Monday, April 11, 2016

 "   ಪುರುಷಾರ್ಥಗಳು  "  
     
 ಯೌವನ ,ಧನ ,ಅಧಿಕಾರ
ವಿವೇಕ , -- ಇವು ಪುರುಷಾರ್ಥಗಳು.
ಧನ -ಅಧಿಕಾರ  ಇವು ಮನುಷ್ಯನ  ಗೌರವ
ಪ್ರತಿಷ್ಟೆ ಹೆಚ್ಚಿಸುವ  ಗುಣ ವಿಷೇಶಣಗಳು.
ಮನುಷ್ಯ ಧನದ ಮದದಿ0ದ ಈ ದಿನ
ಜಗತ್ತನ್ನೇ ಖರೀಧಿಸಬಲ್ಲವನಾಗಿದ್ದಾನೆ.ಹಣದ
ಸೆಳೆತಕ್ಕೆ ಸಿಲುಕದ ಮನುಷ್ಯನಿಲ್ಲ.ಒ0ದಿಲ್ಲಾ
ಒ0ದು ರೀತಿಯಲ್ಲಿ ಹಣದ  ಆಸೆಗೆ ಒಳಗಾಗಿ,
ಅಥವಾ ಬದುಕಿಗಾಗಿ ಹಣವನ್ನು ಶೇಖರಿಸಲೇ
ಬೇಕಾದ0ತಹ ಪ್ರಸ0ಗ ಬ0ದಾಗ  ,ಎ0ತಹ
ಚಾಣಾಕ್ಷನು ಹಣಕ್ಕೆ ದಾಸನಾಗಿ ಹಣದ
 ಕ್ಯೆಗೊ0ಬೆಯಾಗಿ ಮಾರು ಹೋಗಿರುವ
ಉದಾಹರಣೆಗಳಿಗೆ ಕೊರತೆ ಇಲ್ಲ.

  ಹಣವೊ0ದಿದ್ದರೆ  ಜಗತ್ತನ್ನು ತನ್ನ  ಅ0ಗ್ಯೆಯಲ್ಲಿ
ಕುಣಿಸಬಹುದು.ಇದರ ಜೊತೆಗೆ ಅಧಿಕಾರದ
ಮದ ಸೇರಿದರೆ  ಆತನ ಪುರುಷಾರ್ಥಕ್ಕೆ 
ಲ0ಗು -ಲಗಾಮು ಇರುವದಿಲ್ಲ.ಹಳ್ಳಿಗಳಲ್ಲಿ
ಹಣದಜೊತೆಗೆ  ಗ್ರಾಮ ಪ0ಚಾಯ್ತಿ ಅಧಿಕಾರ
ದೊರೆತರ0ತೂ ,ಅವರೇ ಅಲ್ಲಿನ ಸರ್ವಾಧಿಕಾರಿ.
ಸರ್ವಾಧಿಕಾರಿ ಧೋರಣೆ ಬರಬರುತ್ತಾ ಹಿ0ಸಾ
ತ್ಮಕ ರೂಪ ತಾಳಿ  ಮಾಡಬಾರದ ಕೆಲಸಗಳಿಗೆ
ಕ್ಯೆ ಹಾಕಿಸುತ್ತದೆ.

  ಹಣ  ಅಧಿಕಾರ  ಇವೆರಡು ಪುರುಷಾರ್ಥದ 
ಜೊತೆಗೆ ಯೌವನ ಸೇರಿದರೆ ಸಾಕು.ತಾವು
ಮಾಡಿದ್ದೇ ಆಟ .ತಾವು ನೋಡಿದ್ದೇ ನಾಟಕ.
ಇ0ತಹ ಸ0ಧರ್ಭದಲ್ಲಿ ಸೌ0ಧರ್ಯ ,ಅ0ಗ
ಸೌಷ್ಟವವುಳ್ಳ ,ಕಾಮಾ0ಧಿತ ಹೆಣ್ಣು ದೊರೆತರೆ
ಹಣ ಅಧಿಕಾರ ಯೌವನ ಇವು ಮನುಷ್ಯನನ್ನು
ಯಾವ ಮಟ್ಟಕ್ಕೆ ಒಯ್ಯುತ್ತವೆ ಎ0ಬುದು
ಉಹಿಸಲುಸಾದ್ಯ.ಕುಡಿತ ಇಸ್ಪೇಟ ಈ 
ಹವ್ಯಾಸಗಳು ಸೇರಿದರೆ  ಮದಾ0ಧರು ,
ಕಾಮಾ0ಧಿತರಾದ ಪುರುಷರು  ಮನೆ ಕಡೆಗೆ
ಲಕ್ಷನೇ ಹಾಕುವದಿಲ್ಲ.ಮನೆಯನ್ನು ಮರೆತು
ರಸಿಕ ಜಗತ್ತಿನಲ್ಲಿ ಕಾಲ ಕಳೆಯುತ್ತಾರೆ.
ಎಲ್ಲಾ ಕಳೆದುಕೊ0ಡು  ಉಟ್ಟ ಬಟ್ಟೆ ಚಡ್ಡಿ 
ಧೋತರ ಉಳಿದಾಗ  ಅವರಿಗೆ ತನ್ನ ಹೆ0ಡಿರು
ಮಕ್ಕಳು ,ಮನೆ ,ಮಠ ,ಕುಟು0ಬ ,ಗೆಳೆಯರು
ನೆನಪಾಗುತ್ತಾರೆ.ಈ ಪುರುಷಾರ್ಥಗಳ
 ದಾಸನಾದರೆ ಪುರುಷತ್ವವನ್ನೇ ಮರೆತು
ಹಾಳಾದವರು ಸಾಕಷ್ಟು ಜನರಿದ್ದಾರೆ.ಈ
ಪುರುಷಾರ್ಥಗಳು ಅರಿಸಿ ಬ0ದಾಗ ವಿವೇಕದಿ0ದ 
ಬಳಿಸಿದರೆ ಜಗತ್ತೇ ನಿಮ್ಮ
ದಾಸನಾಗುತ್ತೆ. 


No comments: