" ದೇಶ -- ಒಳನೋಟ "
---- ----- ----- -----
ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ
ಆರ್ಥಿಕ ,ಸಾಮಾಜಿಕವಾಗಿ ನಾವಿನ್ನೂ
ಪರಿಪೂರ್ಣ ಸ್ವಾವಲಂಬನೆ ಸಾಧಿಸಿಲ್ಲ.
ಸಮಪಾಲು ,ಸಮಬಾಳು ,ಸರ್ವಸಮಾನತೆ
ಗಳನ್ನು ಬದಿಗಿರಿಸಿ,ಯಾವ ಕ್ಷೇತ್ರದಲ್ಲಿ ಯಾವ
ಜನಾಂಗದವರು ಹೆಚ್ಚಿರುವರೋ ಅವರನ್ನು
ಓಲ್ಯೆಸುವ ಉತ್ಸವಗಳನ್ನು ನಾವಿಂದು
ಕಾಣುತ್ತಲಿದ್ದೇವೆ.
ಜಾತ್ರೆಯಲ್ಲಿ ತಿಂದುಂಡವನೇ ಜಾಣ , ಬಾಚಿ
ಕೊಂಡವನೇ ಮಹಾಜಾಣ..ಸೌಲಭ್ಯಗಳನ್ನು
ಯಾವ ರೀತಿ ಪಡೆಯಬೇಕೆಂಬ ವಿದ್ಯಮಾನಗಳ
ವಿಶ್ವವಿದ್ಯಾಲಯಗಳೇ ತೆಲೆ ಎತ್ತುತ್ತಲಿವೆ.
ಗುಂಪು,ಜನಾಂಗಗಳ ಧೋರಣೆಗಳು ಇವು
ಗಳನ್ನು ಪ್ರೋತ್ಸಾಹಿಸುತ್ತಿವೆ.
ದಾಸ್ಯತ್ವದ ಗುಂಗಿನಲ್ಲಿ ಕ್ರಮೇಣ -ಕ್ರಮೇಣ
ನಾವೆಲ್ಲರೂ ಬೀಳುತ್ತಿದ್ದೇವೆ.' ಧಾರ್ಮಿಕ ,
ಜಾತಿಯ -ವಿಷಮ ಜ್ವರ ಎಲ್ಲಡೆ ಕಾಣುತ್ತಲಿದೆ.
ಒಂದಡೆ ಮಾಹಿತಿ ತಂತ್ರಜ್ನಾನದಲ್ಲಿ
ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ
ಮಾಡುತ್ತಿದ್ದೇವೆ.ಇನ್ನೊಂದಡೆ ಸಂಕುಚಿತ
ವಿಷಯಗಳಿಂದ ಬಡವರಾಗುತ್ತಿದ್ದೇವೆ. ಧನಿ
ಎತ್ತಲು ಆಗದಂತೆ ಬುದ್ಧಿಜೀವಿಗಳು ಮೌನಕ್ಕೆ.ಶರಣಾಗಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿಯ ಸ್ವಾಭಿಮಾನ
ರಾಷ್ಟ್ರೀಯತೆ ,ಪುನಃ ಜಾಗೃತವಾಗಲು ಕಾಲ
ಸನ್ನಿಹಿತವಾಗುತ್ತಿದೆ. ದೇಶಭಕ್ತ ಬುದ್ಧಿ ಜೀವಿಗಳೇ
ತಮ್ಮ ಸದ್ವಿಚಾರ ದೃಡಸಂಕಲ್ಪ ಪುನಃ ದೇಶವು
ಬೆಳಕಿನಡೆಗೆ ಸಾಗಲು ಶಕ್ತಿಯನ್ನೀಯುವ
ಮೂಲಕ ಅರ್ಪಣಾಭಾವ ಪ್ರಕಟವಾಗಲಿ
No comments:
Post a Comment