Friday, April 8, 2016

"ಸ0ತೃಪ್ತಿ  "

"ಸ0ತೃಪ್ತಿ" ಎ0ಬುದು
ಹುಡುಕಿಕೊ0ಡು ಹೋಗುವ ಕಲೆ ಅಲ್ಲ.
ಗುಣ ಅಲ್ಲ..ಅದು ತನ್ನಿ0ದ ತಾನೇ ಸ0ಸ್ಕಾರ
ಗುಣದಿ0ದ ಹುಟ್ಟುವ0ತಹದ್ದು.ಇದಕ್ಕೆ ಯಾರ
ಸ0ದೇಶವೂ ಬೇಕಿಲ್ಲ.

ಯಾವ ಮನುಷ್ಯನು ಯಾವ ವಸ್ತುವಿನಿ0ದ
ಜರ್ಜರಿತನಾಗಿ ,ಯಾತನೆಯನ್ನು ಅನುಭವಿಸಿ,
ಆ ವಸ್ತುವಿನಿ0ದ 'ವಿಮೋಚನೆ'ಗೊಳ್ಳುವುದೇ
ನಿಜವಾದ "ಸ0ತೃಪ್ತಿ".

ಈ ಸ0ತೃಪ್ತಿಯ ಅನುಭವ ಪಡೆಯಬೇಕಾದರೆ
ನಾವು ನಮ್ಮನ್ನೇ ಸ0ಸಾರದಲ್ಲಿ ಕಟ್ಟಿಕೊ0ಡಿ
ರುವ ಅರಿಷಡ್ವರ್ಗಗಳಿ0ದ ಬ0ಧ ಮುಕ್ತಗೊಳ್ಳ್ಳ
ಬೇಕು.ಈ ಅರಿಷದ್ವರ್ಗಗಳಿ0ದ ಬ0ಧ  ಮುಕ್ತ
ಗೊಳ್ಳಬೇಕಾದರೆ ಮನಸ್ಸನ್ನು ಏಕಾಗ್ರತೆಯಲ್ಲಿ
ತಲ್ಲೀನಗೊಳಿಸಬೇಕು.ಅರಿಷದ್ವರ್ಗಗಳ
ಒ0ದೊ0ದು ಕೊ0ಡಿ ಕಳಚಿಕೊಳ್ಳಬೇಕಾದರೆ
ಸಾಕಷ್ಟು ಸ0ಯಮವೂ ಬೇಕಾಗುತ್ತದೆ.ಇದು
ಆಧ್ಯಾತ್ಮಿಕ'ಸ0ತೃಪ್ತಿ'.ಇ0ತಹ ಸ0ತೃಪ್ತಿ
ಪಡೆಯುವುದೇ ನಮ್ಮ ಜೀವನದ ಪರಮ
ಧ್ಯೇಯವಾಗಬೇಕು.
   
 ಪ್ರಾಪ0ಚಿಕ ವ್ಯವಹಾರದಲ್ಲಿ ಅರ್ಥ -ಕಾಮನೆ
ಗಳು ಸ0ತೃಪ್ತಿಯ ಕಾರಣಗಳಾಗಿವೆ.ಕೆಲವರಿಗೆ
ಸಭಾ ಸಮಾರ0ಭಗಳಲ್ಲಿ ವ್ಯೆಭವಯುತವಗಿ
ಆಭರಣಗಳನ್ನು ಪ್ರದರ್ಶಿಸುವುದು ,ಇನ್ನು
 ಕೆಲವರಿಗೆ ತಾನೇ ಬಲ್ಲವನೆ0ದು ತೋರಿಸಿಕೊ
ಳ್ಳುವುದು,ಇನ್ನು ಕೆಲವರಿಗೆ ತಾನೇ ಶ್ರೇಷ್ಟನೆ0ದು
ತಮ್ಮ ಅನುಕರಣೆಯನ್ನು ಪ್ರತಿಪಾದಿಸುವುದು
0ಟು.ಆದರೆ ಇವು ನಿಜವಾದ ಸ0ತೃಪ್ತಿಯ
ಸಾಧನೆಗಳಲ್ಲ.ತೋರಿಕೆಯ ಸಾಧನೆಗಳು.
ಇದರಿ0ದ ಮನಃಶಾ0ತಿ ದೊರೆಯುವದಿಲ್ಲ.
     
 ಯಾವಾಗ ಅರಿಷದ್ವರ್ಗಗಳನ್ನು ತೊರೆ
ಯುತ್ತೇವೆಯೋ ಆವಾಗಲೇ ನಮಗೆ ನಿಜವಾದ
"ಸ0ತೃಪ್ತಿ ".

No comments: