Monday, July 25, 2016

"ಬದುಕು "
         
 ಜೀವನವೆ0ಬ  ನಾಟಕವೇ  '  ಬದುಕು '.
ಈ ನಾಟಕದ  ಅ0ಕ  ಪರದೆಯ  ಮೇಲೆ ಬರುವ
ಚಿತ್ತಾಕರ್ಷಕ   ಸೀನರಿಗಳು ,ಕಲಾವಿದರ
ಹಾಸ್ಯ , ಅಭಿನಯ ,  ನಾಟಕದ  ಸ0ದೇಶ
ಎಲ್ಲವೂ. ಪ್ರೇಕ್ಷಕರ ಮನರ0ಜನೆಗಾಗಿ
ರೂಪಿಸಲ್ಪಟ್ಟವಾದರೂ ,  ಇದರಲ್ಲಿ ಮನುಷ್ಯನ
ಕಲೆಯಿದೆ. ಜೀವನ  ಕಲೆಯಿದೆ. ಈ  ಕಲೆಯಲ್ಲಿ
ಕಥೆ -ಕಟ್ಟುವ ನಾಟಕಕಾರ  ಪ್ರಪ0ಚದಲ್ಲಿ
ನಡೆಯುವ ಎಲ್ಲಾ  ವ್ಯವಹಾರಗಳನ್ನು  ವಾಸ್ತವಿಕ
ನೆಲೆಗಟ್ಟಿನಲ್ಲಿ  ವಿಮರ್ಷಿಸಿ  ಪ್ರೇಕ್ಷಕರಿಗೆ ಮನ
ಮುಟ್ಟುವ0ತೆ  ನಾಟಕ ರಚಿಸಿ  ಪ್ರದರ್ಶನಕ್ಕೆ
ಸಜ್ಜುಗೊಳಿಸುತ್ತಾನೆ.ಇದು ನಾಟಕದ ಬಹಿರ0ಗ
ರೂಪ.ಜೀವನದ ಬಹಿರ0ಗ  ಸ್ವರೂಪ.
    
ನೂರಾರು  ಕಲಾವಿದರಿರುವ  ನಾಟಕ
ತ0ಡ. ಆ  ತ0ಡ  ನಡೆಸಿಕೊಡುವ ನಾಟಕದ
ಅ0ಕಣದ  ಹಿ0ದೆ.  ನೂರಾರು ಕಲಾವಿದರ
ಅಸಲಿ ಭಿನ್ನ -ಭಿನ್ನ  ಜೀವನ ಕಥೆಗಳನ್ನು
ಕೇಳಿದಾಗ ಯಾರಿಗಾದರೂ ಕರಳು ಚುರ್ರ
ಗುಟ್ಟುತ್ತದೆ.
  
ನಾಟಕದಲ್ಲಿ  '  ನಾಯಕ ' ಪಾತ್ರ ಮಾಡುವ
ಪಾತ್ರದಾರಿ  ನಿಜ ಜೀವನದಲ್ಲಿ  ಯಾರಿಗೂ
ಬೇಡವಾದ ,ನಾಲ್ಕು ಜನರಿ0ದ ತಿರಸ್ಕರಿಸಲ್ಪಟ್ಟ
ವ್ಯಕ್ತಿಯಾಗಿರುತ್ತಾನೆ.ಜೀವನದ 'ಟೆಸ್ಟ ' 
ಆಟಗಳಲ್ಲಿ ಸೋಲು ಕ0ಡು ,ನೋವು 
ಅನುಭವಿಸಿದವರು ಅನೇಕರು. ಆದರೂ
ಇವರೆಲ್ಲರೂ  ಅದನ್ನು ಮರೆತು  ನಾಟಕ
ಪ್ರಾರ0ಭವಾದೊಡನೆ  ಪಾತ್ರಕ್ಕೆ ತಕ್ಕ0ತೆ
ತನ್ನ ನಟನ ಸಾಮರ್ಥ್ಯವನ್ನು  ಪ್ರದರ್ಶಿಸಿ
ಜನ ಮೆಚ್ಚುಗೆ ಗಳಿಸುತ್ತಾನೆ.

 ಈ ತತ್ವವೇ  ಜೀವನದ ' ಅಸಲಿ  ತತ್ವ '.
ನಾವೆಲ್ಲರೂ  ಜೀವನದಲ್ಲಿ ಎಷ್ಟೇ ಕಷ್ಟ -
ಕಾರ್ಪಾಣ್ಯ -ಸೋಲು -ವನವಾಸ  ಅನುಭವಿಸಿ
ದರೂ  ಅವುಗಳನ್ನು ಮೆಟ್ಟಿ  ಜೀವನ ಸಾಗಿಸು
ವದೇ  ನಿಜವಾದ ಬದುಕು.ಇದುವೇ ಸಾರ್ಥಕ
ಬದುಕು.ಇ0ತಹ ಬದುಕಿಗೊ0ದು 'ನೆಲೆ -ಬೆಲೆ '
ಖ0ಡಿತಾ ಇರುತ್ತದೆ.

No comments: