Tuesday, April 5, 2016


 "ಏ  ತ0ಗೆವ್ವ ನೀ ಕೇಳ್   " 

  * ತೆಲಿ ಗಟ್ಟಿ ಐತ0ತ  ಹಣಿ ಚಚ್ಕೋಬಾರ್ದು
     ಸಮಸ್ಯೆ ಎಲ್ಲ್ಯೆತೆ ಆ ಬೇರನ್ನ್ ತೆಗಿ;
     ಚಿಗರಾ0ಗಿಲ್ಲ ;ಒಣಗಿ ಹೋಗ್ತ್ಯೆತಿ.
     ಏ ತ0ಗೆವ್ವ ನೀ ಕೇಳ್  .....!
  *  ಮೇಘ ಧೂತ ಸ0ದೇಶನು ತರ್ತಾನ್
      ಮಳೆನೂ  ತರ್ತಾನ ;
      ಸೃಷ್ಟಿಯ ಅಸಲಿ ಸ0ದೇಶವೂ ಹೌದು
      ಜಲಮೂಲಾನು ಹೌದು.
     ಏ ತ0ಗೆವ್ವ ನೀ ಕೇಳ್....!
  *  ಬಿದ್ದರ್ ,ಗುದ್ದಿದರ್ , ಕಿವಿ ಹಿ0ಡಿದರ್
     ಕೆಲ್ಸ ಆಗುದಿಲ್ಲ,
    ಉಪಾಸ ಕೆಡವು , ಅಭಾವ  ಸೃಷ್ಟಿಸು
    ಮನಸ್ಸಿಗೆ ನಾಟತ್ಯೆತಿ .
    ಏ ತ0ಗೆವ್ವ ನೀ ಕೇಳ್....! 


No comments: