" ದಾರ್ಶನಿಕರು --2 "
ಮು0ದುವರೆದು ಬಸವಣ್ಣನವರು ಸಮಾಜದಲ್ಲಿ
ರುವ ಕ0ದಾಚಾರ ,ಮೂಢನ0ಬಿಕೆ ,ಕೀಳಿರಿಮೆ
ಇವುಗಳನ್ನು ತೊಡೆದು ಹಾಕಲು ಮಾನವ
ಧರ್ಮದ ಬಗ್ಗೆ ಹೀಗೆ ಹೇಳಿದ್ದಾರೆ.
ನೆಲೆವೊ0ದೆ --ಹೊಲಗೇರಿ ಶಿವಾಲಯಕ್ಕೆ
ಜಲವೊ0ದೆ -- ಶೌಚಾಚಮನಕ್ಕೆ
ಕುಲವೊ0ದೆ -- ತನ್ನ ತಾನರಿದವರಿಗೆ
ಫಲವೊ0ದೆ -- ಷಡ್ ದರುಶನ ಮುಕ್ತಿಗೆ
ನಿಲುವೊ0ದೆ -- ಕೂಡಲಸ0ಗಮದೇವನ
ನಿಮ್ಮನರಿದವರಿಗೆ
ಋತು ಚಕ್ರಮಾನ ಉರುಳಿದ0ತೆ ಸಮಾಜವು
ಇ0ದು ಪರಿವರ್ತನೆಗೊ0ಡಿದೆ.ಆಧುನಿಕ
ವ್ಯೆಜ್ನಾನಿಕ ಸಮಾಜವನ್ನು ನಾವಿ0ದು
ವಿಶ್ವದಲ್ಲೆಡೆ ಕಾಣುತ್ತಿದ್ದೇವೆ. ಜಾಗತೀಕರಣ
ಹಾಗೂ ನೂತನ ತ0ತ್ರಜ್ನಾನದ ಅವಿಷ್ಕಾರದಿ
0ದಾಗಿ ಮಾನವನು ಗ್ರಹಗಳ ಮೇಲೆ ಪದಾ
ರ್ಪಣೆ ಮಾಡಿದ್ದಾನೆ.ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ
ಪ್ರವೇಶಿಸುತ್ತಿದ್ದಾಳೆ.
"ಆಧುನಿಕ ಜಗತ್ತು ಮಾನವನಿಗೆ ಏನೆಲ್ಲಾ
ಕೊಟ್ಟಿದೆ.ಆದರೆ ಈ ಮೊದಲು ಕೊಟ್ಟಿದ್ದನ್ನು
ಕಿತ್ತುಕೊ0ಡಿದೆ ".ಎಲ್ಲಾ ಸೌಕರ್ಯಗಳದ್ದರೂ
ಮಾನವ ಇ0ದು ಶಾ0ತಪ್ರಿಯನಾಗಿಲ್ಲ.ಅವನ
ಮನಸ್ಸು ಗೊ0ದಲದ ಗೂಡಾಗಿದೆ.ಶಾ0ತಿ
ಸಹಬಾಳ್ವೆಗಾಗಿ ಹಪಹಪಿಸುತ್ತಿದ್ದಾನೆ.
ಪ್ರಾಥಃ ಸ್ಮರಣೀಯರಾದ ಬುದ್ಧ ,ಬಸವ
ಗಾ0ಧಿ ,ಪುರ0ದರದಾಸ ,ರಾಮಕೃಷ್ಣ ಪರಮ
ಹ0ಸ , ಸ್ವಾಮಿ ವಿವೇಕಾನ0ದ ,ರಾಜಾರಾಮ
ಮೋಹನರಾಯ ಇನ್ನೂ ಅನೇಕ ಸಮಾಜ
ಸುಧಾರಕರು ಧಾರೆಯೆರೆದ ಸುಧಾರಣೆ ಮಾರ್ಗ
ಗಳನ್ನು ನಾವಿ0ದು ಮರೆತಿದ್ದೇವೆ.ಸ್ವೇಚ್ಛಾಚಾ
ರಕ್ಕೆ ಮಾರು ಹೋಗಿದ್ದೇವೆ.ಕಠಿಣ ಪರಿಶ್ರಮವಿ
ಲ್ಲದೇ ಸುಲಭವಾಗಿ ಹಣ ಸ0ಪಾದಿಸುವ ಮಾರ್ಗ
ಗಳನ್ನು ಹುಡುಕುತ್ತಿದ್ದೇವೆ.ಇಲ್ಲ ಸಲ್ಲದ ಭಾವೋ
ದ್ವೇಗಗಳನ್ನು ಸೃಷ್ಟಿಸುತ್ತಿದ್ದೇವೆ.ನಮಗೆತಿಳಿದೋ
ತಿಳಿಯದೆಯೋ ಕೋಮುಭಾವನೆಗಳಿಗೆ
ಬಲಿಯಾಗಿ ಸಮಾಜದ ಶಾ0ತಿಯನ್ನು ಕದಡು
ತ್ತಿದ್ದೇವೆ.ಕೊಲೆ ,ಸುಲಿಗೆ ,ಬೆದರಿಕೆ ,ಬಾ0ಬ್
ಸ್ಪೋಟ ಚರ್ಚ ,ಮ0ದಿರ ,ದೇವಾಲಯ
ಧ್ವ0ಸಗೊಳಿಸಲು ವಿಚ್ಛಿದ್ರಕಾರಿ ಶಕ್ತಿಗಳು
ಅಟ್ಟಹಾಸ ಗ್ಯೆಯುತ್ತಿವೆ.ಈ ಶಕ್ತಿಗಳು
ಸಮಗ್ರತೆಗೆ ಭ0ಗ ಉ0ಟು ಮಾಡುತ್ತಿವೆ.
No comments:
Post a Comment