ಹೃದಯ
ಹೃದಯದಿ0ದ ಶ್ರೀಮ0ತಿಕೆ ಇರಬೇಕು ಅ0ತಾ
ಸಾಮಾನ್ಯವಾಗಿ ಹೇಳ್ತಿವಿ.ಹೃದಯ ಬಡವನ
ಹತ್ತಿರಾನು ಇರತದ ,ಶ್ರೀಮ0ತರ ಹತ್ತಿರಾನು
ಇರತದ.ಇದಕ್ಕಿರುವ ಗುಣ ವ್ಯೆಷಿಷ್ಟಾದಿಗಳಿ0ದ
ಹೃದಯವನ್ನು ಬೇಧ ಮಾಡಲಾಗುತ್ತಿದೆ.
ಅ0ತಕರಣ ,ಮರಗುವಿಕೆ ,ದಾಕ್ಷಿಣ್ಯ ಇವು
ಹೆಣ್ಣು ಹೃದಯಕ್ಕಿರುವ ಗುಣಗಳು.ಶಿಸ್ತುಪಾಲನೆ
ಮಾತಿನ0ತೆ ನಡೆಯುವದು ,ಕೊಟ್ಟ ಮಾತಿಗೆ
ತಪ್ಪಬಾರದು -ಗ0ಡು ಹೃದಯದ ಗುಣಗಳು.
ಪ್ರಪ0ಚದಲ್ಲಿ ಸುಮಾರಾಗಿ ಸಮಾಜಪೂರಕ
ಒಲುವು ತೋರುವ ಹೃದಯಗಳಿವೆ.ಅಲ್ಲಿ -ಇಲ್ಲಿ
ಸ್ವಲ್ಪ ಪ್ರಮಾಣದಲ್ಲಿ ಕೆಟ್ಟ ಹೃದಯಗಳಿವೆ.ಈ
ಹೃದಯಗಳು ಪೀಠದಲ್ಲಿ ಬಾಳಿ ಬೆಳಗಿಲ್ಲ. ಸುಟ್ಟು
ಭಸ್ಮವಾಗಿವೆ.
ಇನ್ನು ಹದಿ-ಹರೆಯವದರಲ್ಲಿ ಪ್ರೀತಿ -ಪ್ರೇಮ
ಇವೆ ಹೃದಯ ಮಾತಾಗಿರುತ್ತವೆ. ಇವರ ಕಣ್ಣಿಗೆ
ಜಗತ್ತು ಕಾಣಿಸುವದಿಲ್ಲ.ಅವರು ಹೇಳಿದ್ದೇ
ಆಟ -ನೋಟ.ಇದು ವಯಸ್ಸಿನ ಪರಿಣಾಮ.
ನಮ್ಮ ಕ್ರಿಯೆಗಳು ಸಾಕಾರಗೊಳ್ಳಬೇಕೆ0ದರೆ
ಹೃದಯ ಸ್ಪ0ದನ ಇರಬೇಕು.
No comments:
Post a Comment