Friday, June 17, 2016



  "  ಸಕಾರಾತ್ಮಕ  "

 ಸಕಾರಾತ್ಮಕ ಚಿ0ತನೆ , ಸಕಾರಾತ್ಮಕ
ಧ್ಯಾನ ,  ಸಕಾರಾತ್ಮಕ ಧೋರಣೆಗಳು ,
ಮನುಷ್ಯನನ್ನು  ಸನ್ಮಾರ್ಗದಲ್ಲಿ ಮುನ್ನಡೆಯಲು
ಸಹಕಾರಿಯಾಗಬಲ್ಲವು.ಸಕಾರಾತ್ಮಕಗಳಿ0ದ
ಸಕಾರಾತ್ಮಕ ಫಲವೇ ದೊರಕುತ್ತದೆ. 
ಸಕಾರತ್ಮಕ್ಕೆ -ಸಕಾರಾತ್ಮಕ ಹೃದಯವೇ
ಸ್ಪ0ದಿಸಬೇಕು.
    ತನಗಾಗಿ ಏನನ್ನು ಚಿ0ತಿಸದೇ ,ತನಗಾಗಿ
ಏನನ್ನು ಬಯಸದೇ ,ಲೋಕ ಕಲ್ಯಾಣಕ್ಕಾಗಿ ,
ಸರ್ವರ ಹಿತಕ್ಕಾಗಿ ,ಲೇಸನ್ನು ಬಯಸುವದೇ
ಸಕಾರಾತ್ಮಕ ಧೋರಣೆಗಳ ,ವಿಚಾರಗಳ 
ತಿರುಳು.
    ಸತ್ಸ0ಗದಿ0ದ ,ಸದ್ಗುರುವಿನ ಒಡನಾಟ
ದಿ0ದ  ಸದ್ಗುರುವಿನ ಉಪದೇಶದಿ0ದ,ಮಾರ್ಗ
ದರ್ಶನದಿ0ದ ಸದಾಕಾಲ  ಸಕಾರಾತ್ಮಕ
 ವಿಚಾರಗಳು ಉತ್ಪತ್ತಿಯಾಗಲು ಪ್ರೇರಣೆಯಾ
ಗುತ್ತವೆ.ಇವೇಸ್ಫೂರ್ತಿ ,ಶಕ್ತಿಯಾಗುತ್ತವೆ.
  ತದೇಕ ಚಿತ್ತ ,ಏಕಾಗ್ರತೆ ,ಇ0ದ್ರಿಯ ಹತೋಟಿ
ಮನಸ್ಸನ್ನು  ಧ್ಯಾನ ಸೆಳೆತಕ್ಕೆ ಸೆಳೆಯುವ
ಸಾಧನಗಳು .ಸಾಧನೆಗಳನ್ನು ಸಾಧನೆಮಾಡಿ
ಸಿದ್ಧಿಸಿದಾಗ ,ಇವುಗಳ ಮಹತ್ವ ಅರಿವಾಗುತ್ತದೆ.

No comments: