Friday, February 16, 2018

  "  ಕೋಟಿ - ಕೋಟಿ - ವಂಚನೆ "
   --  -----  -----   ------ ---
ಸಾವಿರ ಸಾವಿರ ಕೋಟಿ ಹಣ ವಂಚಿಸಿದರೆ
ದೇಶದ ಮುಂದಿನ ಭಂಢವಾಳದ ಗತಿಯೇನು.?
  ಈಗಾಗಲೇ  ಸುಸ್ತಿ ಸಾಲ ಮೊತ್ತ ವರ್ಷದಿಂದ
ವರ್ಷಕ್ಕೆ  ಏರುತ್ತಲಿದೆ. ಸುಸ್ತಿ ಸಾಲದ ಭಾರವನ್ನು
ಭರ್ತಿ ಮಾಡಲು  ಬ್ಯಾಂಕಗಳುಇತರೆ  ಸೇವೆ
ದರಗಳನ್ನು ನಿಗದಿಪಡಿಸಿವೆ.ಮತ್ತೆ ಯಾವ
ಸೇವಾ ದರಗಳನ್ನು  ತರುತ್ತವೆಯೋ ಎಂಬ
ಭಯ  ಗ್ರಾಹಕರಲ್ಲಿ ಆವರಿಸಿಬಿಟ್ಟಿದೆ.

  ಸರಕಾರಿ ಸ್ವಾಮ್ಯದ ಬ್ಯಾಂಕುಗಳು
ಜನರಿಟ್ಟ ಠೇವಣಿಗೆ ಗ್ಯಾರಂಟಿ ನೀಡಿದರೆ ಉತ್ತಮ
  ಠೇವಣಿ ಪ್ರಮಾಣ ಪತ್ರದಲ್ಲಿ ಇಟ್ಟ ಮೊತ್ತಕ್ಕೆ
ಅವಧಿ ಮುಗಿದ ನಂತರ ಇಂತಿಷ್ಟು ಮೊತ್ತ
ಅಂತಾ ಮಾತ್ರ ನಮೂದಿಸಿರುತ್ತಾರೆ.
"ಹಿಂತಿರುಗಿಸುತ್ತೇವೆ/ಮರಳಿಸುತ್ತೇವೆ ಅಂತಾ
ಪ್ರಮಾಣ ಪತ್ರ (ಸರ್ಟಿಫಿಕೇಟ) ಇರುವದಿಲ್ಲ.
ಭಾರತೀಯ ರಿಜರ್ವ ಬ್ಯಾಂಕ್/ಸೆಬಿ ಈ
ಅಂಶಗಳನ್ನು ಗಮನಿಸಿ ಆದೇಶ ಹೊರಡಿಸಿದರೆ
ಜನರಿಗೆ ಒಂದಿಷ್ಟು ನೆಮ್ಮದಿ.

  ಇನ್ನೊಂದು ವಿಚಾರ.ನಗರ ಪ್ರದೇಶದಲ್ಲಿ
ಒಂದು ಪ್ಲ್ಯಾಟ್ ತೆಗೆದುಕೊಳ್ಳಬೇಕಾದರೆ ,
ನೂರೆಂಟು  ಮಾಹಿತಿ ನೀಡಬೇಕಾಗುತ್ತದೆ.
  ಸಾವಿರ ಸಾವಿರ ಕೋಟಿ ಸಾಲ ಮಂಜೂರು
ಮಾಡಬೇಕಾದರೆ ಸಂಭಂಧಿಸಿದ ಬ್ಯಾಂಕಗಳು
ತನ್ನದೇ ಆದಂತಹ ಪ್ರಕ್ರಿಯೆ /ನಿಯಮಾವಳಿ
ಗಳನ್ನು ಅನುಸರಿಸಬೇಕಾಗುತ್ತದೆ.

   ಹೀಗಿದ್ದರೂ ಸಾಲ ಸುಸ್ತಿದಾರರಾಗುತ್ತಾರೆ
ಎಂದರೆ ಇದರ ಮರ್ಮವೇನು.? ಇಂತಹ
ಜಾಲಗಳೇನಾದರೂ ಇವೆಯೇ..?
ಗ್ರಾಹಕರ ಮುಂದಿನ ಭವಿಷ್ಯವೇನು..?ಇವು
ಈಗ ಚರ್ಚೆಯ ವಿಷಯ.

No comments: