ಮೊದಲ ಗುರು
-----------------
ಹುಟ್ಟಿದಾರಭ್ಯದಿ0ದ ತಾಯಿ ತನ್ನ ಸ್ತನಪಾನ
ದಿ0ದ ಮಗುವಿನ ಆರಯಿಕೆಯಲ್ಲಿ ಅ0ದರೆ
ಪಾಲನೆ ,ಪೋಷಣೆ ಎಲ್ಲಾ ನಮ್ಮ ಸ0ಸಕೃತಿ
ಯಲ್ಲಿ ತಾಯಿಯೇ ಮಾಡಬೇಕು. ಈಗಲೂ
ತಾಯಿಯೇ ಮಾಡ್ತಾಳೆ.ಇದುಅವಳಿಗೆ "ಸ್ತ್ರೀ"
ಅ0ತಕರಣದಿ0ದ ಬ0ದ "ಮಾತೆಯ
ಹಕ್ಕಾಗಿದೆ." ಮಕ್ಕಳನ್ನು ಲಾಲಿಸುವದು ,
ಪಾಲಿಸುವದು ,ಪೋಷಿಸುವದು ,ಬೆಳಸುವದು
ಇದು ಒ0ದು ಲಲಿತ ಕಲೆ ಇದ್ದ ಹಾಗೆ.ಮಕ್ಕಳು
ಅಳ್ತಿದ್ರೆ ,ಕಿರಿ-ಕಿರಿ ಮಾಡ್ತಿದ್ರೆ ,ಏಕೆ ಕಿರಿ ಕಿರಿ
ಮಾಡುತ್ತೆ ಅನ್ನೋದು ಮೊದಲು ಗೊತ್ತಗೋದು
ತಾಯಿಗೆ.ಹೀಗಾಗಿ ನಮ್ಮ ದೇಶದಲ್ಲಿ
"ತಾಯಿಯೇ ಮೊದಲ ಗುರು ".ಹಾಗು ಮಗು
ಕೂಡಾ ಮೊದಲು "ಅಮ್ಮಾ "ಅನ್ನೋ
ಪದದಿ0ದ ಮಾತಾಡೊದು ಕಲಿಯೋದು.
ಹೀಗಾಗಿ ತಾಯಿಯೇ "ಮಾತೃ ದೇವೋ ಭವ ".
ಹಳ್ಳಿಗಾಡಿನಲ್ಲಿ ತಾಯಿ ಬಿಟ್ಟರೆ ಹೆಚ್ಚಾಗಿ
ಮಕ್ಕಳು ಬೆಳೆಯೋದು ಅಜ್ಜ -ಅಜ್ಜಿ
ಚಿಕ್ಕಪ್ಪ -ಚಿಕ್ಕಮ್ಮ ಇ0ತಹ ಒಡಹುಟ್ಟಿದ
ಪರಿಸರದಲ್ಲೇ.ಅಲ್ಲಿ0ದಲೇ ಮಕ್ಕಳ ಪ್ರಾಥ
ಮಿಕ ಪಾಠಶಾಲೆ ಪ್ರಾರ0ಭವಾಗೋದು.
ಈಗ ನೋಡುತ್ತಿರುವ ಎಷ್ಟೋ ಪ್ರಖ್ಯಾ
ತ ಮಹಾನುಭಾವರೆಲ್ಲರೂ ಪ್ರಥಮ ಶಿಕ್ಷಣ
ತಾಯಿಯಿ0ದ ಪಡೆದು ಬ0ದವರು.ತಾಯಿ
ಅನ್ನೋ ಮಮತೆಯ ಜೊತಗೆವಾತ್ಸಲ್ಯ ,ಭಾವ
ನೆಗಳು ಬೆಳೆಯುತ್ತಾ ,ಮಕ್ಕಳು ಬೆಳೆದ0ತೆಲ್ಲಾ
ಮಕ್ಕಳ ಸಾಮಾಜಿಕ ಕಳಕಳಿ ,ಭಾ0ಧ್ಯವ್ಯ
ಹೆಚ್ಚುತ್ತಾ ಹೊಗುತ್ತವೆ.
ಈಗ ಕಾಲ ಬದಲಾಗಿದೆ.ಮಕ್ಕಳು ಮನೆಯಲ್ಲಿ
ರುವದಕ್ಕಿ0ತ 01 ವರ್ಷದಿ0ದ ಅ0ಗನ ವಾಡಿಗೆ
ಸೇರಿದಿಬಿಡ್ತಾರೆ.ಶಿಕ್ಷಣ ಮು0ದುವರೆಯುತ್ತದೆ.
ಮಕ್ಕಳುದೊಡ್ಡವರಾಗುತ್ತಾರೆ.ಆದರೆ ಒಡನಾಟ
ಸ0ಪರ್ಕ , ವಾತ್ಸಲ್ಯ ,ಮೊದಲಿನ0ತಿಲ್ಲ..ಈ
ಬಾ0ಧವ್ಯ ಸುಧಾರಿಸಬೇಕಾದರೆ ತಾಯಿಯ
ಮೇಲ್ವಿಚಾರಣೆಯಲ್ಲಿ ನಡೆಯುವ ಶಿಕ್ಷಣ ಅಗತ್ಯ.
ಇದನ್ನು ತಳ್ಳಿ ಹಾಕುವ0ತಿಲ್ಲ. ಇದನ್ನು
ಕಡೆಗಣಿಸಿದರೆ ತ0ದೆ ತಾಯಿಗಳು ಬಾ0ಧವ್ಯ
ವಾತ್ಸಲ್ಯ ಕೊರತೆಗಳನ್ನು ಎದುರಿಸಬೇಕಾಗುತ್ತದೆ.
No comments:
Post a Comment