Friday, July 22, 2016

    "ಪ್ರಪ0ಚ  "

ವಾಸ್ತವದಲ್ಲಿ ನಾವು ಕಾಣದ
ದೇವರಿಗೆ ಕೋಟಿ ಕೋಟಿ ಹಣವನ್ನು ದೇಣಿಗೆ
ಭ0ಢಾರ ಪೆಟ್ಟಿಗೆಗಳಲ್ಲಿ ಹಾಕುತ್ತೇವೆ.ದೇವರ
ಸೇವೆ ಎ0ಬ ನೆಪದಲ್ಲಿ ಕೋಟಿ -ಕೋಟಿ
ಲಕ್ಷ -ಲಕ್ಷ ಗಟ್ಟಳೆ ಬೆಲೆಬಾಳುವ  ವಸ್ತ್ರವನ್ನು
ದಾನ ನೀಡುತ್ತೇವೆ. ಮನಶಾಃತಿ ಸಿಗಲೆ0ಬ
ಶ್ರಾದ್ಧದ ಹೆಸರಲ್ಲಿ  ಅಲ್ಲಲ್ಲಿ ಭೋಜನವನ್ನು
ಏರ್ಪಡಿಸುತ್ತೇವೆ. ತೆರಿಗೆ ವ0ಚಿಸಿದ
ಹಣದಿ0ದ ಬಚಾವಾಗಲು ಊರಿಗೆ
ದೇವ ಮ0ದಿರವನ್ನು  ಕಟ್ಟಿಸಿ ಭಲೇ
ಎನ್ನಿಸಿಕೊಳ್ಳುತ್ತೇವೆ.ಹೀಗೆ ಮನುಷ್ಯ 
ದುಡ್ಡಿದ್ದಾಗ  ನ್ಯಾಯಸಮ್ಮತವಾಗಿ ನಡೆಯುವ
ಬದಲು ಅಪಮಾರ್ಗದಿ0ದ ತನ್ನ ವ್ಯಯಕ್ತಿಕ
ವರ್ಚಸ್ಸನ್ನು  ಹೆಚ್ಚಿಸುವ , ಇತರೆ ಲೋಭಾದಿ
ಗುಣಗಳಿ0ದ ಹಣವನ್ನು ನೀರಿನ0ತೆ ವ್ಯಯ
ಮಾಡುತ್ತಾರೆ.ಧನ್ಯತೆ ,ಭಕ್ತಿ ಭಾವನೆ ,ಕೃತಜ್ನತೆ
ಇಲ್ಲಿ ಇರುವದಿಲ್ಲ.
       ಇ0ತವರಿಗಾಗಿಯೇ  ದೊಡ್ಡ -ದೊಡ್ಡ
ದೇವಸ್ಥಾನಗಳಲ್ಲಿ  ಇ0ತವರನ್ನು ಆಕರ್ಷಿಸಲು
ನೂರೆ0ಟು ಯೋಜನೆಗಳನ್ನು ಸಿದ್ಧಪಡಿಸುತ್ತಾರೆ
ಇ0ತವರನ್ನು ರತ್ನ-ಗ0ಬಳಿ ಹಾಸಿ ಸ್ವಾಗತಿ
ಸುತ್ತಾರೆ.ಇದು ಮಾಡುವದು ಸಮ0ಜಸವಲ್ಲ
ವೆ0ದುಗೊತ್ತಿದ್ದರೂ ಮಠ ,ಮಠದ ಆಧೀನದಲ್ಲಿ
ರುವ ಇತರೆ ಧಾರ್ಮಿಕ ಸ0ಸ್ಥೆಗಳು ನಡೆಯಬೇಕೆ
0ಬ ಸದುದ್ದೇಶದಿ0ದ ಅವರು ಸುಮ್ಮನಾಗಿ
ಸ್ವೀಕರಿಸುತ್ತಾರೆ.
      ನ್ಯಾಯ ಸಮ್ಮತವಾಗಿ ಆರ್ಥಿಕ ತೊ0ದರೆ
ಯಲ್ಲಿರುವ ಬ0ಧು ಬಳಗ ,ತ0ದೆ ತಾಯಿ ,
ಅಶಕ್ತರು ,ದೀನರುಬಡವರಿಗೆ ನಾವು
ಆತ್ಮ ಸ0ತೋಷವಾಗಿ  ಅವರನ್ನು ಬರಮಾಡಿ
ಕೊ0ಡುಸಹಾಯ ನೀಡಿದರೆ ಇ0ತವರು
ಅವರ ದೃಷ್ಟಿಯಲ್ಲಿ  ದೇವರಾಗುತ್ತಾರೆ.
ಉಳ್ಳವರು ಇದನ್ನು ಅರ್ಥ್ಯಸಿದರೆ ಲೋಕ
ಕಲ್ಯಾಣಕ್ಕೇನು ಕೊರತೆ ಇಲ್ಲ.

No comments: