Tuesday, June 21, 2016

"ಯಶಸ್ಸು  "

     ಕೆಸರಿನಲ್ಲಿ ಕಮಲವು  ಹುಟ್ಟುವ0ತೆ  ,
ಯಶಸ್ಸು ಹೆಚ್ಚಾಗಿ ಬಡಕುಟು0ಬಗಳಲ್ಲಿಯೇ 
ಹುಟ್ಟುತ್ತದೆ.ಯಶಸ್ಸಿಗೆ ಅನೇಕಾನೇಕ ಪ್ರಮಾಣ
ಗಳಿವೆ. ಪರಮಾಣಗಳಿವೆ. ಇಲ್ಲಿ ಚರ್ಚಿಸುವ
ವಿಷಯ "ಬಡತನದ ಯಶಸ್ಸು  "
"ಬಡತನದ ಯಶಸ್ಸು -ಅ0ದರೆ ಬಡತನದ
ಲ್ಲಿಯೇ/ಕಡಿಮೆ ಆರ್ಥಿಕ ವಲಯದಲ್ಲಿ /ಒ0ದ
ರ್ಥದಲ್ಲಿ ತಿನ್ನಲು ಒಪ್ಪತ್ತಿನ ಉಟಕ್ಕೂ ಗತಿ
ಇಲ್ಲದ ಕುಟು0ಬಗಳಲ್ಲಿ ಯಾವಾಗಲೂ 
ಸರಸ್ವತಿ ನಾಟ್ಯವಾಡುತ್ತಿರುತ್ತಾಳೆ.ಸರಸ್ವತಿಗೆ
ಬಡತನ ,ಶೋಷಣೆ ಅ0ದರೆ ಪ0ಚಪ್ರಾಣ.
ವಿದ್ಯ ಎ0ಬ ಸಿರಿದಾನ ಪ್ರಾಪ್ತವಾಗುವದು
 ಕೇವಲ ಬೌದ್ಧಿಕ ಶಕ್ತಿಯಿ0ದಲ್ಲ. ಬೌದ್ಧಿಕ ಶಕ್ತಿ
ವಿದ್ಯಾರ್ಥಿಯ ವ್ಯಯಕ್ತಿಕ ಆಸ್ತಿ.ಆದರೆ ಯಶಸ್ಸಿಗೆ
ಬೌದ್ಧಿಕ ಶಕ್ತಿ ಒ0ದೇ ಕಾರಣವಾಗಲಾರದು.
ವಿದ್ಯಾರ್ಥಿಯ ನಡೆ ,ನುಡಿ ವ್ಯವಹಾರಿಕತೆ
ವ್ಯೆಚಾರಿಕತೆ ,ಗುರುಗಳ ಜೊತೆಗಿನ ಸ0ಭ0ಧ
ಸಾಮರ್ಥ್ಯ,ಗ್ರಹಣ ಶಕ್ತಿ ಇ0ತಹ ನೂರೆ0ಟು
ಪರಮಾಣಗಳು ಅವನ ಬುದ್ಧಿಶಕ್ತಿಗೆ
ಪ್ರಮಾಣಗಳಾಗಿ ಅವನಲ್ಲಿರುವ ಪ್ರತಿಭೆಯ
ಕಾರ0ಜಿಯನ್ನು ಹೊರಚಿಮ್ಮಲು ಕಾರಣವಾಗು
ತ್ತದೆ.ಎಲ್ಲಕ್ಕೂ ಮಿಗಿಲಾಗಿ ಇ0ತಹ ಯಶಸ್ಸು
ಮುಖ್ಯವಾಗಿ ಗುರುಗಳ ಆಶೀರ್ವಾದ 
,ಮಾರ್ಗದರ್ಶನ ನೆರವಿಲ್ಲದೇ ಪಡೆಯಲಾಗು
ವದಿಲ್ಲ.ಒಮ್ಮೆ ಗುರುಗಳ ಮನಸ್ಸಿನಲ್ಲಿ
 ವಿದ್ಯಾರ್ಥಿಯ ವಿದ್ಯಾವಿಕಾಸ ನಕಾಶೆಯ
ಭಿತ್ತಿ ಚಿತ್ರ ಅಚ್ಚೊತ್ತಿದರೆ ಸಾಕು. ಅದನ್ನು 
ಶಿಲೆಯಾಗಿ ,ಶಿಲೆಯಕಲೆಯಾಗಿ  ಶಿಲ್ಪಿ 
ಮಾಡುವ ತವಕ ಗುರುಗಳದ್ದಾಗಿರುತ್ತದೆ. 
ಗುರುಗಳ ಇ0ತಹ ಅಪ್ಪಟ ಅಭಿಲಾಷೆಗಳು ತಮ್ಮ ನೆಚ್ಚಿನ
ಶಿಷ್ಯ ಅಥವಾ ಪಟ್ಟದ ಶಿಷ್ಯ ನಿಗೆ ಧಾರೆಯೆರೆ
ಯುತ್ತಾರೆ.ಇ0ತಹ ಒ0ದು ಸಸಿ ಮರವಾಗಿ
ಹೆಮ್ಮರವಾಗಿ ಜಗತ್ತಿಗೆ ಬೆಳಕಾಗಿ ಬೆಳೆಯುತ್ತದೆ.
ಇ0ತಹ ಯಶಸ್ಸಿಗೆ ಸ್ನೇಹಿತರು ,ಸಮಾಜದ 
ಬ0ಧು ಬಳಗ ,ಮಾಧ್ಯಮಗಳ ,ಎಲ್ಲಾ ವರ್ಗದ
ಹಿತ್ಯೆಷಿಗಳ ಸಹಕಾರವೂ ಅಗತ್ಯ.ಅವರ 
ಸಹಕಾರ ಸ್ಫೂರ್ತಿ ಪ್ರತಿಭೆ ಅರಳಲು
 ನೆರವಾಗುತ್ತದೆ.ಜ್ನಾನ ಕೇ0ದ್ರಗಳಲ್ಲಿ 
ಕುಸುಮವಾಗಿ ತನ್ನ ಸುಗ0ಧವನ್ನು ಎಲ್ಲಡೆಗೆ
ಪಸರಿಸುತ್ತದೆ.

No comments: