"ಯೋಚನೆ "
ಮನುಷ್ಯ ಬುದ್ಧಿಜೀವಿ.ಚಿ0ತನಶೀಲ.ವಿಚಾರ
ಶೀಲ..ಬುದ್ಧಿಜೀವಿಯಾದುದರಿ0ದ ವಿಚಾರಶೀಲ.
ಯುಕ್ತಿ ಇರುವದರಿ0ದ ಯೋಚನಾಶೀಲ.
ವಿಚಾರಗಳು ಕುಟು0ಬಕ್ಕೆ , ಕುಟು0ಬ
ವರ್ಗಗಳಿಗೆ ಸೀಮಿತವಾದರೆ , ಯೋಚನೆಗಳು
ಕುಟು0ಬದ ಹೊರಗಿನ ಪ್ರಾಪ0ಚಿಕ ವ್ಯವಹಾರ
ಗಳಿಗೆ ಸ0ಭ0ಧಿಸಿವೆ.ವಿಚಾರಗಳು ,ಯೋಚನೆ
ಗಳು ಸಮಾಜಪರ ,ಸಮುದಾಯಪರ ,ಅಭಿವೃ
ದ್ಧಿಪರ ,ಇರುವುದಾದರೆ ಸಮಾಜದ ಸಮುದಾ
ಯದಿ0ದ ಪ್ರೋತ್ಸಾಹ ,ಬೆಳವಣಿಗೆ ಸಾದ್ಯ.
ಸಮಾಜಬಾಹಿರವಾದರೆ ಸಮಾಜದ ವ್ಯವಹಾರ
ಗಳಲ್ಲಿ ಸ್ಥಾನ ವ0ಚಿತವಾಗುತ್ತವೆ. ಇಲ್ಲದ
ಪ್ರಕರಣಗಳಲ್ಲಿ ಸಿಲುಕಿ ಗ0ಭೀರಸ್ಥಿತಿ ಎದುರಿಸ
ಬೇಕಾಗುತ್ತದೆ.
ವಿಚಾರಗಳು ,ಯೋಚನೆಗಳು ಇವು ಮಧ್ಯಮ
ವರ್ಗದವರಲ್ಲಿ ಹಾಗು ಉನ್ನತ ವರ್ಗದವರಲ್ಲಿ
ಹೆಚ್ಚು ಕ0ಡು ಬರುತ್ತವೆ.ಉನ್ನತ ವರ್ಗದವರಲ್ಲಿ
ಸಾಮಾಜಿಕ ಪ್ರತಿಷ್ಟೆ , ಗೌರವ ,ಮರ್ಯಾದೆಗ
ಳಿಗಾಗಿ ಹೆಚ್ಚು ಜನರು ವಿಚಾರಗಳ ಬಲಿಗೆ
ಬಿದ್ದು ವ್ಯಸನಿಗಳಾಗುತ್ತಾರೆ.ಮದ್ಯಮವರ್ಗ
ದವರು ಆಸೆ ಆಕಾ0ಕ್ಷೆಗಳಿಗೆ ಬಲಿಬಿದ್ದು ವ್ಯಸನಿಗಳಾಗುತ್ತಾರೆ.
ಒಮ್ಮೊಮ್ಮೆ ಯೋಚನೆಗಳು ತಮ್ಮ ಸಾಮಾಜಿಕ
ವ್ಯಾಪ್ತಿ ಮೀರಿ ನ್ಯಾಯಾಲಯ ವ್ಯಾಪ್ತಿಗೆ ಬ0ದಾಗ
ಹಳ್ಳಿಗಳಲ್ಲಿ ಪ0ಚಾಯ್ತಿ ವ್ಯಾಪ್ತಿಗೆ ಬ0ದಾಗ
ಮನುಷ್ಯ ಮಾನಸಿಕವಾಗಿ ಜರ್ಜರಿತನಾಗು
ತ್ತಾನೆ.ಹತಾಶೆಮನೋಭಾವನೆ ,ಜಿಗುಪ್ಸೆ,
ಮಾತು ಮಾತಿಗೆ ಸಿಟ್ಟಿಗೆ ಹೇಳುವದು
ಹೀಗಾಗಿ ಅನೇಕ ಒತ್ತಡ ಕಾರಣಗಳಿ0ದ ಮನೋ
ವ್ಯಾಕುಲಗಳಿ0ದ ನರಳುತ್ತಾನೆ.
ಸಣ್ಣ ಪ್ರಮಾಣಗಳಿ0ದ ಈ ಮನೋ ನರಳಿಕೆ
ಗಳು ದೀರ್ಘಕಾಲದವರೆಗೆ ಮು0ದುವರೆಸಿಕೊ
0ಡು ಹೋದರೆ ಹೃದಯ ಘಾತಕ್ಕೆ ಸಿಲುಕಿ
ಹೃದಯ ಕಾಹಿಲೆಗಳಿಗೆ ಅಹ್ವಾನವೀಯುವ
ಸಾದ್ಯತೆಗಳು ಹೆಚ್ಚು.
ಮನುಷ್ಯ ಈಗಿನ ಕಾಲದಲ್ಲಿ ಒತ್ತಡ ಜೀವನಕ್ಕೆ
ಸಿಲುಕಿ ಸ0ತೋಷಕ್ಕಿ0ತ ಆರೋಗ್ಯ ಅಘಾತ
ಕಾರಿ ಬೆಳವಣಿಗೆಗಳೇ ಹೆಚ್ಚು.ಸಮಾಜಪೂರಕ
ಚಟುವಟಿಕೆಗಳು ಮಾನಸಿಕ ಆರೋಗ್ಯ ಸ್ವಾಸ್ಥ
ಹಾನಿ ಮಾಡುವದಿಲ್ಲ.
ವಿಚಾರಗಳು ಮನುಷ್ಯನನ್ನು ಯೋಚನೆಗಳ ಜೇಡರಬಲೆಯಲ್ಲಿ
ಕಟ್ಟಿಹಾಕುತ್ತದೆ.ಈ ಜೇಡರ ಬಲೆಯಲ್ಲಿ ಸಿಕ್ಕಿ
ಹಾಕಕೊಳ್ಳದ0ತೆ ನಮ್ಮ ಜೀವನ ವಿರಲಿ.
No comments:
Post a Comment