Friday, September 9, 2016


 "  ಮನುಷ್ಯತ್ವ "
     ----    ----   --
          ಎಲ್ಲಿ ಮನುಷ್ಯ ಜನಿಸುತ್ತಾನೋ , 
ವಾಸಿಸುತ್ತಾನೋ ಅಲ್ಲಿ ಮನುಷ್ಯತ್ವ  ಇದ್ದೇ
ಇರುತ್ತದೆ.ಪ್ರಾಣಿಗಳಲ್ಲಿ ನಮಗಿ0ತ ಹೆಚ್ಚು
ಮನುಷ್ಯತ್ವ ಇರುತ್ತದೆ.
"  ದಯೆ ,ಕರುಣೆ , ಪರೋಪಕಾರ , ಸದ್ಗುಣ ,
ಸೇವೆ , ಧರ್ಮಾರ್ಥ ಸೇವೆ , ಅನಾಥರ ಸೇವೆ
ದೇಶ ಸೇವೆಗಳು --ಯಾರಲ್ಲಿ ಮನುಷ್ಯತ್ವ
ಇದೆ ಎ0ದು ಹೇಳುತ್ತೇವೆಯೋ ಅವರಲ್ಲಿ
ಮನೆಮಾಡಿಕೊ0ಡಿರುತ್ತವೆ.
     ಯಾವಾಗ ಮಗು ಭೂಮಿಯ ಮೇಲೆ
ಕಾಲಿಟ್ಟಿತೋ ,ಆವಾಗ ಈ ಭೂಮಿಯ
ಮಣ್ಣಿನ ಗುಣಗಳು ತ0ತಾನೆ ಅದಕ್ಕೆ ಅ0ಟಿ
ಕೊ0ಡು ಬರುತ್ತವೆ.
  ಮಗು ಜನಿಸಿದ ವಾತಾವರಣ , ಬೆಳೆಯುವ
ವಾತಾವರಣ ,ಸ0ಪರ್ಕ -ಸ0ವಹಾನಾದಿಗಳು
ಮಗುವಿನಲ್ಲಿ ಬೆಳೆಯುವ ಮನುಷ್ಯತ್ವಕ್ಕೆ
ಬುನಾದಿಯಾಗುತ್ತವೆ.
  ದುರ್ವಿಚಾರವಾದಿಗಳು , ದುಷ್ಟರು ,ಮೋಸ
ಗಾರರು ,ವ0ಚಕರು ,ಸಮಾಜಘಾತಕ ಪರಿಸರದಲ್ಲಿ ಮಗು ಬೆಳೆದರೆ ಮಗುವಿನಲ್ಲಿ
ವ0ಶಪಾರ0ಪಾರ್ಯವಾಗಿ ಶೇ 50%
ದುಷ್ಟ ಗುಣಗಳು  ರಕ್ತಗತವಾಗಿ ಬ0ದಿರುತ್ತವೆ.
ಇದು ಮಗುವಿನ ತಪ್ಪಲ್ಲ. ಮಗು ಆ ಪರಿಸರದಲ್ಲಿ
ಬೆಳೆದ ಪರಿಣಾಮ ಇದು.
  ಇ0ತಹ ಮಗು ಪ್ರೌಡಾವಸ್ಥೆಗೆ ಬ0ದಾಗ
ಒಳ್ಳೆಯ ಸ್ನೇಹಿತರ ಸ0ಗದ ಪರಿಣಾಮ ,
ಒಳ್ಳೆಯ ಶಿಕ್ಷಕರ ,ಭೋಧಕರ ,ಚಿ0ತಕರ
ಪರಿಣಾಮವಾಗಿ ಮಗು ದುಷ್ಟ ಮಾರ್ಗದಿ0ದ
ಸನ್ಮಾರ್ಗದ ಕಡೆಗೆ ಪಥ ಬದಲಿಸುವ ಅವಕಾಶ
ಗಳು  ಇದ್ದೇ ಇರುತ್ತವೆ
  ಇ0ತಹ ಅವಕಾಶಗಳನ್ನು ಸದುಪಯೋಗ
ಪಡಿಸಿಕೊ0ಡು ,ಸಮಾಜವು ಸಹ ಇ0ತಹ
ಮಗುವಿಗೆ ಅಗತ್ಯ ನೆರವುಗಳನ್ನು  ಒದಗಿಸಿದಲ್ಲಿ
ಆ ಚೇತನವು ಮಹಾನ್ ಚೇತನವಾಗುವದರಲ್ಲಿ
ಸ0ದೇಹವೇ ಇಲ್ಲ. ಇದುವೇ ನಿಜವಾದ
ಮನುಜನ ಕೊಡುಗೆ.ಮನುಷ್ಯತ್ವದ ಕೊಡುಗೆ.
"ಸಮಾಜ ದಾರಿ ತಪ್ಪಿದವರನ್ನು  ಸರಿ
ದಾರಿಗೆ ತರುವುದೇ ಒ0ದರ್ಥದಲ್ಲಿ ನಿಜವಾದ
ಸಮಾಜ ಸೇವೆ.
    ಇನ್ನು ಒಳ್ಳೇ ಪರಿಸರದಲ್ಲಿ ಬೆಳೆದವರು
ಕೂಡಾ  ದುಷ್ಟರ ಸ0ಗದಿ0ದ ಸಮಾಜ
ಘಾತಕರಾಗಿದ್ದು0ಟು.
ಒಳ್ಳೆಯ ಪರಿಸರ ,ಒಳ್ಳೆಯ ಚೇತನ ,ಸತ್ಸ0ಗ
ದಾನ -ಧರ್ಮ -ಸೇವೆ  ಎಲ್ಲಿರುತ್ತವೆಯೋ
ಅವು ಮನುಷ್ಯನನ್ನು  ಸನ್ಮಾರ್ಗದಲ್ಲಿ  ನಡೆಸುವ
ನಿಜವಾದ ಚೇತನಗಳು.ಈ ಚೇತನಗಳನ್ನು
ನಾವು ಯಾವಾಗಲು ಸಮಾಜಕ್ಕೆ ದಾರಿ -ದೀಪ
ವಾಗುವ0ತೆ ನೋಡಿಕೊಳ್ಳಬೇಕು.


No comments: