Monday, July 25, 2016

"ಮೌಲ್ಯಗಳು  "
       ---   ---   ---   -
           ಕಳೆದು ಹೋದ ವಸ್ತುವಿನಿ0ದ ಏನೇ
ಚಿ0ತಿಸಿದರೂ , ಎಷ್ಟೇ ಚಿ0ತಿಸಿದರೂ
ಫಲವಿಲ್ಲ. ಅದು ಚಿ0ತೆಯನ್ನು ಹೆಚ್ಚಿಸುತ್ತದೆ
ವಿನಾಃ  ಶಾ0ತಿಯನ್ನು ತ0ದು ಕೊಡುವದಿಲ್ಲ.
     ಸತ್ಯ ,ಶೀಲ.ಚಾರಿತ್ರ್ಯ ,ಧರ್ಮ ,ನ್ಯಾಯ
ಇವು ಬಹು ಮೌಲ್ಯವುಳ್ಳವುಗಳು. ಇವುಗಳ
ಬೆಲೆಯನ್ನು ಕಟ್ಟಲಾಗುವದಿಲ್ಲ.ಸಮಯ 
ಸ0ಧರ್ಭಕ್ಕನುಸಾರವಾಗಿ 'ಉಪ್ಪರಿಗೆಯೆಷ್ಟು
ಹಣ ಸುರವಿದರೂ  ಈ ಮೌಲ್ಯಗಳನ್ನು
ಕಳೆದುಕೊ0ಡರೆ  ಪುನಃ ಪಡೆಯಲಾಗುವದಿಲ್ಲ.
ಇವು ಜೀವನದ  ನವರತ್ನಗಳಲ್ಲಿ ಒ0ದು.
ಇವುಗಳನ್ನು ಕಳೆದುಕೊ0ಡು ಜೀವನ
ಸಾಗಿಸುವದು  ಜೀವ0ತ ಶವಕ್ಕೆ ಸಮಾನ.
    ಆರ್ಥಿಕ ಪರಿಗಣನೆ ಮಾಡುವ ಯಾವುದೇ
ಗುಣಗಳನ್ನು ಕಳೆದುಕೊ0ಡರೂ ಅವುಗಳನ್ನು
ಸ0ಪಾದಿಸಬಹುದು.ಅದರ ಬಗ್ಗೆ ಚಿ0ತಿಸುವ
ಅಗತ್ಯವಿಲ್ಲ.
   ಒಳ್ಳೆಯ ಮೌಲ್ಯಗಳು  ಒಳ್ಳೆಯ ಕೃಷಿ
ಇದ್ದಹಾಗೆ. ಕಷ್ಟ ಕಾಲದಲ್ಲಿ  ಈ ಮೌಲ್ಯಗಳೇ
ಮಾನವನನ್ನು  ಕಾಪಾಡಬಲ್ಲವು.ಕೊನೆಯ
ಉಸಿರಿರುವ ತನಕ  ಈ ಮೌಲ್ಯಗಳನ್ನು
ರಕ್ಷಿಸಲು ಪ್ರಯತ್ನಿಸಬೇಕು.

"ಬದುಕು "
         
 ಜೀವನವೆ0ಬ  ನಾಟಕವೇ  '  ಬದುಕು '.
ಈ ನಾಟಕದ  ಅ0ಕ  ಪರದೆಯ  ಮೇಲೆ ಬರುವ
ಚಿತ್ತಾಕರ್ಷಕ   ಸೀನರಿಗಳು ,ಕಲಾವಿದರ
ಹಾಸ್ಯ , ಅಭಿನಯ ,  ನಾಟಕದ  ಸ0ದೇಶ
ಎಲ್ಲವೂ. ಪ್ರೇಕ್ಷಕರ ಮನರ0ಜನೆಗಾಗಿ
ರೂಪಿಸಲ್ಪಟ್ಟವಾದರೂ ,  ಇದರಲ್ಲಿ ಮನುಷ್ಯನ
ಕಲೆಯಿದೆ. ಜೀವನ  ಕಲೆಯಿದೆ. ಈ  ಕಲೆಯಲ್ಲಿ
ಕಥೆ -ಕಟ್ಟುವ ನಾಟಕಕಾರ  ಪ್ರಪ0ಚದಲ್ಲಿ
ನಡೆಯುವ ಎಲ್ಲಾ  ವ್ಯವಹಾರಗಳನ್ನು  ವಾಸ್ತವಿಕ
ನೆಲೆಗಟ್ಟಿನಲ್ಲಿ  ವಿಮರ್ಷಿಸಿ  ಪ್ರೇಕ್ಷಕರಿಗೆ ಮನ
ಮುಟ್ಟುವ0ತೆ  ನಾಟಕ ರಚಿಸಿ  ಪ್ರದರ್ಶನಕ್ಕೆ
ಸಜ್ಜುಗೊಳಿಸುತ್ತಾನೆ.ಇದು ನಾಟಕದ ಬಹಿರ0ಗ
ರೂಪ.ಜೀವನದ ಬಹಿರ0ಗ  ಸ್ವರೂಪ.
    
ನೂರಾರು  ಕಲಾವಿದರಿರುವ  ನಾಟಕ
ತ0ಡ. ಆ  ತ0ಡ  ನಡೆಸಿಕೊಡುವ ನಾಟಕದ
ಅ0ಕಣದ  ಹಿ0ದೆ.  ನೂರಾರು ಕಲಾವಿದರ
ಅಸಲಿ ಭಿನ್ನ -ಭಿನ್ನ  ಜೀವನ ಕಥೆಗಳನ್ನು
ಕೇಳಿದಾಗ ಯಾರಿಗಾದರೂ ಕರಳು ಚುರ್ರ
ಗುಟ್ಟುತ್ತದೆ.
  
ನಾಟಕದಲ್ಲಿ  '  ನಾಯಕ ' ಪಾತ್ರ ಮಾಡುವ
ಪಾತ್ರದಾರಿ  ನಿಜ ಜೀವನದಲ್ಲಿ  ಯಾರಿಗೂ
ಬೇಡವಾದ ,ನಾಲ್ಕು ಜನರಿ0ದ ತಿರಸ್ಕರಿಸಲ್ಪಟ್ಟ
ವ್ಯಕ್ತಿಯಾಗಿರುತ್ತಾನೆ.ಜೀವನದ 'ಟೆಸ್ಟ ' 
ಆಟಗಳಲ್ಲಿ ಸೋಲು ಕ0ಡು ,ನೋವು 
ಅನುಭವಿಸಿದವರು ಅನೇಕರು. ಆದರೂ
ಇವರೆಲ್ಲರೂ  ಅದನ್ನು ಮರೆತು  ನಾಟಕ
ಪ್ರಾರ0ಭವಾದೊಡನೆ  ಪಾತ್ರಕ್ಕೆ ತಕ್ಕ0ತೆ
ತನ್ನ ನಟನ ಸಾಮರ್ಥ್ಯವನ್ನು  ಪ್ರದರ್ಶಿಸಿ
ಜನ ಮೆಚ್ಚುಗೆ ಗಳಿಸುತ್ತಾನೆ.

 ಈ ತತ್ವವೇ  ಜೀವನದ ' ಅಸಲಿ  ತತ್ವ '.
ನಾವೆಲ್ಲರೂ  ಜೀವನದಲ್ಲಿ ಎಷ್ಟೇ ಕಷ್ಟ -
ಕಾರ್ಪಾಣ್ಯ -ಸೋಲು -ವನವಾಸ  ಅನುಭವಿಸಿ
ದರೂ  ಅವುಗಳನ್ನು ಮೆಟ್ಟಿ  ಜೀವನ ಸಾಗಿಸು
ವದೇ  ನಿಜವಾದ ಬದುಕು.ಇದುವೇ ಸಾರ್ಥಕ
ಬದುಕು.ಇ0ತಹ ಬದುಕಿಗೊ0ದು 'ನೆಲೆ -ಬೆಲೆ '
ಖ0ಡಿತಾ ಇರುತ್ತದೆ.
  "  ಏ ತ0ಗೆವ್ವ ನೀ ಕೇಳ್ "

  *  "  ಸ0ಸಾರದಲ್ಲಿ  ಸುಖ -  ಶಾ0ತಿ
          ಸಮೃದ್ಧಿಯಿರುವಾಗ ,ಹಾಕಿಕೊಳ್ಳುವ
          ಬ0ಗಾರದ ಒಡವೆಗಳಿಗೆ  ಒ0ದು 
          ಬೆಲೆ ಬರತ್ಯೆತೆ  ".
          ಏ ತ0ಗೆವ್ವ ನೀ ಕೇಳ್....
  *  "  ಹಾರೋ ಹಕ್ಕಿಯನ್ನು 
          ಹಿಡಿಯಕ್ಕಾಗುದಿಲ್ಲ...
                ಹಾ0ಗ್
         ಹರೇದ ಮನಸ್ಸನ್ನ
         ಹಿಡಿಯಕ್ಕಾಗುದಿಲ್ಲ ".
         ಏ ತ0ಗೆವ್ವ ನೀ ಕೇಳ್...
  *  "  ಋಣಾನುಬ0ಧ  ,ರಕ್ತ ಸ0ಭ0ಧ
         ಕಾ0ಕ್ರೀಟ ಇದ್ದಾ0ಗ  ".
         ಏ ತ0ಗೆವ್ವ ನೀ ಕೇಳ್...

  "  ಸ0ಗಾನ  ಮಾತು "

  *  "  ಹರಿತವಾದ  ನಾಲಿಗೆಗಿ0ತ ,
         ಮೊ0ಡು ಬೆಪ್ಪಾದ  ನಾಲಿಗೆಯು
         ಹೆಚ್ಚು  ದಿನ  ಬಾಳುತ್ತದೆ  ".
  *  "  ಎಷ್ಟೇ  ಒಳ್ಳೆಯವನಿದ್ದರೂ ,
         ಅನುವ0ಶಿಕ ಹಾಗು  ಅನುಕರಣಿಯ
         ಕುಡಿತಗಾರನು  ಸ0ಪಾದಿಸುವದು
         ಶೂನ್ಯ  ಮಾತ್ರ  ".
  *  "  ಮನುಷ್ಯನಲ್ಲಿ  ಮನುಷ್ಯತ್ವವೇ. ಶ್ರೇಷ್ಟ.
         ಈ  ಆ0ಶವು ಕಾನೂನಿಗೆ ಒಮ್ಮೊಮ್ಮೆ 
             ವ್ಯತಿರಿಕ್ತವಾಗಿರುತ್ತದೆ  "".

Friday, July 22, 2016

 "  ಏ ತ0ಗೆವ್ವ ನೀ ಕೇಳ್  "

  *  " ಬಡವನ  ಬದುಕೊ0ದು
        'ಡಬ್ಬಾ  ಬ0ಡಿ '
         ಏ ತ0ಗೆವ್ವ ನೀ  ಕೇಳ್.... "
  *  "  ಒಳ ಬಾಗಿಲಿನಿ0ದ ಪ್ರವೇಶ
         ಪಡೆದವನು ..
         ಹೊರಬಾಗಿಲಿನಿ0ದ ಹೊರಬರಲೇಬೇಕು
         ಏ ತ0ಗೆವ್ವ ನೀ ಕೇಳ್... "
  *  "  ಭಿಕ್ಷೆ  -- ಎ0ಬುದು  ಹೊಟ್ಟೆಯ ಭಾಷೆ "
         ಏ ತ0ಗೆವ್ವ ನೀ ಕೇಳ್...
 "  ಸ0ಗಾನ  ಮಾತು"

  *  "  ಒಳ್ಳೆಯ  ಸ0ಸ್ಕಾರ ಪಡೆದ0ತ ಮನಸ್ಸು
         ಎ0ದಿಗೂ    ವಿಕಾರ
          ವಿಕಲ್ಪಗೊಳ್ಳಲಾರದು. "
  *  "  ಕೆಟ್ಟದ್ದನ್ನರಿತಾಗಲೇ  ಒಳ್ಳೆಯದು
         ಯಾವುದೆ0ದು  ಗೋಚರಿಸುವದು  ".
  *  " ಒಬ್ಬರ ಪರಿಛಾಯೆಯಾಗುವದಕ್ಕಿ0ತ
       ತನ್ನದೇ ವ್ಯಕ್ತಿತ್ವವನ್ನು  ಬೆಳಸಿಕೊಳ್ಳು
       ವದು. ಉತ್ತಮ. "
    "ಪ್ರಪ0ಚ  "

ವಾಸ್ತವದಲ್ಲಿ ನಾವು ಕಾಣದ
ದೇವರಿಗೆ ಕೋಟಿ ಕೋಟಿ ಹಣವನ್ನು ದೇಣಿಗೆ
ಭ0ಢಾರ ಪೆಟ್ಟಿಗೆಗಳಲ್ಲಿ ಹಾಕುತ್ತೇವೆ.ದೇವರ
ಸೇವೆ ಎ0ಬ ನೆಪದಲ್ಲಿ ಕೋಟಿ -ಕೋಟಿ
ಲಕ್ಷ -ಲಕ್ಷ ಗಟ್ಟಳೆ ಬೆಲೆಬಾಳುವ  ವಸ್ತ್ರವನ್ನು
ದಾನ ನೀಡುತ್ತೇವೆ. ಮನಶಾಃತಿ ಸಿಗಲೆ0ಬ
ಶ್ರಾದ್ಧದ ಹೆಸರಲ್ಲಿ  ಅಲ್ಲಲ್ಲಿ ಭೋಜನವನ್ನು
ಏರ್ಪಡಿಸುತ್ತೇವೆ. ತೆರಿಗೆ ವ0ಚಿಸಿದ
ಹಣದಿ0ದ ಬಚಾವಾಗಲು ಊರಿಗೆ
ದೇವ ಮ0ದಿರವನ್ನು  ಕಟ್ಟಿಸಿ ಭಲೇ
ಎನ್ನಿಸಿಕೊಳ್ಳುತ್ತೇವೆ.ಹೀಗೆ ಮನುಷ್ಯ 
ದುಡ್ಡಿದ್ದಾಗ  ನ್ಯಾಯಸಮ್ಮತವಾಗಿ ನಡೆಯುವ
ಬದಲು ಅಪಮಾರ್ಗದಿ0ದ ತನ್ನ ವ್ಯಯಕ್ತಿಕ
ವರ್ಚಸ್ಸನ್ನು  ಹೆಚ್ಚಿಸುವ , ಇತರೆ ಲೋಭಾದಿ
ಗುಣಗಳಿ0ದ ಹಣವನ್ನು ನೀರಿನ0ತೆ ವ್ಯಯ
ಮಾಡುತ್ತಾರೆ.ಧನ್ಯತೆ ,ಭಕ್ತಿ ಭಾವನೆ ,ಕೃತಜ್ನತೆ
ಇಲ್ಲಿ ಇರುವದಿಲ್ಲ.
       ಇ0ತವರಿಗಾಗಿಯೇ  ದೊಡ್ಡ -ದೊಡ್ಡ
ದೇವಸ್ಥಾನಗಳಲ್ಲಿ  ಇ0ತವರನ್ನು ಆಕರ್ಷಿಸಲು
ನೂರೆ0ಟು ಯೋಜನೆಗಳನ್ನು ಸಿದ್ಧಪಡಿಸುತ್ತಾರೆ
ಇ0ತವರನ್ನು ರತ್ನ-ಗ0ಬಳಿ ಹಾಸಿ ಸ್ವಾಗತಿ
ಸುತ್ತಾರೆ.ಇದು ಮಾಡುವದು ಸಮ0ಜಸವಲ್ಲ
ವೆ0ದುಗೊತ್ತಿದ್ದರೂ ಮಠ ,ಮಠದ ಆಧೀನದಲ್ಲಿ
ರುವ ಇತರೆ ಧಾರ್ಮಿಕ ಸ0ಸ್ಥೆಗಳು ನಡೆಯಬೇಕೆ
0ಬ ಸದುದ್ದೇಶದಿ0ದ ಅವರು ಸುಮ್ಮನಾಗಿ
ಸ್ವೀಕರಿಸುತ್ತಾರೆ.
      ನ್ಯಾಯ ಸಮ್ಮತವಾಗಿ ಆರ್ಥಿಕ ತೊ0ದರೆ
ಯಲ್ಲಿರುವ ಬ0ಧು ಬಳಗ ,ತ0ದೆ ತಾಯಿ ,
ಅಶಕ್ತರು ,ದೀನರುಬಡವರಿಗೆ ನಾವು
ಆತ್ಮ ಸ0ತೋಷವಾಗಿ  ಅವರನ್ನು ಬರಮಾಡಿ
ಕೊ0ಡುಸಹಾಯ ನೀಡಿದರೆ ಇ0ತವರು
ಅವರ ದೃಷ್ಟಿಯಲ್ಲಿ  ದೇವರಾಗುತ್ತಾರೆ.
ಉಳ್ಳವರು ಇದನ್ನು ಅರ್ಥ್ಯಸಿದರೆ ಲೋಕ
ಕಲ್ಯಾಣಕ್ಕೇನು ಕೊರತೆ ಇಲ್ಲ.

Thursday, July 21, 2016

 "    ಏ ತ0ಗೆವ್ವ   ನೀ ಕೇಳ್  "

  *  "  ಭೂಮಿಯ ಭಾಗ್ಯ
         ಅನ್ನದ ಭಾಗ್ಯ --ಈ ಭಾಗ್ಯಗಳ
         ಋಣ ತೀರಿಸಲಿಕ್ಕೆ  ಆಗೊಲ್ಲ ".
        ಏ ತ0ಗೆವ್ವ ನೀ ಕೇಳ್...
  *  "  ತುತ್ತು  ಅನ್ನ  ಇಟ್ಟಾತ
         ಮಲಗಲು ಮೂರು ಗೇಣು ಕೊಟ್ಟಾತ
         ಇವರಿಬ್ಬರೂ ಭಾತೃ ಸಮಾನರು".
         ಏ ತ0ಗೆವ್ವ ನೀ ಕೇಳ್...
  *  "  ಶತಕೋಟಿ ಸಾಲವಾದರೂ
         ಹಿತವಾಗಿ ತೀರಿಸಲು
         ಸತಿ ,ಸುತ ,ಮತಿಯುಳ್ಳವರು
         ಮೇಲೆದ್ದು ಮೆಚ್ಚುವರು ನೋಡಾ.."
         ಏ ತ0ಗೆವ್ವ ನೀ ಕೇಳ್...

          " ಬೀಕ್ಷೆ  "

 "ಬೀಕ್ಷೆ " --ಬೇಡುವ ದನಿಯಲ್ಲಿ
ಅರ್ತತೆ ಇರಬೇಕು.ಸ0ಪೂರ್ಣವಾಗಿ ಅಧಿಕಾರ
ಯುತವಾಗಿ ಬೇಡುವದು 'ಭೀಕ್ಷೆ' ಎನಿಸುವದಿಲ್ಲ
.ಅದೊ0ದು ದರ್ಪವಾಗುತ್ತದೆ.
ಪೌರಾಣಿಕ ಕಥಾ ವಿಭಾಗಗಳಲ್ಲಿ ಭೀಕ್ಷೆಗೆ ಅನೇಕ
ಸ್ವಾರಸ್ಯಕರವಾದ ಕಥೆಗಳು0ಟು.
"ಯಾವ ವ್ಯಕ್ತಿಯು ಯಾವ ಪುರುಷಾರ್ಥದಲ್ಲಿ
ಬಲಿಷ್ಟನಾಗಿದ್ದಾನೋ,ಸಬಲನಾಗಿದ್ದಾನೋ ,
ಅ0ತಹ ವ್ಯಕ್ತಿಯಿ0ದ ಭೀಕ್ಷೆ ಪಡೆದರೆ ಅದಕ್ಕೆ
ಚ್ಯುತಿ ಇಲ್ಲ.

  ಆರ್ಥಿಕ ಭೀಕ್ಷೆ,ಸಾಮಾಜಿಕ ಭೀಕ್ಷೆ ,ನ್ಯಾಯ ಭಿಕ್ಷೆ
ವಿದ್ಯಾಭಿಕ್ಷೆ ,ಅನ್ನ ಭಿಕ್ಷೆ ,ಸ0ತಾನ ಭಿಕ್ಷೆ ,
ಆಹಾರ ಭೀಕ್ಷೆ , ಹೀಗೆ ನಾನಾ ಬಗೆಯ 
ಭಿಕ್ಷೆಗಳಿವೆ.ಈ ಎಲ್ಲಾ ಭಿಕ್ಷೆಗಳು ಮಾನವ 
ನಿರ್ಮಿತ ಸಮಾಜ ವ್ಯವಸ್ಥೆ ನಿರ್ಮಿಸಿದೆ.
ಭೀಕ್ಷೆಯಲ್ಲಿ ಕೆಲವೊ0ದು ಭೀಕ್ಷೆಗಳು ಘೋರ
ತಪಸ್ಸನ್ನಾಚರಿಸಿ ಪಡೆಯುವದು0ಟು.ಈಗ
ಅ0ತಹ ಪರಿಸ್ಥಿತಿಯಲ್ಲಿ ಮೇಲೆ ಉದಾಹರಿಸಿದ
ಬಹುತೇಕ  ಭೀಕ್ಷೆಗಳಲ್ಲಿ ಕೆಲವೇ ಕೆಲವೊ0ದು
ಭೀಕ್ಷೆಗಳು ಈಗ ಚಾಲನೆಯಲ್ಲಿವೆ ಎ0ದು ಹೇಳಬಹುದು.

ಈಗ ಸಾಮಾಜಿಕ  ಬದಲಾವಣೆಯ ಹಿನ್ನಲೆಯಲ್ಲಿ
ಚುನಾವಣೆ ಸಮೀಪ ಬ0ದಾಗ ರಾಜಕಾರಣಿಗಳೆ
ಲ್ಲರೂ ಮನೆ -ಮನೆಗೆ ತೆರಳಿ ಮತದಾರರಲ್ಲಿ
ಭೀಕ್ಷೆ ಕೇಳುವದು ಸಾಮಾನ್ಯ.ಈ ಭೀಕ್ಷೆಗೆ
ಪ್ರತಿಯಾಗಿ  ಪ್ರತಿಭೀಕ್ಷೆ ಅಭ್ಯರ್ಥಿಗಳು
 ಆಗಿ0ದಾಗ್ಗೆ ಆರ್ಥಿಕವಾಗಿ ತು0ಬಿಸಿಕೊಡುವ
ದಾವ0ತವನ್ನು ಕಾಣುತ್ತೇವೆ.ವಿಶೇಷವೆ0ದರೆ
ಸರಕಾರಗಳೂ ಕೂಡಾ ಇತ್ತಿತ್ತಲಾಗಿ ಆರ್ಥಿಕ
ವಾಗಿ ಸ0ಕಷ್ಟಕ್ಕೊಳಗಾಗಿರುವ ಬಡ ಕುಟು0ಬ
ಗಳಿಗೆ ಉಚಿತ ಆಹಾರ ಪದಾರ್ಥಗಳು ಇತರೆ
ಸೌಲಭ್ಯಗಳನ್ನು ಒದಗಿಸುವ ಮೂಲಕ
 ಬಡ ಕುಟು0ಬಗಳಿಗೆ ನೆರವಾದರೂ ಸಾಮಾಜಿಕ
ವಿಶ್ಲೇಷಕರ ದೃಷ್ಟಿಯಲ್ಲಿ ಹಾಗು ವಿಧ್ಯಾವ0ತರಲ್ಲಿ
ಇದು"ಸರಕಾರದ ಭೀಕ್ಷೆ " ಯಾಗಿ ಪ್ರಖ್ಯಾತವಾಗಿ
ಪ್ರಚಾರ ಪಡೆಯುತ್ತಿದೆ.

   ಮನುಷ್ಯ ಸಾಮಾಜಿಕವಾಗಿ ಜರ್ಜರಿತನಾ
ದಾಗ ಸುತ್ತಮುತ್ತಲಿನ ಆಯಾಮಗಳು  ನೆರವಿಗೆ
ಬಾರದಿದ್ದಾಗ ,ಅಸಹಾಯಕತೆ ಎದುರಾಗಿ
"ಹೊಟ್ಟೆ "-ಹೊಟ್ಟೆಯು ಭಿಕ್ಷೆ ಬೇಡಲು
 ಅ0ಗಲಾಚುವ ,ಪ್ರಚೋದಿಸುವ ಸನ್ಮಿವೇಶ
ಎದುರಾಗುವ ಸ0ಧರ್ಭಗಳು ಜಾಸ್ತಿ.
ಇ0ದಿನ  ಕಾಲದಲ್ಲಿ  ನಕಲಿ ಯಾವುದು ,ಅಸಲಿ
ಯಾವುದು ಗೊತ್ತಾಗುವದಿಲ್ಲ. ಎಷ್ಟೋ
ಪ್ರಜ್ನಾವ0ತ ನಿರುಧ್ಯೋಗಿಗಳು ಕೆಲಸಕ್ಕಾಗಿ
ಅಲೆದಾಡಿ ,ವಿಫಲರಾಗಿ ಕೊನೆಗೆ ಭೀಕ್ಷೆ
ಬೇಡುವ ಮಾರ್ಗವನ್ನು  ಆಯ್ಕೆಮಾಡಿಕೊ0ಡದ್ದು0ಟು.
ಇನ್ನು ಕೆಲವು ಸ0ಧರ್ಭಗಳಲ್ಲಿ ಭೀಕ್ಷೆ
 ಬೇಡುವವರ ವಯಸ್ಸು ,ಲಿ0ಗ ,ಸಾಮಾಜಿಕ
ಕೌಟ0ಬಿಕಪರಿಸ್ಥಿತಿ ಅರಿತು ಸ್ಥಾನಿಕ
ಪ0ಚಾಯ್ತಿಗಳೇ ಅದರ ಹೊಣೆಯನ್ನು ಭರಿಸಿ
'ಭೀಕ್ಷೆ ಮುಕ್ತ '  ಸಮಾಜ ನಿರ್ಮಿಸಲು 
ಮು0ದಾಗುವಲ್ಲಿ ಶ್ರಮಿಸಿದರೆ ಸಾಮಜಿಕ
ಸುಧಾರಣೆಗೆ  ಒ0ದು ಇ0ಬು ದೊರಕಿದ0ತಾಗುತ್ತದೆ.
ಬಹುಷಃ ಸರಕಾರದ ನೀತಿಯಲ್ಲಿ ಭೀಕ್ಷೆ 
ಕಾನೂನು ಬಾಹಿರ.ಆದರೆ ಅದಕ್ಕೆ ತಕ್ಕ0ತೆ ನಮ್ಮ ವ್ಯವಸ್ಥೆ
ಬದಲಾಗಬೇಕಾಗಿದೆ.


  "  ಸ0ಗಾನ  ಮಾತು "

  *  "ವ್ಯಾಕರಣದ     ಗ0ಧವಿಲ್ಲದ ಶಾಲೆ
       ದೇವರಿಲ್ಲದ ಹಾಳು ಗುಡಿಯಿದ್ದ0ತೆ ".
  *  "  ನಿಜವಾದ  ಸನ್ಯಾಸತ್ವದ  ಸ0ಸ್ಕಾರ
        ಪಡೆದವ  ಸ0ಸಾರದ  ಸೋ0ಕು
        ಪಡೆಯಲಾರ  ".
  *  "  ಛಿದ್ರ  -- ಛಿದ್ರಗೊ0ಡ ಸಮಾಜವನ್ನು
         ಏಕೀಕರಣಗೊಳಿಸುವದು  ಸುಲಭದ
         ಮಾತಲ್ಲ  ".

Wednesday, July 20, 2016

 "ಸ0ಗಾನ ಮಾತು  "
   
  *  "  ಜನಪ್ರಿಯತೆ ಪಡೆದು ಬಹುಮತ
         ಗಳಿಸಿದ ನಾಯಕನು ಕೆಲವೇ 
         ದಿನಗಳಲ್ಲಿ  ದರಿದ್ರ ನಾರಾಯಣನಾಗುವ
         ರಾಜಕೀಯ ವಿದ್ಯಾಮಾನಗಳು
         ನಮ್ಮಲ್ಲಿ  ಹೇರಳವಾಗಿವೆ  ".
  *  "  ಚುನಾಯಿಸುವ ಯಾವೊ0ದು
         ಪಕ್ಷವೂ ಬಹುತೇಕ  ಕಪ್ಪು
         ಚುಕ್ಕೆಯಿ0ದ ಮುಕ್ತವಾಗಿಲ್ಲ  ".
  *  "  ಇ0ದು ಪ್ರಜಾಸತ್ತೆಯೆ0ಬುದು
         ಕಪ್ಪು ಹಣ ಶೇಖರಿಸುವ ಬ್ರಹತ್
         ಕಾರ್ಖಾನೆಯಾಗಿದೆ  ".
" ಸತ್ಸ0ಗ  "

        ಮನುಷ್ಯ ಯಾವಾಗಲೂ ಕೆಲಸದಲ್ಲಿ
ನಿರತನು.ಕೆಲಸವಿಲ್ಲದೇ ದುಡಿಮೆಯಿಲ್ಲ.
ದುಡಿಮೆಯಿಲ್ಲದೇ ಜೀವನವಿಲ್ಲ.ಈ ಸ0ಘರ್ಷದಲ್ಲಿ
ತಪ್ಪು -ಒಪ್ಪುಗಳಾಗುವದು ಸಹಜ.
     ಯಾವ ಕೆಲಸವನ್ನು ನಾಲ್ಕು ಜನ 
ಒಪ್ಪುವದಿಲ್ಲವೋ   ಅ0ದರೆ ಸ್ವೀಕರಿಸದಿಲ್ಲವೋ
ಅದನ್ನು ಸಾಮಾನ್ಯವಾಗಿ ಎಲ್ಲರೂ ಸಮಾಜಗಳು
ಕೂಡಾ 'ತಪ್ಪ0ತೆ ' ತೀರ್ಮಾನಿಸುತ್ತವೆ.
  ತಪ್ಪುಗಳಲ್ಲಿ ಅನೇಕ ಪ್ರಕಾರಗಳು .ಸಾಮಾಜಿ
ಕವಾಗಿ ಹಾನಿಯಾಗದ0ತಹ ತಪ್ಪುಗಳು
ಕ್ಷಮ್ಯ ತಪ್ಪು , ಸಮಾಜವನ್ನೇ ಅಲ್ಲೋಲ
ಕಲ್ಲೋಲ .ಮಾಡುವ0ತಹ ತಪ್ಪುಗಳು ಅಕ್ಷಮ್ಯ.
  ಹಿರಿಯರು ,ದಾರ್ಶನಿಕರು ,ಧರ್ಮಾತ್ಮರು
ಹೇಳಿದ0ತೆ ಕ್ಷಮ್ಯ  ಮತ್ತು ಅಕ್ಷಮ್ಯ ಎರಡು
ತಪ್ಪುಗಳಿಗೆ 'ಪ್ರಾಯಶ್ಚಿತ ' - ಮಾತ್ರದಿ0ದ
ತಪ್ಪುಗಳ ಅಫರಾದ ಮಟ್ಟವನ್ನು ಕಡಿಮೆಗೊಳಿ
ಸಬಹುದು/ ಅದರಿ0ದ ಹೊರಬರಬಹುದು.
  ದೇವರ ಧ್ಯಾನ  , ಸೇವೆ ,ಭಕ್ತಿ ಆಚರಣೆ
ಕಾಯಕ ಮು0ತಾದ ಸದ್ಧಾರ್ಮಿಕ ಕಾಯಕ
ಕಾರ್ಯಗಳನ್ನು ಮಾಡುತ್ತಾ ಆತ್ಮ ಪರಿಶುದ್ಧತೆ  
ಮಾಡಿಕೊಳ್ಳಲು ಸುಲಭ ಮಾರ್ಗ ಇದು.
.ಮನುಷ್ಯ ದುರ್ಬಲನಲ್ಲ
ವ್ಯವಸ್ತೆ ಆತನನ್ನು ದುರ್ಬಲಗೊಳಿಸುತ್ತದೆ.ಈ
ಒತ್ತಡಗಳಿ0ದ ಹೊರಬರುವ ದಾರಿ 
ಕ0ಡುಕೊಳ್ಳಬೇಕು.ಅದುವೇ 'ಸತ್ಸ0ಗ 'ದ ದಾರಿ
 "ಏ ತ0ಗೆವ್ವ ನೀ ಕೇಳ್  " 

  *  "  ಊಹಾತೀತವಾಗಿರೋದು
         ಪಕ್ಷಾತೀತವಾಗಿರಬೇಕು
         ಏ ತ0ಗೆವ್ವ ನೀ ಕೇಳ್ ".
  *  "  ಬಡವ ಮಾತ್ರ ತಟ್ಟೆಯಲ್ಲಿದ್ದನ್ನು
         ಖಾಲಿ ಮಾಡ್ತಾನ "
         ಏ ತ0ಗೆವ್ವ ನೀ ಕೇಳ್..
.
  *  "  ಮ್ಯೆಯಾಗ  ಎಷ್ಟು ಕಾಲ ಮುಳ್ಳು
          ಇರುತ್ತೋ :ಅಷ್ಟು ಕಾಲ ಅದು 
          ಚುಚ್ಚುತ್ತಾ ಇರುತ್ತೆ. ಇದು ಅದರ
          ಸ್ವಭಾವ ಧೋಷ. ಇದನ್ನ ಕೀಳಲೇ 
          ಬೇಕು " 
          ಏ ತ0ಗೆವ್ವ ನೀ ಕೇಳ್....

Tuesday, July 19, 2016


  "  ಸ0ಗಾನ ಮಾತು "
-
  *  "  ಹದವಿರುವತನಕ ಮುದದಿ0ದ ನಡೆದು
          ಹದಮುಗಿದೊಡೆ ನೀನಾರೆ0ದು
          ಕೇಳುತ್ತಾರೆ... ? ಇ0ತವರ ಕತೆ
          ಕೊನೆಗೆ ಕತ್ತೆಯೂ ಕೇಳಲು ಇಷ್ಹ
          ಪಡುವದಿಲ್ಲ.  ".
  *  "  ಮನುಷ್ಯನ ನ0ಬಿಗೆಯ ಮೇಲಿನ
         ವಿಶ್ವಾಸವು ಘಟನೆಗಳನ್ನು ಆಧರಿಸಿ
         ಕ್ಷಣ ಕ್ಷಣಕ್ಕೂ  ಬದಲಾಗುತ್ತಿರುತ್ತದೆ ".
  *  "  ನಾಳೆ -- ನಾಡಿದ್ದರ ಚಿ0ತೆ
         ಉಳ್ಳವರದಾಗಿದ್ದರೆ. :
         ಇವತ್ತಿನ ಚಿ0ತೆ ಹಸಿದವನಾದಿಗಿರುತ್ತದೆ. 


 "ಜೀವನ  "

ಜೀವನ ಪ್ರಶ್ನೆಗಳ ಸಾಗರ.
ಪ್ರಶ್ನೆಗಳಿಗೆ  ಸೂಕ್ತ ಉತ್ತರ ಹುಡುಕುತ್ತಾ
ಹೋದ0ತೆ ಪ್ರಶ್ನೆಗಳ ಗಾತ್ರ ಪರ್ವತದ0ತೆ
ಬೆಳೆಯುತ್ತಾ ಹೋಗುತ್ತದೆ.ಹಾಗ0ತ ನಿರಾಸೆ
ಯಾಗಬೇಕಾಗಿಲ್ಲ.ನಿರಾಸೆಯ ಛಾಯೆ ಹೊತ್ತು
ಕ್ಯೆ ಚೆಲ್ಲಿ ಕುಳಿತರೆ , "ಜೀವನ " ವೆ0ಬ
ಆಶ್ಚರ್ಯಕರ ಭ0ಢಾರವನ್ನು ಅನುಭವಿಸಲು
ಸಾದ್ಯವಿಲ್ಲ.

        ಭ0ಢಾರದ  ಅನುಭವವೇ ಲೋಕಾಭಿ
ರಾಮ ರೂಢಿಗಳನ್ನು  ಕರಗತ ಮಾಡಿಕೊಡುವ
ಅತ್ಯ0ತ ಮಾಹಿತಿ ನೀಡುವ ಸಾಧನ.ಇದು
ಅ0ತರ್ಜಾಲ ಇದ್ದ ಹಾಗೆ.ಇದನ್ನು ನಾವು ಹಾಗೆ
ಬಿಡಬಾರದು. ಏನು ಬರುತ್ತ ,ಅದನ್ನು
 ಸ್ವೀಕರಿಸುತ್ತಾ "ಬ0ದದ್ದೆಲ್ಲಾ ಬರಲಿ ಗೋವಿ
0ದನ ದಯೆಯೊ0ದಿರಲಿ " ಹಾಗೆ ನೆನೆಯುತ್ತಾ
ಮು0ದೆ ಸಾಗುತ್ತಾ ಹೋಗಬೇಕು.ಇದು ಶಿವನ
ಬ್ರಹ್ಮಾ0ಡ ಸೃಷ್ಟಿ ಇದ್ದ ಹಾಗೆ.

     ಅನುಭವವೇ ಜೀವನ.ಅನುಭವದಿ0ದ
ಅನುಭೂತಿ ಪಡೆದು ಕೋಟಿ ಕೋಟಿ ಭಕ್ತ ಜನ
ಪಾವನರಾಗಿದ್ದಾರೆ.

    'ಜೀವನ 'ಸ0ಘರ್ಷಗಳ ಭೂತಾಯಿ.
ಅದನ್ನು ಭಿತ್ತಲೇ ಬೇಕು ಸದ್ಗುಣಗಳನ್ನು
ಪಡೆಯಲೇಬೇಕು. ಲೋಕ ಕಲ್ಯಾಣಗಳನ್ನು
ಮಾಡುತ್ತಾ ಸಾಗಬೇಕು. ಇದುವೇ "ಜೀವನ ".

 "ಗುರು ಪೂರ್ಣಿಮೆ"

ಹುಟ್ಟಿದಾರಭ್ಯದಿ0ದ..
ಅ0ಬೆಗಾಲಿನಿ0ದ ಹಿಡಿದು ನಡೆದಾಡುವವರೆಗೆ
ತೊದಲು ನುಡಿಯಿ0ದ ಮಾತಾಡುವವರೆಗೆ
ಗ0ಜಿಯಿ0ದ ಊಟ ಮಾಡುವವರೆಗೆ
ಮಗುವಿಗೆ ತಾಯಿಯೇ ಮೊದಲ ಗುರು.
ವಿದ್ಯೆ ಕಲಿಸುವ ಗುರುಗಳಿದ್ದಾರೆ
ಕುಲಗುರುಗಳಿದ್ದಾರೆ ,ರಾಜ ಗುರುಗಳಿದ್ದಾರೆ
ಮಠಾಧಿಪತಿಗಳಿದ್ದಾರೆ ಹೀಗೆ ನಾನಾ
ಪ್ರಕಾರದ ಗುರುಗಳಿದ್ದಾರೆ.
ಯಾರಿ0ದ....ನಾವು ಜ್ನಾನ ಪಡೆಯುತ್ತೇವೆಯೋ..
ಶಿಕ್ಷಣ ಪಡೆಯುತ್ತೇವೆಯೋ..
ವ್ಯವಹಾರ ಕಲಿಯುತ್ತೇವೆಯೋ..
ಅವರೇ ನಮ್ಮ ನಿಜವಾದ ಗುರುಗಳು.
ಆದ್ದರಿ0ದ..ಒ0ಗುರುಬ್ರಹ್ಮ,ಗುರು ವಿಷ್ಣು,
ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮ್ಯೆ ಗುರುವೇ ನಮಃ
ಹೀಗೆ ಗುರುವನ್ನು ಗೌರವಿಸುತ್ತಾರೆ.

ಪುರ0ದರ ಉಕ್ತಿ ಹೀಗಿದೆ..
"ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕ್ತಿ."
ಶುಭವಾಗಲಿ.
ಸರ್ವರಿಗೂ ಗುರು ಪೂರ್ಣಿಮೆಯ
ಶುಭಾಶಯಗಳು

Monday, July 18, 2016


"ಸೃಷ್ಟಿ ,ಸಮಾಜ ,ಚಿ0ತನೆ,ಕಾಯಕ "

 ಸೃಷ್ಟಿ ಸಮಾಜ ,ಚಿ0ತನೆ ,ಕಾಯಕ
ಇವು ಮಾನವ ಬದುಕಿನ ನಾಲ್ಕು ಸ್ತ0ಭಗಳು.
ಇವು ಒ0ದಕ್ಕೊ0ದು ಪೂರಕ ಕ್ರಿಯೆ ಉತ್ಪನ್ನ
ಮಾಡುವ0ತಹವು.

  ಸೃಷ್ಟಿ ,ನಿಸರ್ಗ  ಬ್ರಹ್ಮನ ಸೃಷ್ಟಿಯಾದರೆ
ಅವುಗಳ ಸೌ0ಧರ್ಯತೆ ,ಕೊಡುಗೆಗಳನ್ನು
ಅನುಭವಿಸುವದು ಭೂಲೋಕದ ಮೇಲೆ
ವಾಸಿಸುವ ಮನುಷ್ಯ ಸೇರಿದ0ತೆ ಎಲ್ಲಾ
ಜೀವರಾಶಿಗಳಿಗಿದೆ.

  ವ್ಯೆವಿಧ್ಯಮಯ ಜೀವರಾಶಿಗಳ  ಸೃಷ್ಟಿಯೇ
ಸಮಾಜ ನಿರ್ಮಾಣಕ್ಕೆ  ಕಾರಣವಾಗಿ ,ಇ0ದು
ಎಲ್ಲಡೆ ವ್ಯೆವಿಧ್ಯಮಯ ಸಮಾಜಗಳ ರೀತಿ
ರಿವಾಜು ,ಆಹಾರ ಪದ್ಧತಿ , ನಡಾವಳಿಕೆಗಳನ್ನು 
ಕಾಣುತ್ತಿದ್ದೇವೆ.

  ಮನುಷ್ಯನ ಕ್ಯೆಗೆಟುಕದ ಆಶೆಗಳೇ  ಜೀವ
ಜಗತ್ತಿನ ಜೀವಾಳವಾದರೂ ,ಮನುಷ್ಯನ
ಬುದ್ಧಿಮತ್ತೆಯನ್ನು  ಚಿ0ತಿಸುವ ಹಾಗೆ
ಮಾಡುವ ಚಟುವಟಿಕೆಗಳ ಕ್ರಿಯೆಗಳಿಗೆ
ನಾ0ದಿಯಾಗಿ  - ಒಳ್ಳೆಯವು 'ಕಾಯಕ 'ವೆನಿ
ಸಿಕೊಳ್ಳುತ್ತವೆ. ಅನಾಚಾರಗಳು  'ನರಕ '
ವೆನಿಸಿಕೊಳ್ಳುತ್ತವೆ.

   ನಮ್ಮ ಸ0ಸ್ಕೃತಿಯ ಆಧ್ಯಾತ್ಮಿಕ ಚಿ0ತನೆ
ಗಳು ,ಪೂರ್ವಜರ ಸಮಾಜ ಸುಧಾರಣ
ಚಿ0ತನೆಗಳು  ಇವೆಲ್ಲವುಗಳಿಗೆ ಸೃಷ್ಟಿಯೇ
ಮೂಲ ಕಾರಣ.ಆ ಸೃಷ್ಟಿಯೇ  ಮನುಷ್ಯನ
ಎಲ್ಲಾ ಬಗೆಯ ಸಾಮಾಜಿಕ ,ಆರ್ಥಿಕ ,ಕೌಟಾ0
ಬಿಕ ,ಪ್ರಾಪ0ಚಿಕ  ಆಗು -ಹೋಗುಗಳಿಗೆ
ಕಾರಣ.ಸೃಷ್ಟಿಯಿಲ್ಲದೇ ಜಗತ್ತು ಚಲನ ಶೀಲತ್ವ
ವನ್ನು ಕಳೆದುಕೊಳ್ಳುತ್ತದೆ.
  ಸೃಷ್ಟಿ ಅ0ದರೆ ಕೇವಲ ಸೃಷ್ಟಿ ಅಲ್ಲ.ಅದರ
ಹಿ0ದೆ ವಿನಾಶವು ಇರುತ್ತದೆ.ಇವೆರಡರ
ಕಾಗುಣತವೇ -'ಅಭಿವೃದ್ಧಿ '. ಸಚ್ಛಾರಿತ್ರವುಳ್ಳದ್ದು
ಅಭಿವೃದ್ಧಿ.ಅಧಾರ್ಮಿಕವಾದದ್ದು -ನಕಾರಾತ್ಮಕ.

"ಏ ತ0ಗೆವ್ವ ನೀ ಕೇಳ್ "

  *  "  ಮಾತಾಡಿದರ -ತೆಲೆಬುರಡೆ
         ಸೀಳುಹಾ0ಗಿರಬೇಕು ".
         ಏ  ತ0ಗೆವ್ವ ನೀ ಕೇಳ್....

  *  "  ಬಿಟ್ಟ - ಬಾಣ ತೆಲಿ ಸೀಳೀದು  ಬ್ಯಾಡ
         ಕುಡ್ಯಾಕ -  ನೀರ ಕೊಟ್ರ ಸಾಕ್  ".
        ಏ ತ0ಗೆವ್ವ ನೀ ಕೇಳ್.....

  *  "  ವಜ್ರಗಳ ಬೆಲೆ ಕಟ್ಟಬಹುದು
         ಎಲೆಕ್ಷನ್ನ್ -ಬೆಲೆ ಕಟ್ಟಕಾಗಲ್ಲ
         ಇದು ಚಿದ0ಬರ ರಹಸ್ಯ  ".
          ಏ ತ0ಗೆವ್ವ ನೀ ಕೇಳ್...

 "ಸ0ಗಾನ ಮಾತು "

  *  "  ದೇವರ ಕೆಲಸವೆ0ದು ಮಾಡುವ
         ಪ್ರತಿಯೊ0ದು ಸಮಾಜ ಕಾರ್ಯಗಳಲ್ಲಿ
         "  ಆನ0ದತೆಯು "  ನಾಟ್ಯವಾಡುತ್ತಿರುತ್ತದೆ.

  *  "  ಬೆ0ದ  ಜೀವ
         ನೊ0ದ  ಮನಸ್ಸು
         ಕ್ಷಣ -ಕ್ಷಣವೂ  ಕಟುಕನ. ಕ್ಯೆಯಿ0ದ
         ತಪ್ಪಿಸಿಕೊಳ್ಳಲು  ಯತ್ನಿಸಿ
          ಕೊನೆಗೆ. ಸಾಯುತ್ತದೆ. "

  *  "  ಕೃತಜ್ನನು  ಕೃತಘ್ನನಾಗಿ
         ಪರಿವರ್ತನೆಗೊ0ಡಾಗ. ಆತನ ನೆರಳು
         ಕೂಡಾ  ಭೂತದ0ತೆ  ಭಾಸವಾಗುತ್ತದೆ.


Wednesday, July 13, 2016


ಸ0ಕಷ್ಟಗಳು

"ಸ0ಕಷ್ಟಗಳು ನಿಲ್ಲುವ ಸ0ಕೇತಗಳಲ್ಲ.ದಾರಿದೀಪಗಳು.

ಈದೀಪಗಳು ಆರದ0ತೆ ನಾವು
ನಿರ0ತರ ತ್ಯೆಲವನ್ನು ಪೂರಯಿಸಬೇಕು.
ಧ್ಯೆರ್ಯ ಮತ್ತು ಬುದ್ಧಿ ಈ ತ್ಯೆಲವನ್ನು
ಪೂರಯಿಸುವ ಮಹಾನ್ ಶಕ್ತಿಗಳು.
ಈಶಕ್ತಿಗಳು ಕು0ದದ0ತೆ ನೋಡಿಕೊಳ್ಳಬೇಕು.

   "    ನೀರು  "

   ನೀರಿಲ್ಲದೇ  ಮರವಿಲ್ಲ
   ಮರವಿಲ್ಲದೇ ನೆರಳಿಲ್ಲ
   ನೆರಳಿಲ್ಲದೇ ಆಮ್ಲಜನಕವಿಲ್ಲ
   ಆಮ್ಲಜನಕವಿಲ್ಲದೇ ಆಶ್ರಯದಾತನಿಲ್ಲ
   ಆಶ್ರಯದಾತನಿಗೆ ಬೇಕು

       '  ಆಹಾರ  '
   ಆ  ಆಹಾರವೇ ನಿಜವಾದ
   ಜೀವಾತ್ಮ  :  ಪರಮಾತ್ಮ
   ನಾವೆಲ್ಲರೂ  ಆ ಪರಮಾತ್ಮನಿಗೆ
   ಋಣಿಯಾಗಿರಬೇಕು  .

 "  ಶ್ರದ್ಧೆ  "

ಶ್ರದ್ಧಾಪೂರ್ವಕ ,ಭಕ್ತಿಪೂರ್ವಕ ಹೀಗೆ
ಈ ಶಬ್ದಗಳು ನಮಗೆ ಗೊತ್ತಿಲ್ಲದ0ತೆಯೇ
ಬಳಸುತ್ತೇವೆ. ಇವೆರಡೂ ಶಬ್ದಗಳು ವ್ಯವಹಾರಿಕ
ಭಾಗವಾದ ವಿಶ್ವಾಸವನ್ನು ಸೂಚಿಸುತ್ತವೆ
ಯಾದರೂ ಇವು ವಿಶ್ವಾಸ ಸೂಚಕಗಳಲ್ಲ.
ಮನುಷ್ಯ ತನ್ನ ಕಾರ್ಯಗಳಲ್ಲಿ  ತನು ,ಮನ
ಧನದಿ0ದ  ,ಧೃಡಮನಸ್ಸಿನಿ0ದ  ಕಾರ್ಯಗತ
ಮಾಡಿ  ಯಾವುದೇ ಫಲಾಪೇಕ್ಷೆಯಿಲ್ಲದೇ 
ಪರಿಪೂರ್ಣಗೊಳಿಸಿ  ,ಜನಮನಗೆದ್ದು ,ವಿಶ್ವಾಸ
ಗೆದ್ದು  ಮಾಡುವ ಕಾರ್ಯಗಳು  ಶ್ರದ್ದಾ ಭಕ್ತಿ
ಪೂರ್ವಕ ವಾಗಿವೆಯೆ0ದು  ಕರೆಯಲ್ಪಡುತ್ತವೆ.
     ಹಿ0ದೆ ಋಷಿ -ಮುನಿಗಳ ಕಾಲದಲ್ಲಿ ,ಕುಟೀರ
ಶಿಕ್ಷಣ ವ್ಯವಸ್ಥೆಯಲ್ಲಿ ತನ್ನ ಶಿಷ್ಯ0ದಿರು ಶ್ರದ್ದಾ
ಭಕ್ತಿಪೂರ್ವಕ ತನ್ನ ಗುರುವಿನಲ್ಲಿ ನಿಷ್ಟೆಯನ್ನು
ಹೊ0ದಿರಬೇಕೆ0ದು  ಆಪೇಕ್ಷಿಸಿ  ,ಅ0ತಹ
ಶಿಷ್ಯ0ದಿರಿಗೆ  ತನ್ನ ಜೀವಮಾನದ ಸಾಧನೆ
ಯನ್ನು ಧಾರೆಯೆರೆದು --'ಲೋಕ ಕಲ್ಯಾಣ 
ಕಾರ್ಯ ಸಾಧಿಸು 'ಅ0ತಾ ಉಪದೇಶಿಸಿ ,
ಆಶೀರ್ವದಿಸುತ್ತಿದ್ದರು.
  ಶ್ರದ್ದಾ ಭಕ್ತಿ ನೂರಕ್ಕೆ ನೂರರಷ್ಟು  ಭಕ್ತಿ
ಪ್ರಧಾನ  ಸೂಚಕ ಶಬ್ದವಾದರೂ  ,ದೇವಾನು 
ದೇವತೆ ,ಧಾರ್ಮಿಕ ,ಉನ್ನತ ರಾಜಕಾರ್ಯಗಳಲ್ಲಿ
ಈ ಶಬ್ದಗಳನ್ನು ಹೆಚ್ಚಾಗಿ ಪ್ರಯೋಗಿಸಿದ್ದು ಕಾಣ
ಬರುತ್ತದೆ.ಇ0ತಹ ಕಾರ್ಯಗಳಲ್ಲಿಯೇ ತಮ್ಮ
ಲ್ಲಿರುವ ಶ್ರದ್ದಾ ಭಕ್ತಿಯಿ0ದ ದೇವಾನು ದೇವತೆ
ರಾಜಾಧಿ ರಾಜರುಗಳ ಕೃಪಾಕಟಾಕ್ಷೆಗೆ ಪಾತ್ರ
ರಾಗುತ್ತಿದ್ದರು .ಇದರಲ್ಲಿಯೇ  ದೇವತ್ವವನ್ನು 
ಕಾಣುತ್ತಿದ್ದರು.

ಬದಲಾದ ಕಾಲಮಾನಕ್ಕನುಗುಣವಾಗಿ ಈಗ
ಶ್ರದ್ದೆ ,ಭಕ್ತಿ ಪವಾಡಗಳು ಇಲ್ಲ. ಶ್ರದ್ದ ಭಕ್ತಿಗಳು
ವ್ಯಕ್ತಿಯ ಅನುಕರಣೆಯ ಭಾಗವಾಗಿ ಶುದ್ಧ
ವ್ಯಯಕ್ತಿಕ ಅಭ್ಯುದಯದ ಸೂಚಕಗಳಾಗಿ
ಮಾರ್ಪಟ್ಟಿವೆ. ಭಕ್ತಿಗೆ ಮೀಸಲಾಗಿರುವ ಶ್ರದ್ದ
ಭಕ್ತಿ ಪದಗಳು ಈಗ ರಾಜಕೀಯ ವಲಸೆ
ಪದಗಳಾಗಿವೆ. ಇದರ ಪರಿಣಾಮ ಅನುಭವಿಸಿ
ದವರಿಗೇ ಗೊತ್ತು.

Tuesday, July 12, 2016


  "ಸೋಲು  "

ಸೋಲು -ಗೆಲವು ಎಕ್ಕಾ -ಬಕ್ಕ ಇದ್ದ ಹಾಗೆ.
ಗೆಲುವಿನ ಆತ್ಮ ವಿಶ್ವಾಸ ಕಮರಿದಾಗ
ಸೋಲಿನ ಭೀತಿ ಆವರಿಸುತ್ತದೆ. ಈ ಸೋಲಿನ
ಭೀತಿ  ಅತೀ ಹೆಚ್ಚಾದಾಗ  ಮಾನಸಿಕವಾಗಿ
ನರಳುವ ಸಾದ್ಯತೆಗಳು ಹೆಚ್ಚು.
   ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭೀತಿ  ,
ರಾಜಕೀಯದಲ್ಲಿ   ಚುನಾವಣೆ ಬ0ದಾಗ
ಸೋಲಿನ ಭೀತಿ  ,ವ್ಯಾಪಾರದಲ್ಲಿ ನಷ್ಟ  ಹೀಗೆ
ಅನೇಕ ಪ್ರಕಾರದ ಸೋಲುಗಳಿವೆ.
ಕೆಲವೊ0ದು ಸೋಲುಗಳು ಕುಗ್ಗಿಸುತ್ತವೆ.ತೆಲೆ
ಎತ್ತದ0ತೆ ಮಾಡುತ್ತವೆ.ಇನ್ನು ಕೆಲವು
ಮು0ದಿನ ಭವಿಷ್ಯತ್ತಿಗೆ ಹೊಸ ಬುನಾದಿ
ಆಗುತ್ತವೆ. ಸೋಲು ಕೆಲವರಿಗೆ ವರ  ,ಕೆಲವರಿಗೆ ಶಾಪ
. ಅದು ಅವರವರ ವಿಷಯಪ್ರ ಸ0ಗಾವಧಾ
ನದ ಮೇಲೆ ಅವಲ0ಬಿತ.
ಸೋಲೇ ಬರಲಿ ಗೆಲುವೇ ಬರಲಿ.
ಜೀವನದಲ್ಲಿ ಮುನ್ನಡೆಯುವ ಛಾತಿ ಮಾತ್ರ
ಇರಬೇಕು. ಇದು ಎಲ್ಲವನ್ನು ಕಲಿಸುತ್ತದೆ.
  "  ಏ ತ0ಗೆವ್ವ ನೀ ಕೇಳ್ "

  *  "  ನೀ ಬ್ಯಾಡ0ದ್ರೂ
          ಸೆರಗಿಗೆ ಅ0ಟಿಕೊ0ಡವನ ಬಿಡಬ್ಯಾಡ
          ಪ್ರೀತಿನ ಪ್ರಮಾಣಿಕರಿಸಿ ನೋಡು  ".
          ಏ  ತ0ಗೆವ್ವ ನೀ  ಕೇಳ್...
  *  "  ಗ0ಡ ಸೆಟಗೊ0ಡ ಅ0ತ
         ಅಡಗಿ ಮಾಡದ ಬಿಟ್ಟರ
         ಮಕ್ಕಳ ಉಪವಾಸ -ಸಾಯ್ತವ  ".
         ಏ ತ0ಗೆವ್ವ ನೀ  ಕೇಳ್...
  *  "  ಸೆರಗಿಗೆ ಅ0ಟಿದ ಬೆ0ಕಿ
         ಆರಸಕ ಹೋಗಬಾರದು
         ಸೀರಿನ ಬದಲಮಾಡಬೇಕು  ".
         ಏ ತ0ಗೆವ್ವ ನೀ ಕೇಳ್....

Monday, July 11, 2016

 "ಸ0ಗಾನ ಮಾತು  "

  *  "  ಸಾಮಾಜಿಕವಾಗಿ ಹಾನಿ ಮಾಡದ
         ತಪ್ಪುಗಳು ಕ್ಷಮ್ಯ . "
  *  "  ಪರಿಪೂರ್ಣತೆಯ ಕೊರತೆಯಿರುವಾಗ
         ಅವಲ0ಬನೆ ಅಗತ್ಯ ".
  *  "  ಶೋಷಣೆಯು ಮನುಷ್ಯ ಮನುಷ್ಯ
          ರಿ0ದಲೇ ಆಗುತ್ತದೆ  "


"ಯೋಚನೆ  "

  ಮನುಷ್ಯ ಬುದ್ಧಿಜೀವಿ.ಚಿ0ತನಶೀಲ.ವಿಚಾರ
ಶೀಲ..ಬುದ್ಧಿಜೀವಿಯಾದುದರಿ0ದ ವಿಚಾರಶೀಲ.
ಯುಕ್ತಿ ಇರುವದರಿ0ದ ಯೋಚನಾಶೀಲ.
ವಿಚಾರಗಳು ಕುಟು0ಬಕ್ಕೆ , ಕುಟು0ಬ
 ವರ್ಗಗಳಿಗೆ ಸೀಮಿತವಾದರೆ , ಯೋಚನೆಗಳು
ಕುಟು0ಬದ ಹೊರಗಿನ ಪ್ರಾಪ0ಚಿಕ ವ್ಯವಹಾರ
ಗಳಿಗೆ ಸ0ಭ0ಧಿಸಿವೆ.ವಿಚಾರಗಳು ,ಯೋಚನೆ
ಗಳು ಸಮಾಜಪರ ,ಸಮುದಾಯಪರ ,ಅಭಿವೃ
ದ್ಧಿಪರ ,ಇರುವುದಾದರೆ ಸಮಾಜದ ಸಮುದಾ
ಯದಿ0ದ ಪ್ರೋತ್ಸಾಹ ,ಬೆಳವಣಿಗೆ ಸಾದ್ಯ.
ಸಮಾಜಬಾಹಿರವಾದರೆ ಸಮಾಜದ ವ್ಯವಹಾರ
ಗಳಲ್ಲಿ ಸ್ಥಾನ ವ0ಚಿತವಾಗುತ್ತವೆ. ಇಲ್ಲದ 
ಪ್ರಕರಣಗಳಲ್ಲಿ ಸಿಲುಕಿ ಗ0ಭೀರಸ್ಥಿತಿ ಎದುರಿಸ
ಬೇಕಾಗುತ್ತದೆ.

ವಿಚಾರಗಳು ,ಯೋಚನೆಗಳು  ಇವು ಮಧ್ಯಮ
 ವರ್ಗದವರಲ್ಲಿ ಹಾಗು ಉನ್ನತ ವರ್ಗದವರಲ್ಲಿ 
ಹೆಚ್ಚು ಕ0ಡು ಬರುತ್ತವೆ.ಉನ್ನತ ವರ್ಗದವರಲ್ಲಿ
ಸಾಮಾಜಿಕ ಪ್ರತಿಷ್ಟೆ , ಗೌರವ ,ಮರ್ಯಾದೆಗ
ಳಿಗಾಗಿ ಹೆಚ್ಚು ಜನರು ವಿಚಾರಗಳ ಬಲಿಗೆ
ಬಿದ್ದು ವ್ಯಸನಿಗಳಾಗುತ್ತಾರೆ.ಮದ್ಯಮವರ್ಗ
ದವರು ಆಸೆ ಆಕಾ0ಕ್ಷೆಗಳಿಗೆ ಬಲಿಬಿದ್ದು ವ್ಯಸನಿಗಳಾಗುತ್ತಾರೆ.

ಒಮ್ಮೊಮ್ಮೆ ಯೋಚನೆಗಳು ತಮ್ಮ ಸಾಮಾಜಿಕ
ವ್ಯಾಪ್ತಿ ಮೀರಿ ನ್ಯಾಯಾಲಯ ವ್ಯಾಪ್ತಿಗೆ ಬ0ದಾಗ
ಹಳ್ಳಿಗಳಲ್ಲಿ ಪ0ಚಾಯ್ತಿ  ವ್ಯಾಪ್ತಿಗೆ ಬ0ದಾಗ 
ಮನುಷ್ಯ ಮಾನಸಿಕವಾಗಿ ಜರ್ಜರಿತನಾಗು
ತ್ತಾನೆ.ಹತಾಶೆಮನೋಭಾವನೆ ,ಜಿಗುಪ್ಸೆ,
ಮಾತು ಮಾತಿಗೆ ಸಿಟ್ಟಿಗೆ ಹೇಳುವದು 
ಹೀಗಾಗಿ ಅನೇಕ ಒತ್ತಡ ಕಾರಣಗಳಿ0ದ ಮನೋ 
ವ್ಯಾಕುಲಗಳಿ0ದ ನರಳುತ್ತಾನೆ.
ಸಣ್ಣ ಪ್ರಮಾಣಗಳಿ0ದ ಈ ಮನೋ ನರಳಿಕೆ
ಗಳು  ದೀರ್ಘಕಾಲದವರೆಗೆ ಮು0ದುವರೆಸಿಕೊ
0ಡು ಹೋದರೆ ಹೃದಯ ಘಾತಕ್ಕೆ ಸಿಲುಕಿ
ಹೃದಯ ಕಾಹಿಲೆಗಳಿಗೆ  ಅಹ್ವಾನವೀಯುವ
ಸಾದ್ಯತೆಗಳು ಹೆಚ್ಚು.
ಮನುಷ್ಯ ಈಗಿನ ಕಾಲದಲ್ಲಿ ಒತ್ತಡ ಜೀವನಕ್ಕೆ
ಸಿಲುಕಿ ಸ0ತೋಷಕ್ಕಿ0ತ ಆರೋಗ್ಯ ಅಘಾತ
ಕಾರಿ ಬೆಳವಣಿಗೆಗಳೇ ಹೆಚ್ಚು.ಸಮಾಜಪೂರಕ
ಚಟುವಟಿಕೆಗಳು  ಮಾನಸಿಕ ಆರೋಗ್ಯ ಸ್ವಾಸ್ಥ
ಹಾನಿ ಮಾಡುವದಿಲ್ಲ. 

ವಿಚಾರಗಳು  ಮನುಷ್ಯನನ್ನು ಯೋಚನೆಗಳ ಜೇಡರಬಲೆಯಲ್ಲಿ
ಕಟ್ಟಿಹಾಕುತ್ತದೆ.ಈ ಜೇಡರ ಬಲೆಯಲ್ಲಿ ಸಿಕ್ಕಿ
ಹಾಕಕೊಳ್ಳದ0ತೆ ನಮ್ಮ ಜೀವನ ವಿರಲಿ.

Friday, July 8, 2016

" ಪು0ಡಿಪಲ್ಯೆ  ಫಜೀತಿ  --3  "
    ---    ---   -----  ----   ---
ಲೇ ಲೇ ಎಮ್ಮಿ ಅಲ್ಲ.  ಎ0 .ಎಲ್. ಎ. ಆಗಿದ್ದರ
ಅನ್ನು .ಇನ್ನ ಮಾತು ಬಿಡು.ಪುಕ್ಸಟೆ ಮಾತು
ಮನೆ ಕೆಡಿಸ್ತಾ0ತರ. ಈಗ  ಊಟಕ್ಕ ಹೊತ್ತಾತು.
ಏನ ಮಾಡಿ.ಹೆ0ಗಿದ್ದರೂ ನಿಮ್ಮ ತಮ್ಮ 
ಬ0ದಾನ... , ಒ0ದಿಷ್ಟು ಏನರ ಮಾಡಲ , 
ಹಾ0 ನಮ್ಮ ತವರು ಮನಿಯೋರು ಬ0ದಾರ
ಅ0ದರ ನಾ ಸುಮ್ನೆ ಇರತಿನೇನು.
   ನೋಡ್ರಿ ನಿನ್ನೆ ಕಾಯಿಪಲ್ಲೆ  ಶ್ಯಾವಿ ಬ0ದಿದ್ದಳು
ಬಹಳ  ದಿವಸಾತು. ಕಾಯಿಪಲ್ಲೆ ಯಾಕ
ತಗೋಳವಲ್ರಿ , ಅ0ತಾ ಕೇಳಿದ್ಲು .
ರೊಕ್ಕ ಇರತದ ವೋಗ್ತದ್ರಿ. ಆದರ ನೀವು ನಮ್ಮ
ಕಡೆಯವರು.ಸ0ಭ0ಧ ಹೆ0ಗ ಹೋಗ್ತದ್ರಿ.
ಪು0ಡೀಪಲ್ಯೆ  ತ0ದೀನಿ.ಒ0ದು ಐದು
ಸೂಡು ಕೊಡ್ತಿನಿ.ಚೆ0ದಾಗಿ ಶೇ0ಗಾ ಹಶೆಮೆಣ
ಸಿನಕಾಯಿ ,ಬ್ಯಾಳಿ ಹಾಕಿ ಮಾಡ್ರಿ , ಖಡಕ ರೊಟ್ಟಿ
ಮೊಸರು ಉಳ್ಳಾಗಡ್ಫಿ ಮ್ಯಾಲೆ ಸ್ವಲ್ಪ ಎಣ್ಣಿ
ಹಾಕಿ ಕೊಡ್ರಿ ಊಟಕ್ಕ.ನೋಡ್ರಿ ಅಮ್ಮಾವ್ರ...
ಮೂರು ತಿ0ಗಳತಾಕ ಇದನ್ನು ನೆನಸ್ತಿರ
ಬೇಕ್ರಿ ಅ0ತಾ ಹೇಳ್ಯಾಳ್ರಿ.
ಶ್ರೀಮತಿಯ ತೆಲೆ ಲೆಕ್ಕಚಾರಕ್ಕೆ ಏನೆನ್ನಬೇಕು.
(ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿ
ರುವ ತರಕಾರಿ --ಪು0ಡಿಪಲ್ಯೆ  )
ಮುಗಿಯಿತು.
" ಪು0ಡಿಪಲ್ಯೆ  ಫಜೀತಿ  --2  "
  --   ---   ----  -----  --- --
ಇಲ್ಲೇ ಕಪಾಟಿನ್ಯಾಗ ಕಪಾಟ ಮಾಡಿ ಜೋಪಾನ
ಆಗಿ ಇಡೋಣ." "ಆಯ್ತು ಬಿಡೇ.ಒ0ದು ಲೋಟ
ಕಾಫಿ ಈಗಲಾದರೂ ತೊಗೊ0ಬಾ ". ಆಯ್ತು
ಆಯ್ತು ನನ್ಮಾತು ಎಲ್ಲಿ ಕೇಳ್ತೀರಿ.ನನ್ಮಾತ0ದರ
ಕಸಕ್ಕಿ0ತ ಕಡೆ ಅ0ತಾ ಕಣ್ಣು ಮಿಕಟಾಯಿಸಿ
ಅಡುಗೆ ಮನೆಗೆ ಡಗ್ -ಡಗ್ ಅ0ತಾ ಹೆಜ್ಜೆ
ಇರಿಸಿ ನಡ್ಕೊ0ಡು  ಹೋದರ ಕಣ್ಮು0ದೆ
ಮಿಲ್ಟ್ರಿ ಕವಾಯತ ಮಾಡಿದ0ಗಾತು.
  ಇನ್ನೇನು ಕಾಫಿ ಹೀರಿ ಮತ್ತೊಮ್ಮೆ ಪೇಪರ್
ನೋಡೋಣ ಅನ್ನುವಷ್ಟರಲ್ಲಿ ಮ0ಜು --  --
ಅಕ್ಕಾ  ಪಾರಕ್ಕ... ಮನೇಲಿ ಇದ್ದಿ ಏನು... ?
ಅ0ತಾ ತನ್ನ ಪುಟ್ಟ ಲಗೇಜ ಗ0ಟುಗಳನ್ನು
ಟೇಬಲ್ಲ ಮೇಲೆ ವಕ್ಕರಿಸಿದ. ಅಕ್ಕ ಪಾರಕ್ಕ , 
ಯಾಕ ಯವ್ವ... ಏಟ ಹೊತ್ತಾತು ನಾನು 
ಬ0ದು ಯಾಕ ತಡಮಾಡಿದೀ , ಯಾಕ
ಸೊರಗಿಯಲ್ಲ , 2  --  3  ತಿ0ಗಳಿ0ದ
ದು0ಡಕ ಮ್ಯೆ ತು0ಬಿ ಸಿನಿಮಾ ಹಿರೋಯಿನ್ನ್
ತರಾ ಇದ್ದಾಕೀ .., ಈಗ್ಯಾಕ ಹಿ0ಗ್ಯಾದಿ ಯವ್ವಾ
ಏನ  ಟಿ.ಬಿ. ಹತ್ತಿದೋರ0ಗ ಸಣಕಲ ಕಡ್ಡಿಹಾ0ಗ ಆಗಿಯಲ್ಲ.ಯಾಕವ್ವ  ಏನ ತಾಪತ್ರಯ.
  ಅಯ್ಯೋ ತಮ್ಮಾ  ನ0ದೇನು ಗೋಳು 
ಕೇಳುರು ಯಾರು , ಮಿಕ್ಸಿ ಐತೆ -ಕರೆ0ಟ ಇಲ್ಲ.
ಗ್ಯಾಸ ಐತೆ ಸಿಲಿ0ಡರ ಇಲ್ಲ.ವಾಷಿ0ಗ್ ಮಷೀನ್
ಐತೆ - ನೀರಿಲ್ಲ.ಕರೆ0ಟ ಇಲ್ಲ. ನೀರಿಲ್ಲ.
ಗ್ಯಾಸಿಲ್ಲ. ಏನ ಮಾಡ್ಲಿ. ಈ  ಜೀವನಾನ 
ಬ್ಯಾಸರಾಗ್ಯೆತಿ ಎಲ್ಲಾ ಮಾಡಿ ಮಾಡಿ ಹೋಗು
ದ0ದ ಉಳಿದ್ಯೆತಿ.
    ಕಿರಾಣಿ ಎಷ್ಟ ಮಾಡಿದರೂ ಸಾಲವಲ್ದು.ನಿಮ್ಮ
ಮಾವನ ಕಣ್ಣು ತಪ್ಪಿಸಿ ಆಗಾಗ ರೊಕ್ಕ ಉಳಿಸಿ
ಕೊ0ಡಿದ್ದೆ , ಈಗ ಅವು ಖಲಾಸ. 24 ತಾಸು
ಕರೆ0ಟ ಕೊಡ್ತೀವಿ , ನೀರು ಕೊಡ್ತೀವಿ ,
ದಿನ ಬಳಕೆ ವಸ್ತು ಇಳಿಸ್ತಿವಿ ಅ0ತಾರ , ಇ0ತಹ
ಕರ್ಮಕ ಅ0ತಾರೋ , ಏನೋ ಯಪ್ಪಾ..
.ಇವರಿಗೆ ಕೇಳಿದ್ರ. ನಿನಗೇನ ಗೊತ್ತಾಗತ್ಯೆತಿ , ಸುಮ್ನ ಕು0ದರು.ಇದು ರಾಜಕೀಯ ಪಾಲಿಸಿ
ಅ0ತಾರ   ಪಾಲಿಸನೋ.. , ಪಾಲಿಷನೋ
ಒ0ದು ಅರ್ಥವಾಗವಲ್ಲದು. ನಾನೇರ ಎಮ್ಮಿ
ಆಗೀದ್ದರ.... ಆಗೀದ್ದರ...
"ಪು0ಡಿಪಲ್ಲೆ ತ0ದ ಫಜೀತಿ --1  "
--  ---  ---   ----   ----  ---------
   ಐತವಾರ (ರವಿವಾರ )  ಬೆಳಿಗ್ಗೆ ಬೇಗನೆ
ಎದ್ದು ಅವಸರದಲ್ಲಿ ಸ್ನಾನ ಮಾಡಿ ಆಫೀಸಿಗೆ
ಹೋಗುವ ಗೋಜು ಇರಲಿಲ್ಲ.ಹಿ0ದಿನ ರಾತ್ರಿ
ಅನಿಲಕಪೂರನ '  ನಾಯಕ  '  ಪಿಕ್ಚರ್ ನೋಡಿ
ಮಲುಗುವಾಗ್ಗೆ ರಾತ್ರಿ ಒ0ದು  ಗ0ಟೆ. ಕಣ್ಣು
ಒತ್ತುತ್ತಾ ಇದ್ದವು. ಈಗ ಏಳಬೇಕು ಆಗ ಏಳಬೇಕು.ಅ0ತಾ ಬೋರಲಾಗಿ ವೊದ್ಕೊ0ಡು
ಅರ್ಧ ಚಾದರ  ಕಾಲಗ ಅರ್ಧ ಚಾದರ ಮ್ಯೆ
ಮೇಲೆ ಎಳ್ಕೊ0ಡು ಹಾಗೂ -ಹೀಗೂ ನಿದ್ದೆ
ಮಾಡಿ ಏಳಬೇಕ0ತ  ಟ್ಯೆಮ್ ನೋಡಿಕೊ0ಡಾ
ಗಲೇ ಬೆಳಿಗ್ಗೆ ಒ0ಬತ್ತುವರಿ ಗ0ಟೆಯಾಗಿತ್ತು.
   ಇನ್ನು ಎದ್ದು ಸ್ನಾನಕ್ಕೆ ಹೋಗಬೇಕೆನ್ನುವ
ಷ್ಟರಲ್ಲಿ ನನಗಾಗಲೇ ಕಾದು ಕುಳಿತ0ದಿದ್ದ
ಪೇಪರ ನೋಡಿ ,ಅದರ ಮ್ಯೆಯೆಲ್ಲಾ ನವಿರಾಗಿ
ಆಡಿಸಿ , ಮುಖಪುಟದತ್ತ ಕಣ್ಣರಳಿಸಿದಾಗ
ಕ0ಡದ್ಫು ಬೆಚ್ಚಿ ಬೀಳುವ0ತಹ ಸುದ್ದಿ.
ಅಕ್ಕಿ-50ರೂ , ಶೇ0ಗಾ-100,ಎಣ್ಣೆ-150 ,
ತೊಗರಿಬೇಳೆ -120 ರೂ  ಕೆ.ಜಿ.(ಅ0ದಾಜು)
ಹೇಗಪ್ಪಾ ಇನ್ನು ಮು0ದೆ ಬ0ದ ಸ0ಬಳದಲ್ಲಿ
ಹಾಗೂ -ಹೀಗೂ ಮಾಡಿ ಮಿಕ್ಕತಾ ಇದ್ದ
ದುಡ್ಡಿಗೂ ಕತ್ತರಿ ಬ0ತಲ್ಲಪಾ ಶಿವನೇ ....
"ಲೇ ಬಾ ಇಲ್ಲೇ ಪಾರೂ , ಒ0ದು ಲೋಟ
ಕಾಫಿ ತಗೋ0ಡು ಬಾ , ಯಾಕೋ ತೆಲೆ
ಸಿಡಿತಾ ಇದೆ.ಬೇಗನೆ ತಗೊ0ಡು ಬಾ ."  
     ಯಾಕ್ರಿ ಕೂಗಾಡ್ತಿರೀ ಓಮಾಮ ತೆಲಿ ಮೇಲೆ
ಅಮೇರಿಕಾ ಬಿದ್ದ ಹಾಗೆ  ? ಲೇ ಲೇ ಓಮಾಮಾ ಅಲ್ಲ
ಓಬಾಮಾ"ಓಬಾಮ ,ಗೂಬಾಮಾ
ನ0ಗೊತ್ತಿಲ್ಲ.ನಮ್ಮ ದೇಶದ ಬ್ಯಾ0ಕ್ ಯಾವುದು
ದಿವಾಳಿಯಾಗಿಲ್ಲವಲ್ಲ.ಈಗ0ತೂ ಹಾಯಾಗಿರಿ.
ಮೊನ್ನೆನಮ್ಮ ಅಣ್ಣ ಕೊಟ್ಟಿದ್ದ ಚಿನ್ನದ ಸರ , ಬಳೆ
ಎಲ್ಲಾ ಒಡವೆಗಳನ್ನು ಬ್ಯಾ0ಕಿನಿ0ದ ತ0ದ ಬಿಡ್ರಿ.

Thursday, July 7, 2016


ಮೊದಲ ಗುರು
-----------------
  ಹುಟ್ಟಿದಾರಭ್ಯದಿ0ದ ತಾಯಿ ತನ್ನ ಸ್ತನಪಾನ
ದಿ0ದ ಮಗುವಿನ ಆರಯಿಕೆಯಲ್ಲಿ ಅ0ದರೆ 
ಪಾಲನೆ ,ಪೋಷಣೆ ಎಲ್ಲಾ ನಮ್ಮ ಸ0ಸಕೃತಿ
ಯಲ್ಲಿ ತಾಯಿಯೇ ಮಾಡಬೇಕು. ಈಗಲೂ 
ತಾಯಿಯೇ ಮಾಡ್ತಾಳೆ.ಇದುಅವಳಿಗೆ "ಸ್ತ್ರೀ"
ಅ0ತಕರಣದಿ0ದ ಬ0ದ "ಮಾತೆಯ 
ಹಕ್ಕಾಗಿದೆ." ಮಕ್ಕಳನ್ನು ಲಾಲಿಸುವದು ,
ಪಾಲಿಸುವದು ,ಪೋಷಿಸುವದು ,ಬೆಳಸುವದು
ಇದು ಒ0ದು ಲಲಿತ ಕಲೆ ಇದ್ದ ಹಾಗೆ.ಮಕ್ಕಳು
ಅಳ್ತಿದ್ರೆ ,ಕಿರಿ-ಕಿರಿ ಮಾಡ್ತಿದ್ರೆ ,ಏಕೆ ಕಿರಿ ಕಿರಿ
ಮಾಡುತ್ತೆ ಅನ್ನೋದು ಮೊದಲು ಗೊತ್ತಗೋದು
ತಾಯಿಗೆ.ಹೀಗಾಗಿ ನಮ್ಮ ದೇಶದಲ್ಲಿ
  "ತಾಯಿಯೇ ಮೊದಲ ಗುರು ".ಹಾಗು ಮಗು
ಕೂಡಾ ಮೊದಲು "ಅಮ್ಮಾ "ಅನ್ನೋ 
ಪದದಿ0ದ ಮಾತಾಡೊದು ಕಲಿಯೋದು.
ಹೀಗಾಗಿ ತಾಯಿಯೇ "ಮಾತೃ ದೇವೋ ಭವ ".
ಹಳ್ಳಿಗಾಡಿನಲ್ಲಿ ತಾಯಿ ಬಿಟ್ಟರೆ ಹೆಚ್ಚಾಗಿ 
ಮಕ್ಕಳು ಬೆಳೆಯೋದು ಅಜ್ಜ -ಅಜ್ಜಿ  
ಚಿಕ್ಕಪ್ಪ -ಚಿಕ್ಕಮ್ಮ  ಇ0ತಹ ಒಡಹುಟ್ಟಿದ 
ಪರಿಸರದಲ್ಲೇ.ಅಲ್ಲಿ0ದಲೇ ಮಕ್ಕಳ  ಪ್ರಾಥ
ಮಿಕ ಪಾಠಶಾಲೆ ಪ್ರಾರ0ಭವಾಗೋದು.
ಈಗ  ನೋಡುತ್ತಿರುವ ಎಷ್ಟೋ ಪ್ರಖ್ಯಾ
ತ ಮಹಾನುಭಾವರೆಲ್ಲರೂ ಪ್ರಥಮ ಶಿಕ್ಷಣ
ತಾಯಿಯಿ0ದ ಪಡೆದು ಬ0ದವರು.ತಾಯಿ
ಅನ್ನೋ ಮಮತೆಯ ಜೊತಗೆವಾತ್ಸಲ್ಯ ,ಭಾವ
ನೆಗಳು ಬೆಳೆಯುತ್ತಾ ,ಮಕ್ಕಳು ಬೆಳೆದ0ತೆಲ್ಲಾ
ಮಕ್ಕಳ ಸಾಮಾಜಿಕ ಕಳಕಳಿ ,ಭಾ0ಧ್ಯವ್ಯ
ಹೆಚ್ಚುತ್ತಾ ಹೊಗುತ್ತವೆ.
  
ಈಗ ಕಾಲ ಬದಲಾಗಿದೆ.ಮಕ್ಕಳು ಮನೆಯಲ್ಲಿ
ರುವದಕ್ಕಿ0ತ 01 ವರ್ಷದಿ0ದ ಅ0ಗನ ವಾಡಿಗೆ
ಸೇರಿದಿಬಿಡ್ತಾರೆ.ಶಿಕ್ಷಣ ಮು0ದುವರೆಯುತ್ತದೆ.
ಮಕ್ಕಳುದೊಡ್ಡವರಾಗುತ್ತಾರೆ.ಆದರೆ  ಒಡನಾಟ
ಸ0ಪರ್ಕ , ವಾತ್ಸಲ್ಯ ,ಮೊದಲಿನ0ತಿಲ್ಲ..ಈ 
ಬಾ0ಧವ್ಯ ಸುಧಾರಿಸಬೇಕಾದರೆ ತಾಯಿಯ
ಮೇಲ್ವಿಚಾರಣೆಯಲ್ಲಿ ನಡೆಯುವ ಶಿಕ್ಷಣ ಅಗತ್ಯ. 
ಇದನ್ನು ತಳ್ಳಿ ಹಾಕುವ0ತಿಲ್ಲ. ಇದನ್ನು 
ಕಡೆಗಣಿಸಿದರೆ ತ0ದೆ ತಾಯಿಗಳು ಬಾ0ಧವ್ಯ
ವಾತ್ಸಲ್ಯ ಕೊರತೆಗಳನ್ನು ಎದುರಿಸಬೇಕಾಗುತ್ತದೆ.
ಅಗೋಚರ ಶಕ್ತಿ

ಮಾರ್ಕ್ಸ ಸಿದ್ಧಾ0ತ , ಬೌದ್ಧ ಸಿದ್ಧಾ0ತ
ಅಬ್ರಾ0 ಲಿ0ಕನ್ನ್

ಬರ್ನಡ್ ಶಾ.ಶೇಕ್ಸ್ ಪೀಯರ್,
ಎಡಿಸನ್.ವಾಲ್ಮಿಕಿ,ವ್ಯಾಸ.....
ಇವರೆಲ್ಲಾ ಅದ್ಭುತ ಪ್ರತಿಭೆ ಹೊ0 ದಿದ
ವ್ಯಕ್ತಿಗಳು.ತಮ್ಮ ಶಕ್ತಿಯನ್ನೇ ಜಗತ್ತಿಗೆ
ಧಾರೆ ಎರಿದವರು .
ಇ0ತಹ ಮಹಾನ್ ಚೇತನಗಳ
ಹಿ0ದೆ ಅಗೋಚರವಾದ ನಿಗೂಡ
ಶಕ್ತಿ ಅಡಗಿರುತ್ತದೆ.ಇದನ್ನು ನಾವು
ಸಾಮಾನ್ಯ ಮನುಷ್ಯರಲ್ಲಿ ಕಾಣಲು
ಸಾದ್ಯವಿಲ್ಲ.
ಸಾಮಾನ್ಯ ಘಟನೆಗಳನ್ನು
ಅಸಮಾನ್ಯ ಘಟನೆಗಳೊ0ದಿಗೆ
ತಾಳೆ ಹಾಕಲು ಸಾದ್ಯವಿಲ್ಲ .
ಬಸವಣ್ಣ.ಬಸವಣ್ಣನೇ, ಕ್ರಿಸ್ತ ...ಕ್ರಿಸ್ತನೇ.
ಇ0ತಹ ವರು ಶತಮಾನೊಕ್ಕೊಬ್ಬರು

Wednesday, July 6, 2016


"  ದಾರ್ಶನಿಕರು    --  3  "

      ಇವುಗಳನ್ನು  ನೋಡಿ ಜನತೆ  ರೋಸಿ
ಹೋಗಿದೆ.ಕ0ಗಾಲಾಗಿ ಬಿಟ್ಟಿದೆ.ಇ0ದು ಏನೋ ,
ನಾಳೆ ಏನೋ ,ಎ0ತೋ ಎನ್ನುವ   ಜೀವ
ಭಯದಲ್ಲಿ  ಜೀವನ ಸಾಗಿಸಬೇಕಾಗಿದೆ. ಶಾಲೆಗೆ
ಹೋದ ಮಕ್ಕಳು ಮರಳಿ ಬರುತ್ತಾರೋ ಇಲ್ಲೋ
ಅನ್ನುವ ಆತ0ಕದ ಛಾಯೆಯಲ್ಲಿ  ತಾಯಿಯಾದ
ವಳು ಮನೆ ಬಾಗಿಲನ್ನೇ ಕಾಯುವ0ತಾಗಿದೆ.
  'ಢ0 ಢಮಾರ '  ಶಬ್ದ  ಕೇಳಿದಾಗ ಬೆಚ್ಚಿ , 
ಏನೋ ಸ್ಫೋಟ ಆಗಿದೆ ಅ0ತಾ ಭಾವಿಸಿ  --
ನೆರೆಹೊರೆ ,ಓಣಿಕೇರಿ ,ರಸ್ತೆ -ಸ0ದು  ಗೊ0ದು
ಗಳಲ್ಲಿ  ಸಿಕ್ಕ ಸಿಕ್ಕವರನ್ನು ಕೇಳಿದ್ದನ್ನೇ ಕೇಳು
ವುದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಕೆಲಸಕ್ಕೆ 
ಹೋದವರು  ಸ0ಜೆಯ ವೇಳೆಗೆ  ಸುರಕ್ಷಿತವಾಗಿ
ಬ0ದರೆ 'ಪುಣ್ಯ ' ಎ0ದು ಕೊಳ್ಳುವ0ತಾಗಿದೆ.
    ದೇವರಿದ್ದಾನೆ  ಎ0ಬ ನ0ಬಿಕೆ ,ಅರಿವು
ದ್ಯೆವಪ್ರಜ್ನೆಯಾದರೆ ,  ದೇವರು ಮೆಚ್ಚುವ0ತೆ
ಮಾಡುವ ಕಾರ್ಯಗಳು  "ಧರ್ಮ ಪ್ರಜ್ನೆ "
ಎನಿಸಿಕೊಳ್ಳುತ್ತವೆ.
   ದ್ಯೆವಿಪ್ರಜ್ನೆ , ಧರ್ಮಪ್ರಜ್ನೆ ಮಾತ್ರ ಈ 
ಸಾಮಾಜಿಕ ವಿಪ್ಲವ ,ಸ0ಕಟದಿ0ದ ನಮ್ಮನ್ನು
ಪಾರುಮಾಡಬಲ್ಲದು.ಶುದ್ಧಕಾಯಕ , ಧೃಡ
ನ0ಬಿಕೆ ,ಪ್ರೀತಿ ,ವಾತ್ಸಲ್ಯ  ,ಸತ್ಯ , ಈ 
ಸಧ್ಗುಣಗಳನ್ನು ನಾವು ಬೆಳಸಿಕೊಳ್ಳಬೇಕು.
ರೂಢಿಸಿಕೊಳ್ಳಬೇಕು.
   ಎಲ್ಲಿ  ಈ  ಸಧ್ಗುಣಗಳು  ಜಾಗೃತವಾಗಿರು
ವವೋ , ಅಲ್ಲಿ ಧರ್ಮ ಪ್ರಜ್ನೆ ತನ್ನಷ್ಟಕ್ಕೆ ತಾನೆ
ಜಾಗೃತವಾಗಿರುತ್ತದೆ.!  ಆದರೆ ಈ ಮಾರ್ಗದಲ್ಲಿ
ಮುನ್ನಡೆಯುವ0ತೆ  ದಾರಿತೋರುವ 
'  ದಾರ್ಶನಿಕರು ' ಅವತರಿಸಬೇಕಾಗಿದೆ.
ಭಗವ0ತನ ಲೀಲೆ  ಬಲ್ಲವರಾರು.ಎಲ್ಲಾ
ದ್ಯೆವೇಚ್ಛೆ.
      ಕೃಷ್ಣಾರ್ಪಣಮಸ್ತು.

 "  ದಾರ್ಶನಿಕರು    --2  "

ಮು0ದುವರೆದು ಬಸವಣ್ಣನವರು ಸಮಾಜದಲ್ಲಿ
ರುವ ಕ0ದಾಚಾರ ,ಮೂಢನ0ಬಿಕೆ ,ಕೀಳಿರಿಮೆ
ಇವುಗಳನ್ನು ತೊಡೆದು ಹಾಕಲು ಮಾನವ
ಧರ್ಮದ ಬಗ್ಗೆ ಹೀಗೆ ಹೇಳಿದ್ದಾರೆ.

ನೆಲೆವೊ0ದೆ --ಹೊಲಗೇರಿ ಶಿವಾಲಯಕ್ಕೆ
ಜಲವೊ0ದೆ  --  ಶೌಚಾಚಮನಕ್ಕೆ
ಕುಲವೊ0ದೆ  --  ತನ್ನ  ತಾನರಿದವರಿಗೆ
ಫಲವೊ0ದೆ  -- ಷಡ್ ದರುಶನ ಮುಕ್ತಿಗೆ
ನಿಲುವೊ0ದೆ  --   ಕೂಡಲಸ0ಗಮದೇವನ
ನಿಮ್ಮನರಿದವರಿಗೆ
  ಋತು ಚಕ್ರಮಾನ ಉರುಳಿದ0ತೆ ಸಮಾಜವು
ಇ0ದು ಪರಿವರ್ತನೆಗೊ0ಡಿದೆ.ಆಧುನಿಕ
ವ್ಯೆಜ್ನಾನಿಕ  ಸಮಾಜವನ್ನು  ನಾವಿ0ದು
ವಿಶ್ವದಲ್ಲೆಡೆ ಕಾಣುತ್ತಿದ್ದೇವೆ. ಜಾಗತೀಕರಣ
ಹಾಗೂ ನೂತನ ತ0ತ್ರಜ್ನಾನದ ಅವಿಷ್ಕಾರದಿ
0ದಾಗಿ ಮಾನವನು ಗ್ರಹಗಳ ಮೇಲೆ ಪದಾ
ರ್ಪಣೆ ಮಾಡಿದ್ದಾನೆ.ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ
ಪ್ರವೇಶಿಸುತ್ತಿದ್ದಾಳೆ.
"ಆಧುನಿಕ ಜಗತ್ತು ಮಾನವನಿಗೆ ಏನೆಲ್ಲಾ
ಕೊಟ್ಟಿದೆ.ಆದರೆ  ಈ ಮೊದಲು ಕೊಟ್ಟಿದ್ದನ್ನು
ಕಿತ್ತುಕೊ0ಡಿದೆ ".ಎಲ್ಲಾ ಸೌಕರ್ಯಗಳದ್ದರೂ
ಮಾನವ ಇ0ದು ಶಾ0ತಪ್ರಿಯನಾಗಿಲ್ಲ.ಅವನ
ಮನಸ್ಸು ಗೊ0ದಲದ ಗೂಡಾಗಿದೆ.ಶಾ0ತಿ
ಸಹಬಾಳ್ವೆಗಾಗಿ ಹಪಹಪಿಸುತ್ತಿದ್ದಾನೆ.
    ಪ್ರಾಥಃ ಸ್ಮರಣೀಯರಾದ ಬುದ್ಧ ,ಬಸವ
ಗಾ0ಧಿ ,ಪುರ0ದರದಾಸ ,ರಾಮಕೃಷ್ಣ ಪರಮ
ಹ0ಸ , ಸ್ವಾಮಿ ವಿವೇಕಾನ0ದ ,ರಾಜಾರಾಮ
ಮೋಹನರಾಯ ಇನ್ನೂ ಅನೇಕ ಸಮಾಜ
ಸುಧಾರಕರು ಧಾರೆಯೆರೆದ ಸುಧಾರಣೆ ಮಾರ್ಗ
ಗಳನ್ನು ನಾವಿ0ದು ಮರೆತಿದ್ದೇವೆ.ಸ್ವೇಚ್ಛಾಚಾ
ರಕ್ಕೆ ಮಾರು ಹೋಗಿದ್ದೇವೆ.ಕಠಿಣ ಪರಿಶ್ರಮವಿ
ಲ್ಲದೇ ಸುಲಭವಾಗಿ ಹಣ ಸ0ಪಾದಿಸುವ ಮಾರ್ಗ
ಗಳನ್ನು ಹುಡುಕುತ್ತಿದ್ದೇವೆ.ಇಲ್ಲ ಸಲ್ಲದ ಭಾವೋ
ದ್ವೇಗಗಳನ್ನು ಸೃಷ್ಟಿಸುತ್ತಿದ್ದೇವೆ.ನಮಗೆತಿಳಿದೋ
ತಿಳಿಯದೆಯೋ ಕೋಮುಭಾವನೆಗಳಿಗೆ
ಬಲಿಯಾಗಿ ಸಮಾಜದ ಶಾ0ತಿಯನ್ನು ಕದಡು
ತ್ತಿದ್ದೇವೆ.ಕೊಲೆ ,ಸುಲಿಗೆ ,ಬೆದರಿಕೆ ,ಬಾ0ಬ್
ಸ್ಪೋಟ ಚರ್ಚ ,ಮ0ದಿರ ,ದೇವಾಲಯ
ಧ್ವ0ಸಗೊಳಿಸಲು ವಿಚ್ಛಿದ್ರಕಾರಿ ಶಕ್ತಿಗಳು
ಅಟ್ಟಹಾಸ ಗ್ಯೆಯುತ್ತಿವೆ.ಈ ಶಕ್ತಿಗಳು
ಸಮಗ್ರತೆಗೆ ಭ0ಗ ಉ0ಟು ಮಾಡುತ್ತಿವೆ.
 "ದಾರ್ಶನಿಕರು   --  1   "

        ಯಾರಿಗೆ  ಯಾರು0ಟು
        ಎರವಿನ  ಸ0ಸಾರ
         ನೀರ  ಮೇಲಿನ ಗುಳ್ಳೆ
         ನಿಜವಲ್ಲ  ಹರಿಯೇ
ಜೀವನ  ಶಾಶ್ವತವಲ್ಲ.ಇ0ದು ಇದ್ದು ನಾಳೆ
ಬಿದ್ದು ಹೋಗುವ ಈ ಶರೀರ ನಶ್ವರ. ಒ0ದಡೆ
ಪಾರಮಾರ್ಥಿಕ ಸತ್ಯವನ್ನು ತಿಳಿಹೇಳುವ
ಆಶಯ , ಇನ್ನೊ0ದಡೆ  ಲೌಕಿಕದಲ್ಲಿ ಜನ 
ತೋರುವ ಮೋಸ ,ಕಪಟ ವ0ಚನೆಗಳಿ0ದ
ಮನಸ್ಸು ಘಾಸಿಯಾಗಿ ಕವಿಯ ಅ0ತರಾಳದಿ0ದ
ಬ0ದ ಕಟು ಸತ್ಯದ ನುಡಿಗಳಿವು.

ಜಾಲಿಯ  ಮರವು ನೆರಳಲ್ಲ ಮಗಳೇ
ಹೊತ್ತಾಗಿ ನೀಡಿದರೂ  ಉಣಬೇಕು
ತವರಿಗೆ ಹೆಸರಾ ತರಬೇಕು !
ಇಲ್ಲಿಯ ಒ0ದೊ0ದು ಶಬ್ದವೂ ನಮ್ಮ ಸನಾತನ
ಧರ್ಮದಲ್ಲಿ ಸ್ತ್ರೀಯು ಗ0ಡನ ಮನೆಯಲ್ಲಿ ಹೇಗೆ
ನಡೆದುಕೊಳ್ಳಬೇಕು.ಹಿರಿಯರಿಗೆ ಹೇಗೆ ಗೌರವಿ
ಸಬೇಕು.ಅತ್ತೆ ಮಾವ0ದಿರನ್ನು
 ಹೇಗೆ ಕಾಣಬೇಕು ಎ0ಬ ವ್ಯವಹಾರಿಕ ಜ್ನಾನವನ್ನು
ಜನಪದ ಶ್ಯೆಲಿಯಲ್ಲಿ ಮನುಮುಟ್ಟುವ0ತೆ
ಹೃದಯ0ಗಮವಾಗಿ ಈ ಹಾಡಿನಲ್ಲಿ ಹೇಳಿದೆ.
ಹಳೇ ತಲೆಮಾರಿನ ಹೆಣ್ಣು ಮಕ್ಕಳು ಈಗಲೂ
ಈ ಹಾಡನ್ನು  ಗುನುಗುನಿಸುತ್ತಾರೆ.
ಸಾಮಾಜಿಕ ಮೌಲ್ಯಗಳು ಕ್ಷೀಣಿಸಿ ,ಬ0ಡಾಯ
ಪ್ರವೃತ್ತಿ ಹೆಚ್ಚಿ , ಕೋಮು ಸಾಮರಸ್ಯಕ್ಕೆ
ಧಕ್ಕೆಯಾಗುವ ಸ0ಧರ್ಭದಲ್ಲಿ  ಬಸವಣ್ಣನವರು
ತಮ್ಮ ವಚನದಲ್ಲಿ

ಇವನಾರವ , ಇವನಾರವ 
ಇವನಾರವನೆ0ದೆನಿಸದಿರಯ್ಯ
ಇವ ನಮ್ಮವ , ಇವ ನಮ್ಮವ
ಇವ ನಮ್ಮವನೆ0ದೆನಿಸಯ್ಯ್
ಕೂಡಲ ಸ0ಗಮದೇವಾ .
ನಿಮ್ಮ ಮಗ ನೆ0ದೆನಿಸಯ್ಯ

Friday, July 1, 2016

  "   ಏ  ತ0ಗೆವ್ವ ನೀ ಕೇಳ್ "

  *  "    ಗುಳೆ ಬ0ದವರಲ್ಲಿ.....
            ದುಡಿಕೊ0ಡ ತಿನ್ನೋರಿಗೆ
            ಒ0ದು ಮರವಾದಿ..
            ಬದಕಾಕ ಬ0ದವರಿಗೆ
            ಒ0ದು ಮರವಾದಿ.. "
            ಏ ತ0ಗೆವ್ವ ನೀ ಕೇಳ್...
  *  "  ಎ0ತಹ ಕಷ್ಟ ಕಾಲ ಬ0ದ್ರೂ
          ಜುಟ್ಟು ಒಬ್ಬರ ಕ್ಯೆಯಾಗ ಕೊಟ್ಟು
          ತುತ್ತು ಅನ್ನಕ್ಕ ಕ್ಯೆ ಚಾಚೋ
          ಪರಿಸ್ಥಿತಿ ಮಾಡ್ಕೋಬಾರದು  ".
          ಏ ತ0ಗೆವ್ವ ನೀ ಕೇಳ್....
  *  "  ಮುಖ ಸ್ತುತಿಯ ಮಾತಿಗೂ
         ಎದೆಯೊಳಗಿ0ದ ಬ0ದ ಮಾತಿಗೂ
         ಶ್ಯಾನೆ  ವ್ಯತ್ಯಾಸವು0ಟು  ".
         ಏ ತ0ಗೆವ್ವ ನೀ ಕೇಳ್...

"ಗುರು"
 
ನಮ್ಮ ಸ0ಸ್ಕೃತಿಯಲ್ಲಿ  ಗುರುವಿಗೆ
ಉಚ್ಛ ಸ್ಥಾನವಿದೆ. ನಾಕ ಅಕ್ಷರ ಕಲಿಸಿದಾತನೇ

 ಗುರು.ತಾಯಿಯೇ ಮೊದಲ ಗುರು.ಗುರುವಿನ
ಗುಲಾಮನಾಗುವತನಕ ದೊರೆಯದಣ್ಣ

 ಮುಕುತಿ.ಹೀಗೆ ಗುರುವನ್ನು ನಾನಾ ಪ್ರಕಾರ
ಗಳಲ್ಲಿ ಆರಾಧಿಸುತ್ತೇವೆ.ಗುರುವಿನಲ್ಲಿ ದ್ಯೆವತ್ವ
ವನ್ನು ಕಾಣುತ್ತೇವೆ.ಗುರುವಿನಲ್ಲಿ ದೇವರನ್ನು
ಕಾಣುತ್ತೇವೆ.ಗುರು ದೇವೋ ಪರಬ್ರಹ್ಮ.ಗುರು
ದೇವೋ ಭವ. ಗುರುವೇ ಜಗದ್ಗುರು.ಗುರು
ವಿಲ್ಲದೇ ವೇದವಿಲ್ಲ.ಗುರುವಿಲ್ಲದೇ ಜ್ನಾನ
ದೇಗುಲವಿಲ್ಲ.ಗುರುವಿಲ್ಲದೇ ಮಹಾತ್ಕಾರ್ಯ
ಗಳ ಫಲವಿಲ್ಲ.ಗುರುವಿಗೆ ಗುರು ದಕ್ಷಿಣೆ ಅರ್ಪಿ
ಸಿದಾಗಲೇ  ಆ ಮಹಾನ್ ಕಾರ್ಯಕ್ಕೆ ಸಫಲತೆ
ಯಶಸ್ದು ,ಕೀರ್ತಿ ದೊರೆಯುತ್ತದೆ.
       ಈಗ ಗುರುವಿನ ಸ್ಥಾನವನ್ನು ಶಿಕ್ಷಕರು
ತು0ಬಿದ್ದಾರೆ.ಶಿಕ್ಷಕರು ಕೂಡಾ ವಿದ್ಯಾರ್ಥಿಗಳಿಗೆ
ಪಾಠ ಹೇಳಿ ಕೊಡುವ ಮೂಲಕ  ಶಿಕ್ಷಣವನ್ನು
ಧಾರೆಯೆರೆಯುತ್ತಾರೆ.ಹಿ0ದಿನ ಕಾಲದಲ್ಲಿದ್ದ
ಗುರು -ಶಿಷ್ಯ ಸ0ಭ0ಧ ಈಗ ಉಳಿದಿಲ್ಲ.
ಗುರುಗಳ ಸ್ಥಾನವು ಕೂಡಾ ವೇತನದ ಮೇಲೆ
ಅಳೆಯುವದರಿ0ದ 'ಗುರು'ವಿನ ಸ್ಥಾನ ಪಾಠ
ಹೇಳಿಕೊಡುವದಕ್ಕೆ ಅಷ್ಟೇ ಸೀಮಿತವಾಗಿದೆ.
ಗುರುಗಳಲ್ಲಿ ಮೊದಲಿದ್ದ ವಿದ್ಯಾರ್ಥಿಗಳಿಗೆ
ಜ್ನಾನಧಾರೆಯೆರೆಯುವ  'ಜ್ನಾನಯೋಗ '
ಕ್ಕೆ ಇದ್ದ ಗೌರವ ಈಗ ಉಳಿದಿಲ್ಲ.ಸಾಮಾಜಿಕ
ವ್ಯವಸ್ಥೆಗಳು ಬದಲಾದ ಕಾಲಕ್ಕೆ ತಕ್ಕ0ತೆ
ಗುರುವಿನ ಸ್ಥಾನವನ್ನು  ಬದಲಾಯಿಸುತ್ತಾ ಸಾಗಿವೆ..
     ಒ0ದ0ತೂ ನಿಜ.ಗುರುವಿನಮಾರ್ಗದರ್ಶನ
ಜ್ನಾನ ಭೋಧನೆ ಇಲ್ಲದೇ  ವಿದ್ಯೆ ಪಡೆಯುವದು
ವಿದ್ಯೆಯಲ್ಲಿ ನ್ಯೆಪುಣ್ಯತೆಯನ್ನು  ಗಳಿಸಲು
ಸಾದ್ಯವಿಲ್ಲವೆ0ಬ ಮಾತು ನೂರಕ್ಕೆ ನೂರರಷ್ಟು
ಸತ್ಯ.ಗುರು ಹಾಗು ಶಿಷ್ಯ ಸ0ಭ0ಧ ಪವಿತ್ರ
ವಾಗಿರಬೇಕು.ವಿದ್ಯಾಪೀಠಗಳನ್ನು ಡೋನೇಶನ್ನ್
ಪೀಠಗಳನ್ನಾಗಿ ಮಾರ್ಪಡಿಸುವದು ,ಮಾರ್ಪ
ಡಿಸಲು ಹೋಗುವ ಮಾರ್ಗಗಳು  ಸಜ್ಜನರು
ಎ0ದಿಗೂ ಮಾನ್ಯ ಮಾಡುವದಿಲ್ಲ.ಶಿಕ್ಷಣ
ಜಾತಿರಹಿತವಾಗಿರಬೇಕು.ಗುರು ಎಲ್ಲಾ
ಕಟ್ಟಳೆಗಳನ್ನು ಮೀರಿದವನಾಗಿರಬೇಕು.
    

 ತನ್ನ ಶಿಷ್ಯ0ದಿರಲ್ಲಿ ಮಾನವೀಯತೆಯನ್ಮು
ಕ0ಡಾಗಲೇ ಗುರುವಿಗೆ ತಾ ನೀಡಿದಶಿಷ್ಯತ್ವಕ್ಕೆ
ಒ0ದು ಹಿರಿಮೆ ಗರಿಮೆ.
ಗುರುಗಳ ಮೌಲ್ಯಗಳು ಹೆಚ್ಚಿಸುವ0ತಹ
ಕಾರ್ಯಗಳನ್ನು  ಶಿಷ್ಯ ಪಡೆ  ಮಾಡಲು ಉತ್ಸಕ
ರಾಗಿರಬೇಕು. ಜಗತ್ತು ಗುರು ಶಿಷ್ಯರ ಜ್ನಾನ
ಸ0ಪತ್ಯಿನ ಮೇಲೆ ಅವಲ0ಬಿತವಾಗಿದೆ.
ಇದನ್ನು ತಳ್ಳಿ ಹಾಕುವ0ತಿಲ್ಲ.