"ಸೋಲು "
ಸೋಲು -ಗೆಲವು ಎಕ್ಕಾ -ಬಕ್ಕ ಇದ್ದ ಹಾಗೆ.
ಗೆಲುವಿನ ಆತ್ಮ ವಿಶ್ವಾಸ ಕಮರಿದಾಗ
ಸೋಲಿನ ಭೀತಿ ಆವರಿಸುತ್ತದೆ. ಈ ಸೋಲಿನ
ಭೀತಿ ಅತೀ ಹೆಚ್ಚಾದಾಗ ಮಾನಸಿಕವಾಗಿ
ನರಳುವ ಸಾದ್ಯತೆಗಳು ಹೆಚ್ಚು.
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭೀತಿ ,
ರಾಜಕೀಯದಲ್ಲಿ ಚುನಾವಣೆ ಬ0ದಾಗ
ಸೋಲಿನ ಭೀತಿ ,ವ್ಯಾಪಾರದಲ್ಲಿ ನಷ್ಟ ಹೀಗೆ
ಅನೇಕ ಪ್ರಕಾರದ ಸೋಲುಗಳಿವೆ.
ಕೆಲವೊ0ದು ಸೋಲುಗಳು ಕುಗ್ಗಿಸುತ್ತವೆ.ತೆಲೆ
ಎತ್ತದ0ತೆ ಮಾಡುತ್ತವೆ.ಇನ್ನು ಕೆಲವು
ಮು0ದಿನ ಭವಿಷ್ಯತ್ತಿಗೆ ಹೊಸ ಬುನಾದಿ
ಆಗುತ್ತವೆ. ಸೋಲು ಕೆಲವರಿಗೆ ವರ ,ಕೆಲವರಿಗೆ ಶಾಪ
. ಅದು ಅವರವರ ವಿಷಯಪ್ರ ಸ0ಗಾವಧಾ
ನದ ಮೇಲೆ ಅವಲ0ಬಿತ.
ಸೋಲೇ ಬರಲಿ ಗೆಲುವೇ ಬರಲಿ.
ಜೀವನದಲ್ಲಿ ಮುನ್ನಡೆಯುವ ಛಾತಿ ಮಾತ್ರ
ಇರಬೇಕು. ಇದು ಎಲ್ಲವನ್ನು ಕಲಿಸುತ್ತದೆ.
No comments:
Post a Comment