Tuesday, June 7, 2016


 "ಸ್ವಪ್ರಯತ್ನ  "
                  
 ಪ್ರಯತ್ನ ಮಾಡುತ್ತಲೇ ,ಅವಿರತ
ಪ್ರಯತ್ನ ಮಾಡುತ್ತಲೇ ನಮ್ಮ ಗುರಿ ಸಾಧಿಸಬೇಕು.
ಒಮ್ಮೆ ಗುರಿ ಸಾಧಿಸರೆ0ದರೆ ಅದರ ಹಿ0ದೆ ಧನ ,ದಾನ್ಯ ,ಕನಕ ,ಗೌರವಾ
ದರಗಳು ತನ್ನಷ್ಟಕ್ಕೆ ತಾನೆ ಬೆನ್ನಟ್ಟಿ ಬರುತ್ತವೆ.
ವಿಜ್ನಾನ ,ಆರೋಗ್ಯ ,ಶಿಕ್ಷಣ,ಕ್ರೀಡಾ ಕ್ಷೇತ್ರದಲ್ಲಿ
"ಪ್ರಯತ್ನ " ಈ ಶಬ್ದಕ್ಕೆ ಹೆಚ್ಚು ಮಾನ್ಯ್ಯತೆ ಇದೆ.
.ಇಲ್ಲಿ ಈ ಕ್ಷೇತ್ರಗಳು ನಿ0ತ ನೀರಾಗಿರುವದಿಲ್ಲ.
 ಅಭಿವೃದ್ಧಿಹೊ0ದುತ್ತಲೇ ಇರುತ್ತವೆ. ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ.
ಆರೋಗ್ಯ ,ಸಾಮಾಜಿಕ ಅವಿಶ್ಕಾರಗಳು ಹೆಚ್ಚು
 ಗೌರವಾದರಣಿಯವಾಗಿರುತ್ತವೆ.
ಸ್ವಪ್ರಯತ್ನಕ್ಕಿ0ತ ಈಗ ಗು0ಪು ಪ್ರಯತ್ನ ,/ಸಮೂಹ
 ಪ್ರಯತ್ನ ಹೆಚ್ಚು ಜನಪ್ರಿಯವಾಗುತ್ತಿದೆ.
ಸ್ವಪ್ರಯತ್ನದಿ0ದ ಅವಿಷ್ಕಾರ ನಿರ್ಮಾಣವಾದರೆ ,
 ಸಮೂಹ ಪ್ರಯತ್ನದಿ0ದ ಅವಿಷ್ಕಾರಗಳನ್ನು 
ವಿಶ್ವದ ಮಾರುಕಟ್ಟೆಗೆ ಪರಿಚಯಿಸಲು 
ಅನುಕೂಲವಾಗುತ್ತದೆ. ಇವೇ ಮು0ದೆ 
ಗು0ಪು ಪ್ರಯತ್ನಗಳು ನೂರಾರು ಜನರಿರುವ 
ಕ0ಪನಿಗೆ ನಾ0ದಿ. ಬ್ರಹತ್ ಯೋಜನೆಗಳಿಗೆ
 ಇವೇ ಮು0ದೆ ಮೆಟ್ಟಲುಗಳು.
   ಸ್ವಪ್ರಯತ್ನದಿ0ದ ವ್ಯಕ್ತಿತ್ವ ವಿಕಾಸ ಹೊ0ದಿ
 ಅಭಿವೃದ್ಧಿ ಹೊ0ದುವದರಲ್ಲಿ ಸ0ಶಯವಿಲ್ಲ. 
ಆದರೆ ಅದಕ್ಕೆ ತಕ್ಕ ಮಾರ್ಗದರ್ಶನ ,ಹಣಕಾಸು ವ್ಯವಸ್ಥೆ ,
 ಸಹಕಾರ ಇತರ ಪರಿಕರಗಳ ಹೊ0ದಾಣಿಕೆ ಮಾಡಿಕೊ0ಡು
 ಇರಬೇಕಾಗುತ್ತದೆ.ಇ0ತಹ ಪರಿಕರಗಳ ವ್ಯವಸ್ಥೆ
ಸ್ವಪ್ರಯತ್ನದಲ್ಲಾಗಲಿ/ಸಮೂಹ ಪ್ರಯತ್ನದಲ್ಲಾಗಲಿ 
ಬೇಕೆ ಬೇಕು. ಉದಾ -ಒಳ್ಳೆಯ ಪೀಠಾಧಿಪತಿ ಗಳಾಗಬೇಕೆ0ಬ
 ಮಹಾನ್ ಬಯಕೆಯು -ಅ
ಪೀಠಕ್ಕೆ ಅಗತ್ಯ ಬೇಕಿರುವ ಗುರುವಿನ  ಮಾರ್ಗ
ದರ್ಶನ , ಗ್ರ0ಥ ಪರಿಕರಗಳು ಯೋಗ್ಯ ವಾಸ
ಸ್ಥಾನ ,ಶಿಷ್ಯ ಕೋಟಿ  ಇವೆಲ್ಲವೂ ಆ ಪ್ರಯತ್ನದ
ಹಿ0ದಿರುವ  ಸ0ಪನ್ಮೂಲಗಳು. ಈ
 ಸ0ಪನ್ಮೂಲಗಳು ಕ್ರೋಢಿಕರಣವಾಗಿ ಬೆಳೆದು 
ಇದಕ್ಕೆ ಪ್ರಯತ್ನದ -ಮೇಲೆ ಪ್ರಯತ್ನ 
ಮಾಡುತ್ತಿದ್ದರೆ ಹಿಡಿದ ಯೋಜನೆ /ಕಾರ್ಯ
ಯಶಸ್ವಿಯಾಗುತ್ತದೆ.

No comments: