Tuesday, June 28, 2016

 " ಮುಕ್ತ "

  ಮನುಷ್ಯ ಬುದ್ಧಿ ಜೀವಿ.ವಿಚಾರವ0ತ. ವಿಚಾರ
ಶೀಲ.ಅನೇಕ ಒತ್ತಡ  ಜ0ಜಾಟಗಳಿ0ದ 
ನರಳುತ್ತಿರುತ್ತಾನೆ.ಒತ್ತಡ -ಜ0ಜಾಟಗಳು
ಸ್ವಯ0 ಕೃತ / ಬೇರೊಬ್ಬರ ಕೃತ್ಯದಿ0ದಲೂ
ಸ0ಭವಿಸಿರಬಹುದು.ಈ ಕೃತ್ಯಗಳು ಅಹಿ0ಸಾ
ತ್ಮಕವಾಗಿದ್ದರೆ ಯಾರಿಗೂ ತೊ0ದರೆಯಿಲ್ಲ.
ಹಿ0ಸಾತ್ಮಕವಾಗಿದ್ದರೆ ಸ್ವಯ0 ತನಗೂ , ತನ್ನ
ಅವಲ0ಬಿತರಿಗೂ,ಕುಟು0ಬದ ಮೇಲೆ 
ಸಮಾಜದ ಮೇಲೆ ಅನೇಕ ಪರಿಣಾಮಗಳಿಗೆ
ಕಾರಣವಾಗುತ್ತವೆ.

ಒಮ್ಮೊಮ್ಮೆ ಸಣ್ಣ -ಪುಟ್ಟ  ಒತ್ತಡಗಳು ಒಬ್ಬರ
ಜೀವನದಲ್ಲಿ ದೊಡ್ಡ ಪ್ರಮಾದವಾಗಿ ಅಕ್ಷಮ್ಯ
ಅಫರಾಧವೇ ಆಗುತ್ತದೆ. ಕೆಲವೊಮ್ಮೆ ದೇಶದ್ರೋ
ಹದ0ತಹ ಅಫರಾಧಗಳು ಸಮುದಾಯವನ್ನೇ
ಹಾಳುಗೆಡುವುತ್ತವೆ. ದೇಶಕ್ಕೆ ಅಗೌರವವಾಗು
ತ್ತದೆ.ಅತೀಯಾದ ಆಸಕ್ತಿಗಳೇ
ಈ ಅನರ್ಥಗಳಿಗೆ ಕಾರಣ.
ಇ0ತಹ ಅನರ್ಥಗಳು ಸ0ಭವಿಸದ0ತೆ 
ಮನುಷ್ಯ ತನ್ನ ಆಲೋಚನಾ ಕ್ರಮವನ್ನು
ಸನ್ಮಾರ್ಗದಲ್ಲಿ ಇರುವ0ತೆ ಪ್ರಾರ0ಭದಿ0ದ
ನೋಡಿಕೊಳ್ಳಬೇಕು. ಭಕ್ತಿ ,ಧ್ಯಾನ ,ತಪಸ್ಸು
ಒಳ್ಳೆಯ ಗ್ರ0ಥಗಳ ಅವಲೋಕನ ಸದ್ವಿವೇಕಿಗಳ
ಸತ್ಸ0ಗ್ ,ಶುದ್ಧವಾದ ಪರಿಸರ ಇವೆಲ್ಲವೂ
ಇ0ದ್ರಿಯಗಳನ್ನು ಹತೋಟಿಯಲ್ಲಿಡಬಲ್ಲವು.
   
 ತಪ್ಪಿಗೆ ಶಿಕ್ಷೆ ,ಪ್ರಾಯಶ್ಚಿತ ಇವೆ.ಕ್ಷಮಾರ್ಹ
ತಪ್ಪು ಬಾಧಕವಲ್ಲ.ಅಕ್ಷಮ್ಯ ತಪ್ಪು ಶಿಕ್ಷೆ
ಅನುಭವಿಸಲೇಬೇಕು. ಶಿಕ್ಷೆಯ ಅವಧಿಯಲ್ಲಿಯೇ
ಪಶ್ಚಾತ್ತಾಪ ಮನೋಭಾವ ಅರಿವಾಗುವದು.
     ಈ ಪಶ್ಚಾತ್ತಾಪದ ಫಲವೇ ಮಾನವ ಪುನಃ
ಸನ್ಮಾರ್ಗಕ್ಕೆ ಬರಲು ಸುವರ್ಣ ಅವಕಾಶವನ್ನು
ಆ ಪರಮಾತ್ಮನು  ಒದಗಿಸಿಕೊಟ್ಟಿರುತ್ತಾನೆ.
ಇದನ್ನು ಬಳಸಿ  ಸದ್ಧರ್ಮ ಚಿ0ತಕನಾಗಬೇಕು.
ಸಮಾಜಶೀಲನಾಗಬೇಕು.ಒತ್ತಡ ಮಕ್ತನಾಗಿ
ಬಾಳಲು ಕಲಿಯಬೇಕು

No comments: