ಮಹಿಳೆಯರು
ಬೆಳಗ ಮು0ಜಾನೆ ಕೋಳಿ ಕೂಗ ಹೊತ್ತಿಗೆ ಎದ್ದು
ಮನೆ ಮು0ದ ಸೆಗಣಿಯಿ0ದ ಸಾರಸಿ ,
ರ0ಗೋಲಿ ಹಾಕೋದರಿ0ದ ಪ್ರಾರ0ಭವಾಗುವ
ಹಳ್ಳಿ ಗಾಡಿನ ಹೆಣ್ಣಿನ ಕೆಲಸದ ಯಶೋಗಾಥೆಹೇಳಿದಷ್ಟು ಕಡಿಮೆಯೇ.
ದನ ,ಕರ ,ಎಮ್ಮಿತೊಳೆದು ,ಹಾಲು ಕಾಯಿಸಿ
ಹೆಪ್ಪಾಕಿ ,ಮು0ದ ಸೇರು ರೊಟ್ಟಿ ಬಡದ ,
ಬುತ್ತಿಗ0ಟು -ಕಟ್ಟಿಕೊ0ಡು ಹೊಲಕ್ಕ
ಹೊರಟರ ಒ0ದ ಪಾಳಿ ಕೆಲಸ ಮುಗೀತು.
ಹಳ್ಳಿ ಹೆಣ್ಣು ಮಗಳು ಈಗ ಬದಲಾಗ್ಯಾಳ .
ಹೊಲಹುತ್ತದು ,ಭಿತ್ತದ ,ರ0ಟಿಹೊಡೆದು ,
ರಾಶಿ ಮಾಡೊದು ,ಓರೆಗಾರರನ್ನ ಕರಕೊ0ಡ
ಹಬ್ಬ ಮಾಡ್ತಾಳ,ಈಗ ಹಳ್ಳಿ ಹೆಣ್ಣು ,ಇತ್ತಿತ್ತಲಾಗಿ
ಟ್ರ್ಯಾಕ್ಟರ ಓಡಸ್ತಾಳ.ಹಳ್ಳಿ ಹೆ0ಗಸು ಇಷ್ಟೆಲ್ಲಾ
ಮಾಡಿ ಮಕ್ಕಳ ಹೆರಿಗೆ ಮಾಡಬೇಕು ,
ಮೊಮ್ಮಕ್ಕಳ ತೆಲಿ ಬಾಚಬೇಕು , ಸಾಲಿಗೆ
ಕಳಿಸ್ಬೇಕು.ಒ0ದ-ಎರಡ ನೂರೆ0ಟ ಕೆಲಸ.
ಎಲ್ಲಾಆಲ್ರೌ0ಡ ಕೆಲ್ಸ ಮಾಡಿ ಮ್ಯಾಲೆ
ಪ0ಚಾಯ್ತಿ ಇಲೆಕ್ಷನ್ನ ಮಾಡಬೇಕು.
ಇನ್ನ ನಗರಕ್ಕ ಬ0ದರ ಸಾಲಿಮಾಸ್ತರ
ಆಗ್ಯಾರ ,ಗುಮಾಸ್ತರು ,ವಕೀಲರು ,ಪೋಲಿಸರು
ಬಸ್ ಡ್ರ್ಯೆವ್ಹರ ,ಬಸ್ಸ್ ಕ0ಡಕ್ಟರ.ಎ0.ಎಲ್.ಎ.
ಎ0.ಎಲ್.ಸಿ. ಎಲ್ಲಾ ಹುದ್ದೆಗಳಲ್ಲು ಕ್ಯೆ
ಆಡಸಕತ್ಯಾಳ.ನಮ್ಮ ಹಣ್ಣ ಮಕ್ಕಳ್
ಗಗನಯಾನ ಮಾಡ್ಯಾರ ,ಕ್ರಿಕೆಟ್ಟ್ ಆಡ್ತಾರ
ಹೀ0ಗ ಈಗ ಎಲ್ಲಾ ರ0ಗಗಳಲ್ಲಿ ಮಿನುಗು
ತ್ತಿರುವ ಮಿನುಗುತಾರೆ. ಶತಮಾನದ
ಮಿನುಗುತಾರೆಯಾಗಿ ಹೊರಹೊಮ್ಮುತ್ತಿದ್ದಾಳೆ.
ಇವರ ಕ್ಷೇಮ ಚಿ0ತನೆಗಾಗಿ ವರ್ಷಕ್ಕೊಮ್ಮೆ
ಮಹಿಳಾ ದಿನಾಚರಣೆಯನ್ನು ಆಚರಿಸ್ತಿವಿ.
ಇನ್ನೊ0ದು ಮರೆತು ಬಿಟ್ಟೆ.ಈಗ ಮಹಿಳೆಯರೂ
ಸೇನಾಪಡೆ ಸೇರಿದ್ದಾರೆ.ಹೆಮ್ಮೆಯ ವಿಷಯ.ಅವರಿಗೊ0ದು ಸಲಾ0.
No comments:
Post a Comment