Friday, April 8, 2016



   "ಯುಗಾದಿ  "
         
   ಹಿ0ದು ಪ0ಚಾ0ಗದ ಪ್ರಕಾರ
ಇವತ್ತಿನಿ0ದ ಅ0ದರೆ ಯುಗಾದಿ ಪಾಡ್ಯಯಿ0ದ
ಹೊಸ ವರುಷ ಪ್ರಾರ0ಭ.

        ಹಳ್ಳಿಗಾಡಿನಲ್ಲಿ  ಯುಗಾದಿಯು ವಿಶೇಷ
ವಾಗಿ ಆಚರಿಸುತ್ತಾರೆ. ಹೆಣ್ಣು ಮಕ್ಕಳಿಗ0ತೂ
ಕೆಲಸವೇ ಕೆಲಸ.ಹಿ0ದಿನ ದಿನ ಮನೆಯಲ್ಲಿಯ
ಎಲ್ಲಾ ಸಾಮಾನುಗಳನ್ನು ಸ್ವಚ್ಛಗೊಳಿಸಿ ,ಮನೆ
ಮು0ದೆ ,ಒಳಗೆ ಸೆಗಣಿಯಿ0ದ ಮನೆಯೆಲ್ಲಾ
ಸಾರಿಸುತ್ತಾರೆ.ಅ0ಗಳ ಮು0ದೆ ರ0ಗೋಲಿ
ಅಲ0ಕಾರಕ್ಕೇನು ಕಡಿಮೆಯಿರುವದಿಲ್ಲ.
ಯುಗಾದಿಯ ವಿಶೇಷ ವಾಗಿ   ಉತ್ತರ
 ಕರ್ನಾಟಕದಲ್ಲಿ  ವಿಶೇಷವಾಗಿ "ಬೇವು "
ತಯಾರಿಸುತ್ತಾರೆ. ಈ ಬೇವಿನಲ್ಲಿ
ಬೇವಿನಹೂ ,ಮಾವಿನಕಾಯಿಯ ಗೊಜ್ಜು ,ಹುಳಿ
ಬಾಳೆಹಣ್ಣು ,ಮಾವಿನಹಣ್ಣು ,ಕರ್ಜೂರ ,ಯಾಲಕ್ಕಿ
ಗೋಡ0ಬಿ,ದ್ರಾಕ್ಷಿ ,ಕಲ್ಲು ಸಕ್ಕರೆ ,ಬೆಲ್ಲ , ಪುಠಾಣಿ
ಪುಠಾಣಿಹಿಟ್ಟು , ಇವೆಲ್ಲವನ್ನೂ ಕಲೆಸಿ
ತಯಾರಿಸುವ ರಸಾಯನಕ್ಕೆ "ಬೇವು "ಅ0ತಾ ಕರೆಯುತ್ತಾರೆ.
ಪೂಜೆಯ ನ್ಯೆವೇದ್ಯಕ್ಕೆ  ಹೋಳಿಗೆ ,ಕಟ್ಟಿನಸಾರು
ಅನ್ನ ,ಕಾಯಿಪಲ್ಲೆ ಹೀಗೆ ನೂರೆ0ಟು ಪದಾರ್ಥಗಳನ್ನು 
ತಯಾರಿಸಿ ದೇವರಿಗೆ ನ್ಯೆವೇದ್ಯ ಮಾಡಿದ ಮೇಲೆ  ಮನೆಯವರೆಲ್ಲಾ
ಒಟ್ಟಗಿ ಕಲೆತು  ಊಟ ಮಾಡುವದು  .ಬೀಗರಿಗೆ
ಬ0ದ ಅತಿಥಿಗಳಿಗೆ  ಬೇವಿನ ಪಾನಕ ನೀಡಿ
ಸತ್ಕರಿಸುವದು ಇದು ಒ0ದು ಪದ್ಧತಿ.
ಬೇವು -ಕಹಿಯ ಸ0ಕೇತ.
ಬೆಲ್ಲ -ಸಿಹಿಯ ಸ0ಕೇತ. 
ಇವೆರಡರ ಮಿಶ್ರಣವೇ ಬೇವಿನ ಪಾನಕ.
ಜೀವನದಲ್ಲಿ ಬರುವ ಕಹಿಹಾಗು ಸಿಹಿ
ಪ್ರಸ0ಗಗಳನ್ನು ಸಮಾನವಾಗಿ ಹ0ಚಿಕೊಳ್ಳಬೇಕು -ಎ0ದು ಸಾರುವುದೇ ಈ
ಹಬ್ಬದ ವಿಶೇಷ. ಹಾಗೆ0ದು ಈ ಹಬ್ಬಕ್ಕೆ
ಎಲ್ಲಾ ಸ್ನೇಹಿತರನ್ನು ಆಹ್ವಾನಿಸಿ ಅವರಿಗೆ
ಬೇವಿನ ಪಾನಕ  ನೀಡುವ ಮೂಲಕ ಹಳೆಯ
ವ್ಯೆಶಮ್ಯ ಮರೆತು ಬರುವ ಹೊಸ ವರುಷದ
ಹೊಸಸ್ನೇಹದಿ0ದ  ಸ್ನೇಹದ ಬೆಸುಗೆಯನ್ನು 
ಗಟ್ಟಿಗೊಳಸೋಣ ಎನ್ನುವ ಮಹತ್ತರವಾದ
ಸ0ದೇಶ  ಇದರಲ್ಲಿದೆ.

ಇನ್ನು  ಹಳ್ಳಿಗಾಡಿನಲ್ಲಿ  ಗ್ರಾಮದೇವತೆಯನ್ನು 
ಆರಾಧಿಸುವ ಮೂಲಕ ಕೆಲವು ಕಡೆ ಅಗ್ನಿಕೊ0ಡ ,
ಆಚರಿಸುವ ಪದ್ಧತಿ ಇದೆ.
ಗ್ರಾಮಕ್ಕೆ ಯಾವುದೇ ಮಾರಕ ರೋಗಗಳು 
ಬರದಿರಲಿ.ಗ್ರಾಮ ದೇವತೆ ಸ0ತುಷ್ಟಳಾಗಿ
ಜನರ ಆರೋಗ್ಯ ಕಾಪಾಡಲಿ ಎನ್ನುವ 
ಪ್ರಾರ್ಥನೆ ಇದರಲ್ಲಿದೆ.

ಕೆಲ ಹಳ್ಳಿಗಳಲ್ಲಿ ಈ ಸ0ಧರ್ಭದಲ್ಲಿಯೇ ಬಣ್ಣ 
ಆಡುವ ಪರಿಪಾಠವು0ಟು.ಕೆಲವು ಕಡೆ ಹೋಳಿಗೆ
ಬಣ್ಣವಾಡುತ್ತಾರೆ.
ಒಟ್ಟಿನಲ್ಲಿ ದೇಶದ್ಯಾ0ತ ಆಚರಿಸುವ ಈ
ಹಬ್ಬಕ್ಕೆ ತಮಗೆಲ್ಲರಿಗೂ ಶುಭಕೋರುವೆ.

No comments: