Wednesday, July 6, 2016


"  ದಾರ್ಶನಿಕರು    --  3  "

      ಇವುಗಳನ್ನು  ನೋಡಿ ಜನತೆ  ರೋಸಿ
ಹೋಗಿದೆ.ಕ0ಗಾಲಾಗಿ ಬಿಟ್ಟಿದೆ.ಇ0ದು ಏನೋ ,
ನಾಳೆ ಏನೋ ,ಎ0ತೋ ಎನ್ನುವ   ಜೀವ
ಭಯದಲ್ಲಿ  ಜೀವನ ಸಾಗಿಸಬೇಕಾಗಿದೆ. ಶಾಲೆಗೆ
ಹೋದ ಮಕ್ಕಳು ಮರಳಿ ಬರುತ್ತಾರೋ ಇಲ್ಲೋ
ಅನ್ನುವ ಆತ0ಕದ ಛಾಯೆಯಲ್ಲಿ  ತಾಯಿಯಾದ
ವಳು ಮನೆ ಬಾಗಿಲನ್ನೇ ಕಾಯುವ0ತಾಗಿದೆ.
  'ಢ0 ಢಮಾರ '  ಶಬ್ದ  ಕೇಳಿದಾಗ ಬೆಚ್ಚಿ , 
ಏನೋ ಸ್ಫೋಟ ಆಗಿದೆ ಅ0ತಾ ಭಾವಿಸಿ  --
ನೆರೆಹೊರೆ ,ಓಣಿಕೇರಿ ,ರಸ್ತೆ -ಸ0ದು  ಗೊ0ದು
ಗಳಲ್ಲಿ  ಸಿಕ್ಕ ಸಿಕ್ಕವರನ್ನು ಕೇಳಿದ್ದನ್ನೇ ಕೇಳು
ವುದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಕೆಲಸಕ್ಕೆ 
ಹೋದವರು  ಸ0ಜೆಯ ವೇಳೆಗೆ  ಸುರಕ್ಷಿತವಾಗಿ
ಬ0ದರೆ 'ಪುಣ್ಯ ' ಎ0ದು ಕೊಳ್ಳುವ0ತಾಗಿದೆ.
    ದೇವರಿದ್ದಾನೆ  ಎ0ಬ ನ0ಬಿಕೆ ,ಅರಿವು
ದ್ಯೆವಪ್ರಜ್ನೆಯಾದರೆ ,  ದೇವರು ಮೆಚ್ಚುವ0ತೆ
ಮಾಡುವ ಕಾರ್ಯಗಳು  "ಧರ್ಮ ಪ್ರಜ್ನೆ "
ಎನಿಸಿಕೊಳ್ಳುತ್ತವೆ.
   ದ್ಯೆವಿಪ್ರಜ್ನೆ , ಧರ್ಮಪ್ರಜ್ನೆ ಮಾತ್ರ ಈ 
ಸಾಮಾಜಿಕ ವಿಪ್ಲವ ,ಸ0ಕಟದಿ0ದ ನಮ್ಮನ್ನು
ಪಾರುಮಾಡಬಲ್ಲದು.ಶುದ್ಧಕಾಯಕ , ಧೃಡ
ನ0ಬಿಕೆ ,ಪ್ರೀತಿ ,ವಾತ್ಸಲ್ಯ  ,ಸತ್ಯ , ಈ 
ಸಧ್ಗುಣಗಳನ್ನು ನಾವು ಬೆಳಸಿಕೊಳ್ಳಬೇಕು.
ರೂಢಿಸಿಕೊಳ್ಳಬೇಕು.
   ಎಲ್ಲಿ  ಈ  ಸಧ್ಗುಣಗಳು  ಜಾಗೃತವಾಗಿರು
ವವೋ , ಅಲ್ಲಿ ಧರ್ಮ ಪ್ರಜ್ನೆ ತನ್ನಷ್ಟಕ್ಕೆ ತಾನೆ
ಜಾಗೃತವಾಗಿರುತ್ತದೆ.!  ಆದರೆ ಈ ಮಾರ್ಗದಲ್ಲಿ
ಮುನ್ನಡೆಯುವ0ತೆ  ದಾರಿತೋರುವ 
'  ದಾರ್ಶನಿಕರು ' ಅವತರಿಸಬೇಕಾಗಿದೆ.
ಭಗವ0ತನ ಲೀಲೆ  ಬಲ್ಲವರಾರು.ಎಲ್ಲಾ
ದ್ಯೆವೇಚ್ಛೆ.
      ಕೃಷ್ಣಾರ್ಪಣಮಸ್ತು.

No comments: