Tuesday, April 5, 2016

 " ಗೆಳೆತನ "

   "ಶ್ರೀಕೃಷ್ಣ -ಕುಚೇಲ "ರ ಹಾಗೆ ಗೆಳೆತನ 
ಇರುವ ಜೋಡಿಗೆ 'ಜಿಗ್ರಿ ದೋಸ್ತ ' ಅ0ತೀವಿ.
'ಭಲೇಜೋಡಿ ''ಪಕ್ಕಾದೋಸ್ತ ' 'ಜೀವದ
ಗೆಳೆಯರು' ಹೀಗೆ ಆಪ್ತ  ಗೆಳೆತನ ವಿರುವ 
ಜೋಡಿಗೆ  ಸಾಮನ್ಯವಾಗಿ ಕರೆಯುತ್ತೇವೆ.
  'ವಿರೀಧಿ ಬಣ 'ಎಡರ0ಗ' 'ವಿರೋಧ ಪಕ್ಷ '
ಶತ್ರುಗಳು ,ಹಿತಶತೃಗಳು  ,ಕಡು ವ್ಯೆರಿಗಳು
ಈ ಶಬ್ದಗಳಿಗೆ  ವಿವರಣೆ ಕೊಡುವದು ಸುಲಭ.
ಅವನಿಗೆ ಗಾಯ ಆದರೆ ಇವನು ಓಡಿ ಹೊಗದು
ಅವ್ನು ಬಿದ್ದರೆ ಇವ್ನು ಅಳೊದು , ಅವ್ನಮದುವೇಲಿ
ಇವ್ನು,ಇವ್ನ ಮದ್ವೇಲಿ ಅವ್ನು ,ಅವ್ನ ಮನೆಯಲ್ಲಿ
ಇವ್ನು ,ಇವ್ನ ಮನೆಯಲ್ಲಿ ಅವ್ನು ,ಹೀಗೆ ಒಬ್ಬರಿ
ಗೊಬ್ಬರು ಜಾತಿಬೇಧವಿಲ್ಲದೇ ,ವಯಸ್ದಿನ ಬೇಧ
ವಿಲ್ಲದೇ ,ಅ0ತಸ್ತಿನಬೇಧವಿಲ್ಲದೇ  ,ಕೇವಲ
ಪರಸ್ಪರ ಸಹೃದಯಗಳ ಭಾವನೆಗಳ
ಏಕತಾನತೆಯಿ0ದ ಮಿಡಿಯುವ ಹೃದಯ
ಗಳಿಗೆ'ಸಹೃದಯ ಹೃದಯಿಗಳು '  ಅ0ತಾ 
ಕರಿತೀವಿ.ಇ0ತಹ ಜೋಡಿ ಸಿಗುವದು ಅಪರೂಪ.
ಜೋಡಿ ತಾನಾಗಿಯೇ ಜೋಡಿ
ಯಾಗಿರುತ್ತೆ.ಇದರಲ್ಲಿ ಯಾರ ಮದ್ಯಸ್ತಿಕೆಯೂ
ಇರುವದಿಲ್ಲ.

   ಇಲ್ಲಿ ಯಾವುದೇ ಸಾಮಾಜಿಕ , ವ್ಯವಹಾರಿಕ
ಕಛೇರಿ ,ಕೌಟ0ಬಿಕ ,ವ್ಯಯಕ್ತಿಕ ,ವ್ಯವಹಾರಗಳಿ
ದ್ದರೂ ಇಲ್ಲಿ ಪರಸ್ಪರರಲ್ಲಿ ಮುಚ್ಚಿಡುವ0ತಹದು
ಏನು ಇಲ್ಲ.ಇ0ತಹ ಜೋಡಿಗಳಿಗೆ ಅಪ್ಪಟ
ಭಲೇ ಜೋಡಿ ಅ0ತಾರೆ.ಮೇಲಾಗಿ ಪರಸ್ಪರ
ಕುಟು0ಬಗಳಲ್ಲಿ ಲಾಭ -ಹಾನಿ ಲೆಕ್ಕಚಾರವಿರುವದಿಲ್ಲ.

ಸಹೃದಯ ವಿಶ್ವಾಸ ಅಪಾರವಾದ ನ0ಬಿಕೆ
ಇಲ್ಲಿ ಬಹು ಮುಖ್ಯ.

No comments: