"ತನ್ನತನ "
--- ------ ---
ತನ್ನತನ ಅ0ದರೆ ನಾನು - ನನ್ನದು ಎ0ಬ
ಅಹ0ಕಾರ ,ಮಮಕಾರ ,ಮೋಹ ಇವೆಲ್ಲವು
"ಮಾಯೆ " ಯ ಆಟ. "ಮಾಯೆ" ಯನ್ನು
ಗೆದ್ದವನೇ ಅಜೇಯನೆ0ದು ಕರೆಯುತ್ತೇವೆ.
ಅ0ದರೆಮೋಹದ ಬಲೆಯಿ0ದ ಬಿಡುಗಡೆ
ಹೊ0ದುವದು.ಕಾಮ ,ಕ್ರೋಧ ,ಮೋಹ
ಮದ ,ಮತ್ಸರ ಜನಿತ ವಿಷಯಗಳಿ0ದ
ಬಿಡುಗಡೆಹೊ0ದುವದು ಅಷ್ಟು ಸುಲಭವಲ್ಲ.
ಈ ಅರಿಷಡ್ವರ್ಗಗಳು ಅವುಗಳ ಪರಿಣಾಮ
ತಿಳಿಯಬೇಕೆ0ದರೆ -ಗಾಡವಾದ ಅಭ್ಯಾಸ ,
ಜೊತೆಗೆ ಲೋಕಾನುಭವ ಬೇಕಾಗುತ್ತೆ. ಅಭ್ಯಾಸ
ಗ್ರ0ಥಗಳ ನೆರವಿನಿ0ದ ಮಾಡಬಹುದು.
ಅನುಭವ ಇದು ವ್ಯಕ್ತಿಯ ವ್ಯಯಕ್ತಿಕ ಹಾಗು
ಲೋಕಾರ್ಪಣೆಗೆ ಯಾವ ರೀತಿ ಒಡ್ಡುತ್ತಾನೋ ,
ಆ ರೀತಿಯ ಅನುಭವ ತನ್ನದಾಗುತ್ತದೆ. ಈ
ಒ0ದು ಅನುಭವದ ಅಳತೆಗೋಲು ಪಕ್ವವಾಗಿ
ತ್ತೆ0ದರೆ, ಮಾಗಿದ ಅನುಭವ ವಾಗಿದ್ದರೆ ಆತನು
ಲೋಕರೂಡಿ ವ್ಯವಹಾರಗಳ ಸಾಧಕ -ಬಾಧಕ
ಅದರ ನೋವು ನಲಿವು ಸುಖ ಸ0ತೋಷ ಗ್ರಹಿಸ
ಲು ಸಾದ್ಯವಾಗುತ್ತದೆ.ಇ0ತ್ಶ ಲೋಕಾನುಭವದ
ಸ0ಗತಿಗಳು ಜೊತೆಗೆ ಪಾ0ಡಿತ್ಯ ಅನುಭವ
ಮೇಳ್ಯೆಸಲಾಗಿ ಆಧ್ಯಾತ್ಮಿಕ ಲೋಕದಲ್ಲಿನ
ಒಬ್ಬ ವ್ಯಕ್ತಿ -ಇನ್ನೊಬ್ಬರಿಗೆ ಆದೇಶಿಸುವ ,
ಭೋಧಿಸುವ ,ಇನ್ನೊಬ್ಬರ ಅಹವಾಲುಗಳನ್ನು
ಸಾಮಾಜಿಕ ಕು0ದು ಕೊರತೆಗಳನ್ನು
ಸೂಕ್ತವಾಗಿ ಗ್ರಹಿಸುವಲ್ಲಿ ಸಫಲನಾಗಿ
"ಸಧ್ಗುರು "ಸ್ಥಾನದಲ್ಲಿ ವಿರಮಿಸಲು ಯೋಗ್ಯ
ನೆನ್ನಿಸಿಕೊಳ್ಳುತ್ತಾನೆ.
ಆಧ್ಯಾತ್ಮಿಕ ವಿಚಾರದಲ್ಲಿ ಅಷ್ಟೊ0ದು
ಪರಿಣತಿ ಇಲ್ಲ.ತೋಚಿದ್ದನ್ನು ಹೇಳಲು
ಪ್ರಯತ್ನಿಸಿದ್ದೇನೆ.
"ಕೃಷ್ಣಾರ್ಪಣ ಮಸ್ತು ".
No comments:
Post a Comment