"ಇವರು ಭಾರತೀಯರು "
ಆಧ್ಯಾತ್ಮಿಕ ಕ್ಷೇತ್ರ ,ವಿಜ್ನಾನ ,ಖಗೋಲ
ಗಣಿತ , ಅರ್ಥಶಾಸ್ತ್ರ ,ರಾಜ್ಯ ಶಾಸ್ತ್ರಗಳಲ್ಲಿ
ಭಾರತೀಯರು ಪುರಾತನಕಾಲದಿ0ದಲೂ ಪ್ರಸಿದ್ಧರು.
ವಿಜ್ನಾನ -ಸಿ.ವಿ.ರಾಮನ್ನ್
ಗಣಿತ -ಭಾಸ್ಕರಾಚಾರ್ಯ
ಆಧ್ಯಾತ್ಮಿಕತೆ -ರಾಮಕೃಷ್ಣ ಪರಮಹ0ಸ
ಅರ್ಥಶಾಸ್ತ್ರ -ಚಾಣಕ್ಯ.
ರಾಜ್ಯನೀತಿ - ಸಾಮ್ರಾಟ ಅಶೋಕ
ಹೀಗೆ ಪ್ರಖ್ಯಾತರ ನಾಮಾವಳಿಗಳ ಪಟ್ಟಿ
ಬೆಳೆಯುತ್ತಲೇ ಹೊಗುತ್ತದೆ.ಇಷ್ಟೆಲ್ಲಾ -ಇದ್ದು
ಇಲ್ಲದ0ತಿರುವ ಭಾರತೀಯ ಭೌದ್ಧ ಶಕ್ತಿಗೆ
ಕಾರಣ -ಮುಖ್ಯವಾಗಿ ಭಾಷಾ ಸ0ವಹನ.
ಎಲ್ಲಾ ಭಾಷಾ ಪರಿಕರಗಳು ಸ0ಸ್ಕೃತ
ಮಾಧ್ಯಮದಲ್ಲಿರುವದೇ -ವಿಶ್ವ ಮಟ್ಟದಲ್ಲಿ
ನಮ್ಮ ಪಾ0ಡಿತ್ಯ ಪರಿಚಯ ಮಾಡಿಕೊಳ್ಳಲಾ
ರದೇ ಸೋಲನುಭಿಸಿದೆವು.ಇದು ಇತಿಹಾಸ.
ವಿದೇಶಗಳಲ್ಲಿಯ ಪ್ರಖ್ಯಾತ ಅ0ತರಾಷ್ರ್ಟೀಯ
ಬಹುರಾಷ್ಟ್ರೀಯ ಕ0ಪನಿಗಳ ಮುಖ್ಯ
ಆದಳಿತಗಾರರು -ಭಾರತೀಯರು.ಅರ್ಥವ್ಯ
ವಸ್ಥೆಯಲ್ಲಿ ,ಆಡಳಿತಗಾರಿಕೆಯಲ್ಲಿ ,
ವಿಜ್ನಾನ ಕ್ಷೇತ್ರದಲ್ಲಿ , ಭಾರತೀಯರು ಮು0ದು.
ಅತ್ಯುನ್ಯತ ಅವಿಷ್ಕಾರದ ಹಿ0ದೆ ಭಾರತೀಯ
ಮಿದುಳುಇದ್ದೇ ಇರುತ್ತದೆ. ಬುದ್ಧಿ ಕೌಶಲ್ಯದಲ್ಲಿ
ಭಾರತೀಯರನ್ನು ಮೀರಿಸುವರಿಲ್ಲ.ಹೆಮ್ಮೆಯ ವಿಷಯ.
ಒ0ದು ದೇಶದ ಸಾರ್ವಭೌಮತ್ವ , ಆದೇಶದ
ಪ್ರತಿಭಾ ಶಕ್ತಿ ,ಆರ್ಥಿಕಶಕ್ತಿ ,ಸಾಮಾಜಿಕ ಶಕ್ತಿ
ಸ0ಘಟನಾಶಕ್ತಿ ,ದೇಶಪ್ರೇಮ,ದೇಶಭಕ್ತಿ ಮತ್ತು
ಮುಖ್ಯವಾಗಿ ಸ್ಯೆನ್ಯಶಕ್ತಿಗಳ ಮೇಲೆ ಅವಲ0ಬಿತ
ವಾಗಿರುತ್ತದೆ.
ವಿದೇಶಿಯರು ಕೊಡುವ ಕ್ಯೆತು0ಬಾ ,ಜೇಬು
ಹಿಡಿಸಲಾದದಷ್ಟು ದುಡ್ಡಿನ ಆಸೆಗೆ ನಮ್ಮ ಪ್ರತಿಭೆ
ಪಲಾಯನವಾಗುತ್ತಿದೆ.ಈ ಪ್ರತಿಭಾ ಪಲಾಯನ
ದೇಶಕ್ಕೆ ನು0ಗಲಾರದ ಮೃಷ್ಟಾನ್ನ.ಹಿನ್ನಡೆ.
ಈಪ್ರತಿಭೆ ಪಲಾಯನವಾಗದ0ತೆ ನಾವು
ರಾಷ್ಟ್ರಮಟ್ಟದಲ್ಲಿ ಕಾನೂನು ಪ್ರಾಧಿಕಾರ
ರಚಿಸಿ, ಪ್ರತಿಭಾಪಲಾಯನ ತಡೆಗಟ್ಟಿ ,ಆ
ಪ್ರತಿಭೆಗಳನ್ನು ದೇಶ ಸೇವೆಗೆ ಬಳಿಸಿಕೊ0ಡರೆ
ದೇಶ ಹೆಚ್ಚು ಸದೃಡ , ಬಲಿಷ್ಟ -ಭಾರತ ಕಟ್ಟಲು
ನೆರವಾಗುತ್ತದೆ.ಡಾ.ಎ.ಪಿ.ಜೆ.ಕಲಾ0 ರವರ
ಕನಸು ಇದೇ ಆಗಿತ್ತು.
ಈ ಮಾತನ್ನು ನೆನಪಿಸಿಕೊ0ಡು ನಾವು
ಆಧ್ಯತೆಯ ಮೇರೆಗೆ ಪ್ರತಿಭೆ ಪಲಾಯ ನವನ್ನು
ತಡೆಗಟ್ಟಿ , ಮೇಧಾವಿ ಯುವ ವಿಜ್ನಾನಿಗಳನ್ನು
ದೇಶ ಸೇವೆಗೆ ಬಳಸಿಕೊಳ್ಳುವ0ತೆ ಕ್ರಿಯಾ
ಯೋಜನೆ ರೂಪಿಸಬೇಕು.
No comments:
Post a Comment