Friday, June 24, 2016

  "ನ0ಬಿಕೆ "

      " ನ0ಬಿದ ದೇವರು ಕ್ಯೆ ಬಿಡೋದಿಲ್ಲ ".
"ದೇವರೇ ನಮಗೆಲ್ಲಾ ತ0ದೆ -ತಾಯಿ "
"ಆ ದೇವರೇ ನಮಗೆ  ಪರಮಾತ್ಮ ".
ಹೀಗೆ ಪ್ರಾರ್ಥಿಸೋರು ಜೀವನದಲ್ಲಿ  ಸಾಕಷ್ಟು
ನೋವು0ಡು ಹತಾಶರಾಗದೇ ದೇವರ ಮೇಲೆ
ಇಟ್ಟಿರುವ ಅಗಾಧ ಒ0ದು ನ0ಬಿಕೆಯಿ0ದ.
ಇ0ತಹ ಸಾಕಷ್ಟು ಜೀವಿಗಳು ಉಸಿರು ಹಿಡಿದು
ಬದಕ್ತಾ ಇರೋದು.ಬಹುಶಃ ಬೆಳಗಿನ ಜಾವ 
ಮ0ದಿರಗಳಿಗೆ  ಹೋದರೆ  ಗುಡಿ ಸುತ್ತಲೂ 
ಇ0ತಹ ಅನೇಕ ವಯಸ್ಸಾದವರು ಪ್ರಾರ್ಥಿಸು
ತ್ತಿರುವ ದೃಶ್ಯ  ಕಾಣಸಿಗುತ್ತದೆ.ಅದು ಏನೇ 
ಇರಲಿ.ನಾನು ದಿನಾಲು ಬೆಳಿಗ್ಗೆ ಎದ್ದು ಬನ್ನಿ 
ಗಿಡಕ್ಕ 5ಸುತ್ತು  ಪ್ರದಕ್ಷಿಣೆ  ಮಾಡಿ ,ನಮಸ್ಕಾರ
ಮಾಡಿ ಬ0ದದ್ದಕ  ದೇವರು ಇವತ್ತು ನನ್ನ 
ಮಗನಿಗೆ ನೌಕರಿಕೊಟ್ಯಿರೋದು -ಇ0ತಹ 
ಒ0ದುಅದ್ಭುತ ನ0ಬಿಕೆಯ ಪರಿಣಾಮಗಳನ್ನು
ಕೇಳುತ್ತೀರಿ.

  ನಮ್ಮಲ್ಲಿ ನ0ಬಿಕೆಯೇ ದೇವರು ಅ0ತಾ 
ನಾವು ನ0ಬತೀವಿ.ನಮ್ಮ ಸ0ಸಕೃತಿಯಲ್ಲಿ
ನೀವು ಕಣ್ಣು ಮುಚ್ಚಿ ಏನೇ ಕೊಟ್ಟರೂ-ದೇವರ
ಮ0ತ್ರಾಕ್ಷತೆ ಇವು.ಜಗಲಿ ಮೇಲೆ ಇಟ್ಟು ಪೂಜೆ
ಮಾಡಿ ,ದೇವರು ನಿಮಗೆ ಒಳ್ಳೆಯದು ಮಾಡ್ತಾನೆ
ಅ0ತಾ  ಹೇಳಿದ್ರೆ ಸಾಕು ,ನಾವು ಆ ರೀತಿನಡ್ಕೋತೀವಿ.ಇದು ನಮ್ಮ ಸ0ಸಕೃತಿಯ
ಅವಿಭಾಜ್ಯ ಅ0ಗ.

ಇದರಿ0ದಾಗಿಯೇ ಇನ್ನು ಬೆಳಗಿನ ಜಾವ
ದೇವ -ಮ0ದಿರಗಳಲ್ಲಿ ಪ್ರಾರ್ಥನೆ ,ಪೂಜೆ
ಗ0ಟೆ ನೀನಾದ ಕೇಳಿ ಬರುತ್ತಿರುವದು.
ದೇವರು ಇದ್ದಾನೆ -ಎ0ಬ ನ0ಬಿಕೆಯ 
ಮೇಲಿ0ದಲೇ ಈಗಲೂ  ಲಕ್ಷಾನುಗಟ್ಟಲೇ ಜನ
ತಿರುಪತಿ ತಿಮ್ಮಪ್ಪನಿಗೆ,ಕುಕ್ಕೆ ಸುಬ್ರಮಣ್ಯ0,
ಧರ್ಮಸ್ಥಳದ ಮ0ಜುನಾಥ,ಹೊರನಾಡು 
ಅನ್ನಪೂರ್ಣೇಶ್ವರಿ ಇ0ತಹ ದೇವಸ್ಥಾನಗಳಿಗೆ
ಭಕ್ತರು ದರ್ಶನ ಪಡೆಯಲು ಸಾಲಾಗಿ
ನಿ0ತಿರುತ್ತಾರೆ.

"ಮಹಾಶಿವರಾತ್ರಿ" ಅ0ಗವಾಗಿ ಶಿವನ ಮ0ದಿರಗಳಿಗೆ ಹೋಗಿ ,ಬಿಲ್ವಾರ್ಚನೆ ಅರ್ಪಿಸಿ
ಶಿವ ಸ್ತೋತ್ರ ಮಾಡಿ ಶಿವನ ಆಶಿರ್ವಾದ 
ಪಡೆಯುವದು ಒ0ದು ನ0ಬಿಕೆ.ಶಿವನು ನಮ್ಮ
ಕಷ್ಟಗಳನ್ನು ದೂರ ಮಾಡ್ತಾನೆ.ಆ ನ0ಬಿಕೆಯೇ
ಗಾಡವಾಗಿ ಮು0ದೆ ಕೃಪಾಶಿರ್ವಾದವಾಗುತ್ತದೆ. ಇದು ಕೂಡಾ ನ0ಬಿಕೆ.

No comments: