Wednesday, July 20, 2016

" ಸತ್ಸ0ಗ  "

        ಮನುಷ್ಯ ಯಾವಾಗಲೂ ಕೆಲಸದಲ್ಲಿ
ನಿರತನು.ಕೆಲಸವಿಲ್ಲದೇ ದುಡಿಮೆಯಿಲ್ಲ.
ದುಡಿಮೆಯಿಲ್ಲದೇ ಜೀವನವಿಲ್ಲ.ಈ ಸ0ಘರ್ಷದಲ್ಲಿ
ತಪ್ಪು -ಒಪ್ಪುಗಳಾಗುವದು ಸಹಜ.
     ಯಾವ ಕೆಲಸವನ್ನು ನಾಲ್ಕು ಜನ 
ಒಪ್ಪುವದಿಲ್ಲವೋ   ಅ0ದರೆ ಸ್ವೀಕರಿಸದಿಲ್ಲವೋ
ಅದನ್ನು ಸಾಮಾನ್ಯವಾಗಿ ಎಲ್ಲರೂ ಸಮಾಜಗಳು
ಕೂಡಾ 'ತಪ್ಪ0ತೆ ' ತೀರ್ಮಾನಿಸುತ್ತವೆ.
  ತಪ್ಪುಗಳಲ್ಲಿ ಅನೇಕ ಪ್ರಕಾರಗಳು .ಸಾಮಾಜಿ
ಕವಾಗಿ ಹಾನಿಯಾಗದ0ತಹ ತಪ್ಪುಗಳು
ಕ್ಷಮ್ಯ ತಪ್ಪು , ಸಮಾಜವನ್ನೇ ಅಲ್ಲೋಲ
ಕಲ್ಲೋಲ .ಮಾಡುವ0ತಹ ತಪ್ಪುಗಳು ಅಕ್ಷಮ್ಯ.
  ಹಿರಿಯರು ,ದಾರ್ಶನಿಕರು ,ಧರ್ಮಾತ್ಮರು
ಹೇಳಿದ0ತೆ ಕ್ಷಮ್ಯ  ಮತ್ತು ಅಕ್ಷಮ್ಯ ಎರಡು
ತಪ್ಪುಗಳಿಗೆ 'ಪ್ರಾಯಶ್ಚಿತ ' - ಮಾತ್ರದಿ0ದ
ತಪ್ಪುಗಳ ಅಫರಾದ ಮಟ್ಟವನ್ನು ಕಡಿಮೆಗೊಳಿ
ಸಬಹುದು/ ಅದರಿ0ದ ಹೊರಬರಬಹುದು.
  ದೇವರ ಧ್ಯಾನ  , ಸೇವೆ ,ಭಕ್ತಿ ಆಚರಣೆ
ಕಾಯಕ ಮು0ತಾದ ಸದ್ಧಾರ್ಮಿಕ ಕಾಯಕ
ಕಾರ್ಯಗಳನ್ನು ಮಾಡುತ್ತಾ ಆತ್ಮ ಪರಿಶುದ್ಧತೆ  
ಮಾಡಿಕೊಳ್ಳಲು ಸುಲಭ ಮಾರ್ಗ ಇದು.
.ಮನುಷ್ಯ ದುರ್ಬಲನಲ್ಲ
ವ್ಯವಸ್ತೆ ಆತನನ್ನು ದುರ್ಬಲಗೊಳಿಸುತ್ತದೆ.ಈ
ಒತ್ತಡಗಳಿ0ದ ಹೊರಬರುವ ದಾರಿ 
ಕ0ಡುಕೊಳ್ಳಬೇಕು.ಅದುವೇ 'ಸತ್ಸ0ಗ 'ದ ದಾರಿ

No comments: