ಗಮನ ಸೆಳೆಯುವ
ಒಂದು ವ್ಯೆಖರಿ.ಇವರ ಜೊತೆಗೆ ಅನೇಕ
ವಿಧ್ಯಾವಂತರು ಉದ್ಯೋಗ ಸಿಗದೇ ಬೀದಿಗಿ
ಳಿಯುತ್ತಿದ್ದಾರೆ.
2013-14 ರಲ್ಲಿ ಕರ್ನಾಟಕ ಸರಕಾರ
ಬಹುಶಃ ತನ್ನ ಆಧೀನದಲ್ಲಿ ಬರುವ ಎಲ್ಲಾ
ಇಲಾಖೆಗಳಲ್ಲಿನ ' ಡ' ದರ್ಜೆಯ (ಕ್ಲಾಸ್-4)
ಖಾಲಿ ಹುದ್ದೆಗಳನ್ನು ಬಹುತೇಕ ಭರ್ತಿ ಮಾಡಿತು
ಭರ್ತಿ ಮಾಡಿದ ಅಭ್ಯರ್ಥಿಗಳಲ್ಲಿ ಬಹುತೇಕರು ಪದವೀದರರು/ ವಾಣಿಜ್ಯ ಪದವಿದರರು/
ಸ್ನಾತಕೋತ್ತರರು.ಸಾಮಾನ್ಯ ಅಭ್ಯರ್ಥಿಗಳಿಗೆ
ಹೋಲಿಸಿದಾಗ ಇವರ ಪ್ರಮಾಣ 10: 2
ಇರಬಹುದು.
ಸ್ನಾತಕೋತ್ತರ /ಪದವಿ ಪಡೆದವರಿಗೆ ನಾಲ್ಕನೇ
ದರ್ಜೆಯ ಕರ್ಮಚಾರಿ ಉದ್ಯೋಗಕ್ಕೆ ಏಕೆ
ಬಂದಿರಿ.?ಇದು ನಿಮ್ಮ ಪದವಿಗೆ ತಕ್ಕುದಲ್ಲ,
ಕಸಗೂಡಿಸಬೇಕು,ಸ್ವಚ್ಛಮಾಡಬೇಕು,ಹಿರಿಯ
ಸಿಬ್ಬಂಧಿ-ಅಧಿಕಾರಿ ಹೇಳಿದ ಕೆಲಸ ಮಾಡಬೇಕು
ಹಿರಿಯ ಅಧಿಕಾರಿಗಳು ಬಂದಾಗ ಗೌರವ
ಕೊಡಬೇಕು.ಇದು ನಿಮ್ಮಿಂದ ಸಾಧ್ಯನಾ..?
ಅಂತಾ ಕೇಳಿದರೆ -ಖಂಡಿತಾ ಸಾದ್ಯ.ನಾವು
ಯಾವಾಗ ಈ ಹುದ್ದೆಗೆ ಅರ್ಜಿ ಹಾಕಿದ್ದೆವೋ.,
ಆವಾಗಲೇ ನಾವು ಪದವಿ ಮರೆತು ಬಿಟ್ಟಿದ್ದೇವೆ.
ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ,ಬೆಳೆದು ನಿಂತ
ತಂಗಿ,ಖಾಲಿ ಇದ್ಫು ಏನ್ ಮಾಡ್ತೀಯಾ..ಏನಾ
ದರೂ ಕೆಲ್ಸ ಮಾಡು ಅಂತಾ ಇತರರ ಮೂದಲಿಕೆ
ಇವುಗಳನ್ನೆಲ್ಲಾ ತಾಳಲಾರದೇ ನಮ್ಮ ಕಾಲ
ಮೇಲೆ ನಾವು ನಿಲ್ಲಲು ನಿರ್ಧಾರ ತೊಗೊಂಡು
ಕೆಲ್ಸಕ್ಕ ಬಂದೀವಿ ಅಂತಾ ಹೇಳ್ತಾರ.ಬೆಳಕಿಗೆ
ಬಂದ ಪ್ರಕರಣಗಳಿವು.ಬೆಳಕಿಗೆ ಬಾರದವು
ಎಷ್ಟೋ ಏನೋ.? ಇವತ್ತು ಪಕೋಡಾ .ನಾಳೆ
ಕೇಸರಿ ಭಾತ್,ಪಲಾವ್, ತಯಾರಿಸಿ ಮಾರಾಟ
ಮಾಡಬಹುದು.ಇದನ್ನು ಕಟುವಾಗಿ ವಿರೋಧಿ
ಸುವಂತಿಲ್ಲ.ಕರ್ಮ ಸಿದ್ಧಾಂತದ ಪ್ರಕಾರ ಹೊಟ್ಟೆಪಾಡಿಗೆ ಯಾವ ಕೆಲ್ಸವಾದರೇನು..?
ಇದು ಒಂದು ಕಡೆಯ ವಿಚಾರ.
ಬೇಡದೇ ಸವಲತ್ತು ಪಡೆಯುವ ಕುಟುಂಬ
ಗಳ ಸಾಮಾಜಿಕ ಪಾತ್ರ ದಿನದಿಂದ ದಿನಕ್ಕೆ
ಬದಲಾಗುತ್ತಾ ಇದೆ.ಎಸ್.ಎಸ್.ಎಲ್.ಸಿ
ಪಾಸಾದ ಹುಡುಗನಿಗೆ-ಅರ್ಜಿ ಹಾಕಪಾ ಕೆಲ್ಸಕ್
ಅಂತಾ ಹೇಳಿದರ -ಅದಕ್ಕ ಅವ್ನು ಯಾಕ್ರೀ
ಮಾಡ್ಬೇಕು.ಮೇಕೆಸಾಕಾಣಿಕೆ ,ಜಾನುವಾರು
ಸಾಲ,ಕೋಳಿ ಸಾಕಾಣಿಕೆಗೆ ಸಾಕಷ್ಟು ಸಾಲ
ಕೊಡ್ತಾರ.ಬಡ್ಡಿ ಮನ್ನಾ ,ಸಬ್ಸಿಡಿ ಎಲ್ಲಾ ಇರ್ತದ.
ನಮ್ಗ ಉದ್ಯೋಗ ಬ್ಯಾಡ್ರಿ.ಅನ್ನೋಮಾತು
ಅವರಿಗೆ ಸಾಮಾಜಿಕ ಕಾಳಜಿ ಯಾವ ಪರಿ ಇದೆ ಎಂಬುದು ತೋರಿಸುತ್ತದೆ.
ಒಂದಡೆ ನಿರುದ್ಯೋಗ ಸಮಸ್ಯೆ ,ಇನ್ನೊಂ
ದಡೆ ಸವಲತ್ತು ಪಡೆಯುವ ಕುಟುಂಬಗಳು.
ಇವೆರಡರ ನಡುವೆ ಎದ್ದು ಕಾಣುವದು ಆರ್ಥಿಕ
ಅಸಮಾನತೆ.ಈ ಆರ್ಥಿಕ ಅಸಮಾನತೆ
ಎಲ್ಲಿಯವರೆಗೆ ಸಮನ್ವಯ ಸಾಧಿಸುವದಿಲ್ಲವೋ
ಅಲ್ಲಿಯವರೆಗೆ ಹೊಟ್ಟೆ ರಂಪಾಟ ,ನಿರುದ್ಯೋಗ
ತಾಂಡವ ಇದ್ದೇ ಇರುತ್ತದೆ.
ಇಲ್ಲಿ ಪ್ರಮುಖ ವಿಷಯವೆಂದರೆ ದುಡಿಯುವ
ಶಕ್ತಿ ಮುಂದೆ ಬಂದಾಗ ಅದನ್ನು ಪ್ರೋತ್ಸಾಹಿಸು
ವದಿಲ್ಲ.ದುಡಿಯುವ ಆಸಕ್ತಿ ಇಲ್ಲದವರಿಗೆ
ಹಾಲೆರೆಯುತ್ತೇವೆ .
ಈ ಪದ್ಧತಿ ಮುಂದುವರೆದರೆ ಭವಿಷ್ಯದಲ್ಲಿ
ಹಾಹಾಕಾರ ,ಬರಗಾಲ ಎದುರಾಗಬಹುದು.
"ಕುಳಿತು ಉಂಡರೆ ಕುಡಿಕೆ ಹೊನ್ನ ಸಾಲದು "
ಈ ಗಾದೆ ನೆನಪಿಗೆ ಬರುತ್ತೆ..
No comments:
Post a Comment