Friday, July 1, 2016

"ಗುರು"
 
ನಮ್ಮ ಸ0ಸ್ಕೃತಿಯಲ್ಲಿ  ಗುರುವಿಗೆ
ಉಚ್ಛ ಸ್ಥಾನವಿದೆ. ನಾಕ ಅಕ್ಷರ ಕಲಿಸಿದಾತನೇ

 ಗುರು.ತಾಯಿಯೇ ಮೊದಲ ಗುರು.ಗುರುವಿನ
ಗುಲಾಮನಾಗುವತನಕ ದೊರೆಯದಣ್ಣ

 ಮುಕುತಿ.ಹೀಗೆ ಗುರುವನ್ನು ನಾನಾ ಪ್ರಕಾರ
ಗಳಲ್ಲಿ ಆರಾಧಿಸುತ್ತೇವೆ.ಗುರುವಿನಲ್ಲಿ ದ್ಯೆವತ್ವ
ವನ್ನು ಕಾಣುತ್ತೇವೆ.ಗುರುವಿನಲ್ಲಿ ದೇವರನ್ನು
ಕಾಣುತ್ತೇವೆ.ಗುರು ದೇವೋ ಪರಬ್ರಹ್ಮ.ಗುರು
ದೇವೋ ಭವ. ಗುರುವೇ ಜಗದ್ಗುರು.ಗುರು
ವಿಲ್ಲದೇ ವೇದವಿಲ್ಲ.ಗುರುವಿಲ್ಲದೇ ಜ್ನಾನ
ದೇಗುಲವಿಲ್ಲ.ಗುರುವಿಲ್ಲದೇ ಮಹಾತ್ಕಾರ್ಯ
ಗಳ ಫಲವಿಲ್ಲ.ಗುರುವಿಗೆ ಗುರು ದಕ್ಷಿಣೆ ಅರ್ಪಿ
ಸಿದಾಗಲೇ  ಆ ಮಹಾನ್ ಕಾರ್ಯಕ್ಕೆ ಸಫಲತೆ
ಯಶಸ್ದು ,ಕೀರ್ತಿ ದೊರೆಯುತ್ತದೆ.
       ಈಗ ಗುರುವಿನ ಸ್ಥಾನವನ್ನು ಶಿಕ್ಷಕರು
ತು0ಬಿದ್ದಾರೆ.ಶಿಕ್ಷಕರು ಕೂಡಾ ವಿದ್ಯಾರ್ಥಿಗಳಿಗೆ
ಪಾಠ ಹೇಳಿ ಕೊಡುವ ಮೂಲಕ  ಶಿಕ್ಷಣವನ್ನು
ಧಾರೆಯೆರೆಯುತ್ತಾರೆ.ಹಿ0ದಿನ ಕಾಲದಲ್ಲಿದ್ದ
ಗುರು -ಶಿಷ್ಯ ಸ0ಭ0ಧ ಈಗ ಉಳಿದಿಲ್ಲ.
ಗುರುಗಳ ಸ್ಥಾನವು ಕೂಡಾ ವೇತನದ ಮೇಲೆ
ಅಳೆಯುವದರಿ0ದ 'ಗುರು'ವಿನ ಸ್ಥಾನ ಪಾಠ
ಹೇಳಿಕೊಡುವದಕ್ಕೆ ಅಷ್ಟೇ ಸೀಮಿತವಾಗಿದೆ.
ಗುರುಗಳಲ್ಲಿ ಮೊದಲಿದ್ದ ವಿದ್ಯಾರ್ಥಿಗಳಿಗೆ
ಜ್ನಾನಧಾರೆಯೆರೆಯುವ  'ಜ್ನಾನಯೋಗ '
ಕ್ಕೆ ಇದ್ದ ಗೌರವ ಈಗ ಉಳಿದಿಲ್ಲ.ಸಾಮಾಜಿಕ
ವ್ಯವಸ್ಥೆಗಳು ಬದಲಾದ ಕಾಲಕ್ಕೆ ತಕ್ಕ0ತೆ
ಗುರುವಿನ ಸ್ಥಾನವನ್ನು  ಬದಲಾಯಿಸುತ್ತಾ ಸಾಗಿವೆ..
     ಒ0ದ0ತೂ ನಿಜ.ಗುರುವಿನಮಾರ್ಗದರ್ಶನ
ಜ್ನಾನ ಭೋಧನೆ ಇಲ್ಲದೇ  ವಿದ್ಯೆ ಪಡೆಯುವದು
ವಿದ್ಯೆಯಲ್ಲಿ ನ್ಯೆಪುಣ್ಯತೆಯನ್ನು  ಗಳಿಸಲು
ಸಾದ್ಯವಿಲ್ಲವೆ0ಬ ಮಾತು ನೂರಕ್ಕೆ ನೂರರಷ್ಟು
ಸತ್ಯ.ಗುರು ಹಾಗು ಶಿಷ್ಯ ಸ0ಭ0ಧ ಪವಿತ್ರ
ವಾಗಿರಬೇಕು.ವಿದ್ಯಾಪೀಠಗಳನ್ನು ಡೋನೇಶನ್ನ್
ಪೀಠಗಳನ್ನಾಗಿ ಮಾರ್ಪಡಿಸುವದು ,ಮಾರ್ಪ
ಡಿಸಲು ಹೋಗುವ ಮಾರ್ಗಗಳು  ಸಜ್ಜನರು
ಎ0ದಿಗೂ ಮಾನ್ಯ ಮಾಡುವದಿಲ್ಲ.ಶಿಕ್ಷಣ
ಜಾತಿರಹಿತವಾಗಿರಬೇಕು.ಗುರು ಎಲ್ಲಾ
ಕಟ್ಟಳೆಗಳನ್ನು ಮೀರಿದವನಾಗಿರಬೇಕು.
    

 ತನ್ನ ಶಿಷ್ಯ0ದಿರಲ್ಲಿ ಮಾನವೀಯತೆಯನ್ಮು
ಕ0ಡಾಗಲೇ ಗುರುವಿಗೆ ತಾ ನೀಡಿದಶಿಷ್ಯತ್ವಕ್ಕೆ
ಒ0ದು ಹಿರಿಮೆ ಗರಿಮೆ.
ಗುರುಗಳ ಮೌಲ್ಯಗಳು ಹೆಚ್ಚಿಸುವ0ತಹ
ಕಾರ್ಯಗಳನ್ನು  ಶಿಷ್ಯ ಪಡೆ  ಮಾಡಲು ಉತ್ಸಕ
ರಾಗಿರಬೇಕು. ಜಗತ್ತು ಗುರು ಶಿಷ್ಯರ ಜ್ನಾನ
ಸ0ಪತ್ಯಿನ ಮೇಲೆ ಅವಲ0ಬಿತವಾಗಿದೆ.
ಇದನ್ನು ತಳ್ಳಿ ಹಾಕುವ0ತಿಲ್ಲ.

No comments: