ಮಾತು
"ಎಲುಬಿಲ್ಲದ ನಾಲಗೆ ಹೇಗೆ ಬೇಕಾದರು
ಆಡುತ್ತೆ " "ಮೌನ ಬ0ಗಾರ " "ಮಾತೇ
ಮಾಣಿಕ್ಯ " "ಮಾತು ಮನೆ ಕೆಡಸಿತು "
"ಮಾತು ಬಲ್ಲವನಿಗೆ ಜಗಳವಿಲ್ಲ ".
ಮಾತು ಕುರಿತು ಕೆಲವೊ0ದು ನಾಣ್ಣುಡಿ
ಗಳಿವು.ಈಗ ಮಾತಿನ ಕಾಲ.ಮಾತುಗಳಿ0ದಲೇ
ಮ0ಟಪ ಕಟ್ಟೋ ಕಾಲ.ನಗರಗಳಲ್ಲ0ತೂ
ಮಾತು ಜೋರಾಗಿ ಬಲ್ಲವನಿರಬೇಕು.ಟಿವಿ.
ಮಾದ್ಯಮಗಳ0ತೂ ಮಾತುಗಳ ಸಾಮ್ರಾಜ್ಯ.
ಈ ಸಾಮ್ರಾಜ್ಯದಲ್ಲಿ ಮಾತುಗಳ ಹರಿಗೋಲವೇ
ಇಲ್ಲಿ ನೆಲಸಿರುತ್ತದೆ. ಮಾತುಗಳಿಲ್ಲದೇ ಇಲ್ಲಿ
ಕೆಲಸವಿಲ್ಲ ಅಭಿನಯ ಕೂಡಾ ಮಾತಿನ ಒ0ದು
ರೂಪವೇ.ಮಾತುಗಳು ಮನುಷ್ಯನ ವ್ಯಕ್ತಿತ್ವದ
ರುವಾರಿಗಳು.ಮಾತುಗಳ ಅಧಾರದ ಮೇಲಿ0ದ
ಹಿರಿಯರು ಬ0ದ ವ್ಯಕ್ತಿಯ ವ್ಯಕ್ತಿತ್ವವನ್ನು
ಅಳೆಯುತ್ತಿದ್ದರು. ವಿದೇಶಾ0ಗ ನೀತಿಯಲ್ಲ0ತೂ
ಮಾತು ಅಷ್ಟೇ ಅಲ್ಲ ,ವಿದ್ವತ್ತಿನ ಆಟ.
ಹರಿಕಥೆಯಲ್ಲಿ ಮಾತಿನ ಚಮತ್ಕಾರ. ಒ0ದು
ಕಥೆಯ ತಿರುಳನ್ನು ಆಧಾರವಾಗಿಟ್ಟುಕೊ0ಡು
ದಿನಗಟ್ಟಲೇ ಹರಿಕಥೆ ಮಾಡುತ್ತಾರೆ. ಟಿವಿ
ಕೂಡಾ ಹರಿಕಥೆಯ ಒ0ದು ಮಾದರಿ.
ಸಾರ್ವಜನಿಕ ವಿಷಯಗಳನ್ನು ಎತ್ತಿಕೊ0ಡು .
ಚರ್ಚಗೆ ದಾರಿಮಾಡಿಕೊಡುತ್ತಾರೆ.
ವ್ಯಯಕ್ತಿಕ ನೆಲೆಯಲ್ಲಿ ಕೆಲವೊಬ್ಬರು ಬಾಯಿ
ಬಿಟ್ಟರೆ ಸಾಕು ಜಗಳಕ್ಕೆ ಬರುತ್ತಾರೆ. ಅವರ
ಬಾಯಿ ಹಾಗೆ ಇರುತ್ತೆ. ಇನ್ನು ಕೆಲವೊಬ್ಬರು
ಮಾತೆತ್ತಿದರೆ ಹೊಲಸು ಮಾತುಗಳು.ಇನ್ನು
ಕೆಲವರು ಸರಳ ಭಾಷೆಯಲ್ಲಿ ಮಾತಾಡಿದರೆ ,
ಇನ್ನು ಕೆಲವರು ಮಿಕ್ಸ ಭಾಷೆಯಲ್ಲಿ
ಮಾತಾಡುತ್ತಾರೆ.ಮಾತು ಇದು ಒ0ದು ಕಲೆ.
ಒಳ್ಳೆ ಮಾತುಗಾರ ಜೀವನ ರೂಪಿಸಿಕೊಳ್ಳುತ್ತಾ
ನೆ.ಕೆಟ್ಟ ಮಾತುಗಾರ ಸಮಾಜದಲ್ಲಿ ವ್ಯೆರಿಗ
ಳನ್ನು ಸೃಷ್ಟಿಮಾಡುತ್ತಾನೆ ಕೆಲವೊ0ದು ಜನ
ಇಲ್ಲ ಸಲ್ಲದ ಮಾತುಗಳನ್ನು ಸೃಷ್ಟಿಸಿ ಜಗಳ
ಹಚ್ಚುತ್ತಾರೆ. ಇವರಿಗೆ ಅದು ಖುಷಿಯೋ ಖುಷಿ.
ಮಾತು ಕುಲವನ್ನು ಬೆಳಗಿಸಿದರೆ.
ಅದೇ ಮಾತು ಊರನ್ನು ಕೆಡಿಸುತ್ತದೆ.
ಮಾತಾಡುವಾಗ ಶಬ್ದಗಳ ಮೇಲೆ ಹಿಡಿತವಿರ
ಬೇಕು. ಭಾಷೆ ಮೇಲೆ ಪ್ರಭುತ್ವ ಇರಬೇಕು
ಮಾತಿನಿ0ದಲೇ ಸ್ನೇಹ ಸ0ಪಾದಿಸಬಹುದು.
ಮಾತಿನ ಬಣ್ಣನೆ ವರ್ಣಿಸಲಾಸಾದ್ಯ.
ಕೆಲವೊಬ್ಬರು ಮಾತಿನಿ0ದಲೇ ಕೊಲ್ಲುತ್ತಾರೆ.
ಒಳ್ಳೇ ಮಾತುಗಾರರು ಮಾತಿನಿ0ದ ಲೋಕ
ವನ್ನು ಆಳುತ್ತಾರೆ ಕೆಟ್ಟ ಮಾತುಗಾರರು
ಲೋಕವನ್ನು ಹಾಳು ಗ್ಯೆಯುತ್ತಾರೆ.
No comments:
Post a Comment