Tuesday, July 19, 2016


 "ಗುರು ಪೂರ್ಣಿಮೆ"

ಹುಟ್ಟಿದಾರಭ್ಯದಿ0ದ..
ಅ0ಬೆಗಾಲಿನಿ0ದ ಹಿಡಿದು ನಡೆದಾಡುವವರೆಗೆ
ತೊದಲು ನುಡಿಯಿ0ದ ಮಾತಾಡುವವರೆಗೆ
ಗ0ಜಿಯಿ0ದ ಊಟ ಮಾಡುವವರೆಗೆ
ಮಗುವಿಗೆ ತಾಯಿಯೇ ಮೊದಲ ಗುರು.
ವಿದ್ಯೆ ಕಲಿಸುವ ಗುರುಗಳಿದ್ದಾರೆ
ಕುಲಗುರುಗಳಿದ್ದಾರೆ ,ರಾಜ ಗುರುಗಳಿದ್ದಾರೆ
ಮಠಾಧಿಪತಿಗಳಿದ್ದಾರೆ ಹೀಗೆ ನಾನಾ
ಪ್ರಕಾರದ ಗುರುಗಳಿದ್ದಾರೆ.
ಯಾರಿ0ದ....ನಾವು ಜ್ನಾನ ಪಡೆಯುತ್ತೇವೆಯೋ..
ಶಿಕ್ಷಣ ಪಡೆಯುತ್ತೇವೆಯೋ..
ವ್ಯವಹಾರ ಕಲಿಯುತ್ತೇವೆಯೋ..
ಅವರೇ ನಮ್ಮ ನಿಜವಾದ ಗುರುಗಳು.
ಆದ್ದರಿ0ದ..ಒ0ಗುರುಬ್ರಹ್ಮ,ಗುರು ವಿಷ್ಣು,
ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮ್ಯೆ ಗುರುವೇ ನಮಃ
ಹೀಗೆ ಗುರುವನ್ನು ಗೌರವಿಸುತ್ತಾರೆ.

ಪುರ0ದರ ಉಕ್ತಿ ಹೀಗಿದೆ..
"ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕ್ತಿ."
ಶುಭವಾಗಲಿ.
ಸರ್ವರಿಗೂ ಗುರು ಪೂರ್ಣಿಮೆಯ
ಶುಭಾಶಯಗಳು

No comments: