Tuesday, June 14, 2016




  "ಧ್ಯಾನ  "

 ಧ್ಯಾನ ,ಭಕ್ತಿ ,ಸೇವೆ , ಇವು ಮನುಷ್ಯನ
ಅ0ತರ0ಗದ ಆತ್ಮವನ್ನು  ಪರಿಶುದ್ಧ ಮಾಡುವ
ಸಾಧನೆಗಳು.
    ಭಕ್ತಿ , ಸೇವೆ  ಇವು ಜನರ ಮಧ್ಯೆ  ನಿ0ತು
ಮಾಡುವ ಕ್ರಿಯೆಗಳು. ಹಾಗೆಯೇ ಇತರರನ್ನು
ಆಕರ್ಷಿಸಿ ಅವರನ್ನು  ಈಮಾರ್ಗದಲ್ಲಿ  ಮುನ್ನ
ಡೆಯುವ0ತೆ  ಮಾಡುವ  ಬಾಹ್ಯ ಸಾಧನೆಗಳು.
      ಧ್ಯಾನ ಇದು ಮನುಷ್ಯನ ಮನಸ್ಸಿಗೆ
ಸ0ಭ0ಧಿಸಿದೆ.ಮನಸ್ಸು ಇ0ದಿನ ಸಾಮಾಜಿಕ
ವ್ಯೆಪರಿತ್ಯಗಳನ್ನು ಕ0ಡು  ಸಹಿಸಲಾಗದೇ 
ರೋಸಿಹೋಗಿದೆ. ನಮ್ಮ ಪೂರ್ವಜರು ಮನಸ್ಸನ್ನು
 ಕ್ರೋಧದ ವಶಕ್ಕೆ ವಶವಾಗದೇ 
ಸ್ವಯ0 ಚಿತ್ತದಿ0ದ  ಮು0ದಿನ ಆಗು -ಹೋಗು
ಗಳನ್ನು  ನಿಭಾಯಿಸುವದಕ್ಕಾಗಿ ಕ0ಡೊಕೊ0ಡ
ಮಾರ್ಗ 'ಧ್ಯಾನ '.
    ಈ ಧ್ಯಾನದಿ0ದ ಮನಸ್ದು ಶಾ0ತವಾಗಿ
ಕಲ್ಮಶ ಮನಸ್ಸು ದೂರವಾಗುತ್ತದೆ. ಕ್ರೋಧ
ಸಮೀಪ ಬರುವದೇ ಇಲ್ಲ.ಮಹಾನ್ ಸಾಧಕರ
ಮಹಾನ್ ಅಸ್ತ್ರ ಈ ಧ್ಯಾನ. ಈ ಧ್ಯಾನದಿ0ದ
ನಾವು ಸರ್ವಸ್ವವನ್ನು ಗೆಲ್ಲಬಹುದು.ಬುದ್ಧ 
ಸೇರಿದ0ತೆ ಅನೇಕ ಮಹಾನುಭಾವರು ,
ದಾರ್ಶನಿಕರು  ಧ್ಯಾನದ ಮಹತ್ವವನ್ನು
ತಿಳಿಸಿದ್ದಾರೆ. ಪಠ್ಯ ಅಥವಾ ಪಠ್ಯೇತರ
ಚಟುವಟಿಕೆಗಳಲ್ಲಿ ಇದನ್ನು ಅಳವಡಿಸಿದರೆ
ಬರಲಿರುವ ಮು0ದಿನ ಹೊಸ ಪೀಳಿಗೆಯ
ನಾಗರಿಕತೆಯು ಅರಿಷಡ್ವರ್ಗ ಮುಕ್ತ
ಹೊ0ದಲು ಸಾಧ್ಯ ವಾಗಬಹುದು.ಇದು
ಅಭಿಪ್ರಾಯವಷ್ಟೆ.

No comments: