Monday, February 12, 2018



"  ಭರವಸೆ. /ಪ್ರಣಾಳಿಕೆ  "
    ---   -----   -----  -----------
  ಯಾವ  ವಸ್ತುವಿಗೆ ನಿಖರವಾದ ,ಸ್ಪಷ್ಟವಾದ
ರೂಪ,ಸ್ವರೂಪ ,ಗುಣ ,ಪರಿಣಾಮ ಇರುತ್ತ
ವೆಯೋ,  ಆ ವಸ್ತುಗಳಿಗೆ ತನ್ನದೇ ಆದಂತಹ
ಸ್ಯೆದ್ಧಾಂತಿಕ  ಧೋರಣೆಗಳಿರುತ್ತವೆ. ಇವುಗಳನ್ನೇ
ನಾವು 'ಸಿದ್ಧಾಂತ 'ವೆಂದು ಕರೆಯುತ್ತೇವೆ.

     ಸಾಮಾಜಿಕ ,ಆರ್ಥಿಕ ,ಶ್ಯೆಕ್ಷಣಿಕ ಸ್ವರೂಪ
ಹಾಗು ಸೌಲಭ್ಯಗಳನ್ನು ಒದಗಿಸುವ ಕೇಂದ್ರಿ
ಕೃತ ಘೋಷಣೆಗಳನ್ನೊಳಗೊಂಡ -ಭರವಸೆಗಳ
ಸರಮಾಲೆಗಳಿಗೆ ಸಾಮಾನ್ಯವಾಗಿ 'ಪ್ರಣಾಳಿಕೆ '
ಎಂದು ಕರೆಯುತ್ತೇವೆ.ಈ ಪ್ರಣಾಳಿಕೆಗಳು
ಜನರ ಸಾಮಾಜಿಕ ,ಆರ್ಥಿಕ ,ಶ್ಯೆಕ್ಷಣಿಕ ಹಾಗು
ಇತರೆಅಗತ್ಯ ಸುಧಾರಣಾ ಫಲಶೃತಿ
ಗಳಿಗೆ ಸಂಭಂಧಿಸಿದವುಗಳಾಗಿವೆ.

     ಈ ಪ್ರಣಾಳಿಕೆಗಳನ್ನು ಘೋಷಿಸುವ
ಹಾಗು ಜಾರಿಗೆ ತರುವದು ರಾಜಕೀಯ
ಪಕ್ಷಗಳ ಪ್ರಮುಖ ಕರ್ತವ್ಯ ರೂಪದ ಘೋಷ
ವಾಖ್ಯವಾಗಿದೆ. ಚುನಾವಣೆ ಸಮೀಪ ಬಂದಾಗ
ವಿವಿಧ ಪಕ್ಷಗಳು ,ವಿವಿಧ ಪ್ರಣಾಳಿಕೆಗಳನ್ನು
ಹಾಗು ಜನರ ಪ್ರಸ್ತುತ ಆಶೋತ್ತರಗಳನ್ನು
ಗ್ರಹಿಸಿ ತಯಾರಿಸುವ ಪಟ್ಟಿಯು ಪ್ರಣಾಳಿಕೆಯ
ಲ್ಲಿರುತ್ತದೆ.

  ಬಹುಮತ ಪಡೆದು ಆಯ್ಕೆಯಾದ ಚುನಾಯಿತ
ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದ ನಂತರ
ಪ್ರಣಾಳಿಕೆ ಅಂದರೆ ಜನರಿಗೆ ಇತ್ತ ಭರವಸೆ
ಗಳನ್ನು ಈಡೇರಿಸುವದು ಆಡಳಿತ ವಹಿಸಿಕೊಂಡ
ಪಕ್ಷದ ಕರ್ತವ್ಯವಾಗಿದೆ.

   ಇಂತಹ ಪ್ರಣಾಳಿಕೆಯನ್ನು ನಂಬಿ ಜನ,
ತಮ್ಮ ಮತ ಚಲಾಯಿಸಿ ತಮ್ಮ ಪ್ರತಿನಿಧಿಯನ್ನು
ಆಯ್ಕೆ ಮಾಡುವದು ಪ್ರಜಾಪ್ರಭುತ್ವದ ಒಂದು
ಭಾಗ.

  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ
ನಾವು ಸಾಮಾಜಿಕ/ಆರ್ಥಿಕ/ಶ್ಯೆಕ್ಷಣಿಕವಾಗಿ
ಪ್ರಭಲವಾಗಿಲ್ಲ.ಕಾರಣ ಏನಿರಬಹುದು..?
ಇದು ಇಲ್ಲಿಯ ಜಿಜ್ನಾಸೆ.ಪ್ರಣಾಳಿಕೆಯಲ್ಲಿನ
ಭರವಸೆಗಳು ನಂತರದ ಸಮಯದಲ್ಲಿ
ನೇಪಥ್ಯಕ್ಕೆ ಸರಿಯುತ್ತವೆಯೇ..? ಹೀಗೊಂದು
ಸಂಶಯದ ಕೋಲ್ಮಿಂಚು ಕಣ್ಮುಂದೆ
ಸುಳಿದು ಮಾಯವಾಗುತ್ತದೆ.!
ಪ್ರಣಾಳಿಕೆಗಳು ಹುಸಿಯಾಗದಿರಲೆಂದು
ಆಶಿಸೋಣವೇ..?

No comments: