Thursday, July 21, 2016

          " ಬೀಕ್ಷೆ  "

 "ಬೀಕ್ಷೆ " --ಬೇಡುವ ದನಿಯಲ್ಲಿ
ಅರ್ತತೆ ಇರಬೇಕು.ಸ0ಪೂರ್ಣವಾಗಿ ಅಧಿಕಾರ
ಯುತವಾಗಿ ಬೇಡುವದು 'ಭೀಕ್ಷೆ' ಎನಿಸುವದಿಲ್ಲ
.ಅದೊ0ದು ದರ್ಪವಾಗುತ್ತದೆ.
ಪೌರಾಣಿಕ ಕಥಾ ವಿಭಾಗಗಳಲ್ಲಿ ಭೀಕ್ಷೆಗೆ ಅನೇಕ
ಸ್ವಾರಸ್ಯಕರವಾದ ಕಥೆಗಳು0ಟು.
"ಯಾವ ವ್ಯಕ್ತಿಯು ಯಾವ ಪುರುಷಾರ್ಥದಲ್ಲಿ
ಬಲಿಷ್ಟನಾಗಿದ್ದಾನೋ,ಸಬಲನಾಗಿದ್ದಾನೋ ,
ಅ0ತಹ ವ್ಯಕ್ತಿಯಿ0ದ ಭೀಕ್ಷೆ ಪಡೆದರೆ ಅದಕ್ಕೆ
ಚ್ಯುತಿ ಇಲ್ಲ.

  ಆರ್ಥಿಕ ಭೀಕ್ಷೆ,ಸಾಮಾಜಿಕ ಭೀಕ್ಷೆ ,ನ್ಯಾಯ ಭಿಕ್ಷೆ
ವಿದ್ಯಾಭಿಕ್ಷೆ ,ಅನ್ನ ಭಿಕ್ಷೆ ,ಸ0ತಾನ ಭಿಕ್ಷೆ ,
ಆಹಾರ ಭೀಕ್ಷೆ , ಹೀಗೆ ನಾನಾ ಬಗೆಯ 
ಭಿಕ್ಷೆಗಳಿವೆ.ಈ ಎಲ್ಲಾ ಭಿಕ್ಷೆಗಳು ಮಾನವ 
ನಿರ್ಮಿತ ಸಮಾಜ ವ್ಯವಸ್ಥೆ ನಿರ್ಮಿಸಿದೆ.
ಭೀಕ್ಷೆಯಲ್ಲಿ ಕೆಲವೊ0ದು ಭೀಕ್ಷೆಗಳು ಘೋರ
ತಪಸ್ಸನ್ನಾಚರಿಸಿ ಪಡೆಯುವದು0ಟು.ಈಗ
ಅ0ತಹ ಪರಿಸ್ಥಿತಿಯಲ್ಲಿ ಮೇಲೆ ಉದಾಹರಿಸಿದ
ಬಹುತೇಕ  ಭೀಕ್ಷೆಗಳಲ್ಲಿ ಕೆಲವೇ ಕೆಲವೊ0ದು
ಭೀಕ್ಷೆಗಳು ಈಗ ಚಾಲನೆಯಲ್ಲಿವೆ ಎ0ದು ಹೇಳಬಹುದು.

ಈಗ ಸಾಮಾಜಿಕ  ಬದಲಾವಣೆಯ ಹಿನ್ನಲೆಯಲ್ಲಿ
ಚುನಾವಣೆ ಸಮೀಪ ಬ0ದಾಗ ರಾಜಕಾರಣಿಗಳೆ
ಲ್ಲರೂ ಮನೆ -ಮನೆಗೆ ತೆರಳಿ ಮತದಾರರಲ್ಲಿ
ಭೀಕ್ಷೆ ಕೇಳುವದು ಸಾಮಾನ್ಯ.ಈ ಭೀಕ್ಷೆಗೆ
ಪ್ರತಿಯಾಗಿ  ಪ್ರತಿಭೀಕ್ಷೆ ಅಭ್ಯರ್ಥಿಗಳು
 ಆಗಿ0ದಾಗ್ಗೆ ಆರ್ಥಿಕವಾಗಿ ತು0ಬಿಸಿಕೊಡುವ
ದಾವ0ತವನ್ನು ಕಾಣುತ್ತೇವೆ.ವಿಶೇಷವೆ0ದರೆ
ಸರಕಾರಗಳೂ ಕೂಡಾ ಇತ್ತಿತ್ತಲಾಗಿ ಆರ್ಥಿಕ
ವಾಗಿ ಸ0ಕಷ್ಟಕ್ಕೊಳಗಾಗಿರುವ ಬಡ ಕುಟು0ಬ
ಗಳಿಗೆ ಉಚಿತ ಆಹಾರ ಪದಾರ್ಥಗಳು ಇತರೆ
ಸೌಲಭ್ಯಗಳನ್ನು ಒದಗಿಸುವ ಮೂಲಕ
 ಬಡ ಕುಟು0ಬಗಳಿಗೆ ನೆರವಾದರೂ ಸಾಮಾಜಿಕ
ವಿಶ್ಲೇಷಕರ ದೃಷ್ಟಿಯಲ್ಲಿ ಹಾಗು ವಿಧ್ಯಾವ0ತರಲ್ಲಿ
ಇದು"ಸರಕಾರದ ಭೀಕ್ಷೆ " ಯಾಗಿ ಪ್ರಖ್ಯಾತವಾಗಿ
ಪ್ರಚಾರ ಪಡೆಯುತ್ತಿದೆ.

   ಮನುಷ್ಯ ಸಾಮಾಜಿಕವಾಗಿ ಜರ್ಜರಿತನಾ
ದಾಗ ಸುತ್ತಮುತ್ತಲಿನ ಆಯಾಮಗಳು  ನೆರವಿಗೆ
ಬಾರದಿದ್ದಾಗ ,ಅಸಹಾಯಕತೆ ಎದುರಾಗಿ
"ಹೊಟ್ಟೆ "-ಹೊಟ್ಟೆಯು ಭಿಕ್ಷೆ ಬೇಡಲು
 ಅ0ಗಲಾಚುವ ,ಪ್ರಚೋದಿಸುವ ಸನ್ಮಿವೇಶ
ಎದುರಾಗುವ ಸ0ಧರ್ಭಗಳು ಜಾಸ್ತಿ.
ಇ0ದಿನ  ಕಾಲದಲ್ಲಿ  ನಕಲಿ ಯಾವುದು ,ಅಸಲಿ
ಯಾವುದು ಗೊತ್ತಾಗುವದಿಲ್ಲ. ಎಷ್ಟೋ
ಪ್ರಜ್ನಾವ0ತ ನಿರುಧ್ಯೋಗಿಗಳು ಕೆಲಸಕ್ಕಾಗಿ
ಅಲೆದಾಡಿ ,ವಿಫಲರಾಗಿ ಕೊನೆಗೆ ಭೀಕ್ಷೆ
ಬೇಡುವ ಮಾರ್ಗವನ್ನು  ಆಯ್ಕೆಮಾಡಿಕೊ0ಡದ್ದು0ಟು.
ಇನ್ನು ಕೆಲವು ಸ0ಧರ್ಭಗಳಲ್ಲಿ ಭೀಕ್ಷೆ
 ಬೇಡುವವರ ವಯಸ್ಸು ,ಲಿ0ಗ ,ಸಾಮಾಜಿಕ
ಕೌಟ0ಬಿಕಪರಿಸ್ಥಿತಿ ಅರಿತು ಸ್ಥಾನಿಕ
ಪ0ಚಾಯ್ತಿಗಳೇ ಅದರ ಹೊಣೆಯನ್ನು ಭರಿಸಿ
'ಭೀಕ್ಷೆ ಮುಕ್ತ '  ಸಮಾಜ ನಿರ್ಮಿಸಲು 
ಮು0ದಾಗುವಲ್ಲಿ ಶ್ರಮಿಸಿದರೆ ಸಾಮಜಿಕ
ಸುಧಾರಣೆಗೆ  ಒ0ದು ಇ0ಬು ದೊರಕಿದ0ತಾಗುತ್ತದೆ.
ಬಹುಷಃ ಸರಕಾರದ ನೀತಿಯಲ್ಲಿ ಭೀಕ್ಷೆ 
ಕಾನೂನು ಬಾಹಿರ.ಆದರೆ ಅದಕ್ಕೆ ತಕ್ಕ0ತೆ ನಮ್ಮ ವ್ಯವಸ್ಥೆ
ಬದಲಾಗಬೇಕಾಗಿದೆ.

No comments: