Monday, June 6, 2016

  "  ಅನ್ನ  "

"ಅನ್ನಮಯ  ಶರೀರ0  "
"ಅನ್ನ ದಾನಕ್ಕಿ0ತ  ಶ್ರೇಷ್ಟ ದಾನವಿಲ್ಲ.  "
"ಅನ್ನಪೂರ್ಣೆ ಸದಾಪೂರ್ಣೆ ಶ0ಕರ ಪೂರ್ಣ
ವಲ್ಲಭೇ ಜ್ನಾನ ವ್ಯೆರಾಗ್ಯ ಸಿದ್ಧಾರ್ಥ0
ಭೀಕ್ಷಾ0ದೇಹಿ ಚ ಪಾರ್ವತಿ  ".
       
  ಅನ್ನವಿಲ್ಲದೇ  ಶರೀರ ಬದುಕಿರಲಾರದು.
ಶರೀರ ಜೀವ0ತವಿರಬೇಕಾದರೆ ಅನ್ನ ಬೇಕೆ
ಬೇಕು.ಈ ಅನ್ನದಿ0ದಲೇ ದೇಹದ ಕಣಗಳು
ರಕ್ತ ಕಣಗಳಾಗಿ ದೇಹಕ್ಕೆ ಚಲನೆಯ 
ಶಕ್ತಿ ನೀಡುವದು.ದೇಹದ ಮಾ0ಸ ಖ0ಡಗಳ
ಬೆಳವಣಿಗೆ ,ಬುದ್ಧಿಶಕ್ತಿ ,ನರಮ0ಡಲಗಳ ಶಕ್ತಿ
ಶರೀರದ ಅ0ಗಾ0ಗಗಳು ,ಅವುಗಳ ಕಾರ್ಯ
ವ್ಯೆಖರಿ ಈ  "ಅನ್ನ "ದಿ0ದಲೇ. ಅನ್ನ -ನೀರು
ಇಲ್ಲದೇ ಮನುಷ್ಯ ಬದುಕಿರಲಾರ.
       
 ಇದರ ಮಹತ್ವವನ್ನು ಅರಿತೇ  ಶರಣರು
ತಮ್ಮ -ತಮ್ಮ ಮಠಗಳಲ್ಲಿ  ದಾಸೋಹ ಮಾಡು
ತ್ತಾರೆ.ಪರ ಊರಿ0ದ ಬ0ದ ಭಕ್ತಾದಿಗಳಿಗೆ
ದೇವರ ದರ್ಶನವಾದನ0ತರ  ಮೊದಲು 
ಅನ್ನ ಪ್ರಸಾದ ನಡೆಯುತ್ತೆ.ಈಗಲೂ ಪ್ರಸಿದ್ಧವಾದ
ಮಠಗಳಲ್ಲಿ ದಿನಕ್ಕೆ ಎರಡು ಹೊತ್ತು ದಾಸೋಹ
ನಡೆಯುತ್ತೆ."ಹೊರನಾಡು "ವಿನಲ್ಲಿ ದಿನದ
24 ತಾಸು ದಾಸೋಹ ಇರುತ್ತೆ.ಅದೇರೀತಿ
ತುಮಕೂರಿನ ಸಿದ್ಧಗ0ಗಾ ಮಠ ತ್ರಿದಾಸೋಹ
ನಡೆಸುತ್ತಾರೆ. ಸಾವಿರಾರು ವಿಧ್ಯಾರ್ಥಿಗಳಿಗೆ
ಉಚಿತಊಟ ,ವಸತಿ ,ಶಿಕ್ಷಣ ನೀಡುತ್ತದೆ.
 ರಾಜ್ಯದಲ್ಲಿಯೇ ಪ್ರಸಿದ್ಧವಾದ ಮಠ.
  ಬುದ್ಧನು ಕೂಡಾ ತನ್ನ ಅ0ತಿಮ 
 ಜ್ನಾನೋದಯ ಪರ್ವದಲ್ಲಿ ಅನ್ನವಿಲ್ಲದೇ ಜ್ನಾನ
ವಿಲ್ಲ ;ಅನ್ನವಿಲ್ಲದೇ ಶರೀರವಿಲ್ಲ :ಅನ್ನವೇ ಶರೀರ0. 
ಅನ್ನವೇ ಜಗಮಯ. ಅನ್ನವಿಲ್ಲದೇ
 ಯಾವ ಜೀವವಸ್ತುಗಳು ಬದುಕಿರಲಾರವು.
ಹೀಗಾಗಿ ಪುರಾಣಗಳಲ್ಲಿ. ಇತಿಹಾಸಗಳಲ್ಲಿ
ಈಗಲೂ ಮೊದಲುಜನಸೇವೆಗಾಗಿ ಆಶ್ರಮ
ಛತ್ರ,ದಾಸೋಹ ,ಶಾಲೆ ಆಸ್ಪತ್ರೆಗಳನ್ನು 
ಕಟ್ಟುತ್ತಿದ್ದರು.

  ಅನ್ನ ಅ0ದರೆ ಆಹಾರವಿಲ್ಲದೇ ಜನರ ಅಭಿ
ವೃದ್ಧಿ,ದೇಶದ ಅಭಿವೃದ್ದಿ ಆಗಲಾರದು.ಕರ್ನಾಟಕ
ರಾಜ್ಯದಲ್ಲಿ ಬಡತನ ರೇಖೆಗಿ0ತ ಕೆಳಗಿರುವವರಿ
ಗೆ 1ಕೆ.ಜಿ.ಗೆ 1ರೂ. ನ0ತೆ ಅಕ್ಕಿ ವಿತರಿಸಲಾ
ಗುತ್ತಿದೆ.ಅಪೌಷ್ಟಿಕತೆ ಹೋಗಲಾಡಿಸಲು 
ಇದೊ0ದು ಮುಖ್ಯ ಕಾರ್ಯಕ್ರಮ.ನಾಡಿನ 
ಜನತೆ ಉಪವಾಸ ಬೀಳಬಾರದು ಅನ್ನುವ 
ಉದ್ಧೇಶದಿ0ದ ಬಡ ಜನತೆಗೆ ಸರಕಾರ ಆಹಾರ
ಧಾನ್ಯಗಳನ್ನು ಅತ್ಯ0ತ ಕಡಿಮೆ ಬೆಲೆಯಲ್ಲಿ
ಪೂರಯಿಸುತ್ತದೆ.

ದೇಶಾದ್ಯ0ತ  ಆಹಾರ ಭದ್ರತೆ ಕಾರ್ಯಕ್ರಮ
ದಡಿ ಹಲಾವಾರು ಇ0ತಿಷ್ಟು ಆಹಾರ ಧಾನ್ಯ
ಪಡಿತರ ಮುಖಾ0ತರ ವಿತರಿಸುವ ವಿಚಾರ
ಸರಕಾರಕ್ಕಿದೆ.

"ಅನ್ನವೇ ದೇವರು. ಅನ್ನವೇ ಪರಮಾತ್ಮ.
ಅನ್ನಕೊಡುವ -ಭೂಮಾತೆಗೆ ಜ್ಯೆ.

No comments: