Thursday, June 9, 2016

   "ಅನುಮಾನ  --  ನ0ಬಿಕೆ  " 

     ಅನುಮಾನ ಮತ್ತು ನ0ಬಿಕೆ ಜೀವನವೆ0ಬ 
ನಾವೆಯ  ಅಗ್ನಿ ಶಿಲೆಗಳು.
  ಸ0ಸಾರದಲ್ಲಿಯ  ಒ0ದು ಸಣ್ಣ ಅನುಮಾನ/
ಸುಳ್ಳು /ಆರೋಪ  ಗ0ಡ ಹೆ0ಡಿರ  ಜೀವನ
ವನ್ನೇ  ಅಲ್ಲೋಲ -ಕಲ್ಲೋಲ ಮಾಡಿಬಿಡುತ್ತದೆ.
ಪರಿಸ್ಥಿತಿ ವಿಷಮಿಸಿ ವಿಛ್ಚೇದನ  ಪಡೆಯುವವ
ರೆಗೂ ಹೋಗುತ್ತದೆ.ಹದಿ -ಹರೆಯವದರಲ್ಲಿ.
ಯುವಕ -ಯುವತಿಯರಲ್ಲಿ ,ಅದೇ ವಿವಾಹವಾ
ದವರಲ್ಲಿ , ಅಗಾಧವಾಗಿ ಪ್ರೇಮಿಸುವವರಲ್ಲಿ ,
ಅತೀಯಾದ ನ0ಬಿಕೆಯಿಟ್ಟವರಲ್ಲಿ , ಅತೀಯಾದ
ವಿಶ್ವಾಸವಿಟ್ಟವರಲ್ಲಿ ,ಪತಿ -ಪತ್ನಿ ,ಸ್ನೇಹಿತರು 
ಬ0ಧು ಬಳಗದವರು ಯಾರೇ ಆಗಿರಲಿ ಒ0ದು
ಸಣ್ಣ  ಅನುಮಾನವೂ ಅವರ ಸರ್ವಸ್ವವನ್ನು 
ನಾಶ ಮಾಡುತ್ತದೆ.ಅನುಮಾನದ ಚಕ್ರವ್ಯೂಹು
ಪರಮಾಣು ಅಸ್ತ್ರಗಳಿಗಿ0ತಲೂ ವಿಷಕಾರಿ.
ಜೀವನವನ್ನೇ ಶಸ್ತ್ರಗಳಿಲ್ಲದೇ ಸುಟ್ಟುಹಾಕಬಲ್ಲದು
ನಮ್ಮ ಎಲ್ಲಾ ದ್ಯೆನ0ದಿನ ವ್ಯವಹಾರಗಳು
ಅನುಮಾನಗಳಿಲ್ಲದೇ ನಡೆಯುವ0ತಾಗಲು
ಪ್ರಯತ್ನಿಸಬೇಕು.ಅ0ದರೆ ಪಾರದರ್ಷಕವಾಗಿರ
ಬೇಕು.ಪಾರದರ್ಶಕದ ಪಾರತ್ಯ ಎಣೆಯಿಲ್ಲದ
ಷ್ಟು ಸ0ತೋಷವನ್ನು ಕೊಡುತ್ತದೆ.
  ನ0ಬಿಕೆ.ಸ್ನೇಹಪರ ನ0ಬಿಕೆ ,ಭಕ್ತಿಪರನ0ಬಿಕೆ
ಗ0ಡ -ಹೆ0ಡತಿ ನ0ಬಿಕೆ ,ವ್ಯವಹಾರ ನ0ಬಿಕೆ.
ವೃತ್ತಿ ನ0ಬಿಕೆ , ಹೀಗೆ ಯಾವ ವೃತ್ತಿಯಿ0ದ
ಯಾವ ನಿಟ್ಟಿನಲ್ಲಿ ನ0ಬಿಕೆಯನ್ನು ನೋಡಲು
ಇಷ್ಟ ಪಡುತ್ತಾರೋ ,ಅದರಲ್ಲಿ ಮೊದಲು
ಶ್ರದ್ಧೆ ಇರಬೇಕು. ಆಶ್ರದ್ಧೆಯೇ ಬಲವಾಗಿ ಆಳೂರಿ
ನ0ಬಿಕೆಗೆ ಅರ್ಹವಾದ0ತ ಭಾವನೆಗಳನ್ನು
ಮ ನಸ್ಸಿನಲ್ಲಿ ,ಹೃದಯದಲ್ಲಿ ,ಕೃತಿಯಲ್ಲಿ
ಭಿತ್ತಲು ಸಾದ್ಯವಾಗುತ್ತದೆ. "ಭಾವಕ್ಕೆ ತಕ್ಕ0ತೆ
ನ0ಬುಗೆ ". "ನ0ಬಿಕೆಗೆ ತಕ್ಕ0ತೆ ಫಲ ".
ನ0ಬಿಕೆಯ ವಿಫಲತೆಯೇ ಅಪನ0ಬಿಕೆ.ಅಪನ
0ಬಿಕೆಯ ಪರಿಣಾಮಗಳು ನಕಾರತ್ಮಕ.

No comments: