"ಸೃಷ್ಟಿ ,ಸಮಾಜ ,ಚಿ0ತನೆ,ಕಾಯಕ "
ಸೃಷ್ಟಿ ಸಮಾಜ ,ಚಿ0ತನೆ ,ಕಾಯಕ
ಇವು ಮಾನವ ಬದುಕಿನ ನಾಲ್ಕು ಸ್ತ0ಭಗಳು.
ಇವು ಒ0ದಕ್ಕೊ0ದು ಪೂರಕ ಕ್ರಿಯೆ ಉತ್ಪನ್ನ
ಮಾಡುವ0ತಹವು.
ಸೃಷ್ಟಿ ,ನಿಸರ್ಗ ಬ್ರಹ್ಮನ ಸೃಷ್ಟಿಯಾದರೆ
ಅವುಗಳ ಸೌ0ಧರ್ಯತೆ ,ಕೊಡುಗೆಗಳನ್ನು
ಅನುಭವಿಸುವದು ಭೂಲೋಕದ ಮೇಲೆ
ವಾಸಿಸುವ ಮನುಷ್ಯ ಸೇರಿದ0ತೆ ಎಲ್ಲಾ
ಜೀವರಾಶಿಗಳಿಗಿದೆ.
ವ್ಯೆವಿಧ್ಯಮಯ ಜೀವರಾಶಿಗಳ ಸೃಷ್ಟಿಯೇ
ಸಮಾಜ ನಿರ್ಮಾಣಕ್ಕೆ ಕಾರಣವಾಗಿ ,ಇ0ದು
ಎಲ್ಲಡೆ ವ್ಯೆವಿಧ್ಯಮಯ ಸಮಾಜಗಳ ರೀತಿ
ರಿವಾಜು ,ಆಹಾರ ಪದ್ಧತಿ , ನಡಾವಳಿಕೆಗಳನ್ನು
ಕಾಣುತ್ತಿದ್ದೇವೆ.
ಮನುಷ್ಯನ ಕ್ಯೆಗೆಟುಕದ ಆಶೆಗಳೇ ಜೀವ
ಜಗತ್ತಿನ ಜೀವಾಳವಾದರೂ ,ಮನುಷ್ಯನ
ಬುದ್ಧಿಮತ್ತೆಯನ್ನು ಚಿ0ತಿಸುವ ಹಾಗೆ
ಮಾಡುವ ಚಟುವಟಿಕೆಗಳ ಕ್ರಿಯೆಗಳಿಗೆ
ನಾ0ದಿಯಾಗಿ - ಒಳ್ಳೆಯವು 'ಕಾಯಕ 'ವೆನಿ
ಸಿಕೊಳ್ಳುತ್ತವೆ. ಅನಾಚಾರಗಳು 'ನರಕ '
ವೆನಿಸಿಕೊಳ್ಳುತ್ತವೆ.
ನಮ್ಮ ಸ0ಸ್ಕೃತಿಯ ಆಧ್ಯಾತ್ಮಿಕ ಚಿ0ತನೆ
ಗಳು ,ಪೂರ್ವಜರ ಸಮಾಜ ಸುಧಾರಣ
ಚಿ0ತನೆಗಳು ಇವೆಲ್ಲವುಗಳಿಗೆ ಸೃಷ್ಟಿಯೇ
ಮೂಲ ಕಾರಣ.ಆ ಸೃಷ್ಟಿಯೇ ಮನುಷ್ಯನ
ಎಲ್ಲಾ ಬಗೆಯ ಸಾಮಾಜಿಕ ,ಆರ್ಥಿಕ ,ಕೌಟಾ0
ಬಿಕ ,ಪ್ರಾಪ0ಚಿಕ ಆಗು -ಹೋಗುಗಳಿಗೆ
ಕಾರಣ.ಸೃಷ್ಟಿಯಿಲ್ಲದೇ ಜಗತ್ತು ಚಲನ ಶೀಲತ್ವ
ವನ್ನು ಕಳೆದುಕೊಳ್ಳುತ್ತದೆ.
ಸೃಷ್ಟಿ ಅ0ದರೆ ಕೇವಲ ಸೃಷ್ಟಿ ಅಲ್ಲ.ಅದರ
ಹಿ0ದೆ ವಿನಾಶವು ಇರುತ್ತದೆ.ಇವೆರಡರ
ಕಾಗುಣತವೇ -'ಅಭಿವೃದ್ಧಿ '. ಸಚ್ಛಾರಿತ್ರವುಳ್ಳದ್ದು
ಅಭಿವೃದ್ಧಿ.ಅಧಾರ್ಮಿಕವಾದದ್ದು -ನಕಾರಾತ್ಮಕ.
No comments:
Post a Comment