Monday, April 4, 2016

"ಅನ್ನದೇವರು  ".
           
  " ಅನ್ನವೇ ದೇವರು  ". "ಅನ್ನಮಯ
ಶರೀರ0 "."ಅನ್ನ-ನೀರುಗಳಿಲ್ಲದೇ ಜಗವಿಲ್ಲ.
ಜಗವೆಲ್ಲಾ ಅನ್ನಮಯ.ಎಲ್ಲಾ ಅನ್ನಪೂರ್ಣೇಶ್ವ
ರಿಯ ಅವಧಾನ.ಎಲ್ಲಾ ದಾನಗಳಲ್ಲಿ ಅನ್ನದಾನ
ವೇ ಶ್ರೇಷ್ಟ.ಶರಣರು ,ದಾಸರು, ದಾರ್ಶನಿಕರು
ಅನಾದಿಕಾಲದಿ0ದಲೂ ಇದನ್ನು ಪ್ರತಿಪಾದಿಸು
ತ್ತಲೇ ಬ0ದಿದ್ದಾರೆ.

   ದೊಡ್ಡ ದೊಡ್ಡ  ಕ್ಷೇತ್ರಗಳಲ್ಲಿ  ಈಗಲೂ
 ದಾಸೋಹ ನಡೆಯುತ್ತಿರುವುದನ್ನು ಕಾಣುತ್ತೇವೆ.
   ಮನುಷ್ಯ ತನ್ನ ಎಲ್ಲಾ ಬೌದ್ಧಿಕ ,ಬೌತಿಕ
ಚಟುವಟಿಕೆಗಳಿಗೆ  ಅನ್ನವೇ ಜೀವಕೋಶ.ಈ
ಜೀವಕೋಶದಿ0ದಲೇ ಮನುಷ್ಯನ ಎಲ್ಲಾ ಚಟುವಟಿಕೆಗಳಿಗೆ ರ0ಗು.
   ಅನೇಕ ಸಾಮಾಜಿಕ ಅವ್ಯವಸ್ಥೆಗಳಿ0ದ
ನಮ್ಮಲ್ಲಿ  ಸಾಮಾಜಿಕ ಏರು-ಪೇರು ಹಾಗೆ
ಇದೆ.ಶ್ರೀಮ0ತರು ಹೆಚ್ಚು ಶ್ರೀಮ0ತರಾಗುತ್ತಿ
ದ್ದಾರೆ.ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ.
ಸರಕಾರದ ಆಡಳಿತ ಕೋಶದಲ್ಲಿ  ಬಡತನವನ್ನು
ಶ್ರೇಣಿಕೃತವಾಗಿ ವಿ0ಗಡಿಸಲಾಗಿದೆ. ಆದರೂ
ಹಸಿವೆಯಿ0ದ ಬಳಲುತ್ತಿರುವವರನ್ನು ಈಗಲೂ
ಕಾಣುತ್ತೇವೆ.

   ಕೆಲವೊ0ದು ರಾಷ್ಟ್ರಗಳಲ್ಲಿ  ಹಸಿವೆ -ರಕ್ತಹೀನತೆಗೆ
ಕಾರಣವಾಗಿ  ಸಾಕಷ್ಟು ಸ0ಖ್ಯೆಯಲ್ಲಿ ಮರಣಗಳು ಸ0ಭವಿಸುತ್ತಿವೆ.
ನಮ್ಮಲ್ಲಿ ಸರಕಾರ ಆಹಾರ ಭದ್ರತೆ ಯೋಜನೆ
ಜಾರಿಗೊಳಿಸಿ  ಹಸಿವೆಯಿ0ದ ಯಾರು
ಬಳಲಬಾರದೆ0ಬ ಧ್ಯೇಯದೊ0ದಿಗೆ ಕಾರ್ಯ
ಕ್ರಮ  ದೇಶದ್ಯಾ0ತ ಜಾರಿತಾಗಿದೆ.
ಶೇ.100% ಗುರಿ ಸಾಧಿಸಲು ಇನ್ನು ಹೆಚ್ಚು
ಶ್ರಮದಾನದ ಅವಶ್ಯಕತೆಯಿದೆ.

No comments: