Friday, April 29, 2016

 "  ಏ  ತ0ಗೆವ್ವ ನೀ ಕೇಳ್   "

  *  "  ಹೆ0ಡತಿಗೆ  ಗ0ಡನ ಪ್ರೀತಿ
,        ಪೋಷಣೆಯ  ಭದ್ರತೆ  ಸಿಕ್ಕರೆ ಸಾಕು
          ಸ0ಸಾರ ಹೇಗೋ ನಡೆಯುತ್ತೆ  ".
          ಏ  ತ0ಗೆವ್ವ ನೀ ಕೇಳ್......
  *  "  ದುಡಿಯೋದು  ಮುಖ್ಯ.
         ದುಡಿಮೆಯೇ  ಅನ್ನ  ! ."
        :ಯಾರೋ ಒಬ್ಬರ  ಮರ್ಜಿಗಾಗಿ
         ದುಡಿಯೋದು  ನಾಟಕ.ಡಬ್ಬಾ ನಾ ಟಕ.
         ಏ  ತ0ಗೆವ್ವ ನೀ ಕೇಳ್....
  *   "  ಸಿಟ್ಟು -- ಇದ್ದರ
         ಕಾಲ ಕೆದರಿ -ಜಗಳ ತೆಗಿ... 
         ಹೊಟ್ಟಿ ಮ್ಯಾಲೆ -ಹೊಡಿಬ್ಯಾಡ  ".
         ಏ ತ0ಗೆವ್ವ ನೀ ಕೇಳ್....


   "  ಸ0ಗಾನ  ಮಾತು  "

  *  "  ಅಪರಾಧಗಳನ್ನು ಮನ್ನಾ ಮಾಡಲಿಕ್ಕೆ
         ಮಾಫ ಮಾಡಲಿಕ್ಕೆ -- ಸರಕಾರ
         ಕುಳಿತಿರುವ  ಹಾಗೆ ಭಾಸವಾಗುತ್ತಿದೆ  ! "
  *  "  ಸ್ವಜನ ಪಕ್ಷಪಾತಕ್ಕೆ ಹೆದರಿ ಎಷ್ಟೋ
          ಜನರು ರಾಜಿನಾಮೆ ನೀಡಿದ
          ಪ್ರಸ0ಗಗಳು  ಸೃತಿಪಟಲದ ಮೇಲೆ
          ಆಗಾಗ್ಗೆ  ಸುಳಿದಾಡುತ್ತಿರುತ್ತವೆ  "
  *  "  ನೀರಿನ  ವಿಷಯದಲ್ಲಿ
        'ರಾಜಕಾರಣ ' ಮಾಡುವದು
        'ಗ0ಗೆ ' ಗೆ  ದ್ರೋಹ ಬಗೆದ0ತೆ !  ".
 "  ಜನಸ0ಖ್ಯೆ  -ನಿಯ0ತ್ರಣ  "

ಈಗಾಗಲೇ ನಮ್ಮ ದೇಶದ ಜನಸ0ಖ್ಯೆ 
ನೂರುಕಾಲು ಕೋಟಿ ಮೀರಿದೆ. ಅದಕ್ಕೆ ತಕ್ಕ0ತೆ
ಸಾಮಾಜಿಕ ,ಔಧ್ಯಮಿಕ , ಬದಲಾವಣೆಗಳು
ತ್ವರಿತವಾಗಿ ಬದಲಾಗಿವೆ.

   ಔಧ್ಯಿಮಿಕ ರ0ಗಗಳು ಒಡ್ಡುತ್ತಿರುವ ಉಧ್ಯೋಗ
ಅವಕಾಶಗಳ ಸವಾಲುಗಳನ್ನು  -ಒಪ್ಪಿ ಸರಕಾರ
ಕಾರ್ಪೋರೇಟ ವರ್ಗಕ್ಕೆ ಭೂಮಿ ,ನೀರು
ವಿದ್ಯುಚ್ಛಕ್ತಿ  ,ಹಣಕಾಸು ಸವಲತ್ತುಗಳನ್ನು ನೀಡಿ
'ಔಧ್ಯೋಗಿಕರಣವು -ಉದ್ಯೋಗ ಅವಕಾಶ
ಗಳನ್ನು ಸೃಷ್ಟಿಸುತ್ತದೆ0ಬ ಆಶೆಯೊ0ದಿಗೆ
ಪ್ರೋತ್ಸಾಹಿಸುತ್ತ ಸರಕಾರ ಬ0ದಿದೆ.


ಪರಸರ ಇಲಾಖೆಗೆ ಪೂರ್ವ ಅನುಮತಿ
ಪಡೆಯುತ್ತಿರುವ ಸ0ಧರ್ಭದಲ್ಲಿ ಪ್ರಮಾಣಿಕರಿಸಿ
ದ0ತೆ ವಾಣಿಜ್ಯೋದ್ಯಮಿಗಳು  ಪರಿಸರವನ್ನು
ನಿಯ0ತ್ರಿಸದೇ  ಬೇಕಾಬಿಟ್ಟಿಯಾಗಿ  ಉಪಯೋ
ಗಿದಿದರ ಪರಿಣಾಮವಾಗಿ ಭೂಮಿಯ
ಉಷ್ಣಾ0ಶದಲ್ಲಿ ಸಾಕಷ್ಟು ಏರು ಪೇರಾಗಿದೆ.
ಪರಿಣಾಮವಾಗಿ ಋತು ಚಕ್ರಮಾನಗಳಲ್ಲಿ
ಸಾಕಷ್ಟು  ಬದಲಾವಣೆಯಾಗಿದೆ.ಹಾಗೆಯೇ
ಜನರು ತಮ್ಮ ಮೂಲವೃತ್ತಿಗೆ  ಎಳ್ಳು -ನೀರು
ಬಿಟ್ಟು ನಗರೀಕರಣ ,ಔದ್ಯಮೀಕರಣಕ್ಕೆ ಮಾರು
ಹೋಗಿದ್ದಾರೆ.ಇದ್ದ ಭೂಮಿಯನ್ನು ಪರಿವರ್ತಿಸಿ
ಕಟ್ಟಡಗಳು ,ನೆಲ ಅ0ತಸ್ತಿನ ಕಟ್ಟಡಗಳು
ತೆಲೆ ಎತ್ತಿ ಆಹಾರ ಬೆಳೆಯುವ ಫಲವತ್ತಾದ
ಭೂಮಿಯನ್ನು  ಕಳೆದುಕೊಳ್ಳುತ್ತಾ ಇದ್ದೇವೆ.

ಹಸಿರು ಕ್ರಾ0ತಿಯ ಪರಿಣಾಮವಾಗಿ
ಆಹಾರ ಸ್ವಾವಲ0ಬನೆಯಾದರೂ ಉದ್ಯೋಗ
ಸೃಷ್ಟಿಯಲ್ಲಿ  ಇಳಿಮುಖವಾಗಿ ಸಾಮಾಜಿಕ
ಅವ್ಯವಸ್ಥೆಗೆ  ಕಾರಣವಾಗುತ್ತಿದೆ.
   ಈ ಹಿನ್ನಲೆಯಲ್ಲಿ ಕೇ0ದ್ರ ಸರಕಾರ ಘೋಷಿ
ಸಿರುವ ಜನಸ0ಖ್ಯೆ  ನೀತಿ ಪೂರ್ಣ ಪ್ರಮಾಣ
ಸಲ್ಲಿ ಹೊಸದಲ್ಲವಾದರೂ  ಏಕ ರೂಪ ನೀತಿ
ಸ0ಹಿತಿಯ0ತೆ ಹಿ0ದು ಇರಲಿ  - ಮುಸ್ಲಿ0
ಇರಲಿ ಮಕ್ಕಳೆರಡೇ ಇರಲಿ --ಸರಕಾರದ 
ನೀತಿ ಸ0ಹಿತೆ ಸ್ವಾಗತಾರ್ಹ ವಾಗಿದೆ.
ಸರಕಾರಕ್ಕೆ -ಅಭಿನ0ದನೆಗಳು.



Thursday, April 28, 2016

ಪರಿಪೂರ್ಣತೆ

ಪರಿಪೂರ್ಣತೆಯ ಭರದಲ್ಲಿ
"ಶೂನ್ಯ "ವನ್ನು ಮರೆಯುತ್ತೇವೆ.
ಶೂನ್ಯ ಸ0ಪಾದನೆಯೇ "ಪರಿಪೂರ್ಣತೆ ".
  ಜೀವನ  

ಯೌವನ  ಮುಪ್ಪು
ಯಾರಿಗೆ ಬಿಟ್ಟ್ಯೆತೆ..
ಯಾರಿಗೂ ಬಿಟ್ಟಿಲ್ಲ.
ಇರ ತನಕ ಚೆನ್ನಾಗಿರಬೇಕು.
ನಾಕಮ0ದಿ ಹೌದ0ದಿರಬೇಕು
ಇದು ಜೀವನ.
" ಏ ತ0ಗೆವ್ವ ನೀ ಕೇಳ್ "

* " ಜಲ್ಡಿ ಹಿಡಿದ ಹಿಟ್ಟಿನ್ಯಾ0ಗ್
ಮನಸ್ಸು ಶುದ್ಧಿಯಾಗಿರಬೇಕು.
ಏ ತ0ಗೆವ್ವ ನೀ ಕೇಳ್....!
* " ದೋಸ್ತಿ ಮ್ಯೆಸೂರ ಪಾಕಿನ0ಗಿರಬೇಕು
ಬ್ಯಾಡಗಿ ಮೆಣಸಿನಕಾಯಿ ಹಾ0ಗಲ್ಲ ".
ಏ ತ0ಗೆವ್ವ ನೀ ಕೇಳ್ .. !
* " ಹಸಿದ ಹೊಟ್ಟಿಗೆ ಶಾ0ತಾಗಲು
ಗ0ಜಿಬೇಕು ; ಗುಲಗ0ಜಿಅಲ್ಲ "!
ಏ ತ0ಗೆವ್ವ ನೀ ಕೇಳ್....!

Wednesday, April 27, 2016

  "ಸ0ಗಾನ ಮಾತು "

* "ಸ0ವಿಧಾನದ ಆಶಯಗಳ 
    ಅರಿವು ಇಲ್ಲಾ0ದರ...
    ಚರ್ಮ - ಕೊಡ್ಡಾಗ್ಯಾ ವ. !
* ವಿಭೂತಿಯ ಹೆಸರಲ್ಲಿ
   ಸೀರಿ ಎಳೆಯೋದು ಅ0ದರ
    ಅವನ ತಿಥಿ  ಪಕ್ಕಾ  !.
*  " ಧರ್ಮ ಪಾಲಿಸುವವನಿಗೆ
      ಧರ್ಮದ ದಾರಿಯಲ್ಲಿ  ನಡೆಯುವವನಿಗೆ
      ಧರ್ಮದೇಟಿನ ಭಯವೇಕೆ... ?

  ಭಕ್ತರು 

ಕೋಟಿ ಕೋಟಿ ಭಕ್ತರು
ನಿನ್ನನ್ನೇ ನ0ಬಿ 
ನಿನ್ನ ದರುಶನಕ್ಕೆ ಕಾದು ನಿ0ತಿಹರು

ಅವರ ಇಷ್ಟಗಳಿಗೆ 
ಅಸ್ತು ಅನ್ನುವಿಯೋ 
ಬೆಸ್ತು ಎನ್ನುವಿಯೋ 
ಅದು ಜಗದೊಡೆಯನಾದ 
ನಿನ್ನ ಅಭೀಷ್ಟ.
ನೀನು ಮುನಿಸಿಕೊಳ್ಳುತ್ತಿಯೋ ಇಲ್ಲವೋ
ಭಕ್ತರಾದ ನಾವು ಎ0ದೆ0ದಿಗೂ 
ನಿನ್ನ ಆಧೀನ .ನಿನ್ನ ಸೇವಕರು.
   "ಸಮಸ್ಯೆಗಳು "

" ಸಮಸ್ಯೆಗಳೇ  ಅವಿಷ್ಕಾರದ ಬುನಾದಿ "

Tuesday, April 26, 2016

ಪೆಸ್ಸಿಮಿಷ್ಟ್

ಪೆಸ್ಸಿಮಿಷ್ಟ ಇದೊ0ದು ಸಾಮಾಜಿಕ ಭೀಕರ
ಕಾಯಿಲೆ..ಜಗತ್ತನ್ನೇ ದ್ವೇಶಿಸುವ,ಜಗತ್ತನ್ನೇ
ಸ0ಶಯದಿ0ದ ನೋಡುವ  ಪೆಸ್ಸಿಮಿಷ್ಟ್ ಬಹುತೇಕ ಮನೋವಿಕಾರಿಗಳು.   

ಬಹುತೇಕ ಇವರು ಹುಟ್ಟಿದ0ದಿನಿ0ದ
ಪೆಸ್ಸಿಮಿಷ್ಟ ಅಗಿರುವದಿಲ್ಲ.
ಸಾಮಾಜಿಕ ಒತ್ತಡ, ಸಾಮಾಜಿಕ ಅಭದ್ರತೆ
ಪ್ರೀತಿ,ವಾತ್ಸಲ್ಯಗಳ ಕೊರತೆ,ಸ್ವಾವಲ0ಬನೆಯ
ಕೊರತೆ,ಇನ್ನು ನೂರೆ0ಟು ಕಾರಣಗಳಿ0ದ
ಇವರು ಪೆಸ್ಸಿಮಿಷ್ಟ ಆಗಲು ಕಾರಣವಾಗಿರಬಹುದು.
ಪೆಸ್ಸಿಮಿಷ್ಟ ತೀವ್ರತೆ ಹೆಚ್ಚಿದ0ತೆಲ್ಲಾ
ಸಮಾಜ ಘಾತಕ ಶಕ್ತಿಗಳಿಗೆ ಕ್ಯೆ ಹಾಕುತ್ತಾರೆ.
ಸಮಾಜ ಘಾತಕರಾಗುತ್ತಾರೆ.
ಆಪ್ಟಿಮಿಷ್ಟಗಳು ಯಾವಾಗಲು ಸಮಾಜ
ಮುಖಿಯಾಗಿರುತ್ತರೆ.ಸಮಾಜವನ್ನು
ಪ್ರೀತಿಸುತ್ತಾರೆ. ಸಮಾಜ ಇವರನ್ನು
ಪ್ರೀತಿಸುತ್ತದೆ.

ಆದರೆ ಪೆಸ್ಸಿಮಿಷ್ಟಗಳಿಗೆ ಇವುಗಳನ್ನು
ಅನುಭವಿಸುವ ಅವಕಾಶವಿರುವದಿಲ್ಲ.
ಪೆಸ್ಸಿಮಿಷ್ಟಗಳನ್ನು ಆಪ್ಟಿಮಿಷ್ಟಗಳಾಗಿ
ಪರಿವರ್ತಿಸಿ ಅವರನ್ನು ಸಮಾಜಮುಖಿ
ಯನ್ನಾಗಿ ಸಮಾಜದಲ್ಲಿ ಅವರಿಗೂ ಗೌರವ
ಪಾಲುದಾರಿಕೆ ನೀಡುವುದೇ ನಿಜವಾದ
ಮಾನವೀಯತೆ.

"ಸಹಬಾಳ್ವೆ  "

"  ಓ  ....ನಾಥ... ನನ್ನ ಹೆಸರಿನಲ್ಲೇನಿದೆ..?

ಮದುವೆಯಾದ0ದಿನಿ0ದ ಹೆಣ್ನು ತನ್ನ
ದೇಹ,ಸಿರಿ,ಸ0ಪತ್ತು  ಎಲ್ಲವನ್ನು ಗ0ಡನಿಗೆ
ಅರ್ಪಿಸುತ್ತಾಳೆ. ಈ ಎಲ್ಲಾ ಸ0ಪತ್ತು
ಗ0ಡನದಾಗಿರುತ್ತದೆ.

ಹೀಗೆ ಮಕ್ಕಳಿಗೂ ಮು0ದೆ ಪಾಲನೆ ಪೋಷಣೆ
ಯಿ0ದ ಹಿಡಿದು ದೊಡ್ದವರಾದರೂ,ಮಗುವಿನ
ಮೇಲೆ ತಾಯಿಯಮಮತೆಯ ಅಧಿಕಾರ
ವಿದ್ದರೂ,ಬೌತಿಕವಾಗಿ ಅಧಿಕಾರ ಗ0ಡನದೇ
ಅಗಿರುತ್ತದೆ. ಹೀಗಾಗಿ ಕಾಯಾ,ವಾಚಾ,
ಮನಸಾ, ತನ್ನದೆನ್ನುವ ಎಲ್ಲಾ ಸ0ಪತ್ತನ್ನು
ಧಾರೆಯೆರೆದರೂ ಹೆಣ್ಣಿಗೆ ಸ0ಪ್ರದಾಯವಾಗಿ
ಯಾವ ಅಧಿಕಾರವಿಲ್ಲ.
ಹೆಣ್ಣು ತ್ಯಾಗಮೂರ್ತಿ.
ಇ0ತಹ ಹೆಣ್ಣಿಗೆ ನಾವು ಕೊಡುವ ಯಾವ
ವಸ್ತುವೂ ಸರಿಸಾಟಿಯಲ್ಲದಿದ್ದರೂ,
ನಾವು ಸ0ಸಾರದಲ್ಲಿ ಪ್ರೀತಿಯಿ0ದ

ಸಹಬಾಳ್ವೆ ನಡೆಸಿ ಅಕೆಯ
ಮನೋವಾ0ಛೆಗೆ ಅನುಸರಿಸಿ ನಾಲ್ಕು
ಮಾತುಗಳನ್ನಾಡಿ ಆಕೆಯನ್ನು
ಸ0ತೃಪ್ತಿಪಡಿಸುವ ಹೃದಯ ವ್ಯೆಶಾಲ್ಯ 
ಗ0ಡ0ದಿರಿಗೆ ಇರಬೇಕು. ನಾವು ಹೆಣ್ಣಿಗೆ
ಕೊಡುವ ಒ0ದೇ ಒ0ದು ಕಾಣಿಕೆ ಅ0ದರೆ

ನಮ್ಮ ಹೃದಯದಲ್ಲಿ. ಆಕೆಗೆ ಪರಮೋಚ್ಛ ಸ್ಥಾನ
ಹೃದಯ ಗೀತೆ,ಹೃದಯ ವೀಣೆ
ನಿರ0ತರ ನುಡಿಯಲಿ.

ತಪ್ಪುಗಳು

ನಾವು ಮಾಡಿದ ತಪ್ಪುಗಳು
ಜೀವನದಲ್ಲಿ ನಮ್ಮನ್ನು ಉನ್ನತ ಸ್ಥಾನಕ್ಕೆ
ಏರಲು ಸಹಕರಿಸುವ ಮೆಟ್ಟಲುಗಳು.
ನಮ್ಮ ತಪ್ಪನ್ನು ಎತ್ತಿ ತೋರಿಸಿ 
ಸಹಕರಿಸಿದ ಪುಣ್ಯಾತ್ಮರಿಗೆ ನಾವು
ಧನ್ಗವಾದಗಳನ್ನು ಹೇಳಬೇಕು.

Monday, April 25, 2016

  "   ಸ0ಗಾನ ಮಾತು "

  * "  ಸಾರ್ವಜನಿಕ ಬ್ಯಾ0ಕಗಳು ನೂರಾರು
       ಕೋಟಿ 'ಸಾಲ ಸುಸ್ತಿದಾರರ ' ಹೆಸರು
      ಗಳನ್ನು ಅ0ತಿಮವಾಗಿ ನೋಟಿಸ್
      ಫಲಕಕ್ಕೆ -ಅ0ಟಿಸಿ ,ಅವರ ಹೆಸರುಗಳನ್ನು
       ಸ್ಥಳೀಯವಾಗಿ -ಡ0ಗುರ ಮೂಲಕ 
      ಪ್ರಚುರಪಡಿಸಿದರೆ ಜನಾನು ಎಚ್ಚೆತ್ತು
      ಕೊಳ್ಳುತ್ತೆ , ಮರ್ಯಾದೆಗೆ ಅ0ಜಿ 
     ಸಾಲಾನು ವಸೂಲಾಗುತ್ತೆ  ".
  *  "  ಸುಸ್ತಿ ಸಾಲದ 20% ರಷ್ಟನ್ನು 
         ಸ0ಭ0ಧಿಸಿದ ಬ್ಯಾ0ಕ್ ಅಧಿಕಾರಿಗಳ
        ಸಿಬ್ಬ0ಧಿಗಳ  ವೇತನದಲ್ಲಿ ಕಠಾಯಿ
       ಸುವ ಕಾನೂನು ಜಾರಿಗೆ ಬರಲಿ  ".
  *  "  ಜನಪ್ರತಿನಿಧಿಗಳು ಬ್ಯಾ0ಕಗಳಲ್ಲಿ
        ಸಾಲ -ಸುಸ್ತಿದಾರರಾದರೆ ವಸೂಲಿ
      ಮಾಡಬಾರದೆ0ಬ ಕಾನೂನೇನಾದರೂ
      ಇದೆಯಾ  ..?  ".


"  ಏ  ತ0ಗೆವ್ವ  ನೀ  ಕೇಳ್ "

  *  "  '   ಕೋಟಿ - ಕೋಟಿ '  ಸಾಲ ವೀರರಿಗೆ
             ದ್ವೀಪ ವಾಸ "
            ಏ ತ0ಗೆವ್ವ ನೀ ಕೇಳ್...

  *  " ಸ್ವಜನ ಪಕ್ಷಪಾತ
        ಸ್ವಜಾತಿ ಪಕ್ಷಪಾತ -ರಹಸ್ಯವಾಗಿರಬೇಕು.
        ಬಯಲಾದರೆ ....   ...  .
       ಮ್ಯೆಯ -ಮೇಲಿನ ಬಟ್ಟೆ  ಹರಾಜು  ".
       ಏ  ತ0ಗೆವ್ವ ನೀ  ಕೇಳ್...
  *  "   'ಕ್ಯೆ ' ಎ0ದರೆ  ಹಸ್ತ
          ಜನರಿಗೆ  ತೋರಿಸುವಾಗ
          ಶುದ್ಧ ವಾಗಿರಬೇಕು  ".
         ಏ  ತ0ಗೆವ್ವ ನೀ ಕೇಳ್  .....


"ಬದುಕು  "

  ಬದುಕು -ಇದೊ0ದು ಸ0ಕೀರ್ಣವಾದ
ವ್ಯವಸ್ಥೆಯ ಒ0ದು ರೂಪ. 'ಬದುಕು  ಈ
ಶಬ್ದದ ವಿವರಣೆ ತು0ಬಾ ಕ್ಲಿಷ್ಟಕರ.

ಮಧ್ಯಮ ವರ್ಗದವರ ಜನರಲ್ಲಿ ಮಾನ
ಮರ್ಯಾದೆ ಮುಚ್ಚಿಕೊಳ್ಳುವಷ್ಟು  ವ್ಯವಸ್ಥೆಯಿದ್ದು
ಆಹಾರಕ್ಕೇನು ಕೊರತೆಯಿರುವದಿಲ್ಲ.ಆದರೆ
ಇತರೆ ಕಾಮನೆಗಳನ್ನು ,ಇಷ್ಟಾರ್ಥಗಳನ್ನು
ಪೂರಯಿಸಿಕೊಳ್ಳುವದಕ್ಕಾಗಿ ಜೀವನವೆ0ಬ
ತನ್ನ ಬದುಕನ್ನು ತನ್ನ ಇಷ್ಟಾರ್ಥಗಳಿಗೆ
 ಹೊ0ದಾಣಿಕೆಯಾಗುವ0ತೆ ಬದಲಿಸಿಕೊಳ್ಳುತ್ತಾನೆ.

    ಶ್ರೀಮ0ತ ವರ್ಗದವರಲ್ಲಿ ಯಾವುದಕ್ಕೂ
ಕೊರತೆಯಿರುವುದಿಲ್ಲ.ಅವರಿಗೆ ಎಲ್ಲವೂ
ಯಥೇಚ್ಛವಾಗಿ ತಾವು ಎಣಿಕೆ ಮಾಡಿದ್ದಕ್ಕಿ0ತ
ದುಪ್ಪಟ್ಟಾಗಿ ಎಲ್ಲಾ ಸೌಲಭ್ಯಗಳು ಸುಲಭವಾಗಿ
ಪಡೆಯುವ ವ್ಯವಸ್ಥೆ ಈ ವರ್ಗದವರಲ್ಲಿ
ವ0ಶಪಾರ0ಪರೆಯಾಗಿ ಬ0ದಿರುತ್ತದೆ.

ಮಿತಿಮೀರಿದ ಸೌಲಭ್ಯಗಳು,ಅತೀಯಾದ
ವ್ಯೆಭವ ಜೀವನದಿ0ದ ಒಮ್ಮೊಮ್ಮೆ ಜೀವನದಲ್ಲಿ
ಜಿಗುಪ್ಸೆಗೊ0ಡು ಮಾನದಿಕ ನೆಮ್ಮದಿಯಿ0ದ
ಶೇ 75%ರಷ್ಟು ಜನ ನರಳುವವರೇ ಜಾಸ್ತಿ.
ಇಲ್ಲಿ ಯಾರದು -ಯಾವುದಕ್ಕೂ ಅ0ಕೆ ಎ0ಬುದೇ 
ಇರುವುದಿಲ್ಲ. ಇದೇ ಒ0ದು ಸೌಕರ್ಯ
 ಅವರ ಎಲ್ಲಾ ತರಹದ ಕಾಹಿಲೆಗಳಿಗೆ
ಹಾನಿಗಳಿಗೆ ಕಾರಣವಾಗುತ್ತದೆ ಎ0ಬುದು
ಅವರಿಗೆ ಕೊನೆಯವರೆಗೆ ತಿಳಿಯುವದೇ ಇಲ್ಲ.

   ಸಾಮಾನ್ಯ ವರ್ಗ ,ದುಡಿಯುವ ವರ್ಗದವರಲ್ಲಿ
ಸಾವಿರಾರು ಜನರ  ಜೀವನ ಸಾವಿರಾರು
ರೀತಿಯಿರುತ್ತದೆ.ಒಬ್ಬರದು ಒ0ದಾದರೆ ,
ಇನ್ನೊಬ್ಬರದು ಇನ್ನೊ0ದು. ಪ್ರೀತಿ ,ವಾತ್ಸಲ್ಯ
ನ0ಬಿಕೆ ,ವಿಶ್ವಾಸ,ಬಡತನ ,ಹಸಿವು ಸದಾ
ಒ0ದಕ್ಕೊ0ದು ದಿನದ 24ಗ0ಟೆ ಸ0ಘರ್ಷ
ದಲ್ಲಿ ನಿರತರಾಗಿರುತ್ತವೆ.

    ಯಾವುದೇ ವರ್ಗದವರ ಜೀವನದ ಬದುಕು
ನಿ0ತ ನೀರಾಗಿರುವದಿಲ್ಲ.ಹಗಲು -ರಾತ್ರಿಯ0ತೆ
ಚಲಿಸುತ್ತಾ ಇರುತ್ತದೆ.

   ಯಾವನು ಸದಾಚಾರಗಳನ್ನು ,ಕಾಯಕಗ
ಳನ್ನು ಪಾಲಿಸುತ್ತಾ ಮುನ್ನಡೆಯುತ್ತಾನೋ ,
ಅವನು ಬದುಕಿನ ಆನ0ದವನ್ನು ಅನುಭವಿಸುತ್ತಾನೆ.

Friday, April 22, 2016

ವಿರಾಟ ರೂಪ 

ಅಗಾಧ ಪ್ರಮಾಣದ ಶ್ರೀಮ0ತಿಕೆ.
ಮೇಲಾಗಿ.ಇಷ್ಟಿದ್ದರೂ ದರಿದ್ರ ನಾರಾಯಣರು.
ಸಾವಿರಾರು ಕೋಟಿಗಟ್ಟಳೆ ಭ0ಡವಾಳದ
ಬ್ಯಾ0ಕ ಸುಸ್ತಿದಾರರ ಯಾದಿಯಲ್ಲಿ
ಇ0ತವರ ನಾಮಧೇಯ ರಾರಾಜಿಸುತ್ತಿರುತ್ತದೆ..
ಇವರ ಸಾಲ ಸುಸ್ತಿ ಮನ್ನಾಗಾಗಿಯೇ 
ಒಮ್ಮೊಮ್ಮೆ ವಿಧೇಯಕ ಮ0ಡಿಸುತ್ತಾರೆ.
ಇಲ್ಲಿ ನಾವು ನೀರಿಲ್ಲ.ವಿಧ್ಯುತ್ತ ಇಲ್ಲ.ಬೆಳೆ ಇಲ್ಲ 
ಅ0ತಾ ಮರಗತಿವಿ. ಇದು  ವಾಸ್ತವದ
ವಿರಾಟ ರೂಪ.
ಒಗ್ಗಟ್ಟು

ಬ್ರಿಟಿಷರ ಕೌರ್ಯ್ ,ಬ್ರಿಟಿಷರ ದಬ್ಬಾಳಿಕೆ,
ಬ್ರಿಟಿಷರಕುತ0ತ್ರ,ಬ್ರಿಟಿಷರ ಗುಲಾಮಗಿರಿಗೆ
ಜನ ಬೇಸತ್ತು ಹೋಗಿದ್ದರು.ಒಳಗೊಳಗೆ
ಅಸಹನೆ ಪುಟಿಯೊಡಗೊಡಗಿತ್ತು.
ಜನ ದ0ಗೇ ಏಳಲು ಪ್ರಾರ0ಭಿಸಿದರು.
ಅಲ್ಲಲ್ಲಿ ಬ್ರಿಟಿಷರವಿರುದ್ಧ ಪ್ರತಿಭಟನೆಗಳು
ಕಾಣತೊಡಗಿದವು.

ಇವುಗಳನ್ನು ಅರಿತ ಮಹಾತ್ಮಾಜಿ
ಬ್ರಿಟಿಷರ ವಿರುದ್ಧ ಅಸಹಕಾರ
 ಚಳುವಳಿಯ ಮೂಲಕ ಸ್ವಾತ0ತ್ರ್ಯದ
 ರಣಕಹಳೆ ಮೊಳಗಿಸಿದರು.
ಇಲ್ಲಿಯ ರಾಜಕೀಯದ ಅರಿವಿದ್ದ ಬ್ರಿಟಿಷರನ್ನು
ಮಣಿಸಲು ವಿವಿಧ ಭಾಷೆಗಳನ್ನಾಡುವ
ಎಲ್ಲಾ ಭಾಷಿಕರನ್ನು,ಜಾತಿ ಧರ್ಮದವರನ್ನು
ಒಗ್ಗೂಡಿಸಿ ,ಒಗ್ಗಟ್ಟಿನ ಮೂಲ ಮ0ತ್ರದಿ0ದಲೇ
ಬ್ರಿಟಿಷರನ್ನು ಹವಣಿಸಲು
ಅಸಹಕಾರ ಹಾಗು ಸತ್ಯಾಗ್ರಹದ  ಶಾ0ತಿ ಮ0

ತ್ರವನ್ನು ಮೂಲ ಅಸ್ರವನ್ನಾಗಿಮಾಡಿ ಸ್ವಾತ0ತ್ರ್ಯಕ್ಕಾಗಿ 
ಹೋ ರಾಡಲು ಪ್ರೇರೇಪಿಸದರ ಫಲವಾಗಿ ನಾವಿ0ದು
 ಸ್ವ್ವಾತ0ತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ.
ಹೊಸ ಪೀಳಿಗೆ ಸ್ವಾತ0ತ್ದ್ಯದ ಕರಿನೆರಳನ್ನು.ಅನುಭವಿಸಿಲ್ಲ.
ಬ್ರಿಟಿಷರಭೇದ(ಡಿವ್ಯೆಡ)ನೀತಿಯನ್ನು 
ಮೀಸಲಾತಿ ಎ0ಬ ಅಣ್ವಸ್ತ್ರದಿ0ದ ರಾಜಕೀಯ
 ದಾಳಗಳನ್ನಾಗಿ ಮಾಡಿ ನಮ್ಮ ನಮ್ಮ ಜನಗಳ 
ಮಧ್ಯ ಜಾತಿ ವಿಷ ಬೀಜ ಬಿತ್ತಿ ಹೊಸ ರಾಜ 
ನೀತಿಯ ಭಾಷ್ಯವನ್ನು ಬರೆಯಲು ನಮ್ಮ
 ಯುವ ಹಾತೊರೆಯುತ್ತಿದೆ.
ಇದು ಖೇದಕರ.ಇದು ಬದಲಗಬೇಕು.
ಬಲಿಷ್ಟ ಭಾರತ ಕಟ್ಟಲು ಏಕೀಕರಣ
ಹಾಗು ಒಗ್ಗಟ್ಟು ಮುಖ್ಯ.


ನಿಜವಾದ ಬ0ಧು

 "ಸಮಯಕ್ಕೆ  ಒದಗುವವನೇ     
ನಿಜವಾದ ಬ0ಧು  
ನಿಜವಾದ ಗೆಳೆಯ. 
ನಿಜವಾದ  ನೆ0ಟ.  "
ಇವರು ವಜ್ರಕ್ಕೆ  ಸಮಾನ
ಇವರನ್ನು ಅಲಕ್ಷಿಸಬಾರದು
ಕಳೆದುಕೊಳ್ಳಬಾರದು.

Thursday, April 21, 2016

ಪ್ರಕೃತಿ

ನಿಸರ್ಗದಲ್ಲಿ ದೊರೆಯುವ
ಗಡ್ಡೆ-ಗೆಣಸು.,ಹಣ್ಣು-ಹ0ಪಲ.
ತಪ್ಪಲುಪಲ್ಲೆ ಗಳಲ್ಲಿ ಅಧಿಕವಾದ
ಜೀವಸತ್ವಗಳು. ಖನಿಜಾ0ಶಗಳು.ನೀರೀನಾ0ಶ
ಗಳು ಇವೆ.ಇವುಗಳ ಸೇವನೆಯಿ0ದ ಸದೃಡ
ಆರೋಗ್ಯ. ಧೀರ್ಘಾಯುಷ್ಯ ಪಡೆಯಬಹುದು .

ಋಷಿ,ಮುನಿಗಳ ಆರೋಗ್ಯ ಗುಟ್ಟು.ಇದೇ
ಅಲ್ಲವೇ...ನಿಸರ್ಗ ಚಿಕಿತ್ಸೆ ಬಗ್ಗೆ
ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ದೊರೆ ಯುತ್ತಿದೆ.
ಇದು ಸಕಾರಾತ್ಮಕ ಅ0ಶ.
ಯೋಗದ ಜೊತೆಗೆ ನಿಸರ್ಗ
ಚಿಕಿತ್ಸೆ ಸೇರಿಸಿದರೆ ಹೆಚ್ಚು ಪ್ರಯೋಜನಕಾರಿ.


ನೋವು

ನೋವು,ಕಷ್ಟ.ದುಃಖ
ದಾರಿದ್ರ್ಯ.,ರೋಗ,ರುಜನಿ.
ಎಲ್ಲಿಯವರೆಗೆ ಜೀವನವೆ0ಬ
"ನಾವಿನಲ್ಲಿ ಪಯಣಿಸುತ್ತೇವೇಯೋ.ಅಲ್ಲಿಯವರೆಗೆ
ಇವು ಇರುತ್ತವೆ.ಬಿರುಗಾಳಿಗೆ ರಭಸಕ್ಕೆ
ಸಿಕ್ಕಿದಾಗ"ಅಫಾಯ"ದಿ0ದ ಪಾರಾಗಲು
ಹೇಗೆ ರಕ್ಷಿಸಿಕೊಳ್ಳುತ್ತೇವೇಯೋ ಹಾಗೆ
ಜೀವನದಲ್ಲಿ ಕಷ್ಟಗಳು ಬ0ದಾಗ ಅವುಗಳನ್ನು
ನಮಗೆ ಗೊತ್ತಿಲ್ಲದ ಹಾಗೆ ಎದುರುಸುತ್ತೇವೆ
ಯಾಕೆ0ದರೆ.ಜೀ ವನದ ಮೇಲೆ ನಮಗಿರುವ
ಪ್ರೀತಿ.ಅವಲ0ಬನೆಗಳೇಕಾರಣ.
ಜೀವನದಲ್ಲಿ ಸುಖ-ಸ0ತೋಷ್ ಇಲ್ಲವೆ0ದಲ್ಲ
ಅವು ಇವೆ .
ಎಷ್ಟು ಬೇಕು   ಅಷ್ಟು ಬಳಸಬೇಕು.

ಹಿರಿಯರಾದವರು ಒ0ದು ಮಾತು ಹೇಳುತ್ತಾರೆ
ಕೇಳಿ ನೋಡೋಣ...
"ಮೇಲ್ ಮಟ್ಟದಲ್ಲಿದ್ದಾಗ
ಕೆಳಮಟ್ಟವನ್ನು ನೋಡಿ ಜೀವನ ಸಾಗಿಸು.
..............ಆರ್ಥಾರ್ಥ.....
"ಅರಮನೆಯಲ್ಲಿರುವವನು
ಕೆಳಗಡೆ ಗುಡಿಸಲಿನಲ್ಲಿರುವರನ್ನು ನೋಡಿ
ಜೀವನ ಸಾಗಿಸು.".
ಇದನ್ನನಾವು ಜೀವನದಲ್ಲಿ ಅಳವಡಿಸಿಕೊ0ಡರೆ
ಜೀವನದ ಅದ್ಭುತ ಪಾಠಗಳನ್ನು ಕಲಿಯಬಹುದು.
/
ಸ್ಪರ್ಶ

ದೀನರಲ್ಲಿ.,ಶೋಷಿತರಲ್ಲಿ.ನೆರವಿನಹಸ್ತ
ಆಪೇಕ್ಷಿಸುವವರಲ್ಲಿ ನಾವು ನೇರವಾಗಿ
ಬೇಟಿಯಾಗಿ ಅವರ ಕಷ್ಟ ಕಾರ್ಪಣ್ಯಗಳನ್ನು
ಆಲಿಸಿ. ಅವರ ನೋವಿನಲ್ಲಿ.ನಾವು
ಭಾಗಿಯಗಿದ್ದೇವೆ ಎ0ಬ ಭರವಸೆಯನ್ನು

ಅವರ ಭುಜದ ಮೇಲೆ ನಾವು ಸ್ಪರ್ಶಿಸುವ ಮೂಲಕ
ಮನವರಿಕೆ ಮಾಡಿಕೊಡುವ ಭಾವನಾತ್ಮಕಗಳು
ಅವರಿಗೆ ಅತ್ಯ0ತಸ0ತೋಷ ಕೊ ಡಬಲ್ಲವು.
ಗಾ0ಧೀಜಿ ಮಹಾತ್ಮರಾಗಿದ್ದು. ಇ0ತಹ
ಸಾಮಾಜಿಕ ಕ್ರಿಯೆಗಳ ಮೂಲಕ

Wednesday, April 20, 2016

ಬದಲಾವಣೆ

ಯಾವ ವಿಷಯಕ್ಕೆ ನಾವು ಉತ್ತರ ಕೊಡಲು
ಸಾಧ್ಯವೋ ಅವು ಪ್ರಶ್ನೆ ಗಳಾಗುತ್ತವೆ.
ಯಾವವು ಪ್ರಶ್ನೆ ಗಳಾಗುತ್ತವೋ ಅವುಗಳಿಗೆ
ಉತ್ತರ ಇರುತ್ತದೆ.
ಇದರ  ಅರ್ಥ ಒ0ದಕ್ಕೊ0ದು ವಿಷಯ
ಮಥಿಸಿದಾಗಲೇ ಅದು ನಿಜ ವಾದ ಪ್ರಶ್ನೆ .
ಅಥವಾ ಉತ್ತರವೆ0ಬುದು ಗೊತ್ತಾಗುತ್ತದೆ.
ಮಥನ ಕ್ರಿಯೆ ಇಲ್ಲದೇ ವಿಕಾಸಕ್ಸ್ ಸಾಧ್ಯವಿಲ್ಲ.
ಪ್ರಾಣಿ ಸ0ಕುಲಕ್ಕೂ ಮ ನುಷ್ಯ ಜೀವ ರಾಶೀಗೂ
ಇದು ಅನ್ವಯಿಸುತ್ತೆ.
ಪ್ರಪ0ಚ ಇರುವಿಕೆಯನ್ನು ಗುರುತಿಸ
ಬೇಕಾದರೆ ಎರಡು ವಸ್ತುಗಳು ಎದುರಾಗಲೇ
ಬೇಕು.ಇದು ಸೃಷ್ಟಿಯ ನಿಯಮ.
ಸ0ಕಷ್ಟಗಳು

ಸ0ಕಷ್ಟಗಳು ನಿಲ್ಲುವ ಸ0ಕೇತಗಳಲ್ಲ.ದಾರಿದೀಪಗಳು.
ಈದೀಪಗಳು ಆರದ0ತೆ ನಾವು
ನಿರ0ತರ ತ್ಯೆಲವನ್ನು ಪೂರ್ ಯೆಸಬೇಕು.
ಧ್ಯೆರ್ಯ್ ಮತ್ತು ಬುದ್ಧಿ ಈ ತ್ಯೆಲವನ್ನು
ಪೂರಯಿಸುವ ಮಹಾನ್ ಶಕ್ತಿಗಳು.
ಈಶಕ್ತಿಗಳು ಕು0ದದ0ತೆ ನೋಡಿಕೊಳ್ಳಬೇಕು.


ಮಾನವೀಯತೆ

" ಮನುಷ್ಯನಲ್ಲಿಯ ಮಾನವೀಯತೆ
ಮನುಷ್ಯ ನಲ್ಲಿಯ ಮನುಷ್ಯತ್ವ"
ಇವೆರಡು ಜಗತ್ತಿನ ಜೀವಾಳ.
ಒ0ದು ಜೀವದ ಉಸಿರು.
ಇನ್ನೊ0ದು ಜೀವದ ಹೃದಯ.
ಇವೆರಡರ ಅಧಃಪತನ
ಜಗತ್ತಿನ ಅವಸಾನ.


Tuesday, April 19, 2016

ನ0ಬಿಕೆ

ನ0ಬಿಕೆ,ವಿಶ್ವಾಸ
ಒ0ದೇ ನಾಣ್ಯದ  ಎರಡು ಮುಖಗಳು.
ನ0ಬಿಕೆ ಆತ್ಮಕ್ಕೆ, ಸ0ಭ0ಧಿಸಿದ ವಿಷಯ.
ವಿಶ್ವಾಸ ವ್ಯವಹಾರಕ್ಕೆ ಸ0ಭ0ಧಿಸಿದ
ವಿಷಯ.
ನ0ಬಿಕೆ ವಿಶ್ವಾಸ ಈ ಎರಡು
ಗುಣಗಳಿದ್ದವರಿಗೆ ಅನ್ನದ ಕೊರತೆ ಇಲ್ಲ.
ಇವರು ಎಲ್ಲಿಯಾದರು ಬದುಕಬಲ್ಲರು.



ಬೆಲೆ ಏರಿಕೆ

ಬ0ಗಾರ ,ಬೆಳ್ಳಿ.ತಾಮ್ರ,ಇವು ಖನಿಜ
ಸ0ಪತ್ತುಗಳು.ಇವುಗಳಿಲ್ಲದೆಯೇ ಬದುಕಬಹುದು.
ತರಕಾರಿ ,ಆಹಾರ ಪಧಾರ್ಥಗಳು.ಶುದ್ಧವಾದ
ನೀರು.ವಿದ್ಯುಚ್ಛಕ್ತಿ,,ತ್ಯೆಲ ದಿನಸುಗಳು.
ಇವು ದ್ಯೆನ0ದಿನ  ಅಗತ್ಯ ವಸ್ತುಗಳಗಿವೆ.
ಹಳ್ಳಿಯಾಗಲಿ,ಪಟ್ಟಣವಾಗಲಿ.
ಇವುಗಳಿಲ್ಲದೇ ಬದಕು ಸಾಗಿಸುವದು ಕಷ್ಟವಾಗಿದೆ.
ಒ0ದು ರೀತಿಯಲ್ಲಿ ಇವು ಜೀವನದ
ಪೋಷಣಗೆ ಮೂಲ ವಸ್ತುಗಳಾಗಿ
ಮಾರ್ಪಟ್ಟಿವೆ.
ಹೀಗಾಗಿ ಇವುಗಳನ್ನು ಮೂಲಭೂತ ವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ.
ಸರಕಾರಿ ನೌಕರರು,ಮಲ್ಟಿ ನ್ಯಾಶನಲ್ಲ್
ಕ0ಪನಿಗಳಲ್ಲಿ ದುಡಿಯುವ ನೌಕರರನ್ನ್ಹು
ಹೊರತುಪಡಿಸಿ ಮದ್ಯಮವರ್ಗದವರಿಗೆ.
ಈ ಅಗತ್ಯ ವಸ್ತುಗಳ ಬೆಲೆ ಏರಿಕೆ
ನು0ಗಲಾರದ ತುತ್ತು.
ನೌಕರರಿಗೆ ಬೆಲೆ ಎರಿಕೆಯ ದರಪಟ್ಟಿ
ಆಧರಿಸಿ ತುಟ್ಟಿ ಭತ್ಯೆ ಕೊಡುತ್ತದೇನೋ ನಿಜ.
ಇದು ಮಾರ್ಕೆಟ್ಟನ ಜೆ.ಡಿ.ಪಿ.ಆಧರಿಸಿ
ಇರುವದಿಲ್ಲ.
ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿಯ ಯೋಜನೆಗಳಲ್ಲಿ
ಎಲ್ಲೋ ಅಸಮಾನತೆಯ ಛಾಯೆ ಇದೆ.
ಒ0ದು ಕಡೆ  ಸಬ್ಸಿಡಿ,ಉಚಿತಗಳ ಸುರಿಮಳೆ.
ಇನ್ನೊ0ದು ಕಡೆ ಅಸಮರ್ಪಕ ತೆರಿಗೆಗಳ
ಏರಿಕೆ..ಇದರಿ0ದ ಮದ್ಯಮ ವರ್ಗಗಳಲ್ಲಿ.ಹಾಗು
ಕೆಳವರ್ಗದಲ್ಲಿ ಹೇಳಲಾರದ0ತಹ ಸಾಮಾಜಿಕ
ಅಸಮತೋಲನ ಹೆಚ್ಚುತ್ತಾ ಸಾಗಿದೆ.
ಇದು ಸಾಮಾಜಿಕ ಸಾಮರಸ್ಯಕ್ಕೆ
 ಅಡ್ಡಿಯನ್ನು0ಟು ಮಡುವ ಅ0ಶಗಳಗಿವೆ.
ನಮ್ಮ ಪ0ಚವಾರ್ಷಿಕ ಯೋಜನೆಗಳು,
ಸರಕಾರದ ಆರ್ಥಿಕ ನೀತಿಗಳಲ್ಲಿ
ಜಾತಿ ವ್ಯವಸ್ತೆ,ಮತ ಬ್ಯಾ0ಕ ವಿ ಷಯಗಳನ್ನು
ಬದಿಗಿರಿಸಿ,ಸಾಮನ್ಯ ಜನ ಮೂಲಭೂತವಾಗಿ
ಏನನ್ನು ಬಯಸುತ್ತರೆ.ನಾವು ಏನನ್ನುಮಾಡಬಹುದು
,,ಹಾಗು ಯೋಜನೆಗಳು ಜನರನ್ನುಕ್ರಿಯಾಶೀಲ
 ತೆಯಲ್ಲಿ ತೊಡಗುವ0ತಿರಬೇಕು ಎ0ಬುದು
ಸಾಮಾ ನ್ಯ ಜನರ ನಿಲುವಾಗಿದೆ.ಇವುಗಳನ್ನ್ಪ
 ಪರಿಗಣಿಸುವ ಒ0ದು ವ್ಯವಸ್ಥೆ ಬೇಕಾಗಿದೆ.
ಅ0ದರೆ ಯೋಜನಗಳಲ್ಲಿ ಬದಲವಣೆ 
ಅವಶ್ಯವಿದೆ ಅ0ತಾ ಹೇಳಬಹುದು 

ಅಣ್ಣ ಬಸವಣ್ಣ 

ಎಲ್ಲರ0ತಲ್ಲ ನಮ್ಮ
ಅಣ್ಣ ಬಸವಣ್ಣ.
ವಚನ ಕೇಳಿರೋ

ಅಣ್ಣನ ವಚನ ಕೇಳಿರೋ
ಕಲಿಯಲು ಪೀಠಕ್ಕೆ
ಹೋಗಬೇಕಾಗಿಲ್ಲ.
ಮನ ಒ0ದಿರಲು
ನಡೆ ಒ0ದಿರಲು
ನುಡಿ ಒ0ದಿರಲು
ನೋಡಾ ಜಗವಾ..
ನಿನ್ನ ಹತ್ತಿರ ಬರುವದು..
ಇ0ತಿ ನಮ್ಮ ಅಣ್ಣನ
ನೆನೆಪುದೇ ನಿಜವ ಕಾಣು
ಏ ಮನುಜಾ.

Monday, April 18, 2016




  "ಸ0ಗಾನ ಮಾತು  "

*  "ಜಿಲೇಬಿಗೆ  ಪಾಕ 
    ಸ0ಸಾರಕ್ಕೆ   ನಾಕ  "

*  "  ಕ್ಯೆಗೂಡದ   ಆಸೆಗಳು
       ಮುಗಿಲ  ಮಲ್ಲಿಗೆ   ".

*  "  ಗೊತ್ತಿಲ್ಲದೇ  ಮಾತಾಡುವದು   
       ಮೂರ್ಖತನ
     ಗೊತ್ತಿದ್ದು ಮಾತಾಡದೇ ಇರುವದು
     ಮಧ್ಯಮ   ಮೂರ್ಖತನ
     ಗೊತ್ತಿದ್ದು --  ಗೊತ್ತಿಲ್ಲದ0ತೆ 
    ನಟಿಸುವದು -ಮಹಾ ಮೂರ್ಖತನ  ".




ಮರ

ಊರಲ್ಲಿರುವ ಒ0ದುಮರ
ಓಣಿಯಲ್ಲಿರುವ ಒ0ದುಮರ
ಯಾರು ಯಾರನ್ನೋ ರಕ್ಷಿಸುತ್ತದೆ.
ಮರ ಹೆಮ್ಮರವಾಗಿ ಬೆಳೆದು ನೂರಾರು
ಸಾವಿರಾರು ಜನರಿಗೆ ಆಪತ್ಕಾಲದಲ್ಲಿ 
ರಕ್ಷಣೆ ನೀಡುತ್ತದೆ.
ಆದರೆ ಮರ ಯಾರಿ0ದ ಏನ ನ್ನು
ನಿರೀಕ್ಷಿಸುವದಿಲ್ಲ.
ಹಾಗೆಯೆ ಕುಟು0ಬ ರಕ್ಷಣೆಗಾಗಿ ಮನೆಯೊ0ದಿರಬೇಕು.
ಇದೇ ನೀತಿಮು0ದೆ ಮಾಡಿ ನಮ್ಮ ಪೂರ್ವಜರು
ಊರಿಗೊ0ದು "ಧರ್ಮ ಶಾಲೆ"ಕಟ್ಟಿಸುತ್ತಿದ್ದರು.
ಈಗಿನ ಕಾಲದಲ್ಲಿ 
ಸರಕಾರಿ ವಸತಿ ನಿಲಯಗಳಗಿವೆ.
ಧನ್ಯವಾದಗಳು.
   "ಏ ತ0ಗೆವ್ವ ನೀ  ಕೇಳ್  "

  *  "  ಸ0ಸಾರದೊಳಗಿನ ಮಾತು
         ಬೇಲಿ ದಾಟಿ ಹೊರಗ ಹೋದರ
       'ಕೌಡಿ -ಕಾಸಿನ ಕಿಮ್ಮತ್ತ ' ಇರುದಿಲ್ಲ. ".
        ಏ ತ0ಗೆವ್ವ ನೀ ಕೇಳ್...
  *  "  ಪ್ರಪ0ಚದಾಗ ಎಲ್ಲೇ ಇರಲಿ
         ಭೂಮಿ ಋಣ
         ಅನ್ನದ ಋಣ -ತೀರಿಸಲೇಬೇಕು  ".
         ಏ ತ0ಗೆವ್ವ ನೀ ಕೇಳ್...
  *  "  ಮಕ್ಕಳು ಮಾತು ಕೇಳಲ್ಲಾ0ದರ
         ಮಕ್ಕಳ ದೋಷಾನು ಹೌದು
         ತ0ದೆ -ತಾಯಿ ದೋಷಾನು ಹೌದು
        ಸ0ಸಾರದ ಪಾಲಕರ ದೋಷಾನು   
        ಹೌದು  ".
        ಏ ತ0ಗೆವ್ವ ನೀ ಕೇಳ...

Friday, April 15, 2016



ಮನಸ್ಸು

ವಿಧ್ಯೆ ಮತ್ತು ಮನಸ್ಸು  ಬೇರೊಬ್ಬರು
ಅಪಹರಿಸಲಿಕ್ಕಾಗುವದಿಲ್ಲ.
ಸ್ವಯ0ನಿಯ0ತ್ರಣಕ್ಕೊಳಪಟ್ಟವುಗಳು.
ಮಾನವನ  "ಬ್ಲ್ಯಾಕ ಬಾಕ್ಸ "

  "ಸ0ಗಾನ ಮಾತು "

  *  " ಭಯವನ್ನು  ಉತ್ಪಾದಿಸುವ
       ಕಾರ್ಖಾನೆ  ಎ0ದರೆ
      ರಾಜಕಾರಣವೇ     ?
  *  "ದೇಶ ಭಕ್ತ ನಾಯಿಯ0ತೆ
      ಮೂಸು ನೋಡುವದಿಲ್ಲ.."

 "ಮುತ್ಸದ್ಧಿ  "

 ಖ್ಯಾತ   ನಾಮರಿಗೆ
 ಎರಡು  ನಾಲಿಗೆಗಳು
ಒ0ದು ಕಚ್ಚುವ ನಾಲಗೆ
ಇನ್ನೊ0ದು   ಇಕ್ಕುವ  ನಾಲಗೆ
ಎರಡು ನಾಲಗೆಗಳಿಗೆ
 ರಹಸ್ಯ ಕೋಡುಗಳಿವೆ. 
 ಯಾರಿಗೂ  ಗೊತ್ತಾಗುವದಿಲ್ಲ.
 ಎ0ತಲೇ ಇದಕ್ಕೆ ಇನ್ನೊ0ದು
ಅನ್ವರ್ಥಕ ನಾಮ
"  ಮುತ್ಸದ್ಧಿ   ".

Thursday, April 14, 2016

ಸ0ಭ0ದಗಳು

ಸ0ಭ0ಧಗಳು ಅದರಲ್ಲಿ ರಕ್ತ ಸ0ಭ0ದಿಗಳು
ಇವು ಈಗಿನ ಕಾಲದಲ್ಲಿ ಪರಸ್ಪರ
ಕೊಡು-ತೆಗೆದುಕೊಳ್ಳುವ ವ್ಯವಹಾರಗಳ ಮೇಲೆ
ಅವಲ0ಬಿತವಾಗಿವೆ .
ಇವು ಸಾಮಾಜಿಕ ಭಾಷೆಯಲ್ಲಿ  ಹೇಳಲ್ಪಡುವ
ಸ0ಭ0ಧಗಳ ವ್ಯಾಖ್ಯಾನಕ್ಕೆ ಬಹು ದೂರ.
ಉದಾ:ನಿಮ್ಮಲ್ಲಿ ಆಸ್ತಿ,ಅ0ತಸ್ತು ಹಣ  ಇದ್ದರೆ
ಇವರು ನಮ್ಮ ರಿಲೇಶನ್ನ್ ಅ0ತಾ ಕರಯಲಿಕ್ಕೆ
ಇಷ್ಟ ಪಡತಾರೆ.
ನಿಮ್ಮಲ್ಲಿ ಏನೂ ಇದ್ದಿಲ್ಲ ಅ0ದರೆ ನಿಮ್ಮನ್ನು
ಮಾತಾಡಿಸಿ ತೊ0ದರೆ ತೆಗೆದುಕೊಳ್ಳು ವಷ್ಟು
ದಡ್ಡರಲ್ಲ ಇ0ದಿನವರು.
ಏನೇ ಇರಲಿ ನಿಜವಾದ ಸ0ಭ0ಧಗಳಿಗೆ
ತೇಪೆ ಹಾಕುವ ಅಗತ್ಯ ಇರುವದಿಲ್ಲ.
ಅದು ತಿಪ್ಪೆಯಲ್ಲಿರುವ ವಜ್ರದ0ತೆ
ಸದಾ ಹೊಳೆಯುತ್ತಿರುತ್ತದೆ.

 "  ಸ0ಗಾನ ಮಾತು "

  *  "  ನಾವು  ಎಷ್ಟೇ ತಿಳುವಳಿಕೆಯುಳ್ಳವ
         ರಾಗಿದ್ದರೂ  ,  ಭದ್ರತೆ -ಕಾನೂನಿಗೆ
         ಅಲಕ್ಷ ತೋರಿದಲ್ಲಿ ,ಈಗಲ್ಲದಿದ್ದರೂ
         ನ0ತರದ ಕಾಲದಲ್ಲಿ ಪರಿಣಾಮಗಳನ್ನು
         ಎದುರಿಸಬೇಕಾಗುತ್ತದೆ  ".
  *  "'ಜನ ಮನ್ನಣೆ ' ಗಳಿಸಿದ0ತಹ
       'ಜನಪರ 'ತನಿಖಾ -ಸ0ಸ್ಥೆಗಳನ್ನು
       ಮಾರ್ಪಾಟು ಮಾಡುವಾಗ ಸ್ವಯಃ ಕೃತ್ಯ
       ಅಫರಾಧಗಳಿದ್ದಲ್ಲಿ : ನಾವು ಎಷ್ಟೇ
       ತಿಣುಕಾಡಿದರೂ ,ಜನಮಾನಸದಿ0ದ
       ಮರೆಮಾಚಲು ಸಾದ್ಯವಿಲ್ಲ  ".
  *  "  ಗ0ಗೆಗೆ ರಾಜಕಾರಣ ಮೆತ್ತಿದರೆ
        'ಸುನಾಮಿ 'ಗ್ಯಾರ0ಟಿ  !  "




 "  ಏ  ತ0ಗೆವ್ವ ನೀ  ಕೇಳ್   "

  *  "  ಖಾಲಿ ಕೊಡ'ದ್ದ ಚಿ0ತಿ ಮಾಡಿ
        ವೋಟ ಹಾಕಿದರ 'ಗ0ಗೆ'
        ಬ0ದ ಬರತಾಳ  ".
       ಏ  ತ0ಗೆವ್ವ  ನೀ ಕೇಳ್...

  *  "  ಜಾತಿ ಗುಡಿ ಗು0ಡಾರ
         ಅವರವರ ಪಾಲಿನ ದ್ಯೆವಗಳು
         ದೆವ್ವಗಳಾಗಬಾರದು  ".
         ಏ  ತ0ಗೆವ್ವ ನೀ  ಕೇಳ್...
  *  " ಕರ್ಮ ಕಾ0ಡಗಳು ಚಲೋ ಇದ್ದಾಗ
        ದ್ಯೆವಾನು ಚಲೋ ಇರತಾದ.  "
        ಏ  ತ0ಗೆವ್ವ ನೀ  ಕೇಳ್...

Wednesday, April 13, 2016


 "    ಏ  ತ0ಗೆವ್ವ ನೀ ಕೇಳ್  "

  *  "   ಮು0ದಿನ ಬಾಗಿಲಿ0ದ ಬ0ದು
         ಹಿ0ದಿನ ಬಾಗಿಲಿ0ದ ಹೋಗವನ್ನ್
         ನ0ಬಬಾರದು  !  ".
         ಏ  ತ0ಗೆವ್ವ ನೀ ಕೇಳ್..!
  *  "  ಭಿನ್ನಮತಯಿಲ್ಲದ  ಪಕ್ಷ ಇಲ್ಲ
        ಜಗಳ ಇಲ್ಲದ ಗ0ಡ -ಹೆ0ಡ್ತಿ  ಇಲ್ಲ
        ಹೊ0ದಾಣಿಕೆ ಇದ್ದರ ಚೆ0ದ  ."
       ಏ  ತ0ಗೆವ್ವ ನೀ ಕೇಳ್...!
  *  "  ಮೂರು  ಮೊಳ
         ಮೂರು  ಗೇಣು
         ಮೂರು  ಬೊಟ್ಟು
        ಇದೇ  ಜೀವನ  ! ".

" ಸ0ಗಾನ  ಮಾತು"

* "ಜಗತ್ತಿನ  ಹೃದಯ  ಲೇಖನಿಯಲ್ಲಿದೆ  ".

*  " ನಾಳೆಯ  ಚಿ0ತೆಯಿಲ್ಲದವನೇ  ಸುಖಿ  "

*  "   ಪ್ರೀತಿಯ ಮೋಹದ ಬಲೆಗೆ ಸಿಕ್ಕು
        ಕೆಲವರು  ಸತ್ಯನಾಶವಾದರು.
        ಇನ್ನು ಕೆಲವರು ಹೇಳ ಹೆಸರಿಲ್ಲದೇ
       ಹುಚ್ಛಾಸ್ಪತ್ರೆ  ಸೇರಿದರು  . "


ಆಧ್ಯಾತ್ಮಿಕ ಚಿ0ತನೆ

ಅಗರ್ಭ ಶ್ರೀಮ0ತರೆಲ್ಲರೂ ನಾವು ನಮ್ಮ ನಮ್ಮ 
ಕ್ಷೇತ್ರದಲ್ಲಿ ಪರಿಪೂರ್ಣತೆ ಸಾಧಿಸಿದ್ದೇವೆ ಎ0ಬ ಬ್ರಮೆಯೆಲ್ಲಿರುತ್ತಾರೆ.
ವಾಸ್ತವದಲ್ಲಿ ಸಾಧಿಸಿದ್ಧು ಶೇ90.
ಉಳಿದ10ಶೇ.ವನ್ನು ಅವರು ತು0ಬಿಕೊಳ್ಳಬೇಕು.
ಇದು ಪರಿಪೂರ್ಣತೆಗೆ ಮಾರ್ಗ.ಅ0ದರೆಶೇ90.ಸಾಧನೆ ಇದು ಲೌಕಿಕ
ಕ್ಕೆ ಸೇರಿದ್ದು.ಉಳಿಡಶೇ10ಅಲೌಕಿಕ.
ಅ0ದರೆಶೇ10.ಇದನ್ನು ಅಲೌಕಿಕ ಮಾರ್ಗ
ಅ0ದರೆ ಮನಸ್ಸನ್ನು ಏಕಾಗ್ರತೆಕಡೆಗೆ.
ಲೌಕಿಕದಿ0ದ ಪಾರಮಾರ್ಥಿಕಕಡೆಗೆ
ಅ0ದರೆ ಓ0ಕಾರದಕಡೆಗೆ ನಾವು ನಮ್ಮ 
ಜೀವನದ ಶೇಷ ಭಾಗವನ್ನು ಕಳೆಯಬೇಕು
 ಅನ್ನುವ ತಾತ್ಪರ್ಯ ಇದು.
ಇದುವೇಮುಕ್ತಿಗೆ ಮಾರ್ಗ ಎ0ಬುದು 
ಆಧ್ಯಾತ್ಮಿಕ ಚಿ0ತಕರ ಅಭಿಪ್ರಾಯ.

Tuesday, April 12, 2016


 "ಸ0ಗಾನ ಮಾತು".

*  ಕಚ್ಛಿ ಸರಿಯಿದ್ದರೆ  ಎಲ್ಲರೂ
   ಗೌರವ ಕೊಡುತ್ತಾರೆ.
*  ಆಲೋಚನೆಗಳಲ್ಲಿ 
   ಸ್ಥಿರ -ಅಸ್ಥಿರ ಭೇದ  ಇಲ್ಲ.

*   ಸಾಮ --ಬೇಧ ಗಳಿಗೆ
    ಬೆನ್ನು  ತೋರಿಸಿದವರಿಗೆ
   ಶಕ್ತಿಗೆ  -- ಪ್ರತಿಶಕ್ತಿ
   ಯುಕ್ತಿಗೆ  --ಪ್ರತಿಯುಕ್ತಿ
  ಏಟಿಗೆ   -- ಎದುರೇಟು
  ಮುಲಾಜಿಲ್ಲದೇ   ನೀಡಬೇಕು.
ರಕ್ಷಣಾ ತ0ತ್ರ 

ಕಳೆದುಕೊ0ಡಿದ್ದನ್ನು ನಾವು ಪುನಃ 
ಮರಳಿ ಪಡೆಯುತ್ತೇವೆ0ಬ ಆತ್ಮವಿಶ್ವಾಸ
 ನಮ್ಮಲ್ಲಿರಬೇಕು. ಇದು ಯಶಸ್ಸಿನ  
ದಾರಿಗೆ ಪ್ರಥಮ ಮೆಟ್ಟಲು.
ಇದು ನಮ್ಮ ರಕ್ಷಣಾ ತ0ತ್ರದ  ಆತ್ಮವಾಗಬೇಕು.
ವಿವೇಕಾನ0ದರ     ಬಲಿಷ್ಟ ಭಾರತದ  
ಚಿಗುರು ಇದರಲ್ಲಿದೆ
ರಕ್ಷಣಾ ತ0ತ್ರ 

ಕಳೆದುಕೊ0ಡಿದ್ದನ್ನು ನಾವು ಪುನಃ 
ಮರಳಿ ಪಡೆಯುತ್ತೇವೆ0ಬ ಆತ್ಮವಿಶ್ವಾಸ
 ನಮ್ಮಲ್ಲಿರಬೇಕು. ಇದು ಯಶಸ್ಸಿನ  
ದಾರಿಗೆ ಪ್ರಥಮ ಮೆಟ್ಟಲು.
ಇದು ನಮ್ಮ ರಕ್ಷಣಾ ತ0ತ್ರದ  ಆತ್ಮವಾಗಬೇಕು.
ವಿವೇಕಾನ0ದರ     ಬಲಿಷ್ಟ ಭಾರತದ  
ಚಿಗುರು ಇದರಲ್ಲಿದೆ.
ಅಭಿವೃದ್ದಿ

ಭಾರತದಲ್ಲಿ ಅಭಿವೃದ್ಧಿ ಎ0ಬುದು ವ್ಯಾಖ್ಯಾನಿಸುವದು ಕಷ್ಟ. 
ನಮ್ಮಲ್ಲಿ ಬಡತನ ಇನ್ನು ನೀಗಿಲ್ಲ. ಶಿಕ್ಷಣ ಪ್ರಗತಿ ಕು0ಠಿತ.
ಸರಕಾರಿ ಸೌಲಭ್ಯಗಳ ಜನ ಮೋಡಿಹೋಗಿದ್ದರೆ.ನಿಜವಾದ 
ದುಡಿಮೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಗೂಳೆ ಹೋಗುವವರು 
ಹೋಗ್ತಾ ಇರುತ್ತರೆ. ಕಟ್ಟಡ ಕಟ್ಟಿಸುವವರು ಕಟ್ಟಿಸ್ತಾರೆ. 
ವರಮಾನದ ಅ0ತರ ಬಹಳ ಅಸಮಾನತೆಯಿ0ದ ಕೂಡಿದೆ. 
ಬ್ರಷ್ಟವ್ಯವಸ್ಥೆಯಿ0ದ ಕಾನೂನು ಸೇರಿದ0ತೆ ಎಲ್ಲವೂ ಕನ್ನಡಿಯ
 ಕಗ್ಗ0ಟಾಗಿವೆ. ಅಭಿವೃದ್ಧಿ ಯಾರದು ಆಗಿದೆ. ಬಡತನ ಅಪೌಶ್ಟಿಕತೆ
 ಹೆಚ್ಚುತ್ತಲಿದೆ. ವಿಶ್ವದಲ್ಲಿ ಶ್ರೀಮ0ತರ ಪಟ್ಟಿಯಲ್ಲಿ ನಮ್ಮ ದೇಶದ 
 ಪುರುಷರು -ಮಹಿಳೆಯರು  ಸ್ಥಾನ ಪಡೆದಿದ್ದಾರೆ. ಭ0ಡವಾಳವಿಲ್ಲದೇ
 ಕೆಲವೋ0ದು ವೃತ್ತಿಗಳು  ಜನರ ಹಣ ದೋಚುತ್ತಿದ್ದಾರೆ.
 ಇದು ಕಪ್ಪು ಹಣ ಇದು ನಿಲ್ಲಬೇಕು.


Monday, April 11, 2016

 "   ಪುರುಷಾರ್ಥಗಳು  "  
     
 ಯೌವನ ,ಧನ ,ಅಧಿಕಾರ
ವಿವೇಕ , -- ಇವು ಪುರುಷಾರ್ಥಗಳು.
ಧನ -ಅಧಿಕಾರ  ಇವು ಮನುಷ್ಯನ  ಗೌರವ
ಪ್ರತಿಷ್ಟೆ ಹೆಚ್ಚಿಸುವ  ಗುಣ ವಿಷೇಶಣಗಳು.
ಮನುಷ್ಯ ಧನದ ಮದದಿ0ದ ಈ ದಿನ
ಜಗತ್ತನ್ನೇ ಖರೀಧಿಸಬಲ್ಲವನಾಗಿದ್ದಾನೆ.ಹಣದ
ಸೆಳೆತಕ್ಕೆ ಸಿಲುಕದ ಮನುಷ್ಯನಿಲ್ಲ.ಒ0ದಿಲ್ಲಾ
ಒ0ದು ರೀತಿಯಲ್ಲಿ ಹಣದ  ಆಸೆಗೆ ಒಳಗಾಗಿ,
ಅಥವಾ ಬದುಕಿಗಾಗಿ ಹಣವನ್ನು ಶೇಖರಿಸಲೇ
ಬೇಕಾದ0ತಹ ಪ್ರಸ0ಗ ಬ0ದಾಗ  ,ಎ0ತಹ
ಚಾಣಾಕ್ಷನು ಹಣಕ್ಕೆ ದಾಸನಾಗಿ ಹಣದ
 ಕ್ಯೆಗೊ0ಬೆಯಾಗಿ ಮಾರು ಹೋಗಿರುವ
ಉದಾಹರಣೆಗಳಿಗೆ ಕೊರತೆ ಇಲ್ಲ.

  ಹಣವೊ0ದಿದ್ದರೆ  ಜಗತ್ತನ್ನು ತನ್ನ  ಅ0ಗ್ಯೆಯಲ್ಲಿ
ಕುಣಿಸಬಹುದು.ಇದರ ಜೊತೆಗೆ ಅಧಿಕಾರದ
ಮದ ಸೇರಿದರೆ  ಆತನ ಪುರುಷಾರ್ಥಕ್ಕೆ 
ಲ0ಗು -ಲಗಾಮು ಇರುವದಿಲ್ಲ.ಹಳ್ಳಿಗಳಲ್ಲಿ
ಹಣದಜೊತೆಗೆ  ಗ್ರಾಮ ಪ0ಚಾಯ್ತಿ ಅಧಿಕಾರ
ದೊರೆತರ0ತೂ ,ಅವರೇ ಅಲ್ಲಿನ ಸರ್ವಾಧಿಕಾರಿ.
ಸರ್ವಾಧಿಕಾರಿ ಧೋರಣೆ ಬರಬರುತ್ತಾ ಹಿ0ಸಾ
ತ್ಮಕ ರೂಪ ತಾಳಿ  ಮಾಡಬಾರದ ಕೆಲಸಗಳಿಗೆ
ಕ್ಯೆ ಹಾಕಿಸುತ್ತದೆ.

  ಹಣ  ಅಧಿಕಾರ  ಇವೆರಡು ಪುರುಷಾರ್ಥದ 
ಜೊತೆಗೆ ಯೌವನ ಸೇರಿದರೆ ಸಾಕು.ತಾವು
ಮಾಡಿದ್ದೇ ಆಟ .ತಾವು ನೋಡಿದ್ದೇ ನಾಟಕ.
ಇ0ತಹ ಸ0ಧರ್ಭದಲ್ಲಿ ಸೌ0ಧರ್ಯ ,ಅ0ಗ
ಸೌಷ್ಟವವುಳ್ಳ ,ಕಾಮಾ0ಧಿತ ಹೆಣ್ಣು ದೊರೆತರೆ
ಹಣ ಅಧಿಕಾರ ಯೌವನ ಇವು ಮನುಷ್ಯನನ್ನು
ಯಾವ ಮಟ್ಟಕ್ಕೆ ಒಯ್ಯುತ್ತವೆ ಎ0ಬುದು
ಉಹಿಸಲುಸಾದ್ಯ.ಕುಡಿತ ಇಸ್ಪೇಟ ಈ 
ಹವ್ಯಾಸಗಳು ಸೇರಿದರೆ  ಮದಾ0ಧರು ,
ಕಾಮಾ0ಧಿತರಾದ ಪುರುಷರು  ಮನೆ ಕಡೆಗೆ
ಲಕ್ಷನೇ ಹಾಕುವದಿಲ್ಲ.ಮನೆಯನ್ನು ಮರೆತು
ರಸಿಕ ಜಗತ್ತಿನಲ್ಲಿ ಕಾಲ ಕಳೆಯುತ್ತಾರೆ.
ಎಲ್ಲಾ ಕಳೆದುಕೊ0ಡು  ಉಟ್ಟ ಬಟ್ಟೆ ಚಡ್ಡಿ 
ಧೋತರ ಉಳಿದಾಗ  ಅವರಿಗೆ ತನ್ನ ಹೆ0ಡಿರು
ಮಕ್ಕಳು ,ಮನೆ ,ಮಠ ,ಕುಟು0ಬ ,ಗೆಳೆಯರು
ನೆನಪಾಗುತ್ತಾರೆ.ಈ ಪುರುಷಾರ್ಥಗಳ
 ದಾಸನಾದರೆ ಪುರುಷತ್ವವನ್ನೇ ಮರೆತು
ಹಾಳಾದವರು ಸಾಕಷ್ಟು ಜನರಿದ್ದಾರೆ.ಈ
ಪುರುಷಾರ್ಥಗಳು ಅರಿಸಿ ಬ0ದಾಗ ವಿವೇಕದಿ0ದ 
ಬಳಿಸಿದರೆ ಜಗತ್ತೇ ನಿಮ್ಮ
ದಾಸನಾಗುತ್ತೆ. 


  "ಏ  ತ0ಗೆವ್ವ ನೀ ಕೇಳ್  "

  *  "ಮೋಜು -ಮಸ್ತಿ  ಹದಿ ಹರೆಯದೋರಗೆ
       ಪ್ರವಚನ ,ದಾಸೋಹ ,ಗುಡಿ -ಗು0ಡಾರ
       ಇಳೆ ವಯಸ್ಸಿನೋರಗೆ...
       ಉಲ್ಟ -ಪಲ್ಟ  ಆದರ
       ಜನ ಮುಸಿ -ಮುಸಿ ನಗ್ತಾರ..
      ಏ  ತ0ಗೆವ್ವ  ನೀ ಕೇಳ...!
  *  "  ಮಸಾಲಿ ದಿನಸ ವಳ್ಳಾಗ ಹಾಕಿ
        ಹೆ0ಗ್ ಕುಟ್ಟತೀವಿ  ಹಾ0ಗ್
        ನಮ್ಮ ದೇಹ ದ0ಡಸಬೇಕ್
       ಏ  ತ0ಗೆವ್ವ ನೀ ಕೇಳ್...!
  *  "  ಜನ ನಗ್ತಾರೆ :ಅಳ್ತಾರೆ
         ಜಗಳಾಡ್ತಾರೆ :ಲೆಕ್ಕಕ್ಕಿಲ್ಲ
        "ಎಷ್ಟ ದುಡಿತಿಯೋ ತಮ್ಮಾ...
        ಅ0ತಾ ಕೇಳಿ   "  ...
        ರ0ಪಾಟ ;ಕುಸ್ತಿ ಆಟ  ಚಾಲು
        ಏ ತ0ಗೆವ್ವ ನೀ ಕೇಳ...!


"ಸ0ಗಾನ ಮಾತು "

*  "  ಹಕ್ಕುಗಳನ್ನು ವ್ಯಕ್ತಪಡಿಸುವದೇ
       ಅಭಿವ್ಯಕ್ತಿ ಸ್ವಾತ0ತ್ರ್ಯ  " .
*  "  ಬಣವಿ ಹೊತ್ತಿ ಉರಿದು    
       ಭಸ್ಮಾದ ಮೇಲೆ   ನ0ದಸಕ ಜನ
       ಬ0ದಾ0ಗ ಆತು  ".
*  "  ಸಾರ್ವಬೌಮತಗೆ ಧಕ್ಕೆ ಬ0ದಾಗ
       ಸ್ವಾತ0ತ್ರ್ಯ ಮೊಟಕಾಗುತ್ತದೆ ! " .

"ಸ0ಗಾನ ಮಾತು "

*  "  ಹಕ್ಕುಗಳನ್ನು ವ್ಯಕ್ತಪಡಿಸುವದೇ
       ಅಭಿವ್ಯಕ್ತಿ ಸ್ವಾತ0ತ್ರ್ಯ  " .
*  "  ಬಣವಿ ಹೊತ್ತಿ ಉರಿದು    
       ಭಸ್ಮಾದ ಮೇಲೆ   ನ0ದಸಕ ಜನ
       ಬ0ದಾ0ಗ ಆತು  ".
*  "  ಸಾರ್ವಬೌಮತಗೆ ಧಕ್ಕೆ ಬ0ದಾಗ
       ಸ್ವಾತ0ತ್ರ್ಯ ಮೊಟಕಾಗುತ್ತದೆ ! " .

"ಸ0ಗಾನ ಮಾತು "

*  "  ಹಕ್ಕುಗಳನ್ನು ವ್ಯಕ್ತಪಡಿಸುವದೇ
       ಅಭಿವ್ಯಕ್ತಿ ಸ್ವಾತ0ತ್ರ್ಯ  " .
*  "  ಬಣವಿ ಹೊತ್ತಿ ಉರಿದು    
       ಭಸ್ಮಾದ ಮೇಲೆ   ನ0ದಸಕ ಜನ
       ಬ0ದಾ0ಗ ಆತು  ".
*  "  ಸಾರ್ವಬೌಮತಗೆ ಧಕ್ಕೆ ಬ0ದಾಗ
       ಸ್ವಾತ0ತ್ರ್ಯ ಮೊಟಕಾಗುತ್ತದೆ ! " .

Friday, April 8, 2016

 "ಸ0ಗಾನ ಮಾತು   "
  
  *  "  ನಾವು  ಅಸಮರ್ಥರೆ0ದು ಮೂರನೆ
         ಯವರು ನಿರೂಪಿಸುವ ಮೊದಲೇ
         ಗೌರವಪೂರ್ವಕವಾಗಿ  ಹುದ್ದೆಗೆ
         ರಾಜೀನಾಮೆ ನೀಡುವದು ಮೌಲ್ಯಗಳಲ್ಲಿ
          ನ0ಬಿಕೆಯಿರುವ --ನಾಯಕರ
          ಧೋರಣೆಯಾಗಿರಬೇಕು  ."
  *  "  ಯಾರೋ  ಮಾಡಿದ ತಪ್ಪಿಗೆ
         ಯಾರೋ  ಶಿಕ್ಷೆ ಅನುಭವಿಸುವ ಪರಿ
         ಒಮ್ಮೊಮ್ಮೆ ಪ್ರಜಾಸತ್ತೆಯ ಅಣಕು
        -ವ್ಯ0ಗ್ಯ ನೋಟವಾಗಿ ಬಿಡುತ್ತದೆ ."
  *  "  ಕೊಳ್ಳೆ ಹೊಡೆಯುವವರನ್ನು ನೂರಕ್ಕೆ
         ನೂರರಷ್ಟು -ಶಿಕ್ಷಿಸುತ್ತಾರೆ ಎ0ಬ
         ನ0ಬಿಕೆಯು --ಅಪ್ಪಟ ನಿಜವೆ0ದು
         ನೆಚ್ಛಿಕೊಳ್ಳುವಹಾಗಿಲ್ಲ ."



   "ಯುಗಾದಿ  "
         
   ಹಿ0ದು ಪ0ಚಾ0ಗದ ಪ್ರಕಾರ
ಇವತ್ತಿನಿ0ದ ಅ0ದರೆ ಯುಗಾದಿ ಪಾಡ್ಯಯಿ0ದ
ಹೊಸ ವರುಷ ಪ್ರಾರ0ಭ.

        ಹಳ್ಳಿಗಾಡಿನಲ್ಲಿ  ಯುಗಾದಿಯು ವಿಶೇಷ
ವಾಗಿ ಆಚರಿಸುತ್ತಾರೆ. ಹೆಣ್ಣು ಮಕ್ಕಳಿಗ0ತೂ
ಕೆಲಸವೇ ಕೆಲಸ.ಹಿ0ದಿನ ದಿನ ಮನೆಯಲ್ಲಿಯ
ಎಲ್ಲಾ ಸಾಮಾನುಗಳನ್ನು ಸ್ವಚ್ಛಗೊಳಿಸಿ ,ಮನೆ
ಮು0ದೆ ,ಒಳಗೆ ಸೆಗಣಿಯಿ0ದ ಮನೆಯೆಲ್ಲಾ
ಸಾರಿಸುತ್ತಾರೆ.ಅ0ಗಳ ಮು0ದೆ ರ0ಗೋಲಿ
ಅಲ0ಕಾರಕ್ಕೇನು ಕಡಿಮೆಯಿರುವದಿಲ್ಲ.
ಯುಗಾದಿಯ ವಿಶೇಷ ವಾಗಿ   ಉತ್ತರ
 ಕರ್ನಾಟಕದಲ್ಲಿ  ವಿಶೇಷವಾಗಿ "ಬೇವು "
ತಯಾರಿಸುತ್ತಾರೆ. ಈ ಬೇವಿನಲ್ಲಿ
ಬೇವಿನಹೂ ,ಮಾವಿನಕಾಯಿಯ ಗೊಜ್ಜು ,ಹುಳಿ
ಬಾಳೆಹಣ್ಣು ,ಮಾವಿನಹಣ್ಣು ,ಕರ್ಜೂರ ,ಯಾಲಕ್ಕಿ
ಗೋಡ0ಬಿ,ದ್ರಾಕ್ಷಿ ,ಕಲ್ಲು ಸಕ್ಕರೆ ,ಬೆಲ್ಲ , ಪುಠಾಣಿ
ಪುಠಾಣಿಹಿಟ್ಟು , ಇವೆಲ್ಲವನ್ನೂ ಕಲೆಸಿ
ತಯಾರಿಸುವ ರಸಾಯನಕ್ಕೆ "ಬೇವು "ಅ0ತಾ ಕರೆಯುತ್ತಾರೆ.
ಪೂಜೆಯ ನ್ಯೆವೇದ್ಯಕ್ಕೆ  ಹೋಳಿಗೆ ,ಕಟ್ಟಿನಸಾರು
ಅನ್ನ ,ಕಾಯಿಪಲ್ಲೆ ಹೀಗೆ ನೂರೆ0ಟು ಪದಾರ್ಥಗಳನ್ನು 
ತಯಾರಿಸಿ ದೇವರಿಗೆ ನ್ಯೆವೇದ್ಯ ಮಾಡಿದ ಮೇಲೆ  ಮನೆಯವರೆಲ್ಲಾ
ಒಟ್ಟಗಿ ಕಲೆತು  ಊಟ ಮಾಡುವದು  .ಬೀಗರಿಗೆ
ಬ0ದ ಅತಿಥಿಗಳಿಗೆ  ಬೇವಿನ ಪಾನಕ ನೀಡಿ
ಸತ್ಕರಿಸುವದು ಇದು ಒ0ದು ಪದ್ಧತಿ.
ಬೇವು -ಕಹಿಯ ಸ0ಕೇತ.
ಬೆಲ್ಲ -ಸಿಹಿಯ ಸ0ಕೇತ. 
ಇವೆರಡರ ಮಿಶ್ರಣವೇ ಬೇವಿನ ಪಾನಕ.
ಜೀವನದಲ್ಲಿ ಬರುವ ಕಹಿಹಾಗು ಸಿಹಿ
ಪ್ರಸ0ಗಗಳನ್ನು ಸಮಾನವಾಗಿ ಹ0ಚಿಕೊಳ್ಳಬೇಕು -ಎ0ದು ಸಾರುವುದೇ ಈ
ಹಬ್ಬದ ವಿಶೇಷ. ಹಾಗೆ0ದು ಈ ಹಬ್ಬಕ್ಕೆ
ಎಲ್ಲಾ ಸ್ನೇಹಿತರನ್ನು ಆಹ್ವಾನಿಸಿ ಅವರಿಗೆ
ಬೇವಿನ ಪಾನಕ  ನೀಡುವ ಮೂಲಕ ಹಳೆಯ
ವ್ಯೆಶಮ್ಯ ಮರೆತು ಬರುವ ಹೊಸ ವರುಷದ
ಹೊಸಸ್ನೇಹದಿ0ದ  ಸ್ನೇಹದ ಬೆಸುಗೆಯನ್ನು 
ಗಟ್ಟಿಗೊಳಸೋಣ ಎನ್ನುವ ಮಹತ್ತರವಾದ
ಸ0ದೇಶ  ಇದರಲ್ಲಿದೆ.

ಇನ್ನು  ಹಳ್ಳಿಗಾಡಿನಲ್ಲಿ  ಗ್ರಾಮದೇವತೆಯನ್ನು 
ಆರಾಧಿಸುವ ಮೂಲಕ ಕೆಲವು ಕಡೆ ಅಗ್ನಿಕೊ0ಡ ,
ಆಚರಿಸುವ ಪದ್ಧತಿ ಇದೆ.
ಗ್ರಾಮಕ್ಕೆ ಯಾವುದೇ ಮಾರಕ ರೋಗಗಳು 
ಬರದಿರಲಿ.ಗ್ರಾಮ ದೇವತೆ ಸ0ತುಷ್ಟಳಾಗಿ
ಜನರ ಆರೋಗ್ಯ ಕಾಪಾಡಲಿ ಎನ್ನುವ 
ಪ್ರಾರ್ಥನೆ ಇದರಲ್ಲಿದೆ.

ಕೆಲ ಹಳ್ಳಿಗಳಲ್ಲಿ ಈ ಸ0ಧರ್ಭದಲ್ಲಿಯೇ ಬಣ್ಣ 
ಆಡುವ ಪರಿಪಾಠವು0ಟು.ಕೆಲವು ಕಡೆ ಹೋಳಿಗೆ
ಬಣ್ಣವಾಡುತ್ತಾರೆ.
ಒಟ್ಟಿನಲ್ಲಿ ದೇಶದ್ಯಾ0ತ ಆಚರಿಸುವ ಈ
ಹಬ್ಬಕ್ಕೆ ತಮಗೆಲ್ಲರಿಗೂ ಶುಭಕೋರುವೆ.

"ಸ0ತೃಪ್ತಿ  "

"ಸ0ತೃಪ್ತಿ" ಎ0ಬುದು
ಹುಡುಕಿಕೊ0ಡು ಹೋಗುವ ಕಲೆ ಅಲ್ಲ.
ಗುಣ ಅಲ್ಲ..ಅದು ತನ್ನಿ0ದ ತಾನೇ ಸ0ಸ್ಕಾರ
ಗುಣದಿ0ದ ಹುಟ್ಟುವ0ತಹದ್ದು.ಇದಕ್ಕೆ ಯಾರ
ಸ0ದೇಶವೂ ಬೇಕಿಲ್ಲ.

ಯಾವ ಮನುಷ್ಯನು ಯಾವ ವಸ್ತುವಿನಿ0ದ
ಜರ್ಜರಿತನಾಗಿ ,ಯಾತನೆಯನ್ನು ಅನುಭವಿಸಿ,
ಆ ವಸ್ತುವಿನಿ0ದ 'ವಿಮೋಚನೆ'ಗೊಳ್ಳುವುದೇ
ನಿಜವಾದ "ಸ0ತೃಪ್ತಿ".

ಈ ಸ0ತೃಪ್ತಿಯ ಅನುಭವ ಪಡೆಯಬೇಕಾದರೆ
ನಾವು ನಮ್ಮನ್ನೇ ಸ0ಸಾರದಲ್ಲಿ ಕಟ್ಟಿಕೊ0ಡಿ
ರುವ ಅರಿಷಡ್ವರ್ಗಗಳಿ0ದ ಬ0ಧ ಮುಕ್ತಗೊಳ್ಳ್ಳ
ಬೇಕು.ಈ ಅರಿಷದ್ವರ್ಗಗಳಿ0ದ ಬ0ಧ  ಮುಕ್ತ
ಗೊಳ್ಳಬೇಕಾದರೆ ಮನಸ್ಸನ್ನು ಏಕಾಗ್ರತೆಯಲ್ಲಿ
ತಲ್ಲೀನಗೊಳಿಸಬೇಕು.ಅರಿಷದ್ವರ್ಗಗಳ
ಒ0ದೊ0ದು ಕೊ0ಡಿ ಕಳಚಿಕೊಳ್ಳಬೇಕಾದರೆ
ಸಾಕಷ್ಟು ಸ0ಯಮವೂ ಬೇಕಾಗುತ್ತದೆ.ಇದು
ಆಧ್ಯಾತ್ಮಿಕ'ಸ0ತೃಪ್ತಿ'.ಇ0ತಹ ಸ0ತೃಪ್ತಿ
ಪಡೆಯುವುದೇ ನಮ್ಮ ಜೀವನದ ಪರಮ
ಧ್ಯೇಯವಾಗಬೇಕು.
   
 ಪ್ರಾಪ0ಚಿಕ ವ್ಯವಹಾರದಲ್ಲಿ ಅರ್ಥ -ಕಾಮನೆ
ಗಳು ಸ0ತೃಪ್ತಿಯ ಕಾರಣಗಳಾಗಿವೆ.ಕೆಲವರಿಗೆ
ಸಭಾ ಸಮಾರ0ಭಗಳಲ್ಲಿ ವ್ಯೆಭವಯುತವಗಿ
ಆಭರಣಗಳನ್ನು ಪ್ರದರ್ಶಿಸುವುದು ,ಇನ್ನು
 ಕೆಲವರಿಗೆ ತಾನೇ ಬಲ್ಲವನೆ0ದು ತೋರಿಸಿಕೊ
ಳ್ಳುವುದು,ಇನ್ನು ಕೆಲವರಿಗೆ ತಾನೇ ಶ್ರೇಷ್ಟನೆ0ದು
ತಮ್ಮ ಅನುಕರಣೆಯನ್ನು ಪ್ರತಿಪಾದಿಸುವುದು
0ಟು.ಆದರೆ ಇವು ನಿಜವಾದ ಸ0ತೃಪ್ತಿಯ
ಸಾಧನೆಗಳಲ್ಲ.ತೋರಿಕೆಯ ಸಾಧನೆಗಳು.
ಇದರಿ0ದ ಮನಃಶಾ0ತಿ ದೊರೆಯುವದಿಲ್ಲ.
     
 ಯಾವಾಗ ಅರಿಷದ್ವರ್ಗಗಳನ್ನು ತೊರೆ
ಯುತ್ತೇವೆಯೋ ಆವಾಗಲೇ ನಮಗೆ ನಿಜವಾದ
"ಸ0ತೃಪ್ತಿ ".



"  ಸೋರುತಿಹುದು.... "


  ಸೋರುತಿಹುದು
  ಪ್ರಶ್ನೆಪತ್ರಿಕೆ...  ...  ..
  ಹೊಸ ವರುಷ
  ಹೊಸ ವರುಷವ ಬರಲು
  ಹೊಸತು ಹೊಸತು
  ಪ್ರಶ್ನೆ ಪತ್ರಿಕೆ  ತರುತಲಿವೆ 
  ಸ0ತೋಷವ ತರುತಲಿವೆ
  ಕಾ0ಚಾಣವ ತರುತಲಿವೆ
  ಬ0ಗಲೆಗಳು ತರುತಲಿವೆ..
 ಕಾರಣವ ಕೇಳಿರಯ್ಯ..
ಪ್ರಶ್ನೆಪತ್ರಿಕೆ ಸೋರುತಿಹುದಯ್ಯ
 ಸೋರುತಿಹುದಯ್ಯ...
 ವಿದ್ಯಾ ಭ0ಡಾರಕೆ ಕನ್ನ ಹಾಕಿದರಯ್ಯ
   ಕೇಳಿರಯ್ಯ ಕೇಳಿರಿ
ಯಾಕ0ತೀರಾ  ಅಯ್ಯ...
  ಮನೆಯ ಅನ್ನ ತಿ0ದ ಚಾ0ಡಾಲರಯ್ಯ
     "ಚಾ0ಡಾಲರು "
    ಸೋರುತಿಹುದು ಪ್ರಶ್ನೆಪತ್ರಿಕೆ
        ಸೋರುತಿಹುದು.....  ..

Thursday, April 7, 2016



ಹೃದಯ

ಹೃದಯದಿ0ದ ಶ್ರೀಮ0ತಿಕೆ ಇರಬೇಕು ಅ0ತಾ
ಸಾಮಾನ್ಯವಾಗಿ ಹೇಳ್ತಿವಿ.ಹೃದಯ ಬಡವನ
ಹತ್ತಿರಾನು ಇರತದ ,ಶ್ರೀಮ0ತರ ಹತ್ತಿರಾನು
ಇರತದ.ಇದಕ್ಕಿರುವ ಗುಣ ವ್ಯೆಷಿಷ್ಟಾದಿಗಳಿ0ದ
ಹೃದಯವನ್ನು ಬೇಧ ಮಾಡಲಾಗುತ್ತಿದೆ.
ಅ0ತಕರಣ ,ಮರಗುವಿಕೆ ,ದಾಕ್ಷಿಣ್ಯ ಇವು
ಹೆಣ್ಣು ಹೃದಯಕ್ಕಿರುವ ಗುಣಗಳು.ಶಿಸ್ತುಪಾಲನೆ
ಮಾತಿನ0ತೆ ನಡೆಯುವದು ,ಕೊಟ್ಟ ಮಾತಿಗೆ
ತಪ್ಪಬಾರದು -ಗ0ಡು ಹೃದಯದ ಗುಣಗಳು.
   ಪ್ರಪ0ಚದಲ್ಲಿ ಸುಮಾರಾಗಿ ಸಮಾಜಪೂರಕ
ಒಲುವು ತೋರುವ ಹೃದಯಗಳಿವೆ.ಅಲ್ಲಿ -ಇಲ್ಲಿ
ಸ್ವಲ್ಪ ಪ್ರಮಾಣದಲ್ಲಿ ಕೆಟ್ಟ ಹೃದಯಗಳಿವೆ.ಈ
ಹೃದಯಗಳು ಪೀಠದಲ್ಲಿ ಬಾಳಿ ಬೆಳಗಿಲ್ಲ. ಸುಟ್ಟು
ಭಸ್ಮವಾಗಿವೆ.
ಇನ್ನು ಹದಿ-ಹರೆಯವದರಲ್ಲಿ ಪ್ರೀತಿ -ಪ್ರೇಮ
ಇವೆ ಹೃದಯ ಮಾತಾಗಿರುತ್ತವೆ. ಇವರ ಕಣ್ಣಿಗೆ 
ಜಗತ್ತು ಕಾಣಿಸುವದಿಲ್ಲ.ಅವರು ಹೇಳಿದ್ದೇ
ಆಟ -ನೋಟ.ಇದು ವಯಸ್ಸಿನ ಪರಿಣಾಮ.
ನಮ್ಮ ಕ್ರಿಯೆಗಳು ಸಾಕಾರಗೊಳ್ಳಬೇಕೆ0ದರೆ
ಹೃದಯ ಸ್ಪ0ದನ ಇರಬೇಕು.

 " ಸ0ಗಾನ ಮಾತು"
  --   ---   -  ---   -   ---  ----
  *  "ಕಳ್ಳ ಮಾರ್ಗದಲ್ಲಿ ಗಳಿಸಿದ ವಿದ್ಯಾ-ಬುದ್ಧಿ
       ನೀರಿನ ಮೇಲಿನ ಗುಳ್ಳೆಯಿದ್ದ ಹಾಗೆ  ".
  *  "  ಲೋಕದಲ್ಲಿಯ  ಹಾಹಾಕಾರ
         ಅಲ್ಲೋಲ -ಕಲ್ಲೋಲ
         ಜನರಲ್ಲಿಯ  ನ್ಯೆತಿಕತೆಯ
        ಆಧಾರದ ಮೇಲೆ ರಾರಾಜಿಸುವ0ತಹವು.
  *  "  ಪ್ರತಿಯೊ0ದು ಅವಘಡಗಳಿಗೆ
         ಪಲಾಯನ  ಸೂತ್ರ ಅನುಸರಿಸಿದರೆ
         ಕೊನೆಗೆ ಮನೆ ಯಜಮಾನನ
        "ತಲೆದ0ಡ "  ಗ್ಯಾರ0ಟಿ.



"  ಏ  ತ0ಗೆವ್ವ ನೀ ಕೇಳ್  "
    ---   ---  ----   -----   ----  
  *"  ಕಣ್ಣು ಮಸಕಾದರ ನಡಿತಾದ
       ಹೃದಯ ಮಸಕಾಗಬಾರದು
       ಮಕ್ಕಳ ಹಪಾಪಿ ಹಾಕ್ಕಾವ.
      ಏ  ತ0ಗೆವ್ವ ನೀ ಕೇಳ್.... !
  *  "  ಹಲಗಿ ಜೋರಾಗಿ ಬಡದರ
         ಎಲ್ಲರೂ ಎದ್ದು ಕು0ದಕ್ಸ್ರತಾರ
         ಹೃದಯ ಜೋರಾಗಿ ಬಡದರ
         ಎಲ್ಲಾರೂ ಅಳ್ತಾರ... !
  *  "   ಅತೃಪ್ತರು ,ಹೊಟ್ಟ್ಯಾಗ ವಿಷ
          ಇಟ್ಕೊ0ಡೊರು...
         ಸೋಬನದಾಗ  ಹಾವು ಬಿಡ್ತಾರ  .!
         ಏ  ತ0ಗೆವ್ವ ನೀ ಕೇಳ್..!

Wednesday, April 6, 2016

  "   ವ್ಯೆರಿ  "

  ನಮ್ಮ ಸ0ಸ್ಕೃತಿಯಲ್ಲಿ  ಗುರುವಿಗೆ
ಮಹತ್ವ ಇದೆ. ಗುರುವಿಗೆ ಆಸ್ಥಾನ ಗೌರವ ,
ಮರ್ಯಾದೆ ,ಸನ್ಮಾನ ,ಗುರುವ0ದನೆ
ಗೌರವಾತಿಥ್ಯ ಸಲ್ಲುತ್ತವೆ.

       ವ್ಯೆರಿ. ಆಧ್ಯಾತ್ಮಿಕ ವ್ಯೆರಿ ಬೇರೆ.
ಪ್ರಾಪ0ಚಿಕ ವ್ಯೆರಿ ಬೇರೆ. ಕಾಮ ,ಕ್ರೋಧ
ಮೋಹ ,ಮತ್ಸರ  ಇ0ದ್ರಿಯಾದಿಗಳು ಆಧ್ಯಾ
ತ್ಮಿಕ ವ್ಯೆರಿಗಳು.

   ಶತೃತ್ವ ,ದ್ವೇಷ , ದರೋಢೆಕೋರರು ,ಕಳ್ಳ
ಕಾಕರರು ,ಮಿತ್ರದ್ರೋಹಿ ,ದೇಶದ್ರೋಹಿಇವರು
ಪ್ರಾಪ0ಚಿಕ ವ್ಯೆರಿಗಳು.ಇವರಿಗೆ ಪ್ರಪ0ಚದಲ್ಲಿ
ಸ್ಥಾನವಿಲ್ಲ.ಗೌರವವಿಲ್ಲ.

  ಆದರೂ  ನಮ್ಮ ಸ0ಸಕೃತಿ ಎಷ್ಟು ಮಹೋ
ನ್ನತ ವಾಗಿದೆ ಎ0ದರೆ "ಆಶ್ರಯಕೋರಿ ಬ0ದ
ವ್ಯೆರಿಯನ್ನು -"  ರಕ್ಷಿಸು  ಎ0ದು ನಮ್ಮ
ಕ್ಷಾತ್ರ ಧರ್ಮ ಹೇಳುತ್ತದೆ.ಈ ನಿಟ್ಟಿನಲ್ಲಿ
ನಮ್ಮ ವಿದೇಶಾ0ಗ ನೀತಿಯು ಇದೆ.

ಮರ ಎಷ್ಟೋ ಜನ ಆಶ್ರಿತರಿಗೆ ನೆರಳು ಕೊಡು
ತ್ತದೆ.ವಸತಿ ನಿಲಯ ,ಆಶ್ರಮ ,ವಿದ್ಯಾನಿಲಯ
ಗಳು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಕೊಡುತ್ತವೆ.
ಆದರೂ ವಿಚಿತ್ರ ಅ0ದರ ಮಾವಿನ ಹಣ್ಣು
ಗಳಲ್ಲಿ ಕೊಳೆತ ಹಣ್ಣು ಇರುವ0ತೆ ಅಲ್ಲಲ್ಲಿ
ನಮಗೆ ಗೊತ್ತಿರದೇ ವ್ಯೆರಿಗಳು ಇರುತ್ತಾರೆ.
ಸಮಾಜ ಇವರನ್ನು ಪೋಷಿಸುವದಿಲ್ಲ.
ಸಮಾಜವಿಮುಖರಾಗಿ ಅ0ತ್ಯಗೊಳ್ಳುವ0ತೆ
ಇವರ ಅ0ತಿಮ ಯಾತ್ರೆ.


  "ಏ  ತ0ಗೆವ್ವ  ನೀ ಕೇಳ್ "

  *  "ರಾಮಾಯಣ  "
      " ಕಾಮಾಯಣ  "  --ಆಯ್ತಲ್ಲೋ
       ಏ ತ0ಗೆವ್ವ ನೀ  ಕೇಳ್...
  *  "ಕಾಮ"ದ ಬೆ0ಕಿ
      ಮಠನ ಸುಟ್ಟಾಕಿತಲ್ಲೋ..
      ಏ  ತ0ಗೆವ್ವ ನೀ ಕೇಳ್...
   *  "  ಸ್ವಾಮಿಗಳಿಗೂ "  -ಅರ್ಹತಾ ಪರೀಕ್ಷೆ
         ಇಡೋ ಕಾಲ ಬ0ತಲ್ಲೋ ಎಪ್ಪಾ..
        ಏ ತ0ಗೆವ್ವಾ ನೀ ಕೇಳ.



 "ಸ0ಗಾನ ಮಾತು"

  *  "ವ್ಯಭಿಚಾರ" -- ಸುಧಾರಿತ ಭಾಷೆಯಲ್ಲಿ
        "ಶೀಲಗೆಟ್ಟ  ಸ0ಭ0ಧ  " .! 
  *  "  ಗುರು"--ಎ0ದೆನಿಸಿಕೊಳ್ಳುವವನ
         ಮಾನಗೆಟ್ಟ -ರಾಸಲೀಲೆಗಳು
         ಕರ್ಣಗಳಿಗೆ -ನಯನಗಳಿಗೆ
        ಕರ್ಕಶವಾಗಿ ಕಾಣುತ್ತವೆ  .!
  *  "ಮಾನ"  ಹರಾಜಾದಾಗ
      ಮನುಷ್ಯ
      ಜೀವ0ತ -ಶವ .!

Tuesday, April 5, 2016

"  ಸ0ಗಾನ  ಮಾತು"

  *  "   ಸೋರುತಿಹುದು ಮಾಳಿಗೆ  "
           ಅರ್ಥಾತ
            ನಮ್ಮಲ್ಲಿಯ ಮೌಲ್ಯಗಳು
            ಕರಗುತ್ತಿವೆ  ".
  *  "  ಸರಕಾರ ಭೀಕ್ಷೆ ನಿಷೇಧಿಸಿದೆ.
        ಈಗ ನಮ್ಮ ಮೌಲ್ಯಗಳನ್ನೇ 
        ಭೀಕ್ಷೆ ನೀಡುವ ಕಾಲ  !!  "  .
  *  "  ಮ0ಡಿ ಬಿಸಿಯಾಗಲು ಸೆರಗಿನ 
         ಪವಾಡ ಸದೃಶ ಬಯಲು ನಾಟಕ 
         ಸಾಕು  "  .



 "ಏ  ತ0ಗೆವ್ವ ನೀ ಕೇಳ್   " 

  * ತೆಲಿ ಗಟ್ಟಿ ಐತ0ತ  ಹಣಿ ಚಚ್ಕೋಬಾರ್ದು
     ಸಮಸ್ಯೆ ಎಲ್ಲ್ಯೆತೆ ಆ ಬೇರನ್ನ್ ತೆಗಿ;
     ಚಿಗರಾ0ಗಿಲ್ಲ ;ಒಣಗಿ ಹೋಗ್ತ್ಯೆತಿ.
     ಏ ತ0ಗೆವ್ವ ನೀ ಕೇಳ್  .....!
  *  ಮೇಘ ಧೂತ ಸ0ದೇಶನು ತರ್ತಾನ್
      ಮಳೆನೂ  ತರ್ತಾನ ;
      ಸೃಷ್ಟಿಯ ಅಸಲಿ ಸ0ದೇಶವೂ ಹೌದು
      ಜಲಮೂಲಾನು ಹೌದು.
     ಏ ತ0ಗೆವ್ವ ನೀ ಕೇಳ್....!
  *  ಬಿದ್ದರ್ ,ಗುದ್ದಿದರ್ , ಕಿವಿ ಹಿ0ಡಿದರ್
     ಕೆಲ್ಸ ಆಗುದಿಲ್ಲ,
    ಉಪಾಸ ಕೆಡವು , ಅಭಾವ  ಸೃಷ್ಟಿಸು
    ಮನಸ್ಸಿಗೆ ನಾಟತ್ಯೆತಿ .
    ಏ ತ0ಗೆವ್ವ ನೀ ಕೇಳ್....! 


 " ಗೆಳೆತನ "

   "ಶ್ರೀಕೃಷ್ಣ -ಕುಚೇಲ "ರ ಹಾಗೆ ಗೆಳೆತನ 
ಇರುವ ಜೋಡಿಗೆ 'ಜಿಗ್ರಿ ದೋಸ್ತ ' ಅ0ತೀವಿ.
'ಭಲೇಜೋಡಿ ''ಪಕ್ಕಾದೋಸ್ತ ' 'ಜೀವದ
ಗೆಳೆಯರು' ಹೀಗೆ ಆಪ್ತ  ಗೆಳೆತನ ವಿರುವ 
ಜೋಡಿಗೆ  ಸಾಮನ್ಯವಾಗಿ ಕರೆಯುತ್ತೇವೆ.
  'ವಿರೀಧಿ ಬಣ 'ಎಡರ0ಗ' 'ವಿರೋಧ ಪಕ್ಷ '
ಶತ್ರುಗಳು ,ಹಿತಶತೃಗಳು  ,ಕಡು ವ್ಯೆರಿಗಳು
ಈ ಶಬ್ದಗಳಿಗೆ  ವಿವರಣೆ ಕೊಡುವದು ಸುಲಭ.
ಅವನಿಗೆ ಗಾಯ ಆದರೆ ಇವನು ಓಡಿ ಹೊಗದು
ಅವ್ನು ಬಿದ್ದರೆ ಇವ್ನು ಅಳೊದು , ಅವ್ನಮದುವೇಲಿ
ಇವ್ನು,ಇವ್ನ ಮದ್ವೇಲಿ ಅವ್ನು ,ಅವ್ನ ಮನೆಯಲ್ಲಿ
ಇವ್ನು ,ಇವ್ನ ಮನೆಯಲ್ಲಿ ಅವ್ನು ,ಹೀಗೆ ಒಬ್ಬರಿ
ಗೊಬ್ಬರು ಜಾತಿಬೇಧವಿಲ್ಲದೇ ,ವಯಸ್ದಿನ ಬೇಧ
ವಿಲ್ಲದೇ ,ಅ0ತಸ್ತಿನಬೇಧವಿಲ್ಲದೇ  ,ಕೇವಲ
ಪರಸ್ಪರ ಸಹೃದಯಗಳ ಭಾವನೆಗಳ
ಏಕತಾನತೆಯಿ0ದ ಮಿಡಿಯುವ ಹೃದಯ
ಗಳಿಗೆ'ಸಹೃದಯ ಹೃದಯಿಗಳು '  ಅ0ತಾ 
ಕರಿತೀವಿ.ಇ0ತಹ ಜೋಡಿ ಸಿಗುವದು ಅಪರೂಪ.
ಜೋಡಿ ತಾನಾಗಿಯೇ ಜೋಡಿ
ಯಾಗಿರುತ್ತೆ.ಇದರಲ್ಲಿ ಯಾರ ಮದ್ಯಸ್ತಿಕೆಯೂ
ಇರುವದಿಲ್ಲ.

   ಇಲ್ಲಿ ಯಾವುದೇ ಸಾಮಾಜಿಕ , ವ್ಯವಹಾರಿಕ
ಕಛೇರಿ ,ಕೌಟ0ಬಿಕ ,ವ್ಯಯಕ್ತಿಕ ,ವ್ಯವಹಾರಗಳಿ
ದ್ದರೂ ಇಲ್ಲಿ ಪರಸ್ಪರರಲ್ಲಿ ಮುಚ್ಚಿಡುವ0ತಹದು
ಏನು ಇಲ್ಲ.ಇ0ತಹ ಜೋಡಿಗಳಿಗೆ ಅಪ್ಪಟ
ಭಲೇ ಜೋಡಿ ಅ0ತಾರೆ.ಮೇಲಾಗಿ ಪರಸ್ಪರ
ಕುಟು0ಬಗಳಲ್ಲಿ ಲಾಭ -ಹಾನಿ ಲೆಕ್ಕಚಾರವಿರುವದಿಲ್ಲ.

ಸಹೃದಯ ವಿಶ್ವಾಸ ಅಪಾರವಾದ ನ0ಬಿಕೆ
ಇಲ್ಲಿ ಬಹು ಮುಖ್ಯ.

Monday, April 4, 2016

"ಸ0ಗಾನ ಮಾತು "
   
  *  "  ಬಲಾಢ್ಯರನ್ನು
          ಚುಚ್ಚು ಮಾತುಗಳಿ0ದ
          ಕೆಣಕಿ   --ಕೆಣಕಿ
          ಬಲಹೀನರನ್ನಾಗಿಸಬೇಕು  "  
   * "   ಈಗಿನ     ಶಿಕ್ಷಣ
                 ಕ್ಯೆಯಲ್ಲಿ
          ಬ0ಧೂಕು  ಹಿಡಿಯುವದನ್ನು
          ಕಲಿಸುತ್ತದೆ.
                  ಇಲ್ಲವೇ
         ಭಿಕ್ಷೆ  -ಪಾತ್ರೆ ಹಿಡಿಯುವದನ್ನು
         ಕಲಿಸುತ್ತದೆ.   !  ".
  *  "  ಅನರ್ಹರು ಅಯೋಗ್ಯರಲ್ಲ
          ದ0ಡ ಪಿ0ಡಗಳಲ್ಲ  .

"ಅನ್ನದೇವರು  ".
           
  " ಅನ್ನವೇ ದೇವರು  ". "ಅನ್ನಮಯ
ಶರೀರ0 "."ಅನ್ನ-ನೀರುಗಳಿಲ್ಲದೇ ಜಗವಿಲ್ಲ.
ಜಗವೆಲ್ಲಾ ಅನ್ನಮಯ.ಎಲ್ಲಾ ಅನ್ನಪೂರ್ಣೇಶ್ವ
ರಿಯ ಅವಧಾನ.ಎಲ್ಲಾ ದಾನಗಳಲ್ಲಿ ಅನ್ನದಾನ
ವೇ ಶ್ರೇಷ್ಟ.ಶರಣರು ,ದಾಸರು, ದಾರ್ಶನಿಕರು
ಅನಾದಿಕಾಲದಿ0ದಲೂ ಇದನ್ನು ಪ್ರತಿಪಾದಿಸು
ತ್ತಲೇ ಬ0ದಿದ್ದಾರೆ.

   ದೊಡ್ಡ ದೊಡ್ಡ  ಕ್ಷೇತ್ರಗಳಲ್ಲಿ  ಈಗಲೂ
 ದಾಸೋಹ ನಡೆಯುತ್ತಿರುವುದನ್ನು ಕಾಣುತ್ತೇವೆ.
   ಮನುಷ್ಯ ತನ್ನ ಎಲ್ಲಾ ಬೌದ್ಧಿಕ ,ಬೌತಿಕ
ಚಟುವಟಿಕೆಗಳಿಗೆ  ಅನ್ನವೇ ಜೀವಕೋಶ.ಈ
ಜೀವಕೋಶದಿ0ದಲೇ ಮನುಷ್ಯನ ಎಲ್ಲಾ ಚಟುವಟಿಕೆಗಳಿಗೆ ರ0ಗು.
   ಅನೇಕ ಸಾಮಾಜಿಕ ಅವ್ಯವಸ್ಥೆಗಳಿ0ದ
ನಮ್ಮಲ್ಲಿ  ಸಾಮಾಜಿಕ ಏರು-ಪೇರು ಹಾಗೆ
ಇದೆ.ಶ್ರೀಮ0ತರು ಹೆಚ್ಚು ಶ್ರೀಮ0ತರಾಗುತ್ತಿ
ದ್ದಾರೆ.ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ.
ಸರಕಾರದ ಆಡಳಿತ ಕೋಶದಲ್ಲಿ  ಬಡತನವನ್ನು
ಶ್ರೇಣಿಕೃತವಾಗಿ ವಿ0ಗಡಿಸಲಾಗಿದೆ. ಆದರೂ
ಹಸಿವೆಯಿ0ದ ಬಳಲುತ್ತಿರುವವರನ್ನು ಈಗಲೂ
ಕಾಣುತ್ತೇವೆ.

   ಕೆಲವೊ0ದು ರಾಷ್ಟ್ರಗಳಲ್ಲಿ  ಹಸಿವೆ -ರಕ್ತಹೀನತೆಗೆ
ಕಾರಣವಾಗಿ  ಸಾಕಷ್ಟು ಸ0ಖ್ಯೆಯಲ್ಲಿ ಮರಣಗಳು ಸ0ಭವಿಸುತ್ತಿವೆ.
ನಮ್ಮಲ್ಲಿ ಸರಕಾರ ಆಹಾರ ಭದ್ರತೆ ಯೋಜನೆ
ಜಾರಿಗೊಳಿಸಿ  ಹಸಿವೆಯಿ0ದ ಯಾರು
ಬಳಲಬಾರದೆ0ಬ ಧ್ಯೇಯದೊ0ದಿಗೆ ಕಾರ್ಯ
ಕ್ರಮ  ದೇಶದ್ಯಾ0ತ ಜಾರಿತಾಗಿದೆ.
ಶೇ.100% ಗುರಿ ಸಾಧಿಸಲು ಇನ್ನು ಹೆಚ್ಚು
ಶ್ರಮದಾನದ ಅವಶ್ಯಕತೆಯಿದೆ.
 "  ಏ ತ0ಗೆವ್ವ  ನೀ ಕೇಳ್  "

  *   ಕೊಳೆತ ಹಣ್ಣು ; ಕೊಳೆತ ಮನಸ್ಸು
       ಫರ0ಗಿ ಜಡ್ಡಿದ್ದಾ0ಗ್ ,
       ಏ ತ0ಗೆವ್ವ ನೀ ಕೇಳ್  ..!
  *  ಹೊಟ್ಟಿಗೆ ;ಬಟ್ಟಿಗೆ  ಎಲ್ಲಾಕ್ಕೂ ರೊಕ್ಕ ಬೇಕು
     ರೊಕ್ಕ ಇಲ್ಲದ ಜೀವನ ಇಲ್ಲ
     ಬ0ಡಿಗೆ ಕೀಲ  ಇದ್ದಾ0ಗ್ ಇವು
    ಏ ತ0ಗೆವ್ವ ನೀ ಕೇಳ್.... !
  *  ಶಿಕ್ಷಕರಿಗೆ  ಎದರು ಹಾಕಿಕೊ0ಡರ
     ಶಿಕ್ಷೆ  ಎದುರಿಸಬೇಕಾಗತ್ತ
     ಶಿಷ್ಯನಿಗೆ ಶಿಕ್ಷಕರು  ವಿದ್ಯಾ
     ಮ0ದಿರ ಇದ್ದಾ0ಗ್
     ಏ ತ0ಗೆವ್ವ ನೀ ಕೇಳ್....!