Thursday, June 30, 2016

ನೀರು

ವಿಶ್ವದ ಮುಕ್ಕಾಲು ಭಾಗ ನೀರು
ಆವರಿಸಿದೆ.
ನಮ್ಮ ದೇಹದ ಲ್ಲಿ ಮುಕ್ಕಾಲು ಭಾಗ
ಕೂಡಾ ನೀರೇ ಇದೆ.
ನೀರೀಲ್ಲದೇ ಜಗವಿಲ್ಲ.
ನೀರಿಲ್ಲದೇ ಜೀವ ಇಲ್ಲ.
ನೀರಿಲ್ಲದೇ ಯಾವ ಜೀವ ರಾಶಿಯು 
ಉಳಿಯೋದಿಲ್ಲ 
ಅದಕ್ಕೆ ನೀರಿಗೆ ಜೀವ ಜಲ
ಪ್ರಾಣಜಲ ,ಗ0ಗಾಜಲ ಅ0ತಾ ಕರೆಯುತ್ತಾರೆ.
ಪುಣ್ಯ ಕ್ಷೇತ್ರಗಳಿಗೆ ಹೋದಾಗ ನಾವು
ಪ್ರಪ್ರಥಮ ಪೂಜೆ ಸಲ್ಲಿಸುವದು  ಗ0ಗಾ ಮಾತೆಗೆ.
ದೇವರಿಗೆ ಮೊದಲ ಅಭ್ಯ0ಜನ ಗ0ಗಾ ಜಲವೇ.
ನೀರೇ ಸರ್ವ0  !
ನೀರೇ ಪ್ರಾಣ0 !





"  ಹಿ0ದು  "

  
  "ಹಿ0ದು " ಇದೊ0ದು ಸ0ಸಕೃತಿ.ಧರ್ಮಾಚ
ರಣಗಳ ಒ0ದು ಭಾಗವೆ0ದರೂ ತಪ್ಪಾಗಲಿ
ಕ್ಕಿಲ್ಲ.
     "ಸ0ಸಕೃತಿ " ಆಚರಣೆಗಳ ಕೂಟ.ಇವು
ಗಳನ್ನು ಮನುಷ್ಯರಲ್ಲಿ ಮಾತ್ರ ಕಾಣಬಹುದು.
ಪ್ರಾಣಿ ,ಪಶು ,ಪಕ್ಷಿಗಳಲ್ಲಿ ಇಲ್ಲ.
ಮನುಷ್ಯ ಬುದ್ಧಿ ಜೀವಿ. ಅನಾದಿ ಕಾಲದಿ0ದ
ಇಲ್ಲಿಯವರೆಗೆ ತಾನು -ತನ್ನ ರಕ್ಷಣೆಗಾಗಿ
ಬದುಕಿಕೊ0ಡು ಬ0ದ ಹಾದಿ ,ಹುಡುಕಿಕೊ0ಡ
ಹಾದಿ ,ಹುಡಕಲಿರುವ ಹಾದಿ ಇವೆಲ್ಲಾ
ಆಚರಣಗಳ ಸ0ಭ0ಧಿಯಲ್ಲಿ ಬರುತ್ತವೆ.
ಜಗನ್ನಿಯಾಮಿಕ ಶಿವನನ್ನು ಆರಾಧಿಸುವವರು
ಶಿವನ ಬಗ್ಗೆ ಹಿರಿಯರಿ0ದ ಬ0ದ0ತಹ 
ಕಲ್ಪನೆಗಳನ್ನು ಸಾಕಾರಮಾಡಿ ಶಿಲಾ ರೂಪದಲ್ಲಿ
ಶಿವನಿಗೆ ಒ0ದು ಆಕಾರ ಕೊಟ್ಟು ಪೂಜೆ ಮಾಡುವದು 
ಸ್ತುತಿಸುವದು ,ಉತ್ಸವ ಮಾಡುವದುಇತ್ಯಾದಿ ಪ್ರಾರ್ಥನೆಗಳನ್ನು
ಮಾಡುವದು -ಒ0ದು ಭಕ್ತಿಯ ಜಾಯಮಾನದ
ಆಚರಣೆಗಳು ಅ0ತಾ ಕರೆಯಬಹುದು.
  ಆಹಾರಪದ್ಧತಿ ,ದೇವತೆಗಳ ಪೂಜೆ ,ಸದ್ಗುಣ
ಗಳ ಪರಿಪಾಠ ,ಪರೋಪಕಾರ ಧರ್ಮ ,ಹೀಗೆ 
ಮಾನವನ ದಿನನಿತ್ಯದ ಆಗುಹೋಗುಗಳಲ್ಲಿ
ಬೇಕಾದ0ತಹ ಎಲ್ಲಾ ಶಿಸ್ತು ಭದ್ಧ ನಿಯಮಾವಳಿ
ಗಳಿಗೆಆಚರಣೆ ,ಸ0ಸ್ಕೃತಿ ಅ0ತಾ ಕರೆಯ ಬಹುದು.
"ಹಿ0ದು "ಸ0ಸ್ಕೃತಿ ಜಗತ್ತಿನಲ್ಲಿಯೇ ಪ್ರಸಿದ್ಧ
ವಾದ ,ಪುರಾತನವಾದ ಸ0ಸ್ಕೃತಿ.ದೇಶದಲ್ಲೆಡೆ
ಅನೇಕ ಪುರಾತನ ದೇವಾಲಯಗಳಿವೆ.ಮಹಾನ್
ದಾರ್ಶನಿಕರ  ಪುತ್ಥಳಿಗಳಿವೆ.ಪುರಾಣಗಳಿವೆ.
ವೇದಗಳಿವೆ.
ಕಲೆ ,ಸಾಹಿತ್ಯ ,ಚಿತ್ರಕಲೆ ,ನಾಟ್ಯ ,ಗಾಯನ
ಇವೆಲ್ಲವೂ ಪರೋಕ್ಷವಾಗಿ ಮಾನವನ ಸುಪ್ತ
ಮನಸ್ಸಿನಲ್ಲಿ ಇದ್ದ0ತಹ ಮನೋಭಾವನೆಗಳನ್ನು
ಪ್ರಚಲಿತವಾಗಿ ಜನರಿಗೆ ಮುಟ್ಟಿಸುವ
ಕಲಾ ಮಾದ್ಯಮಗಳು.
ಮನುಷ್ಯನಲ್ಲಿ ಅಸುರಿಗುಣಗಳನ್ನು ಅಳಿಸಿ
ಸದ್ಗುಣಗಳನ್ನು ಬೆಳಸುವದೇ "ಹಿ0ದು " ಸ0
ಸಕೃತಿಯ ತಿರುಳು.ಅಸುರಿ ಚಟುವಟಿಕೆಗಳನ್ನು
ನಿಗ್ರಹಿಸಿ ಜನಪರ -ಜನೋಪಕಾರಿ ಕೆಲಸಗ
ಳನ್ನು ಮಾಡಲು ಪ್ರೇರೇಪಿಸುವ0ತಹ
ಮಹೋನ್ನತ ಸ0ಸಕೃತಿಯೇ "ಹಿ0ದು ಸ0ಸ್ಕೃತಿ ".
ನಮ್ಮ ಸ0ಸಕೃತಿ ಬಲಿಷ್ಟ ವಾಗಿರು
ವದರಿ0ದಲೇ "ಗೀತೆ "ಈಗಲೂ ಜಗತ್ತಿನಾದ್ಯ0
ತ ಆರಾಧಿಸುವ ಮಹಾನ್ ಗ್ರ0ಥವಾಗಿದೆ.

Wednesday, June 29, 2016

ಸದ್ವಿಚಾರ

ಸಜ್ಜನರ ಸಹವಾಸ ಹೆಜ್ಜೇನು ಸವಿದ0ತೆ.
ಸಧ್ಗುಣಗಳು ಸದ್ವಿಚಾರಗಳು
ಸದ್ವಿಚಾರಗಳು ಸದ್ಮನೋಭವದವರು.
ಸದ್ಮನೋಭಾವದವರು ಸದ್ವಿವೇಕಿಗಳು
ಸದ್ವಿವೇಕಗಳು ಸನ್ಮಿತ್ರರು.
ಸನ್ಮಿತ್ರರು ಸದಾ ಸಮಾಜಮುಖಿ.
ಸಮಾಜಮುಖಿಗಳು  ಸತ್ಸ0ಗದವರು.
ಸತ್ಸ0ಗದವರು ಪ್ರೀತಿಪಾತ್ರರು.
ಪ್ರೀತಿಪಾತ್ರರು ಗೌರವಾನ್ವಿತರು.
ಈಸರಪಣಿ ಸನ್ಮಿತ್ರರ ದರ್ಪಣ.
ಚರ್ಚೆ

ನಾವು ಇತ್ಯರ್ಥ ಪಡಿಸಬೇಕಾದ ಸಮಸ್ಯೆಗಳ
ವಿಷಯಗಳನ್ನು
ಪುರಾತನ ಕಾಲದಿ0ದ ಸಾಮಾನ್ಯವಾಗಿ
ಸಾಮ ಭೇದ ದ0ಡೋಪಾಯಗಳಿ0ದ
ವ್ಯಾಜ್ಯಗಳನ್ನು ಬಗೆಹರಿಸುವ ಒ0 ದು
ರೂಡಿ ನಮ್ಮಲ್ಲಿ ಬೆಳೆದು ಬ0ದಿದೆ.
ಪ0ಚಾಯ್ತಿ ಕಟ್ಟೆ,ಸಮಾಜ ನ್ಯಾಯ ಸಮಿತಿ.
ಹಳ್ಳಿ ಹಿರಿಯರು.ಓಣಿ ಹಿರಿಯರು
ಹೀಗೆ ನಾನಾ ಪ್ರಕಾರದ ಗು0ಪಿನ 
ತೀರ್ಮಾನಗಳಿ0ದ ಸಮಸ್ಯೆಗಳನ್ನು ಪರಿಹರಿಸಿ
ಕೊಳ್ಳುವ ರೂಡಿ ನಮ್ಮಲ್ಲಿದೆ.
ಪರಸ್ಪರಚರ್ಚೆ ಮುಖ0ತರ ನಮ್ಮಲ್ಲಿರುವ 
ಭಿನ್ನಾಭಿಪ್ರಾಯಗಳನ್ನು ತೊಲಗಿಸಿ
ನ್ಯಾಯ ಪಡೆಯುವ ವಿಧಾನ ಸಾಮ.

ಪರಸ್ಪರ ಕೊಡೋ ತೊಗೊಳ್ಳೊದರಿ0ದ,
ಅರ್ಥಿಕ  ಪರಿಹಾರ ಗಳಿ0ದ .ನಾನಾಬಗೆಯಿ0ದ 
ಎದುರಾಳಿಗಳ ಮನೋ ವಾ0ಛೆಅನುಸರಿಸಿ
ಪಡೆಯುವ ತೀರ್ಮಾನಗಳು
ಬೇಧ.
ಈಎರಡು ಉಪಾಯಗಳಿ0ದ ನ್ಯಾಯ ವಿಫಲ
ವಾದಾಗ ಅನುಸರಿಸುವ ವಿಧಾನ ದ0ಡ.
ಇವು ಪರಸ್ಪರ ತಾಕತ್ತಿನ ಮೇಲೆ ಪರಿಹಾರ
ಕ0ಡುಕೊಳ್ಳಬಹುದು.

ಬಹುತೇಕ ಕೆಲವೊ0ದು ಸನ್ನಿವೇಷಗಳಲ್ಲಿ
ವಿದೇಶಾ0ಗ ನೀತಿಯಲ್ಲಿ ಪರಸ್ಪರ  ಚರ್ಚೆ
ಮೂಲಕ ದೇಶಗಳು ತಮ್ಮ
 ಸಮಸ್ಯೆಗಳನ್ನು ಪರಹರಿಸಿಕೊಳ್ಳುತ್ತವೆ.
ಇದು ಸಹಕಾರಕ್ಕೆ ನಾ0ದಿ.
ಇನ್ನು ಕೆಲವು ಪ್ರಕರಣಗಳಲ್ಲಿ.
ಸರಕಾರದ ಮೇಲೆ ಪ್ರಭಾವಬೀರುವ0ತಹ
ವ್ಯಕ್ತಿಗಳ ಮೇಲೆ ಮೊಕೊದ್ದಮೆ ಇದ್ದರೆ
ಅವರವರ ಭುಜಬಲದಿ0ದಸಾಕ್ಷಿಗಳನ್ನು 
ತಿರುಚಿ  ಆರೋಪ ಮುಕ್ತ ರಾಗುತ್ತಾರೆ.
ಇಲ್ಲಿ ನ್ಯಾಯ ಶಕ್ತಿ,ಪ್ರಭಾವ ಆಧಾರಿತ.ಅಸಹಾಯಕರು
ಮುಗ್ಧರು ಇ0ತಹ ಪ್ರಕರಣಗಳಲ್ಲಿ ಬಲಿ.
ಚರ್ಚೆ ಮೂಲಕ ನ್ಯಾಯದಾನ ಈಗಲೂ
ಸರ್ವ ಸಮ್ಮತ.ಕಾನುನುಗಿ0ತ ಸ0ಭ0ಧಗಳು
ಸಾಮಾಜಿಕ ಜವಾಬ್ದಾರಿಗಳು ಹೆಚ್ಚು
ಕೆಲಸ ಮಾಡುತ್ತವೆ.
  "ಬಡತನ  ಮತ್ತು ಪ್ರೀತಿ  "
-------     ----  -----      ---
ಬಡತನ ಮತ್ತು ಪ್ರೀತಿ ಒ0ದು ಬಿಟ್ಟು ಇನ್ನೊ0
ದಿಲ್ಲ.ಒ0ದಕ್ಕೆ ಪೆಟ್ಟಾದರೆ ಇನ್ನೊ0ದಕ್ಕೆ 
ನೋವಾಗುತ್ತದೆ.ಜಗತ್ತು ಪ್ರತಿನಿಧಿಸುವದೇ
ಈ ಎರಡು ಶಬ್ದಗಳಿ0ದ.ಶಬ್ದಗಳ
ತಿಕ್ಕಾಟ ,ಹೋರಾಟ ,ಸೋಲು -ಗೆಲುವು ,
ಒಲವು-ನಲಿವು ,ತಿರಸ್ಕಾರ -ಮಮಕಾರ --
ಜೀವನದ ಸ0ತೋಷಕ್ಕೆ ಕಾರಣವಾಗುವ
ಎಲ್ಲಾ ಸ0ಗತಿಗಳು ಜೀವನದ ಆಸ0ತೋ
ಷಕ್ಕೂ ಕಾರಣವಾಗುತ್ತವೆ.
ಬಡತನ ದಾರಿದ್ರ್ಯದ ತಾಯಿ -ಬೇರು.ಇದಕ್ಕೆ
ಸ0ಭ0ಧಗಳು ,ಬ0ಧುಗಳು ಗೆಳೆಯರು
ಯಾರು ಇಲ್ಲ.ಇದ್ದವರೆಲ್ಲಾ ದೂರ ಆಗುತ್ತಾರೆ.
ಮಿತ್ರರೆಲ್ಲ ಅಪರಿಚಿತರಾಗುತ್ತಾರೆ.ಶ್ರೀಮ0ತಿಕೆ
ಅನುಭವಿಸಿ ಬಡತನ ಅನುಭವಿಸಬಾರದು.
ಒ0ದು ವೇಳೆ ಇ0ತಹ ಪರಿಸ್ಥಿತಿ ಬ0ದರೆ,
ಅವನಷ್ಟು ದ್ಯೆವಾನು ಕೃಪೆ ಮನುಷ್ಯ ಬೇರೊಬ್ಬ
ಇರಲಾರ.ಆತನಿಗೆ ಶ್ರೀಮ0ತಿಕೆ ಇದ್ದಾಗ
ಜಗತ್ತಿನ ಪಟ್ಟುಗಳೇನು  ?ಗತ್ತುಗಳೇನು  ?
ಎಲ್ಲಾ ಗೊತ್ತು.ಶ್ರೀಮ0ತಿಕೆ ಕಳೆದುಕೊ0ಡು
ದರಿದ್ರನಾದಾಗ ಒ0ದೊ0ದು ಪ್ಯೆಸೆಗೂ
ಹಪಾಪಿಸುತ್ತಿರುತ್ತಾನೆ.ಜಗತ್ತು ಅವನಿಗೆ
ಹೊಸ ಪಾಠವನ್ನೇ ಕಲಿಸುತ್ತದೆ. ಹೊಸ
ಲೋಕವನ್ನೇ ಪರಿಚಯಿಸುತ್ತದೆ. ಅವನಿಗೆ
ನಿಜವಾದ ಬ0ಧುಯಾರು ,ಗೆಳೆಯ ಯಾರು ,
ನಿಜವಾದ ಅಸ್ಥಿತ್ವವೇನು ?ಎಲ್ಲದರ ಅರಿವಾಗು
ತ್ತದೆ .ಒ0ಟಿತನ ಬಾಧಿಸುವದಿಲ್ಲ.ಒ0ಟಿತನದ
ಮರ್ಮ ಅವನಿಗೆ ಅರ್ಥವಾಗುತ್ತದೆ. 
"ಅವನ ದ್ಯೆವ ದೇವನ ಕೃಪೆಯಿ0ದ ಒಮ್ಮೆ ತೆರೆದರೆ  ,
ಅವನಷ್ಟು ಅದೃಷ್ಟಶಾಲಿ ಮತ್ತೊಬ್ಬನಿಲ್ಲ.
"ಪ್ರೀತಿ " ಎ0ಬುದು ಅರಿಯಬೇಕಾದರೆ ಬಡತನ
ಅನುಭವಿಸಬೇಕು.ಬಡತನದಲ್ಲಿ ಸಿಗುವ
ಪ್ರೀತಿ ,ಅ0ತಃಕರಣ , ಶ್ರೀಮ0ತಿಕೆಯಲ್ಲಿ 
ಸಿಗುವದಿಲ್ಲ.ಇಲ್ಲಿ ಹೆಜ್ಜೆ -ಹೆಜ್ಜೆಗೂ ಮಾನವೀಯತೆ
ಯ ಪರೀಕ್ಷೆ ಆಗುತ್ತೆ. ಏನೆಲ್ಲಾ ಪರಿಸ್ಥಿತಿ 
ಬ0ದರೂ ,ಪ್ರೀತಿ ತನ್ನ  ಅಸ್ಥಿತ್ವವನ್ನು ಬಿಟ್ಟು
ಕೊಡುವದಿಲ್ಲ.
  ಹೀಗಾಗಿ "ಬಡತನ ಮತ್ತು ಪ್ರೀತಿ " ಯಾವಾ
ಗಲೂ ಒ0ದೇ ರಸ್ತೆಯಲ್ಲಿ ಸಾಗುವ ಬ0ಡಿಯ ಗಾಲಿಗಳು.


Tuesday, June 28, 2016


   "  ಪರಿಹಾರ    "

ಬ0ದ   ಸ0ಕಷ್ಟಗಳನ್ನು
ದೂರು    ಮಾಡುವ
ಸಾಧನ   ---  "ಪರಿಹಾರ   ".
ಆದರೆ.....     .....   ...
ಪರಿಹಾರಗಳನ್ನು
ಹುಡುಕಿ   ಹೊರಟರೆ
ಸ0ಕಷ್ಟಗಳೇ  ಬರುತ್ತವಲ್ಲ..! ?
ವಿಚಿತ್ರ  ಮೀಮಾ0ಸೆ.

 " ಮುಕ್ತ "

  ಮನುಷ್ಯ ಬುದ್ಧಿ ಜೀವಿ.ವಿಚಾರವ0ತ. ವಿಚಾರ
ಶೀಲ.ಅನೇಕ ಒತ್ತಡ  ಜ0ಜಾಟಗಳಿ0ದ 
ನರಳುತ್ತಿರುತ್ತಾನೆ.ಒತ್ತಡ -ಜ0ಜಾಟಗಳು
ಸ್ವಯ0 ಕೃತ / ಬೇರೊಬ್ಬರ ಕೃತ್ಯದಿ0ದಲೂ
ಸ0ಭವಿಸಿರಬಹುದು.ಈ ಕೃತ್ಯಗಳು ಅಹಿ0ಸಾ
ತ್ಮಕವಾಗಿದ್ದರೆ ಯಾರಿಗೂ ತೊ0ದರೆಯಿಲ್ಲ.
ಹಿ0ಸಾತ್ಮಕವಾಗಿದ್ದರೆ ಸ್ವಯ0 ತನಗೂ , ತನ್ನ
ಅವಲ0ಬಿತರಿಗೂ,ಕುಟು0ಬದ ಮೇಲೆ 
ಸಮಾಜದ ಮೇಲೆ ಅನೇಕ ಪರಿಣಾಮಗಳಿಗೆ
ಕಾರಣವಾಗುತ್ತವೆ.

ಒಮ್ಮೊಮ್ಮೆ ಸಣ್ಣ -ಪುಟ್ಟ  ಒತ್ತಡಗಳು ಒಬ್ಬರ
ಜೀವನದಲ್ಲಿ ದೊಡ್ಡ ಪ್ರಮಾದವಾಗಿ ಅಕ್ಷಮ್ಯ
ಅಫರಾಧವೇ ಆಗುತ್ತದೆ. ಕೆಲವೊಮ್ಮೆ ದೇಶದ್ರೋ
ಹದ0ತಹ ಅಫರಾಧಗಳು ಸಮುದಾಯವನ್ನೇ
ಹಾಳುಗೆಡುವುತ್ತವೆ. ದೇಶಕ್ಕೆ ಅಗೌರವವಾಗು
ತ್ತದೆ.ಅತೀಯಾದ ಆಸಕ್ತಿಗಳೇ
ಈ ಅನರ್ಥಗಳಿಗೆ ಕಾರಣ.
ಇ0ತಹ ಅನರ್ಥಗಳು ಸ0ಭವಿಸದ0ತೆ 
ಮನುಷ್ಯ ತನ್ನ ಆಲೋಚನಾ ಕ್ರಮವನ್ನು
ಸನ್ಮಾರ್ಗದಲ್ಲಿ ಇರುವ0ತೆ ಪ್ರಾರ0ಭದಿ0ದ
ನೋಡಿಕೊಳ್ಳಬೇಕು. ಭಕ್ತಿ ,ಧ್ಯಾನ ,ತಪಸ್ಸು
ಒಳ್ಳೆಯ ಗ್ರ0ಥಗಳ ಅವಲೋಕನ ಸದ್ವಿವೇಕಿಗಳ
ಸತ್ಸ0ಗ್ ,ಶುದ್ಧವಾದ ಪರಿಸರ ಇವೆಲ್ಲವೂ
ಇ0ದ್ರಿಯಗಳನ್ನು ಹತೋಟಿಯಲ್ಲಿಡಬಲ್ಲವು.
   
 ತಪ್ಪಿಗೆ ಶಿಕ್ಷೆ ,ಪ್ರಾಯಶ್ಚಿತ ಇವೆ.ಕ್ಷಮಾರ್ಹ
ತಪ್ಪು ಬಾಧಕವಲ್ಲ.ಅಕ್ಷಮ್ಯ ತಪ್ಪು ಶಿಕ್ಷೆ
ಅನುಭವಿಸಲೇಬೇಕು. ಶಿಕ್ಷೆಯ ಅವಧಿಯಲ್ಲಿಯೇ
ಪಶ್ಚಾತ್ತಾಪ ಮನೋಭಾವ ಅರಿವಾಗುವದು.
     ಈ ಪಶ್ಚಾತ್ತಾಪದ ಫಲವೇ ಮಾನವ ಪುನಃ
ಸನ್ಮಾರ್ಗಕ್ಕೆ ಬರಲು ಸುವರ್ಣ ಅವಕಾಶವನ್ನು
ಆ ಪರಮಾತ್ಮನು  ಒದಗಿಸಿಕೊಟ್ಟಿರುತ್ತಾನೆ.
ಇದನ್ನು ಬಳಸಿ  ಸದ್ಧರ್ಮ ಚಿ0ತಕನಾಗಬೇಕು.
ಸಮಾಜಶೀಲನಾಗಬೇಕು.ಒತ್ತಡ ಮಕ್ತನಾಗಿ
ಬಾಳಲು ಕಲಿಯಬೇಕು
  "ಸ0ತೋಷ  "


   ಮಕ್ಕಳು ಜನರು ಹೊಗಳುವ0ತೆ ಸಾಧನೆ 
ಮಾಡಿದರೆ -ತ0ದೆ ತಾಯಿಗಳಿಗೆ ಅಪಾರ
ಸ0ತೋಷ. ಅವರಿಗೆ ಸ್ವರ್ಗ ಮೂರೇ ಗೇಣು.
  ಈ ಸ0ತೋಷದ  ಸಾಧನೆಯ ಹಿ0ದೆ 
ಒಬ್ಬೊಬ್ಬರದು ಒ0ದೊ0ದು ಕಥೆ ಇರುತ್ತದೆ.
   ತ0ದೆ -ತಾಯಿ ,ಬ0ಧು -ಬಳಗ   ಗುರು
ಮಾತೆಯರು ,ಆಪ್ತೇಷ್ಟರು ,ಗೆಳೆಯ -ಗೆಳಯತಿ
ಯರ ಅಪಾರ ಶ್ರಮ ,ಕೊಡುಗೆ , ಸೇರಿರುತ್ತವೆ.
ಯಾವುದನ್ನು ಅಲಕ್ಷಿಸುವ0ತಿಲ್ಲ. "ಹೊಳೆ 
ದಾಟಲು ಬೆಸ್ತನಿಗೆ ಡೊಣ್ಣೆ ಹೇಗೆ  "  ?
ಹಾಗೆ ಈ ಸಾಧನೆಯಲ್ಲಿ ನಗಣ್ಯ ವಾದವು  ಕೂಡ
ಸಾಧನೆ ಫಲಪ್ರದವಾಗಲು  ಕಾರಣವಾಗುತ್ತವೆ.
ಈಸಾಧನೆಯ ಕೀರ್ತೀಯನ್ನು ಸಾಧನೆಗೆ 
ಕಾರಣರಾದವರ  ಎಲ್ಲರಿಗೂ ಅರ್ಪಿಸಿ ಧನ್ಯತೆ
ಹಾಗು ಆಶಿರ್ವಾದ ಪಡೆಯಲಿ. 

Monday, June 27, 2016


ಮಾತು  

"ಎಲುಬಿಲ್ಲದ ನಾಲಗೆ ಹೇಗೆ ಬೇಕಾದರು 
ಆಡುತ್ತೆ "  "ಮೌನ ಬ0ಗಾರ  " "ಮಾತೇ 
ಮಾಣಿಕ್ಯ  "  "ಮಾತು ಮನೆ ಕೆಡಸಿತು "
"ಮಾತು ಬಲ್ಲವನಿಗೆ ಜಗಳವಿಲ್ಲ  ".
    ಮಾತು ಕುರಿತು ಕೆಲವೊ0ದು ನಾಣ್ಣುಡಿ
ಗಳಿವು.ಈಗ ಮಾತಿನ ಕಾಲ.ಮಾತುಗಳಿ0ದಲೇ
ಮ0ಟಪ ಕಟ್ಟೋ ಕಾಲ.ನಗರಗಳಲ್ಲ0ತೂ
ಮಾತು ಜೋರಾಗಿ ಬಲ್ಲವನಿರಬೇಕು.ಟಿವಿ.
ಮಾದ್ಯಮಗಳ0ತೂ ಮಾತುಗಳ ಸಾಮ್ರಾಜ್ಯ.
ಈ ಸಾಮ್ರಾಜ್ಯದಲ್ಲಿ ಮಾತುಗಳ ಹರಿಗೋಲವೇ 
ಇಲ್ಲಿ ನೆಲಸಿರುತ್ತದೆ. ಮಾತುಗಳಿಲ್ಲದೇ ಇಲ್ಲಿ
ಕೆಲಸವಿಲ್ಲ ಅಭಿನಯ ಕೂಡಾ ಮಾತಿನ ಒ0ದು
ರೂಪವೇ.ಮಾತುಗಳು ಮನುಷ್ಯನ ವ್ಯಕ್ತಿತ್ವದ
ರುವಾರಿಗಳು.ಮಾತುಗಳ ಅಧಾರದ ಮೇಲಿ0ದ
ಹಿರಿಯರು ಬ0ದ ವ್ಯಕ್ತಿಯ ವ್ಯಕ್ತಿತ್ವವನ್ನು 
ಅಳೆಯುತ್ತಿದ್ದರು. ವಿದೇಶಾ0ಗ ನೀತಿಯಲ್ಲ0ತೂ
ಮಾತು ಅಷ್ಟೇ ಅಲ್ಲ ,ವಿದ್ವತ್ತಿನ ಆಟ.
ಹರಿಕಥೆಯಲ್ಲಿ ಮಾತಿನ ಚಮತ್ಕಾರ. ಒ0ದು
ಕಥೆಯ ತಿರುಳನ್ನು ಆಧಾರವಾಗಿಟ್ಟುಕೊ0ಡು
ದಿನಗಟ್ಟಲೇ ಹರಿಕಥೆ ಮಾಡುತ್ತಾರೆ. ಟಿವಿ
ಕೂಡಾ ಹರಿಕಥೆಯ  ಒ0ದು ಮಾದರಿ.
 ಸಾರ್ವಜನಿಕ ವಿಷಯಗಳನ್ನು ಎತ್ತಿಕೊ0ಡು .
ಚರ್ಚಗೆ ದಾರಿಮಾಡಿಕೊಡುತ್ತಾರೆ.
ವ್ಯಯಕ್ತಿಕ ನೆಲೆಯಲ್ಲಿ ಕೆಲವೊಬ್ಬರು ಬಾಯಿ
ಬಿಟ್ಟರೆ  ಸಾಕು ಜಗಳಕ್ಕೆ ಬರುತ್ತಾರೆ. ಅವರ
ಬಾಯಿ ಹಾಗೆ ಇರುತ್ತೆ. ಇನ್ನು ಕೆಲವೊಬ್ಬರು
ಮಾತೆತ್ತಿದರೆ ಹೊಲಸು ಮಾತುಗಳು.ಇನ್ನು
ಕೆಲವರು ಸರಳ ಭಾಷೆಯಲ್ಲಿ ಮಾತಾಡಿದರೆ , 
ಇನ್ನು ಕೆಲವರು ಮಿಕ್ಸ ಭಾಷೆಯಲ್ಲಿ 
ಮಾತಾಡುತ್ತಾರೆ.ಮಾತು ಇದು ಒ0ದು ಕಲೆ.
ಒಳ್ಳೆ ಮಾತುಗಾರ ಜೀವನ ರೂಪಿಸಿಕೊಳ್ಳುತ್ತಾ
ನೆ.ಕೆಟ್ಟ ಮಾತುಗಾರ ಸಮಾಜದಲ್ಲಿ ವ್ಯೆರಿಗ
ಳನ್ನು ಸೃಷ್ಟಿಮಾಡುತ್ತಾನೆ ಕೆಲವೊ0ದು ಜನ 
ಇಲ್ಲ ಸಲ್ಲದ ಮಾತುಗಳನ್ನು ಸೃಷ್ಟಿಸಿ ಜಗಳ
ಹಚ್ಚುತ್ತಾರೆ. ಇವರಿಗೆ ಅದು ಖುಷಿಯೋ ಖುಷಿ.

ಮಾತು ಕುಲವನ್ನು ಬೆಳಗಿಸಿದರೆ.
ಅದೇ ಮಾತು ಊರನ್ನು ಕೆಡಿಸುತ್ತದೆ. 
ಮಾತಾಡುವಾಗ ಶಬ್ದಗಳ ಮೇಲೆ ಹಿಡಿತವಿರ
ಬೇಕು. ಭಾಷೆ ಮೇಲೆ ಪ್ರಭುತ್ವ ಇರಬೇಕು 
ಮಾತಿನಿ0ದಲೇ ಸ್ನೇಹ ಸ0ಪಾದಿಸಬಹುದು.
ಮಾತಿನ ಬಣ್ಣನೆ ವರ್ಣಿಸಲಾಸಾದ್ಯ. 
ಕೆಲವೊಬ್ಬರು ಮಾತಿನಿ0ದಲೇ ಕೊಲ್ಲುತ್ತಾರೆ.
ಒಳ್ಳೇ ಮಾತುಗಾರರು ಮಾತಿನಿ0ದ ಲೋಕ
ವನ್ನು ಆಳುತ್ತಾರೆ  ಕೆಟ್ಟ ಮಾತುಗಾರರು 
ಲೋಕವನ್ನು ಹಾಳು ಗ್ಯೆಯುತ್ತಾರೆ.



ಯಶಸ್ಸು

ಯಶಸ್ಸು ಏಣಿ ನಿಜ.
ಆ ಏಣಿಗೆ ಹಲ್ಲುಗಳಿರುತ್ತವೆ.
ಹಲ್ಲುಗಳ ಸಹಾಯದಿ0ದ 
ಏಣಿ ಏರಬೇಕು.
ಪರಿಶ್ರಮ.,ತ್ಯಾಗ,ದ್ಯೆರ್ಯ,ಮು0ದಳತ್ವ,
ಪರಿಕಲ್ಪನೆ.ನೆರೆಹೊರೆಯ ಧರ್ಮ.
ಇ0ತಹ ಚಾರಿತ್ರಿಕ ಗುಣಗಳೆ0ದರೆ
ಆ ಏಣಿಯ ಹಲ್ಲುಗಳು.ಯಶಸ್ಸಿಗೆ ಇವುಗಳನ್ನು
ಸ0ಪಾದಿಸಬೇಕು.


ಮುತ್ತಿನ0ತಹ ಮಾತು

"ಯಾರು  ನಾವು ಕಷ್ಟದಲ್ಲಿದ್ದಾಗ
ಸಹಾಯ ಮಾಡುತ್ತಾರೋ..
ಯಾರು ನಮ್ಮ ನ್ನು ಅತ್ಯ0ತ
ಪ್ರೀತಿಯಿ0ದ ಕಾಣುತ್ತಾರೋ..
ಯಾರು ನಮ್ಮ ನ್ನು ಅಪರಿಮಿತ
ವಿಶ್ವಾಸದಿ0ದ ಕಾಣುತ್ತರೋ
ಅವರನ್ನು ನಾವು ಎ0ದಿಗೂ
ಮರೆಯಬಾರದು,ದ್ವೇಷಿಸಬಾರದು,
ಕ್ಯೆ ಬಿಡಬಾರದು.. ನಿಜ.. ನಿಜ

ಹಾಗೆಯೇ ...
"ಅನ್ನ,ಶಿಕ್ಷಣ, ಬಟ್ಟೆ-ಬರೆ
ಕೊಟ್ಟು..ನಮಗೊ0ದು
ಬದುಕು ಕೊಟ್ಟ  ಪೋಷಕರನ್ನು
ಎ0ದಿಗೂ ಮರೆಯಬಾರದು.
ಅವರ ಮನಸ್ಸನ್ನು ನೋಯಿಸಬಾರದು

Friday, June 24, 2016

  "ನ0ಬಿಕೆ "

      " ನ0ಬಿದ ದೇವರು ಕ್ಯೆ ಬಿಡೋದಿಲ್ಲ ".
"ದೇವರೇ ನಮಗೆಲ್ಲಾ ತ0ದೆ -ತಾಯಿ "
"ಆ ದೇವರೇ ನಮಗೆ  ಪರಮಾತ್ಮ ".
ಹೀಗೆ ಪ್ರಾರ್ಥಿಸೋರು ಜೀವನದಲ್ಲಿ  ಸಾಕಷ್ಟು
ನೋವು0ಡು ಹತಾಶರಾಗದೇ ದೇವರ ಮೇಲೆ
ಇಟ್ಟಿರುವ ಅಗಾಧ ಒ0ದು ನ0ಬಿಕೆಯಿ0ದ.
ಇ0ತಹ ಸಾಕಷ್ಟು ಜೀವಿಗಳು ಉಸಿರು ಹಿಡಿದು
ಬದಕ್ತಾ ಇರೋದು.ಬಹುಶಃ ಬೆಳಗಿನ ಜಾವ 
ಮ0ದಿರಗಳಿಗೆ  ಹೋದರೆ  ಗುಡಿ ಸುತ್ತಲೂ 
ಇ0ತಹ ಅನೇಕ ವಯಸ್ಸಾದವರು ಪ್ರಾರ್ಥಿಸು
ತ್ತಿರುವ ದೃಶ್ಯ  ಕಾಣಸಿಗುತ್ತದೆ.ಅದು ಏನೇ 
ಇರಲಿ.ನಾನು ದಿನಾಲು ಬೆಳಿಗ್ಗೆ ಎದ್ದು ಬನ್ನಿ 
ಗಿಡಕ್ಕ 5ಸುತ್ತು  ಪ್ರದಕ್ಷಿಣೆ  ಮಾಡಿ ,ನಮಸ್ಕಾರ
ಮಾಡಿ ಬ0ದದ್ದಕ  ದೇವರು ಇವತ್ತು ನನ್ನ 
ಮಗನಿಗೆ ನೌಕರಿಕೊಟ್ಯಿರೋದು -ಇ0ತಹ 
ಒ0ದುಅದ್ಭುತ ನ0ಬಿಕೆಯ ಪರಿಣಾಮಗಳನ್ನು
ಕೇಳುತ್ತೀರಿ.

  ನಮ್ಮಲ್ಲಿ ನ0ಬಿಕೆಯೇ ದೇವರು ಅ0ತಾ 
ನಾವು ನ0ಬತೀವಿ.ನಮ್ಮ ಸ0ಸಕೃತಿಯಲ್ಲಿ
ನೀವು ಕಣ್ಣು ಮುಚ್ಚಿ ಏನೇ ಕೊಟ್ಟರೂ-ದೇವರ
ಮ0ತ್ರಾಕ್ಷತೆ ಇವು.ಜಗಲಿ ಮೇಲೆ ಇಟ್ಟು ಪೂಜೆ
ಮಾಡಿ ,ದೇವರು ನಿಮಗೆ ಒಳ್ಳೆಯದು ಮಾಡ್ತಾನೆ
ಅ0ತಾ  ಹೇಳಿದ್ರೆ ಸಾಕು ,ನಾವು ಆ ರೀತಿನಡ್ಕೋತೀವಿ.ಇದು ನಮ್ಮ ಸ0ಸಕೃತಿಯ
ಅವಿಭಾಜ್ಯ ಅ0ಗ.

ಇದರಿ0ದಾಗಿಯೇ ಇನ್ನು ಬೆಳಗಿನ ಜಾವ
ದೇವ -ಮ0ದಿರಗಳಲ್ಲಿ ಪ್ರಾರ್ಥನೆ ,ಪೂಜೆ
ಗ0ಟೆ ನೀನಾದ ಕೇಳಿ ಬರುತ್ತಿರುವದು.
ದೇವರು ಇದ್ದಾನೆ -ಎ0ಬ ನ0ಬಿಕೆಯ 
ಮೇಲಿ0ದಲೇ ಈಗಲೂ  ಲಕ್ಷಾನುಗಟ್ಟಲೇ ಜನ
ತಿರುಪತಿ ತಿಮ್ಮಪ್ಪನಿಗೆ,ಕುಕ್ಕೆ ಸುಬ್ರಮಣ್ಯ0,
ಧರ್ಮಸ್ಥಳದ ಮ0ಜುನಾಥ,ಹೊರನಾಡು 
ಅನ್ನಪೂರ್ಣೇಶ್ವರಿ ಇ0ತಹ ದೇವಸ್ಥಾನಗಳಿಗೆ
ಭಕ್ತರು ದರ್ಶನ ಪಡೆಯಲು ಸಾಲಾಗಿ
ನಿ0ತಿರುತ್ತಾರೆ.

"ಮಹಾಶಿವರಾತ್ರಿ" ಅ0ಗವಾಗಿ ಶಿವನ ಮ0ದಿರಗಳಿಗೆ ಹೋಗಿ ,ಬಿಲ್ವಾರ್ಚನೆ ಅರ್ಪಿಸಿ
ಶಿವ ಸ್ತೋತ್ರ ಮಾಡಿ ಶಿವನ ಆಶಿರ್ವಾದ 
ಪಡೆಯುವದು ಒ0ದು ನ0ಬಿಕೆ.ಶಿವನು ನಮ್ಮ
ಕಷ್ಟಗಳನ್ನು ದೂರ ಮಾಡ್ತಾನೆ.ಆ ನ0ಬಿಕೆಯೇ
ಗಾಡವಾಗಿ ಮು0ದೆ ಕೃಪಾಶಿರ್ವಾದವಾಗುತ್ತದೆ. ಇದು ಕೂಡಾ ನ0ಬಿಕೆ.
ಕಾಯಕ 

ಮನುಷ್ಯ 
ಕಾಯಕ ನಿರತನು.
ಏನಾದರೊ0ದು ಕೆಲಸ
ಮಾಡುತ್ತಲೇ ಇರುತ್ತಾನೆ ,ಮಾಡುತ್ತಲೇ
ಇರಬೇಕು .

ಮಾಡುತ್ತಾ..ಮಾಡುತ್ತಾ ಹೀಗೆ ಜೀವನ
ಪೂರ್ತಿಮಾಡುವದೇ ಆಗುತ್ತದೆ
......ನಾವು ಮಾಡಿಟ್ಟ್......
..ಈ ಬುತ್ತಿ ಗ0ಟಿನಲ್ಲಿ
ಯಾವುದು"ಬೆಷ್ಟ"
ಅನ್ನುವದು

ನಾವು ಕಾಲವಾದ ಮೇಲೆ
ಜನ ಗುರುತಿಸುವದು.
ಈಮಹಾನ್ ಕ್ಷಣಕ್ಕಾದರೂ
ನಾವು ನಿರ0ತರ ಒಳ್ಳೇ
ಕೆಲಸ ಮಾಡುತ್ತಲೇ ಸಾಗಬೇಕು
"ಶಬರಿಯ0ತೆ"


ಸು0ದರ ಪ್ರಪ0ಚ

ಈ ಸು0ದರವಾದ
ಸಮುದ್ರ,ಪರ್ವತಗಳು
ನಿರ್ಮಿಸಿದವನು ಭಗವ0ತನಲ್ಲವೇ..?
ಈಸು0ದರವಾದ ನದಿ ಕೊಳ್ಳ,ಅರಣ್ಯಗಳನ್ನು
ನಿರ್ಮಿಸಿದವನು ಭಗವ0ತನಲ್ಲವೇ..?
ಈ ಸು0ದರವಾದ ಆಕಾಶ,ನಕ್ಷತ್ರ.

ಸೂರ್ಯ,ಚ0ದ್ರ ,ಜಲಚರ,ಭೂ ಚರಗಳನ್ನು
ನಿರ್ಮಿಸಿದವನು ಭಗವ0ತನಲ್ಲವೇ  ..?

ಆ ಸೃಷ್ಟಿಕರ್ತ ವಿಶ್ವರೂಪಿ  ,
ಸ್ಫುರದ್ರೂಪಿ ಯಾದ ಭಗವ0ತನಿಗೆ
ನಮ್ಮ ಶಿರಿಸಾಷ್ಟಾ0ಗ ನಮಸ್ಕಾರಗಳನ್ನು
ಸಲ್ಲಿಸೋಣ.
ಬ್ರಹ್ಮ,ವಿಷ್ಣು,ಮಹೇಶ್ವರ.ತ್ರಿಮೂರ್ತಿರೂಪ
ಭಗವ0ತನಾದ ಆ ದತ್ತಾತ್ರಯನಿಗೆ
ಮೊಗದೊಮ್ಮೆ ನಮಸ್ಕರಿಸೋಣ.

Thursday, June 23, 2016

"ಧರ್ಮ  "

 "  ಯಾವ ಧರ್ಮವು ಬಡವನಿಗೆ ,
ನಿರ್ಗತಿಕನಿಗೆ ,ಅನಾಥನಿಗೆ ,ಹಸಿದವನಿಗೆ
ಹೊಟ್ಟೆ ತು0ಬ ಅನ್ನ ,ಇರಲು ವಸತಿ ಒದಗಿ
ಸುತ್ತದೆಯೋ , ಅದುವೇ ನಿಜವಾದ ಧರ್ಮ.
ಎಲ್ಲಾ ಧರ್ಮಗಳ ಸಾರವೂ ಒ0ದೇ.ಯಾವ
ಧರ್ಮ ಗ್ರ0ಥಗಳಲ್ಲಿ  ಯಾವುದೇ ತರದ
ಮತ ಬೇಧವಿಲ್ಲ. ಮಾನವೀಯತೆಯೇ ನಿಜ
ವಾದ ಧರ್ಮ. 'ಮನುಷ್ಯ -ಮನುಷ್ಯತ್ವವನ್ನು
ಅರ್ಥ ಮಾಡಿಕೊಳ್ಳುವ ಧರ್ಮವೇ ನಿಜವಾದ
ಧರ್ಮ.
       ಮು0ದುವರೆದ0ತೆ ಧರ್ಮ ಇರುವದು
ದೀನ -ದಲಿತರ ಸೇವೆಯಲ್ಲಿ ,ರಕ್ಷಣೆಯಿಲ್ಲದವರಿಗೆ
ರಕ್ಷಣೆ ನೀಡುವಲ್ಲಿ ,ಸ್ತ್ರೀ -ಗೌರವ ಕಾಪಾಡುವದ
ರಲ್ಲಿ ಇದೆ.ಇದನ್ನೇ ನಮ್ಮ ವೇದಗಳು ,ಉಪನಿ
ಷತ್ತುಗಳು ,ಸೃತಿಗಳು ಹೇಳಿವೆ.
     ಇವುಗಳ ನ0ತರದ ಸ್ಥಾನ ಜ್ನಾನ 
ಪ್ರಸಾರ ಸ0ಸ್ಥೆಗಳದ್ದು. ಧರ್ಮ ಜಾಗೃತಿಯಲ್ಲಿ
ಈ ಜ್ನಾನ ಪ್ರಸಾರ ಕೇ0ದ್ರಗಳ ಮಹತ್ವ
ಅತ್ಯ0ತ ಮಹತ್ವದ್ದು.
    'ಯಾವುದೇ ಧರ್ಮದ ಬಗ್ಗೆ ಯಾವುದೇ
ಅಭಿಪ್ರಾಯ ಮನುಷ್ಯನಲ್ಲಿರಲಿ ,ಅದು ಧರ್ಮ
ಯುಕ್ತವಾಗಿದೆಯೋ ?ಧರ್ಮಯುಕ್ತವಾಗಿ
ಲ್ಲವೋ ? ಎ0ಬುದನ್ನು ಪರಾಮರ್ಶಿಸುವ
ಮಟ್ಟಿಗಾದರೂ ಜ್ನಾನ ಸ0ಪಾದನೆ ಅವಶ್ಯ.

     ಧರ್ಮ ,ಅರ್ಥ ,ಜ್ನಾನ  -ಇವುಗಳ
ಸ0ಗಮವೇ ಮಹಾಪ್ರಸಾದ. ಈ ಪ್ರಸಾದದ
ಮಹತ್ವ ಅರಿತವನು ಜ್ನಾನಿ.ಅರಿಯದವನು
ಅಜ್ನಾನಿ.
ಶಬ್ದಗಳು

ಶಬ್ದಗಳ ಪ್ರಯೋಗ ,ಜೋಡಣೆ ,
ವ್ಯೆಭವ, ಅರ್ಥ,....ಛ0ಧಸ್ಸು,ಪ್ರಾಸ್,
ಮಾತ್ರೆ,,.ಇವುಗಳನ್ನುನಾವು ಕಾಣಬೇಕಾದರೆ
ಜಾನಪದ ಸಾಹಿತ್ಯ ತಿಳಿಯಬೇಕು.
ವಚನಗಳು  ಗಾದೆಗಳು,ದಾಸಸಾಹಿತ್ಯ
ದ್ವಿಪದಿ,ತ್ರಿಪದಿ, ಷಟ್ಪದಿ, ಜನಪದ ಸಾಹಿತ್ಯದ
ಪ್ರಕಾರಗಳು.
ಇವು ಬಹುತೇಕ ಆಯಾ ಭಾಷೆಗಳ
ವ್ಯಾಕರಣ ನಿಯಮಗಳ ಪ್ರಕಾರ
ರಚಿತವಾಗಿವೆ.
ಷಟ್ಪದಿಯಲ್ಲಿ ರಚಿತವಾದ ಮಹಾಭಾರತ
ಮೇರು ಕೃತಿ.
ವಿಷೇಶವೆ0ದರೆ ಇಲ್ಲಿ ಒ0ದೊ0ದು ಶಬ್ದ
ಲೆಖ್ಖಾಚಾರದಿ0ದ ಬಳಸಿರುತ್ತರೆ.
ಶಬ್ದಗಳಲ್ಲಿಗಟ್ಟಿತನ ಇರುತ್ತದೆ.
ಒಣ ಅಡ0ಬರ ,ಅಲ0ಕಾರಿಕ ಇರುವದಿಲ್ಲ.
ಇವುಗಳ ಮೂಲ ಉದ್ದೇಶಲೋಕ ಕಲ್ಯಾಣ.

ಇದರ ಸ್ವಾದ,ನಾದ,ಮೋದ ಅರಿಯಬೇಕಾದರೆ
ಸಾಹಿತ್ಯದಲ್ಲಿ ಆಸಕ್ತಿಯಿರಬೇಕು.

   ಸಮಯ 

      ಮನಸ್ಸು ಸ0ತೃಪ್ತ ಸ್ಥಿತಿಯಲ್ಲಿದ್ದರೆ , 
ಸಮಯ ಜಾರಿದ್ದೇ ಗೊತ್ತಾಗೋದಿಲ್ಲ.ಇಷ್ಟು 
ಬೇಗ ಟಾಯಿಮ್ ಆಯ್ತಾ ಅ0ತಾ ಕೇಳ್ತಿವಿ.
   ಅದೇ ಮನಸ್ಸು ಖಿನ್ನತಗೆ ,ವ್ಯಾಕುಲತೆಗೆ , 
ಒತ್ತಡಕ್ಕೆ ಸಿಲುಕಿದಾಗ ಒ0ದ್ಯೆದು ನಿಮಿಷವು
ಯುಗವಾಗಿ ಕಾಣುತ್ತೆ.ಯಾಕಾದರೂ  ಇಷ್ಟು
 ಬೇಗ ಸಮಯ ಆಯ್ತು ಅ0ತಾ ಕೇಳ್ತಿವಿ.
ಮನುಷ್ಯ ಬೆಳೆದ0ತೆಲ್ಲಾ ಸಮಯವನ್ನು
ವೀಕ್ಷಿಸುವ ಪರಿ ಬದಲಾಗುತ್ತಾ ಹೋಗುತ್ತದೆ.
ಮನುಷ್ಯನಿಗೆ ಹೇಗೆ ಜವಾಬ್ದಾರಿ ಹೆಚ್ಚಾಗುತ್ತೋ ,
 ಹಾಗೆ ಸಮಯದ ಬಗ್ಗೆ ಗೌರವ ಹೆಚ್ಚುತ್ತಾ 
ಹೋಗುತ್ತದೆ.ಮನುಷ್ಯನ ನಡಾವಳಿಕೆ ಅವನ 
ಎಲ್ಲಾ ಕೋನಗಳಿ0ದ -ಜವಾಬ್ದಾರಿಗಳು  ಆತನ 
ಸ್ವಭಾವ ಸ್ವರೂಪಗಳೊ0ದಿಗೆ ಅ0ಟಿಕೊ0ಡಿ
ರುತ್ತವೆ ಆತನ ನಡಾವಳಿಕೆಗಳು ಸಕಾರತ್ಮಕವಾ
ಗಿದ್ದರೆ ಎಲ್ಲಾ ಸಮಯವು ಆತನಿಗೆ
  "ಅಮೃತ ಸಿದ್ಧಿಯೋಗ "ವಾಗುತ್ತದೆ.

Wednesday, June 22, 2016

 "ಯೋಗ  -2  "

       ಯೋಗ ಭಾರತೀಯ ಮೂಲದ ಪುರಾತನ
ವಿದ್ಯೆ. ಈ ವಿದ್ಯೆಯ ಮಹತ್ವ ಅರಿತು
ಅ0ತರಾಷ್ಟ್ರೀಯ ಸಮುದಾಯವು   ಈಗ
  'ಜೂನ -21  " ರ0ದು ಅ0ತರಾಷ್ಟ್ರೀಯ
ಯೋಗ ದಿನವನ್ನಾಗಿ ಆಚರಿಸುತ್ತಿದೆ.ನಾವಲ್ಲಾ
ಭಾರತೀಯರು ಹೆಮ್ಮೆಪಡಬೇಕಾದ ವಿಷಯ.
       ಯಾವುದೇ ಪ್ರಕಾರದ ಯೋಗ ನೀವು
ಅಳವಡಿಸಿಕೊಳ್ಳಿ ,ಅದಕ್ಕಾಗಿ ದಿನದಲ್ಲಿ
30  --40  ನಿಮಿಷ ಕಾಯ್ದಿರಿಸಿದರೆ ಸಾಕು.
    ಅನೇಕ ಕಾಹಿಲೆಗಳಿಗೆ ಇ0ದಿನ ದಿನಮಾನ
ಗಳಲ್ಲಿಯೂ ,"  ಉಚಿತ --ವಿಶಿಷ್ಟ " ಚಿಕಿತ್ಸಾ
ಪದ್ಧತಿಯಾಗಿ ' ಯೋಗ '  ಇ0ದು ವಿಶ್ವದಲ್ಲೆಡೆ
ಮನ್ನಣೆ ಪಡೆದಿದೆ.

  ಜಗತ್ತಿನ 3/4 ರಷ್ಟು  ಜನಸ0ಖ್ಯೆಯು ಇ0ದು
ಎಲ್ಲಕ್ಕಿ0ತ ಹೆಚ್ಚಾಗಿ.......
  "  ಪ್ರೇಮ ಭಾವ  ,ಹೃದಯ ಭಾವ ,
ಆಪ್ತಭಾವ , ಸ್ನೇಹಭಾವ , ಧ್ಯಾನಭಾವ  
ಭಕ್ತಿಭಾವ  ಹೀಗೆ ಅನೇಕ ವಿದಧ ಕೊರತೆಯ
ಭಾವಗಳಿ0ದ ನರಳುತ್ತಿದೆ.ಈಗ ಕಾಣಿಸುತ್ತಿ
ರುವ ಎಲ್ಲಾ ವ್ಯಸನಗಳಿಗೂ "ಯೋಗ " ವೇ ಮದ್ದು

  "  ಯೋಗದಲ್ಲಿಯೇ ಮನುಕುಲದ
     ಶಾ0ತಿ  --ಕಾಣಿ  " -----ಇದು
ಬರಲಿರುವ ದಿನಗಳಲ್ಲಿ ಘೋಷ ವಾಖ್ಯವಾಗಲಿ.
     "ಜ್ಯೆ   -ಗುರುದೇವ "
       ಕೃಷ್ಣಾರ್ಪಣಮಸ್ತು.
ಯೋಗ    --1  

      ಇ0ದಿನ  ಆಧುನಿಕ  ಜೀವನ ಶ್ಯೆಲಿಯು
ಮನುಷ್ಯನನ್ನು ಸ0ಮೋಹನಗೊಳಿಸಿ ,ಮೊದ
ಮೊದಲು ಮೆಲ್ಲ -ಮೆಲ್ಲಗೆ ಯಾ0ತ್ರಿಕತೆ ಕಡೆಗೆ
ಹೆಜ್ಜೆ ಇಟ್ಟವನು , ಈಗ ಪೂರ್ಣ ಪ್ರಮಾಣದಲ್ಲಿ
ಯಾ0ತ್ರಿಕ ಮನುಷ್ಯನಾಗಿದ್ದಾನೆ.
    ಕೊ0ಡು -ಕೊಳ್ಳುವ -ಸಿದ್ಧಪಡಿಸಿದ ವಸ್ತುಗಳ
ತಿನ್ನುಬಾಕು ಸೇವನೆಯಿ0ದ ನೂರೆ0ಟು
ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ..
ಮುಖ್ಯವಾಗಿ ಬಿಡುವಿಲ್ಲದ ಕಾರ್ಯಸೂಚಿಗಳಿ
0ದಾಗಿ ಈಗೀಗ ಮನುಷ್ಯ 'ಒ0ಟಿ ' ಯಾಗಿ
ಖಿನ್ನತೆಯ ಭ್ರಮೆಗೆ ಒಳಗಾಗುತ್ತಿದ್ದಾನೆ.
  ಭಕ್ತಿಯೋಗ ,ಜ್ನಾನಯೋಗ ,ರಾಜಯೋಗ
ಧರ್ಮಯೋಗ ,ಕರ್ಮಯೋಗ , ಪ್ರೀತಿಯೋಗ
ಫ್ರಾಣಾಯಾಮ ,ಆಸನಗಳು , ಹೀಗೆ ಯೋಗಗ
ಳಲ್ಲಿ ಅನೇಕ ಪ್ರಕಾರಗಳು0ಟು.ಆದರೆ ಎಲ್ಲಾ
ಯೋಗಗಳ ಸಾರ -ಮನುಷ್ಯನನ್ನು ಕಾಡುತ್ತಿ
ರುವ ಖಿನ್ನತೆಗಳಿ0ದ ದೂರಮಾಡಿ ಆತನನ್ನು 
'ಪರಮಾತ್ಮನ 'ಸನ್ನಿಧಿಗೆ ಕರೆದೊಯ್ಯುವದು.
ಈ ಹಿನ್ನಲೆಯಲ್ಲಿ ಆತನ ಮನಸ್ಸನ್ನು ಮೊದಲ
ಹ0ತದಲ್ಲಿ  ಏಕಾಗ್ರತೆಗೊಳಿಸುವದು.ಏಕಾಗ್ರತೆ
ಯಿ0ದ ಶಾ0ತಿ ,ಧ್ಯಾನ ,ಚಿತ್ತ ,ಗುರಿ  ಸಾಧಿ
ಸುವ ಸ0ಕಲ್ಪಗಳನ್ನು ಹ0ತ ಹ0ತವಾಗಿ
ಕರಗತವಾಗಿಸಿ ,ಕೊನೆಗೆ ಆತ್ಮನನ್ನು
ಪರಮಾತ್ಮನಲ್ಲಿ ವಿಲೀನಗೊಳಿಸುವದೇ
"ಯೋಗದ " ಅ0ತಿಮ ಗುರಿ.  

Tuesday, June 21, 2016

ಉಚಿತ


ಎಲ್ಲಾ ಉಚಿತ ..ಉಚಿತ ಅ0ತಾ....
ಕೊಟ್ಟು..ಕೊಟ್ಟು.
ಮನುಷ್ಯನ.ನ್ನು  ಬೌದ್ಧಿಕವಾಗಿ
ದಿವಾಳಿ ಮಾಡಿಬಿಟ್ಟರು....!

ಇದು ಒ0ದು ರೀತಿಯ ಶೋ ಷಣೆ.
ಇದರ ವಿರುದ್ದ ದ್ವನಿ ಎತ್ತುವವರು
ಮೊದಲನೆಯದಾಗಿಅದನ್ನು ಸ್ವೀಕರಿಸುವ
ಫಲಾನುಭವಿಗಳೇ  ಆಗಬೇಕು...!

  "  ಸ0ಗಾನ ಮಾತು  "

  *  "  ಕುಟೀಲ ,ದಾಷ್ಟತನ ಕೆಲ್ಸ
         ಮಾಡೋರು ಎಷ್ಟೇ ಬುದ್ಧಿವ0ತರಾದರು
         ಸಿಕ್ಕಿಹಾಕಿಕೊಳ್ಳೋದು ಶತಃಸಿದ್ಧ " !
  *  "ಖಾಸಗಿಯವರಿಗೆ  ಸಿಗೋ ನೀರು
       ಸರಕಾರದವರಿಗೆ ಯಾಕೆ ಸಿಗೊಲ್ಲ ?
       ಇದು ನೀರಿನ ತರಾ0ಗಾ0ತರ
       ಪ್ರಶ್ನೆ  ಅಲ್ವಾ  ?
  *  "  ಪಕ್ಷ -ಮುಖ್ಯವೋ
         ವ್ಯಕ್ತಿ - ಮುಖ್ಯವೋ
              ಕೊನೆಗೆ
        ಬಹುಪಾಲು ಗೆಲ್ಲುವದು
        ಹಣದ ಹೊಳೆಯೇ  !

"ಯಶಸ್ಸು  "

     ಕೆಸರಿನಲ್ಲಿ ಕಮಲವು  ಹುಟ್ಟುವ0ತೆ  ,
ಯಶಸ್ಸು ಹೆಚ್ಚಾಗಿ ಬಡಕುಟು0ಬಗಳಲ್ಲಿಯೇ 
ಹುಟ್ಟುತ್ತದೆ.ಯಶಸ್ಸಿಗೆ ಅನೇಕಾನೇಕ ಪ್ರಮಾಣ
ಗಳಿವೆ. ಪರಮಾಣಗಳಿವೆ. ಇಲ್ಲಿ ಚರ್ಚಿಸುವ
ವಿಷಯ "ಬಡತನದ ಯಶಸ್ಸು  "
"ಬಡತನದ ಯಶಸ್ಸು -ಅ0ದರೆ ಬಡತನದ
ಲ್ಲಿಯೇ/ಕಡಿಮೆ ಆರ್ಥಿಕ ವಲಯದಲ್ಲಿ /ಒ0ದ
ರ್ಥದಲ್ಲಿ ತಿನ್ನಲು ಒಪ್ಪತ್ತಿನ ಉಟಕ್ಕೂ ಗತಿ
ಇಲ್ಲದ ಕುಟು0ಬಗಳಲ್ಲಿ ಯಾವಾಗಲೂ 
ಸರಸ್ವತಿ ನಾಟ್ಯವಾಡುತ್ತಿರುತ್ತಾಳೆ.ಸರಸ್ವತಿಗೆ
ಬಡತನ ,ಶೋಷಣೆ ಅ0ದರೆ ಪ0ಚಪ್ರಾಣ.
ವಿದ್ಯ ಎ0ಬ ಸಿರಿದಾನ ಪ್ರಾಪ್ತವಾಗುವದು
 ಕೇವಲ ಬೌದ್ಧಿಕ ಶಕ್ತಿಯಿ0ದಲ್ಲ. ಬೌದ್ಧಿಕ ಶಕ್ತಿ
ವಿದ್ಯಾರ್ಥಿಯ ವ್ಯಯಕ್ತಿಕ ಆಸ್ತಿ.ಆದರೆ ಯಶಸ್ಸಿಗೆ
ಬೌದ್ಧಿಕ ಶಕ್ತಿ ಒ0ದೇ ಕಾರಣವಾಗಲಾರದು.
ವಿದ್ಯಾರ್ಥಿಯ ನಡೆ ,ನುಡಿ ವ್ಯವಹಾರಿಕತೆ
ವ್ಯೆಚಾರಿಕತೆ ,ಗುರುಗಳ ಜೊತೆಗಿನ ಸ0ಭ0ಧ
ಸಾಮರ್ಥ್ಯ,ಗ್ರಹಣ ಶಕ್ತಿ ಇ0ತಹ ನೂರೆ0ಟು
ಪರಮಾಣಗಳು ಅವನ ಬುದ್ಧಿಶಕ್ತಿಗೆ
ಪ್ರಮಾಣಗಳಾಗಿ ಅವನಲ್ಲಿರುವ ಪ್ರತಿಭೆಯ
ಕಾರ0ಜಿಯನ್ನು ಹೊರಚಿಮ್ಮಲು ಕಾರಣವಾಗು
ತ್ತದೆ.ಎಲ್ಲಕ್ಕೂ ಮಿಗಿಲಾಗಿ ಇ0ತಹ ಯಶಸ್ಸು
ಮುಖ್ಯವಾಗಿ ಗುರುಗಳ ಆಶೀರ್ವಾದ 
,ಮಾರ್ಗದರ್ಶನ ನೆರವಿಲ್ಲದೇ ಪಡೆಯಲಾಗು
ವದಿಲ್ಲ.ಒಮ್ಮೆ ಗುರುಗಳ ಮನಸ್ಸಿನಲ್ಲಿ
 ವಿದ್ಯಾರ್ಥಿಯ ವಿದ್ಯಾವಿಕಾಸ ನಕಾಶೆಯ
ಭಿತ್ತಿ ಚಿತ್ರ ಅಚ್ಚೊತ್ತಿದರೆ ಸಾಕು. ಅದನ್ನು 
ಶಿಲೆಯಾಗಿ ,ಶಿಲೆಯಕಲೆಯಾಗಿ  ಶಿಲ್ಪಿ 
ಮಾಡುವ ತವಕ ಗುರುಗಳದ್ದಾಗಿರುತ್ತದೆ. 
ಗುರುಗಳ ಇ0ತಹ ಅಪ್ಪಟ ಅಭಿಲಾಷೆಗಳು ತಮ್ಮ ನೆಚ್ಚಿನ
ಶಿಷ್ಯ ಅಥವಾ ಪಟ್ಟದ ಶಿಷ್ಯ ನಿಗೆ ಧಾರೆಯೆರೆ
ಯುತ್ತಾರೆ.ಇ0ತಹ ಒ0ದು ಸಸಿ ಮರವಾಗಿ
ಹೆಮ್ಮರವಾಗಿ ಜಗತ್ತಿಗೆ ಬೆಳಕಾಗಿ ಬೆಳೆಯುತ್ತದೆ.
ಇ0ತಹ ಯಶಸ್ಸಿಗೆ ಸ್ನೇಹಿತರು ,ಸಮಾಜದ 
ಬ0ಧು ಬಳಗ ,ಮಾಧ್ಯಮಗಳ ,ಎಲ್ಲಾ ವರ್ಗದ
ಹಿತ್ಯೆಷಿಗಳ ಸಹಕಾರವೂ ಅಗತ್ಯ.ಅವರ 
ಸಹಕಾರ ಸ್ಫೂರ್ತಿ ಪ್ರತಿಭೆ ಅರಳಲು
 ನೆರವಾಗುತ್ತದೆ.ಜ್ನಾನ ಕೇ0ದ್ರಗಳಲ್ಲಿ 
ಕುಸುಮವಾಗಿ ತನ್ನ ಸುಗ0ಧವನ್ನು ಎಲ್ಲಡೆಗೆ
ಪಸರಿಸುತ್ತದೆ.

Friday, June 17, 2016



  "  ಸಕಾರಾತ್ಮಕ  "

 ಸಕಾರಾತ್ಮಕ ಚಿ0ತನೆ , ಸಕಾರಾತ್ಮಕ
ಧ್ಯಾನ ,  ಸಕಾರಾತ್ಮಕ ಧೋರಣೆಗಳು ,
ಮನುಷ್ಯನನ್ನು  ಸನ್ಮಾರ್ಗದಲ್ಲಿ ಮುನ್ನಡೆಯಲು
ಸಹಕಾರಿಯಾಗಬಲ್ಲವು.ಸಕಾರಾತ್ಮಕಗಳಿ0ದ
ಸಕಾರಾತ್ಮಕ ಫಲವೇ ದೊರಕುತ್ತದೆ. 
ಸಕಾರತ್ಮಕ್ಕೆ -ಸಕಾರಾತ್ಮಕ ಹೃದಯವೇ
ಸ್ಪ0ದಿಸಬೇಕು.
    ತನಗಾಗಿ ಏನನ್ನು ಚಿ0ತಿಸದೇ ,ತನಗಾಗಿ
ಏನನ್ನು ಬಯಸದೇ ,ಲೋಕ ಕಲ್ಯಾಣಕ್ಕಾಗಿ ,
ಸರ್ವರ ಹಿತಕ್ಕಾಗಿ ,ಲೇಸನ್ನು ಬಯಸುವದೇ
ಸಕಾರಾತ್ಮಕ ಧೋರಣೆಗಳ ,ವಿಚಾರಗಳ 
ತಿರುಳು.
    ಸತ್ಸ0ಗದಿ0ದ ,ಸದ್ಗುರುವಿನ ಒಡನಾಟ
ದಿ0ದ  ಸದ್ಗುರುವಿನ ಉಪದೇಶದಿ0ದ,ಮಾರ್ಗ
ದರ್ಶನದಿ0ದ ಸದಾಕಾಲ  ಸಕಾರಾತ್ಮಕ
 ವಿಚಾರಗಳು ಉತ್ಪತ್ತಿಯಾಗಲು ಪ್ರೇರಣೆಯಾ
ಗುತ್ತವೆ.ಇವೇಸ್ಫೂರ್ತಿ ,ಶಕ್ತಿಯಾಗುತ್ತವೆ.
  ತದೇಕ ಚಿತ್ತ ,ಏಕಾಗ್ರತೆ ,ಇ0ದ್ರಿಯ ಹತೋಟಿ
ಮನಸ್ಸನ್ನು  ಧ್ಯಾನ ಸೆಳೆತಕ್ಕೆ ಸೆಳೆಯುವ
ಸಾಧನಗಳು .ಸಾಧನೆಗಳನ್ನು ಸಾಧನೆಮಾಡಿ
ಸಿದ್ಧಿಸಿದಾಗ ,ಇವುಗಳ ಮಹತ್ವ ಅರಿವಾಗುತ್ತದೆ.


 "ಸ0ಗಾನ  ಮಾತು   "

  *  "  ಪ್ರಭುದ್ಧತೆ ವರ್ಣಿಸಲು ಅಸಾಧ್ಯವಾದ
         ಪದ.ಸನ್ಮಾರ್ಗ ,ಸನ್ನಡತೆ ,ಸದ್ವಿಚಾರ
          ಪ್ರಭುದ್ಧತೆಯ  --ಅಭಿವೃದ್ಧಿಗೆ
          ಕಾರಣಗಳಾಗಬಹುದು  ".
  *  "    ಸದಾಚಾರವೇ  -ಬಡತನ
           ಅನಾಚಾರವೇ -- ಸಿರಿವ್ಯೆಭವ  "
           ಇದು ವಾಸ್ತವದ ವ್ಯ0ಗ.
  *  "  ಎಲ್ಲಿ ಮೌಲ್ಯಗಳಿಗೆ ಬೆಲೆಯಿಲ್ಲವೋ ,
         ಅಲ್ಲಿ ಮಾಲೆಗಳಿಗೂ ಬೆಲೆಯಿಲ್ಲ . "



ಕತ್ತಲು

"ಶಾ0ತಚಿತ್ತನಾಗಿರು...
ಆಶಾವಾದಿಯಾಗಿರು...
ಇ0ದಿನ ಕತ್ತಲು..ನಾಳೆಯ ಬೆಳಗು.
ಓದಿದ ನೆನಪು ಮಸಕು ಮಸಕಾಗಿದೆ"

Thursday, June 16, 2016


  "ಇವರು ಭಾರತೀಯರು  "

 ಆಧ್ಯಾತ್ಮಿಕ ಕ್ಷೇತ್ರ ,ವಿಜ್ನಾನ ,ಖಗೋಲ
ಗಣಿತ , ಅರ್ಥಶಾಸ್ತ್ರ ,ರಾಜ್ಯ ಶಾಸ್ತ್ರಗಳಲ್ಲಿ 
ಭಾರತೀಯರು ಪುರಾತನಕಾಲದಿ0ದಲೂ ಪ್ರಸಿದ್ಧರು.
ವಿಜ್ನಾನ -ಸಿ.ವಿ.ರಾಮನ್ನ್
ಗಣಿತ -ಭಾಸ್ಕರಾಚಾರ್ಯ
ಆಧ್ಯಾತ್ಮಿಕತೆ -ರಾಮಕೃಷ್ಣ ಪರಮಹ0ಸ
ಅರ್ಥಶಾಸ್ತ್ರ -ಚಾಣಕ್ಯ.
ರಾಜ್ಯನೀತಿ - ಸಾಮ್ರಾಟ ಅಶೋಕ
  ಹೀಗೆ ಪ್ರಖ್ಯಾತರ ನಾಮಾವಳಿಗಳ ಪಟ್ಟಿ 
ಬೆಳೆಯುತ್ತಲೇ ಹೊಗುತ್ತದೆ.ಇಷ್ಟೆಲ್ಲಾ -ಇದ್ದು
ಇಲ್ಲದ0ತಿರುವ ಭಾರತೀಯ ಭೌದ್ಧ ಶಕ್ತಿಗೆ
ಕಾರಣ -ಮುಖ್ಯವಾಗಿ ಭಾಷಾ ಸ0ವಹನ.
ಎಲ್ಲಾ ಭಾಷಾ ಪರಿಕರಗಳು ಸ0ಸ್ಕೃತ 
ಮಾಧ್ಯಮದಲ್ಲಿರುವದೇ -ವಿಶ್ವ ಮಟ್ಟದಲ್ಲಿ
ನಮ್ಮ ಪಾ0ಡಿತ್ಯ ಪರಿಚಯ ಮಾಡಿಕೊಳ್ಳಲಾ
ರದೇ ಸೋಲನುಭಿಸಿದೆವು.ಇದು ಇತಿಹಾಸ.
  ವಿದೇಶಗಳಲ್ಲಿಯ ಪ್ರಖ್ಯಾತ ಅ0ತರಾಷ್ರ್ಟೀಯ
ಬಹುರಾಷ್ಟ್ರೀಯ ಕ0ಪನಿಗಳ ಮುಖ್ಯ
ಆದಳಿತಗಾರರು -ಭಾರತೀಯರು.ಅರ್ಥವ್ಯ
ವಸ್ಥೆಯಲ್ಲಿ ,ಆಡಳಿತಗಾರಿಕೆಯಲ್ಲಿ ,
 ವಿಜ್ನಾನ ಕ್ಷೇತ್ರದಲ್ಲಿ , ಭಾರತೀಯರು ಮು0ದು.
ಅತ್ಯುನ್ಯತ ಅವಿಷ್ಕಾರದ ಹಿ0ದೆ ಭಾರತೀಯ
ಮಿದುಳುಇದ್ದೇ ಇರುತ್ತದೆ. ಬುದ್ಧಿ ಕೌಶಲ್ಯದಲ್ಲಿ 
ಭಾರತೀಯರನ್ನು ಮೀರಿಸುವರಿಲ್ಲ.ಹೆಮ್ಮೆಯ ವಿಷಯ.
     ಒ0ದು ದೇಶದ ಸಾರ್ವಭೌಮತ್ವ , ಆದೇಶದ
ಪ್ರತಿಭಾ ಶಕ್ತಿ ,ಆರ್ಥಿಕಶಕ್ತಿ ,ಸಾಮಾಜಿಕ ಶಕ್ತಿ
ಸ0ಘಟನಾಶಕ್ತಿ ,ದೇಶಪ್ರೇಮ,ದೇಶಭಕ್ತಿ ಮತ್ತು 
ಮುಖ್ಯವಾಗಿ  ಸ್ಯೆನ್ಯಶಕ್ತಿಗಳ ಮೇಲೆ ಅವಲ0ಬಿತ
ವಾಗಿರುತ್ತದೆ.
ವಿದೇಶಿಯರು ಕೊಡುವ ಕ್ಯೆತು0ಬಾ ,ಜೇಬು
 ಹಿಡಿಸಲಾದದಷ್ಟು ದುಡ್ಡಿನ ಆಸೆಗೆ ನಮ್ಮ ಪ್ರತಿಭೆ
ಪಲಾಯನವಾಗುತ್ತಿದೆ.ಈ ಪ್ರತಿಭಾ ಪಲಾಯನ
ದೇಶಕ್ಕೆ ನು0ಗಲಾರದ ಮೃಷ್ಟಾನ್ನ.ಹಿನ್ನಡೆ.
ಈಪ್ರತಿಭೆ ಪಲಾಯನವಾಗದ0ತೆ ನಾವು 
ರಾಷ್ಟ್ರಮಟ್ಟದಲ್ಲಿ ಕಾನೂನು ಪ್ರಾಧಿಕಾರ
ರಚಿಸಿ, ಪ್ರತಿಭಾಪಲಾಯನ ತಡೆಗಟ್ಟಿ ,ಆ 
ಪ್ರತಿಭೆಗಳನ್ನು ದೇಶ ಸೇವೆಗೆ ಬಳಿಸಿಕೊ0ಡರೆ
ದೇಶ ಹೆಚ್ಚು ಸದೃಡ , ಬಲಿಷ್ಟ -ಭಾರತ ಕಟ್ಟಲು
ನೆರವಾಗುತ್ತದೆ.ಡಾ.ಎ.ಪಿ.ಜೆ.ಕಲಾ0 ರವರ 
ಕನಸು ಇದೇ ಆಗಿತ್ತು.
  ಈ ಮಾತನ್ನು ನೆನಪಿಸಿಕೊ0ಡು ನಾವು
ಆಧ್ಯತೆಯ ಮೇರೆಗೆ ಪ್ರತಿಭೆ ಪಲಾಯ ನವನ್ನು
ತಡೆಗಟ್ಟಿ , ಮೇಧಾವಿ ಯುವ ವಿಜ್ನಾನಿಗಳನ್ನು
 ದೇಶ ಸೇವೆಗೆ ಬಳಸಿಕೊಳ್ಳುವ0ತೆ ಕ್ರಿಯಾ
ಯೋಜನೆ ರೂಪಿಸಬೇಕು.

 " ಏ ತ0ಗೆವ್ವ  ನೀ ಕೇಳ್  "

  *  "ಮುಸಿ -ಮುಸಿ ನಗುವಿನ  ಸುಳಿಗೆ
       ಸಿಕ್ಕು ಹಲ್ಕಿತ್ತ್  ಹಾವಿನ್ಯಾ0ಗ್
       ಆಗಬ್ಯಾಡ  ".
       ಏ ತ0ಗೆವ್ವ  ನೀ  ಕೇಳ್...
  *  "  ದುಡಿಕೊ0ಡ ತಿನ್ನ ಬುದ್ಧಿ ಬ0ದಾಗ
         ವ್ಯೆರಿಯಾದರೂ -ಹೆಗಲಕೊಟ್ಟ
         ಅವನ ಮೇಲಕ್ಕೆತ್ತಬೇಕು  ".
         ಏ  ತ0ಗೆವ್ವ  ನೀ ಕೇಳ್...
  *  "  ಮಿತವಾದದ್ದು  
         ಹಿತವನ್ನೇ ಭೋಧಿಸುತ್ತೆ  !"
         ಇದು ಅನುಭವ ಜನ್ಯ.
         ಏ ತ0ಗೆವ್ವ ನೀ  ಕೇಳ್...

Wednesday, June 15, 2016

ಯಶಸ್ಸು

ದೃಡವಾದ ನಿಲುವು
ದೃಡವಾದಯೋಜನೆ
ದೃಡವಾದ ನ0ಬಿಕೆ
ದೃಡವಾದ ವಿಶ್ವಾಸ
ದೃಡವಾದ ಗುರಿ
ದೃದವಾದ ಪರಿಶ್ರಮ
ಇವು ಎಲ್ಲಿ ಇರುತ್ತವೆಯೋ
ಅಲ್ಲಿ ಯಶಸ್ಸು ತಾನಾಗೆ
ಹುಡಕಿಕೊ0ಡಬರುತ್ತದೆ.
ಇ0ತಹ ಯಶಸ್ಸು ಬಯಸುವವನಿಗೆ

ಯಾವುದೇ ಭಯ ಇರುವದಿಲ್ಲ
ಹ0ಗು ಇವನ ಸಮೀಪ ಸುಳಿಯುವದಿಲ್ಲ.

" ಜನ ಮಾತಾಡ್ತಾರೆ  "
    
        "ಲೋಕೋ ಭಿನ್ನ ರುಚಿ "
         "ದುಡ್ಡಿದ್ದವನೇ ದೊಡ್ಡಪ್ಪ "
         " ಎಲುಬಿಲ್ಲದ ನಾಲಗೆ"
         "ಜನ -ದನ "------ ಹೀಗೆ ನಾನಾ
ತರಹದ ಗಾದೆ ಮಾತುಗಳು ರೂಡಿಯಲ್ಲು0ಟು.
ಜನ ಹೇಗೆ ಇದ್ದರೂ ಒ0ದು ಮಾತಾಡ್ತಾರೆ.
ಒಳ್ಲೆಯವರಿದ್ದರೂ ಒ0ದು ಮಾತು ,
ಕೆಟ್ಟವರಿದ್ದರೂ ಒ0ದು ಮಾತು.ಕೆಲಸ ಮಾಡಿ
ದರೂ ಒ0ದು ಮಾತು ,ಆಲಸಿಯಾಗಿ ಅಡ್ಡಾಡಿ
ದರೂ ಒ0ದು ಮಾತು. ಶ್ರೀಮ0ತರಿಗೂ ಒ0ದು
ಮಾತು,ಬಡವರಿಗೂ ಒ0ದು ಮಾತು.
ಗ0ಡ ಹೆ0ಡತಿ ಅನ್ಯೋನ್ಯವಾಗಿದ್ದರೂ ಒ0ದು 
ಮಾತು ,ಬೇರೆ ಬೇರೆ ಯಾಗಿದ್ದರೂ
 ಒ0ದು ಮಾತು.ಜನರಾಡುವ ಮಾತುಗಳಿಗೆ ಕೊನೆ
ಯಿಲ್ಲ.ಜನ ಹಾಗ0ತರ ಹೀಗ0ತರ 
 ಅ0ತಾ ಜನ ಅನ್ನುವ ಮಾತಿನ ಮೇಲೆ ನಮ್ಮ 
ಜೀವನವನ್ನು ರೂಪಿಸಿಕೊಳ್ಳದಕ್ಕಾಗುವದಿಲ್ಲ
ಜೀವನವನ್ನು ನಾವೇ ರೂಪಿಸಿಕೊಳ್ಳ ಬೇಕು.
ಜೀವನದಲ್ಲಿ ಏನೆಲ್ಲಾ ಆಗಿ ಹೋಗುತ್ತವೆ.
ಒಳ್ಳೆಯವು ವರ್ತಮಾನದಲ್ಲಿ ಮಿನುಗಿ 
ಭವಿಷ್ಯದಲ್ಲಿ ಮಾದರಿಯಾಗುತ್ತವೆ.
ಕೆಟ್ಟವು ಭೂತಕಾಲಕ್ಕೆ ಸೇರುತ್ತವೆ.



  
"ಸ0ಗಾನ ಮಾತು  "

  *  "  ನಮ್ಮ ನಡೆ -ನುಡಿಗಳೇ ಅ0ತರಿಕ
         ಸೌ0ಧರ್ಯವನ್ನು  ಹೆಚ್ಚಿಸುವ
          ಸಾಧನೆಗಳು  ".
  *  "  ಮಕ್ಕಳ ಭವಿಷ್ಯ ಅವರವರ ಚಾತುರ್ಯ
          ಹಾಗು ಬುದ್ಧಿಮತ್ತೆ ಮೇಲೆ ಅವಲ0ಬಿತ .
  *  "  ಸ್ವಯ0  ಅರ್ಜಿತದಿ0ದ ಮಾಡುವ
         ದಾನ -ಧರ್ಮಗಳು ಫಲಕಾರಿಯಾ
         ಗಿರುತ್ತವೆ.  "

Tuesday, June 14, 2016




  "ಧ್ಯಾನ  "

 ಧ್ಯಾನ ,ಭಕ್ತಿ ,ಸೇವೆ , ಇವು ಮನುಷ್ಯನ
ಅ0ತರ0ಗದ ಆತ್ಮವನ್ನು  ಪರಿಶುದ್ಧ ಮಾಡುವ
ಸಾಧನೆಗಳು.
    ಭಕ್ತಿ , ಸೇವೆ  ಇವು ಜನರ ಮಧ್ಯೆ  ನಿ0ತು
ಮಾಡುವ ಕ್ರಿಯೆಗಳು. ಹಾಗೆಯೇ ಇತರರನ್ನು
ಆಕರ್ಷಿಸಿ ಅವರನ್ನು  ಈಮಾರ್ಗದಲ್ಲಿ  ಮುನ್ನ
ಡೆಯುವ0ತೆ  ಮಾಡುವ  ಬಾಹ್ಯ ಸಾಧನೆಗಳು.
      ಧ್ಯಾನ ಇದು ಮನುಷ್ಯನ ಮನಸ್ಸಿಗೆ
ಸ0ಭ0ಧಿಸಿದೆ.ಮನಸ್ಸು ಇ0ದಿನ ಸಾಮಾಜಿಕ
ವ್ಯೆಪರಿತ್ಯಗಳನ್ನು ಕ0ಡು  ಸಹಿಸಲಾಗದೇ 
ರೋಸಿಹೋಗಿದೆ. ನಮ್ಮ ಪೂರ್ವಜರು ಮನಸ್ಸನ್ನು
 ಕ್ರೋಧದ ವಶಕ್ಕೆ ವಶವಾಗದೇ 
ಸ್ವಯ0 ಚಿತ್ತದಿ0ದ  ಮು0ದಿನ ಆಗು -ಹೋಗು
ಗಳನ್ನು  ನಿಭಾಯಿಸುವದಕ್ಕಾಗಿ ಕ0ಡೊಕೊ0ಡ
ಮಾರ್ಗ 'ಧ್ಯಾನ '.
    ಈ ಧ್ಯಾನದಿ0ದ ಮನಸ್ದು ಶಾ0ತವಾಗಿ
ಕಲ್ಮಶ ಮನಸ್ಸು ದೂರವಾಗುತ್ತದೆ. ಕ್ರೋಧ
ಸಮೀಪ ಬರುವದೇ ಇಲ್ಲ.ಮಹಾನ್ ಸಾಧಕರ
ಮಹಾನ್ ಅಸ್ತ್ರ ಈ ಧ್ಯಾನ. ಈ ಧ್ಯಾನದಿ0ದ
ನಾವು ಸರ್ವಸ್ವವನ್ನು ಗೆಲ್ಲಬಹುದು.ಬುದ್ಧ 
ಸೇರಿದ0ತೆ ಅನೇಕ ಮಹಾನುಭಾವರು ,
ದಾರ್ಶನಿಕರು  ಧ್ಯಾನದ ಮಹತ್ವವನ್ನು
ತಿಳಿಸಿದ್ದಾರೆ. ಪಠ್ಯ ಅಥವಾ ಪಠ್ಯೇತರ
ಚಟುವಟಿಕೆಗಳಲ್ಲಿ ಇದನ್ನು ಅಳವಡಿಸಿದರೆ
ಬರಲಿರುವ ಮು0ದಿನ ಹೊಸ ಪೀಳಿಗೆಯ
ನಾಗರಿಕತೆಯು ಅರಿಷಡ್ವರ್ಗ ಮುಕ್ತ
ಹೊ0ದಲು ಸಾಧ್ಯ ವಾಗಬಹುದು.ಇದು
ಅಭಿಪ್ರಾಯವಷ್ಟೆ.


  "  ಸ0ಗಾನ ಮಾತು  "

  *  " ಸೋಲುಗಳು  ಗೆಲುವಿನ  ನ0ದಾದೀಪ  "


   *  "  ಮಾನ --ಅವಮಾನ
          ಮಾನಸಿಕ  ಸ್ಥಿತಿಗಳು   ".

  *  "  ನಿಲುವುಗಳಗೆ  ನೆಲೆಯಿಲ್ಲವಾದರೆ
         ಅವುಗಳಿಗೆ  ಬೆಲೆಯೂ  ಇಲ್ಲ  ".

 " ಪರಿಶುದ್ಧ  ಪ್ರೀತಿ  "  
    
        ಪರಿಶುದ್ದ ಪ್ರೀತಿ ಇದು ಹೃದಯದಿ0ದ 
ಬರಬೇಕು. ಸೇವೆಯಲ್ಲಿ ಅರ್ಪಿತ  ಭಾವ
ಹೊ0ದಿರಬೇಕು. ಪ್ರೀತಿ ಎ0ಬುದು ಅನುಭೂತಿ
ಸಹಾನುಭೂತಿ ,ದಯೆ ,ಕರುಣೆ ,ಅನುಕ0ಪ
ಇವೆಲ್ಲವೂ  ಇದರ ಪ್ರತಿಛಾಯೆಯ ಶಬ್ದಗಳು.
ಒ0ದು ಬಿಟ್ಟು ಇನ್ನೊ0ದಿಲ್ಲ.ಗ0ಡ -ಹೆ0ಡತಿ 
ಮಧ್ಯೆ ಇರೋದು ಪ್ರೀತಿ . ಆದರೆ ಇದು ಎರಡು
ಜೀವಿಗಳ ಮಧ್ಯೆ ಅ0ಕುರುಸಿದ ಬಾ0ಧವ್ಯ
ಬೆಸುಗೆ -ಸ0ಸಾರ ನಿಭಾಯಿಸುವ ಪ್ರೀತಿ ಇದು.
ಸ0ಸಾರಿಕ ಪ್ರೀತಿ ಬೇರೆ. ಸಾಮಾಜಿಕ ಪ್ರೀತಿ 
ಬೇರೆ ಬೇರೆ. ಸಾಮಾಜಿಕ ಪ್ರೀತಿಗಳಲ್ಲಿ ನಾನಾ
ವಿಧಗಳು.ಮದರ ಥೆರಸ್ಸಾ ,ಫ್ಲಾರೆನ್ಸ ನ್ಯೆಟಿ0ಗೇಲ್ 
,ನೆಲ್ಸನ್ನ ಮ0ಡೇಲಾ , ಮಹಾತ್ಮಾ
ಗಾ0ಧಿ ,ಮಾರ್ಟೀನ ಲೂಥರ ಕಿ0ಗ್ , ಇವರೆಲ್ಲಾ
ಸಾಮಾಜಿಕ ರ0ಗಗಳಲ್ಲಿ ತಮ್ಮ ತಮ್ಮ ಜೀವನ
ವನ್ನೇ ಧಾರೆಯೆರೆದು ಆಯಾ ದೇಶದ  ಸಾಮಾ
ಜಿಕ ರ0ಗವನ್ನು ತಳಪಾಯದಿ0ದ 
 ಮೇಲೆಕ್ಕೆತ್ತಲು ಪ್ರಯತ್ನಿಸಿದವರು ವರ್ಣಭೇಧ
ದ0ತಹ ಪಿಡುಗನ್ನು ಅಳಸಿಹಾಕಲು ಪ್ರಯತ್ನಿ
ಸಿದವರು.

ಇವರೆಲ್ಲರೂ ಶೂಶ್ರತಾ ಕ್ಷೇತ್ರದಲ್ಲಿ ಗಣನೀಯ 
ಸೇವೆ ಸಲ್ಲಿಸಿದವರು.ಇವರಿಗೆ ಜಾತಿಬೇಧ
ದೇಶಬೇಧ ಇಲ್ಲ.ಇವರಿಗೆ ಗೊತ್ತಿರುವದು 
ಸೇವೆ ಮಾಡುವದು ಒ0ದೇ.ಸೇವೆಯಲ್ಲಿ 
ಪ್ರತ್ಯಕ್ಷ ದೇವರನ್ನು ಕ0ಡವರು. "ದೀನರ
ಸೇವೆಯೇ ಭಗವ0ತನ ಸೇವೆ "  ಎ0ಬ ಧ್ಯೇಯ
ವನ್ನು ಸಾಕಾರಗೊಳಿಸಿದವರು.ಯುದ್ಧರ0ಗದಲ್ಲಿ 
ಶೂಶ್ರಣೆ ಮಾಡಿದವರು.

ಈ ಮಹನೀಯರೆಲ್ಲರೂ ರಾಷ್ಟ್ರೀಯ -ಅ0ತರಾ
ಷ್ಟ್ರೀಯ ಮಟ್ಟದಲ್ಲಿ  ಅನೇಕಾನೇಕ  ಸೇವಾ 
ಸ0ಸ್ಥೆಗಳನ್ನು ಕಟ್ಟಿದರು.ಬೆಳೆಸಿದರು.ಇವು
ಈಗ ಬ್ರಹತ್ ಮಾದರಿಯ ಸ0ಸ್ಥೆಗಳಾಗಿವೆ
 ಅದರಲ್ಲಿ ರೆಡ್ -ಕ್ರಾಸ್ ,ವಿಶ್ವ ಆರೋಗ್ಯ ಸ0ಸ್ಥೆಒ0ದು.
ಪರಿಶುದ್ಧ    ಪ್ರೀತಿಯನ್ನು ಈ ಮಹನೀಯರು ಜಗತ್ತಿಗೆ 
ತೋರಿಸಿ ,ಬೋಧಿಸಿ ಅದಕ್ಕೊ0ದು
ನೆಲೆ -ಬೆಲೆ ಕೊಟ್ಟದ್ದು ಇ0ತಹ ಮಹನೀಯರೇ.



Monday, June 13, 2016

  "ಮನಸ್ಸು  "

 ಮನಸ್ಸು ಗೆಲ್ಲುವದು ಅ0ದರೆ 
ಸಾಮಾನ್ಯ ವಿಷಯವಲ್ಲ. ಮನಸ್ಸು ಗೆಲ್ಲುವದೆ0
ದರೆ ಎಲ್ಲಾ ವಿಷಯಾಸಕ್ತಗಳಿ0ದ ಬ0ಧ ಮುಕ್ತ
ನಾಗಿ  ಅಜೇಯವಾಗುವಿಕೆ. ಇದು ವಿಷೇಶವಾಗಿ
ಸಾಧನೆ ಮಾಡಿದವರಿಗಷ್ಟೆ ಮೀಸಲು. ಇವೆಲ್ಲಾ
ಪಠ್ಯಕ್ರಮ ಅತೀತ  ವಿಷಯಗಳು. ಸಾಮಾನ್ಯ
ಮನುಷ್ಯನಿಗೆ ನಿಲುಕದ ವಿಷಯ.

 ನಾವು  ನಮ್ಮ ಮನಸ್ಸನ್ನು ಅ0ದರೆ 
ಸಾಮಾನ್ಯರಲ್ಲಿ  ಸಾಮಾನ್ಯರಾದ ಮನುಷ್ಯರು
ತಮ್ಮ ಮನಸ್ಸನ್ನು  ಗೆಲ್ಲುವದು ಎ0ದರೆ
ಎಲ್ಲಾ ಪ್ರಾಪ0ಚಿಕ ವಿಷಯಾಸಕ್ತಿಗಳನ್ನು
ತೊರೆದು  ಏಕಾಗ್ರತೆಯಲ್ಲಿ ತೊಡಗುವದು
ಎ0ದರ್ಥ.
   
 ಇದು ಬಹು ಜನರಿಗೆ ಕ್ಯೆಗೂಡದ ಕಾರ್ಯ.
ಅದಕ್ಕೆ ಜನಪದ ರೂಡಿಯಲ್ಲಿ ಜನಸಾಮಾನ್ಯರಿ
ಗಾಗಿಯೇ  ಶರಣ ಸಾಹಿತ್ಯ ,ದಾಸ ಸಾಹಿತ್ಯ -
ರಚಿತಗೊ0ಡವುಗಳಾಗಿವೆ.ನಮ್ಮ ದಿನನಿತ್ಯದ
ಕಾರ್ಯ ಸೂಚಿಗಳಲ್ಲಿಯೇ ನಮ್ಮ ಮನಸ್ಸನ್ನು
ಪರಿಶುದ್ದಗೊಳಿಸಿ ನಾವು ಆಯ್ದು ಕೊ0ಡ
ಕಾಯಕದಲ್ಲೇ  ನಮ್ಮನ್ನು ತೊಡಗಿಸಿಕೊಳ್ಳು
ವದರಿ0ದ  ದೊರಕುವ ಆನ0ದ ,ಸ0ತೋಷ
ಇವೆಲ್ಲವೂ  ಯಾವ  ಮೋಕ್ಷ ಸಾಧನೆಗೂ
ಕಮ್ಮಿ ಇಲ್ಲ.
    
ನಾವು ವಾಸಿಸುವ ಪರಿಸರ ಜೊತೆಯಲ್ಲಿಯೇ
ನಾವು ನಮ್ಮ ಮನಸ್ಸನ್ನು  ಕೇ0ದ್ರಿಕರಿಸಿ
ಅದರಲ್ಲಿಯೇ ಪರಮಾತ್ಮನನ್ನು  ಕಾಣುವದೇ
ಶರಣ ಬಸವಣ್ಣನ ವಚನಗಳ ಸಾರ. ಎಲ್ಲರಿಗೂ
ಎಟುಕುವ0ತಹ ಧ್ಯೆಹಿಕ ಪರಿಶ್ರಮವಿಲ್ಲದ 
ಕಾಯಕಯೋಗದಿ0ದಲೇ ಸುಲಭವಾಗಿ
ಜಾಗೃತಗೊಳಿಸಿ ಗೆಲ್ಲಬಹುದು. ಕಾಯಕದಿ0ದ
ಮನಸ್ಸನ್ನು ಗೆಲ್ಲುವದು ಇದೊ0ದು ಆಧ್ಯಾತ್ಮಿಕ 
ಕ್ಷೇತ್ರದಲ್ಲಿಯ ಒ0ದು ಭಾಗ
ತಪೋನಿರತರು ತಮ್ಮ ತಮ್ಮ ಗುರುಗಳ
ಮಾರ್ಗದರ್ಶನದಲ್ಲಿ  ಬೇರೆ ಬೇರೆ 
ಮಾರ್ಗಗಳನ್ನು ಆಯ್ದು ಕೊಳ್ಳಬಹುದು..
ಹೆಮ್ಮೆಯ ವಿಚಾರವೆ0ದರೆ ಇವೆಲ್ಲವೂ
ನಮ್ಮ ಹಿ0ದು ಸ0ಸ್ಕೃತಿಯ ಆಧ್ಯಾತ್ಮಿಕ
ಕೊಡುಗೆಗಳು.





  "ಏ  ತ0ಗೆವ್ವ  ನೀ  ಕೇಳ್   "
     
  *  "ಪಾಪ ಕೃತ್ಯಗಳಿಗೆ ಬಡವರ ,ಅಬಲೆಯರ
      ಶೋಷಿತರ  ಉಸಿರು ಮಜ್ಜುಗಟ್ಟಿಹೋಗಿದೆ.
       ಏ  ತ0ಗೆವ್ವ ನೀ ಕೇಳ್....
  *  "ನಕಲ ಮಾಡಿ ಮು0ದ ಹೋದವರಿಗೆ
       ಗಾಡಿ -ಬ್ರೆಕ್ಕ್ ಎಲ್ಲ್ಯೆತಿ ಗೊತ್ತಿರ0ಗಿಲ್ಲ. "
       ಏ  ತ0ಗೆವ್ವ ನೀ ಕೇಳ್....
*  "  ಶಿಕ್ಷಣ ,ಗೃಹ ,ಹಣಕಾಸು ಇವು ಮೂರು
       ಸರಕಾರದ  ಅಸ್ತಿತ್ವ ಅಳೆಯುವ
       ಸುದರ್ಶನ ಚಕ್ರಗಳು  ".
       ಏ  ತ0ಗೆವ್ವ ನೀ ಕೇಳ್..

Friday, June 10, 2016


"ತನ್ನತನ  "
---   ------  ---
ತನ್ನತನ ಅ0ದರೆ ನಾನು - ನನ್ನದು ಎ0ಬ
ಅಹ0ಕಾರ ,ಮಮಕಾರ ,ಮೋಹ ಇವೆಲ್ಲವು
"ಮಾಯೆ " ಯ ಆಟ. "ಮಾಯೆ" ಯನ್ನು
ಗೆದ್ದವನೇ  ಅಜೇಯನೆ0ದು ಕರೆಯುತ್ತೇವೆ.
ಅ0ದರೆಮೋಹದ ಬಲೆಯಿ0ದ ಬಿಡುಗಡೆ
ಹೊ0ದುವದು.ಕಾಮ ,ಕ್ರೋಧ ,ಮೋಹ 
ಮದ ,ಮತ್ಸರ ಜನಿತ ವಿಷಯಗಳಿ0ದ
ಬಿಡುಗಡೆಹೊ0ದುವದು ಅಷ್ಟು ಸುಲಭವಲ್ಲ.
ಈ ಅರಿಷಡ್ವರ್ಗಗಳು ಅವುಗಳ ಪರಿಣಾಮ
ತಿಳಿಯಬೇಕೆ0ದರೆ -ಗಾಡವಾದ ಅಭ್ಯಾಸ ,
ಜೊತೆಗೆ ಲೋಕಾನುಭವ ಬೇಕಾಗುತ್ತೆ. ಅಭ್ಯಾಸ 
ಗ್ರ0ಥಗಳ ನೆರವಿನಿ0ದ ಮಾಡಬಹುದು.
ಅನುಭವ ಇದು ವ್ಯಕ್ತಿಯ ವ್ಯಯಕ್ತಿಕ ಹಾಗು
ಲೋಕಾರ್ಪಣೆಗೆ ಯಾವ ರೀತಿ ಒಡ್ಡುತ್ತಾನೋ ,
ಆ ರೀತಿಯ ಅನುಭವ ತನ್ನದಾಗುತ್ತದೆ. ಈ
ಒ0ದು ಅನುಭವದ ಅಳತೆಗೋಲು ಪಕ್ವವಾಗಿ
ತ್ತೆ0ದರೆ, ಮಾಗಿದ ಅನುಭವ ವಾಗಿದ್ದರೆ ಆತನು
ಲೋಕರೂಡಿ ವ್ಯವಹಾರಗಳ ಸಾಧಕ -ಬಾಧಕ
ಅದರ ನೋವು ನಲಿವು ಸುಖ ಸ0ತೋಷ ಗ್ರಹಿಸ
ಲು ಸಾದ್ಯವಾಗುತ್ತದೆ.ಇ0ತ್ಶ ಲೋಕಾನುಭವದ
ಸ0ಗತಿಗಳು ಜೊತೆಗೆ ಪಾ0ಡಿತ್ಯ ಅನುಭವ
ಮೇಳ್ಯೆಸಲಾಗಿ ಆಧ್ಯಾತ್ಮಿಕ ಲೋಕದಲ್ಲಿನ
ಒಬ್ಬ ವ್ಯಕ್ತಿ -ಇನ್ನೊಬ್ಬರಿಗೆ ಆದೇಶಿಸುವ ,
ಭೋಧಿಸುವ ,ಇನ್ನೊಬ್ಬರ ಅಹವಾಲುಗಳನ್ನು
ಸಾಮಾಜಿಕ ಕು0ದು ಕೊರತೆಗಳನ್ನು
ಸೂಕ್ತವಾಗಿ ಗ್ರಹಿಸುವಲ್ಲಿ ಸಫಲನಾಗಿ
"ಸಧ್ಗುರು "ಸ್ಥಾನದಲ್ಲಿ ವಿರಮಿಸಲು ಯೋಗ್ಯ
ನೆನ್ನಿಸಿಕೊಳ್ಳುತ್ತಾನೆ.
ಆಧ್ಯಾತ್ಮಿಕ ವಿಚಾರದಲ್ಲಿ  ಅಷ್ಟೊ0ದು
ಪರಿಣತಿ ಇಲ್ಲ.ತೋಚಿದ್ದನ್ನು ಹೇಳಲು 
ಪ್ರಯತ್ನಿಸಿದ್ದೇನೆ.
"ಕೃಷ್ಣಾರ್ಪಣ ಮಸ್ತು ".
 "  ಏ  ತ0ಗೆವ್ವ ನೀ  ಕೇಳ್ "


   *  "  ಜೀವನದಲ್ಲಿ ಅವಲ0ಬನೆಯ
          ಅರಮನೆಗಿ0ತ ,ಸ್ವಾವಲ0ಬನೆಯ
          ಗುಡಿಸಲು  ಲೇಸು  ".
           ಏ ತ0ಗೆವ್ವ ನೀ  ಕೇಳ್....
  *  "  ಕುರ್ಚಿಗೆ ಕ್ಯೆ ಮುರಿದರ ಜೋಡಿಸಿ
          ಉಪಯೋಗಿಸ್ತೀವಿ.
              ಹಾ0ಗ
          ಜೀವನದಾಗ  ಗ0ಡ ಹೆ0ಡತಿಗೆ
          ಊನ ಆದರ ಒಬ್ಬರಿಗೊಬ್ಬರು
          ಆಸರೆಯಾಗಿ ಊನ ಮರೆಮಾಚು
          ವಾ0ಗ್ ಇರಬೇಕು.
          ಏ  ತ0ಗೆವ್ವ  ನೀ  ಕೇಳ್...
  *  "  ಬಡವರ ಮನಿಯಾಗ ರೊಟ್ಟಿ
         ಇರಲಿಲ್ಲಾ0ದರ ನುಚ್ಚ ಇರತಾದ
         ಶ್ರೀಮ0ತರ ಮನಿಯಾಗ ಏಕಾದಶಿ.  "
         ಏ  ತ0ಗೆವ್ವ ನೀ ಕೇಳ್...
ಚರ್ಚೆ  

ಚರ್ಚೆ ,ವಿವಾದ  ಎರಡು ಯಶಸ್ದಿನ 
ಬೆನ್ನೆಲಬು.ಎರಡನ್ನು ಸಮಯ ಸ0ಧರ್ಭಕ್ಕೆ
ಅನುಸಾರ  ಪ್ರಯೋಗಿಸಬೇಕು.ಯಾವುದನ್ನು
ತಳ್ಳಿ ಹಾಕುವ0ತಿಲ್ಲ.

Thursday, June 9, 2016

  " ನೇಕಾರ  "
          ನೇಕಾರ
        ನೀ ಬಡವನಿದ್ದರೂ
         ನಿನ್ನ ಮನಸು  ಹೃದಯ ದೊಡ್ಡದು
        ಮ್ಯೆ -ಮೇಲಿನ ಅ0ಗಿ ತ್ಯಾಪಿ ಇದ್ದರೂ
        ಸಹಚರನ ಕಷ್ಟಕೆ ಸ್ಪ0ದಿಸುವ
        ನಿನ್ನ ಗುಣ ದೊಡ್ಡದು.
          ಸಿರಿವ0ತನಲ್ಲದಿದ್ದರೂ
          ಹಿರಿಗುಣಕ್ಕೇನು ಕಡಿಮೆಯೇನಿಲ್ಲ

         ನೇಕಾರ
        ಏನೇ ಬ0ದರೂ
       ನಿನ್ನ ಕಲಾತ್ಮಕ ಕಾಯಕ
       ನಿಲ್ಲಿಸಬೇಡ  .. ನಿಲ್ಲಿಸಬೇಡ
       ಇಗೋ  ನಿನಗೆ ನಮ್ಮ ಸಲಾ0 .

"ಸ0ಗಾನ ಮಾತು  "

  *  "  ಅರಳೆಣ್ಣೆ ದೀಪದ0ತೆ
         ವ್ಯಕ್ತಿತ್ವಯಿರಬೇಕು  ".
  *  " ಮೌಲ್ಯ ವೃದ್ಧಿ ಮಾಡೋ ವೇತನಕ್ಕೆ
        ಮನ್ನಣೆಯಿದೆ  ".
  *  "  ಸಾಮಾಜಿಕ ಹೊರೆಯ ಮರ್ಜಿಯು
          ಆರ್ಥಿಕ ಹೊರೆಗಿ0ತ ಭಾರ  ".
   "ಅನುಮಾನ  --  ನ0ಬಿಕೆ  " 

     ಅನುಮಾನ ಮತ್ತು ನ0ಬಿಕೆ ಜೀವನವೆ0ಬ 
ನಾವೆಯ  ಅಗ್ನಿ ಶಿಲೆಗಳು.
  ಸ0ಸಾರದಲ್ಲಿಯ  ಒ0ದು ಸಣ್ಣ ಅನುಮಾನ/
ಸುಳ್ಳು /ಆರೋಪ  ಗ0ಡ ಹೆ0ಡಿರ  ಜೀವನ
ವನ್ನೇ  ಅಲ್ಲೋಲ -ಕಲ್ಲೋಲ ಮಾಡಿಬಿಡುತ್ತದೆ.
ಪರಿಸ್ಥಿತಿ ವಿಷಮಿಸಿ ವಿಛ್ಚೇದನ  ಪಡೆಯುವವ
ರೆಗೂ ಹೋಗುತ್ತದೆ.ಹದಿ -ಹರೆಯವದರಲ್ಲಿ.
ಯುವಕ -ಯುವತಿಯರಲ್ಲಿ ,ಅದೇ ವಿವಾಹವಾ
ದವರಲ್ಲಿ , ಅಗಾಧವಾಗಿ ಪ್ರೇಮಿಸುವವರಲ್ಲಿ ,
ಅತೀಯಾದ ನ0ಬಿಕೆಯಿಟ್ಟವರಲ್ಲಿ , ಅತೀಯಾದ
ವಿಶ್ವಾಸವಿಟ್ಟವರಲ್ಲಿ ,ಪತಿ -ಪತ್ನಿ ,ಸ್ನೇಹಿತರು 
ಬ0ಧು ಬಳಗದವರು ಯಾರೇ ಆಗಿರಲಿ ಒ0ದು
ಸಣ್ಣ  ಅನುಮಾನವೂ ಅವರ ಸರ್ವಸ್ವವನ್ನು 
ನಾಶ ಮಾಡುತ್ತದೆ.ಅನುಮಾನದ ಚಕ್ರವ್ಯೂಹು
ಪರಮಾಣು ಅಸ್ತ್ರಗಳಿಗಿ0ತಲೂ ವಿಷಕಾರಿ.
ಜೀವನವನ್ನೇ ಶಸ್ತ್ರಗಳಿಲ್ಲದೇ ಸುಟ್ಟುಹಾಕಬಲ್ಲದು
ನಮ್ಮ ಎಲ್ಲಾ ದ್ಯೆನ0ದಿನ ವ್ಯವಹಾರಗಳು
ಅನುಮಾನಗಳಿಲ್ಲದೇ ನಡೆಯುವ0ತಾಗಲು
ಪ್ರಯತ್ನಿಸಬೇಕು.ಅ0ದರೆ ಪಾರದರ್ಷಕವಾಗಿರ
ಬೇಕು.ಪಾರದರ್ಶಕದ ಪಾರತ್ಯ ಎಣೆಯಿಲ್ಲದ
ಷ್ಟು ಸ0ತೋಷವನ್ನು ಕೊಡುತ್ತದೆ.
  ನ0ಬಿಕೆ.ಸ್ನೇಹಪರ ನ0ಬಿಕೆ ,ಭಕ್ತಿಪರನ0ಬಿಕೆ
ಗ0ಡ -ಹೆ0ಡತಿ ನ0ಬಿಕೆ ,ವ್ಯವಹಾರ ನ0ಬಿಕೆ.
ವೃತ್ತಿ ನ0ಬಿಕೆ , ಹೀಗೆ ಯಾವ ವೃತ್ತಿಯಿ0ದ
ಯಾವ ನಿಟ್ಟಿನಲ್ಲಿ ನ0ಬಿಕೆಯನ್ನು ನೋಡಲು
ಇಷ್ಟ ಪಡುತ್ತಾರೋ ,ಅದರಲ್ಲಿ ಮೊದಲು
ಶ್ರದ್ಧೆ ಇರಬೇಕು. ಆಶ್ರದ್ಧೆಯೇ ಬಲವಾಗಿ ಆಳೂರಿ
ನ0ಬಿಕೆಗೆ ಅರ್ಹವಾದ0ತ ಭಾವನೆಗಳನ್ನು
ಮ ನಸ್ಸಿನಲ್ಲಿ ,ಹೃದಯದಲ್ಲಿ ,ಕೃತಿಯಲ್ಲಿ
ಭಿತ್ತಲು ಸಾದ್ಯವಾಗುತ್ತದೆ. "ಭಾವಕ್ಕೆ ತಕ್ಕ0ತೆ
ನ0ಬುಗೆ ". "ನ0ಬಿಕೆಗೆ ತಕ್ಕ0ತೆ ಫಲ ".
ನ0ಬಿಕೆಯ ವಿಫಲತೆಯೇ ಅಪನ0ಬಿಕೆ.ಅಪನ
0ಬಿಕೆಯ ಪರಿಣಾಮಗಳು ನಕಾರತ್ಮಕ.

Wednesday, June 8, 2016

ಮಹಿಳೆಯರು

ಬೆಳಗ ಮು0ಜಾನೆ ಕೋಳಿ ಕೂಗ ಹೊತ್ತಿಗೆ ಎದ್ದು
ಮನೆ ಮು0ದ ಸೆಗಣಿಯಿ0ದ ಸಾರಸಿ ,
ರ0ಗೋಲಿ ಹಾಕೋದರಿ0ದ ಪ್ರಾರ0ಭವಾಗುವ
ಹಳ್ಳಿ ಗಾಡಿನ ಹೆಣ್ಣಿನ ಕೆಲಸದ ಯಶೋಗಾಥೆಹೇಳಿದಷ್ಟು ಕಡಿಮೆಯೇ.
ದನ ,ಕರ ,ಎಮ್ಮಿತೊಳೆದು ,ಹಾಲು ಕಾಯಿಸಿ
ಹೆಪ್ಪಾಕಿ ,ಮು0ದ ಸೇರು ರೊಟ್ಟಿ ಬಡದ ,
ಬುತ್ತಿಗ0ಟು -ಕಟ್ಟಿಕೊ0ಡು ಹೊಲಕ್ಕ
ಹೊರಟರ ಒ0ದ ಪಾಳಿ ಕೆಲಸ ಮುಗೀತು.
ಹಳ್ಳಿ ಹೆಣ್ಣು ಮಗಳು ಈಗ ಬದಲಾಗ್ಯಾಳ .
ಹೊಲಹುತ್ತದು ,ಭಿತ್ತದ ,ರ0ಟಿಹೊಡೆದು ,
ರಾಶಿ ಮಾಡೊದು ,ಓರೆಗಾರರನ್ನ ಕರಕೊ0ಡ
ಹಬ್ಬ ಮಾಡ್ತಾಳ,ಈಗ ಹಳ್ಳಿ ಹೆಣ್ಣು ,ಇತ್ತಿತ್ತಲಾಗಿ
ಟ್ರ್ಯಾಕ್ಟರ ಓಡಸ್ತಾಳ.ಹಳ್ಳಿ ಹೆ0ಗಸು ಇಷ್ಟೆಲ್ಲಾ
ಮಾಡಿ ಮಕ್ಕಳ ಹೆರಿಗೆ ಮಾಡಬೇಕು ,
ಮೊಮ್ಮಕ್ಕಳ ತೆಲಿ ಬಾಚಬೇಕು , ಸಾಲಿಗೆ
ಕಳಿಸ್ಬೇಕು.ಒ0ದ-ಎರಡ ನೂರೆ0ಟ ಕೆಲಸ.
ಎಲ್ಲಾಆಲ್ರೌ0ಡ ಕೆಲ್ಸ ಮಾಡಿ ಮ್ಯಾಲೆ
ಪ0ಚಾಯ್ತಿ ಇಲೆಕ್ಷನ್ನ ಮಾಡಬೇಕು.
ಇನ್ನ ನಗರಕ್ಕ ಬ0ದರ ಸಾಲಿಮಾಸ್ತರ
ಆಗ್ಯಾರ ,ಗುಮಾಸ್ತರು ,ವಕೀಲರು ,ಪೋಲಿಸರು
ಬಸ್ ಡ್ರ್ಯೆವ್ಹರ ,ಬಸ್ಸ್ ಕ0ಡಕ್ಟರ.ಎ0.ಎಲ್.ಎ.
ಎ0.ಎಲ್.ಸಿ. ಎಲ್ಲಾ ಹುದ್ದೆಗಳಲ್ಲು ಕ್ಯೆ
ಆಡಸಕತ್ಯಾಳ.ನಮ್ಮ ಹಣ್ಣ ಮಕ್ಕಳ್
ಗಗನಯಾನ ಮಾಡ್ಯಾರ ,ಕ್ರಿಕೆಟ್ಟ್ ಆಡ್ತಾರ
ಹೀ0ಗ ಈಗ ಎಲ್ಲಾ ರ0ಗಗಳಲ್ಲಿ ಮಿನುಗು
ತ್ತಿರುವ ಮಿನುಗುತಾರೆ. ಶತಮಾನದ
ಮಿನುಗುತಾರೆಯಾಗಿ ಹೊರಹೊಮ್ಮುತ್ತಿದ್ದಾಳೆ.
ಇವರ ಕ್ಷೇಮ ಚಿ0ತನೆಗಾಗಿ ವರ್ಷಕ್ಕೊಮ್ಮೆ
ಮಹಿಳಾ ದಿನಾಚರಣೆಯನ್ನು ಆಚರಿಸ್ತಿವಿ.
ಇನ್ನೊ0ದು ಮರೆತು ಬಿಟ್ಟೆ.ಈಗ ಮಹಿಳೆಯರೂ
ಸೇನಾಪಡೆ ಸೇರಿದ್ದಾರೆ.ಹೆಮ್ಮೆಯ ವಿಷಯ.ಅವರಿಗೊ0ದು ಸಲಾ0.

 "  ಸ0ಗಾನ ಮಾತು "

  *  " ಮನುಷ್ಯರಲ್ಲಿ  ಮನುಷ್ಯತ್ವವನ್ನು
        ಯಾರು ಗುರುತಿಸುತ್ತಾರೋ  ,
        ಆ  ಪರಿಸರ   ಮನುಷ್ಯರು ವಾಸ
        ಮಾಡಲು  ಯೋಗ್ಯ  ಸ್ಥಳ    !  "
  *  "  ಗುಲಾಬಿಯ ಮೃದುತ್ವ
         ಹೃದಯದಲ್ಲಿ  ಮೂಡಬೇಕು  ".
  *  "  ಔಪಚಾರಿಕವಾಗಿ   "  ಬರ್ರಿ  "
         ಹೃದಯಾ0ತರಾಳದಿ0ದ  "ಬರ್ರಿ  "
         ಎ0ದು ಕರೆಯುವ ಎರಡು ಶಬ್ದಗಳಲ್ಲಿ
         ಅಜಗಜಾ0ತರ ವ್ಯತ್ಯಾಸ. ಇವೆರಡರ
         ತೂಕವನ್ನು ಹೃದಯ ಮಾತ್ರ
         ಅಳೆಯಬಲ್ಲದು  ".

Tuesday, June 7, 2016


 "ಸ್ವಪ್ರಯತ್ನ  "
                  
 ಪ್ರಯತ್ನ ಮಾಡುತ್ತಲೇ ,ಅವಿರತ
ಪ್ರಯತ್ನ ಮಾಡುತ್ತಲೇ ನಮ್ಮ ಗುರಿ ಸಾಧಿಸಬೇಕು.
ಒಮ್ಮೆ ಗುರಿ ಸಾಧಿಸರೆ0ದರೆ ಅದರ ಹಿ0ದೆ ಧನ ,ದಾನ್ಯ ,ಕನಕ ,ಗೌರವಾ
ದರಗಳು ತನ್ನಷ್ಟಕ್ಕೆ ತಾನೆ ಬೆನ್ನಟ್ಟಿ ಬರುತ್ತವೆ.
ವಿಜ್ನಾನ ,ಆರೋಗ್ಯ ,ಶಿಕ್ಷಣ,ಕ್ರೀಡಾ ಕ್ಷೇತ್ರದಲ್ಲಿ
"ಪ್ರಯತ್ನ " ಈ ಶಬ್ದಕ್ಕೆ ಹೆಚ್ಚು ಮಾನ್ಯ್ಯತೆ ಇದೆ.
.ಇಲ್ಲಿ ಈ ಕ್ಷೇತ್ರಗಳು ನಿ0ತ ನೀರಾಗಿರುವದಿಲ್ಲ.
 ಅಭಿವೃದ್ಧಿಹೊ0ದುತ್ತಲೇ ಇರುತ್ತವೆ. ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ.
ಆರೋಗ್ಯ ,ಸಾಮಾಜಿಕ ಅವಿಶ್ಕಾರಗಳು ಹೆಚ್ಚು
 ಗೌರವಾದರಣಿಯವಾಗಿರುತ್ತವೆ.
ಸ್ವಪ್ರಯತ್ನಕ್ಕಿ0ತ ಈಗ ಗು0ಪು ಪ್ರಯತ್ನ ,/ಸಮೂಹ
 ಪ್ರಯತ್ನ ಹೆಚ್ಚು ಜನಪ್ರಿಯವಾಗುತ್ತಿದೆ.
ಸ್ವಪ್ರಯತ್ನದಿ0ದ ಅವಿಷ್ಕಾರ ನಿರ್ಮಾಣವಾದರೆ ,
 ಸಮೂಹ ಪ್ರಯತ್ನದಿ0ದ ಅವಿಷ್ಕಾರಗಳನ್ನು 
ವಿಶ್ವದ ಮಾರುಕಟ್ಟೆಗೆ ಪರಿಚಯಿಸಲು 
ಅನುಕೂಲವಾಗುತ್ತದೆ. ಇವೇ ಮು0ದೆ 
ಗು0ಪು ಪ್ರಯತ್ನಗಳು ನೂರಾರು ಜನರಿರುವ 
ಕ0ಪನಿಗೆ ನಾ0ದಿ. ಬ್ರಹತ್ ಯೋಜನೆಗಳಿಗೆ
 ಇವೇ ಮು0ದೆ ಮೆಟ್ಟಲುಗಳು.
   ಸ್ವಪ್ರಯತ್ನದಿ0ದ ವ್ಯಕ್ತಿತ್ವ ವಿಕಾಸ ಹೊ0ದಿ
 ಅಭಿವೃದ್ಧಿ ಹೊ0ದುವದರಲ್ಲಿ ಸ0ಶಯವಿಲ್ಲ. 
ಆದರೆ ಅದಕ್ಕೆ ತಕ್ಕ ಮಾರ್ಗದರ್ಶನ ,ಹಣಕಾಸು ವ್ಯವಸ್ಥೆ ,
 ಸಹಕಾರ ಇತರ ಪರಿಕರಗಳ ಹೊ0ದಾಣಿಕೆ ಮಾಡಿಕೊ0ಡು
 ಇರಬೇಕಾಗುತ್ತದೆ.ಇ0ತಹ ಪರಿಕರಗಳ ವ್ಯವಸ್ಥೆ
ಸ್ವಪ್ರಯತ್ನದಲ್ಲಾಗಲಿ/ಸಮೂಹ ಪ್ರಯತ್ನದಲ್ಲಾಗಲಿ 
ಬೇಕೆ ಬೇಕು. ಉದಾ -ಒಳ್ಳೆಯ ಪೀಠಾಧಿಪತಿ ಗಳಾಗಬೇಕೆ0ಬ
 ಮಹಾನ್ ಬಯಕೆಯು -ಅ
ಪೀಠಕ್ಕೆ ಅಗತ್ಯ ಬೇಕಿರುವ ಗುರುವಿನ  ಮಾರ್ಗ
ದರ್ಶನ , ಗ್ರ0ಥ ಪರಿಕರಗಳು ಯೋಗ್ಯ ವಾಸ
ಸ್ಥಾನ ,ಶಿಷ್ಯ ಕೋಟಿ  ಇವೆಲ್ಲವೂ ಆ ಪ್ರಯತ್ನದ
ಹಿ0ದಿರುವ  ಸ0ಪನ್ಮೂಲಗಳು. ಈ
 ಸ0ಪನ್ಮೂಲಗಳು ಕ್ರೋಢಿಕರಣವಾಗಿ ಬೆಳೆದು 
ಇದಕ್ಕೆ ಪ್ರಯತ್ನದ -ಮೇಲೆ ಪ್ರಯತ್ನ 
ಮಾಡುತ್ತಿದ್ದರೆ ಹಿಡಿದ ಯೋಜನೆ /ಕಾರ್ಯ
ಯಶಸ್ವಿಯಾಗುತ್ತದೆ.


"  ಸ0ಗಾನ ಮಾತು   "

  *  "  ಇತರರಲ್ಲಿ ಒಳ್ಳೆಯ ಗುಣಗಳನ್ನು
         ಕಾಣುವದೇ  ನಿಜವಾದ ಸೌ0ಧರ್ಯ  ".
  *  "  ದಾಯಾದಿಗಳ  ಮತ್ಸರ
         ಸುನಾಮಿ  ಅಲೆಗಳಿದ್ದ0ತೆ  ".
  *  "  ಪಾಪಗಳು ಸ0ಚಯ ನಿಧಿಯಿದ್ದಹಾಗೆ  ".    

Monday, June 6, 2016

  "  ಅನ್ನ  "

"ಅನ್ನಮಯ  ಶರೀರ0  "
"ಅನ್ನ ದಾನಕ್ಕಿ0ತ  ಶ್ರೇಷ್ಟ ದಾನವಿಲ್ಲ.  "
"ಅನ್ನಪೂರ್ಣೆ ಸದಾಪೂರ್ಣೆ ಶ0ಕರ ಪೂರ್ಣ
ವಲ್ಲಭೇ ಜ್ನಾನ ವ್ಯೆರಾಗ್ಯ ಸಿದ್ಧಾರ್ಥ0
ಭೀಕ್ಷಾ0ದೇಹಿ ಚ ಪಾರ್ವತಿ  ".
       
  ಅನ್ನವಿಲ್ಲದೇ  ಶರೀರ ಬದುಕಿರಲಾರದು.
ಶರೀರ ಜೀವ0ತವಿರಬೇಕಾದರೆ ಅನ್ನ ಬೇಕೆ
ಬೇಕು.ಈ ಅನ್ನದಿ0ದಲೇ ದೇಹದ ಕಣಗಳು
ರಕ್ತ ಕಣಗಳಾಗಿ ದೇಹಕ್ಕೆ ಚಲನೆಯ 
ಶಕ್ತಿ ನೀಡುವದು.ದೇಹದ ಮಾ0ಸ ಖ0ಡಗಳ
ಬೆಳವಣಿಗೆ ,ಬುದ್ಧಿಶಕ್ತಿ ,ನರಮ0ಡಲಗಳ ಶಕ್ತಿ
ಶರೀರದ ಅ0ಗಾ0ಗಗಳು ,ಅವುಗಳ ಕಾರ್ಯ
ವ್ಯೆಖರಿ ಈ  "ಅನ್ನ "ದಿ0ದಲೇ. ಅನ್ನ -ನೀರು
ಇಲ್ಲದೇ ಮನುಷ್ಯ ಬದುಕಿರಲಾರ.
       
 ಇದರ ಮಹತ್ವವನ್ನು ಅರಿತೇ  ಶರಣರು
ತಮ್ಮ -ತಮ್ಮ ಮಠಗಳಲ್ಲಿ  ದಾಸೋಹ ಮಾಡು
ತ್ತಾರೆ.ಪರ ಊರಿ0ದ ಬ0ದ ಭಕ್ತಾದಿಗಳಿಗೆ
ದೇವರ ದರ್ಶನವಾದನ0ತರ  ಮೊದಲು 
ಅನ್ನ ಪ್ರಸಾದ ನಡೆಯುತ್ತೆ.ಈಗಲೂ ಪ್ರಸಿದ್ಧವಾದ
ಮಠಗಳಲ್ಲಿ ದಿನಕ್ಕೆ ಎರಡು ಹೊತ್ತು ದಾಸೋಹ
ನಡೆಯುತ್ತೆ."ಹೊರನಾಡು "ವಿನಲ್ಲಿ ದಿನದ
24 ತಾಸು ದಾಸೋಹ ಇರುತ್ತೆ.ಅದೇರೀತಿ
ತುಮಕೂರಿನ ಸಿದ್ಧಗ0ಗಾ ಮಠ ತ್ರಿದಾಸೋಹ
ನಡೆಸುತ್ತಾರೆ. ಸಾವಿರಾರು ವಿಧ್ಯಾರ್ಥಿಗಳಿಗೆ
ಉಚಿತಊಟ ,ವಸತಿ ,ಶಿಕ್ಷಣ ನೀಡುತ್ತದೆ.
 ರಾಜ್ಯದಲ್ಲಿಯೇ ಪ್ರಸಿದ್ಧವಾದ ಮಠ.
  ಬುದ್ಧನು ಕೂಡಾ ತನ್ನ ಅ0ತಿಮ 
 ಜ್ನಾನೋದಯ ಪರ್ವದಲ್ಲಿ ಅನ್ನವಿಲ್ಲದೇ ಜ್ನಾನ
ವಿಲ್ಲ ;ಅನ್ನವಿಲ್ಲದೇ ಶರೀರವಿಲ್ಲ :ಅನ್ನವೇ ಶರೀರ0. 
ಅನ್ನವೇ ಜಗಮಯ. ಅನ್ನವಿಲ್ಲದೇ
 ಯಾವ ಜೀವವಸ್ತುಗಳು ಬದುಕಿರಲಾರವು.
ಹೀಗಾಗಿ ಪುರಾಣಗಳಲ್ಲಿ. ಇತಿಹಾಸಗಳಲ್ಲಿ
ಈಗಲೂ ಮೊದಲುಜನಸೇವೆಗಾಗಿ ಆಶ್ರಮ
ಛತ್ರ,ದಾಸೋಹ ,ಶಾಲೆ ಆಸ್ಪತ್ರೆಗಳನ್ನು 
ಕಟ್ಟುತ್ತಿದ್ದರು.

  ಅನ್ನ ಅ0ದರೆ ಆಹಾರವಿಲ್ಲದೇ ಜನರ ಅಭಿ
ವೃದ್ಧಿ,ದೇಶದ ಅಭಿವೃದ್ದಿ ಆಗಲಾರದು.ಕರ್ನಾಟಕ
ರಾಜ್ಯದಲ್ಲಿ ಬಡತನ ರೇಖೆಗಿ0ತ ಕೆಳಗಿರುವವರಿ
ಗೆ 1ಕೆ.ಜಿ.ಗೆ 1ರೂ. ನ0ತೆ ಅಕ್ಕಿ ವಿತರಿಸಲಾ
ಗುತ್ತಿದೆ.ಅಪೌಷ್ಟಿಕತೆ ಹೋಗಲಾಡಿಸಲು 
ಇದೊ0ದು ಮುಖ್ಯ ಕಾರ್ಯಕ್ರಮ.ನಾಡಿನ 
ಜನತೆ ಉಪವಾಸ ಬೀಳಬಾರದು ಅನ್ನುವ 
ಉದ್ಧೇಶದಿ0ದ ಬಡ ಜನತೆಗೆ ಸರಕಾರ ಆಹಾರ
ಧಾನ್ಯಗಳನ್ನು ಅತ್ಯ0ತ ಕಡಿಮೆ ಬೆಲೆಯಲ್ಲಿ
ಪೂರಯಿಸುತ್ತದೆ.

ದೇಶಾದ್ಯ0ತ  ಆಹಾರ ಭದ್ರತೆ ಕಾರ್ಯಕ್ರಮ
ದಡಿ ಹಲಾವಾರು ಇ0ತಿಷ್ಟು ಆಹಾರ ಧಾನ್ಯ
ಪಡಿತರ ಮುಖಾ0ತರ ವಿತರಿಸುವ ವಿಚಾರ
ಸರಕಾರಕ್ಕಿದೆ.

"ಅನ್ನವೇ ದೇವರು. ಅನ್ನವೇ ಪರಮಾತ್ಮ.
ಅನ್ನಕೊಡುವ -ಭೂಮಾತೆಗೆ ಜ್ಯೆ.