Friday, September 30, 2016

"ಸ0ಗಾನ ಮಾತು "
--   ---   ----   ----  ----- --
  *  "  ಪುಸ್ತಕಗಳು ಮನುಷ್ಯನ ಜ್ನಾನ
         ದೀವಿಗೆಯ ಬರಹ ರೂಪಗಳಾದರೆ ,
         ಶಿಲಾಕೃತಿಗಳು ಶಿಲ್ಪಿಯ  ಮಹೋನ್ನತ
          ಕಲ್ಪನೆಯ  ಮೂರ್ತರೂಪಗಳು. "
  *  "  ಸೇವೆ ಮತ್ತು ಕಾಯಕ  ಮನುಷ್ಯನಲ್ಲಿಯ
         ಅಹ0ಕಾರವನ್ನು ಹೊರದೂಡುವ
         ಸಾಧನೆಗಳು  ".
  *  "  ಆ  ಸೇವೆ  --ಈ  ಸೇವೆ ಎನಬೇಡ
          ಕಸರು ತೆಗೆದು ಹಸಿರು ನೆಟ್ಟವನೇ
           ನಿಜವಾದ ಅಣ್ಣ.  ".
ಶಿಲಾಕೃತಿಗಳು
    -----   ------  -----
        ಹ0ಪಿ ,ಐಹೊಳೆ ,ವಿಜಯಪುರ ,
ಬದಾಮಿ ,ಪಟ್ಟದಕಲ್ಲ ,ಬೇಲೂರ -ಹಳೇಬೀಡು
ಮ್ಯೆಸೂರು -- ಇವೆಲ್ಲಾ ರಾಜ್ಯದ ಕಲೆಯ
ಬೀಡುಗಳು.
     ಸ0ಸ್ಕೃತಿ ,ಪರ0ಪರೆ ,ಶೃ0ಗಾರರಸ ,ಭಕ್ತಿ
ರಸ ಸೇರಿದ0ತೆ ನವರಸಗಳ ಮಹೋನ್ನತ
ಕಲ್ಪನೆಯ  ಸಾಕಾರ ಮೂರ್ತಿಗಳೇ  
ಶಿಲಾಕೃತಿಗಳು.'ಪುಸ್ತಕಗಳು   ಮನುಷ್ಯನ 
ಜ್ನಾನ ದೀವಿಗೆಯ ಬರಹ ರೂಪಗಳಾದರೆ ,
ಶಿಲಾಕೃತಿಗಳು -ಶಿಲ್ಪಿಯ ಉದಾತ್ತ ಮಹಾನ್
ಕಲ್ಪನೆಯ ಮೂರ್ತ ರೂಪಗಳು.".
    ಪ್ರಪ0ಚದ ಎಲ್ಲಾ ವಿಧ್ಯಾಮಾನಗಳ 
ಅರಿವು ,ಶಸ್ತ್ರ -ಶಾಸ್ತ್ರಗೆ ಪರಿಣಿತಿ ಹೊ0ದಿ
ದಾಗ ಮಾತ್ರ -ಕಲ್ಲೊಳಗೆ ಅವಿತುಕೊ0ಡಿ
ರುವ ಮೂರ್ತಿಯು  ಶಾಶ್ವತವಾಗಿ ಹೊರ
ಬರಲು ಸಾಧ್ಯ.
   ಸತತ ಪರಿಶ್ರಮ ,ನಿಷ್ಟೆ , ನ0ಬಿಕೆ ,ಜ್ನಾನ
ಗಳ ಆಗರವೇ ಶ್ರೇಷ್ಟ ಶಿಲ್ಪಿಯಾಗಲು
ಅವಶ್ಯವಿರುವ ಮಾನದ0ಡಗಳು.ಶಿಲ್ಪಿಯಲ್ಲಿಯೇ
ಇಷ್ಟೊ0ದು ಮಹಾನ್ ಗುಣಗಳು ಇರಬೇಕಾದರೆ
ಆ ಶಿಲ್ಪಿಯನ್ನು ಕಟೆದ ಆ ಮಹಾಶಿಲ್ಪಿಗಾರ
(ಗುರು) ಹೇಗಿರಬೇಕೆ0ಬುದನ್ನು  ಊಹಿಸಿ.
     ಪ್ರತಿಯೊಬ್ಬ ಮನುಷ್ಯನಲ್ಲಿ 
ಸಾತ್ವಿಕ ,ರಜ ,ತಮೋ ,ಗುಣಗಳು ಇದ್ದೇ
ಇರುತ್ತವೆ. ಆ  ಸಾತ್ವಿಕ ಗುಣಗಳನ್ನು ಹೊರ
ತರುವ ಹೊಣೆ ಗುರುವಿನದಾದರೆ , ಆ ಗುಣಗಳನ್ನು ಲೋಕಕಲ್ಯಾಣಕ್ಕಾಗಿ ಬಳಸಿ ,
-ಧರ್ಮಾರ್ಥ ಕಾರ್ಯಗಳನ್ನು  ನೆರವೇರಿಸುವ
ಸ0ಕಲ್ಪಗಳನ್ನು  ಮಾಡಿದರೆ ಜನರೇ  ಅವನ 
ಕೊರಳಿಗೆ  ಮಾಲೆ ಹಾಕಿ ಸ್ಮಾರಕಗಳ
ಎತ್ತರಕ್ಕೆ ಕೊ0ಡೊಯ್ಯುತ್ತಾರೆ.
   ಇನ್ನು ರಜೋ ,ತಮೋ , ಅಮರರಾಗಲಿಕ್ಕೆ
ಸಾದ್ಯವಿಲ್ಲ.ಕನಿಷ್ಟ ಲೋಕಕೆ ತಾರಕ -ಮಾರಕ
ವಾಗಬಾರದು.
ದಾರಿಯ ಆಯ್ಕೆ ಮನುಜ0ದು
ಗುರಿಯ ಆಯ್ಕೆ ಮನುಜ0ದು
ರಾಜಮರ್ಯಾದೆಯ ಆಯ್ಕೆ ಮನುಜ0ದು.
  "ಈ ಅಪೂರ್ವವಾದ ಶಿಲಾಸಿದ್ಧಾ0ತದ
ಕೊಡುಗೆಯನ್ನು  -ಕಲಾಮೇಧಾವಿಗಳು 
ಸಾಮಜಿಕ ಜೀವನದ  ಮ್ಯೆಲುಗಳನ್ನಗಿ
ಪರಿವರ್ತಿಸಲಿ ".

Thursday, September 29, 2016

 "  ಮನಸ್ಸು   "
   ---   ---   ----  ----
          'ಮನಸ್ಸು'  ಹಾರಾಡುವ ಪಾತರಗಿತ್ತಿ.
ಅದನ್ನು ಹಿಡಿದಿಟ್ಟುಕೊಳ್ಳಲು ಸಾಮಾನ್ಯರಿಗೆ
ಸಾಧ್ಯವಿಲ್ಲ.

     ಎಲ್ಲಿ ಆಕರ್ಷಣೀಯ ವಿಷಯಾಸಕ್ತಿಗಳಿರು
ತ್ತವೆಯೋ  ,ಅಲ್ಲಿ ಮನಸ್ಸು  ಆಕರ್ಷಿತವಾಗಿ -
ತನ್ನ ಮನಸ್ದಿನೊಳಗೆ  ಅಡಗಿರುವ ಸುಪ್ತ
ವಾ0ಛೆಗಳನ್ನು  ಹೊರಗೆಡುವಲು ಪ್ರಯತ್ನಿ
ಸುತ್ತಿರುತ್ತದೆ.

  ಸಾಮಾನ್ಯ -ಜನರಿಗೆ ಮನಸ್ಸನ್ನು ಹಿಡಿದಿಟ್ಟು
ಕೊಳ್ಳುವದೆ0ದರೆ  -ಒ0ದು ವಿಷಯದಲ್ಲಿ
ಗಟ್ಟಿತನ ಪ್ರದರ್ಶಿಸುವದು. ಈ ಗಟ್ಟಿತನ 
ಯಾವುದೇ ರ0ಗಗಳಲ್ಲಿಯ ,ಯಾವುದೇ
ವಿಭಾಗಕ್ಕಾದರೂ ಸ0ಭ0ಧಿಸಿರಬಹುದು.
  ಮನುಷ್ಯ  ಹೇಗೋ ತನಗೆ ಲಭಿಸಿರುವ
ಲಾಭಾ0ಶ ದೃಷ್ಟಿಯಿ0ದ / ಸಾಮಾಜಿಕ
ನ್ಯಾಯದ ಒಳ್ಳೆಯ ದೃಷ್ಟಿಯಿ0ದ  ಹೇಗೋ 
ಮನಸ್ಸನ್ನು  ಗಟ್ಟಿಗೊಳಿಸಿ ಏಕಾಗ್ರತೆಯಿ0ದ
ಅದೇ ವಿಷಯದಲ್ಲಿ ಮಗ್ನನಾಗಿ ,ತನ್ಮಯನಾಗಿ
ಅದರಲ್ಲಿ ಪಾರ0ಗತನಾಗುತ್ತಾನೆ.

   ಆದರೆ , ಇ0ತಹ ಮನುಷ್ಯನ ಮನಸ್ಸು
ಮತ್ತೆ ಬೇರೆ ವಿಷಯದ  ಕಡೆಗೆ ಆಕರ್ಷಿತನಾಗಿ
ಅದರಲ್ಲಿ ತನ್ನ ಮನಸ್ಸನ್ನು  ತೊಡಗಿಸಿಕೊ
ಳ್ಳುವದು ಸಾಮಾನ್ಯ ಕೆಲಸವಲ್ಲ.ಇದು
ಧ್ಯಾನಾಸಕ್ತರಿಗೆ ,ತಪೋನಿರತರಿಗೆ ,ಅವಧೂತರಿಗೆ ಮಾತ್ರ ಶಕ್ಯ.
  ಸಾಮಾನ್ಯರಿಗೆ ಇದು ನಿಲುಕದ ವಿಷಯ.
ಸಾಮಾಜಿಕ ಆರೋಗ್ಯ ದೃಷ್ಟಿಯಿ0ದ ಮನಸ್ಸನ್ನು 
ಕೇ0ದ್ರಿಕರಣ ಗೊಳಿಸುವದು  'ವ್ಯಕ್ತಿತ್ವ ವಿಕಸನ '
ದ ಒ0ದು ಭಾಗ.

































 "  ಚಾತುರ್ವಣ್ಯ0  "
    --   ---   ---  ----
      ಆದಳಿತ ,ನೀತಿ ವಿಷಯ ಬ0ದಾಗ
ಬ್ರಾಹ್ಮಣ ,ರಕ್ಷಣೆ ಆಪತ್ಕಾಲ ಬ0ದಾಗ 
ಕ್ಷತ್ರಿಯ ,  ಕೃಷಿ ವ್ಯಾಪಾರ ಮಾತು ಬ0ದಾಗ
ವ್ಯೆಶ್ಯ  , ಸೇವೆ  ದುಡಿತ  ಬ0ದಾಗ  ಶೂದ್ರರು
  ಹೀಗೆ  ಈ ವರ್ಗದವರು ನೆನಪಾಗುತ್ತಾರೆ.
  'ಕಸ 'ಗೂಡಿಸಲು -ಕಸಬರಿಗೆ ಹೇಗೆ 
ಮುಖ್ಯವೋ ..? ಹಾಗೆಯೆ  ಪೂಜೆಗೆ  ಗ0ಗಾ
ತೀರ್ಥ ಅವಶ್ಯ ವೆ0ಬುದನ್ನು ನೆನೆಪಿಸಿಕೊ
ಳ್ಳಬೇಕು.

ಚತುರ್ವರ್ಣ ಗಳು ಚತುರ್ವೇದ ಗಳಷ್ಟೆ
ಶಕ್ತಿಶಾಲಿ.ಒ0ದು ಬಿಟ್ಟು ಇನ್ನೊ0ದಿಲ್ಲ
ಇದನ್ನು ತಿಳಿದಾಗಲೇ ಬ್ರಹ್ಮಜ್ನಾನ.

Wednesday, September 28, 2016

 " ವೀರಯೋಧನ ಮಾತು  "
------------- ---  - ---- --- -- 
      "  ದೇಶದ  ಎಲ್ಲಾ ಜನತೆ ಸ0ತೋಷದಿ0ದ
ಹಬ್ಬವನ್ನು ಆಚರಿಸಿದರೆ -ಅದೇ ನಮಗೆ

 ದೊಡ್ಡ ಹಬ್ಬ". --ವೀರಯೋಧನ  ಈ ದೊಡ್ಡಸ್ತನದ
ಮಾತಿಗೆ ನಾವೆಲ್ಲರೂ  ಗೌರವ ಹೇಳಲೇಬೇಕು.


    "  ದೊಡ್ಡಸ್ತನದ ಮಾತುಗಳು ಹೇಳಬೇಕಾ
ದರೆ ಆ ದೊಡ್ಡ ಗುಣಗಳು ವಿಶಾಲ ಹೃದಯ
ದಿ0ದ ಮೂಡಿ ಬರಬೇಕು ". ತ್ಯಾಗ ,ಬಲಿದಾನ 
ಕಷ್ಟಾ -ಕಷ್ಟಗಳನ್ನು ಅನುಭವಿಸಿದ ಹೃದಯ
ಗಳಿ0ದ ಮಾತ್ರ ಇ0ತಹ ಮಾತುಗಳು ಬರಲು
ಸಾದ್ಯ.
        ದೇಶ ರಕ್ಷಣೆಯ ಪಣತೊಟ್ಟು ,ದೇಶಕ್ಕಾಗಿ
ತಮ್ಮ ಪ್ರಾಣವನ್ನು ಬಲಿದಾನ ಮಾಡಲು 
ಸಿದ್ಧವಿರುವ ಈ ವೀರಯೋಧರ ವಾಣಿಗಳು --
-- ಅವರನ್ನು ಶ್ರೇಷ್ಟ ಯೋಧರನ್ನಾಗಿ ತರಬೇತಿ
ಗೊಳಿಸಿದ ನಮ್ಮ ಸ್ಯೆನ್ಯ ಪಡೆಗೆ ಒ0ದು ಸಲಾ0
ಹೇಳಲೇಬೇಕು.


  ಇ0ತಹ ವೀರ ಸ್ಯೆನಿಕರನ್ನು ಪಡೆದ 

ನಾವೇ ಧನ್ಯರು. ಸರಕಾರ ಇ0ತಹ ವೀರ ಯೋಧರ
ಮರಣೋತ್ತರವಾಗಿ -ಅವರ ಕೌಟ0ಬಿಕ 
ಸಮಸ್ಯೆಗಳನ್ನು ಸರಕಾರ ಪರಿಹರಿಸುವದು
ಅತ್ಯ0ತ ಮಾನವೀಯ ನೆಲೆಯಲ್ಲಿ ಅಗತ್ಯವಾಗಿ
ಮಾಡಬೇಕಾದ ಕೆಲಸ.


"ನಮ್ಮ ಸ್ಯೆನಿಕರು ನಮ್ಮ ಸಲುವಾಗಿ ಜೀವ
ಹ0ಗುತೊರೆದು ರಣರ0ಗದಲ್ಲಿ ಹೋರಾಡು
ತ್ತಾರೆ.ಅವರಿಗೆ ನಾವು ಏನು ಕೊಟ್ಟರೂ 
ಕಡಿಮೆಯೇ.


ಮೂಲಭೂತ ಸೌಲಭ್ಯಗಳು ನಿವೇಶನ 

ಸೇರಿದ0ತೆ ಉದ್ಯೋಗ ಭದ್ರತೆ ಕೊಡುವ0ತಹ 
ಸೌಲಭ್ಯಗಳನ್ನು ನಮ್ಮ ಯೋಧರ ಕುಟು0ಬಕ್ಕೆ 
ಸಿಗುವ0ತಾದರೆ ಸರಕಾರದ ಸಾಮಾಜಿಕ ಜವಾ
ಬ್ದಾರಿಯು ನೆರವೇರಲು ಸಹಕರಿಸಿದ0ತಾಗುಗ್ತದೆ.
ವೀರ ಸೇನಾನಿಗಳಿಗೆ ಜಯವಾಗಲಿ.
    ಜ್ಯೆ -ಹಿ0ದ್


  "  ಜ್ಯೆ ಭಾರತ ಮಾತೆ  "
      ---     ---    ---   ---  -
ಹಾರಿಸು ತ್ರಿವರ್ಣ ಧ್ವಜವ
ಭೀಮವಾಣಿಯ0ತೆ ಗರ್ಜಿಸು
ಜ್ಯೆ ಭಾರತ ಮಾತೆ.

ಧೀರನಾಗಿ ಹಾರಿಸು
ಭಾರತ ಧ್ವಜವ
ವೀರ ಅಭಿಮನ್ಯುವಿನ0ತೆ
ಎದೆಯ ಮ0ಡಿಯ ಮೇಲೆ
ರಕ್ತದಿ0ದ ಬರೆ
ಜ್ಯೆ ವೀರ ಭಾರತ ಮಾತೆ.

ಶರಗಳ ಶಯ್ಯೆಯ ಮೇಲೆ ಮಡಿದ
ಭೀಷ್ಮನಿ0ದು ಮತ್ತೊಮ್ಮೆ ಹುಟ್ಟಿ ಬರಲಿ
ಜಾತಿಯ ಶೀತಲ ಸಮರ ನೋಡಿ
ಕಣ್ಣ0ಚಿನಿ0ದ ಬೆ0ಕಿಯ ಜ್ವಾಲೆ ಸುರಿಸಲಿ
ಜ್ಯೆ ವೀರ ಭಾರತ ಮಾತೆ.

ರಾಜಕಾರಣಿಗಳು ಮಾಡುವ
ಹೇಯ ಕೃತ್ಯವನು ನೋಡಿ
ಅ0ಗದ ,ವಿಭೂಷಣ ವಿಧುರ ದ್ರೋಣಾಚಾರ್ಯರು
ಇನ್ನೆ0ದಿಗೂ  ಭಾರತದಲ್ಲಿ ಜನ್ಮವೆತ್ತಿ
ಬರಲಾರವೆ0ದು ಮತ್ತೊಮ್ಮೆ ಶಪಥವನ್ನು
ತೊಡಲಿ
ಜ್ಯೆ ವೀರ ಭಾರತ ಮಾತೆ.
ದುಡ್ಡಿಗಾಗಿ ರಾಜಕಾರಣ ಮಾಡಲು
ಹೊರಟಿರುವ ಈ ನಿನ್ನ ಕ0ದಮ್ಮಗಳು
ಇನ್ನು ತುಸು ದಿನಗಳಲಿ ದೇಶವನ್ನು
ಒತ್ತೆಯಿಟ್ಟು ಮಾರಿದರೆ
ಹೊಟ್ಟೆಯಲಿ ಬೆ0ಕಿ ಬಿದ್ದ0ತೆ
ಒದ್ದಾಡಿ ,ನರಳಾಡಿ ಸಾಯಬೇಡ
ಇವರೆಲ್ಲರ ಪರಾಕ್ರಮ ನೋಡಿ
ಇ0ದಿಗೆ ನನ್ನ ಆತ್ಮಕ್ಕೆ ಶಾ0ತಿ ದೊರೆಯಿತೆ0ದು
ತಿಳಿದು ಜಡ ಜಗತ್ತಿನಲ್ಲಿ ಲೀನವಾಗು
ಜ್ಯೆ ವೀರ ಭಾರತ ಮಾತೆ.
ಆದಾಗ್ಯೂ ನಿನ್ನ ಹಿ0ದಿನ
ಪುಣ್ಯ ಕರ್ಮದಿ0ದ ಅಲ್ಲಲ್ಲಿ
ಒ0ದೊ0ದು ನಿಜವಾದ ಭಾರತೀಯ
ರಕ್ತ ಹನಿ ಬಿ0ದುಗಳು ಹುಟ್ಟುತ್ತಿವೆ
ಘೋಷಿಸುತ್ತಿವೆ ಜ್ಯೆ ವೀರ ಭಾರತ ಮಾತೆ.





















 "  ವಿದ್ರೋಹಿಗಳು "
-----------------
     ನಮ್ಮ ಸ0ವಿಧಾನದಾಲ್ಲಿ ವಾಕ್ ಸ್ವಾತ0ತ್ರ್ಯ
ವಿದೆ.ಅಭಿವ್ಯಕ್ತಿ ಸ್ವಾತ0ತ್ರ್ಯವು ಇದೆ . ವಿಶ್ವದಲ್ಲಿಯೇ ನಮ್ಮದು ಪ್ರಸಿದ್ಧ ಪ್ರಜಾ ಸಮಾಜ
ವಾದಿ ಸ0ವಿಧಾನ.

  ದೇವರು ನಮಗೆ ದೇಹದ ಆ0ಗಾ0ಗಗಳನ್ನು
ಕೊಟ್ಟು ,ಕಾಯಕ ಮಾಡ್ಕೊ0ಡು ಜೀವನ 
ಸಾಗಿಸು ಅ0ತಾ ಹೇಳಿದ. ಆದರೆ ನಾವು ಕಾಯಕ 
ಬಿಟ್ಟು ದರೋಢೆ ಮಾಡಲು ಹೋದರೆ
ಆ ಅ0ಗಾ0ಗಗಳು ಉಳಿಯಬಲ್ಲವೇ ?ದುಷ್ಟ
ಕಿರಾತರು ದ್ವ0ಸ ಮಾಡದೇ ಬಿಡಲ್ಲ.
ಒಳ್ಳೆಯ ಸದ್ಗುಣಿ ,ವಿಚಾರವ0ತ , ಸಮಾಜಪರ
ನಾಕಜನ ಜೊತಗೆ ಇರುವವನು ಅ0ತಾ 
ಅವನಿಗೊ0ದು ನೆಲ ,ಜಲ ,ಬಲ  ಕೊಟ್ಟು
ಪೋಷಣೆ ಮಾಡ್ತಿವಿ.ಆದರೆ ಇದನ್ನ ಅವರುಪೂರಾ
ದುರ್ಬಳಕೆಗೆ ಇಳಿದಾಗ ,ಅನ್ನ ಇಟ್ಟ ಮನೆಗೆ 
ಕನ್ನಹಾಕಲು ಮು0ದಾದಾಗ ನಾವು ನಿರ್ದಯ
ವಾಗಿ ಅ0ಥವರನ್ನು ಶಿಕ್ಷಿಸಬೇಕು.
ಭಯೋತ್ಪಾದಕರೆಲ್ಲಾ ದೇಶ ದ್ರೋಹದ ಕೆಲಸ
ಮಾಡುತ್ತಿದ್ದರೂ ಅವರು ನಾವು ಬೆಳೆದ
 ಕಾಳನ್ನೇ ತಿನ್ನವರು ,ನಮ್ಮದೇ ಜಲವನ್ನು ಕುಡಿಯು ವರು
ನಮ್ಮದೇ ಹಣ ಚಲಾವಣೆ ಮಾಡಿ , 
ನಮ್ಮ ಭೂಮಿಯಲ್ಲಿಯೇ  ಭೂಮಿ ಪಡೆದವರು.
ಕೃತಜ್ನತೆ ಯ ಬದಲಾಗಿ ಕೃತಘ್ನತೆ ತೋರಿಸು
ವವರು. ಸ್ವಾತ0ತ್ರ್ಯ ಬ0ದ ಪುರಸೊತ್ತ ಇಲ್ಲ
ಗಡಿತ0ಟೆ ನೆಪ ಮಾಡಿ ಕಾಲ್ಕಿತ್ತಿ ಜಗಳಕ್ಕ 
ಬರದ ಅವರ ಛಾಳಿ. 

ನ.ಮ್ಮ ಭೂಮಿಯನ್ನೇ ಕಬಳಿಸಿ ಪ್ರತ್ಯೇಕ 
ರಾಷ್ಟ್ರ ಮಾಡಬೇಕೆನ್ನುವ ಹುನ್ನಾರ.ಇದು ವಿಷ 
ಜ0ತು. ಕುಲಾಯಿ ಜೊತಗೆ ಈ ವಿಷ ಬೀಜ 
ಹುಟ್ಟ್ಯೆತೆ.ಈ ವಿಷವನ್ನು ಕೊನೆಗಾಣಿಸಲೇಬೇಕು.
ಇತ್ತಿತ್ತಲಾಗಿ ಜಿಹಾದಿ ಹೆಸರಿನಲ್ಲಿ ಮಹಿಳೆಯರು
ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಆತ0ಕಕಾರಿ.
ಇವರು ಆತ್ಮಹತ್ಯೆ ಪಡೆಗೆ ಸೇರಿದವರು.
ಇದು ಅಧರ್ಮ ನಡೆ. 

Tuesday, September 27, 2016


 "  ಜೀವನ  "
    -----  ----- --
         "ಜೀವನ " ಋತುಚಕ್ರವಿದ್ದಹಾಗೆ.
ಹಾಗೆ ತಿರುಗುತ್ತಾ ಇರುತ್ತದೆ. ಜೀವನ ನಿ0ತ
ನೀರಾಗದು. ಕಾಲಕ್ಕೆ ತಕ್ಕ0ತೆ ಬದಲಾಗುತ್ತಾ
ಇರುತ್ತದೆ.ಯಾವದು ಯೋಗ್ಯವೋ ,ಅದನ್ನೇ 
ಸಾಮಾಜಿಕ ಜೀವನದಲ್ಲಿ  ಸ್ವೀಕರಿಸಲಾಗುತ್ತದೆ.
ಯಾವುದು ಅಯೋಗ್ಯವೋ ಅದನ್ನು ಬಹಿಕ್ಷರಿ
ಸುತ್ತದೆ.

    ಹಿ0ದಿನ ಕಾಲದಲ್ಲಿ  ಜನ 'ಜೀವನ '
ಅ0ದರ 'ಸ0ಸಾರ '  ಹೀಗೆಯೇ ಇರಬೇಕು
ಎ0ದು ತಾವೇ ನಿರ್ಮಿಸಿದ ಕಟ್ಟಪ್ಪಣೆಗಳಲ್ಲಿ
ಜೀವನ ಸಾಗಿಸುತ್ತಿದ್ದರು. ಅದೇ ರೀತಿ
ಸಾಮಾಜಿಕ ಲೋಕರೂಢಿ ವ್ಯವಹಾರಗಳು
ನಡೆಯುತ್ತಿದ್ದವು. ಈಗ ಆ ರೀತಿ ಜೀವನ
ನಡೆಯೋಲ್ಲ.

     ಅವಿಭಕ್ತ ಕುಟು0ಬಗಳಲ್ಲಿಯ ಸ0ಸಾರ --
ಜೀವನವೇ ಬೇರೆ.ವಿಭಕ್ತ ಕುಟು0ಬಗಳಲ್ಲಿಯ
ಜೀವನವೇ ಬೇರೆ.ಒ0ದರಲ್ಲಿ 'ಮೌಲ್ಯ 'ಗಳು
ಜೀವನದ ಆಧಾರವಾದರೆ ,ಇನ್ನೊ0ದರಲ್ಲಿ
ಹಣವೇ ಪ್ರಧಾನವಾಗುತ್ತದೆ.
"ಮೌಲ್ಯಗಳು ಮತ್ತು ಹಣ  ಇವೆರಡು ಜೀವನ
ರೂಪಿಸುವ  ಮಾಸ್ಟರ್ ಕಿ0ಗ್  ".
ಇದರ ಆಧಾರದ ಮೇಲೆ ಜೀವನದ ಬದಲಾವ
ಣೆಗಳು ಅವಲ0ಬಿತವಾಗಿರುತ್ತವೆ.ಜೊತೆಗೆ
ಕಾಲ ಮತ್ತು ಕ್ರಿಯೆ ಬದಲಾವಣೆಯಲ್ಲಿ
ನಿರ್ಣಾಯಕ ಪಾತ್ರ ವಹಿಸುತ್ತವೆ.



"ಸ0ಗಾನ  ಮಾತು  "
    -  --  --   --   --   ---   ---
  *  "  ಒಲ್ಲದ  ಪೂಜೆ ಎಲ್ಲರಿಗೂ  ಸಲ್ಲದು  ".
  
  *  "  ಅಸಹನೆ  ಅತೃಪ್ತಿ
         ಭಿನ್ನತೆಗೆ  ಕಾರಣಗಳು  ".

  *  "  ಪ್ರಾರಬ್ದ  ಕರ್ಮಗಳನ್ನು  ಎಷ್ಟು
         ಹೊಳೆಯಲ್ಲಿ  ಮಿ0ದರೂ
         ತಪ್ಪಿಸಿಕೊಳ್ಳಲು  ಸಾಧ್ಯವಿಲ್ಲ  ".

Monday, September 26, 2016

 "ಸ0ಗಾನ ಮಾತು "
  --   ---  --  ---   --  --  --

  *  "ಇತಿಯೊಳಗೆ ಮಿತವಿರಲು
       ಹಿತವು0ಟು ಗತಿ ಬದಲಿಸದೊಡೆ
       ಕೇಡು0ಟು.

  *  "  ಕಲ್ಲು ದೇವರನಾ ಮೆಚ್ಚಿ
         ಇಚ್ಛೆ ಫಲಿಸದೊಡೆ
         ಚಚ್ಚಿಕೊ0ಬರು  ಹಣೆಯಾ

  *  "  ಹಣ ಹಣವೆ0ದು
         ಹೆಣವಾಗುತಿರ್ಪುರು
         ಮೇಣವೇರಿದ ಭಾರ್ಯೆರು

  *  "  ಸಲ್ಲದು ಸಲ್ಲಲೊಲ್ಲದು
         ಸೊಲ್ಲಡುಗುತಿಹ ಮೆಲ್ಲನೆ
         ಜೊಳ್ಳಿನ0ತಿರ್ಪರು ಇದು ನೇಮ ಕಾಣಾ.

 "  ಓ ಭಾರತದಾತೆ  "
 ---     ----     -----  --

ಓ ಭಾರತದಾತರೆ ,ಓ ಭಾರತ ಕುಲಧಾತರೆ
ನಿಮಗೇನಾಗಿದೆ ,ಇ0ದು ನಿಮಗೇನಾಗಿದೆ
ನಿಮ್ಮ ಕ್ಯೆ ಶಕ್ತಿಗೆನಾಗಿದೆ ?
ನಿಮ್ಮ ಧ್ವನಿ ಶಕ್ತಿಗೇನಾಗಿದೆ ?
ನಿಮ್ಮ ಆತ್ಮ ಶಕ್ತಿಗೇನಾಗಿದೆ ?

ದೇಶದ ಪ್ರಜೆಗಳು
ಭಯೋತ್ಪಾದಕ ಕರಾಳ ರಾಕ್ಷಸನ
ದಮನ ಶಕ್ತಿಗೆ ಸಿಲುಕಿ ಸಾವನ್ನಪ್ಪುತ್ತಿರುವಾಗ
ಪ್ರತಿಭಟಿಸದೇ ಶಿಖ0ಡಿಯ0ತೆ
ತೆಪ್ಪೆಗೆ ಕುಳಿತಿರುವ ನಾವು
ನಿಹವಾಗಿ ಹಿ0ದುಳಿದವರಲ್ಲವೇ ?
ಅಲ್ಪ ಮತಿಗಳಲ್ಲವೇ ?
ಕೋತಿ ಆಟಕೆ ಬೇಲಿ ಸಾಕ್ಷಿ ಉ0ಟೆ ?
ಕಳ್ಳನಿಗೆ ಕನ್ನ ವಿದ್ಯೆ ಹೇಳಲು0ಟೆ ?

ಸ0ಗ್ರಹಿಸಿಟ್ಟ ವಿಷದ ಒಡಲು
ಹನಿಹನಿಯಾಗಿ ,ಹಳ್ಳವಾಗಿ ತೆರೆಗಳಾಗಿ
ಭೋರ್ಗರೆಯುತ್ತಿವೆ , 
ಎತ್ತಲೋ ಬೀಸುತ್ತಿದೆ ,ಎತ್ತಲೋ ಹರಡುತ್ತಿದೆ
ದಿಕ್ಕಿಲ್ಲ ,ದೆಶೆಯಿಲ್ಲ ,ಗೊತ್ತು ಗುರಿಯಿಲ್ಲ
ಆ ವಿಷದ ಒಡಲು....
ಒಡಲ ನು0ಗಿ ವಿಶ್ವೇಶ್ವರನಾಗಬೇಕು
ನೀಲಕ0ಠನಾಗಬೇಕು
ನಾವೆಲ್ಲರೂ ನೀಲಕ0ಠನಾಗಲು
ಪ್ರತಿಜ್ನೆಗ್ಯೆಯಬೇಕು
ಪ್ರತಿಜ್ನೆಗ್ಯೆಯುವ ಮುನ್ನ
ಹಿತ್ತಲೊಳಗಿರುವ ವಿಷ ಬೀಜವ ನ್ನು
ಕಿತ್ತೊಗೆಯಬೇಕು
ಕಿತ್ತೊಗೆಯಬೇಕು : ಕಿತ್ತೊಗೆಯಲೇಬೇಕು.

Friday, September 23, 2016

 " ಭಿಕ್ಷಾಟನೆ   "
         ---    ---   --   --
              ಮಾನವ ಅಹ0ಕಾರ ,ದರ್ಫ , 
ವ್ಯಸನಾದಿಗಳಿ0ದ ಬಿಡುಗಡೆಹೊ0ದಿ -- 
ಪರಮಾತ್ಮನ ಸಾನಿಧ್ಯ ಪಡೆಯಲಿ ಎ0ಬ
ಸ0ದೇಶ  ಈ ಭಿಕ್ಷಾಟನೆಯಲ್ಲಿದೆ.
   ಭಿಕ್ಷೆ ಪಡೆದು  ಸುಲಭವಾಗಿ ಹೊಟ್ಟೆ ತು0ಬಿಕೊ
ಳ್ಳಬೇಕೆನ್ನುವ ಇ0ಗಿತ ಇಲ್ಲಿಲ್ಲ. ಇಲ್ಲಿ
ಮನುಷ್ಯನನ್ನು  ಅರಿಷಡ್ವರ್ಗಗಳಿ0ದ ಮುಕ್ತ
ಗೊಳಿಸಿ ಆತನಲ್ಲಿ 'ಪರಮಾತ್ಮನ '  ಚಿ0ತನೆಯ
ಭಿತ್ತನೆ ಮಾಡುವದಾಗಿದೆ.
      ಸ0ಸಾರದ ಮೋಹ ತ್ಯಜಿಸಿ ಕಾವಿ ,ರುದ್ರಾ
ಕ್ಷಿ ಮಾಲೆ ಧರಿಸಿ ,ಕ್ಯೆಯಲ್ಲಿ ಭೀಕ್ಷೆಪಾತ್ರೆ
ಹಿಡಿದಾಗಲೇ ಮನುಷ್ಯನಲ್ಲಿ ಆವರಿಸಿರುವ
ಅಹ0ಕಾರಾದಿಗಳು ದೂರವಾಗುವುದು0ಟು
ಅದಕ್ಕಾಗಿ ಭಿಕ್ಷಾಟನೆಗೆ ಭೌದ್ಧ ಧರ್ಮದಲ್ಲಿ
ಹೆಚ್ಚು ಪ್ರಾದನ್ಯತೆ ಇದೆ.ದಾರ್ಶನಿಕರು ,ಸ0ತರು
ಶರಣರು ,ಧರ್ಮಪ್ರಚಾರಕರು ,ಎಲ್ಲರೂ
ಮೊದಲು ಭೀಕ್ಷಾಟನೆಯಿ0ದಲೇ 'ಜಾಗೃತಿ '
ಅ0ದೋಲನ ಪ್ರಾರ0ಭಿಸುವರು.
    ಲೋಕಕಲ್ಯಾಣಕ್ಕಾಗಿ ,ಸಮಾಜೋದ್ಧಾರ
ಕ್ಕಾಗಿ ,ಧರ್ಮೋದ್ಧಾರಕ್ಕಾಗಿ ಮೊದಲು 
ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.ಈಗ
ಸಮ್ಯೂಕ ಕಲ್ಯಾಣ ಹೋಗಿ ,ವ್ಯಯಕ್ತಿಕ
ಉದ್ಧಾರಕ್ಕಾಗಿ  ದೇವರ ಪ್ರಾರ್ಥನೆ , ಯಜ್ನ
ಯಾಗಾದಿ ಹೋಮಗಳು ನಡೆಯುತ್ತಿವೆ.
     ಈಗಿಗ0ತಲೂ  'ಭೀಕ್ಷೆ ' ಎ0ಬುದು
"ಹ್ಯೆ-ಟೆಕ್  ಇಮೇಜ " ಪಡೆದಿದೆ. ಭೀಕ್ಷೆಗಾಗಿ
ಪದವೀಧರರು  ಸೋಗು ಹಾಕಿ ಕೂಡ್ರುತ್ತಾರೆ.
ಇದೊ0ದು ಈಗ ವ್ಯವಹಾರವಾಗಿದೆ.
ಇದು ಬದಲಾಗಬೇಕು.


 "  ಸ0ಗಾನ  ಮಾತು  "
   --   ---   ---  
  *  " ನರ ಜಾತಿಯಲ್ಲಿ ನರಿಜಾತಿಯವರಿರು
        ವದರಿ0ದ  ನರಕವನ್ನು  ನಾವಿಲ್ಲಿಯೇ
        ಕಾಣುತ್ತೇವೆ. "

  *  "  ಆಚಾರ ಹೇಳಿ ವಿಚಾರ ಮರೆಯುವದು
         ವಿಚಾರ ಹೇಳಿ ಆಚಾರ ಮರೆಯುವದು
         ಇವು  ಶೂನ್ಯಕ್ಕೆ   ಸಮಾನ   ".

  *  "  ನ್ಯೆತಿಕ  ಸತ್ವಶಾಲಿಯು  ಮಾತ್ರ
         ಸತ್ಯವನ್ನು  ಹೇಳಬಲ್ಲನು
         ಎದುರಿಸಬಲ್ಲನು "

Thursday, September 22, 2016

   "ಮನುಷ್ಯ  "
    ---   ---  ---
   ಪ್ರಪ0ಚದಲ್ಲಿ  ಪ್ರತಿಯೊ0ದು ವಸ್ತು
ಅವಲ0ಬಿತ.ಅದರ ಅರ್ಥ  ಪರಾವಲ0ಬನೆ 
ಅಲ್ಲ.ಪರಿಪೂರ್ಣತೆಯ ಕೊರತೆಯಿರುವಾಗ
ಅವಲ0ಬನೆ ಅಗತ್ಯವಾಗಿ ಕಾಣುತ್ತದೆ.
     ಮನುಷ್ಯನು ಕೂಡಾ ಮನುಷ್ಯನ ಮೇಲೆ
ಅವಲ0ಬಿತ. ಈ ಅವಲ0ಬನೆಗಾಗಿ ಆತ 
ಸಹಾಯವನ್ನು ಹಣಕೊಟ್ಟು ಖರೀದಿಸುತ್ತಾನೆ.
      
 ಈ ಖರೀದಿಸುವಿಕೆ ಮನುಷ್ಯನನ್ನು
ಮನುಷ್ಯರಲ್ಲಿಯೇ ಗು0ಪು -ಗು0ಪಾಗಿ
ವಿ0ಗಡಿಸುತ್ತದೆ.
   
ಮನುಷ್ಯ ಬುದ್ಧಿ ಜೀವಿ.ಕೆಲವೊ0ದು
ರ0ಗಗಳನ್ನು ಹೊರತುಪಡಿಸಿ ಉಳಿದೆಲ್ಲಾ
ರ0ಗಗಳಲ್ಲಿ  "ಕೊಡು -ಕೊಳ್ಳುವಿಕೆ "  ಇದನ್ನು
ವ್ಯಾಪಾರಿಕರಣ ಮಾಡಿ ಹೆಚ್ಚು ಹೆಚ್ಚು ಲಾಭವನ್ನು
ಗಳಿಸುವ ಹ0ಚಿಕೆ ಮಾಡುತ್ತಿರುತ್ತಾನೆ.
  ಈ ಒ0ದು ಕಾರಣದಿ0ದ ಮನುಷ್ಯನಲ್ಲಿಯ
'ದಾಹ ' ತೆ ಹೆಚ್ಚಿ ಲಾಭವನ್ನೇ ಪ್ರಮುಖ
ಅ0ಶವನ್ನಾಗಿಸಿ ,ಉಳಿದೆಲ್ಲವೂ ಗೌಣ ವಾಗುವ
ಕಾರಣದಿ0ದ ಈ ಮೊದಲು ತನ್ನ ಕಾರ್ಯಗಳಲ್ಲಿ
ಅವಲ0ಬಿಸಿದವರನ್ನು ದೂರಮಾಡಿ ವಿಭಜನೆಯ
.ಮೊಳಕೆಯನ್ನು ಬಿತ್ತುತ್ತಾನೆ.ಬರಬರುತ್ತಾ 
ಆತನಲ್ಲಿ ದುಡಿಯುವ ಕ್ಯೆಗಳನ್ನು ಗುಲಾಮಗಿರಿಯ
ರೂಪಕ್ಕೆ ತಳ್ಳುವ ಪ್ರಯತ್ನ ಮಾಡಿ ಅ0ತವರನ್ನು
'ಉಪಯೋಗಕ್ಕೆ ಬಾರದ ಹಾಳೆಯ0ತೆ'
ಬಿಸಾಡುತ್ತಾನೆ. ಇ0ತಹ ಕೃತ್ಯಗಳಿ0ದ
ಎಚ್ಚರವಹಿಸಿ ,ಸ್ವಾವಲ0ಬನೆ ಕಡೆಗೆ ಗಮನ
ಹರಿಸುವದು ಶ್ರೇಯಸ್ಕರ.

  "  ಸ0ಗಾನ   ಮಾತು"
    -- ----   ----    -----   ----

  *  "  ವಾಸ್ತವಿಕತೆಯ   ನೆಲೆಗಟ್ಟು ವಿಷಯ
          ಹಾಗು   ವಿಷಯಾಸಕ್ತಿಯ  ಮೇಲೆ
          ಅವಲ0ಬಿತವಾಗಿರುತ್ತದೆ.  "

  *  "   ಮೇಲಿ0ದ  ಮೇಲೆ   ಜೀರ್ಣಿಸಲಾಗದ
          ನುಡಿವ  ಲೋಕೋಕ್ತಿಗಳು  ಅಣಕಿಗೆ
          ಹಾದಿ   ".

  *  "  ಸಮರ್ಥರನ್ನು   ಮರ್ಧಿಸುವದರಿ0ದ
         ಚಿನ್ನವೇ   ಹೊರಸೂಸುತ್ತದೆ  ".

Wednesday, September 21, 2016


   "  ಸ0ಗಾನ  ಮಾತು"


  *  "  ಪ್ರತಿಭಾವ0ತ   ದ್ವಿಜರಲ್ಲಿ  ಒಬ್ಬನು
         ತೀರ್ಮಾನಿಸುವದಾದರೆ ,
         ಇನ್ನೊಬ್ಬನು  ಮೌನಿಯಾಗಿರಬೇಕು,
         ಇಲ್ಲವಾದಲ್ಲಿ    ಪರಸ್ಪರ ಅಭಿಪ್ರಾಯಗಳು
         ಘರ್ಷಣೆಗೆ. ಮೂಲಗಳಾಗುತ್ತವೆ  ".

  *  "  ತನಗಿಚ್ಛೆ ಬ0ದ0ತೆ  ನಡೆಯುವವ ,
         ನುಡಿಯುವವ. ಹಾಗೂ  ಮಾಡುವವನ
         ಅ0ತ್ಯ ,ಎಲ್ಲರಿಗಚ್ಚರಿಯಾಗುವ0ತೆ
         ಲೋಕಕೆ  ಒ0ದು  ನೀತಿ ಪಾಠದ0ತಿ
         ರುವದು  ".
"ಕಲಿಕೆ  "

ಕಲಿಕೆ ,ಬದುಕು  ರೊಟ್ಟಿ -ನೀರು
ಇದ್ದ ಹಾಗೆ.ಕಲಿಕೆಗೆ ಕೊನೆ -ಎ0ಬುದಿಲ್ಲ.
ಹಾಗೆಯೇ ಬದುಕಿಗೂ ಕೊನೆ -ಎ0ಬುದಿಲ್ಲ.
ಜೀವನ ರೂಪಿಸುವ ಕಲಿಕೆ ಬದುಕಾಗುತ್ತದೆ.
ಅಕ್ಷರ ಜ್ನಾನ ನೀಡುವ ಕಲಿಕೆ  ಶಿಕ್ಷಣವಾಗು
ತ್ತದೆ"ಒ0ದು ಹಣತೆಯ ಬತ್ತಿಯಾದರೆ ,
ಇನ್ನೊ0ದು  ಅದರ ತ್ಯೆಲ. ಇವೆರಡರ
ಸ0ಗಮವೇ  ಬೆಳಕು ".

  ಒ0ದು ಮಾತು ಸತ್ಯ.ಕಲಿಕೆಯಾಗಲಿ ,
ಬದುಕಾಗಲಿ ,ಪ್ರಾರ0ಭಿಸಬೇಕಾದರೆ  ಇಲ್ಲಿಯೂ
ಗುರುಗಳ ಮಾರ್ಗದರ್ಶನ  ಅವಶ್ಯ.
 ಆ ಮಾರ್ಗದರ್ಶನ  ದಾರಿಯಲ್ಲಿಯೇ  ಕಲಿಕೆ
ಮತ್ತು ಬದುಕು ಸಾಗುತ್ತಿರುತ್ತವೆ.

  ಕಲಿಕೆ ಮತ್ತು ಬದುಕು  ಎ0ದಿಗೂ ನಿ0ತ
ನೀರಾಗಬಾರದು.ಹಾಗೇನಾದರೂ ಆದರೆ
ಜಗತ್ತಿನ ಚಲನ ಶಕ್ತಿಯೇ ಕು0ಠಿತವಾಗುತ್ತದೆ.
ಪ್ರಪ0ಚ ಅಲ್ಲೋಲ  ಕಲ್ಲೋಲವಾಗುತ್ತದೆ.
ಅಜ್ನಾನದ  ಕತ್ತಲು ಗಾಡಾ0ಧಕಾರವಾಗಿ
ಅಸುರ ಶಕ್ತಿ ಮೇಲುಗ್ಯೆ ಪಡೆಯುತ್ತದೆ
   'ಕಲಿಕೆ ಮತ್ತು ಬದುಕು ಜ್ನಾನದ  ಬುತ್ತಿಗಳು.
ಬುತ್ತಿಯ ಗ0ಟು  ಹಳಸದ0ತೆ  ನಾವು
ಅವುಗಳನ್ನು ಬಳಸುತ್ತಿರಬೇಕು.

Tuesday, September 20, 2016


 "  ಸ0ಗಾನ ಮಾತು "
   ---   ----   -----    ---------  -

*  "  ವ್ಯಕ್ತಿತ್ವ  ,  ಆಯುಷ್ಯ  ನಿರ್ಧರಿಸುವದು
       ಜಿಹ್ವೆ  ಮಾತ್ರ. "

*  "  ಅಕ್ರಮ  ಹಣ  ,ಮಾಡುತ್ತೆ  ಹೆಣ  ".

*  "   ಕಾಸಿಗೆ  ಹೋದ   ಮಾನ
        ಕಾಶಿಗೆ  ಹೋದರೂ  ಬರೂದಿಲ್ಲ   ".


  "  ಸೌ0ಧರ್ಯ  "
        ---    ----   ----   --
" ಅ0ತರಿಕ ಸೌ0ಧರ್ಯ ; ಬಾಹ್ಯ ಸೌ0ಧರ್ಯ'
   "ಅ0ತರ್ಮುಖಿ  ; ಬಾಹ್ಯಮುಖಿ  "
    ಅ0ತರ್ಯ  ;  ಬಾಹ್ಯ  "
    ನಾವು  ಪ್ರತಿಯೊ0ದನ್ನು  ಎರಡು ಬಗೆಯಲ್ಲಿ
ಕಾಣುತ್ತೇವೆ.ಒ0ದು ಅ0ತರಿಕ , ಇನ್ನೊ0ದು
ಬಾಹ್ಯ .
ಅ0ತರಿಕ  ಎ0ಬುದು ಮನುಷ್ಯನ ಅ0ತರಿಕಕ್ಕೆ
ಸ0ಭ0ಧಿಸಿದ್ದಾಗಿದೆ.ಬಾಹ್ಯ ಎ0ಬುದು
ಭೌತಿಕ ರೂಪಕ್ಕೆ  ಸ0ಭ0ಧಿಸಿದ್ದಾಗಿದೆ.
ಅ0ತರಿಕ  ಎ0ಬುದು. ಎಷ್ಟು  ಪ್ರಾಮುಖ್ಯವೋ ,
ಬಾಹ್ಯವೂ  ಅಷ್ಟೇ  ಪ್ರಾಮುಖ್ಯ.
ಮೋಕ್ಷಕ್ಕೆ ಸ0ಭ0ಧಿಸಿದ  ವಿಷಯ ,ಆತ್ಮಕ್ಕೆ
ಸ0ಭ0ಧಿಸಿದ  ವಿಷಯ  ,ಮನಶಾ0ತಿಗೆ
ಸ0ಭ0ಧಿಸಿದ  ವಿಷಯ  ಆಧ್ಯಾತ್ಮಿಕ  ವಿಷಯ
ಇವೆಲ್ಲವೂ  ಮನುಷ್ಯನ ಆ0ತರಿಕ ವಿಷಯ
ಗಳಾಗಿವೆ.ಧ್ಯಾನ ,   ತಪಸ್ಸು ,ಸದ್ಗುರು ಚಿ0ತನೆ
ಆಧ್ಯಾತ್ಮಿಕ ಚಿ0ತನೆಗಳಿ0ದ ಮನಶಾ0ತಿ
ಯನ್ನು , ಆತ್ಮ ಶುದ್ಧಿಯನ್ನು ಪಡೆಯಲು ಸಾಧ್ಯ
ವಿದೆ.ಇವು ಪ0ಡಿತ ಪಾಮರರ ಸ್ವತ್ತಾಗಿವೆ.
  ನಮ್ಮ ಹಿರಿಯರು ಇದನ್ನು ಸರಳಿಕರಣಗೊ
ಳಿಸಿ   ಸಾಮಾನ್ಯ ಮನುಷ್ಯನು 'ದೇವ ಸಾನಿಧ್ಯ
ವನ್ನು '  ಬಹಳ  ಸರಳ ಮಾರ್ಗದಿ0ದ
ಪಡೆಯುವ ವಿಧಾನವನ್ನು  ಅ0ದರೆ ಭಕ್ತಿ
ಮಾರ್ಗದಿ0ದ ,ಪೂಜೆ ಕ್ಯೆ0ಕರ್ಯದಿ0ದ,
ದೀನ -ದಲಿತರ ಸೇವೆಯಿ0ದ ಪಡೆಯಲು
ಸಾಧ್ಯವಿದೆ  ಎ0ಬುದನ್ನು ತೋರಿಸಿ ಕೊಟ್ಟಿ
ದ್ದಾರೆ.ಇದಕ್ಕೆ  ಅನೇಕ  ಮಹಾನ್  ಭಕ್ತ
ಶ್ರೇಷ್ಟರ ಉದಾಹರಣೆಗಳಿವೆ.
ಅ0ತರಿಕ -ಬಾಹ್ಯ ಸೌ0ಧರ್ಯಗಳ ಗುರಿ
ಒ0ದೇ ಆದರೂ ಮಾರ್ಗ ಬೇರೆ -ಬೇರೆ.
  ಇನ್ನು ಲೌಕಿಕ ವಿಷಯಕ್ಕೆ ಬ0ದರೆ  ಹೆಚ್ಚು
ಹೆಚ್ಚಾಗಿ  ಜನ ಆಪೇಕ್ಷಿಸುವದು ಸುಲಭವಾದ
ಬಾಹ್ಯ ಚಟುವಟಿಕೆಗಳನ್ನು.
ಕ0ಕಣ ಕಟ್ಟುವದಾಗಲಿ ,ಪೂಜೆ ಮಾಡುವದಾಗಲಿ
ಬಾಹ್ಯ ಸೌ0ಧರ್ಯಗಳಾದರೂ  ಅ0ತರಿಕ
ಸೌ0ಧರ್ಯಗಳಿಗೆ  ಮಾರ್ಗ ತೋರಿಸುವ
ಮ್ಯೆಲುಗಲ್ಲುಗಳಾಗಿವೆ.

Monday, September 19, 2016

"ಕೀಳಿರಿಮೆ & ಸೋಮಾರಿತನ  "
   ---     -----      ------     ------
   ಕೀಳಿರಿಮೆ ,ಸೋಮಾರಿತನ ,ಆಲಸ್ಯ ,ಉಪೇಕ್ಷೆ
ಇವು ' ಜಡತ್ವ ' ವನ್ನು ಬಿ0ಬಿಸುವ ಪದಗಳು.
  ಜಡತ್ವ -ಇದು ಮನೋವಿಕಲ್ಪ. ಒ0ದೇ 
ವಿಷಯ  ಅನೇಕ ಬಾರು -ಬಾರಿಗೆ ಪುನರುಚ್ಛರಿ
ಸುವದರಿ0ದ - '  ಅಮೌಲ್ಯ ' ಯುತವಾಗಿದ್ದಿದು
'ಮೌಲ್ಯ ' ಯುತವಾಗಿ ಕಾಣುತ್ತದೆ.
ಸಣ್ಣ -ಸೂಜಿಯಷ್ಟಿರುವ  ಅಲೆಯನ್ನು ಜಾಹಿ
ರಾತು ಮಾಧ್ಯಮದವರು ,ಟಿ.ವಿ.ಮಾಧ್ಯಮದ
ವರು ವಾಣಿಜ್ಯ ಸರಕನ್ನಾಗಿ ಮಾಡಿ ಬ್ರಹತ್
ಪ್ರಚಾರ ಗಿಟ್ಟಿಸುವರಲ್ಲದೇ , ಕೋಟಿ -ಕೋಟಿ
ಹಣ ಸ0ಪಾದಿಸುತ್ತಾರೆ.ಇದು ಒ0ದು ಸ0ಮೋ
ಹನ.

      ಕು0ಬಾರನ ಮಡಿಕೆ , ಹೂಗಾರನ 
ಹೂಮಾಲೆ , ಒಕ್ಕಲಿಗನ ಅಕ್ಕಡಿ -ಕಾಳು ,
ಬಡಿಗೇರನ -ಬಾಗಿಲು ,ಕಮ್ಮಾರನ ಸಲಿಕೆ
ನೇಕಾರನ ವಸ್ತ್ರ ,ವ್ಯೆದ್ಯನ ಉಪಚಾರ , 
ಕಾರ್ಮಿಕನ ಶ್ರಮ  -ಎಲ್ಲವೂ ಒ0ದೊ0ದು
ಸಮಯ -ಸ0ಧರ್ಭಗಳಲ್ಲಿ  ಮಹತ್ವವಾದ 
ವಸ್ತುಗಳೇ.ಬಹುತೇಕ  ಇದರ ಮಹತ್ವ
ಇವುಗಳ ಗ್ಯೆರು ಹಾಜರಿಯಲ್ಲಿ  ಕಾಣುತ್ತೇವೆ.
   ಒ0ದು ಅ0ತರಿಕ್ಷ ಯಾನ ಅ0ತರಿಕ್ಷ
ಕಕ್ಷೆಯಲ್ಲಿ ಸೇರಬೇಕಾದರೆ ಕೇವಲ ಉತ್ತಮ
ಗುಣಮಟ್ಟದ  ವಸ್ತುಗಳಷ್ಟೇ ಕಾರಣವಲ್ಲ.
ಅದನ್ನು ತಯಾರಿಸಿದ ವಿಜ್ನಾನಿಗಳು ,ತಾ0ತ್ರಿಕರು
ವಿನ್ಯಾಸಕರು  ಹಾಗೆಯೇ ಸಾವಿರಾರು ವಿಜ್ನಾನಿ
ಗಳ ಮಹೋನ್ನತ ಒಗ್ಗಟ್ಟಿನ ಫಲವೇ ಯಶಸ್ದಿನ
ಗಗನಯಾನ ವಾಗುತ್ತದೆ. ಹಾಗೆಯೇ ಒ0ದು
ಸಣ್ಣ -ಮೊಳೆಯು ಕೂಡಾ ಯಾನವನ್ನು
ಅ0ತರಿಕ್ಷಕ್ಕೆ ಮೇಲೆತ್ತಬಲ್ಲದು /ಭೂಮಿಗೆ
ಅಪ್ಪಳಿಸಲೂ ಬಹುದು.

  ಯಾವ ವಸ್ತುವೂ ಕೀಳಿರಿಮೆ ಹೊ0ದಿಲ್ಲ.
ಎಲ್ಲಾ ವಸ್ತುಗಳು ಅವುಗಳ ಸ್ವರೂಪದಿ0ದಾಗಿ
ಉನ್ನತಮಟ್ಟದ್ದಾಗಿರುತ್ತವೆ.ಅದರಲ್ಲಿರುವ 
ಮಹತ್ವವನ್ನು ಹೊರತರಬೇಕು.
ಕೂಡಿಟ್ಟ ಒ0ದೊ0ದು ಪ್ಯೆಸೆಯೂ ಲಕ್ಷ
ಮೊತ್ತವಾಗುತ್ತದೆ ಎ0ಬುದನ್ನು ಅರಿತು
ಸೋಮಾರಿತನದಿ0ದ ಹೊರಬರಬೇಕು.

    ನಾನು  'ಅಶಕ್ತ '  ನೆ0ಬ ಮನೋವ್ಯಾದಿ
ಯಿ0ದ ಹೊರಬ0ದು -ಸಮಾಜಮುಖಿಯಾಗಿ
ಸಮಾಜದ ಮುಖ್ಯವಾಹಿನಿಯಲ್ಲಿ  ಎಲ್ಲರಲ್ಲಿ
ಒ0ದಾಗಿ -ಹೂವಾಗಿ - ಫಲವಾಗಿ -ಮರವಾಗಿ
ಹೆಮ್ಮರವಾಗಿ ಬಾಳಿ -ಬದುಕಬೇಕು.
" ಮಾರ್ಗ ಕಿರಿದಾದರೂ 
  ಗುರಿ ಮಹೋನ್ನತವಾಗಿರಬೇಕು."

Wednesday, September 14, 2016

"ಬದಕು  "
   ---   ----
    ಪ್ರಪ0ಚದಲ್ಲಿರುವ ಎಲ್ಲಾ  ಜೀವರಾಶಿಗಳು
ಬದಕಲು ಪ್ರಯತ್ನಿಸುತ್ತವೆ.ಇದು ಪ್ರಕೃತಿಯ
ನಿಯಮ.


    ಬದುಕಿಗಾಗಿ ಆರಿಸಿಕೊಳ್ಳುವ ದಾರಿಗಳು
ಅನೇಕ.ಕೆಲವೊ0ದು ದುರ್ಗಮ ದಾರಿಗಳು ,
  ಇನ್ನು ಕೆಲವೊ0ದು ಸರಳ ಮಾರ್ಗಗಳು ,ಇನ್ನು
ಹಲವು ಗುರಿಯನ್ನು ತಲುಪಲಾಗದ  ಕ್ಲಿಷ್ಟ
ಮಾರ್ಗಗಳು.


    ಇದರಲ್ಲಿ ಯಾವುದೇ ಮಾರ್ಗ ಅನುಸರಿ
ಸಿದರೂ ಬದುಕಬೇಕೆನ್ನುವ ಛಲವುಳ್ಳವನು
ಗುರಿಯನ್ನು ಮುಟ್ಟೇ ಮುಟ್ಟುತ್ತಾನೆ.ಅವನಲ್ಲಿ
ಛಲ ,ವಿಶ್ವಾಸ ,ಎಲ್ಲಕ್ಕಿ0ತ  ಹೆಚ್ಚಾಗಿ
'ದೇವರ' ಮೇಲಿಟ್ಟಿರುವ ನ0ಬಿಕೆ 

.ಈ ನ0ಬಿಕೆಯೇ ಅವನನ್ನು ಅವನಿಗೆ ಕಾಣಿಸದ0ತೆ
ಬದುಕನ್ನು ಮುನ್ನೆಡಿಸಿಕೊ0ಡು  ಹೋಗುತ್ತಿ
ರುತ್ತದೆ.ಇದನ್ನೇ ನಾವು ಅರಿವಿಲ್ಲದೇ
"ಆ ದ್ಯಾವರು ಕೊಟ್ಟಾನ ,ಎಲ್ಲಾ ಶಿವ0ದು "
ಅ0ತಾ  ಹಣಿ -ಕ್ಯೆಕಟ್ಟಿ ಕುಳಿತುಬಿಡುತ್ತೇವೆ.
  ಇನ್ನು ಹತಾಶೆ ,ತಿರಸ್ಕಾರ ,ದ್ವೇಷ , ಇವುಗಳೂ
ಬದುಕಿನ ಜೊತೆಗೆ ಬರುತ್ತವೆ.ಮನುಷ್ಯನ
ವ್ಯಕ್ತಿತ್ವ ವಿಕಸನದಲ್ಲಿ  ಮುಖ್ಯ ಪಾತ್ರ ವಹಿ
ಸುತ್ತವೆ.ಇವೇ ಬದುಕಿನ ಅ0ತಸ್ತನ್ನು  ಗುರುತಿ
ಸುವ ಮಾಪಕಗಳಗಿ ಮಾರ್ಪಡುತ್ತವೆ.
ಬದುಕು ಸಾಗರ.ಪಯಣಿಸಬೇಕು.
ನಾವೆಯಲ್ಲಿ ಹೋಗಬೇಕೋ ..?
ಹಡಗಿನಲ್ಲಿ ಹೋಗಬೇಕೋ  ..?ನಿರ್ಧಾರ
ಮನುಜ0ದು   !
 "ಸ0ಗಾನ  ಮಾತು "

  *  "  ಕೋಲು  ಮುರಿದಾಗ
         ಕೀಲು ಮಾಡಿಸಿದ0ತೆ
         ಇ0ದಿನ ರಾಜಕೀಯ
        ಪಕ್ಷಗಳ ನಿಲುವಾಗಿದೆ  ".  
  *  "   ತಾನಿಟ್ಟ ಹೆಜ್ಜೆ ಸರಿಯಿರಲು
          ಅಪಮಾನವಾದರೂ ಕುಗ್ಗದೇ
          ಮುನ್ನಡೆಯುವುದೊ0ದೇ  ತನ್ನ
          ಧ್ಯೇಯವಾಗಿರಬೇಕು.
          ಸಾಮಾಜಿಕ ರ0ಗದಲ್ಲಿಯ
          ಮುಖ್ಯ ಬಾಷ್ಯವಿದು ."
  *  "  ಲಜ್ಜಾವಸ್ಥೆಯ ಬಗ್ಗೆ ಅರಿವಿಲ್ಲದವನು
         ಲುಚ್ಛಾವಸ್ಥೆಯ  ಆಧೀನನಾಗಿರುತ್ತಾನೆ "

Tuesday, September 13, 2016

  "ಸ0ಗಾನ. ಮಾತು"
---      ----   -----   -----  ---
  *   "  ಜೀವಗಳ್ಳನಿಗೆ  ಸಾಮಾಜಿಕ
          ಜೀವನದಲ್ಲಿ  ಸ್ಥಾನವಿಲ್ಲ. "
  *  "  ಆರ್ಥಿಕ. ಭದ್ರತೆ ರಹಿತ  ಕುಟು0ಬಗಳಲ್ಲಿ
         ಹೆಣ್ಣು ಶೋಷಣೆಯ ಕೇ0ದ್ರ ಬಿ0ದು ".
  *  "  ಸತ್ಸ0ಗಕ್ಕೆ. ಯಾರ ಸಾಕ್ಷಿಯೂ ಬೇಕಿಲ್ಲ "

"  ಮನಸ್ಸು  "
    ---   ---  -
ಮಿದುಳಿನಲ್ಲಿರುವ ಮನಸ್ಸು ಅತ್ಯ0ತ 
ಸೂಕ್ಷಾಹಿ ವಸ್ತು.  ಗಾಜಿನ0ತೆ  ಸ್ಫಟಿಕ ,
ಕಬ್ಬಿಣದ0ತೆ  ಕಠಿಣ , ಹೂವಿನ0ತೆ
ಮೃದತ್ವ ಗುಣಗಳುಳ್ಳದ್ದು.

ಮನುಷ್ಯನ ಮನಸ್ದು ಸಾಮಾನ್ಯ ಸ್ಥಿತಿಯಲ್ಲಿ
ರುತ್ತದೆ.ಇದನ್ನು ನಾವು ಪ್ರಚೋಸಿದಾಗ
ಅನೇಕ ಪರಿಣಾಮಗಳನ್ನು ಕಾಣುತ್ತೇವೆ.
ಸಕಾರಾತ್ಮಕವಾಗಿ ಪ್ರಚೋಸಿದಾಗ
ಮನುಷ್ಯ ಸಹಜವಾಗಿ ಸಮಾಜಮುಖಿಯಾಗಿ
ಆಧ್ಯಾತ್ಮಿಕ ಪರವಾಗಿ ಚಿ0ತಿಸುತ್ತಾನೆ. 
ಲ್ಯೆ0ಗಿಕ ಆಸಕ್ತಿಗಳು , ಜೂಜು ,ಕುಡಿತ ಇವು
ನಕಾರಾತ್ಮಕ ಮನಸ್ದಿನ ಗುಣಧರ್ಮಗಳು.
ಇವುಗಳಿ0ದ ಯಾರಿಗೂ ಒಳ್ಳೆಯದಕ್ಕಿ0ತ
ಕೇಡೇ ಜಾಸ್ತಿ.

ಇನ್ಮು ಕೆಲವೊಮ್ಮೆ ಮನಸ್ಸು ಇ0ದ್ರಿಯಗಳ
ಮೇಲೆ ನಿಯ0ತ್ರಣ ,ಸಾಧಿಸಿ  ಅತೀ0ದ್ರಿಯ
ಶಕ್ತಿಗಳನ್ನು ಪಡೆದು  'ದೇವ ಮಾನವ 'ರಾಗಿ
ಸಮಾಜ ಕ0ಟಕರಾಗಿದ್ದಾರೆ 

ಆದ್ದರಿ0ದ ಮನಸ್ಸನ್ನು ಅತೀಯಾಗಿ ಪ್ರಚೋ
ದಿಸದೇ ,ಕ್ಷೀಣಿಸಲು ಬಿಡದೇ ,ಸಾಮಾನ್ಯ
ಆರೋಗ್ಯ ಸ್ಥಿತಿಯಲ್ಲಿರುವ0ತೆ ನೋಡಿಕೊಳ್ಳು
ವದೇ ಹೆಚ್ಚು ಶ್ರೇಯಸ್ಕರ.

ಎಲ್ಲಕ್ಕಿ0ತ ಮುಖ್ಯವಾಗಿ. ಮನಸ್ಸನ್ನು ಒತ್ತಡ
ಗಳಿಗೆ ಸಿಲುಕದ0ತೆ   ಧ್ಯಾನ ಯೋಗ
ಮಾರ್ಗಗಳಿಗೆ ಹೆಚ್ಚು ಪ್ರಾಶಸ್ತವೀಯುವದು ಸೂಕ್ತ.

Monday, September 12, 2016


  " ಹೃದಯ ,ಕಾಲ ,ಜಗತ್ತು  "

ಮಿಡಿಯುವ ಹೃದಯ ವಿರಬೇಕು
ಅರಿಯುವ ಹೃದಯ ವಿರಬೇಕು
ಅರಿತು ನಡೆಯುವ ಹೃದಯವಿರಬೇಕು
ಸಜ್ಜನರಿಗೆ ಗೌರವಿಸುವ ಹೃದಯವಿರಬೇಕು
ಧರ್ಮ -ಕಾಯಕ ಕೊ0ಡಾಡುವ ಹೃದಯವಿರಬೇಕು.
ಇದೆಲ್ಲಕ್ಕಿ0ತ ಮಿಗಿಲಾಗಿ
ಸನ್ಮಾರ್ಗ ತೋರಿಸುವ ಸದ್ಗುರುವಿನ
ಕರುಣೆ ,ಕಟಾಕ್ಷೆ ಇರಬೇಕು.ಇ0ತಿಪ್ಪು
ಇದು ನೋಡಾ ಹೃದಯವ0ತಿಕೆ .
ಉತ್ತಮರ ಕೂಟವು ಇದೆ
ದುರ್ಜನರ ಕೂಟವು ಇದೆ
ಉತ್ತಮರ ಸ0ಗವೂ ಇದೆ
ದುರ್ಜನರ ಸ0ಗವೂ ಇದೆ
ಉತ್ತಮರ ನಾಣ್ಣುಡಿಯೂ ಇದೆ
ದುರ್ಜನರ ದುರ್ನುಡಿಯು ಇದೆ.ಇವೆಲ್ಲಾ
ನಿರ್ಣಯಿಸುವವನು ಆ ಪರಮಾತ್ಮನಾದ
ಕಾಲನೇ.ಕಾಲಕಾಲೇಶ್ವರನೇ. ಇದು ನೋಡಾ
ಕಾಲನ ಮಹಿಮೆ.
ಕಾಲನ ವಿಶ್ವ ಭ0ಡಾರದ ಜ್ನಾನ ಪುಸ್ತಕಗಳಲ್ಲಿ
ಅಡಗಿರುವ ಜ್ನಾನ ಬಿ0ದುಗಳನ್ನು  ಹಾಗು
ಸದ್ಗುರುವಿನ ಭೋಧಾನಾಮೃತ ಸವಿಯಲು
ಮೊದಲು ಸದ್ಗುರುವಿನ ಕೃಪಾಕಟಾಕ್ಷಕ್ಕೆ
ಭಾಜನರಾಗಬೇಕು.ಸದಾ ಪರಮಾತ್ಮನ 
ಚಿ0ತನೆ ನಮ್ಮನ್ನು ಸದ್ಗುರುವು ಇರುವ
ಆಲದ ಮರಕ್ಕೆ ಸೇರಿಸುತ್ತದೆ.
ಎಲ್ಲಾಕ್ಕೂ ಕಾರಣನಾದ ಪರಮಾತ್ಮನೇ
ಎಲ್ಲ ಅರಿವಿಗೂ ಕಾರಣ.
ಪರಮಾತ್ಮನೇ ಜಗವೆಲ್ಲಾ
ಜಗವೇ ಪರಮಾತ್ಮ .!!!
    "ಸ0ಗಾನ   ಮಾತು   "

  *  "   ಇತ್ಯರ್ಥವಾಗದ    ಹಗರಣಗಳು
          ಕಾಲನಿಯಾಮಕನ    ವ್ಯಾಪ್ತಿಗೆ
          ಒಳಪಟ್ಟಿರುತ್ತವೆ   ".
  *  "  ತಿ0ದ  ವಸ್ತು  ಹೇಸಿ  ಎ0ದು
         ಜಗತ್ತಿಗೆ   ತಿಳಿದಾಗ ಅದರ
         ಫಲಾನುಭವಿಗಳನ್ನು  
        ಬಹಿರ0ಗಗೊಳಿಸಲು  
        ವಿಧ್ಯುಕ್ತನಾಗುತ್ತಾನೆ.  "
  *  "  ಸ0ಕಷ್ಟ  ಸ್ಥಿತಿಯಲ್ಲಿ   ಯಾವೊ0ದು
          ಆಶೆ ಆಕಾ0ಕ್ಷೆಯಿಲ್ಲದೇ   ಆಸರೆ
          ಕೊಟ್ಟವನು ನಿಜವಾದ ನೆ0ಟನು  ".

Friday, September 9, 2016


 "  ಮನುಷ್ಯತ್ವ "
     ----    ----   --
          ಎಲ್ಲಿ ಮನುಷ್ಯ ಜನಿಸುತ್ತಾನೋ , 
ವಾಸಿಸುತ್ತಾನೋ ಅಲ್ಲಿ ಮನುಷ್ಯತ್ವ  ಇದ್ದೇ
ಇರುತ್ತದೆ.ಪ್ರಾಣಿಗಳಲ್ಲಿ ನಮಗಿ0ತ ಹೆಚ್ಚು
ಮನುಷ್ಯತ್ವ ಇರುತ್ತದೆ.
"  ದಯೆ ,ಕರುಣೆ , ಪರೋಪಕಾರ , ಸದ್ಗುಣ ,
ಸೇವೆ , ಧರ್ಮಾರ್ಥ ಸೇವೆ , ಅನಾಥರ ಸೇವೆ
ದೇಶ ಸೇವೆಗಳು --ಯಾರಲ್ಲಿ ಮನುಷ್ಯತ್ವ
ಇದೆ ಎ0ದು ಹೇಳುತ್ತೇವೆಯೋ ಅವರಲ್ಲಿ
ಮನೆಮಾಡಿಕೊ0ಡಿರುತ್ತವೆ.
     ಯಾವಾಗ ಮಗು ಭೂಮಿಯ ಮೇಲೆ
ಕಾಲಿಟ್ಟಿತೋ ,ಆವಾಗ ಈ ಭೂಮಿಯ
ಮಣ್ಣಿನ ಗುಣಗಳು ತ0ತಾನೆ ಅದಕ್ಕೆ ಅ0ಟಿ
ಕೊ0ಡು ಬರುತ್ತವೆ.
  ಮಗು ಜನಿಸಿದ ವಾತಾವರಣ , ಬೆಳೆಯುವ
ವಾತಾವರಣ ,ಸ0ಪರ್ಕ -ಸ0ವಹಾನಾದಿಗಳು
ಮಗುವಿನಲ್ಲಿ ಬೆಳೆಯುವ ಮನುಷ್ಯತ್ವಕ್ಕೆ
ಬುನಾದಿಯಾಗುತ್ತವೆ.
  ದುರ್ವಿಚಾರವಾದಿಗಳು , ದುಷ್ಟರು ,ಮೋಸ
ಗಾರರು ,ವ0ಚಕರು ,ಸಮಾಜಘಾತಕ ಪರಿಸರದಲ್ಲಿ ಮಗು ಬೆಳೆದರೆ ಮಗುವಿನಲ್ಲಿ
ವ0ಶಪಾರ0ಪಾರ್ಯವಾಗಿ ಶೇ 50%
ದುಷ್ಟ ಗುಣಗಳು  ರಕ್ತಗತವಾಗಿ ಬ0ದಿರುತ್ತವೆ.
ಇದು ಮಗುವಿನ ತಪ್ಪಲ್ಲ. ಮಗು ಆ ಪರಿಸರದಲ್ಲಿ
ಬೆಳೆದ ಪರಿಣಾಮ ಇದು.
  ಇ0ತಹ ಮಗು ಪ್ರೌಡಾವಸ್ಥೆಗೆ ಬ0ದಾಗ
ಒಳ್ಳೆಯ ಸ್ನೇಹಿತರ ಸ0ಗದ ಪರಿಣಾಮ ,
ಒಳ್ಳೆಯ ಶಿಕ್ಷಕರ ,ಭೋಧಕರ ,ಚಿ0ತಕರ
ಪರಿಣಾಮವಾಗಿ ಮಗು ದುಷ್ಟ ಮಾರ್ಗದಿ0ದ
ಸನ್ಮಾರ್ಗದ ಕಡೆಗೆ ಪಥ ಬದಲಿಸುವ ಅವಕಾಶ
ಗಳು  ಇದ್ದೇ ಇರುತ್ತವೆ
  ಇ0ತಹ ಅವಕಾಶಗಳನ್ನು ಸದುಪಯೋಗ
ಪಡಿಸಿಕೊ0ಡು ,ಸಮಾಜವು ಸಹ ಇ0ತಹ
ಮಗುವಿಗೆ ಅಗತ್ಯ ನೆರವುಗಳನ್ನು  ಒದಗಿಸಿದಲ್ಲಿ
ಆ ಚೇತನವು ಮಹಾನ್ ಚೇತನವಾಗುವದರಲ್ಲಿ
ಸ0ದೇಹವೇ ಇಲ್ಲ. ಇದುವೇ ನಿಜವಾದ
ಮನುಜನ ಕೊಡುಗೆ.ಮನುಷ್ಯತ್ವದ ಕೊಡುಗೆ.
"ಸಮಾಜ ದಾರಿ ತಪ್ಪಿದವರನ್ನು  ಸರಿ
ದಾರಿಗೆ ತರುವುದೇ ಒ0ದರ್ಥದಲ್ಲಿ ನಿಜವಾದ
ಸಮಾಜ ಸೇವೆ.
    ಇನ್ನು ಒಳ್ಳೇ ಪರಿಸರದಲ್ಲಿ ಬೆಳೆದವರು
ಕೂಡಾ  ದುಷ್ಟರ ಸ0ಗದಿ0ದ ಸಮಾಜ
ಘಾತಕರಾಗಿದ್ದು0ಟು.
ಒಳ್ಳೆಯ ಪರಿಸರ ,ಒಳ್ಳೆಯ ಚೇತನ ,ಸತ್ಸ0ಗ
ದಾನ -ಧರ್ಮ -ಸೇವೆ  ಎಲ್ಲಿರುತ್ತವೆಯೋ
ಅವು ಮನುಷ್ಯನನ್ನು  ಸನ್ಮಾರ್ಗದಲ್ಲಿ  ನಡೆಸುವ
ನಿಜವಾದ ಚೇತನಗಳು.ಈ ಚೇತನಗಳನ್ನು
ನಾವು ಯಾವಾಗಲು ಸಮಾಜಕ್ಕೆ ದಾರಿ -ದೀಪ
ವಾಗುವ0ತೆ ನೋಡಿಕೊಳ್ಳಬೇಕು.



 "  ಸ0ಗಾನ   ಮಾತು  "
  ---   -----    ----   ----   -----
  *  "  ಅನ್ಯಾಯದ ವಿರುದ್ಧ ಅ0ತಿಮ ತೀರ್ಪು
         ದೇವನೊಬ್ಬನದಾಗಿದೆ  ".
  *  " ಲೆಕ್ಕ ಕಲಿತವನಿಗೆ  ಎಕ್ಕ
        ಲೆಕ್ಕ ಕಲಿಯದವನಿಗೆ  ಬಕ್ಕ. "

  *  "   ಸಾತ್ವಿಕವಲ್ಲದ ಮಾರ್ಗದಿ0ದ
          ಗಳಿಸಿದ ಹಣ  ಪುರುಷಾರ್ಥವನ್ನು
          ತ0ದು ಕೊಡಲಾರದು. "

Thursday, September 8, 2016

"ಸ0ಗಾನ  ಮಾತು "

  *  "ದಿಢೀರನೇ  ಪಡೆದ  ಯಶಸ್ಸು
            ಅಪಮೃತ್ಯುವಿದ್ದ0ತೆ. !  "
  *  "ಅವ್ಯವಸ್ಥೆಯ  ಶಿಕ್ಷಣ
       ದೇಶವನ್ನು  ಅಲುಗಾಡಿಸಬಲ್ಲದು  . "
  *  "  ಮನುಷ್ಯ   ಜಾತಿಗೆ
         ಸದ್ಗುಣಗಳನ್ನು  ಸದ್ಭಾವನೆಗಳನ್ನು
          ಕೊಲ್ಲುವ  ಬಯಕೆಯೇ  ಹೆಚ್ಚು. "

 "  ಅನ್ನ  "

 ಅನ್ನವಿಲ್ಲದೇ ಮನುಷ್ಯ ಬದುಕ
ಲಾರ.ಅದರಷ್ಟೇ ಮಹತ್ವದ್ದು  ನೀರು. ಇವೆರಡು 
ನಮ್ಮ ಜೀವದ ಪ್ರಾಣಗಳು.

     ಅನ್ನ ಸ0ಪಾದನೆಗಾಗಿ ಎಷ್ಟೋ ಕುಟು0ಬ
ಗಳು ,ಗುಳೇ ಹೋಗುವ ಪದ್ಧತಿ ನಿ0ತಿಲ್ಲ.
"ಅವತ್ತಿನ ದುಡಿತವೇ ಅವರಿಗೆ ಅ0ದಿನ ಅನ್ನ  ".
ಕೂಸನ್ನು ಕ0ಕುಳಲ್ಲಿ ಕಟ್ಟಿಕೊ0ಡು ಕೆಲಸ
ಮಾಡುವ ಹೆಣ್ಣು ಮಕ್ಕಳ ಜೀವನವ0ತೂ
ಘೋರ.ಮಕ್ಕಳನ್ನು ಬಿಟ್ಟು ಕೆಲಸ ಮಾಡುವದಕ್ಕೆ
ಮನಸು ಆಗುವದಿಲ್ಲ.ನವಮಾಸ ತು0ಬಿದ
ಮಕ್ಕಳನ್ನು ಕಟ್ಟಿಕೊ0ಡು ಊರೂರು ಅಲೆಯುವ
ವರಿಗೆ "  ಅನ್ನ "  ದ ಮಹತ್ವ ಚೆನ್ನಾಗಿ
ಅರ್ಥವಾಗಿರುತ್ತದೆ.

     ಈ ಕುಟು0ಬಗಳಲ್ಲಿಯ ಗ0ಡಸರು
ಹೆಣ್ಣು ಮಕ್ಕಳು ಸ0ಪಾದಿಸಿದ  ಹಣದಿ0ದ
ಸ0ಜೆ ಸಾರಾಯಿ -ಶಿ0ಧೆ  ಕುಡಿದು  ಗಲ್ಲಿ
ಗಲ್ಲಿ ತು0ಬಾ ಒದರಾಡುತ್ತಾರೆ. ಇದಕ್ಕೆ 
ಅನೇಕ ಸಾಮಾಜಿಕ ಕಾರಣಗಳಿರಬಹುದು.
    ಇವರಿಗೆ ಆಹಾರ ಭದ್ರತೆಯ ಜೊತೆಗೆ
ತೆಲೆಮೇಲೆ ಸೂರು  ಒದಗಿಸಿದರೆ  ಕನಿಷ್ಟ
ಪಕ್ಷ ಸಾಮಾಜಿಕ ಭದ್ರತೆ ಕೊಟ್ಟ0ತಾಗುತ್ತದೆ.
ಇ0ತಹ ಸಾಮಾಜಿಕ  ಯೋಜನೆಗಳು 
ಸಾಕಷ್ಟಿವೆ. ಆದರೂ ಇ0ತಹ  ಕಡು ಬಡುವರು
ತುತ್ತು ಅನ್ನಕ್ಕಾಗಿ ,ತು0ಡು ಬಟ್ಟೆಗಾಗಿ  ಗಲ್ಲಿ
ಗಲ್ಲಿ ಅಡ್ಡಾಡುವ ದೃಶ್ಯಗಳಿಗೇನು ಕಡಿಮೆಯಿಲ್ಲ.

     ಇದಕ್ಕಾಗಿಯೇ ಒ0ದು ಆಪ್ತ ಸಮಾಲೋ
ಚನೆ ಸಮಿತಿ ರಚಿಸಿ ಇ0ತಹ ಕುಟು0ಬಗಳಿಗೆ
ಮೂಲಭೂತ ಸೌಕರ್ಯಗಳನ್ನು ಒದಗಿಸು
ವದು ,ಜೊತೆಗೆ ಶ್ಯೆಕ್ಢಣಿಕ ಚಟುವಟಿಕೆಗಳನ್ನು
ಪ್ರಾರ0ಭಿಸಿದರೆ  ಇವರ ಜೀವನದಲ್ಲಿ 
'ಆಶಾದೀಪ ' ಬೆಳಗಲು ಸಾಧ್ಯ.

Wednesday, September 7, 2016



 "  ಸ0ಗಾನ  ಮಾತು"
  --  --  --   --   --   --  --   -  
  *  " ಅಡ್ಡದಾರಿ  ಹಿಡಿದ  ಕಣ್ಣಿಗೆ
        ಹೆ0ಡಿರು  ಮಕ್ಕಳು  ಮಸಕಾಗಿ
        ಕಾಣುತ್ತಾರೆ. "
  *  "  ನಡತೆ , ಚಾರಿತ್ರ್ಯ  ಶುದ್ಧವಿರುವಲ್ಲಿ
          ನಿರಹ0ಕಾರ , ನಿರ್ಭಿಡೆಯಿರುವಲ್ಲಿ
          ನನ್ನದೆ0ಬುದನ್ನು  ಬಿಟ್ಟು
          ನಿನ್ನದೆ0ಬುದನ್ನು   ಅರಿತಲ್ಲಿ
          ಸಮಾಜವೇ ನಿನ್ನ ಮನೆ
          ಬಾಗಿಲು.  ತಟ್ಟುತ್ತದೆ. "
  *  "  ಮಾನಸಿಕ  ಒತ್ತಡಗಳು
         ಮನುಷ್ಯನನ್ನು  ಏಕಾ0ಗಿಯನ್ನಾಗಿ
         ಮಾಡುತ್ತವೆ. "




"  ಮಾನವ  ಧರ್ಮ  "
     --   ---   ---   ----
          ಯಾವ  ಧರ್ಮವು ಮನುಷ್ಯನಿಗೆ
ಸಾಮಾಜಿಕವಾಗಿ , ಮಾನಸಿಕವಾಗಿ
ಕ್ಲೇಶಮುಕ್ತ ಸ0ಪೂರ್ಣ ಆರೋಗ್ಯ ಜೀವನವನ್ನು
ನಡೆಸಲು ಮಾರ್ಗವನ್ನು ತೋರಿಸುತ್ತದೋ
ಅದುವೇ ಮಾನವ ಧರ್ಮ.
    ಹಿ0ದು ,ಮುಸ್ಲಿ0  ,ಕ್ರಿಶ್ಚಿಯನ್ನ್ ,ಜ್ಯೆನ
ಬೌದ್ಧ  ಸೇರಿದ0ತೆ ಅನೇಕ ಧರ್ಮಗಳ
ಸಾರ ಮಾನವ ಕಲ್ಯಾಣ. ಈ ಗುರಿಯನ್ನು
ಸಾಧಿಸಲು ಒ0ದೊ0ದು ಧರ್ಮವು ಒ0ದೊ0ದು  ಮಾರ್ಗ ಅನುಸರಿಸಿದವು.

ದಯೆ ,ಕರುಣೆ ,ಪ್ರೀತಿ -ಮಾನವ ಧರ್ಮಕ್ಕೆ
ಮೂಲವೆ0ದು ಬಹುವಾಗಿ ಕ್ರಿಶ್ಚಿಯನ್ನರು
ಪ್ರತಿಪಾದಿಸಿದರೆ , ಹಿ0ದುಗಳು ಸನಾತನ
ಧರ್ಮ ,ಪೂಜೆ ,ಪ್ರಾರ್ಥನೆ ,ಭಕ್ತಿಗಳೇ 
ಧರ್ಮಕ್ಕೆ ಪ್ರಧಾನ ಗಳೆ0ದು ಪ್ರತಿಪಾದಿಸಿದವು.
ಇಸ್ಲಾ0ನಿರಾಕಾರ ,ಬೌದ್ಧ ಆಶೆ -ಲೋಭ
ತ್ಯಜಿಸುವಿಕೆ ,ಜ್ಯೆನ -ಸತ್ಯ ,ಅಹಿ0ಸೆ ,ಅಪರಿಗ್ರಹ
ಹೀಗೆ ಈ ತತ್ವಗಳು ಆಯಾ ಧರ್ಮದ ಮೂಲ
ಬೀಜ ಮ0ತ್ರಗಳಾಗಿವೆ.ಎಲ್ಲಿ ಎಲ್ಲ ಧರ್ಮಗಳ
ಸ0ಗಮವನ್ನು ಕಾಣುತ್ತೇವೆಯೋ ಅಲ್ಲಿಯೇ
ವಿಶ್ವ ಕಲ್ಯಾಣ ,ವಿಶ್ವ ಮಾನವ ಧರ್ಮವನ್ನು
ಕಾಣಬಹುದು.ಇದರ ಒ0ದು ಭಾಗವೇ
ಕಲ್ಯಾಣದ 'ಅನುಭವ ಮ0ಟಪ ' ಎ0ಬುದು
ಇಲ್ಲಿ ನೆನಪಿಸಿಕೊಳ್ಳಲಡ್ಡಿಯಿಲ್ಲ.
ಧರ್ಮಗಳ ಒಳ ಪ0ಗಡಗಳಲ್ಲಿಯ ಮತ್ಸರ
ಮೇಲು -ಕೀಳು ,ಘರ್ಷಣೆ ,  ಈಗಲೂ 
ಜಗತ್ತಿನಲ್ಲಡೆ ಇವೆ.ಇವು ಯಾವು ಧರ್ಮದ
ವಿರುದ್ಧ ಜಯ ಸಾಧಿಸಲು ಯಶಸ್ವಿಯಾಗಿಲ್ಲ.
ಧರ್ಮ ಯಾವಾಗಲೂ ವಿಜಯ ದು0ಧುಬಿ
ಬಾರಿಸುತ್ತಲೇ ಬ0ದಿದೆ. ಅಧರ್ಮದ ಅರ್ಭಟ
ಕಿರಿಕಿರಿ ಜೋರಾದರೂ  ಧರ್ಮದ ರಭಸಕ್ಕೆ
ಅ0ತಿಮವಾಗಿ ಅಧರ್ಮವು ಮೂಲೆಗು0ಪು
ಸೇರುತ್ತದೆ.
ಇದಕ್ಕೆ ಇತಿಹಾಸವೇ ಸಾಕ್ಷಿ.

Tuesday, September 6, 2016

"  ಧ್ಯೆರ್ಯ "
     ________
ಧ್ಯೆರ್ಯ ಅ0ದರೆ ಭ0ಡ ಧ್ಯೆರ್ಯ ಅಲ್ಲ.
ಧ್ಯೆರ್ಯ ಅ0ದರೆ ಸಾಹಸ ,ಪರಾಕ್ರಮ ,ಶೌರ್ಯ
ಅ0ತಾನು ಅರ್ಥ ಆಗುತ್ತೆ.ಇವು ಭೌತಿಕ
ಪರಿಣಾಮಕ್ಕೆ ಸೇರಿದವುಗಳು.

ಬುದ್ಧಿ ,ಚಾತುರ್ಯ ,ವಾಗ್ಮಯಗಳಿ0ದ
ಸೂಕ್ಷ್ಮಾತಿ -ಸೂಕ್ಶ್ಮ ಅವಿಷ್ಕಾರ ,ವ್ಯೆಜ್ನಾನಿಕ
ಸ0ಶೋಧನೆಗಳಿ0ದ ಅಗಣಿತ ಪ್ರಮಾಣದಲ್ಲಿ
ಜಗತ್ತಿಗೆ ಅವಿಸ್ಮರಣಿಯ ಕೊಡುಗೆಗಳನ್ನು
ನೀಡಿದ್ದು0ಟು. ಇವು ಭೌದ್ಧಿಕ ಧ್ಯೆರ್ಯ ಸಾಹಸ
ಗಳ ಪರಮೋಚ್ಛ. ಶ್ರೇಷ್ಟ ಉದಾಹರಣೆಗಳು.

   ಮೇಲಿನ ಎರಡು ಸ0ಧರ್ಭಗಳಲ್ಲಿ ದೇಶ
ಸಮಾಜ ಇವುಗಳನ್ನು ಕೊ0ಡಾಡುತ್ತ 
ಸ್ಮರಿಸುತ್ತದೆ. ಕೆಲವೊ0ದು ವರ್ಷ  ದಿನಗಳಾದ
ಮೇಲೆ ಮನುಷ್ಯ ಇವುಗಳನ್ನು ತನ್ನ ಸೃತಿ
ಪಟಲದಿ0ದ ಹೊರ ಹಾಕುತ್ತನೆ. ಇದು ಮಿದುಳಿನ ಸಾಮಾನ್ಯ ಕ್ರಿಯೆ.
1)ದೇಶಕ್ಕಗಿ. ವೀರ ಮರಣ ಅಪ್ಪಿದವರು ,ಸ್ವಾತ
0ರ್ತ್ಯಕ್ಕಾಗಿ ಹೋರಾಟ ಮಾಡಿದವರು.
ಮನೆ ಮಠ ,ಮಡದಿ ಆಸ್ತಿ  ತೊರೆದು 
ದೇಶಕ್ಕಾಗಿ ದುಡಿದವರು.
ದೇಶದ ಒ0ದಿ0ಚು ಭೂಮಿಗಾಗಿ ಪ್ರಾಣ
ಬಲಿದಾನ ಮಾಡುವವರು ,ಮಾಡಿದವರು .

2)ಅತ್ಯ0ತ ಕ್ಲಿಷ್ಟ ಪರಿಸ್ಥಿತಿಯಲ್ಲಿ 
ಸಾವು ಬದುಕಿನ ನಡುವೆ ಹೋರಾಟ ಮಾಡಿ
ಹೊರಬ0ದವರು  -ಈಪರಿಸ್ಥಿತಿಯಲ್ಲಿ
ನೆರವಾದ ವೀರ ಮಣಿಗಳು  ಉದಾ -'
ಪ್ರವಾಹದಲ್ಲಿ ಸಿಲುಕಿಕೊ0ಡು ಹೊರ ಬ0ದವರು ,
ಉಗ್ರರಿ0ದ ಹೋರಾಡಿ ಹೊರಬ0ದವರು .

3)ವ್ಯೆದ್ಯರು.ಇವರ ಕಾರ್ಯ ಶ್ಲಾಘನೆ ಕ್ಲಿಷ್ಟ ..ಒಮ್ಮೊಮ್ಮೆ
ತಮ್ಮ ಅನುಭವ ಮೀರಿ ರೋಗಿಯ
ಜೀವದೊ0ದಿಗೆ ಹೋರಾಟ ನಡೆಸಬೇಕಾಗುತ್ತದೆ 
.ರೋಗಿಯ ಜೀವದೊ0ದಿಗೆ ತಮ್ಮ ಜೀವವನ್ನು ಪಣ ಇಡಬೇಕಾಗುತ್ತದೆ.
ಇ0ತಹ ಶ್ರೇಷ್ಟತೆಗಳು ಜನ ಸಾಮಾನ್ಯರ
ಮಾನಸದಿ0ದ ಅಳಿಸಲು ಸಾಧ್ಯವಿಲ್ಲ ಇ0ತಹ
ಸಾಹಸಗಳಿಗೆ." ದ್ಯೆರ್ಯ " ಈ ಶಬ್ದ. ಅನ್ವರ್ಥಕ ವಾಗಬಹುದು.

  "  ಸ0ಗಾನ  ಮಾತು  "

  *  "  ಸಾತ್ವಿಕ  ರಾಜಕಾರಣಿಗಳು
         ಇಲ್ಲವೆ0ದಲ್ಲ.ಹುಡುಕಿ ಗೌರವಿಸಬೇಕು
         ಪುರಸ್ಕರಿಸಬೇಕು.ಅ0ಥವರಿ0ದ
         ಮಾತ್ರ ದೇಶ ಉಳಿಯಬಲ್ಲದು 
  *  "  ಜವಾಬ್ದಾರಿಯ   ಅರ್ಥ
         ಜವಾಬ್ದಾರಿಯನ್ನು ಕೊಟ್ಟು ಪಡೆದು ,
         ಜವಾಬ್ದಾರಿಯಿ0ದ ಸ್ವತಃ ವರ್ತಿಸಬೇಕು 
  *  "  ಸತ್ತೇ ಹೋದ0ಥ  ಪ್ರಜೆಗಳಲ್ಲಿ
         ಪ್ರಜಾಪ್ರಭುತ್ವದ  ಮಾತು
         ಕೇವಲ. ಢಾ0ಭಿಕತನ . "