Wednesday, June 29, 2016

  "ಬಡತನ  ಮತ್ತು ಪ್ರೀತಿ  "
-------     ----  -----      ---
ಬಡತನ ಮತ್ತು ಪ್ರೀತಿ ಒ0ದು ಬಿಟ್ಟು ಇನ್ನೊ0
ದಿಲ್ಲ.ಒ0ದಕ್ಕೆ ಪೆಟ್ಟಾದರೆ ಇನ್ನೊ0ದಕ್ಕೆ 
ನೋವಾಗುತ್ತದೆ.ಜಗತ್ತು ಪ್ರತಿನಿಧಿಸುವದೇ
ಈ ಎರಡು ಶಬ್ದಗಳಿ0ದ.ಶಬ್ದಗಳ
ತಿಕ್ಕಾಟ ,ಹೋರಾಟ ,ಸೋಲು -ಗೆಲುವು ,
ಒಲವು-ನಲಿವು ,ತಿರಸ್ಕಾರ -ಮಮಕಾರ --
ಜೀವನದ ಸ0ತೋಷಕ್ಕೆ ಕಾರಣವಾಗುವ
ಎಲ್ಲಾ ಸ0ಗತಿಗಳು ಜೀವನದ ಆಸ0ತೋ
ಷಕ್ಕೂ ಕಾರಣವಾಗುತ್ತವೆ.
ಬಡತನ ದಾರಿದ್ರ್ಯದ ತಾಯಿ -ಬೇರು.ಇದಕ್ಕೆ
ಸ0ಭ0ಧಗಳು ,ಬ0ಧುಗಳು ಗೆಳೆಯರು
ಯಾರು ಇಲ್ಲ.ಇದ್ದವರೆಲ್ಲಾ ದೂರ ಆಗುತ್ತಾರೆ.
ಮಿತ್ರರೆಲ್ಲ ಅಪರಿಚಿತರಾಗುತ್ತಾರೆ.ಶ್ರೀಮ0ತಿಕೆ
ಅನುಭವಿಸಿ ಬಡತನ ಅನುಭವಿಸಬಾರದು.
ಒ0ದು ವೇಳೆ ಇ0ತಹ ಪರಿಸ್ಥಿತಿ ಬ0ದರೆ,
ಅವನಷ್ಟು ದ್ಯೆವಾನು ಕೃಪೆ ಮನುಷ್ಯ ಬೇರೊಬ್ಬ
ಇರಲಾರ.ಆತನಿಗೆ ಶ್ರೀಮ0ತಿಕೆ ಇದ್ದಾಗ
ಜಗತ್ತಿನ ಪಟ್ಟುಗಳೇನು  ?ಗತ್ತುಗಳೇನು  ?
ಎಲ್ಲಾ ಗೊತ್ತು.ಶ್ರೀಮ0ತಿಕೆ ಕಳೆದುಕೊ0ಡು
ದರಿದ್ರನಾದಾಗ ಒ0ದೊ0ದು ಪ್ಯೆಸೆಗೂ
ಹಪಾಪಿಸುತ್ತಿರುತ್ತಾನೆ.ಜಗತ್ತು ಅವನಿಗೆ
ಹೊಸ ಪಾಠವನ್ನೇ ಕಲಿಸುತ್ತದೆ. ಹೊಸ
ಲೋಕವನ್ನೇ ಪರಿಚಯಿಸುತ್ತದೆ. ಅವನಿಗೆ
ನಿಜವಾದ ಬ0ಧುಯಾರು ,ಗೆಳೆಯ ಯಾರು ,
ನಿಜವಾದ ಅಸ್ಥಿತ್ವವೇನು ?ಎಲ್ಲದರ ಅರಿವಾಗು
ತ್ತದೆ .ಒ0ಟಿತನ ಬಾಧಿಸುವದಿಲ್ಲ.ಒ0ಟಿತನದ
ಮರ್ಮ ಅವನಿಗೆ ಅರ್ಥವಾಗುತ್ತದೆ. 
"ಅವನ ದ್ಯೆವ ದೇವನ ಕೃಪೆಯಿ0ದ ಒಮ್ಮೆ ತೆರೆದರೆ  ,
ಅವನಷ್ಟು ಅದೃಷ್ಟಶಾಲಿ ಮತ್ತೊಬ್ಬನಿಲ್ಲ.
"ಪ್ರೀತಿ " ಎ0ಬುದು ಅರಿಯಬೇಕಾದರೆ ಬಡತನ
ಅನುಭವಿಸಬೇಕು.ಬಡತನದಲ್ಲಿ ಸಿಗುವ
ಪ್ರೀತಿ ,ಅ0ತಃಕರಣ , ಶ್ರೀಮ0ತಿಕೆಯಲ್ಲಿ 
ಸಿಗುವದಿಲ್ಲ.ಇಲ್ಲಿ ಹೆಜ್ಜೆ -ಹೆಜ್ಜೆಗೂ ಮಾನವೀಯತೆ
ಯ ಪರೀಕ್ಷೆ ಆಗುತ್ತೆ. ಏನೆಲ್ಲಾ ಪರಿಸ್ಥಿತಿ 
ಬ0ದರೂ ,ಪ್ರೀತಿ ತನ್ನ  ಅಸ್ಥಿತ್ವವನ್ನು ಬಿಟ್ಟು
ಕೊಡುವದಿಲ್ಲ.
  ಹೀಗಾಗಿ "ಬಡತನ ಮತ್ತು ಪ್ರೀತಿ " ಯಾವಾ
ಗಲೂ ಒ0ದೇ ರಸ್ತೆಯಲ್ಲಿ ಸಾಗುವ ಬ0ಡಿಯ ಗಾಲಿಗಳು.


No comments: