Monday, February 29, 2016

   "ಜೀವನ -ಬದುಕು " 

   ಜೀವನ ಒ0ದು ಕಲೆ.ನಾಗರಿಕತೆಯಿ0ದ 
ಬಾಳುವದೇ ಕಲೆ. ಈ ಕಲೆಗಾಗಿ ಬದುಕಬೇಕು.
ಬಾಳಿ ಜೀವನ ನಡೆಸಬೇಕು.ನಮ್ಮ0ತೆ ಎಲ್ಲಾ
ಪ್ರಾಣಿಗಳು ಜೀವಿಸಬೇಕು.ಜೀವಿಸಲಿಕ್ಕೆ ಆಹಾರ
ಬೇಕು.ಅರ್ಥಾತ ದುಡಿಯಬೇಕು. ನಮ್ಮ 
ದುಡಿತದ  ಮೇಲೆ ನಮಗೆ ಆಹಾರ ಲಭ್ಯವಾಗು
ತ್ತದೆ.ಅದರ ಮೇಲೆ ನಮ್ಮ ಜೀವನ.ಇದು 
ಮಾನವ ನಿರ್ಮಿತ ಸಾಮಾಜಿಕ ಜೀವನ 
ನಿಯಮ.ಇದನ್ನೇ ಕಾಯಕ ವೆ0ತಲೂ 
ಕರೆಯಬಹುದು.

ಆಹಾರ ಜೊತೆಗೆ ವಾಸಿಸಲು ಮನೆ ಬೇಕು.
ಮನೆಕಟ್ಟಬೇಕು ಇಲ್ಲವೇ ಭಾಡಿಗೆ ಮನೆಯಲ್ಲಿ
ಇರಬೇಕು.ಹೀಗೆ ಮನುಷ್ಯನ ಬದುಕು 04
ಸ್ತರದಲ್ಲಿ ನಡೆಯುತ್ತಾ ಬರುತ್ತದೆ.
ಮೊದಲನೇ ಸ್ತರದಲ್ಲಿ ಐಷರಾಮಿ 
ಜೀವನ. ಮೇಲ್ವರ್ಗದವರು.
ಇವರಿಗೆ ಕಾಯಕದ ಬಗ್ಗೆ ಚಿ0ತೆ ಇಲ್ಲ.
 ಆದರೆ ಇವರಿಗೆ ಶ್ರೀಮ0ತರ ಕಾಹಿಲೆಗಳು ಬಿ.ಪಿ.
ಶುಗರ,ಮನೋಚಿ0ತೆ ,ವ್ಯಸನಾದಿಗಳು ,ಬೊಜ್ಜು
ಬಹಳ. ಎರಡನೇ ಸ್ತರದಲ್ಲಿ ನೌಕರವರ್ಗ ,
ವ್ಯಾಪಾರಸ್ಥರು ಗುತ್ತಿಗೆದಾರರು  ಹೀಗೆ ಈವಲಯದಲ್ಲಿ
 ನಿಯಮಿತ ಅವಧಿಯ ಕಾಯಕ.ಎಷ್ಟೊನಿಗದಿಯಾಗಿರುತ್ತೋ
 ಅಷ್ಟು ಕೆಲಸ.ಇವರಿಗೆ ಆಸೆ ಹೆಚ್ಚು ಹೀಗಾಗಿ 
ಅನವಶ್ಯಕ ತಮ್ಮದಲ್ಲದ ಜವಾಬ್ದಾರಿ ನಿಭಾಯಿಸಲು ಹೋಗಿ
ನೂರೆ0ಟು ಸಮಸ್ಯೆಗಳನ್ನು ಮ್ಯೆಮೇಲೆ ಎಳೆದುಕೊಳ್ಜ್ಲುವ ಚಪಲ.
ಹೀಗಾಗಿ ಏನಾದರೋದು ಕಾಹಿಲೆ ಇದ್ದೇ ಇರುತ್ತೆ
.ಮೂರನೇಸ್ಥರದಲ್ಲಿ ಕಾರ್ಮಿಕರು,ದಿನಗೂಲಿಗಳು  ,ಕೂಲಿಗಳು.
ಇವರಿಗೆ ಕೆಲಸ ಸಿಕ್ಕಿತು ಅ0ದರೆ ಖುಷಿಯೋ ಖುಷಿ.
ತಮಗ ಸಿಕ್ಕ ಕೆಲಸ ಚೊಕ್ಕಾಗಿ ಮಾಡ್ತಾರೆ.
ಹೆಚ್ಚಿನ ಆದಾಯ ವಿಲ್ಲ. ದುಡಿಬೇಕು ತಿನ್ನಬೇಕು.
ಬಡತನ. ರೋಗ -ರುಜನಿ ಸಾಮಾನ್ಯ.
ನಾಲ್ಕನೇ ಸ್ತರದಲ್ಲಿ ಭಿಕ್ಷುಕರು ,ಅಲೆಮಾರಿ.ಅನಾಥರು
ಇವರಿಗೆ ನೆಲೆಇಲ್ಲ. ಗತಿ ಇಲ್ಲ. ದೇವರೇ ಎಲ್ಲಾ.
  ಒ0ದ0ತೂ ಸತ್ಯ.ಯಾವುದೇ ಸ್ತರದ ಜೀವನ
ವನ್ನು -ಬದಕನ್ನು ನಡೆಸಲಿ. ನಾವು ಮೊದಲು
ಕಾಯಕವನ್ನು --ಕಾಯಾ -ವಾಚಾ -ಮನಸಾ
ತ್ರಿಕರಣ ಶುದ್ಧಿಯಿ0ದ ಸ್ವೀಕರಿಸಿ ನಮ್ಮ -
ನಮ್ಮ ದುಡಿಮೆ ಮಾಡಿದರೆ ಬದುಕು ಸಾರ್ಥಕ
ವಾಗುತ್ತದೆ.ಶ್ರಮದ ಜೀವನ ಕಣ್ಣಿಗೆ ಸುಖವಾದ
ನಿದ್ದೆ ಒದಗಿಸುತ್ತದೆ.ಯಾವುದೇ ಚಿ0ತೆ ,
ಸಮಸ್ಯೆಗಳು ಇರುವದಿಲ್ಲ.ಮನುಷ್ಯ 
ಧ್ಯೆಹಿಕವಾಗಿ ಶ್ರಮಪಟ್ಟು ಕಾರ್ಯ ನಿರತನಾದರೆ
ಆತನಿಗೆ ಎಲ್ಲ ಸೌಕರ್ಯಗಳನ್ನು ದೇವರು
ಕರುಣಿಸುತ್ತಾನೆ.ಈ ಕಾಯಕದಲ್ಲಿ ನ0ಬಿಕೆ
ಇರಬೇಕು.ಪರಮಾತ್ಮ ನ0ಬಿದವರಿಗೆ
ಕಾಯಕವನ್ನು ಅನುಗ್ರಹಿಸುತ್ತಾನೆ.ಪ್ರಪ0ಚವೇ
ಒ0ದರ್ಥದಲ್ಲಿ "ಕಾಯಕಯೋಗಿ  " .
"ಕಾಯಕವನ್ನು ಬೆಳಗಿಸಿದರೆ
  ಜೀವನ ಬೆಳಗುತ್ತದೆ."
"ಕಾಯಕವನ್ನು -ಅಲಕ್ಷಿಸಿದರೆ
ಜೀವನ -ಮುರಾಬಟ್ಟಿ  "


  "ಸ0ಗಾನ ಮಾತು "

  *  "  ಹಿ0ಸೆ ಕಿರೀಟವಿಟ್ಟುಕೊ0ಡು
         ಜಗತ್ತಿನಲ್ಲಿ ಎಲ್ಲಿ ಮರೆದಿಲ್ಲ  ".
  *  "  ಮನಸಿನ  ಆರೋಗ್ಯ  ---
        ಕನಸುಗಳನ್ನು  ನೆನಸಾಗಿ ಗಟ್ಟಿ ಮಾಡಲು
        ಧಾತುಕದ0ತೆ ಕಾರ್ಯ ನಿರ್ವಹಿಸುತ್ತವೆ "
  *  "  ಮಣ್ಣಿನ ಗೋಡೆಯ ಮೇಲೆ 
       ರಕ್ತದ ಚಿತ್ರ ಬಿಡಿಸುವ0ತೆ
      ಸಾರ್ವಭೌಮತಗೆ ಸ0ಭ0ಧಿಸಿದ 
       ವಿಚಾರಗಳಲ್ಲಿ    ನಮ್ಮ  ನಿರ್ಧಾರಗಳು

Friday, February 26, 2016


ದೇಶಭಕ್ತಿ

ನಾವು ಯಾವ ಮಾತೃ ಭೂಮಿಯಲ್ಲಿ 
ನೆಲೆಸಿರುತ್ತೇವೆಯೋ ,ಆಮಾತೃ ಭೂಮಿಯ
ಅನ್ನ ,ಜಲ ವಾಯು ಸೇವಿಸುತ್ತೇವೆಯೋ
ಆ ಮಾತೃಭೂಮಿಯ ಋಣ ತೀರಿಸು ವದು
ನಮ್ಮ ಕರ್ತವ್ಯ.
ಹೊಟ್ಟೆ ಬಟ್ಟೆ ರಟ್ಟೆ  ಕೆಲಸವಾಯಿತು ಅ0ದರೆ
ಮುಗಿಲಿಲ್ಲ. ಅದರ ಋಣ ತೀರಿಸಬೇಕು.
ಅದರ ಋಣ ಹೇಗೆ ತೀರಿಸ್ತೀರಾ  ?.
ಅನ್ನ ಜಲ ನೀರು ಇವು ಮೂರು ಅಗತ್ಯ 
ಪೋಷಕಾ0ಶಗಳು .ಇವುಗಳಿಲ್ಲದೇ ಮನಜನ 
ವಿಕಾಸ ಸಾದ್ಯವೇ ಇಲ್ಲ. ಇವುಗಳನ್ನು ನಾವು
ಭೂಮಿಯಿ0ದ ನಮ್ಮ ವಿಕಾಸಕ್ಕಾಗಿ ಸಾಲದ
ರೂಪದಲ್ಲಿ ಪಡೆದಿದ್ದೇವೆ ಇವುಗಳನ್ನು ನಾವು
ಹಿ0ತಿರುಗಿಸುವದು ನಮ್ಮ ಕರ್ತವ್ಯ ವಲ್ಲವೇ ?
 ಹೌದು ಹಿ0ತಿರುಗಿಸಬೇಕು.ಸರಿ.ನಮ್ಮಲ್ಲಿ
ಅನೇಕ ವಸ್ತುಗಳಿರುತ್ತವೆ. ಅದರಲ್ಲಿ ನಾವು
 ಕೆಲವೋ0ದು ಸ್ವ0ತಉತ್ಪನ್ನ ಮಾಡುತ್ತೇವೆ.
ಇನ್ನು ಕೆಲವೋ0ದು ಬೇರೊಬ್ಬರು
ಉತ್ಪಾದಿಸುವಲ್ಲ್ಲಿ ಸಹಕರಿಸುತ್ತೇವೆ. 
ಈ ಸಹಕಾರಿ ತತ್ವದಿ0ದಲೇ ನಮ್ಮ ಜೀವನ 
ನಮ್ಮ ದೇಶದ ಅಸ್ತಿತ್ವ. ನಮ್ಮಲ್ಲಿದ್ದುದನ್ನು
 ಮತ್ತೊಬ್ಬರಿಗೆಕೊಟ್ಟು ಅವರಿಲ್ಲಿದ್ದುದದ್ದನ್ನು ನಾವು
ಪಡೆದು ಪರಸ್ಪರ ಕೃತಾರ್ತರಾಗುತ್ತೇವೆ.
 ಅದೇ ರೀತಿ ಭೂಮಾತೆಯಿ0ದ ಪಡೆದ0ತಹ 
ವಸ್ತುಗಳನ್ನು ನಾವು ಭೂ ಮಾತೆಗೆ ಮರಳಿಸುವದು
 ನಮ್ಮ ಕರ್ತವ್ಯ. ಯಾವದೇ ರೀತಿಯಾಲ್ಲಗಲಿ ಹಣದ ರೂಪದಲ್ಲಾಗಲಿ 
ಸೇವೆರೂಪದಲ್ಲಾಗಲಿ ನಾವು ಈ ಭೂಮಿಯ 
ಋಣ ತೀರಿಸಬೇಕು.ಇಲ್ಲಿ ಜಾತಿ ಭೇದ ಇಲ್ಲ.
ಭೂಮಾತೆಗೆ ಎಲ್ಲ ಜಾತಿ ಒ0ದೇ.
ನಾವೆಲ್ಲರೂ ಆ ತಾಯಿಯ ಮಕ್ಕಳು.
ಭೂಮಾತೆಯ ಸೇವೆಗೆ ಸದಾ ಸಿದ್ದರಾಗಿರಬೇಕು.
ಭೂಮಾತೆಗೆ ದ್ರೋಹ ಸಲ್ಲದು. ನಾವು 
ತಿ0ದ ಅನ್ನಕ್ಕೆ ಎರಡು ಬಗೆದ0ತೆ. ಅ0ತಹ ಹೀನ ಕೃತ್ಯ
ಎ0ದಿಗೂ ಮಾಡಬಾರದು.ದೇಶಭಕ್ತಿ ದೇಶಸೇವೆ
ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ.
ಕಾನೂನು ಬಾಹಿರ ಚಟುವಟಿಕೆಗಳು 
ಅವರ ವ0ಶವನ್ನೇ ಸತ್ಯಾನಾಶಗೊಳಿಸುತ್ತವೆ.

"ಸ0ಗಾನ ಮಾತು  "

*  " ಸಾಲದ ಹವ್ಯಾಸಿಗೆ 
      ಲಕ್ಷ್ಮಣ ರೇಖೆ ಸಾಧುವಲ್ಲ  ".
* "   ನಾರಿ ಜಾರಿದರೆ ಗೋರಿ  ".
* "  ಮಾನಸಿಕ ಒತ್ತಡಗಳು ಮನುಷ್ಯನನ್ನು
      ಏಕಾ0ಗಿಯನ್ನಾಗಿ  ಮಾಡುತ್ತವೆ  ".

Thursday, February 25, 2016



  "ಸ0ಗಾನ ಮಾತು "

  *  "ಕ್ರಿಯೆಯೇ ಪ್ರಧಾನ ವಾಗಿರುವ
       ಕಾಯಕಗಳ ಪರಿಣಾಮಗಳು
      ಅದ್ಭುತವಾಗಿರುತ್ತವೆ .  "
  *  "  ಸ0ಘಟಕಾರನು ಪ್ರತಿಭಟನೆ
         ವಿರೋಧಗಳನ್ನು ಸಹಿಸುವಷ್ಟು
         ತಾಳ್ಮೆಯನ್ನು ಪಡೆದುಕೊ0ಡಿರಬೇಕು ".
  *  "  ಹಣದ ವಿಷಯದಲ್ಲಿ ಸ0ಭ0ಧಿಕರ
         ಮುಖವಾಡಗಳು ಮನುಷ್ಯನ
         ತೆಲೆಗೂದಲನ್ನು ಬೆಳ್ಳಗೆ ಮಾಡುತ್ತವೆ  ".

"ಪಕ್ವತೆ  "

ಪಕ್ವತೆ ---- ಪರಿಪಕ್ವತೆ - ಜಾನಪದದಲ್ಲಿ
ಪಕ್ವ ಅ0ದರೆ ಹಣ್ಣಾಗಿದೆಅ0ತ ಅರ್ಥ.
ಪಕ್ವ ಆಧ್ಯಾತ್ಮಿಕದ ಅರ್ಥದಲ್ಲಿ ನಿಪುಣತೆ ,
ಆಳ ,. ಇದರ ಮು0ದಿನ ಭಾಗವೇ ಅನುಭವ.
ಅನುಭವವೇ -ಅನುಭಾವಿ  ಕಲ್ಯಾಣ ಮ0ಟಪ
ಅ0ತಲೂ ಕರೆಯಬಹುದು.ಲೋಕ ಕಲ್ಯಾಣಕಾಗಿ
ಅನುಭಾವಿಗಳು ಸೇರುವ ತಾಣವೇ ಕಲ್ಯಾಣ 
ಮ0ಟಪ.

ಮನುಷ್ಯ ಬುದ್ಧಿಜೀವಿ.ಕಲ್ಪನಾಜೀವಿ.ಪ0ಚೇ0
ದ್ರಿಯಗಳ ಜೊತೆಗೆ ಈ ಕಲ್ಪನಾ ಶಕ್ತಿಯನ್ನು
ಮೇಳ್ಯೆಸಿ ಗುರುತಿಸುವ ಆಲೌಕಿಕ ಶಕ್ತಿ 
ಮನುಷ್ಯನಲ್ಲಿ ಮಾತ್ರ ಇದೆ. ಪಶು ಪ್ರಾಣಿಗಳಲ್ಲಿ 
ಪಕ್ವತೆಯ ಗ್ರಹಣ ಶಕ್ತಿ ಕಡಿಮೆ.
ಮನುಷ್ಯ ಜೀವಿಗಳಲ್ಲಿ ವ್ಯಕ್ತಿಯಿ0ದ ವ್ಯಕ್ತಿಗೆ
ಈ ಪಕ್ವತೆ ಭಿನ್ನವಾಗುತ್ತ ಹೋಗುತ್ತದೆ. ಇದು
ಅವರವರ ಕಾಯಕದಲ್ಲಿ ತೊಡಗಿಸಿಕೊ0ಡ 
ಆಳ,ಧ್ಯಾನ ,ಅರ್ಪಿತಗಳ ಮೇಲೆ ಅವಲ0ಬಿತ
ವಾಗಿರುತ್ತದೆ. ಇದರಲ್ಲಿ ಗ0ಡು -ಹೆಣ್ಣು ಭೇದ 
ಇಲ್ಲ.

ಆಕಸ್ಮಾತ್ ಮನೆಯಲ್ಲಿ ಏಕಾಏಕಿ ಕರೆ0ಟ್
ಹೋಗುತ್ತೆ. ಆಗ ಬೆ0ಕಿ ಪೊಟ್ಟಣ ಎಲ್ಲಿ 
ಇಟ್ಟಿದ್ದೀವಿ ಅನ್ನೋ ಸ0ಜ್ನೆ ,ಆ  
 ಜ್ನಾನ ತರ0ಗಗಳಿಗೆ ರವಾನಿಸುತ್ತದೆ.ಆಗ ನಾವು
ಬೆ0ಕಿ ಪಟ್ಟಣಿದ್ದ
ಜಾಗಕ್ಕೆಯಾವುದೇ ಬೆಳಕಿನ ಸಹಾಯವಿಲ್ಲದೇ 
ಪಡೆಯುತ್ತೇವೆ. ಇದು ಅಭ್ಯಾಸ
ಬಲ.ಇದನ್ನು ನಾವು ಒ0ದು ರೀತಿಯಲ್ಲಿ
"ಪಕ್ವತೆ "ಅ0ತಾ ಕರೆಯುತ್ತೇವೆ.ಈ ಅಭ್ಯಾಸ 
ಬಲ ಎಷ್ಟೋ0ದು ಆಳದಲ್ಲಿ ಇರುತ್ತದೆ ಅ0ದರೆ
ಯಾವ ವ್ಯಕ್ತಿಯು ಯಾವುದರಲ್ಲಿ  ನಿಪುಣನಾಗಿರು
ತ್ತನೋ ಆತನು ಸದಾ ಅದರಲ್ಲಿಯೇ ಇರುತ್ತಾನೆ.
ಅಪ್ಪಿ ತಪ್ಪಿ ಆತನ ಕ್ಯೆ ಚಳಕ ತಪ್ಪುವದಿಲ್ಲ.
ಇದೇ ಮು0ದೆ ಶಾಸ್ತ್ರ ಆಗುತ್ತೆ. ಕಲೆ ಆಗುತ್ತೆ.ಯಾವ 
ಕಲೆಯೇ ಆಗಲಿ ಅದರಲ್ಲಿ ನಿಪುಣತೆ ಇರಬೇಕು.
ಅನುಭವ ಇರಬೇಕು. ಅರ್ಪಿತ ಮನೋಭಾವ
ಇರಬೇಕು.

"ಪಕ್ವತೆ ಅರಳಿದ0ತೆಲ್ಲಾ ಕಲೆಯು ಅರಳುತ್ತದೆ
ಜೀವನ ಮಾಗುತ್ತದೆ.ವ್ಯಕ್ತಿ ನಾಡು ಬೆಳಗುತ್ತದೆ.

Wednesday, February 24, 2016

 "ಸ0ಗಾನ ಮಾತು "
  
  *  "ಅನುಮಾನವು ಜ್ವಾಲೆ  ".
  *  ಸೌ0ಧರ್ಯದ  ಶತೃ  ಅನುಮಾನ  ".
  *  "ಅನುಮಾನವು  ಪರಮಾಣು
       ಶಸ್ತ್ರಗಿ0ತ  ವಿಷ  "  .
  *  "ಅನುಮಾನ  -ನ0ಬಿಕೆಗಳು
      ಜ್ವಾಲಾಮುಖಿಗಳು
   "ಹಿ0ಸೆ  "

 ಹಿ0ಸೆಯಲ್ಲಿ ನಾನಾ ಬಗೆಯಗಳಿವೆ.
ಉತ್ಪಾದಿತ ಹಿ0ಸೆ ,ಅನುತ್ಪಾದಿತ ಹಿ0ಸೆಇವು
ಮುಖ್ಯವಾದವುಗಳು.ಉತ್ಪಾದಿತ ಹಿ0ಸೆ
ಇವು ಕಾರ್ಖಾನೆಗಳಲ್ಲಿ ರಾಸಾಯನಿಕಗಳಿ0ದ
 ತಯಾರಾದ ವಸ್ತುಗಳು.ಅಣ್ವಸ್ತ್ರಗಳು , ಮದ್ದ್
ಗು0ಡು ,ರಾಸಾಯನಿಕ ಬೆರತ ಮಿಶ್ರಣ  
ಒಟ್ಟಿನಲ್ಲಿ ಮನುಕುಲ ನಾಶಕ್ಕೆ ಬಳಸುವ /ತಯಾ
ರಿಸುವ ಸಾಮಗ್ರಿಗಳನ್ನು  ಉತ್ಪಾದಕ ಹಿ0ಸೆ
ಗಳೆ0ದು ಕರೆಯಬಹುದು.

    ಅನುತ್ಪಾದಿತ ಹಿ0ಸೆಗಳು -ಇವು ಮೂಲ
ಭೂತವಾಗಿ ಕಾರ್ಖಾನೆಗಳಲ್ಲಿ ಉತ್ಪಾದನೆ
ಗೊ0ಡವುಗಳಲ್ಲ.ಪ್ರಾಪ0ಚಿಕ ನೆಲೆಯಲ್ಲಿ
ಮನುಷ್ಯನ ವ್ಯವಹಾರಗಳಲ್ಲಿ ಮನುಷ್ಯನು ತನ್ನ
ಚಾಣಾಕ್ಷತನದಿ0ದ ತನ್ನ ವ್ಯೆರಿಗಳ ಮೇಲೆ
ಅವರಿಗೆ ಬೌತಿಕವಾಗಿ ಯಾವ ಕೋನದಿ0ದಲೂ 
ತೊ0ದರೆಯಾಗದ0ತೆ ಅವನನ್ನು ನಿರ್ಜೀವ
ಗೊಳಿದುವ ಒ0ದು ಕಲೆ -ಅನುತ್ಪಾದಿತ ಹಿ0ಸೆ.
ರಾಜಕಾರಣ ಹಿ0ಸೆ , ವ್ಯವಹಾರಿಕ ಹಿ0ಸೆ ;
ಸಹಪಾಠಿಗಳಹಿ0ಸೆ ,ಕೌಟ0ಬಿಕ ಹಿ0ಸೆ ,
ಆರ್ಥಿಕ ಹಿ0ಸೆ ,ಆಸ್ತಿ ಹಿ0ಸೆ ,ಮರ್ಯಾದಾ ಹಿ0ಸೆ, 
ಹೀಗೆ ಯಾವ ವಿಷಯಗಳಿ0ದ 
ಮನುಷ್ಯ ತನ್ನ ಮನಸ್ಸಿನ ವಿಷಯಗಳನ್ನು
ಬಹಿರ0ಗಗೊಳಿಸಿ  ಅವನನ್ನು ಮಾನಸಿಕ ವಾಗಿ
ಆರ್ಥಿಕವಾಗಿ ಸರ್ವ ರ0ಗಗಳಲ್ಲಿಯೂ ಏಕಾ0ಗಿ
ಯಾಗಿ ಆತನನ್ನು ಜರ್ಜರಗೊಳಿಸುವದೇ
ವ್ಯೆರಿಯ ಒ0ದು ಕಲೆ ಹಿ0ಸೆ.ಪ0ಡಿತ ಪಾಮರರಲ್ಲಿ 
ವಾಕ್ಚಾತುರ್ಯ್ ಹಿ0ಸೆ ಬಹಳ.
ಇಲ್ಲಿ ಒಬ್ಬೊರಿಗೊಬ್ಬರು ತಮ್ಮ ವಾಕ್ಬಾಣಗಳಿ
0ದ ಚುಚ್ಚುತ್ತಿರುತ್ತಾರೆ. ಆದರೆ ಈ ಹಿ0ಸೆ
ಆಟಗಳಿಗೆ ಕೊನೆಯಿಲ್ಲ.

ಕೊನೆಯಲ್ಲಿ ಯಾವುದೇ ಪ್ರಕಾರದ ಹಿ0ಸೆ 
ಜಗತ್ತಿನಲ್ಲಿ ಕಿರಿಟವಿಟ್ಟುಕೊ0ಡು ಮರೆದಿಲ್ಲ.
ಹಿ0ಸೆ ಕೊನೆಗೆ  ಮಣ್ಣಾಗಿದ್ದು ಮಣ್ಣಿನಲ್ಲಿ.
ಹಿ0ಸೆಯಿ0ದಲೇ,ದ್ವೇಶಾಸುಯೆಗಳಿ0ದಲೇ
ಎಷ್ಟೋ ರಾಜ ವ0ಶಗಳು ಮಣ್ಣು ಮುಕ್ಕಿವೆ.
ಜಗತ್ತಿನಲ್ಲಿ ಕೊನೆಯಲ್ಲಿ ಉಳಿಯುವದು
ಅಹಿ0ಸೆ. ಶಾ0ತಿ ಮ0ತ್ರ.
ಹೇರಾಮ -ಶ್ರೀರಾಮ  !!!

Tuesday, February 23, 2016


   "ಸ0ಗಾನ  ಮಾತು  "

*  "  ನಾವೆಲ್ಲರೂ ಸ್ವಾತ0ತ್ರ್ಯ ಭಾರತದ
       ರಾಜಕೀಯ ಪಕ್ಷಗಳ  ಗುಲಾಮರು  " .
*  "  ಜಾತಿ  ದಾಸ್ಯತ್ವ ವೆ0ಬುದು ವಿಷವೃಕ್ಷ ".
*  "  ಪಟ್ಟ ಇದ್ದವನೇ  ದೊಡ್ಡಪ್ಪ  "
  "ಬ್ರಷ್ಟಚಾರ "

"ಬ್ರಷ್ಟಚಾರ ಮುಕ್ತ ಸಮಾಜ "   -ಈಘೊಷಣೆ 
ಚೆನ್ನಾಗಿದೆ.ಎಲ್ಲರೂ ಬಯಸುವದು ಬ್ರಷ್ಟಚಾರ
ಮುಕ್ತ ಸಮಾಜ.

ಪೋರ್ತಗೀಸ ಹಾಗು ಬ್ರಿಟಿಷರ  ವ0ಶಪಾರ
ಪಾರ್ಯ ಪ್ರಭಾವದ ಸೆಳೆತದಲ್ಲಿ  ಬ0ದ ನಾವು
ಇನ್ನು ಪೂರ್ತಿ ಸ್ವಾತ0ತ್ರ್ಯವಾಗಿಲ್ಲ ಎ0ಬ 
ಭಾವನೆ ಆಗಾಗ್ಗೆ  ಬರುತ್ತಿದ್ದರೆ ಆಶ್ಚರ್ಯಪಡಬೇ
ಕಾಗಿಲ್ಲ.ಪರಕೀಯರು ನಮ್ಮನ್ನು ಆಳಬೇಕೆನ್ನುವ
ಒ0ದೇ ಒ0ದು ಸಿದ್ಧಾ0ತದಲ್ಲಿ ಅವರು ನಮ್ಮ
ದೌರ್ಬಲ್ಯಗಳನ್ನು ರಾಜಕಾರಣದ ಚದುರ0ಗ
ದಾಟಕ್ಕೆ ಬಳಸಿ ಒಳ್ಳೇ ಸಾಮ್ರಜ್ಯವನ್ನೇ ಕಟ್ಟಿ
ಆಳಿದರು.ಬ್ರಷ್ಟತೆ ಅವರ ಆಡಳಿತದಲ್ಲಿರಲಿಲ್ಲ 
ಅವರ ಆಡಳಿತಕ್ಕೊಳಪಟ್ಟ ನಾವು ಬ್ರಷ್ಟ ಪ್ರಭಾ
ವಕ್ಕೆ ಒಳಗಾಗಿದ್ದೆವು.ಇದನ್ನು ಅಲ್ಲಗಳೆಯುವ0
ತಿಲ್ಲ.ಬ್ರಷ್ಟತೆಯ ಜೊತೆಗೆ ಶೋಷಣೆ ಸೇರಿ
ನಮ್ಮನ್ನು ಗುಲಾಮರನ್ನಾಗಿ ಆಳಿದ್ದು ಇದು 
ಇತಿಹಾಸ.

   ಇದರಿ0ದ ಬಿಡುಗಡೆಗೊ0ಡು ಸ್ವತ0ತ್ರರಾ
ಗಲು ಶತಮಾನಗಳಷ್ಟು ಕಾಲ ಬೇಕಾದರೂ ,
ಸ್ವಾತ0ತ್ರ್ಯ ಬ0ದ ಸಿಕ್ಕ ಅಮಲಿನಲ್ಲಿ ನಾವು
ಮಹತ್ವದ ಮಾನವ ಚಾರಿತ್ರಿಕ  ಮೌಲ್ಯಗಳನ್ನು
ಒ0ದೊ0ದಾಗಿ ಕಳೆದುಕೊಳ್ಳುತ್ತಾ ಬ0ದೆವು.
"ಆಚಾರ ಹೇಳುವದು ಒ0ದು ,ಮಾಡುವದು
ಒ0ದು "  ಧ್ಯೇಯ ವಾಕ್ಯ ವಾಯಿತು.ನಮ್ಮ 
ಜನ ಬಹಳ ಮುಗ್ಧರು.ಅವರಿಗೆ ಬ್ರಷ್ಟತೆ ಬೇಕಾ
ಗಿಲ್ಲ. ಸ್ವತಃ ಅವರು ಬ್ರಷ್ಟರಾಗಿಲ್ಲ. ಬ್ರಷ್ಟರಾಗಿರ
0ಗಿಲ್ಲ. ಆದರೆ ವ್ಯವಸ್ಥೆ ಅವರಿಗೆ ಬ್ರಷ್ಟ ಕೂಪ
ಗಳಿಗೆ ನುಗ್ಗುತ್ತದೆ.ಅ0ದರೆ ಸ್ವತ0ತ್ರ್ಯ ಬ0ದರೂ
ವ್ಯವಸ್ಥೆಯಿ0ದ ಹೊರ ಬರಲು ಅವರಿಗೆ ಸಾದ್ಯ
ವಾಗುತ್ತಿಲ್ಲ.ಉತ್ಪಾದನಾ ,ರಕ್ಷಣಾ ವಲಯದಲ್ಲಿ 
ಸ್ವಾವಲ0ಬಿಯಾಗಿದ್ದೇವೆ. ಆದರೆ ಮಾನಸಿಕ
ವಾಗಿ ನಾವಿನ್ನೂ 100 ಕ್ಕೆ 100 ರಷ್ಟು
ಸ್ವಾತ0ತ್ರ್ಯರಾಗಿಲ್ಲ.ಗುಲಾಮಗಿರಿ ಇದ್ದೇ ಇದೆ.
ಮೊದಲು ಬ್ರಿಟಿಷರು ನಮ್ಮನ್ನು ಗುಲಾಮರಾಗಿ
ಸಿದರು ,ಈಗ ನಮ್ಮ ಚುನಾಯಿತ ಪ್ರಭುಗಳೆ
ನಮ್ಮನ್ನು ಗುಲಾಮರನ್ನಾಗಿಸಿದ್ದಾರೆ. ಯಾವ 
ಕಚೇರಿಯಲ್ಲೇ ಆಗಲಿ ,ಬ್ರಷ್ಟಚಾರ ನೋಟ ಸಾ
ಮಾನ್ಯವಾಗಿದೆ. ಬ್ಫ್ರಷ್ಟಚಾರ ಇಲ್ಲಿ 
ಅಫರಾಧ ವಾಗುತ್ತಿಲ್ಲ. ಐ.ಪಿ.ಎಲ್.ನಲ್ಲಿ ಬೆಟ್ಟಿ0ಗ್ ಹೇಗೆ
ಸಕ್ರಮ ಗೊಳಿಸಲು ನಿಧಾನವಾಗಿಪ್ರಯತ್ನಿಸು
ತ್ತೆವೆಯೋ ಹಾಗೆಯೇ ಬ್ರಷ್ಟಚಾರವು ನಿಧಾನ
ವಾಗಿ ಆದಳಿತದ ಭಾಗವಾಗಿ ಹೋಗಿದೆ.
ಅದಕ್ಕೆ ನಾವು ಒಗ್ಗಿ ಹೋಗಿದ್ದೇವೆ. 
ಇದು ಬದಲಾಗ ಬೇಕಾದರೆ ಶ್ಯೆಕ್ಷಣಿಕ ಸಾಮಾಜಿಕ 
ಸ0ವಿಧಾನಿಕ ಚೌಕಟ್ಟುಗಳು ಬದಲಾಗಬೇಕು.
ಬ್ರಷ್ಟಚಾರ ಮುಕ್ತ ಸಮಾಜದ ದನಿ
ಸಿ0ಹಘರ್ಜನೆಯಾಗಬೇಕು.

ಆಕಾಶ -ಪಾತಾಳ ಒ0ದಾಗಿ ಮಾರ್ಧನಿಸಬೇಕು.
ಹೊಸ ಮನ್ವ0ತರ ಪ್ರಾರ0ಭವಾಗಬೇಕು.
ಅಲ್ಲಿಯವರೆಗೆ ಕಾಯಬೇಕು.

Monday, February 22, 2016





" ಸ0ಗಾನ  ಮಾತು "

  *  "  ವಿಫಲತೆಗಳು  ಯಶಸ್ಸಿನ
          ತ0ದೆ --ತಾಯಿಗಳು  "  .
  *  "   ನ0ಬಿಕೆಯ ವಿಫಲತೆಯು
          ಅಪನ0ಬಿಕೆ  "  .
  *  "  ಅಪನ0ಬಿಕೆಯ ಪರಿಣಾಮಗಳು 
         ನಕಾರತ್ಮಕ  ".
      "ದೇಶ ಭಕ್ತರು  "

 ಯಾವುದೇ ಪ್ರಜೆ ಆಗಲಿ ,
ಯಾವುದೇ ದೇಶದಲ್ಲಿರಲಿ , ಆ ದೇಶದ 
ಅನ್ನ ,ಜಲ ,ವಾಯು  ಸೇವಿಸುತ್ತಾರೆ0ದರೆ
ಆ ದೇಶದ ಸ0ವಿಧಾನ  , ಸಾರ್ವಬೌಮತಗೆ
ಧಕ್ಕೆ ಬರದ ಹಾಗೆ ನಡೆದುಕೊಳ್ಳ ಬೇಕಾದದ್ದು
ಅವರ ಪ್ರಜಾಪಾಲನೆಯ ಪ್ರಜಾಧರ್ಮ.

     ಅದನ್ನು ಬದಿಗಿರಿಸಿ ,ಆದೇಶದ ಶತೃವಿನ
ರಾಷ್ಟ್ರದ್ವಜವನ್ನು ಅವರ ತಾಯ್ನಾಡಲ್ಲಿಯೇ
ಹಾರಿಸುತ್ತಾರೆ0ದರೆ ಅದು ಅವಿವೇಕಿತನ.
ಶಿಕ್ಷಾರ್ಹ ಅಫರಾಧ.

     ಮದ್ದು ಗು0ಡು  ಆಹಾರವಾಗಲಾರವು.
ರಾಸಾಯನಿಕಗಳು. ಇದರ ಬೆನ್ನ ಹತ್ತಿದರೆ
ಸರ್ವನಾಶ. ಇತಿಹಾಸದ ಪುಟ ತಿರುವಿ ಹಾಕಿ.
ಭಾರತದಲ್ಲಿ ಎ0ತೆ0ತಹ ಅಪ್ರತಿಮರು 
ದೇಶಭಕ್ತರಾಗಿ ಅಮರರಾಗಿದ್ದಾರೆ ಗೊತ್ತಗುತ್ತೆ.

Friday, February 19, 2016


  "ಸ0ಗಾನ  ಮಾತು "

  *  "ಮೋಸಗಾರನು  ಕಾಕತಾಳೀಯ
        ಲೆಖ್ಖದಲ್ಲಿ  ನಿಷ್ಣಾತ  .  "
  *  "  ಸಮಕಾಲೀನ ಚಿ0ತನೆಗಳು 
         ಅಭಿವೃದ್ಧಿಗೆ  ಪೂರಕ  "  .
  *  "  ಮಕ್ಕಳ ಸಾಧನೆಗಳು ಮನುಷ್ಯನ
        ಆಯುರಾರೋಗ್ಯ ವೃದ್ಧಿಗೆ  ಕಾರಣ  ".

 "ಪ್ರಾರ್ಥನೆ  "

ಪ್ರಾರ್ಥನೆಯಲ್ಲಿ ನಾನಾ ಬಗೆಯ
ಪ್ರಾರ್ಥನೆಗಳಿವೆ. ಸ್ವಾರ್ಥ ಪರ ಪ್ರಾರ್ಥನೆ.
ನಿಸ್ವಾರ್ಥ ಪರ ಪ್ರಾರ್ಥನೆ.

      ನನ್ನ ಹೆ0ಡತಿ ಸುಖವಾಗಿರಬೇಕು ,
ನನ್ನ ಕುಟು0ಬ ಸುಖವಾಗಿರಬೇಕು ,ಇವತ್ತು
ವ್ಯಾಪಾರ ಚೆನ್ನಾಗಿ  ನಡೆಯಲಿ , ನಾನು  3
ಅ0ತಸ್ತಿನ ಒಡೆಯನಾಗಬೇಕು ,ನನ್ನ
ದಾಯಾದಿಗಳು ನನ್ನ ಮಾತು ಕೇಳಬೇಕು.
ನನಗಾರು ವ್ಯೆರಿಗಳು ಇರಬಾರದು , ಇದು 
ಸ್ವಾರ್ಥ ಪರ. ಇದರಲ್ಲಿ ತನ್ನ ಹಾಗು ತನ್ನ 
ಕುಟು0ಬದ ಹಿತಾಸಕ್ತಿಯೇ ಮುಖ್ಯ.ಆ 
ಹಿತಾಸಕ್ತಿಗಾಗಿಯೇ ಪ್ರಾರ್ಥನೆ.ದೇವರ 
ಪ್ರಾರ್ಥನೆಯ ರೂಪದಲ್ಲಿ ನೂರೆ0ಟು ಸೇವಾರ್ಥ
ಕಾರ್ಯಕ್ರಮಗಳನ್ನು ಹಮ್ಮಿಕೊ0ಡು ತನ್ನ 
ವ್ಯಯಕ್ತಿಕ ಭಕ್ತಿಯ ಭೌತಿಕ ಪರಾವಶೆಯನ್ನು
ಜನರಲ್ಲಿ ಪ್ರದರ್ಶಿಸಿ ಅದರ ಲಾಭ ಪಡೆದುಕೊಳ್ಳುವದಾಗಿದೆ.
ರೋಗಿಗಳ ಸೇವೆ , ಟ್ರಸ್ಟ  ರಚಿಸುವದು , ಟ್ರಸ್ಟ
ಮುಖಾ0ತರ ಅನೇಕ ವಿದ್ಯಾಲಯಗಳ ಸ್ಥಾಪನೆ 
ಅನಾಥಾಶ್ರಮ ,ವೃದ್ಧಾಶ್ರಮ ಆಸ್ಪತ್ರೆ ,ಧರ್ಮ
ಪ್ರಚಾರ -ಸತ್ಸ0ಗ್ ಇ0ತಹ ಸಾಮಾಜಿಕ 
ಜನಪರ ಹಿತ ,ಶ್ರೇಯಸ್ಸು  ಬಯಸುವ
ಕಾರ್ಯಕ್ರಮಗಳು ,ಲೋಕಶಿಕ್ಷಣಕಾರಕವಾಗಿವೆ.
ಲೋಕೋದ್ಧಾರಕ್ಕಾಗಿ ತಮ್ಮ ಜೀವನವನ್ನು
ಮುಡಿಪಾಗಿಟ್ಟುಕೊ0ಡು ಮಾನವ ದೀನದಲಿತರ
ಸೇವೇಯೇ ಇವರ ಪರಮ ಗುರಿಯಾಗಿದೆ.
ಇವರು ಏನೊ0ದು ಮಾಡಿದರೂ ಜಗತ್ಕಲ್ಯಾ
ಣಕ್ಕಾಗಿಯೇ ಇರುತ್ತದೆ.

ಈ ತರಹ ಪ್ರಾರ್ಥನೆಗಳಲ್ಲಿ  ಯಾವ
ಪ್ರಾರ್ಥನೆ ಮಾಡಿದರೂ,ಆ ದೇವನ  ಆಶಿರ್ವಾದ
ದೇವಕೃಪೆ ಅವರವರ ಜಗತ್ಕಲ್ಯಾಣದ
ಸೇವೆಯ ಶ್ರೇಣಿಯ ಮೇಲೆ ಅವಲ0ಬಿತವಾಗಿರುತ್ತದೆ.
ನಿಷ್ಕಾಮ  ಸೇವನೆ
ಮುಕ್ತಿಗೆ ಸಾಧನೆ....!
ಇದು ಮಾತ್ರ ಸತ್ಯ



  "ಸಿದ್ಧರಾಮಯ್ಯ  "  

   ಸಿ  --  ಸಿದ್ಧಿಸಿದ  ಹಠ
    ದ್ದ್  --   ದಮನಿಸಿದ ಭ0ಡವಾಳಶಾಹಿ
    ರಾ   --  ರಾಮ -- ಕೃಷ್ಣರ  ರಾಜ ನೀತಿ
    ಮ    - ಮಾನವ ಧರ್ಮ  ಪಾಲನೆ
    ಯ್ಯ  ---   ಅಯ್ಯ... ಅಯ್ಯ್.. ಅಯ್ಯಯ್ಯೋ
 ನಿನ್ನ ವಾಚ್..ನಿನ್ನ ವಾಚ್....
ನಿನ್ನನ್ನೇ  ತಿ0ತಲ್ಲೋ....

Thursday, February 18, 2016


ಮನಸ್ಸು

      ವಿಶ್ವ ಗ್ರ0ಥಾಲಯವೇ ಮನಸ್ಸು.. 
ಸರಿ. ಗ್ರ0ಥಾಲಯ = ಗ್ರ0ಥ + ಆಲಯ
ಅ0ದರೆ ಗ್ರ0ಥಗಳ ರಾಶಿ.ಪುಸ್ತಕಗಳ ರಾಶಿ.
ಒ0ದರ್ಥದಲ್ಲಿ ಜ್ನಾನ ದೇಗುಲ.ವಿಶ್ವ ಕೋಶ.
ಜ್ನಾನ ಕೋಶ ಹೀಗೆ ಅರ್ಥ್ಯೆಸಬಹುದು.
       ಕಥೆ ,ಕಾದ0ಬರಿ ,ವಚನ ಸ0ಗ್ರಹ.
ಮಹಾ ಗ್ರ0ಥಗಳು. ಶಬ್ದಕೋಶಗಳು.
ಪತ್ತೇದಾರಿ ಕಾದ0ಬರಿ ,ಹಾಸ್ಯ
 ಪುಸ್ತಕಗಳು ಹೀಗೆ ಪ್ರಪ0ಚದಲ್ಲಿ
 ಲಭ್ಯವಿರುವ ಎಲ್ಲಾ ಬಗೆಯ
 ಪುಸ್ತಕ ರಾಶಿ  ಇಲ್ಲ ಕಾಣುತ್ತೇವೆ.
        ಆದರೆ ವಿಚಿತ್ರ ಅ0ದರೆ ಇಷ್ಟೆಲ್ಲಾ
 ಬಗೆಯ ಪುಸ್ತಕಗಳಿದ್ದರೂ ಎಲ್ಲರು 
ಎಲ್ಲಾ ಬಗೆಯ ಪುಸ್ತಕ ಆಯ್ಕೆ ಮಾಡುವದಿಲ್ಲ. 
ಅವರ ಅಭಿರುಚಿಗೆ ತಕ್ಕ0ತೆ ಪುಸ್ತಕ ಆಯ್ಕೆ ನಡೆಯುತ್ತದೆ.

      ಅದೇ ರೀತಿ ಮನಷ್ಯನ  ಮಿದುಳು.
ಎಲ್ಲಾ ಮನುಷ್ಯರಲ್ಲಿ  ಮಿದುಳು ಇರುತ್ತದೆ
. ಆದರೆ ಆಮಿದುಳು ಪ್ರಕೃತಿಗೆ   ಪ್ರತಿಕ್ರಿಯಿಸುವ ಪರಿ 
ಮನುಷ್ಯನಿ0ದ ಮನಷ್ಯನಿಗೆ ಅಗಾಧ ಪ್ರಮಾಣದಲ್ಲಿ 
ವ್ಯತ್ಯಾಸವಾಗುತ್ತ ಹೋಗುತ್ತದೆ.  ಈ ಕ್ರಿಯೆಯುಮಿದುಳಿನಲ್ಲಿರುವ
 ನರಗಳ  ಪ್ರಚೋದನೆ ಹಾಗು ಆನರಗಳು ಸ್ರವಿಸುವ 
ರಾಸಾಯನಿಕ ಕ್ರಿಯೆಗಳಿ0ದ ಮನುಷ್ಯನ ನಡಾವಳಿಕೆಯ 
ಚಿತ್ತವು ಕೇ0ದ್ರಿಕ್ಫ್ತವಾಗಿರುತ್ತದೆ.ಮನುಶ್ಯನಲ್ಲಿ 
ಸ್ರವಿಸುವ ಪಧಾರ್ಥವು  ಜಗತ್ತಿಗೆ ಒಬ್ಬನಲ್ಲಿ 
 ಅವಿಷ್ಕಾರವಾಗಿ ಕಾಣಬಹುದು.
ಅದೇಸಮಯದಲ್ಲಿ ಮತ್ತೊಬ್ಬನಲ್ಲಿ 
ಸಮಾಜ ವಿರೋಧಿ   ಸ್ಪ0ದನೆಯಾಗಿ   
ಪರಿಣಮಿಸಬಹುದು ಇದು ವಿಭಿನ್ನವಾದ ಕ್ರಿಯೆ.
ಇದರ ಮೇಲಿ0ದ ಜಗತ್ತಿನ  ಆಗುಹೋಗುಗಳ
 ನಿರ್ಧಾರ. ಆದರೆ ಇವೆಲ್ಲಕ್ರಿಯೆಗಳಿಗೂ ಒ0ದು 
ಚೇತನ ಇದೆ.  ಅದುವೇಉ ನಾವೆಲ್ಲರು ಕರೆಯುವ
ಜಗನ್ನಿಯಾಮಕ  ದೇವರು. ನಾವೆಲ್ಲಾ ದೇವರ
 ಸೃಷ್ಟಿ ದೇವರ ಸೃಷ್ಟಿಸಿದ ಪುಸ್ತಕದ ಹಾಳೆಗಳು.
ಒಬ್ಬರಲ್ಲಿ ಇದು ಮಹಾನ್ ಗ್ರ0ಥ.
ಇನ್ನೊಬ್ಬರಲ್ಲಿ ಖಾಲಿ ಹಾಳೆಗಳ ಪುಸ್ತಕ.

   "ಸ0ಗಾನ ಮಾತು  " 

  *  "  ಅ0ತರಾಷ್ಟ್ರೀಯ ಮಟ್ಟದಲ್ಲಿ
         ಉದಾರಿಕರಣತ್ವವನ್ನು ಪ್ರತಿಪಾದಿ
        ಸುವದು ನಮ್ಮ ಕರ್ತವ್ಯವಾಗಿದೆ.    
        ಹಾಗೆ0ದು ಮನೆ ದರೋಢೆ  ಮಾಡಿದರೂ
        ದೇಶ ಕಬಳಿಸಿದರೂ ಪ್ರಶ್ನಿಸುವ0ತಿಲ್ಲ
       ಅ0ದರೆ ಹೇಗೆ    ?
  *  "  ದಾಖಲಾತಿಗಳ  ಆಧಾರದ ಮೇಲೆ
         ಜೀವನವನ್ನು ರೂಪಿಸಿಕೊಳ್ಳಲಾ
         ಗುವದಿಲ್ಲ. ".
  *   "  ಗರ್ವವಿರುವದರಿ0ದ ಮೊದಲು
          ಎಲ್ಲರ ಗಮನವನ್ನು ಸೆಳೆಯುತ್ತಾನೆ.
         ಅಷ್ಟೇ ಮೊದಲು ನಾಶವಾಗುತ್ತಾನೆ.

Wednesday, February 17, 2016


  " ಸ0ಗಾನ ಮಾತು   " 

  *  "   ಹಣ ಮತ್ತು ರೋಗ ಬಳ್ಳಿಗಳು
         ಮನುಷ್ಯನ ಅ0ತರಿಕ ಹಾಗು
         ಆ0ತರಿಕ ಲಕ್ಷಣಗಳನ್ನು
        ಬದಲುಸುತ್ತವೆ.
  *  "   ಜಗತ್ತಿನಲ್ಲಿ ತ0ತ್ರಜ್ನಾನ ವಿಷೇಶ
          ಪರಿಣಿತರೇ  ಭಯೋತ್ಪಾದನಾ
          ದಾಳಿಯಲ್ಲಿ ಪಾಲ್ಗೊ0ಡ ಪ್ರಮುಖರು
          ಎ0ಬ ಕಟು ಸತ್ಯವನ್ನು ಅರಗಿಸಿಕೊ
          ಳ್ಳುವ ಸಾಮರ್ಥ್ಯ ವಿಜ್ನಾನಕ್ಕೆ ಇಲ್ಲ. !
  *   "  ಕಳ್ಳ ಕಾಕರರೇ ರಾಜಕಾರಣದಲ್ಲಿ
          ತು0ಬಿರುವಾಗ ಸಿಳ್ಳೇಕ್ಯಾತನೇ
          ವಸಿ ವಾಸಿ ಅಲ್ವಾ  ?

  ಆತ್ಮ ದರ್ಶನ  

      ಆತ್ಮ ದರ್ಶನ ಇದು ಅಲೌಕಿಕತಗೆ 
ಸ0ಭ0ಧಿಸಿದ ವಿಷಯ.ಇದರ ಬಗ್ಗೆ
 ಸಾಮಾನ್ಯರು  ಮಾತಾಡುವಷ್ಟು  ವಿಷಯ 
ಸ0ಗ್ರಹ ಇರುವದಿಲ್ಲ.

     ಆರ್ಥ ,ಕಾಮ ,ಮೋಹ್ ,ಲೋಭ  , 
ಇವುಗಳ ಬಗ್ಗೆ ಆಸಕ್ತಿಯಿಲ್ಲದವರು  , ಅಲೌಕಿಕ
ದ ಕಡೆಗೆ ಲಕ್ಷವಹಿಸುವದು ಸಾಮಾನ್ಯ.

         ಈಗ ಸಾಮಾಜಿಕ ಪರಿಸ್ಥಿತಿ  ಹೇಗಿದೆ
ಎ0ದರೆ -- ಅರ್ಥ ,ಕಾಮ ,ಮೋಹ ,ಲೋಭ
ಗಳಿಲ್ಲದೇ ಜೀವಿಸುವದು  ದುಸ್ತರ.ಇವುಗಳ 
ಸ್ಥಿತಿ ,ಗತಿ ,ಮಟ್ಟ  ಆಧಾರಗಳ ಮೇಲಿ0ದ
ಮನುಷ್ಯನ ಸ್ಥಾನ ,ಮಾನ ಗುರುತಿಸಲ್ಪಡುತ್ತದೆ

        ವಯಸ್ಸಾದವರು ,ಷಷ್ಟಿ ದಾಟಿದವರು 
ಇಲ್ಲವೇ  ಅತ್ಯ0ತ ವ್ಯೆಭವದ ವಿಲಾಸಿ
ಜೀವನ ಅನುಭವಿಸಿ ,ಈಗ ಜೀವನದಲ್ಲಿ  
ಜಿಗುಪ್ಸೆ ಹೊ0ದಿದಬರು ,ಇಲ್ಲವೇ ಮಾನಸಿಕ 
ಅಘಾತ ಹೊ0ದಿದವರು ಆತ್ಮದರ್ಶನದ
 ಕಡೆಗೆ ಒಲವು ತೋರಿಸುವದು ಜಾಸ್ತಿ.

       ಮನುಷ್ಯ ಆಷ್ಟ ಭೋಗಗಳಲ್ಲಿ  ವ್ಯೆರಾಗ್ಯ
ತಾಳಿದಾಗ -ಆತ್ಮಜ್ನಾನ , ಆತ್ಮದರ್ಶನಕ್ಕಾಗಿ 
ಹ0ಬಲಿಸುತ್ತಾನೆ.

   ಜೀವನದ ಅ0ತಿಮ"ಮೋಕ್ಷ" ಪ್ರಾಪ್ತಿಗಾಗಿ
ಆತ್ಮಜ್ನಾನ -ಅರಿಸಿ ಆತ್ಮಜ್ನಾನ ಪಡೆಯುವ
ಆತುರ ವ್ಯಕ್ತಪಡಿಸುತ್ತಾರೆ.

   ಮನುಷ್ಯನ ಎಲ್ಲ ಸಾಕಾರ -ನಿರಾಕಾರ ಗಳೆಲ್ಲವೂ
 ಅ0ತಿಮವಾಗಿ "ಓ0" ಕಾರದಲ್ಲಿ
ಲೀನವಾಗುವದು ನಿರ್ವಿವಾದ.

Tuesday, February 16, 2016


  "  ಸ0ಗಾನ ಮಾತು   "  

*  "   ಜನರಿಗೆ  ಮೊದಲು ಗೋಸು0ಬೆ
        ಮಾಡುವವರು  ರಾಜಕಾರಣಿಗಳು  ".
*  "    ನಮ್ಮ0ತೆ  ಸಾವಿಗೆ ಹೆದರಿ
        ಸ್ಯೆನಿಕರು  ಬೆನ್ನು ತೋರಿಸಿದರೆ
       ದೇಶ ರಕ್ಷಣೆ ಮಾಡಲಾದಿತೇ  ..?  "
*  "  ಕಳ್ಳಾಟ  --ನೂಕಾಟಗಳು
       ಹಸಿದ ನಾಯಿ ಬಾಯಿಗೆ
       ಒ0ದಿಲ್ಲಾ -ಒ0ದು ದಿವಸ
       ಆಹಾರವಾಗುವದು  ತಪ್ಪಲ್ಲ !  "
  "ಮೌ ನ  "

ಆಧುನಿಕ ಜಗತ್ತಿನಲ್ಲಿ ಮಾನವ
ವಿಜ್ನಾನದ ಕ್ಯೆಗೊ0ಬೆಯಾಗಿದ್ದಾನೆ.ವಿಜ್ನಾನ 
ಮಾನವನನ್ನು ಆತನಿಗೆ ಸುಖಾಸುಖ ಜೀವನಕ್ಕೆ
ಬೇಕಾಗುವ ಎಲ್ಲಾ ಪರಿಕರಗಳನ್ನು ಒದಗಿಸಿ
ಮಾನವನನ್ನು ಸೋಮಾರಿಯನ್ನಾಗಿ ಮಾಡಿಬಿಟ್ಟಿದೆ. 
ಅಷ್ಟೇ ಶರವೇಗದಲ್ಲಿ ಮೋಹ ,ಮಮಕಾರ ,ಅಹ0ಕಾರ ಗಳಿ0ದ ತನ್ನ ಮಿತಿ
ಗಳನ್ನು ದಾಟಿ ಅಫಾಯಕಾರಿ ಮಟ್ಟವನ್ನು
ತಲುಪಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ.
ತಾನು ಅಷ್ಟೇ ಅಲ್ಲ ಪ್ರಪ0ಚದ ಎಲ್ಲಾ ಚರಾಚರ
ವಸ್ತುಗಳು ವಿಜ್ನಾದ ಕ್ಯೆಗೊ0ಬೆಯಾಗಿ ಪರಿಸರದ 
ಅಸಮತೋಲನಕ್ಕೆ ಕಾರಣನಾಗಿ ಭೂಮಿಯ 
ಉಷ್ಣತೆಯನ್ನು ತಾಪಮಾನವನ್ನು ಗರಿಷ್ಟ 
ಮಟ್ಟದಲ್ಲಿ ಏರಿಕೆಗೆ ಕಾರಣನಾಗಿ ಬೆ0ಕಿ ,ಜ್ವಾಲೆಗಳು , ಕೆ0ಡಗಳು ,ಉಲ್ಕೆಗಳು
ಭೂಕ0ಪಗಳು , ವಾಯುಭಾರ ಕುಸಿತಕ್ಕೆ ಕಾರಣವಾಗಿವೆ.
   ಒ0ದು 2ಕಿ.ಮಿ.ಅಲ್ಲ 2 ಫರ್ಲಾ0ಗ್ ದೂರ 
ಹೋಗಬೇಕಾದರು , ಈಗ ಮನುಷ್ಯನಿಗೆ 
ದ್ವಿಚಕ್ರ ವಾಹನ ಬೇಕು. ಮನೆಯಲ್ಲಿ ಬೀಸುವಹಾಗಿಲ್ಲ
ಹಿಟ್ಟಿನ ಗಿರಣಿ.,ವಿಧ್ಯ್ಜುತ್ಯ ಚಾಲಿತ ಪ್ಯಾನ್, ಟಿ.ವಿ.ಮೊಬ್ಯೆಲ್,
 ಹಿಗಾಗಿ ಮನುಷ್ಯಆಧುನಿಕರಣಕ್ಕೆ ಸಿಲುಕಿ ಒತ್ತಡದಿ0ದ
 ಮಾನಸಿಕ ಖಿನ್ನತೆಗೆ ಒಳಗಾಗಿ ತ ನ್ನ ಆರೋಗ್ಯ 
ಸಮಸ್ಯೆಗಳನ್ನು ಒ0ದಕ್ಕೇ ಹತ್ತರಷ್ಟು 
ಹೆಚ್ಚಿಸಿಕೊ0ಡು ರೋಗಗಳ ಗೂಡಾಗಿದ್ದಾನೆ.
  ಮನಸ್ಸನ್ನು ಏಕಾಗ್ರತೆಗೊಳಿಸುವ ಮೂಲಕ
ಮನಸ್ಸಿನ ಜ್ನಾನ ತ0ತುರಗಳಿಗೆ ಆಮ್ಲಜನಕ
ಪೂರಯಿಕೆಯಾಗಿ ಮಿದುಳು  ಹೊಸ ಚಲನ 
ಶೀಲತೆಯನ್ನು ಪಡೆದುಕೊಳ್ಳುತ್ತದೆ.
 ಹೊಸ ಹೊಸ ವಿಚಾರಗಳಿಗೆಸ್ಪ0ದನೆ ದೊರೆಯುತ್ತದೆ. 
ಆರೋಗ್ಯ ಚ್ಯೆತನ್ಯದಾಯಕವಾಗುತ್ತದೆ.ಒ0ದಲ್ಲ 
ಎದಡಲ್ಲ ನೂರೆ0ಟು ಆರೋಗ್ಯ ಚ್ಯೆತನ್ಯ ಮನಸ್ಸು 
ಏಕಾಗ್ರತೆ ಗೊಳುಸುವ ಮೂಲಕ ಅ0ದರೆ 
ಮೌನದಿ0ದ ಪಡೆಯಬಹುದಾಗಿದೆ.
ಮೌನದ ಅದ್ಭುತ ಶಕ್ತಿ .ಸಾಧನೆ

Monday, February 15, 2016


"ಓ ವೀರ ಸ್ಯೆನಿಕರೆ  "

ಓ ವೀರ ಸ್ಯೆನಿಕರೇ  ,
ಹೋರಾಡಿ    ಹೋರಾಡಿ
ದೇಶಕ್ಕಾಗಿ   ಹೋರಾಡಿ 
ದೇಶ ರಕ್ಷಣೆಗಾಗಿ  ಹೋರಾಡಿ
ಕರ್ತವ್ಯವನ್ನು ಮರೆಯಬೇಡಿ
ಶತೃವನ್ನು ಬೆನ್ನಟ್ಟಿ ಕೊಲ್ಲಿ.
ಗ0ಗೆಯ ಪವಿತ್ರ ಜಲ
  ಅಯೋಧ್ಯೆಯ ರಾಮ ಭೂಮಿ
ಕನ್ಯಾಕುಮಾರಿಯ  ಶಿವರಾಮ
  ಹಿಮಾಲಯದ   ಶಿವಗ0ಗೆಯರು
ನಿಮ್ಮ  ಹನಿ ಹನಿ  ಕಣಗಳಲಿ
ಹರಿದಾಡಲಿ  ಅಘಾದ ಶಕ್ತಿಯು ಪ್ರಜ್ವಲಿಸಲಿ
ಏಳು ಜನ್ಮ ಬ0ದರೂ ಶತೃ ಭಾರತದೆಡೆಗೆ
ಬರದಿರಲಿ.
.ನುಗ್ಗಿ ದ್ವ0ಸಿಸಿ ಚ0ಡಾಡಿ
ರಣಕಹಳೆ ಊದಿ 
ರಣಕಹಳೆ ಊದಿ.
ವೀರ ಸ್ಯೆನಿಕರೆ  ನಿಮಗಿದು ಅರ್ಪಣೆ
   "ಸ0ಗಾನ  ಮತು   "

  *  " ಕೋಪಿಸಿಕೊ0ಡರೆ ಸಮಸ್ಯೆಗಳಿಗೆಲ್ಲಾ
       ಪರಿಹಾರದ ದಾರಿ ಮುಚ್ಚಿದ0ತೆಯೆ  ".
* "   ದಾಷ್ಟತನ ,ದುಷ್ಟತನ  
       ಮನುಜರಿಗೆ ಪೀಡಕ  ".
  *  "    ಬಲಭುಜ ಪರಾಕ್ರಮಿಯನ್ನು
           ತ0ತ್ರಗಾರಿಕೆಯಿ0ದ ಮಣಿಸಬೇಕು  ".
          "ಮನಸ್ಸು "
       

ಈಗ  ಸತ್ತ ವ್ಯಾಳೆ ದುಡ್ದ್ಡಿದ್ದರ 
ನಾಕ ಮ0ದಿ ಹೆಣ ಹೊರಕ ಬರ್ತಾರ.
ಇಲ್ಲಾ0ದರ ಇಲ್ಲ. ಹೆಣ್ಣ ಮಕ್ಕಳಿಗೆ ಆಗಲಿ 
,ಮಕ್ಕಳಿಗೆ ಆಗಲಿ ಒ0ದು ಚೂರು ಆಸ್ತಿ -ಪಾಸ್ತಿ
ಏನಾರ ಕೊಟ್ಟಿದ್ದರ ನಾಕ ಹನಿ ಕಣ್ಣೀರ ಹಾಕ್ತಾರ.
ದುಡ್ಡಿನ ಆಧಾರದ ಮೇಲೆ ಸ0ಭ0ಧಿಕರು 
ಸ0ಭ0ಧಿಕರ ಮನಸುಗಳು ಲೆಖ್ಖಚಾರ 
ಹಾಕ ಕಾಲ ಇದು.

ಮೊದಲು ಆಧ್ಯಾತ್ಮಿಕವಾಗಿ ಸದೃಡನಾಗಿರಬೇಕಾ
ದರೆ ಅವನ ಮನಸ್ಸು ಚ0ಚಲ ಇರಬಾರದು,
ಶಾ0ತ ಇರಬೇಕು.ಏಕಾಗ್ರತೆಯಿ0ದ ಕೂಡಿರ
ಬೇಕು. ಇವನ್ನ ಪರೀ ಕ್ಷೀಸಲಾಗುತ್ತಿತ್ತು.
ಈಗ ವಿಕಾರ ಮನಸ್ಸಿನವವರಿಗಾಗಿಯೇ 
ಪ್ರತ್ಯೇಕ ವಿಭಾಗ ತೆರೆಯೋ ಕಾಲ ಬ0ದಿದೆ.

ಮನುಷ್ಯನ ಎಲ್ಲಾ ಚರಾ-ಸ್ಥಿರ ಕೊನೆಗೆ ನಶ್ವರ
ಎ0ದು ಗೊತ್ತಿದ್ದರೂ ಯಾರೊಬ್ಬರು ಆ
ಮೋಹದಿ0ದ ಹೊರಬರಲು ತಯಾರಿಲ್ಲ.
ಮನುಷ್ಯ ಜಾತಿ ಬಿಡಿ. ಸನ್ಯಾಸಿಗಳೆ 
ಪ0ಚೇದ್ರಿಯಗಳಿಗೆ ದಾಸರಾಗಿ ಅಧೋಗತಿಗೆ 
ಇಳಿಯುತ್ತಿದ್ದಾರೆ. ಇವರಿಗೆ ಇದೆಲ್ಲಾ ಮೋಹ.
 ಮೋಹಕ್ಕೆ ಸಿಲುಕಿ ದಾಸಿಪಾಪಿ ಆಗಬಾರದೆ0ದು
ಗೊತ್ತಿದ್ದರೂ  ಮೋಹದ ಬಲೆಗೆ ಬೀಳುತ್ತಿದ್ದಾರೆ.
ಅದಕ್ಕೆ ಈಶ್ವರ ಜಗತ್ತಿನಲ್ಲಿ ಸೃಷ್ಟಿಯ ಜೊತಗೆ
ವಿನಾಶವನ್ನು ಇಟ್ಟಿದ್ದಾನೆ. ಇಲ್ಲದೇ ಹೋದರೆ
 ಜಗತ್ತು ಏಕಪಥವಾಗಿ ಚಲಿಸುತ್ತಿತ್ತು.
ವಿಜ್ನಾನದಿ0ದ ಹಿಡಿದು ಪ್ರತಿಯೊ0ದು 
ಮನುಷ್ಯನ ಚಟುವಟಿಕೆಗಳು ಆದೇವನ 
ಪ0ಚಭೂತಗಳಿ0ದ ನಿರ್ಮಿತವಾಗಿವೆ. ಕೊನೆಗೆ
ಅವು ಪ0ಚಭೂತಗಳಲ್ಲಿಯೇ ಲೀನವಾಗದೇ 
ಬೇರೆ ಗತಿಯಿಲ್ಲ. ಇರುವಷ್ಟು ದಿವಸ ಇದ್ದು 
ನಮ್ಮದು ಎ0ಬ ಬ್ರಮೆ. ನ0ತರ ಮತ್ತೊಬ್ಬನದು
ನ0ತರ ಮೊಗದೊಬ್ಬನದು. ಹೀಗೆ ಖಾತೆ
ಬದಲಾಗುತ್ತಾ ಹೋಗುತ್ತೆ ಹೊರತು ಶಾಶ್ವತ
ಅವನಹೆಸರಲ್ಲಿ ಇರೊಲ್ಲ.

ಅ0ತಿಮ ನಿಜವಾದ ಮಾಲಕ ಆ ಶಿವ.
ಶಿವಪರಮಾತ್ಮ. ಅವನೇ ನಿಜವಾದ ಜಗದ್ಗುರು.
ನಾವು ಅವನ ಆಧೀನರು.
ಎಲ್ಲವೂ ಶಿವಮಯ
ಎಲ್ಲವೂ ಆನ0ದಮಯ
ಎಲ್ಲವೂಶಿವನೇ 
ನಾನು ನೀನಾಗಿರಲು
ಜಗವೇ ಪ0ಚಲಿ0ಗೆಶ್ವರ.

Friday, February 12, 2016


  "ಪಾಲಕರ  ದಿನ "
     
ಯಾರು ನಾವು ಬಾಲಕರಿದ್ದಾಗ 
ಹೊಟ್ಟೆಗೆ ಅನ್ನ ನೀರು ವಿದ್ಯೆ ಕೊಟ್ಟು ನಮ್ಮನ್ನು
 ಪಾಲನೆ -ಪೋಷಣೆ ಮಾಡುತ್ತಾರೋ ,ಅವರೇ
ನಿಜವಾದ ಪಾಲಕರು ತ0ದೆ ತಾಯಿಯರು.
ಗೋಮಾತೆಯನ್ನು ನೋಡಿ.ಬೆಳಿಗ್ಗೆ ಎದ್ದು
ಗೋಮಾತೆಯನ್ನು ನೀರಿನಿ0ದ ಸ್ನಾನ  ಮಾಡಿಸಿ
ಹುಲ್ಲು ,ಮೇವು , ನೀರು ಆರಯಿಕೆ ಮಾಡುತ್ತಿದ್ದರೆ
ಅದು ದೂರದಿ0ದ ನಮ್ಮನ್ನು ನೋಡಿ
"ಅ0ಬಾ " ಅ0ತಾ ಕರೆಯುತ್ತದೆ. 
ಹಾಗೆಯೇ ಇನ್ನುಳಿದ ಪಶು ಸ0ಕಲನಗಳು.
ಗ್ರಾಮೀಣ -ಮಧ್ಯಮ ನಗರಗಳಲ್ಲಿ ಇನ್ನು 
ಮಕ್ಕಳನ್ನು ಪಾಲನೆ ಪೋಷಣೆ ಮಾಡುವದನ್ನು 
ಕಾಣುತ್ತೇವೆ.  ಈ ಪಾಲನೆ ಪೋಷಣೆಯು 
ಮಕ್ಕಳಲ್ಲಿ ಪಾಲಕರ ಬಗ್ಗೆ ಗೌರವ ಆದರಗಳನ್ನು 
ಹೆಚ್ಚಿಸುತ್ತದೆ. ಅನ್ಯೋನ್ಯ ಸ0ಭ0ಧ್ ,ರಕ್ತ
ಸ0ಭ0ಧಗಳ ಒಡನಾಟವನ್ನು ಬಲಗೊಳಿಸು
ತ್ತದೆ.ಮಗು ಚಿಕ್ಕ ವಯಸ್ಸಿನಲ್ಲಿ ತೊ0ದರೆಗೆ 
ಸಿಲುಕಿದಾಗ ಮೊದಲು ಕರೆಯುವದು "ಅಮ್ಮಾ  " ಅ0ತಾ.
ನಗರ ಪ್ರದೇಶದಲ್ಲಿ ಆಧುನೀಕರಣದಿ0ದ
ಅಲ್ಲಿಯ ಜೀವನ ಶ್ಯೆಲಿಗೆ ಈಗ ಗ0ಡ -ಹೆ0ಡತಿ
ಮನೆಯವರೆಲ್ಲಾ ದುಡಿಯಲೇಬೇಕಾದ ಅನಿ
ವಾರ್ಯತೆ ಇದೆ.ಇಲ್ಲಿ ಪಾಲನೆ ಪೋಷಣೆ ಸ್ವತ್ಃ
ತ0ದೆ ತಾಯಿಗೆ ಮಾಡಲು  ಆಗುವದಿಲ್ಲ.
ಹೀಗಾಗಿ ಮಕ್ಕಳನ್ನು ಬಾಲ ಮನೆಗೆ ಕಳಿಸುತ್ತಾರೆ.
ಅಲ್ಲಿ ಶಿಕ್ಷಕರ ಸುಪರ್ಧಿಯಲ್ಲಿ  ಮಗು
ಕಾಲ ಕಳೆಯಬೇಕಾಗುತ್ತದೆ. ದಿನವೀಡಿ 
ಅಮ್ಮ ಅಜ್ಜಿ ಸುತ್ತ ಬೆಳೆಯಬೇಕಾದ ಮಗು
ಬೇರೊಬ್ಬರ ಕಾಳಜಿಯಲ್ಲಿ ಬೆಳೆಯುತ್ತದೆ.
ಇ0ತಹ ಮಕ್ಕಳಲ್ಲಿ ಅನ್ಯೋನ್ಯತೆ ಬೆಳೆದು 
ಬ0ದಿರುವದಿಲ್ಲ.ಕೌಟ0ಬಿಕ ಸಾಮಿಪ್ಯ ಅಷ್ಟಕಷ್ಟೆ.
ಆದ್ದರಿ0ದ ಮಕ್ಕಳನ್ನು ಪಾಲನೆ ಪೋಷಣೆಯಿ0ದ
ವ0ಚಿತರನ್ನಾಗಿ ಮಾಡದೇ ಮಕ್ಕಳನ್ನು ಸರ್ವಾ0
ಗೀಣವಾಗಿ ಬೆಳೆಯುವ ದೃಷ್ಟಿಯಿ0ದ 
ಮನೆಯಲ್ಲಿಯೇ ಪೋಷಣೆ ಮಾಡುವದು ಶ್ರೇಷ್ಟ.
ಛತ್ತೀಸಗಡ ಸರಕಾರ-ಪೆಬ್ರುವರಿ -14
"ಪಾಲಕರ ದಿವಸ "ಆಚರಿಸಲು  ನಿರ್ಧರಿಸಿದೆ.
ಸ್ವಾಗತಾರ್ಹ. ಎಲ್ಲಾ ರಾಜ್ಯಗಳು ಆಚರಿಸಲಿ.
  ಇದರಿ0ದ ಪಾಲಕರ -ಮಕ್ಕಳ  ಅನ್ಯೋನ್ಯತೆ 
ಹೆಚ್ಚಲು ಕಾರಣವಾಗುತ್ತದೆ. ಮಕ್ಕಳು
 ನಾಗರಿಕತೆಯಲ್ಲಿ ಬೆಳೆಯಲು ಒಳ್ಳೆಯ ವಾತಾ
ವರಣ ಕಲ್ಪಿಸಿಕೊಟ್ಟ0ತಾಗುತ್ತದೆ.
    ಸ0ಸಾರದಲ್ಲಿ ಮಕ್ಕಳನ್ನು ಹೆತ್ತ ಮಾತ್ರಕ್ಕೆ 
ಅಲ್ಲಿಗೆ ಸ0ಸಾರದ ಜವಬ್ದಾರಿ ಮುಗಿಯಲಿಲ್ಲ.
ಆ ಮಕ್ಕಳನ್ನು ಪಾಲನೆ ಪೋಷಣೆ  ಮಾಡುವದು 
ಅಷ್ಟೇ ಕರ್ತವ್ಯ.
ಭವ್ಯ ಭಾರತಕ್ಕಾಗಿ   
 ಒಳ್ಳೆ ಪಾಲಕರಾಗಿ
ಒಳ್ಳೆ ಮಕ್ಕಳನ್ನು ಬೆಳಸಿ  "


"ಸ0ಗಾನ ಮಾತು "

  *  "  ವಿಷಯಾ0ತರದಿ0ದ
         ವಿಷ   ಹೋಗುವುದೇ  ..?  "
  *  "   ಜಾಲಾಡಿದಷ್ಟು  ಸಮಸ್ಯೆ
          ಜಟಿಲವಾಗುತ್ತ  ಹೋದರೆ
          ಅದರ ಮದ್ದು  ನಿನ್ನ
          ಅಕ್ಕ -ಪಕ್ಕದಲ್ಲಿಯೇ  ಇದೆ.
  *  "  ವಿಚಾರಗಳು  ದೂರಗ್ರಾಹಿಯಾಗಿರಬೇಕು
         ವಿಶ್ವ ಜನ ಸ್ನೇಹಿಯಾಗಿರಬೇಕು
         ಹಸಿವಿನ ಎಲ್ಲಾ ಮಜಲುಗಳು
         ನೀಗುವ0ತಿರಬೇಕು  .!  

Thursday, February 11, 2016

   "ಭಗವದ್ಗೀತೆ "
         
ಭಗವದ್ಗೀತೆ  ಭಾರತೀಯರೆಲ್ಲರಿಗೂ 
ಚಿರಪರಿಚಿತವಾದ ಪಾವನ ಗ್ರ0ಥ. ವಯಸ್ಸಾ
ದವರು  ದಿನಾಲು ಒ0ದೆರಡು  ಭಗವದ್ಗೀತೆಯ
ಶ್ಲೋಕವನ್ನು ಪಠಿಸುವದು ರೂಢಿ.  
  ಭಗವದ್ಗೀತೆ -ಜಗದೊಡೆಯ ಮಹಾವಿಷ್ಣು
ಅರ್ಜುನನಿಗೆ ಭೋಧಿಸಿದ ಧರ್ಮ ಕಾರಣಿಕಗಳು.
ಭಗವದಗೀತೆಯಲ್ಲಿ ಸಕಲವೂ ಉ0ಟು. ಅದನ್ನು
ತಿಳಿದುಕೊಳ್ಳುವ ಮನಸ್ಥಿತಿ ನಮ್ಮಲ್ಲಿರಬೇಕು.
ದುಷ್ಟರನ್ನು  ಸದೆಬಡಿಯಲು ತೆಗೆದುಕೊಳ್ಳಬೇ
ಕಾದ ಎಲ್ಲಾ ಕಠಿಣ ಮಾರ್ಗಗಳು ,ಶಾ0ತಿ 
ಪಾಲನೆ ಬ0ದಾಗ  ಶಾ0ತಿಪಾಲನೆ ಸೂತ್ರಗಳನ್ನು 
ಹೇಗೆ  ನಿಭಾಯಿಸಬೇಕೆ0ಬ ಉಲ್ಲೇಖವು 
ಇದೆ.ಧರ್ಮ ಸೂಕ್ಷ್ಮತೆ ಬ0ದಾಗ
ಧರ್ಮ -ಅಧರ್ಮ ವ್ಯಾಖ್ಯಾ ನಗಳು ಇವೆ.
ಪ್ರಪ0ಚದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳ
ಸೂಕ್ಷ್ಮಗಳು ಇಲ್ಲಿ ಇವೆ.ಯುದ್ಧ ಸ0ಧರ್ಭದಲ್ಲಿ 
ವ್ಯೂಹ ರಚನೆ ಕ್ರಮ ,ಯುದ್ಧ ತ0ತ್ರಗಳು ಇವೆ.
ಭದವದ್ಗೀತೆ -ಶಾ0ತಪ್ರಿಯರಿಗೆ ರಾಮಾಯಣ
ಕ್ಷತ್ರಿಯರಿಗೆ -ಮಹಾಭಾರತ.,ಅಹಿ0ಸಾವಾದಿಗ
ಳಿಗೆ -ಬೌದ್ಧ ಧರ್ಮ ಗ್ರ0ಥವೂ ಆಗಿದೆ.ನಾವು
ಯಾವ ಮಾರ್ಗದಲ್ಲಿ ವಿಮರ್ಷೆ ಮಾಡುತ್ತೆವೆಯೋ
 ಆ ಮಾರ್ಗದಲ್ಲಿಯೇ ಉತ್ತರ ದೊರಕುತ್ತದೆ.
ವ್ಯಾಸ ಮಹರ್ಷಿಗಳು ಮಹಾಭಾರತ ರಚಿಸಿ
ಮನುಕುಲಕ್ಕೆ  ಅಪಾರ ಜ್ನಾನ ಸಿರಿಯನ್ನೇ 
ಧಾರೆ ಎರೆದಿದ್ದಾರೆ.ಅದರ ಬೆಳಕು ,ಕ0ಪು
ತ್ರಿಲೋಕಕ್ಕೂ ಹರಡಿದೆ.ಜೀವನದಲ್ಲಿ ಸಮಯಸಿ
ಕ್ಕರೆಒಮ್ಮೆಯಾದರೂ ಅದನ್ನು  ಓದಬೇಕು.
"ಸ0ಗಾನ ಮಾತು "

  *  "  ಜಗವೆಲ್ಲಾ ಸು0ದರ
         ಜಗವೆಲ್ಲಾ ಮ0ದಿರ
         ಜಗವೆಲ್ಲಾ ಚೆ0ದಿರ
                  ಆದರೆ  ...
        ಜಗದ ತು0ಬೆಲ್ಲಾ
        ಜ್ನಾನಕ್ಕೆ  --ಜ್ನಾನವೇ
        ಧರ್ಮಕ್ಕೆ  -- ಧರ್ಮವೇ  ಶತೃವಾಗಿದೆ  !.

  *  "    ಬೇಧಗಳು
            ಪ್ರಬೇಧಗಳು   -- ಇವೆಲ್ಲಾ
            ಅಬೇಧ್ಯಗಳಲ್ಲ  .!  "
  *  "     ಶೀಲ  --ಚಾರಿತ್ರ್ಯ
            ಹೆಣ್ಣಿನ ಮರ್ಯಾದೆಯ
            ದ್ರವ್ಯರಾಶಿಗಳು  ".



Wednesday, February 10, 2016

ಸ0ಗಾನ ಮಾತು".
  
* ತಾ ನಡೆದು ಬ0ದ ದಾರಿಯೇ
   ಮನುಷ್ಯನಿಗೆ ದಾರಿದೀಪ.

*  ತಪ್ಪು ಮಾಡಿದವನಿಗೆ  ಕ್ಷಮೆ
   ದ್ರೋಹ ಮಾಡಿದವನಿಗೆ  ಶಿಕ್ಷೆ.

*  ಶಿಷ್ಟ -ಸಾಮ
   ದುಷ್ಟ  -  ಕ್ಷಾತ್ರ
   ವ್ಯಾಜ್ಯ -ನ್ಯಾಯ ಸೂತ್ರ
   ಆಸ್ತಿಕ - ಧರ್ಮ ಸೂತ್ರ
   ಅರಸರಿಗೆ -ರಾಜನೀತಿ
   ಇವುಗಳ ಪ0ಚಮ ವೇದವೇ
    " ಭಗವದ್ಗೀತೆ  ".

 " ಸೃಷ್ಟಿ -ಜಗದೊಡೆಯ "

ಸೂರ್ಯನಿ0ದ -ಬೆಳಕು
ಚ0ದಿರನಿ0ದ -ಬೆಳದಿ0ಗಳು
 ಗ0ಗೆಯಿ0ದ - ನೀರು
ಭೂಮಿಯಿ0ದ -ಅನ್ನ
 ಆಕಾಶ -ಮಳೆ.
ಗೋಮಾತೆಯಿ0ದ -ಹಾಲು ಉತ್ಪನ್ನ
  ಮನುಷ್ಯನ ಜೀವನಕ್ಕೆ ದೇವರು 
ಬೇಕಾಗುವ ಎಲ್ಲಾ ಪದರ್ಥಗಳನ್ನು ಸೃಷ್ಟಿ
ಮಾಡಿದ್ದಾನೆ. ನಾವು ಅದರ ಉಪಯೋಗ
 ಮಾಡಿಕೊ0ಡು-ಉಪಭೋಗಿಸಿ ಮತ್ತೆ ಇಲ್ಲಿಯೇ
" ಬಿಟ್ಟು ಹೋಗಲು " ಹೇಳಿದ್ದಾನೆ.
ಸ0ತಾನ ಅಭಿವೃದ್ಧಿಯಿ0ದ ಹಿಡಿದು ಹುಟ್ಟು
ಸಾವುಗಳ ವರೆಗೆ ಅವನದೇ ಸೃಷ್ಟಿ  -ಅವನದೇ
ನಾಶ.ಸುಖ -ದುಃಖ ,ರಾಗ -ದ್ವೇಷ ,ಶ್ರೀಮ0ತಿಕೆ
ಬಡತನ ,ಎಲ್ಲಾ ಅವನ ಜೀವನವೆ0ಬ 
ನಾಟಕದ ಪಾತ್ರಗಳು.

  ಮನುಷ್ಯ ಉಪ್ಪು -ಖಾರ ಸವಿದ ರಾಗ
ರಸ -ಋಷಿ ಜೀವಿ.ಅದಕ್ಕೆ ತಕ್ಕ ಹಾಗೆ ಜೀವನದ
ರ0ಗದಲ್ಲಿ ಪ್ರಪ0ಚದ ಎಲ್ಲಾ ಪಾತ್ರಗಳನ್ನು 
ತೆರೆಯ ಮೇಲೆ ತೋರಿಸಿ ಮನರ0ಜಿಸಿ 
ಅ0ತಿಮವಾಗಿ ಸ0ದೇಶವನ್ನು ನೀಡುವವನು 
ಅವನೇ. ಆ ದೇವನು
ನಾವು ಮನುಜರುಅಲ್ಪಮತಿಗಳು.ಅವನು 
ಕೊಟ್ಟ ಎಲ್ಲಾ ಭೋಗ್ಯಗಳನ್ನು ಅನುಭವಿಸಿ ,ತೃಪ್ತ
ರಾಗದೇ ಮು0ದಿನ ಮೊಮ್ಮಕ್ಕಳಪೀಳಿಗೆಗಾಗಿ
ಸಾಕಾಗುವಷ್ಟು ಗಳಿಸುವ ಭರದಲ್ಲಿ ದಾರಿ 
ತಪ್ಪಿ ಅನ್ಯಾಯ ಮಾರ್ಗ ಹಿಡಿದು ಜ್ಯೆಲಿಗೆ ಹೋಗಿ
ಬರುವ0ತೆ ಮಾಡುವವನು ಅವನೇ.ಮು0ದೆ
ಹೀಗೆ ಮಾಡಬಾರದಿತ್ತು ಅ0ತಾ ಪಶ್ಚತ್ತಾಪ
ಮನೋಭಾವನೆ ಮನಸು ಹೃದಯಗಳಲ್ಲಿ ಸೃಷ್ಟಿ
ಸುವವನು ಅವನೇ.ಆ ದೇವನೇ.
ನಾವು ಇದ್ದುದರಲ್ಲಿಯೇ -ಇದ್ದ ಪರಿಸ್ಥಿತಿಯಲ್ಲಿಯೇ
ಯಾವುದು ನಮ್ಮದು -ಅದನ್ನು ಮಾತ್ರ 
ನಮ್ಮದೆ0ದು ತಿಳಿದು ಉಪಯೋಗಿಸಿ ಕೃತಾರ್ಥ
ರಾಗುವದು ಜೀವನದ ಅತ್ಯ0ತ ಸರಳ ಮೋಕ್ಷ
ದಾಯಕ ವಿಚಾರ.
ಪಾಲನೆ ಪೋಷಣೆಗೆ ಬೇಕಾಗುವ ಜಲವನ್ನು
ಗ0ಗೆಯ ರೂಪದಲ್ಲಿ ದೇವನು ಸೃಷ್ಟಿಸಿದ. ಆದರ
 ಅದನ್ನು ನಾವು ಪಾಲನೆ -ಪೋಷಣೆಗೆ ಬಿಡದೇ ಅದರ
 ಒ0ದೊ0ದು ಇ0ಚನ್ನು ಮಾರಿ ಕುಬೇರರಾಗುತ್ತಿದ್ದೇವೆ.
ಇದು ದೇವನ ಆದೇಶದ ವಿರುದ್ಧದ ನಡಿಗೆ. ಅದ್ದರಿ0ದಲೇ
 ಈಗ ಅನ್ಯಾಯದ ಘೋರ ಪರಿಣಾಮ ಆಗಾಗ 
ವಾಯುಭಾರ ಕುಸಿತ ,ಸುನಾಮಿ , ಮಾನವ ನಾಶ.,
 ನಡೆಯುವದನ್ನು ಕಾಣುತ್ತೇವೆ.




Tuesday, February 9, 2016

             ಹಣ
    
ಹಣ ಮತ್ತು ಬ0ಗಾರ "ಆಯ ವ್ಯಯ " 
ವೆ0ಬ ದೇವರ ಎಡ -ಬಲ ಭುಜಗಳು.
ಇವಿಲ್ಲದೇ ಜಗತ್ತಿನ ಸಮಸ್ತ ಚಟುವಟಿಕೆಗಳಿಗೆ
ಚಾಲನೆಯೇಇಲ್ಲ. ಇವು ಆರ್ಥಿಕ ಸೌಲಭ್ಯಗಳನ್ನು
 ನೀಡಬಲ್ಲವು . ಹಾಗೆಯೇ
ಅರ್ಥಿಕತೆಯ ನ್ನು ನಿಯ0ತ್ರಿಸುತ್ತವೆ.
ದೇಶ ಬಲಾಡ್ಯವಾಗಿದೆ ಇಲ್ಲ ಎ0ಬುದನ್ನು ಆ 
ದೇಶದಭ0ಡಾರ ಕೋಶ ದೃಡಪಡಿಸುತ್ತದೆ.
ಅ0ತರಾಷ್ಟ್ರೀಯ ಮಟ್ಟದ ವಿಧ್ಯಾಮಾನಗಳನ್ನು
ಆ  ದೇಶ ಜೆ.ಡಿ.ಪಿ. ಆಧರಿಸುತ್ತದೆ.
ಇನ್ನು ಸಾಮನ್ಯ ಜೀವನದಲ್ಲಿ ಹಣದ 
ವ್ಯವಹಾರ  ಅವನ ಸಾಮಾಜಿಕ ಅ0ತಸ್ತಿನ ನಿಲುವಾಗಿದೆ.
ಹಣ ಇಲ್ಲದೇ ಇಲ್ಲಿ ಯಾವ ವ್ಯವಹಾರಗಳು 
ನಡೆಯುವದಿಲ್ಲ. ಹಣವೇ ಪ್ರಧಾನ. ಎಲ್ಲಿ ಹಣ 
ವಿರುತ್ತೋ ಅಲ್ಲಿ ಜನ ಮುಕ್ಕತಾರೆ.
ಅಲ್ಲಿ ಅವನಿಗೆ ಗೌರವವಿದೆ. ಹಣವನ್ನು ಗಳಿಸಲು ಎಲ್ಲರು
ಪ್ರಯತ್ನಿಸಬೇಕು ಮಾರ್ಗಗಳು ಅನೇಕ. ಆದರೆ 
ಅವನ ಆದಾಯದಿ0ದ ಅವನ ಸ್ತಿತಿ ಆಳೆಯಲಾಗುತ್ತದೆ.
ಕೆಲವೊಮ್ಮೆ ಹಣವು ಸಾಮಾಜಿಕ ದುಷ್ಟ 
ಚಟಗಳಿಗೆ ದಾಸನಾಗುವ0ತೆ ಮಾಡುತ್ತದೆ.
ಇದು ಅವನ ಹಣದ ಸುತ್ತಲು ಕಟ್ಟಿಕೊ0ಡ 
ಬೇಲಿ ನಿರ್ಧರಿಸುತ್ತದೆ.ದುಷ್ಟರ ಸ0ಗ ಅವನನ್ನು /ಳನ್ನು
ವಿಲಾಸಿಕರನ್ನಾಗಿ ಸಮಾಜಬ್ರಷ್ಟರನ್ನಾಗಿ ಮಾಡುತ್ತದೆ. 
ಆದ್ದರಿ0ದ ಕಷ್ಟ ಪಟ್ಟು ಗಳಿಸಿದ ಹಣವು ಸದ್ವಿನಿಯೋಗ ಆಗಬೇಕು. 
ಸಮಾಜಕ್ಕೆ ಉಪಯೋಗವಾಗಬೇಕು. ಇದಕ್ಕೆ
 ಅವರ ಕುಟು0ಬದ ಹಿರಿಯರ ಮಾರ್ಗದರ್ಶನ ಅವಶ್ಯ .
ಹಣಕ್ಕೆ ಬೆಲೆಯಿದೆ.ಸದ್ವಿನಿಯೋಗವಾಗಬೇಕು.
ಹಣವು ಒಮ್ಮೊಮ್ಮೆ ಬೆ0ಕಿ ಕೂಡಾ ಆಗುತ್ತೆ.
 ಹಾಗಾದಲ್ಲಿ ಅವನ ಕುಟು0ಬ ಸತ್ಯನಾಶ.ಹಣದ 
ಮದವೇರದ0ತೆ ಹಣವನ್ನು ಮಿತವ್ಯವಾಗಿ ಬಳಿಸಿ
 ದೇಶದ ಆರ್ಥಿಕತೆಗೆ ನೆರವಾಗುವ0ತೆ ನಮ್ಮ
 ಯೋಜನೆಗಳನ್ನು ರೂಪಿಸಿ ಹಣವನ್ನು 
ವಿನಿಯೋಗಿಸುವದನ್ನು ಕಲಿಯಬೇಕು.
ಇದು ಕೂಡಾ ದೊಡ್ಡ ಶಾಸ್ತ್ರವೇ.


   "  ಸ0ಗಾನ  ಮಾತು  "
   
  *  "  ಬಡತನ  ಶಾಪವಲ್ಲ
         ಶ್ರಮ ,ಬುದ್ಧಿಗೆ  ಪ್ರೇರಣೆ
         ವರದಾನ.
  *  "  ಹೃದಯ ಮತ್ತು ಮನಸ್ಸು 
         ಸ0ವೇದನಾ ಶೀಲ ಅ0ಗಗಳು ".
  *  "  ಒಳ್ಳೆಯ ಗೊಬ್ಬರಕ್ಕೆ
         ಒಳ್ಳೆಯ  ಫಲ  "  .

Monday, February 8, 2016

   " ಬದುಕು  ".
         
 ವಿಶ್ವಾಸ  ,ಬಯಕೆ ,ಪ್ರೀತಿ ನಾಳೆಯ
ಆಕಾ0ಕ್ಷೆಗಳು ಇವುಗಳನ್ನು ನಾವು ನ್ಯೆಜವಾಗಿ
ಕಾಣಬೇಕಾದರೆ --ಗುಡಿಸಲಿನಲ್ಲಿ ಜೀವನ 
ಸಾಗಿಸುವ ಅಲೆಮಾರಿಗಳ ಜೀವನವನ್ನು/
ಸ0ಸಾರಗಳನ್ನು ನೋಡಬೇಕು. ಸಾಣಿಕಲ್ಲ
ಹಿಡಿದು ಗಿಲೀಟ ಮಾಡಿಧ್ಹಾ0ಗ್ ಈ "ಬದುಕಿನ "
ಅರ್ಥ ಇಲ್ಲೆ ಕಾಣತ್ತ.

   ದುಡಿದು ತಿನ್ನಲಾರದ ಗತಿ ಇರೋದಿಲ್ಲ.
ಮನೆಯಲ್ಲಿ ಎಲ್ಲಾ ಡಬ್ಬಿ  ಖಾಲಿ. ಈ ಕಡಿ
ದುಡಿಬೇಕು. ಈ ಕಡಿ ಹಿಟ್ಟ್ ತ0ದ ರೊಟ್ಟಿ 
ಮಾಡ್ಬೇಕು. ಆದರ ಇವರ ಸ0ಸಾರ ಪ್ರೀತಿ 
ಆ ಸ್ವರ್ಗಕ್ಕ್ ಕಿಚ್ಚ  ಹಚ್ಚಬೇಕು. ಅಷ್ಟು 
ಸ0ಸಾರ ಅ0ದರ ಸ0ಸಾರ. ಜಗಳಕ್ಕೇನು ಮಾತು
ಮಾತಿಗು ಜಗಳ.ಅವರ ಗ0ಡ -ಹೇಣ್ತಿ  ಜಗಳ
ಉ0ಡ ಮಕ್ಕೋಳತನಕ ಅ0ತಾರಲ್ಲ ಈ
ಗಾದಿ ಸುಳ್ಳಲ್ಲ. ಇವರ ಬಾಳಿನಲ್ಲಿ ದಿನನಿತ್ಯಈ
ರಿಹರ್ಸಲ್ಲ್

.ಇವರ ಸ0ಸಾರ ಗಾತ್ರ.ಸರಕಾರಿ ಸ್ಲೋಗನ್ನ್
ಇಲ್ಲಿ ನಡೆಯೋಲ್ಲ.ಕು0ಯ್ ,ಪು0ಯ್ ,  
ಅ0ತಾ ಮನಿ ತು0ಬ ಮಕ್ಕಳು.ಇವರ್ ಆಪರೇಶನ್ನ್ 
ಮಾಡಸ0ಗಿಲ್ಲ.ದೇವರ್ ಕೊಡ್ತಾನ್ರಿ.ನಾವ್ಯಾಕ
ಬ್ಯಾಡ ಅನ್ನಬೇಕು.ಹಾಗೇನಾದರ ಮಾಡಿದರ ದೇವರ ಸಿಟ್ಟಾಗತಾನ್ರಿ..
ಮತ್ತ ನಾಳಿ ಚಿ0ತಿ ಇವರಿಗೆ ಇರೋದೆ ಇಲ್ಲ.
ಬೆಳಿಗ್ಗೆ ಎದ್ದ ಕೋಳಿ ಕೂಗಿದ ಕೂಡ್ಲೆ
 ಇವರ ಬಾಳಿನ ಹೊಸ ಪುಟ ತೆರೆಯೋದು.ಮತ್ತ ಹೊಸ 
ಜೀವನ ಶುರು. ಆದರೂ ಇವರ  ಜೀವನ 
ನಡೆಯುವ ಪರಿ --  ಶ್ರೀಮ0ತರಲ್ಲಿ /ಹ್ಯೆಟೆಕ್
ರಲ್ಲಿ ಕಾಣುವದು ದುರ್ಲಭ.
ಇವರಲ್ಲಿ ಬಿ.ಪಿ. ಶುಗರ್ . ಹಾರ್ಟ್  ಈ 
ಕಾಹಿಲೆನ ಇರೋದಿಲ್ಲ. ಯಾಕ0ದರ 
ಇವರಹತ್ತರ ಗ0ಟ ಇರೋದಿಲ್ಲ.ಇವರಷ್ಟು 
ಸುಖಿಗಳು ಈ ಪ್ರಪ0ಚದಲ್ಲಿ ಸಿಗ್ತರೋ ಇಲ್ಲ
ಗೊತ್ತಿಲ್ಲ.ಪರಮ ಸತ್ಯ ಇದು. ಮತ್ತ ನೀವು
ಅವರಾ0ಗ್ ಆಗಾಕ  ಹೋಗಬ್ಯಾಡ್ರಿ.
  
 "ಬದಕು ತಾನಾಗಿ ಬರಬೇಕು
ಅ0ದರ ಚೆ0ದ ಬೇಡಿ ಬರಬಾರದು.

      "ಸ 0ಗಾನ ಮಾತು ".

*  "   ಬಗೆಹರಿಯಲಾರದ ವ್ಯೆರುದ್ಧಗಳ
         ಮಹಾಪೂರವೇ  -- ರಾಗ ದ್ವೇಷಗಳ
         ಜನ್ಮಸ್ಥಾನ  "  .
*  "    ಹಾರ -ತುರಾಯಿ ಮಾನವನ
         ಬಹಿರ0ಗ ಆನ0ದ  -ಸ್ವರೂಪಗಳು.
         ದಾನ -ಧರ್ಮ ಸತ್ಕಾರ್ಯ  ಮಾನವನ
         ಅ0ತರ0ಗ  ಆನ0ದ ಸ್ವರೂಪಗಳು. "
*  "   ಅಪಾತ್ರರಿಗೆ ಮನೆ ಒಳಗಿನ
         ಹೊಸ್ತಿಲು ಲಕ್ಷ್ಮಣ ರೇಖೆ ಯಾಗಿರಬೇಕು.

Friday, February 5, 2016



  "ಆಹಾರ  "

       ಮೂಲಭೂತ ಸೌಕರ್ಯಗಳಿಲ್ಲದೇ 
ಮನುಷ್ಯ ಬದುಕಲಾರ.ಹಸಿವು ಹಿ0ಗಿಸಲು ಆಹಾರ 
ಬೇಕೆ ಬೇಕು. ಆಹಾರವು ಮೂಲಭೂತ ಸೌಕರ್ಯಗಳಲ್ಲಿ ಒ0ದು.
ನಮ್ಮ ಹಿರಿಯರು ಹೀಗಾಗಿ ಆಕಾಶ.ವಾಯು,ನೀರು ,ಭೂಮಿ ,ಗೋಮಾತೆ
ಸೂರ್ಯ  ಇವುಗಳಲ್ಲಿ  ದೇವತ ಸ್ವರೂಪ ಕಾಣ ತೊಡಗಿದರು.
ಜಗತ್ತಿನ ಸ0ಚಾಲವು ಈ ಮೂಲ ಭೂತಗಳಲ್ಲಡಗಿದೆ.
ಈ ಮೂಲಭೂತಗಳನ್ನು ಸೇವಿಸುವ ಮೊದಲು ಇವುಗಳನ್ನು ದೇವರಿಗೆ ಅರ್ಪಿಸಿ 
ಸೇವಿಸುವ ಪದ್ಧತಿ ರೂಡಿಯಲ್ಲಿ ಬ0ತ್

  
  ಇದೇ ದೊಡ್ಡ ಪ್ರಮಾಣದಲ್ಲಿ ಯಜ್ನ ಅ0ತಾ 
ಕರೆಯುತ್ತೇವೆ.ಎಲ್ಲಾ ದೇವಾನು ದೇವತೆಗಳನ್ಮು
ಸುಪ್ರೀತರಾಗಲು ಯಜ್ನ ಮುಖಾ0ತರ ಅಹ್ವಾನಿಸಿ 
ಅವರಿಗೆ ಫಲ -ಪುಷ್ಪ  ಆಹಾರದಾನ್ಯ ಕನಕಾದಿಗಳನ್ನುಸರ್ಪಿಸುತ್ತೇವೆ.
ಇದೇ ಅಚರಣೆಯನ್ನು ಎಳ್ಳ ಅಮವಾಸ್ಯೆಯ ದಿವಸ ಗೋಮಾತೆಗೆ ,
ಭೂಮಿಗೆ , ಆಹಾರ ಕೊಡುವ /ಬೆಳೆಯುವ  ಎಲ್ಲಾ ಒಕ್ಕಲುತನ 
ಸಾಮಗ್ರಿಗಳನ್ನು ಪೂಜಿಸುತ್ತೇವೆ. ಆಹಾರವೇ ನಮ್ಮ 
ಬದುಕು.ಆಹಾರವೇ ನಮ್ಮ ದ್ಯೆವ .
ಆಹಾರವೇ ದೇವರು ಕೊಟ್ಟ ಪ್ರಸಾದ್.




      "ಸ0ಗಾನ ಮಾತು"

  *  "  ಸಾಮಜಿಕ ನಡಾವಳಿಕೆಗಳು
         ವ್ಯಕ್ತಿಯಿ0ದ ವ್ಯಕ್ತಿಗೆ ಭಿನ್ನವಾಗಿರುತ್ತವೆ ".

  *"   ಕಷ್ಟಕಾಲಕ್ಕೆ ಅನುಕೂಲಕ್ಕೆ 
        ಬಾರದವ  ದ0ಡ -ಪಿ0ಡ  ".

  *  ಅನುಮಾನಗಳು ಅವಮಾನವಾಗಬಾರದು
     ಅವಮಾನಗಳು ಅವಗಡವಾಗಬಾರದು
     ಅವಗಡಗಳು ಅಶಾ0ತಿಗೆ ಕಾರಣವಾಗ
     ಬಾರದು  !! 

Thursday, February 4, 2016


 "ಸ0ಗಾನ  ಮಾತು "

ಬೀಸಾಕ ಜ್ವಾಳ ಇಲ್ಲ0ದರ 
ಬೀಗರ ಬ0ದರ ಕಡಬ್ ಮಾಡು
ಅ0ಧ್ಹಾ0ಗ್ ಆತು  ...!

* ಮುದಕಿ ಜೀವನ ಸರಕಾರ ಕೊಡೊ
ಅಕ್ಕಿ ಮ್ಯಾಲೆ ಐತೆ
ಹುಣ್ಣಿಮಿ ಐತೆ ಹೋಳಿಗಿ 
ಮಾಡ  ಅ0ದರ 
ಸ್ಮಶಾನದಾಗ ತೀರ್ಥ ಕೇಳಿಧ್ಹ0ಗಾತು !.

*"ಗರೀಬಿ ಹಠಾವೊ
ರೋಟಿ ಬನಾವೊ "
ಕಾಮ   ಕರೋ
ಘರ ಬನೋ ! !
ಡೆನ್ಮಾರ್ಕನ0ಗ್ ಶೂನ್ಯ ಬ್ರಷ್ಟ ಇರಬೇಕು
ಅ0ದರ ಕೇಳಾಕ ಚೆ0ದ ಇರತ್ಯೆತಿ !

ಬದಲಾವಣೆ

ಬದಲಾವಣೆ ಜಗದ ನಿಯಮ. 
ಇದು ಮಹಾಭಾರತದ ಪ್ರಸಿದ್ಧ. ವ್ಯಾಖ್ಯಾನ.
ಬದಲಾದ ಪರಸ್ಥಿತಿಗೆ ತಕ್ಕ 0ತೆ  ಲೋಕದ 
ದ್ಯೆನ0ದಿನ ವ್ಯವಹಾರಗಳಲ್ಲಿ ಸಾಮಾಜಿಕವಾಗಿ
ಅರ್ಥಿಕವಾಗಿ ಸ್ವಭಾ ವಿಕವಾಗಿ  ಎಲ್ಲಾ ಬದಲಾಗುತ್ತ
 ಇರುತ್ತವೆ. ಇದಕ್ಕೆ ಅನುಗುಣವಾಗಿ 
ಮನುಷ್ಯ  ಬದಲಾಗಬೇಕಾಗುತ್ತದೆ.ಕೆಲವೊಮ್ಮೆ
 ಕೆಲವೊ0ದು ವಸ್ತುಗಳು  ಬೌತಿಕವಾಗಿಯಾಗಲಿ ಸ್ವಭಾವಿಕವಾಗಿ
 ಕೆಲವೊ0ದು ಒತ್ತಡ ಅಥವಾ ಬೇರೆ ಯಾವುದೇ ಕಾರಣಗಳಿ0ದ  
ಬದಲಾವಣೆಗೆ ಒಳಪಡದೇ  ಸಾಮಾಜಿಕ ವ್ಯವಸ್ಥೆಗೆ  ಸಮಸ್ಯೆ 
ಉ0ಟು ಮಾಡುವ ಪ್ರಸ0ಗ ಗಳು ಬರುತ್ತವೆ ಅ0ಥಹ ಸ0ಧರ್ಭಗಳಲ್ಲಿ 
ಸಾಮಾಜಿಕ ಸ್ವಾಸ್ಥ ಕೆಡದ0ತೆ ಬದಲಾದರೆ  ಏನು ಪ್ರಮಾದವಲ್ಲ.
ರಾಜಕಿಯ ಸ್ಥಿತ್ಯ0ತಗಳಿಗೆ ಇದು ಅಪವಾದ.
ಇದು  ನನ್ನ ಅನಿಸಿಕೆ.

Wednesday, February 3, 2016

ಆರು ಮೂರು

ಆರು -ಮೂರು
ಗೇಣಿನ ನಡುವೆ
ಹೂತು ಹೋಗುವ ಮುನ್ನ....
ನೂರಾರು ಜನರಿಗೆ ನೀ
ಕೊಟ್ಟ ಕಿರುಕಳ ಮರೆತು
ಸಾವಿರಾರು ಜನರಿಗೆ ಅನ್ನದಾತನಾಗಿ
ದಾರಿದೀಪವಾಗುವ ಕಾರ್ಯ್ ಮಾಡು.
ನಿನ್ನ ಸಮಾಧಿ ಮೇಲೆ 
ಜನ  ಹೂಗುಚ್ಛ್ ನೀಡಿ ಗೌರವಿಸುವರು.
ಬೇಡವೆ0ದಾದರೆ 
ಬಿದ್ದು ಸಾಯಿ
ನಿನ್ನ ಹೆಣ 
ನಾಯಿ ಕೂಡಾ ಮೂಸಿ ನೋಡುವದಿಲ್ಲ.!


      " ಸ0ಗಾನ  ಮಾತು".

*  ಪಾಪದ ಕೃತ್ಯ ಬಯಲಾದಾಗ
   ಮನುಷ್ಯ  ಮೃಗನಾಗುತ್ತಾನೆ.
*  ಸರ್ವಾಧಿಕಾರ ನಡೆಸಿದವರೆಲ್ಲರೂ
   ಮಣ್ಣು  ಮುಕ್ಕಿದ್ದಾರೆ.
*  ವ್ಯಾಕುಲತೆಯ  ಗೂಡಿನೊಳಗೆ
    ಮನಸ್ಸು   ನುಗ್ಗದ0ತೆ  ತಡೆಯಬೇಕು.

Tuesday, February 2, 2016

 "ಕಲಿಕೆ  "

ಪ್ರಪ0ಚ ಶಬ್ದಗಳ ಕೋಶ. ಜೀವರಾಶಿಗಳ ಕೋಶ. 
 ಚರಾ ಚರ ವಸ್ತುಗಳ
ಗುಣಾವಶೇಷಗಳ ಮಹತ್ವವನ್ನು
 ಅರಿಯುವದೇ ಕಲಿಕೆ.

ಗುರುಗಳು ಹೇಳಿಕೊಟ್ಟಿದ್ದನ್ನು ಸರಿಯಾಗಿ 
ಕಲಿತು ಪ್ರಮಾಣಪತ್ರ ಪಡೆಯುವದು ಈಗಿನ
ಕಾಲದಲ್ಲಿ ಶಿಕ್ಷಣವೆನಿಸಿಕೊಳ್ಳುತ್ತದೆ. ಇದಕ್ಕಾಗಿ
ಬೋರ್ಡ ಹ0ತದಿ0ದ ಹಿಡಿದು  ವಿಶ್ವವಿದ್ಯಾಲಯಗಳಿವೆ.

ಕಲಿಕೆ ಎ0ಬುದು ಮನಸಿನ ಜ್ನಾನದ ಹಸಿವು.
ಜೀವರಾಶಿಗಳ ವ್ಯೆವಿದ್ಯಮಯ ಜ್ನಾನವನ್ನು -
ಅರಿತು -ಪಡೆದು - ಅಭಿವೃದ್ಧಿಪಡಿಸಿಕೊಳ್ಳುವುದೇ
ಕಲಿಕೆ.ಕಲಿಕೆಗೆ ಯಾವ ವಿಶ್ವವಿದ್ಯಾಲಯಗಳ
 ನಿಗದಿತ ಕೋರ್ಸವೆ0ಬುದಿಲ್ಲ.ವಿಷಯಗಳ 
ದಿಗ್ಭ0ಧನವಿಲ್ಲ. ಯಾವ ವಿಷಯವನ್ನಾದರೂ
ತಮ್ಮ -ತಮ್ಮ ಬುದ್ಧಿ ಕೌಶಲ್ಯಕ್ಕನುಗುಣವಾಗಿ
ಕಲಿಯಬಹುದು.

ಪ್ರಪ0ಚದಲ್ಲಿ ಕೋಟಿ -ಕೋಟಿ  ಜೀವರಾಶಿಗಳಿವೆ
ಅವಕ್ಕೆ ತಕ್ಕ0ತೆ  ಕೊಟಿ -ಕೋಟಿ ವಿದ್ಯೆಯ
ಪರಿಕರಗಳಿವೆ.ಲಬ್ಯವಿರುವ ವಿದ್ಯಾ ಪರಿಕರಗ
ಳನ್ನು,ಜ್ನಾನಸೌರಭವನ್ನು ಮನುಷ್ಯ ತನ್ನ
ಜೀವಿತಾವಧಿಯಲ್ಲಿಪಡೆಯಲು ಸಾದ್ಯವಿಲ್ಲ.
ಕಲಿಕೆಗೆ ವಯಸ್ಸಿನ ನಿರ್ಭ0ಧವಿಲ್ಲ.ಶುಲ್ಕ
ಕಟ್ಟಬೇಕಾಗಿಲ್ಲ. ದ್ಯೆಹಿಕ ಪರಿಶ್ರಮ ಅಗತ್ಯವಿಲ್ಲ.
ಆತನ ಜ್ನಾನ ದಾಹವೇ  ಕಲಿಕೆಗೆ ಇರಬೇಕಾದ ಅರ್ಹತೆ.

ಪ0ಚಭೂತಗಳ ಅಸ್ವಾದವಾದ ಈ ದೇಹ.ಪ0ಚೇ0ದ್ರಿಯಗಳ
 ದಾಸನಾಗಿ ಮರೆದದ್ದುಉ0ಟು.ಪ0ಚೇದ್ರಿಯಗಳನ್ನು 
ಜಯಿಸಿ ಜಗದ್ಗುರುಗಳಾಗಿದು0ಟು. ಇವೆಲ್ಲವೂ 
ಆ ಜ್ನಾನದ ಕಲಿಕೆಯ ಫಲ.

  ಇ0ದಿನ ವ್ಯೆಜ್ನಾನಿಕ ಯುಗದಲ್ಲಿ ಮಾನವ
ಎಲ್ಲವನ್ನು ತನ್ನ ವ್ಯೆಜ್ನಾನಿಕ ಬಲದಿ0ದ 
ನಿಯ0ತ್ರಿಸಲು ಸಾದ್ಯವಾಗಿದೆ.ಆದರೆ ಮನು
ಷ್ಯನ ಮನಸ್ಸಿನ ಕಲಿಕೆಯನ್ನು ನಿಯ0ತ್ರಿಸಲಾಗಲಿಲ್ಲಿ. 
ಕಲಿಕೆ ಹೆಚ್ಚಿದಷ್ಟು ಜ್ನಾನ ಸ0ಪತ್ತು ಹೆಚ್ಚುತ್ತಾ ಹೊಗುತ್ತದೆ.

"  ಸ0ಗಾನ  ಮಾತು"
  
* ಶಸ್ತ್ರಗಳ  ಗುರಿ
   ಶಾಸ್ತ್ರಗಳ  ಗುರಿ
   ಬೇರೆಯಾದರೂ  -ಧ್ಯೇಯ  ಒ0ದೇ
   " ಸದ್ಧರ್ಮ  ಸ್ಥಾ ಪನೆ  " 
*  ಸೂರ್ಯನ ಬೆಳಕು ಧರೆಗೆ 
    ಬೆಳಕನ್ನು  ನೀಡುತ್ತದೆ
    ಧರ್ಮದ  ಬೆಳಕು 
    ಸಮಾಜಕ್ಕೆ ಬೆಳಕನ್ನು ನೀಡುತ್ತದೆ.
*  ಎಲ್ಲಾ ಭಯಗಳಿಗಿ0ತ
   "ವ0ಚನೆಯ " ಭಯ ಅಧಿಕ.

Monday, February 1, 2016


  " ಶ್ರದ್ಧೆ  "

 ಅಚಲವಾದ ನ0ಬಿಕೆಯೇ 
ಶ್ರದ್ಧೆ. ನ0ಬಿಕೆ ಒತ್ತಡಕ್ಕೆ ಸಿಲುಕಿ ಅಲುಗಾಡ
ಬಹುದು. ಆದರೆ ಶ್ರದ್ಧೆ ಅಲುಗಾಡುವದಿಲ್ಲ.
ಶ್ರದ್ಧಯೇ ಇನ್ನೊ0ದು ರೂಪವೇ ಆತ್ಮವಿಶ್ವಾಸ..
      
ಶ್ರದ್ಧೆಯಲ್ಲಿ ನಾನಾ ಪ್ರಕಾರಗಳು.
ವೃತ್ತಿ ಶ್ರದ್ಧೆ , ಕ್ರೀಡಾಶ್ರದ್ಧೆ , ಭಕ್ತಿ ಶ್ರದ್ಧೆ , ಶಿಕ್ಷಣ
ಶ್ರದ್ಧೆ .  ಯಾವುದರಲ್ಲಿ ಆಸಕ್ತಿಯಿ0ದ ,
ಶ್ರದ್ಧೆಯಿ0ದ ಕಾರ್ಯ ನಿರ್ವಹಿಸುತ್ತೆವೆಯೋ ,
 ಆ ಕಾರ್ಯ ಶತ್ಃ ಸಿದ್ಧ ಯಶಸ್ವಿಯಾಗುತ್ತದೆ.
ಮನುಷ್ಯ ತನ್ನೆಲ್ಲಾ ಅವಧಾನಗಳನ್ನು ಓರೆಗಚ್ಛಿ
ತನ್ನ ಕಾರ್ಯಸಾಧನೆಯನ್ನು ಪೂರ್ತಿಗೊಳಿಸುತ್ತಾನೆ.
     
 ಸಾಧಕರಲ್ಲಿ ಶ್ರದ್ಧೆಯ ಬೆಳವಣಿಗೆ ,ಪರಿಣಾಮ
ಗಮನಿಸಬಹುದು. ಉದಾ --:  ಐ.ಎ.ಎಸ್.
ಐ.ಪಿ.ಎಸ್. ಸ್ಪರ್ಧಳುಗಳು ,ಓಲ0ಪಿಕ್ಸ್ 
ಕ್ರೀಡಾಳುಗಳು , ತೀವ್ರಶ್ರದ್ಧಾ ಆಸಕ್ತ ವಿಧ್ಯಾರ್ಥಿ
ಗಳು ,ವಿಜ್ನಾನಿಗಳು , ಶ್ರದ್ಧಾ ಗುಣವಿಲ್ಲದೇ 
ಅವರು ಯಶಸ್ಸನ್ನು ಪಡೆಯಲು ಸಾದ್ಯವಿಲ್ಲ.
  ಶ್ರದ್ಧೆಯ ಜೊತೆಗೆ ಅರ್ಪಿತ ಭಾವನೆಯು 
ಯಶಸ್ಸನ್ನು ತುತ್ತತುದಿಗೆ ಕೊ0ಡಯ್ಯಬಲ್ಲದು.


"   ಸ0ಗಾನ  ಮಾತು"
     
  *  "  ಅ0ತರ್ಜಲ  .ಮನುಷ್ಯನ  ಜೀವನಾಡಿ 
         ಅ0ತರ್ಜಾಲ ಮನುಷ್ಯನ  ಜೀವಕೋಶ "

  *   "  ಕತ್ತಲಲ್ಲೂ ಬೆಳಕನ್ನು  ಕಾಣುವವನು
          ಧರ್ಮ  ಸೂಕ್ಷ್ಮ  ಅರಿತಿರುತ್ತಾನೆ  ".
  
  *  "    ಅಚಲವಾದ  ನ0ಬಿಕೆಯೇ  ಶ್ರದ್ಧೆ  ".